Tag: ಕಾಂಗ್ರೆಸ್ ಮುಖಂಡ

  • ಸಚಿವ ಸುಧಾಕರ್ ಬಗ್ಗೆ ಟೀಕಿಸಿದ್ದ ಕಾಂಗ್ರೆಸ್ ಮುಖಂಡ ಅರೆಸ್ಟ್

    ಸಚಿವ ಸುಧಾಕರ್ ಬಗ್ಗೆ ಟೀಕಿಸಿದ್ದ ಕಾಂಗ್ರೆಸ್ ಮುಖಂಡ ಅರೆಸ್ಟ್

    ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಫೌಂಡೇಶನ್ ವತಿಯಿಂದ ಚಿಕ್ಕಬಳ್ಳಾಪುರ ನಗರದ ಎಸ್‍ಜೆಸಿಐಟಿ ಕಾಲೇಜು ಆವರಣದಲ್ಲಿ ಇದೇ ತಿಂಗಳ 14 ಹಾಗೂ 15 ರಂದು ಬೃಹತ್ ಆರೋಗ್ಯ ಮೇಳ ಆಯೋಜನೆ ಮಾಡಲಾಗಿದೆ. ಹೀಗಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡುವಾರು ಗ್ರಾಮವಾರು ಆರೋಗ್ಯ ಇಲಾಖೆ ವತಿಯಿಂದ ಉಚಿತ ರಕ್ತ ತಪಾಸಣೆಗೆ ರಕ್ತ ಸಂಗ್ರಹಣೆ ಕಾರ್ಯ ಮಾಡಲಾಗುತ್ತಿದೆ.

    ಈ ವಿಚಾರವಾಗಿ ಚಿಕ್ಕಬಳ್ಳಾಪುರ ನಗರದ ಕಾಂಗ್ರೆಸ್ ಮುಖಂಡ ಸಂತೋಷ್ ಆರೋಗ್ಯ ಮೇಳ ಹಾಗೂ ರಕ್ತ ಸಂಗ್ರಹಣೆ ಮಾಡ್ತಿರೋದು ಇತ್ತೀಚೆಗೆ ಚಿಕ್ಕಬಳ್ಳಾಪುರ ನಗರಕ್ಕೆ ಬಂದ ಕಲುಷಿತ ನೀರಿನಿಂದ ಪ್ಲೋರೈಡ್ ಬಂದಿದ್ಯಾ..? ಕ್ಯಾನ್ಸರ್ ಬಂದಿದ್ಯಾ ಪರೀಕ್ಷೆ ಮಾಡೋಕೆ ಅಂತ ಮಾತನಾಡಿದ್ದಾರೆ. ಇದನ್ನ ಪ್ರಚೋದನೆ ಮಾಡಿ ವೀಡಿಯೋ ಮಾಡಿಕೊಂಡಿರುವ ಸಚಿವ ಸುಧಾಕರ್ ಬೆಂಬಲಿಗ ಅನಿಲ್ ಕುಮಾರ್ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಸಂತೋಷ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ಪೊಲೀಸ್ ಗುಪ್ತಚರ ಪ್ರಧಾನ ಕಚೇರಿ ಮೇಲೆಯೇ ಗ್ರೆನೇಡ್ ದಾಳಿ

    ದೂರಿನನ್ವಯ ತಡರಾತ್ರಿ ಐಪಿಸಿ ಸೆಕ್ಷನ್ 153 ಹಾಗೂ 505(1)ರ ಅಡಿ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಆರೋಪಿ ಸಂತೋಷ್ ರನ್ನ ಬಂಧಿಸಿ ತಡರಾತ್ರಿಯೇ ಜೈಲಿಗೆ ಕಳುಹಿಸಿದ್ದಾರೆ. ಇದೇ ವಿಚಾರವಾಗಿ ತಡರಾತ್ರಿ ಸಹ ಕಾಂಗ್ರೆಸ್ ಕಾರ್ಯಕರ್ತ ಮುಖಂಡರು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು. ಇಂದು ಬೆಳಗ್ಗೆ ಸಹ ಮತ್ತೆ ಪೊಲೀಸ್ ಠಾಣೆ ಬಳಿ ಜಮಾಯಿಸಿರುವ ಕಾಂಗ್ರೆಸ್ ಕಾರ್ಯಕರ್ತ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.

    ದೂರುದಾರ ಅನಿಲ್ ವಿರುದ್ಧ ಸಹ ದಲಿತ ಸಮುದಾಯದ ವೆಂಕಟ್ ಎಂಬವರಿಗೆ ಜಾತಿನಿಂದನೆ ಮಾಡಿದ್ದಾರೆ ಅಂತ ದೂರು ನೀಡಿದ್ದು ಅನಿಲ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಪಟ್ಟು ಹಿಡಿದಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮುಂದುವರಿದಿದ್ದು ಬಿಗುವಿನ ವಾತವಾರಣ ನಿರ್ಮಾಣ ಆಗಿದೆ. ಇದನ್ನೂ ಓದಿ: ದೆಹಲಿಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ

  • ಕೊಲೆಗೆ ಯತ್ನ – ಕಾಂಗ್ರೆಸ್ ಮುಖಂಡ ಅರೆಸ್ಟ್

    ಕೊಲೆಗೆ ಯತ್ನ – ಕಾಂಗ್ರೆಸ್ ಮುಖಂಡ ಅರೆಸ್ಟ್

    ಬಳ್ಳಾರಿ: ಖಾಲಿ ನಿವೇಶನ ತೆರವು ಮಾಡುವ ವಿಚಾರದಲ್ಲಿ ಕೊಲೆಗೆ ಯತ್ನ ಮಾಡಿದ್ದಾನೆ ಎಂಬ ಆರೋಪದ ಹಿನ್ನೆಲೆ ಕಾಂಗ್ರೆಸ್ ಮುಖಂಡನನ್ನು ಪೊಲೀಸರು ಬಂಧನ ಮಾಡಿದ್ದಾರೆ.

    ಬಳ್ಳಾರಿ ಮಹಾನಗರ ಪಾಲಿಕೆ 14ನೇ ವಾರ್ಡ್‍ನ ಸದಸ್ಯೆಯ ಪತಿ ಬಿ.ಆರ್.ಎಲ್.ಸೀನಾ ಅವರನ್ನು ಬಳ್ಳಾರಿ ಬ್ರೂಸ್ ಪೇಟ್ ಪೊಲೀಸರು ಬಂಧನ ಮಾಡಿದ್ದಾರೆ. ಬಳ್ಳಾರಿ ಗುಗ್ಗರಹಟ್ಟಿ ನಿವಾಸಿ ಕೆ.ವೆಂಕಟೇಶ್ ದೂರು ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಸೀನಾ ಅವರನ್ನು ಬಂಧಿಸಲಾಗಿದೆ.

    ಖಾಲಿ ನೀವೇಶನ ತೆರವು ವಿಚಾರಕ್ಕೆ, ಕಿಡ್ನ್ಯಾಪ್ ಮಾಡಿ ಕೊಲೆಗೆ ಯತ್ನ ಮಾಡಿದ್ದಾರೆ ಎಂದು ಆರೋಪಿಸಿ ವೆಂಕಟೇಶ್ ಅವರು ಬಳ್ಳಾರಿ ಬ್ರೂಸ್ ಪೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣ ವಿಚಾರಣೆ ನಡೆಸಿ, ಬಿ.ಆರ್.ಎಲ್.ಸೀನಾ ಅವರನ್ನು ಬಂಧನ ಮಾಡಿದ್ದಾರೆ. ಇದನ್ನೂ ಓದಿ: ಟ್ವೀಟ್ ಬಯೋದಿಂದ ‘ಕೈ’ ಚಿಹ್ನೆ ಬಿಟ್ಟ ಹಾರ್ದಿಕ್ ಪಟೇಲ್ 

    ನಡೆದಿದ್ದೇನು?
    ಸೀನಾ ಅವರು ವೆಂಕಟೇಶ್ ಅವರಿಗೆ ನಿವೇಶನ ಖಾಲಿ ಮಾಡುವಂತೆ ಒತ್ತಾಯ ಮಾಡಿ, ಖಾಲಿ ಬಾಂಡ್ ಮೇಲೆ ಸಹಿ ಮಾಡಿಸಿಕೊಂಡಿದ್ದರು. ಅಲ್ಲದೇ ಕಾರ್‌ನಲ್ಲಿ ಕಿಡ್ನ್ಯಾಪ್ ಮಾಡಿ ಕೊಲೆಗೆ ಯತ್ನ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

  • ಘರ್ಷಣೆ ಹಿಂದಿದ್ದಾರಾ ಸ್ಥಳೀಯ ಕಾಂಗ್ರೆಸ್ಸಿಗ?- ಅಲ್ತಾಫ್ ಹಳ್ಳೂರ ಪಾತ್ರದ ಬಗ್ಗೆ ಬಿಎಸ್‍ವೈ ಶಂಕೆ

    ಘರ್ಷಣೆ ಹಿಂದಿದ್ದಾರಾ ಸ್ಥಳೀಯ ಕಾಂಗ್ರೆಸ್ಸಿಗ?- ಅಲ್ತಾಫ್ ಹಳ್ಳೂರ ಪಾತ್ರದ ಬಗ್ಗೆ ಬಿಎಸ್‍ವೈ ಶಂಕೆ

    ಹುಬ್ಬಳ್ಳಿ: ಗಲಭೆ ಸ್ಥಳದಲ್ಲಿ ಹುಬ್ಬಳ್ಳಿ ಕಾಂಗ್ರೆಸ್ ಮುಖಂಡ ಅಲ್ತಾಫ್ ಹಳ್ಳೂರ ಇದ್ದ ವಿಚಾರ ಬಯಲಾಗುತ್ತಲೇ ಬಿಜೆಪಿ ಸಿಡಿದೆದ್ದಿದೆ. ಇಡೀ ಪ್ರಕರಣಕ್ಕೆ ಪೊಲಿಟಿಕಲ್ ಟಚ್ ನೀಡಿದೆ. ಇದು ಕಾಂಗ್ರೆಸ್ ಕೃತ್ಯ ಎಂದೇ ಆರೋಪಿಸಿದೆ.

    ಹಿಜಬ್ ವಿವಾದ ಕಾವೇರಿದ್ದ ಸಂದರ್ಭದಲ್ಲಿ ಫೆಬ್ರವರಿ 12ರಂದು ಅಲ್ತಾಫ್ ಹಳ್ಳೂರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಓರ್ವ ಶಿಕ್ಷಕಿ ರಕ್ತಪಾತದ ಬೆದರಿಕೆ ಹಾಕಿದ್ದರು. ಅವತ್ತಿನ ಹೇಳಿಕೆಗೂ ಹುಬ್ಬಳ್ಳಿ ಗಲಭೆಗೂ ಸಾಮ್ಯತೆ ಇದೆ. ಪ್ರತಿಭಟನೆ ವೇಳೆ ಹೇಳಿದ್ದನ್ನೇ ಈಗ ಮಾಡಿದ್ದಾರೆ. ಇದು ವ್ಯವಸ್ಥಿತ ಪಿತೂರಿ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ- ಸಮಾಜ ಘಾತುಕ ಕೆಲಸ ಮಾಡಿಲ್ಲ: ಅಲ್ತಾಫ್

    ಅಲ್ಲದೇ ಮೀರ್‍ಸಾದಿಕ್ ಸಿಎಂ ಆಗಿದ್ದ ಅವಧಿಯಲ್ಲಿ ತರಬೇತಿ ಕೊಟ್ಟು ಹೊರಬಿಟ್ಟ ಪಿಎಫ್‍ಐ ಕಾರ್ಯಕರ್ತರೇ ಹುಬ್ಬಳ್ಳಿ ಗಲಭೆಗೆ ಕಾರಣ ಅಂತಾ ಆಪಾದಿಸಿದೆ. ಇನ್ನು, ಹುಬ್ಬಳ್ಳಿ ಗಲಭೆಗೆ ಅಲ್ತಾಫ್ ಹಳ್ಳೂರು ನೇರ ಕಾರಣ ಎಂದು ಮಾಜಿ ಸಿಎಂ ಯಡಿಯೂರಪ್ಪ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಗಲಭೆ ಮಾಡಿದವರನ್ನು ಪ್ರೋತ್ಸಾಹಿಸ್ತಿದ್ದಾರೆ. ಇದು ಅವರಿಗೆ ಶೋಭೆ ತರಲ್ಲ ಎಂದಿದ್ದಾರೆ. ಬಿಎಸ್‍ವೈ ಮಾತಿಗೆ ಅಲ್ತಾಫ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನಾನವನಲ್ಲ ಎಂದಿದ್ದಾರೆ. ಮೀರ್ ಸಾದಿಕ್ ಎಂಬ ಬಿಜೆಪಿ ಟ್ವೀಟ್‍ಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಹಿಂದೆ ವ್ಯವಸ್ಥಿತ ಪಿತೂರಿ- ಶಿರಚ್ಛೇದದ ಮಾತು, RSS ವಿರುದ್ಧ ಘೋಷಣೆ

  • ಕಾಂಗ್ರೆಸ್ ಮುಖಂಡನ ಮಗನ ಮದುವೆಯ ಊಟ ಸೇವಿಸಿ 1,200 ಮಂದಿ ಅಸ್ವಸ್ಥ

    ಕಾಂಗ್ರೆಸ್ ಮುಖಂಡನ ಮಗನ ಮದುವೆಯ ಊಟ ಸೇವಿಸಿ 1,200 ಮಂದಿ ಅಸ್ವಸ್ಥ

    ಗಾಂಧೀನಗರ: ಕಾಂಗ್ರೆಸ್ ಮುಖಂಡರೊಬ್ಬರ ಪುತ್ರನ ವಿವಾಹದಲ್ಲಿ ಆಹಾರ ಸೇವಿಸಿದ ಬಳಿಕ 1,200 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುಜರಾತ್‍ನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ.

    ವಿಸ್ನಗರ ತಾಲೂಕಿನ ಸವಲ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಮದುವೆಯಲ್ಲಿ ಆಹಾರ ಸೇವಿಸಿದ ನಂತರ 1,200 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಇದೀಗ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೆಹ್ಸಾನಾ ಪೊಲೀಸ್ ವರಿಷ್ಠಾಧಿಕಾರಿ ಪಾರ್ಥರಾಜ್‍ಸಿನ್ಹ್ ಗೋಹಿಲ್ ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್-ರಷ್ಯಾ ಯುದ್ಧ ನಿಲ್ಲಿಸಿ – ಕಲೆ ಮೂಲಕ ಸುದರ್ಶನ್ ಪಟ್ನಾಯಕ್ ಮನವಿ

    POLICE JEEP

    ಊಟದ ಬಳಿಕ ಜನರು ವಾಂತಿ ಮಾಡಲು ಪ್ರಾರಂಭಿಸಿದರು. ನಂತರ ಅವರನ್ನು ವಿಸ್ನಗರ, ಮೆಹ್ಸಾನಾ ಮತ್ತು ವಡ್ನಗರದ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಯಿತು. ಇದೀಗ ಮದುವೆಯಲ್ಲಿ ನೀಡಲಾದ ಆಹಾರದ ಮಾದರಿಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಆಹಾರ ಮತ್ತು ಔಷಧ ಇಲಾಖೆಯಿಂದ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಗನಿಗಾಗಿ 1,400 ಕಿ.ಮೀ ಸ್ಕೂಟರ್ ಓಡಿಸಿದ್ದ ತಾಯಿಗೆ ಟೆನ್ಶನ್ – ಮೋದಿಗೆ ಪತ್ರ

    ಸಾವಳ ಗ್ರಾಮದಲ್ಲಿ ನಡೆದ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರ ಮಗನ ಮದುವೆ ಸಮಾರಂಭದಲ್ಲಿ ಹಲವಾರು ಜನರು ಪಾಲ್ಗೊಂಡಿದ್ದರು. ಕಾರ್ಯಕ್ರದಲ್ಲಿ ಮಾಂಸಾಹಾರ ಮೆನು ಕೂಡ ಇತ್ತು. ಸದ್ಯ ಘಟನೆ ಕುರಿತಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ವಿಸ್ನಗರ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.

  • ಉಕ್ರೇನ್‍ನಲ್ಲಿರುವ ಮಗನನ್ನು ನೆನೆದು ಕಣ್ಣೀರಿಟ್ಟ ಕಾಂಗ್ರೆಸ್‍ನ ಮಾಜಿ ಜಿಲ್ಲಾಧ್ಯಕ್ಷ

    ಉಕ್ರೇನ್‍ನಲ್ಲಿರುವ ಮಗನನ್ನು ನೆನೆದು ಕಣ್ಣೀರಿಟ್ಟ ಕಾಂಗ್ರೆಸ್‍ನ ಮಾಜಿ ಜಿಲ್ಲಾಧ್ಯಕ್ಷ

    ಮಡಿಕೇರಿ: ಉಕ್ರೇನ್ ಮತ್ತು ರಷ್ಯಾ ದೇಶಗಳ ನಡುವೆ ಭೀಕರ ಯುದ್ಧ ಆರಂಭವಾಗಿದ್ದು ಕೊಡಗು ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ಉಕ್ರೇನ್ ದೇಶದಲ್ಲಿ ಸಿಲುಕಿದ್ದಾರೆ.

    ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಮೂವರು ವಿದ್ಯಾರ್ಥಿಗಳು ಹಾಗೂ ವಿರಾಜಪೇಟೆಯ ಒಬ್ಬ ವಿದ್ಯಾರ್ಥಿ ಉಕ್ರೇನ್ ದೇಶದ ಖಾರ್ಕಿವ್ ಪಟ್ಟಣದಲ್ಲಿ ಸಿಲುಕಿದ್ದಾರೆ. ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮದ ಆರೋಗ್ಯ ಶುಶ್ರೂಷಕಿ ಒಬ್ಬರ ಮಗ ಲಿಖಿತ್, ಕುಶಾಲನಗರ ತಾಲೂಕಿನ ಕೂಡ್ಲೂರು ಗ್ರಾಮದ ಹಾಗೂ ಕಾಂಗ್ರೆಸ್‍ನ ಮಾಜಿ ಕೊಡಗು ಜಿಲ್ಲಾಧ್ಯಕ್ಷರೂ ಆಗಿರುವ ಕೆ.ಕೆ ಮಂಜುನಾಥ್ ಅವರ ಪುತ್ರ ಚಂದನ್ ಗೌಡ, ಕೂಡಿಗೆ ಗ್ರಾಮದ ಅಕ್ಷಿತಾ ಮತ್ತು ವಿರಾಜಪೇಟೆ ನಗರದ ಸೋನು ಸುಫಿಯಾ ಈ ನಾಲ್ವರು ವಿದ್ಯಾರ್ಥಿಗಳು ಉಕ್ರೇನ್ ದೇಶದ ಖಾರ್ಕಿವ್ ನಗರದಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ರಾಜ್ಯ ಸರ್ಕಾರದಿಂದ ವೆಬ್ ಪೋರ್ಟಲ್ ಪ್ರಾರಂಭ

    ಸದ್ಯ ನಾಲ್ವರು ವಿದ್ಯಾರ್ಥಿಗಳು ಆ ನಗರದ ಬೆಕೆಟೋವಾ ಮೆಟ್ರೊ ರೈಲು ನಿಲ್ದಾಣದ ಅಂಡರ್ ಗ್ರೌಂಡ್ ನಲ್ಲಿ ರಕ್ಷಣೆ ಪಡೆದಿದ್ದಾರೆ. ಕ್ಷಣ ಕ್ಷಣಕ್ಕೂ ಸ್ಥಳದಲ್ಲಿ ಯಾವಾಗ ಬೇಕಾದರೂ ಬಾಂಬ್‍ಗಳು ಬಿದ್ದು ಸ್ಫೋಟಗೊಳ್ಳುವ ಸಾಧ್ಯತೆ ಇದೆ ಅನ್ನೋ ಆತಂಕ ಎದುರಿಸುತ್ತಿದ್ದಾರೆ. ರೈಲ್ವೇ ನಿಲ್ದಾಣದ ಅಂಡರ್ ಗ್ರೌಂಡ್‍ನಲ್ಲಿ ಸಾವಿರಾರು ಸಂಖ್ಯೆಯ ಜನರು ಕಿಕ್ಕಿರಿದು ಸೇರಿದ್ದು ಅಲ್ಲಿಯೇ ರಕ್ಷಣೆ ಪಡೆದಿದ್ದಾರೆ. ಆದರೆ ಇತ್ತ ಕೊಡಗಿನಲ್ಲಿ ಇರುವ ಪೋಷಕರು ಮಕ್ಕಳ ಪರಿಸ್ಥಿತಿ ಕಂಡು ರಾಜ್ಯಕ್ಕೆ ಕರೆ ತರಬೇಕು ಎಂದು ಮನವಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಬಾಂಬ್ ಆರ್ಭಟ – 30 ಗಂಟೆಗಳ ಕಾಲ ಮೆಟ್ರೋ ಸುರಂಗದಲ್ಲೇ ಕುಳಿತ ಭಾರತೀಯ ವಿದ್ಯಾರ್ಥಿಗಳು

    ಇನ್ನೂ ಉಕ್ರೇನ್‍ನಲ್ಲಿರುವ ಮಗನನ್ನು ನೆನೆದು ಕಣ್ಣೀರಿಟ್ಟ ಕಾಂಗ್ರೆಸ್‍ನ ಮಾಜಿ ಜಿಲ್ಲಾದ್ಯಕ್ಷ ಮಂಜುನಾಥ್ ಪಬ್ಲಿಕ್ ಟಿವಿಯೊಂದಿಗೆ ಮಾತಾನಾಡಿ, ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಓದುತ್ತಿರುವ ತಮ್ಮ ಮಗ ಚಂದನ್ ಗೌಡ ಮೂರನೇ ವರ್ಷದ ಎಂಬಿಬಿಎಸ್ ಕಲಿಯುತ್ತಿದ್ದಾನೆ. ಅಲ್ಲಿ ಉತ್ತಮ ವೈದ್ಯಕೀಯ ಶಿಕ್ಷಣ ಇದೆಯೆಂದು ಅಲ್ಲಿಗೆ ಕಳಿಸಿದ್ದೆವು ಎಂದರು.

    ಕಳೆದ ಒಂದು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದ ಆಗಲೂ ಉಕ್ರೇನ್‍ನಲ್ಲಿ ಯುದ್ಧದ ಭೀತಿ ಇತ್ತು ಎಂದು ಹೇಳಿದ. ಆದರೆ ರಾಷ್ಟ್ರ-ರಾಷ್ಟ್ರಗಳ ನಡುವೆ ಅದೆಲ್ಲಾ ಸಾಮಾನ್ಯ ಎಂದುಕೊಂಡಿದ್ದೆವು ಈಗ ಯುದ್ಧ ಆರಂಭವಾಗಿ ನಾಗರಿಕರ ಮೇಲೂ ದಾಳಿಯಾಗುತ್ತಿದೆ. ಇದರಿಂದ ನಮಗೂ ತೀವ್ರ ಆತಂಕ ಶುರುವಾಗಿದೆ. ಕಳೇದ ರಾತ್ರಿ ಇಡೀ ಮೆಟ್ರೊ ಅಂಡರ್ ಗ್ರೌಂಡ್‍ನಲ್ಲಿ ಕಾಲ ಕಳೆದಿದ್ದರು. ಸದ್ಯ ಈಗ ಪ್ಲಾಟ್‍ಗಳಿಗೆ ತೆರಳಿದ್ದಾರೆ. ಆದರೆ ಅಲ್ಲಿಯೂ ಆತಂಕದಲ್ಲಿಯೇ ಕಾಲ ಕಳೆಯಬೇಕಾಗಿದೆ. ಎಲ್ಲರೂ ಮಲಗಿದ್ದರೆ ಇಬ್ಬರು ಎಚ್ಚರದಿಂದ ಇರಬೇಕಾದ ಸ್ಥಿತಿಯಲ್ಲಿದ್ದಾರೆ ಎಂದು ನೋವಿನಿಂದ ತಿಳಿಸಿದರು.

    ಇನ್ನೂ ಕೊಡಗು ಜಿಲ್ಲಾಡಳಿತ ಅಥವಾ ಸರ್ಕಾರ ಇದುವರೆಗೆ ನಮ್ಮನ್ನು ಸಂಪರ್ಕಿಸಿಲ್ಲ. ಅಧಿಕಾರಿಗಳಿಗೆ ಅಥವಾ ಜನಪ್ರತಿನಿಧಿಗಳಿಗೆ ತೊಂದರೆ ಆದರೆ ಮಾತ್ರ ನೋವು ಎಂದುಕೊಂಡಿರಬಹುದು ಎಂದು ಜಿಲ್ಲಾಡಳಿತದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.

  • ಕತ್ತೆ ಕದ್ದ ಆರೋಪದಡಿ ತೆಲಂಗಾಣ ಕಾಂಗ್ರೆಸ್ ಮುಖಂಡನ ಬಂಧನ

    ಕತ್ತೆ ಕದ್ದ ಆರೋಪದಡಿ ತೆಲಂಗಾಣ ಕಾಂಗ್ರೆಸ್ ಮುಖಂಡನ ಬಂಧನ

    ಹೈದರಾಬಾದ್: ತೆಲಂಗಾಣದ ಕರೀಂನಗರದಲ್ಲಿ ಕತ್ತೆ ಕದ್ದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿದ್ದಾರೆ. ಕುತೂಹಲಕಾರಿಯಾಗಿ ವಿಚಾರವೆಂದರೆ ಇತ್ತೀಚೆಗೆ ಕೆಸಿಆರ್ ವಿರುದ್ಧದ ನಡೆಸಿದ ಸಣ್ಣ ಪ್ರತಿಭಟನೆಯಲ್ಲಿ ಈ ಕತ್ತೆಯನ್ನೇ ಬಳಸಲಾಗಿದೆ ಎಂದು ಆರೋಪಿಸಲಾಗಿದೆ.

    ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಜನ್ಮದಿನದಂದು ಕತ್ತೆ ಜೊತೆ ಪ್ರತಿಭಟನೆ ನಡೆಸಿದ ತೆಲಂಗಾಣ ಎನ್‍ಎಸ್‍ಯುಐ ಅಧ್ಯಕ್ಷ ವೆಂಕಟ್ ಬಲ್ಮೂರ್ ಅವರನ್ನು ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಸಂಬಂಧ ಶುಕ್ರವಾರ ಕರೀಂನಗರದ ಜಮ್ಮುಕುಂಟಾ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡನ ವಿರುದ್ಧ ದೂರು ದಾಖಲಾಗಿದ್ದು, ಇನ್ನೂ 6 ಮಂದಿಯ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಅವರೆಲ್ಲರೂ ತಲೆಮರೆಸಿಕೊಂಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಕುಟುಂಬ ಮಣಿಪುರವನ್ನು ಎಟಿಎಂ ಆಗಿ ಬಳಸಿದೆ: ಸ್ಮೃತಿ ಇರಾನಿ

    ಇದೀಗ ಪೊಲೀಸರು ಕಾನೂನುಬಾಹಿರ ಸಭೆ, ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ, ಕಳ್ಳತನ ಮತ್ತು ಪ್ರಾಣಿಗಳ ಮೇಲೆ ಕ್ರೌರ್ಯ ತೋರಿದ ಆರೋಪದಡಿ 7 ಮಂದಿಯ ಮೇಲೆ . ಭಾರತೀಯ ದಂಡ ಸಂಹಿತೆ (IPಅ) ಸೆಕ್ಷನ್ 143, 153, 504, 379 ರ ಅಡಿಯಲ್ಲಿ 149, ಐಟಿ ಕಾಯ್ದೆಯ ಸೆಕ್ಷನ್ 67 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ, 1960 ರ ಸೆಕ್ಷನ್ 11 ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ.

    ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳ ಕೊರತೆಯ ವಿರುದ್ಧ ವೆಂಕಟ್ ಬಲ್ಮೂರ್ ಮತ್ತು ಇತರ ಆರೋಪಿಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕತ್ತೆಯ ಮೇಲೆ ಕೆಸಿಆರ್ ಫೋಟೋವನ್ನು ಹಾಕಿ ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ: ಹೈಕೋರ್ಟ್ ಮಧ್ಯಂತರ ಆದೇಶ ಪಾಲಿಸಿ – ಅಂಜುಮನ್ ಸಂಸ್ಥೆಯಿಂದ ಮನವಿ

  • ಕಾಂಗ್ರೆಸ್ ಮುಖಂಡ ನಾಪತ್ತೆ- ಅಪಹರಣ ಶಂಕೆ

    ಕಾಂಗ್ರೆಸ್ ಮುಖಂಡ ನಾಪತ್ತೆ- ಅಪಹರಣ ಶಂಕೆ

    ದಾವಣಗೆರೆ: ಕಾಂಗ್ರೆಸ್ ಮುಖಂಡ ನಾಪತ್ತೆಯಾಗಿದ್ದು, ಹುಡಿಕಿ ಕೊಡುವಂತೆ ಸಂಬಂಧಿಕರು ಪೊಲೀಸರಿಗೆ ದೂರು ನೀಡಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣದಲ್ಲಿ ನಡೆದಿದೆ.

    ಕಾಂಗ್ರೆಸ್ ಮುಖಂಡ ಜೈನುಲ್ಲಾ ಖಾನ್ (40) ನಾಪತ್ತೆಯಾದ ಸುದ್ದಿ ತಿಳಿದು ಕುಟುಂಬದ ಸದಸ್ಯರು ಆತಂಕದಲ್ಲಿದ್ದಾರೆ. ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷರಾಗಿರುವ ಜೈನುಲ್ಲಾ ಖಾನ್, ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಉದ್ದೇಶ ಪೂರ್ವಕವಾಗಿ ಅಪಹರಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಫೋಟೋ ಚೆನ್ನಾಗಿ ಬಂದಿದ್ಯಾ ಅಂತ ಚೆಕ್ ಮಾಡ್ತಿದ್ದಾನೆ ರಾಯನ್: ಸುಧಾರಾಣಿ

    ಕಾಂಗ್ರೆಸ್ ಮುಖಂಡ ಜೈನುಲ್ಲಾ ಖಾನ್ ವೃತ್ತಿಯಲ್ಲಿ ಬೆಸ್ಕಾಂ ಗುತ್ತಿಗೆದಾರನಾಗಿದ್ದು, ಇದೇ ವಿಚಾರಕ್ಕೆ ಅಪಹರಿಸಿದ್ದಾರೆಂಬ ಶಂಕೆ ವ್ಯಕ್ತವಾಗುತ್ತಿದೆ. ಕಾಣೆಯಾಗಿರುವ ಜೈನುಲ್ಲಾ ಖಾನ್ ರನ್ನು ಹುಡುಕಿಕೊಡುವಂತೆ ಸಂಬಂಧಿಕರು ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸಹ ಪ್ರಕರಣ ದಾಖಲಿಸಿಕೊಂಡಿದ್ದು, ಹುಡುಕುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಇದರಿಂದ ಆತಂಕ ಉಂಟಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಲಸಿಕೆಗಾಗಿ ಆವಾಜ್ – ಆರೋಗ್ಯ ಸಿಬ್ಬಂದಿ ಜೊತೆ ಕಾಂಗ್ರೆಸ್ ಮುಖಂಡನ ವಾಗ್ವಾದ

    ಲಸಿಕೆಗಾಗಿ ಆವಾಜ್ – ಆರೋಗ್ಯ ಸಿಬ್ಬಂದಿ ಜೊತೆ ಕಾಂಗ್ರೆಸ್ ಮುಖಂಡನ ವಾಗ್ವಾದ

    ಬೆಂಗಳೂರು: ಲಸಿಕೆ ಪಡೆಯಲು ಕಾಂಗ್ರೆಸ್ ಮುಖಂಡ ಮಾಜಿ ಪುರಸಭಾ ಸದಸ್ಯ ಲಸಿಕಾ ಕೇಂದ್ರಕ್ಕೆ ಬಂದು ಆರೋಗ್ಯ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.

    ಕೊರೊನಾ ವ್ಯಾಕ್ಸಿನ್ ಗಾಗಿ ಜನ ಪರದಾಡುತ್ತಿದ್ದು, ಕೊರೊನಾ ಲಸಿಕೆ ಪಡೆಯಲು ಆನೇಕಲ್ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ತೆರೆದಿರುವ ಲಸಿಕಾ ಕೇಂದ್ರದಲ್ಲಿ ಬೆಳಿಗ್ಗೆಯಿಂದಲೇ ಸರತಿ ಸಾಲಲ್ಲಿ ನಿಂತು ವಯ್ಯೋವೃದ್ದರು ಕಾಯುತ್ತಿದ್ದರು. ಈ ವೇಳೆ ಲಸಿಕೆ ಪಡೆಯಲು ಕಾಂಗ್ರೆಸ್ ಮುಖಂಡ ಮಾಜಿ ಪುರಸಭಾ ಸದಸ್ಯ ಮಲ್ಲಿಕಾರ್ಜುನ್ ಲಸಿಕಾ ಕೇಂದ್ರಕ್ಕೆ ಬಂದು ಆರೋಗ್ಯ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.

    ಪುರಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ್ ಸರತಿ ಸಾಲಲ್ಲಿ ನಿಂತಿದ್ದವರನ್ನು ಬಿಟ್ಟು ತಮಗೆ ವ್ಯಾಕ್ಸಿನ್ ನೀಡುವಂತೆ ಲಸಿಕಾ ಕೇಂದ್ರದ ಸಿಬ್ಬಂದಿಯನ್ನು ಕೇಳಿದ್ದು, ಸಿಬ್ಬಂದಿ ಸಾಲಿನಲ್ಲಿ ಬರುವಂತೆ ತಿಳಿಸಿದ್ದಾರೆ. ಈ ವೇಳೆ ತಾನು ಹಿರಿಯ ವೈದ್ಯರಿಗೆ ಹೇಳಿದ್ದೇನೆ ಎಂದು ತಿಳಿಸಿದ್ದೇನೆ ಲಸಿಕೆ ಕೊಡಿ ಅಂದು ವಾಗ್ವಾದ ತೆಗೆದಿದ್ದಾರೆ. ಈ ನಡುವೆ ಪೊಲೀಸರು ಆರೋಗ್ಯ ಸಿಬ್ಬಂದಿ ಹಾಗೂ ಮಲ್ಲಿಕಾರ್ಜುನ್ ನಡುವೆ ಮಾತಿನ ಚಕಮಕಿ ನಡೆದಿದೆ.

    ಜೊತೆಗೆ ಕಳೆದ ಒಂದು ವಾರದಿಂದ ಇದೇ ರೀತಿ ಗಲಾಟೆ ಮಾಡುತ್ತಿದ್ದಾರೆ. ಇನ್ನು ಆನೇಕಲ್ ಲಸಿಕಾ ಕೇಂದ್ರದಲ್ಲಿ ಲಸಿಕಾ ಅಭಿಯಾನ ನಡೆಸುತ್ತಿದ್ದು, ಆರೋಗ್ಯ ಪೊಟರ್ಲ್ ನಲ್ಲಿ ನೊಂದಣಿ ಮಾಡಿಕೊಂಡವರು ಬರುತ್ತಿರುವಸರಿಂದ ಸ್ಥಳೀಯರಿಗೆ ಲಸಿಕೆ ಕೊರತೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಇನ್ನೂ ಸಂಬಂಧಪಟ್ಟ ಸಚಿವರು ವ್ಯಾಕ್ಸಿನ್ ಹೆಚ್ಚು ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.

  • ಕಾಂಗ್ರೆಸ್ ಮುಖಂಡನ ಕೊಲೆ ಪ್ರಕರಣ- ಐವರ ಬಂಧನ

    ಕಾಂಗ್ರೆಸ್ ಮುಖಂಡನ ಕೊಲೆ ಪ್ರಕರಣ- ಐವರ ಬಂಧನ

    ಚಿಕ್ಕಬಳ್ಳಾಪುರ: ಹಾಡಹಗಲೇ ಕಾಂಗ್ರೆಸ್ ಮುಖಂಡನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಭಂದಿತರನ್ನು ಕಲಂದರ್, ಅಮಿತ್, ರಾಘವೇಂದ್ರ, ಶ್ರೀನಾಥ್ ಹಾಗೂ ಅಕ್ಷಯ್ ಎಂದು ಗುರುತಿಸಲಾಗಿದೆ. ಇವರನ್ನು ಶಿಡ್ಲಘಟ್ಟ ಪೊಲೀಸರು ಬಂಧಿಸಿದ್ದಾರೆ.

    ಶಿಡ್ಲಘಟ್ಟ ಪಟ್ಟಣದ ಪೊಲೀಸ್ ಠಾಣೆ ಬಳಿ ನಿನ್ನೆ ಅಮ್ಜದ್ (43)ನನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿತ್ತು. ಆರೋಪಿಗಳು ಓಮ್ನಿ ಕಾರಿನಲ್ಲಿ ಅಮ್ಜದ್ ಬೈಕಿಗೆ ಡಿಕ್ಕಿ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ಕಾಫಿನಾಡಲ್ಲಿ ಕಾಂಗ್ರೆಸ್ ಮುಖಂಡನಿಗೂ ಕೊರೊನಾ

    ಕಾಫಿನಾಡಲ್ಲಿ ಕಾಂಗ್ರೆಸ್ ಮುಖಂಡನಿಗೂ ಕೊರೊನಾ

    ಚಿಕ್ಕಮಗಳೂರು: ಕಾಫಿನಾಡಲ್ಲಿ ಕಾಂಗ್ರೆಸ್ ಮುಖಂಡನಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಕಾಂಗ್ರೆಸ್ ವಲಯದಲ್ಲೂ ಆತಂಕ ಹೆಚ್ಚಾಗಿದೆ.

    ಕಲ್ಯಾಣ ನಗರದಲ್ಲಿ ವಾಸವಿರುವ 37 ವರ್ಷದ ಕಾಂಗ್ರೆಸ್ ಮುಖಂಡನಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇವರು ಬೆಂಗಳೂರಿಗೆ ಹೋಗಿ ಬಂದಿದ್ದರು ಎಂದು ಹೇಳಲಾಗುತ್ತಿದೆ. ಜಿಲ್ಲಾಡಳಿತ ಈಗಾಗಲೇ ಕಾಂಗ್ರೆಸ್ ಮುಖಂಡನನ್ನ ಚಿಕ್ಕಮಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಿದೆ.

    ಕಾಂಗ್ರೆಸ್ ಮುಖಂಡ ಬೆಂಗಳೂರಿಗೆ ಪ್ರಯಾಣ ಮಾಡಿದ್ದರು ಎಂದು ತಿಳಿದುಬಂದಿದ್ದು, ಜಿಲ್ಲಾಡಳಿತ ಇವರ ಟ್ರಾವೆಲ್ ಹಿಸ್ಟರಿ ತ್ತೆ ಹಚ್ಚಲು ಮುಂದಾಗಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬಸ್ಥರನ್ನ ಕ್ವಾರಂಟೈನ್‍ಗೆ ಸೂಚಿಸಲಾಗಿದ್ದು, ಕುಟುಂಬಸ್ಥರನ್ನ ಹೊರತುಪಡಿಸಿ ಇವರ ಜೊತೆ ಸಂಪರ್ಕದಲ್ಲಿದ್ದ ಸುಮಾರು 10ಕ್ಕೂ ಹೆಚ್ವು ಜನರು ಕೂಡ ಸ್ವಯಂ ಪ್ರೇರಿತವಾಗಿ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

    ಮುಂಜಾಗೃತ ಕ್ರಮವಾಗಿ ಇವರು ವಾಸಿಸುವ ಕಲ್ಯಾಣನಗರದ ಬ್ರಾಹ್ಮಣರ ಹಾಸ್ಟೆಲ್ ಹಿಂಭಾಗದ ಏರಿಯಾವನ್ನ ಸೀಲ್‍ಡೌನ್ ಮಾಡಲಾಗಿದೆ. ಇದರ ಜೊತೆಗೆ ಮುಂಬೈನಿಂದ ಪ್ರಯಾಣ ಬೆಳೆಸಿದ್ದ ಮೂಡಿಗೆರೆ ತಾಲೂಕಿನ 70 ವರ್ಷದ ಮತ್ತೋರ್ವ ವೃದ್ಧರಲ್ಲೂ ಕೊರೊನಾ ಸೋಂಕು ದೃಢವಾಗಿದೆ. ಅವರನ್ನು ಕೂಡ ಚಿಕ್ಕಮಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.