Tag: ಕಾಂಗ್ರೆಸ್‌ ಗ್ಯಾರಂಟಿ

  • ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ – ರಾಮಲಿಂಗಾರೆಡ್ಡಿ ಭರವಸೆ

    ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ – ರಾಮಲಿಂಗಾರೆಡ್ಡಿ ಭರವಸೆ

    ಬೆಂಗಳೂರು: ಕಾಂಗ್ರೆಸ್‌ ಗ್ಯಾರಂಟಿಗಳಲ್ಲಿ (Congress Guarantee) ಒಂದಾದ ರಾಜ್ಯದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ (Free Bus Service) ಅನುಷ್ಠಾನಕ್ಕೆ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಜೂನ್‌ 1 ರಂದು ಮುಖ್ಯಮಂತ್ರಿಗಳು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ನೂತನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದ್ದಾರೆ.

    ಸಾರಿಗೆ ಇಲಾಖೆ ಅಧಿಕಾರಿಗಳು ಮೂರ್ನಾಲ್ಕು ಆಯ್ಕೆಗಳನ್ನ ಕೊಟ್ಟಿದ್ದಾರೆ. ಎಲ್ಲಾ ಮಹಿಳೆಯರಿಗೆ ಉಚಿತ ಎನ್ನುವುದು ಕಾಂಗ್ರೆಸ್‌ ಸರ್ಕಾರದ ಪ್ರಣಾಳಿಕೆಯಾಗಿತ್ತು. ನಾಳೆ ಸಚಿವ ಸಂಪುಟದಲ್ಲಿ ಸಾರಿಗೆ ಇಲಾಖೆ ವರದಿ ಕೊಡುತ್ತೇವೆ. ಉಚಿತ ಬಸ್‌ ಪ್ರಯಾಣ ಗ್ಯಾರಂಟಿ ಜಾರಿಗೆ ಬರೋದ್ರಲ್ಲಿ ಅನುಮಾನವೇ ಇಲ್ಲ ಎಂದು ತಿಳಿಸಿದ್ದಾರೆ.

    ಮಂಗಳವಾರ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ನಿಗಮದ ಪ್ರಯಾಣಿಕರ ಸಂಖ್ಯೆ, ಬಸ್‌ಗಳ ಸಂಖ್ಯೆ ವಾರ್ಷಿಕ ಆದಾಯದ ಬಗ್ಗೆ ಸಮಗ್ರ ಮಾಹಿತಿ ಪಡೆದರು.

    ಮಹಿಳೆಯರಿಗೆ ಉಚಿತ ಬಸ್ ಸೇವೆ ವಿಚಾರ ಕುರಿತು ಮಾತನಾಡುವಾಗ, ಪ್ರತಿ ವರ್ಷ ಅಂದಾಜು 3,200 ಕೋಟಿ ರೂ. ಖರ್ಚು ಬೇಕಾಗುತ್ತದೆ. ಸಾರಿಗೆ 4 ನಿಗಮ ನಷ್ಟದಲ್ಲಿವೆ. ಹಾಗಾಗಿ ಸರ್ಕಾರ ಸಹಾಯಧನ ನೀಡಿದರೆ ಯೋಜನೆ ಜಾರಿಗೆ ಅನುಕೂಲವಾಗುತ್ತದೆ. ಕೊರೊನಾ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಿತ್ತು. ಅದನ್ನು ಸರಿದೂಗಿಸಲು ನಿಗಮದ ಕೆಲವು ಆಸ್ತಿಗಳನ್ನು ಅಡವಿಟ್ಟು ಸಾಲ ಪಡೆಯಲಾಗಿದೆ. ಈಗಾಗಲೇ ಹಲವು ನಿಗಮಗಳಿಂದ ಸಾವಿರಾರು ಕೋಟಿ ಹಣ ಬರಬೇಕಿದೆ ಎಂದರು. ಇದೇ ವೇಳೆ ಬಸ್‌ಗಳ ಮಾಹಿತಿ ಕೊಟ್ಟ ಅಧಿಕಾರಿಗಳು ಸಾಮಾನ್ಯ ಬಸ್‌ಗಳಲ್ಲಿ ಉಚಿತ ಬಸ್ ಸೇವೆ ಕಲ್ಪಿಸಿದರೆ ಆರ್ಥಿಕ ಹೊರೆಯಾಗಲಿದೆ ಎಂದು ಸಚಿವರಿಗೆ ಮನವರಿಕೆ ಮಾಡಿದರು.

    ಬಳಿಕ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ನಮ್ಮ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ 240 ಘಟಕಗಳಿದ್ದು, 21,574 ವಾಹನಗಳನ್ನ ಒಳಗೊಂಡಿದೆ. 4 ನಿಗಮಗಳಿಂದ ಒಟ್ಟು 82.51 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಇದರೊಂದಿಗೆ ಈ ವರ್ಷ 4,500ಕ್ಕೂ ಹೆಚ್ಚು ಬಸ್‌ಗಳು ಸೇರ್ಪಡೆಯಾಗುತ್ತಿವೆ. ಇನ್ನಷ್ಟು ಹೊಸ ಬಸ್‌ಗಳು ಬರಬೇಕಿದೆ. ಇದರಿಂದ ಪ್ರತಿದಿನ 82.51 ಲಕ್ಷ ಪ್ರಯಾಣಿಕರು ಓಡಾಡಬಹುದು ಎಂದು ಮಾಹಿತಿ ನೀಡಿದ್ದಾರೆ.

    ಪ್ರತಿ ವರ್ಷ ನಾಲ್ಕು ನಿಗಮ ಸೇರಿ 8,946 ಕೋಟಿ ಆದಾಯ ಬರುತ್ತದೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ಸರ್ಕಾರದ ಜೊತೆ ಮತ್ತೊಂದು ಸಭೆ ಇದೆ. ಅಲ್ಲಿ ಸಿಎಂ ಜೊತೆಗೆ ಗ್ಯಾರಂಟಿಗಳ ಬಗ್ಗೆ ಚರ್ಚಿಸಲಾಗುತ್ತದೆ. ಸಿಎಂ ಸಹ ಉಚಿತ ಬಸ್ ಸೇವೆ ಕಲ್ಪಿಸುವ ಬಗ್ಗೆ ಮಾತನಾಡಿದ್ದಾರೆ ಎಂದು ವಿವರಿಸಿದರು.

    ಬಿಪಿಎಲ್, ಎಪಿಎಲ್ ಅಂತಾ ಪ್ರಣಾಳಿಕೆಯಲ್ಲಿ ಹೇಳಿಲ್ಲ. ಎಲ್ಲಾ ಮಹಿಳೆಯರಿಗೆ ಕೊಡ್ತೇವೆ. ಜೂನ್ 1 ರಂದು ಸಿಎಂ ಘೋಷಣೆ ಮಾಡ್ತಾರೆ. ಬಿಜೆಪಿಯವರಿಗೆ ಹೋರಾಟ ಮಾಡೋಕೆ ಅವಕಾಶನೇ ಕೊಡಲ್ಲ ಎಂದು ಹೇಳಿದರು.

  • ಮಹಿಳೆಯರಿಗೆ ಉಚಿತ ಪ್ರಯಾಣ – ಮಾರ್ಗಸೂಚಿಯಲ್ಲಿ ಏನಿರಬಹುದು?

    ಮಹಿಳೆಯರಿಗೆ ಉಚಿತ ಪ್ರಯಾಣ – ಮಾರ್ಗಸೂಚಿಯಲ್ಲಿ ಏನಿರಬಹುದು?

    ಬೆಂಗಳೂರು: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಮಹಿಳೆಯರಿಗೆ ಫ್ರೀ ಬಸ್ (Karnataka Free Bus Scheme) ಯೋಜನೆ ಜಾರಿ ಸಂಬಂಧ ಸಾರಿಗೆ ಇಲಾಖೆ ಕೆಲಸ ಮಾಡುತ್ತಿದೆ. ಇನ್ನೆರಡು ದಿನದಲ್ಲಿ ಯೋಜನೆಯ ಖರ್ಚು, ವೆಚ್ಚದ ಸಂಪೂರ್ಣ ವರದಿಯನ್ನು ಸರ್ಕಾರದ ಮುಂದಿಡಲಿದೆ.

    ಮೂರು ದಿನದ ಹಿಂದೆ ಗ್ಯಾರಂಟಿಗಳ (Congress Guarantee) ಜಾರಿ ವಿಚಾರವಾಗಿ ಆಯಾ ಇಲಾಖೆ ಹಣಕಾಸು ಮುಖ್ಯ ಅಧಿಕಾರಿಗಳ ಜೊತೆ ಸಿಎಂ, ಡಿಸಿಎಂ ಸಭೆ ಮಾಡಿದ್ದಾರೆ. ಸಭೆಯಲ್ಲಿ ಈಗಾಗಲೇ ಯೋಜನೆ ಜಾರಿಗೆ ತಗಲುವ ವೆಚ್ಚ, ಅನುಷ್ಠಾನ, ಕ್ರಮಗಳ ಬಗ್ಗೆ ಮಾಹಿತಿ ಕೇಳಿರುವ ಸರ್ಕಾರ ಈ ಬಗ್ಗೆ ವರದಿ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿತ್ತು.

    ಸಾರಿಗೆ ಇಲಾಖೆ ಅಧಿಕಾರಿಗಳು, ಸಾರಿಗೆ ಇಲಾಖೆಗೆ ಸದ್ಯ ಸ್ಕೀಂನಿಂದ ತಗಲುವ ವೆಚ್ಚ, ಜಿಲ್ಲೆ, ತಾಲೂಕುವಾರು ಪ್ರತಿನಿತ್ಯ ಸಂಚರಿಸುವ ಮಹಿಳೆಯರ ಸಂಖ್ಯೆ, ಈ ಎಲ್ಲ ಅಂಶಗಳ ಆಧಾರದ ಮೇಲೆ ವರದಿ ಸಿದ್ದಪಡಿಸುತ್ತಿದ್ದಾರೆ.   2-3  ದಿನದ ಒಳಗಡೆ ಸಂಪೂರ್ಣ ವರದಿ ಸಿದ್ದರಾಮಯ್ಯ ಅವರ ಕೈಸೇರಲಿದೆ.

    ಮಾರ್ಗಸೂಚಿಯಲ್ಲಿ ಏನಿರಬಹುದು?
    ಐಷಾರಾಮಿ ಬಸ್‍ಗಳಲ್ಲಿ ಫ್ರೀ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದ್ದು ಸರ್ಕಾರಿ ಬಸ್‍ನಲ್ಲಿ ಸಂಚರಿಸುವ ಮಹಿಳೆಯರಿಗೆ ಪ್ರತ್ಯೇಕ ಪಾಸ್ ನೀಡಲು ಚಿಂತನೆ ನಡೆದಿದೆ.

    ಉಚಿತ ಪ್ರಯಾಣ ಯೋಜನೆಗೆ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ. ಉಚಿತ ಬಸ್ ಬಳಸಲು ಮಹಿಳಾ ಫಲಾನುಭವಿಗಳಿಗೆ ಆಧಾರ್ ಕಾರ್ಡ್ ಕಡ್ಡಾಯ. ಎಲ್ಲಾ ಪ್ರೀಮಿಯಂ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ. ಇದನ್ನೂ ಓದಿ: ಇವತ್ತೇ ಸಿದ್ದು ಸಂಪುಟಕ್ಕೆ ಕ್ಲೈಮ್ಯಾಕ್ಸ್ – 24 ಸಂಭವನೀಯ ಸಚಿವರು ಯಾರು?

    ಬಿಎಂಟಿಸಿಯಲ್ಲಿ ಕೇವಲ ದುಡಿಯುವ ವರ್ಗದ ಮಹಿಳೆಯರಿಗಷ್ಟೇ ಉಚಿತ ಇರಲಿದ್ದು ಇತರೇ ಬಸ್‍ಗಳಲ್ಲಿ ಇಂತಿಷ್ಟು ಕಿಲೋ ಮೀಟರ್‌ ಒಳಗಡೆ ಸಂಚಾರ ನಿಯಮ ಬರುವ ಸಾಧ್ಯತೆಯಿದೆ. ಬಿಎಂಟಿಸಿ, ಕೆಎಸ್‍ಆರ್‌ಟಿಸಿ, ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ತಗುಲುವ ಹೊರೆಯನ್ನು ಸರ್ಕಾರ ಭರಿಸಲು ನಿರ್ಧಾರ ತೆಗೆದುಕೊಂಡಿದೆ.

    ನಾಯಕರು ಹೇಳಿದ್ದು ಏನು?
    ಸಿದ್ದರಾಮಯ್ಯ, ಡಿಕೆಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ ನಾಯಕರು ಯಾವುದೇ ಷರತ್ತು ಪ್ರಕಟಿಸದೇ ರಾಜ್ಯದ ಯಾವ ಭಾಗಕ್ಕೂ ಹೋಗಬೇಕಾದರೂ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಉಚಿತವಾಗಿ ಹೋಗಬಹುದು. ಧರ್ಮಸ್ಥಳಕ್ಕೆ ಹೋಗುವಾಗ, ಅತ್ತೆ ಮನೆಗೆ ಹೋಗುವಾಗ, ತವರು ಮನೆಗೆ ಹೋಗುವಾಗ, ಗಂಡನ ಮನೆಗೆ ಹೋಗುವಾಗ, ಮೈಸೂರಿಗೆ ಹೋಗುವಾಗ, ಬೆಂಗಳೂರಿಗೆ ಹೋಗುವಾಗ ಮಹಿಳೆಯರು ಟಿಕೆಟ್‌ ತೆಗೆದುಕೊಳ್ಳುವಂತಿಲ್ಲ ಎಂದು ಡಿಕೆ ಶಿವಕುಮಾರ್‌ ಭಾಷಣದಲ್ಲಿ ಆಶ್ವಾಸನೆ ನೀಡಿದ್ದರು.

  • ನನ್ನ ಅಸ್ತಿತ್ವವೇ ಹೊರಟೋಗಿದೆ, ನಾನೇನು ಕಡುಬು ತಿನ್ನೋಕೆ ರಾಜಕೀಯ ಮಾಡ್ತಿದ್ದೀನಾ – HDK ಪ್ರಶ್ನೆ

    ನನ್ನ ಅಸ್ತಿತ್ವವೇ ಹೊರಟೋಗಿದೆ, ನಾನೇನು ಕಡುಬು ತಿನ್ನೋಕೆ ರಾಜಕೀಯ ಮಾಡ್ತಿದ್ದೀನಾ – HDK ಪ್ರಶ್ನೆ

    ಬೆಂಗಳೂರು: ನಾನೇನು ಊಟ ಮಾಡ್ಕೊಂದು, ಕಡುಬು ತಿನ್ನೋಕೆ ರಾಜಕೀಯ (Politics) ಮಾಡ್ತಿದ್ದೀನಾ ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಗ್ಯಾರಂಟಿ (Congress Guarantee) ಘೋಷಣೆಗಳ ವಿರುದ್ಧ ಕಿಡಿ ಕಾರಿದ್ದಾರೆ. ನನ್ನ ಅಸ್ತಿತ್ವವೇ ಹೊರಟೋಗಿದೆ. ಚುನಾವಣೆಯಲ್ಲಿ ನನ್ನ ಅಸ್ತಿತ್ವವನ್ನು ಕುಂಟಿತಗೊಳಿಸಿದ್ದು ಇದೇ ಗ್ಯಾರಂಟಿ ಅಲ್ಲವೇ? ಆವತ್ತು ರಸ್ತೆಯಲ್ಲಿ ನಿಂತು ನನಗೂ ಫ್ರೀ, ನಿನಗೂ ಫ್ರೀ, ಹೇ ಕಾಕಾ ಪಾಟೀಲ್‌ ನಿನಗೂ ಫ್ರೀ ಅಂತಾ ಕೂಗಿ ಹೇಳಿದವರು ಇವರೇ ಅಲ್ಲವೇ? ಯಾವ ಆಧಾರದ ಮೇಲೆ ಗ್ಯಾರಂಟಿ ಘೋಷಣೆ ಮಾಡಿದ್ರು. ಈಗ ಹೇಳಿದ ಮೇಲೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ಮೇಲೆ ಬಿಜೆಪಿ ಕಾರ್ಯಕರ್ತರು ಅಪಾಯದಲ್ಲಿದ್ದಾರೆ – ಪ್ರತಾಪ್‌ ಸಿಂಹ

    ನಿದ್ಯೋಗಿಗಳಿಗೆ ಮೂರು ಸಾವಿರ ರೂ. ಕೊಡ್ತೀನಿ ಅಂದಿದ್ರು, ಈಗ 2022-23ನೇ ಸಾಲಿನಲ್ಲಿ ಪಾಸಾದವರಿಗೆ ಅಂತಿದ್ದಾರೆ. ಕಾಂಗ್ರೆಸ್‌ ಗ್ಯಾರಂಟಿ ನಂಬಿ ಹೊಟ್ಟೆಗೆ ಇಟ್ಟಿಲ್ಲದವನು ಕಾಂಗ್ರೆಸ್‌ಗೆ (Congress) ವೋಟ್‌ ಹಾಕಿದ್ದಾನೆ, ಅವನಿಗೆ ಕೊಡಬೇಕು. ಇದೆಲ್ಲವನ್ನು ಮುಂದಿಟ್ಟುಕೊಂಡೇ ರಾಜಕೀಯ ಮಾಡ್ತಿರೋದು. ಅದು ಬಿಟ್ಟು ನಾನೇನು ಊಟ ಮಾಡ್ಕೊಂಡು, ಕಡುಬು ತಿನ್ನೋಕೆ ರಾಜಕೀಯ ಮಾಡ್ತಿದ್ದೀನಾ? ಜನತೆಯ ಸಮಸ್ಯೆ ಹಾಗೂ ಜನರಿಗೆ ಆಗುವ ದ್ರೋಹದ ಬಗ್ಗೆ ನನ್ನ ಧ್ವನಿ ಇರಬೇಕು. ಅದಕ್ಕಾಗಿ ನಾವು ಹೋರಾಟ ಮಾಡ್ತೀವಿ ಎಂದು ಹೇಳಿದ್ದಾರೆ. ಇದನ್ನೂ ಓದಿ: The Kerala Story: ದಾವಣಗೆರೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸಿನಿ ಪ್ರದರ್ಶನ

  • ಕಾಂಗ್ರೆಸ್‌ ಗ್ಯಾರಂಟಿ ನೆನಪಿಸಿ ಬಸ್ ಪ್ರಯಾಣಕ್ಕೆ ಟಿಕೆಟ್ ದುಡ್ಡು ಕೊಡದ ಅಜ್ಜಿ: ಕಂಗಾಲಾದ ಕಂಡಕ್ಟರ್

    ಕಾಂಗ್ರೆಸ್‌ ಗ್ಯಾರಂಟಿ ನೆನಪಿಸಿ ಬಸ್ ಪ್ರಯಾಣಕ್ಕೆ ಟಿಕೆಟ್ ದುಡ್ಡು ಕೊಡದ ಅಜ್ಜಿ: ಕಂಗಾಲಾದ ಕಂಡಕ್ಟರ್

    ರಾಯಚೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ (Congress Guarantee) ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (Free Bus Pass) ಘೋಷಣೆ ಹಿನ್ನೆಲೆ ಜಿಲ್ಲೆಯಲ್ಲಿ ಬಸ್ ಪ್ರಯಾಣಕ್ಕೆ ಟಿಕೆಟ್ ದುಡ್ಡು (Bus Ticket Price) ನೀಡಲು ಕಿರಿಕ್‌ ಮಾಡುತ್ತಿರುವ ಪ್ರಸಂಗಗಳು ದಿನೇ-ದಿನೇ ಹೆಚ್ಚಾಗುತ್ತಿದೆ.

    ಅದೇ ರೀತಿ ಮಸ್ಕಿಯಿಂದ ಸಿಂಧನೂರಿಗೆ ತೆರಳುತ್ತಿದ್ದ ಬಸ್ ನಲ್ಲಿ ಅಜ್ಜಿಯೊಬ್ಬರು ಟಿಕೆಟ್ ದುಡ್ಡು ಕೊಡದೇ ಗಲಾಟೆ ಮಾಡಿದ್ದು ಕಂಡಕ್ಟರ್ ಕಂಗಾಲಾದ ಪ್ರಸಂಗ ನಡೆದಿದೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಭೂಕಂಪ ಆಗ್ತಿದೆ, ಏನಾದ್ರೂ ಮಾಡಿಕೊಳ್ಳಲಿ `ಗ್ಯಾರಂಟಿ’ಗಳನ್ನ ಈಡೇರಿಸಲಿ – ಸಿ.ಟಿ ರವಿ

     

    ನಾನು ಟಿಕೆಟ್‌ಗೆ ರೊಕ್ಕ ಕೊಡಲ್ಲ ಅಂದ್ರೆ ಕೊಡಲ್ಲ ಅಂತಾ ಕಂಡಕ್ಟರ್‌ಗೆ ಅಜ್ಜಿ ಆವಾಜ್ ಹಾಕಿದ್ದಾರೆ. ಅಜ್ಜಿಯ ಮನವೊಲಿಸಿ ಟಿಕೆಟ್‌ ಹಣ ಪಡೆಯಲು ಕಂಡಕ್ಟರ್ ಹರಸಾಹಸ ಪಟ್ಟಿದ್ದಾನೆ. ಸರ್ಕಾರ ಇನ್ನೂ ನಮಗೆ ಆದೇಶ ಮಾಡಿಲ್ಲ ಮಾಡಿದ ಮೇಲೆ ದುಡ್ಡು ಕೊಡಬೇಡ ಎಂದ ಕಂಡಕ್ಟರ್‌ಗೆ, ʻನಾವು ವೋಟ್‌ ಹಾಕಿದ್ದೀವಿ ಫ್ರೀ ಟಿಕೆಟ್, ಫೀ ಕರೆಂಟ್ ಅಂತಾ ಹೇಳಿದ್ದಾರೆ. ಮಸ್ಕಿ ಶಾಸಕ ತುರವಿಹಾಳ ಬಸನಗೌಡ ಕೂಡ ದುಡ್ಡು ಕೊಡಬೇಡ ಅಂತಾ ಹೇಳಿದ್ದಾನೆ, ನಾನು ದುಡ್ಡು ಕೊಡಲ್ಲ ಅಂತಾ ಹೇಳಿ ಅಜ್ಜಿ ಹಠ ಹಿಡಿದ್ದರು.

    ಕೊನೆಗೆ ಕಂಡಕ್ಟರ್ ಅಜ್ಜಿ ಮನವೊಲಿಸಿ ಟಿಕೆಟ್ ಹಣ ಪಡೆಯುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಹೇಳಿಕೆಗಳಿಗೆ ಬ್ರೇಕ್‌ ಬೀಳದಿದ್ರೆ ಸರ್ಕಾರದಿಂದ ಹೊರಗಿರುತ್ತೇನೆ: ಎಂಬಿಪಿ ವಿರುದ್ಧ ಡಿಕೆಶಿ ಕೆಂಡಾಮಂಡಲ

  • ಕಾಂಗ್ರೆಸ್‌ನಲ್ಲಿ ಭೂಕಂಪ ಆಗ್ತಿದೆ, ಏನಾದ್ರೂ ಮಾಡಿಕೊಳ್ಳಲಿ `ಗ್ಯಾರಂಟಿ’ಗಳನ್ನ ಈಡೇರಿಸಲಿ – ಸಿ.ಟಿ ರವಿ

    ಕಾಂಗ್ರೆಸ್‌ನಲ್ಲಿ ಭೂಕಂಪ ಆಗ್ತಿದೆ, ಏನಾದ್ರೂ ಮಾಡಿಕೊಳ್ಳಲಿ `ಗ್ಯಾರಂಟಿ’ಗಳನ್ನ ಈಡೇರಿಸಲಿ – ಸಿ.ಟಿ ರವಿ

    ಚಿಕ್ಕಮಗಳೂರು: ಸಾಮಾನ್ಯವಾಗಿ ಆಡಳಿತದ ಕೊನೆಯ ವರ್ಷ ಪಕ್ಷದಲ್ಲಿ ಅಸಹನೆ ಹುಟ್ಟುತ್ತದೆ. ಆದ್ರೆ ಕಾಂಗ್ರೆಸ್ (Congress) ಪಕ್ಷದಲ್ಲಿ ಆರಂಭದಲ್ಲೇ ಭೂಕಂಪ ಶುರುವಾಗಿದೆ. ಅವರು ಏನಾದ್ರೂ ಮಾಡಿಕೊಳ್ಳಲಿ ಕೊಟ್ಟ ಎಲ್ಲಾ ಭರವಸೆಗಳನ್ನ ಈಡೇರಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಒತ್ತಾಯಿಸಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ (Congress Government) ಆರಂಭದಲ್ಲೇ ಒಳಗೆ ಅಸಹನೆ ಕುದಿಯುತ್ತಿದೆ, ಪಕ್ಷದೊಳಗೆ ಭೂಕಂಪದ ಮುನ್ಸೂಚನೆ ಕಾಣ್ತಿದೆ ಅನ್ನಿಸುತ್ತೆ. ಆ ಭೂಕಂಪ ಕಾಂಗ್ರೆಸ್ ಪಕ್ಷವನ್ನೇ ದುರ್ಬಲಗೊಳಿಸುವ ಭೂಕಂಪ ಆಗಬಹುದು, ಆಗದಿರಲೂಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಾರೂ ವಿದ್ಯುತ್ ಬಿಲ್ ಕಟ್ಬೇಡಿ, ಬಿಲ್ ಬಂದ್ರೆ ಸಿಎಂಗೆ ಕಳ್ಸಿ – ಸಿ.ಟಿ ರವಿ

    ಸಿದ್ದರಾಮಯ್ಯ (Siddaramaiah) ಈಗ ತಾನೇ ಸಿಎಂ ಕುರ್ಚಿಯಲ್ಲಿ ಕೂತಿದ್ದಾರೆ. ಈಗಲೇ ಏಕೆ ಸಿಎಂ ಕುರ್ಚಿ ಬಗ್ಗೆ ಚರ್ಚೆ ಆಗುತ್ತಿದೆ ಅನ್ನೋದು ಗೊತ್ತಾಗ್ತಿಲ್ಲ. ನೋಡೋದಕ್ಕೆ ಏನೋ ನಡೆಯುತ್ತಿದೆ ಅನ್ನಿಸುತ್ತೆ. ಪಕ್ಷದಲ್ಲಿ ಅಸಹನೆ ಹುಟ್ಟೋದು ಕಡೇ ವರ್ಷದಲ್ಲಿ. ಆರಂಭದಲ್ಲೇ ಒಳಗೆ ಕುದಿಯುತ್ತಿದೆ ಅಂದ್ರೆ ಭೂಕಂಪದ ಮುನ್ಸೂಚನೆ ಕಾಣುತ್ತಿದೆ. ಅದಕ್ಕೂ ನಮಗೂ ಸಂಬಂಧವಿಲ್ಲ, ಅವರ ಪಕ್ಷ ಏನಾದ್ರು ಮಾಡಿಕೊಳ್ಳಲಿ. ಅವರು ಜನರಿಗೆ ಕೊಟ್ಟ ಎಲ್ಲಾ ಭರವಸೆಗಳನ್ನೂ ಈಡೇರಿಸಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕಳುಹಿಸಿದ ಮೆಸೇಜ್ ಎಡಿಟ್ ಮಾಡ್ಬೋದು – ವಾಟ್ಸಪ್‌ನಲ್ಲಿ ಹೊಸ ಆಯ್ಕೆ

  • `ಗ್ಯಾರಂಟಿ’ ಕಾಂಗ್ರೆಸ್ ಜನರಿಗೆ ಮೋಸ ಮಾಡಿದೆ, 40% ಕಮಿಷನ್ ಆರೋಪ ತನಿಖೆಯಾಗಲಿ – ಬೊಮ್ಮಾಯಿ

    `ಗ್ಯಾರಂಟಿ’ ಕಾಂಗ್ರೆಸ್ ಜನರಿಗೆ ಮೋಸ ಮಾಡಿದೆ, 40% ಕಮಿಷನ್ ಆರೋಪ ತನಿಖೆಯಾಗಲಿ – ಬೊಮ್ಮಾಯಿ

    – ಮಳೆ ಅನಾಹುತ – ಬಿಬಿಎಂಪಿ ಮುಂಜಾಗ್ರತೆ ಕ್ರಮ ತೆಗೆದುಕೊಂಡಿಲ್ಲ ಎಂದ ಮಾಜಿ ಸಿಎಂ

    ಬೆಂಗಳೂರು: ಗ್ಯಾರಂಟಿಗಳ (Congress Guarantee) ಬಗ್ಗೆ ಕಾಂಗ್ರೆಸ್ ಜನರಿಗೆ ಮೋಸ ಮಾಡಿದೆ. ಕಾಂಗ್ರೆಸ್ ಕಾರ್ಯಕರ್ತರು (Congress Worker) ಜನರ ಬಳಿ ಹೋಗಿ ಸ್ಪಷ್ಟವಾಗಿ ಹೇಳಿಲ್ಲ. ಯಾವುದೋ ಕಂಪನಿಯಿಂದ ಬಂದವರಂತೆ ಹೋಗಿ ಗ್ಯಾರಂಟಿ ಸ್ಕೀಂಗಳ ಬಗ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಡಿಸಿ ಆಫೀಸ್ ನಿಂದ ಅಂತಾ ಕರೆ ಮಾಡಿ ಸುಳ್ಳು ಹೇಳಿದ್ದಾರೆ. ಯಾವ ಡಿಸಿ ಆಫೀಸ್ ಅಂದ್ರೆ `ಡಿಸ್ಟ್ರಿಕ್ಟ್ ಕಾಂಗ್ರೆಸ್ ಆಫೀಸ್’ ಅಂತಾ ಹೇಳಿದ್ದಾರೆ. ಈ ರೀತಿ ಜನರಿಗೆ ಮೋಸ ಮಾಡಿದ್ದು, ಮುಂದೆ ಎಲ್ಲವೂ ಬೆಳಕಿಗೆ ಬರಲಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಟೀಕಿಸಿದ್ದಾರೆ.

    ಬೆಂಗಳೂರು (Bengaluru) ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬಿಜೆಪಿ ಆತ್ಮಾವಲೋಕನ ಸಭೆ ನಡೆಸಿದ್ದು, ಎಲ್ಲ ಜಿಲ್ಲೆಗಳಿಂದ ವರದಿ ತರಿಸಿದ್ದೇವೆ. ಒಂದೊದು ಜಿಲ್ಲೆಗಳಲ್ಲಿ ಒಂದೊಂದು ರೀತಿ ಚುನಾವಣೆ ನಡೆದಿದೆ. ಕೆಲವು ಕಡೆ ಲೋಪದೋಷಗಳಾಗಿದ್ದು, ಸರಿಪಡಿಸಲು ತೀರ್ಮಾನ ಮಾಡಿದ್ದೇವೆ. ಸೋತ ಕ್ಷೇತ್ರಗಳಲ್ಲಿ ಮರು ಸಂಘಟನೆ ಮಾಡಲು ಹಾಗೂ ಲೋಕಸಭೆ ತಯಾರಿ ಬಗ್ಗೆ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಾರೂ ವಿದ್ಯುತ್ ಬಿಲ್ ಕಟ್ಬೇಡಿ, ಬಿಲ್ ಬಂದ್ರೆ ಸಿಎಂಗೆ ಕಳ್ಸಿ – ಸಿ.ಟಿ ರವಿ

    ಬೆಂಗಳೂರಿನಲ್ಲಿ ಮಳೆ (Bengaluru Rain) ಅನಾಹುತ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲವೇ ಗಂಟೆಗಳ ಮಳೆಗೆ ಸಾವಾಗಿರೋದು ಬಹಳ ನೋವಿನ ಸಂಗತಿ. ಚಿಕ್ಕಮಗಳೂರಿನಲ್ಲಿ ಮೂರು ಸಾವಾಗಿದೆ. ಬೆಂಗಳೂರಿನಲ್ಲಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಆದರೂ ಬಿಬಿಎಂಪಿಯವರು ಈ ವರ್ಷ ಮುಂಜಾಗ್ರತೆ ಕ್ರಮ ತೆಗೆದುಕೊಂಡಿಲ್ಲ ಅನ್ನೋದು ಸ್ಪಷ್ಟವಾಗ್ತಿದೆ. ಈ ಘಟನೆ ನಡೆಯೋದಿಕ್ಕೆ ಅವಕಾಶ ಕೊಟ್ಟಿದ್ದಾರೆ. ಕೂಡಲೇ ಧಾವಿಸಿ ರಕ್ಷಣೆ ಮಾಡುವ ಕೆಲಸ ಬಿಬಿಎಂಪಿಯವರು ಮಾಡಲಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸನ್ಮಾನದ ರೂಪದಲ್ಲಿ ಹಾಕುವ ಹಾರ-ತುರಾಯಿ, ಶಾಲು-ಶಲ್ಯಗಳು ನನಗೆ ಬೇಡ – ಸಿದ್ದರಾಮಯ್ಯ

    ನಾವು ಬೆಂಗಳೂರಿನಲ್ಲಿ ಎಸ್‌ಡಿಆರ್‌ಎಫ್ ತಂಡಗಳನ್ನು ರಚಿಸಿದ್ದೇವೆ. ಈ ತಂಡಗಳಿಗೆ ಚಾಲನೆ ಕೊಟ್ಟು ಕೆಲಸಕ್ಕೆ ಹಚ್ಚುವ ಕೆಲಸ ಆಗಬೇಕು. ಇನ್ನೂ ಐದು ದಿನ ಮಳೆ ಆಗಲಿದೆ. ವ್ಯವಸ್ಥಿತವಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ನಗರದಲ್ಲಿ ಸಿಕ್ಕಾಪಟ್ಟೆ ಮರಗಳು ಬಿದ್ದಿವೆ. ಬಿದ್ದ ಮರಗಳನ್ನು ತೆಗೆಯುವ ಕೆಲಸ ಆಗಿಲ್ಲ. ಮುಂದಿನ 5 ದಿನ ಹೀಗೇ ಬಿಟ್ರೆ ಬೆಂಗಳೂರು ಬಹಳ ಅಸ್ತವ್ಯಸ್ತ ಆಗಲಿದೆ. ಆದ್ದರಿಂದ ಆದ್ಯತೆ ಮೇರೆಗೆ ಸಿಎಂ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    40% ಕಮಿಷನ್ ಬಗ್ಗೆ ತನಿಖೆಯಾಗಲಿ:
    ಬಿಜೆಪಿ ಅವಧಿಯ ಹಗರಣಗಳ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ನಾನು ಸ್ಪಷ್ಟವಾಗಿ ಹೇಳ್ತೀನಿ, ದಯವಿಟ್ಟು ಅವರು ಎಲ್ಲ ತನಿಖೆ ಮಾಡಿಸಲಿ. 40% ಕಮೀಷನ್ ಆರೋಪವನ್ನು ನಮ್ಮ ಮೇಲೆ ಹೊರೆಸಿದ್ದಾರೆ. 40% ಆಗಿದೆ ಅಂತಾ ಅವರು ಪುರಾವೆ ಸಮೇತ ತೋರಿಸಬೇಕು. ಕಾಂಗ್ರೆಸ್ ಸರ್ಕಾರ 40% ಆರೋಪ ಕುರಿತ ಎಲ್ಲ ದಾಖಲೆಗಳನ್ನು ಕೊಡಲಿ, ನಾವು 40% ಕಮೀಷನ್ ತಗೋತಿದ್ವಿ ಅಂತಾ ದಾಖಲೆಸಹಿತ ತೋರಿಸಲಿ ಎಂದು ಸವಾಲ್ ಹಾಕಿದ್ದಾರೆ.

  • ಯಾರೂ ವಿದ್ಯುತ್ ಬಿಲ್ ಕಟ್ಬೇಡಿ, ಬಿಲ್ ಬಂದ್ರೆ ಸಿಎಂಗೆ ಕಳ್ಸಿ – ಸಿ.ಟಿ ರವಿ

    ಯಾರೂ ವಿದ್ಯುತ್ ಬಿಲ್ ಕಟ್ಬೇಡಿ, ಬಿಲ್ ಬಂದ್ರೆ ಸಿಎಂಗೆ ಕಳ್ಸಿ – ಸಿ.ಟಿ ರವಿ

    * ಮಹಿಳೆಯರಿಗೆ ಉಚಿತ ಬಸ್ ಪಾಸ್, ಕೊಡಲೇಬೇಕು
    * ಗೃಹಿಣಿಯರಿಗೆ 2 ಸಾವಿರ ರೂ, ಕೊಡಲೇಬೇಕು
    * ಉಚಿತ ವಿದ್ಯುತ್ ಕೊಡಲೇಬೇಕು ಹೇಳಿದ್ಮೇಲೆ ಎಲ್ಲ ಗ್ಯಾರಂಟಿ ಕೊಡ್ಬೇಕು

    ಬೆಂಗಳೂರು: ಯಾರೂ ವಿದ್ಯುತ್ ಬಿಲ್ ಕಟ್ಬೇಡಿ, ಬಿಲ್ ಬಂದ್ರೆ ಮುಖ್ಯಮಂತ್ರಿಗಳಿಗೆ ಕಳುಹಿಸಿ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಕರೆ ನೀಡಿದ್ದಾರೆ.

    ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೇ ದಿನಕ್ಕೆ ಕಾಂಗ್ರೆಸ್‌ನವರು ಬಣ್ಣ ಬದಲಾಯಿಸಿದ್ದಾರೆ. ಇನ್ನು ದಿನ ಕಳೆದಂತೆ ಇನ್ಯಾವ ಬಣ್ಣ ಬದಲಾಯಿಸ್ತಾರೋ ನೋಡಬೇಕು. ಮೊದಲು ಎಲ್ಲ ಪದವೀಧರ ನಿರುದ್ಯೋಗಿಗಳಿಗೂ 3 ಸಾವಿರ ರೂ. ಕೊಡ್ತೀವಿ ಅಂದಿದ್ರು. ಈಗ 2022-23ರ ಸಾಲಿನ ಪದವೀಧರರಿಗೆ ಮಾತ್ರ ಅಂತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮತದಾರರಿಗೆ ಅವಮಾನ ಮಾಡಿದೆ – ಸಿಎಂ, ಡಿಸಿಎಂ ಕ್ಷಮೆಗೆ ಆಗ್ರಹಿಸಿದ ಈಶ್ವರಪ್ಪ

    ಮಹಿಳೆಯರಿಗೆ ಉಚಿತ ಬಸ್‌ಪಾಸ್ ಕೊಡಲೇಬೇಕು. ಗೃಹಿಣಿಯರಿಗೆ 2 ಸಾವಿರ ರೂ. ಕೊಡಲೇಬೇಕು. ಉಚಿತ ವಿದ್ಯುತ್ ಕೊಡಲೇಬೇಕು. ಹೇಳಿದ್ಮೇಲೆ ಎಲ್ಲ ಗ್ಯಾರಂಟಿನೂ ಕೊಡಲೇಬೇಕು ಎಂದು ಒತ್ತಾಯಿಸಿದರಲ್ಲದೇ ಜನರು ಯಾರೂ ವಿದ್ಯುತ್ ಬಿಲ್ ಕಟ್ಟಬಾರದು, ಬಿಲ್ ಬಂದ್ರೆ ಮುಖ್ಯಮಂತ್ರಿಯವರು ಹೇಳಿದ್ದಾರೆ ಅಂತಾ ಅವರಿಗೆ ಕಳುಹಿಸಬೇಕು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ – ಮುಂದಿನ ಕ್ಯಾಬಿನೆಟ್‌ನಲ್ಲಿ ಆದೇಶ

    ಬಿಜೆಪಿ ಅವಧಿಯ ಹಗರಣಗಳನ್ನು ತನಿಖೆಗೆ ಒಪ್ಪಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ ರವಿ, ಸಮಯದ ಗಡುವಿನೊಳಗೆ ತನಿಖೆ ಮಾಡಲಿ. ಅಂತಹ ಹಗರಣ ನಡೆದಿದ್ದರೆ ಮೂರು ತಿಂಗಳಲ್ಲಿ ತನಿಖೆ ಮಾಡಿಸಲಿ. ಆಗ ಸತ್ಯ ಗೊತ್ತಾಗುತ್ತೆ. ಬಿಜೆಪಿ ಅವಧಿಯ ತನಿಖೆಗಳಷ್ಟೇ ಅಲ್ಲ, ಕೆಂಪಣ್ಣ ಆಯೋಗದ ವರದಿ ಬಗ್ಗೆಯೂ ತನಿಖೆ ನಡೆಸಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸುಮ್ನೆ ರಸ್ತೆಯಲ್ಲಿ ಹೋಗೋರಿಗೆಲ್ಲಾ ದುಡ್ಡು ಕೊಡಕ್ಕಾಗಲ್ಲ – ಡಿಸಿಎಂ ಡಿಕೆಶಿ

  • ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಷರತ್ತು ಅನ್ವಯ: ಪರಮೇಶ್ವರ್‌

    ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಷರತ್ತು ಅನ್ವಯ: ಪರಮೇಶ್ವರ್‌

    ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ (Congress Guarantee) ಯೋಜನೆಗಳಿಗೆ ಷರತ್ತುಗಳು (Condition) ಇರಲಿವೆ ಎಂದು ಹಿರಿಯ ನಾಯಕ ಪರಮೇಶ್ವರ್‌ (G. Parameshwara) ಹೇಳಿದ್ದಾರೆ.

    ಗ್ರಾಮೀಣ ಭಾಗದ ಜನರು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಾವು ವಿದ್ಯುತ್‌ ಶುಲ್ಕ ಪಾವತಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೊದಲ ಕ್ಯಾಬಿನೆಟ್‌ನಲ್ಲಿ 5 ಗ್ಯಾರಂಟಿ ಈಡೇರಿಸುವ ಭರವಸೆ ಕೊಟ್ಟಿದ್ದೇವೆ. ಅದಕ್ಕೆ ನಾವು ಬದ್ದರಾಗಿ ಇದ್ದು ಮೊದಲ ಕ್ಯಾಬಿನೆಟ್‌ನಲ್ಲಿ(Cabinet) ಜಾರಿ ಮಾಡುತ್ತೇವೆ ಎಂದು ತಿಳಿಸಿದರು.

    ಆಯಾ ಇಲಾಖೆಯ ಸಚಿವರು ಕೂತು ಗ್ಯಾರಂಟಿ ಜಾರಿ ಮಾಡುವ ಬಗ್ಗೆ ಕೆಲಸ ಮಾಡುತ್ತೇವೆ. ಹಾಗೆಯೇ ನೀಡಿದರೆ ಸುಮ್ಮನೆ ಎಲ್ಲರೂ ತೆಗೆದುಕೊಳ್ಳುತ್ತಾರೆ. ಗ್ಯಾರಂಟಿಗಳಿಗೆ ಮಾನದಂಡ ನಿಗದಿ ಮಾಡಲಾಗುವುದು ಎಂದು ವಿವರಿಸಿದರು.  ಇದನ್ನೂ ಓದಿ: ನನ್ನ ಅಣ್ಣ ಬಹಳಷ್ಟು ಕಷ್ಟ ಪಟ್ಟಿದ್ದಾರೆ, ಅವ್ರೇ ಸಿಎಂ ಆಗ್ಬೇಕು: ಡಿಕೆ ಸುರೇಶ್

    ಸಿಎಂ ಆಯ್ಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ, ದೆಹಲಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಕುಳಿತು ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

    ಸಿದ್ದರಾಮಯ್ಯ ಜೊತೆ ಶಾಸಕರು ಹೋಗಿ ಶಕ್ತಿ ಪ್ರದರ್ಶನ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೆಲವು ಶಾಸಕರು ಅವರ ನಾಯಕರ ಜೊತೆ ಅಂತ ಹೋಗಿದ್ದಾರೆ. ಅದನ್ನ ಶಕ್ತಿ ಪ್ರದರ್ಶನ ಎಂದು ಹೇಳುವುದು ಸರಿಯಲ್ಲ ಎಂದು ಉತ್ತರಿಸಿದರು.

    ಕಾಂಗ್ರೆಸ್‌ ನೀಡಿದ 5 ಗ್ಯಾರಂಟಿಗಳು ಯಾವುದು?
    ಪ್ರತಿ ತಿಂಗಳು ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತ, 200 ಯೂನಿಟ್‌ ವಿದ್ಯುತ್‌ ಉಚಿತ, ಕುಟುಂಬದ ಓರ್ವ ಮಹಿಳೆಗೆ 2 ಸಾವಿರ ರೂ., ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ, ಡಿಪ್ಲೋಮಾ ಪದವೀಧರರಿಗೆ ಪ್ರತಿ ತಿಂಗಳು 1,500 ರೂ.ಭತ್ಯೆ , ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿತ್ತು.