Tag: ಕಾಂಗ್ರೆಸ್‌ ಗ್ಯಾರಂಟಿ

  • ಕುರ್ಚಿ ಕದನ, ಅಭಿವೃದ್ಧಿ ಪತನ – 6 ತಿಂಗಳಲ್ಲಿ ಕೇವಲ ಶೇ.30ರಷ್ಟು ಮಾತ್ರ ಪ್ರಗತಿ

    ಕುರ್ಚಿ ಕದನ, ಅಭಿವೃದ್ಧಿ ಪತನ – 6 ತಿಂಗಳಲ್ಲಿ ಕೇವಲ ಶೇ.30ರಷ್ಟು ಮಾತ್ರ ಪ್ರಗತಿ

    – `ಸೌಂಡ್’ ಸಚಿವರ ಇಲಾಖೆಯಲ್ಲೇ ಕುಂಠಿತ
    – ಗ್ಯಾರಂಟಿ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ?

    ಬೆಂಗಳೂರು: ನಾಯಕತ್ವ ಬದಲಾವಣೆಯ ತಿಕ್ಕಾಟದಿಂದ ಕರ್ನಾಟಕ (Karnataka) ಅಭಿವೃದ್ಧಿಗೆ ತೊಡಕಾಯ್ತಾ? ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಗಣನೀಯ ಕುಸಿತ ಆಯ್ತಾ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಕಳೆದ 6 ತಿಂಗಳ ಅವಧಿಯಲ್ಲಿ ಶೇ.30 ರಷ್ಟು ಮಾತ್ರ ಸರಾಸರಿ ಪ್ರಗತಿಯಾಗಿದೆ. ಅಬ್ಬರಿಸಿ ಮಾತನಾಡುವ ಸಚಿವರ ಇಲಾಖೆಯಲ್ಲಿ ಅಭಿವೃದ್ಧಿ ಕುಂಠಿತ ಆಗಿದ್ದು, ಕಂದಾಯ ಇಲಾಖೆ ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ.

    ಸದಾ ಹೇಳಿಕೆ ನೀಡಿ ಸುದ್ದಿಯಾಗುತ್ತಿರುವ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ನಿಭಾಯಿಸುತ್ತಿರುವ ಇಲಾಖೆಗಳು ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸಿದೆ. ಗ್ರಾಮೀಣಾಭಿವೃದ್ಧಿ, ಇಲಾಖೆಯಲ್ಲಿ ಶೇ.11.02 ರಷ್ಟು ಮಾತ್ರ ಪ್ರಗತಿ ಆಗಿದ್ದರೆ ಐಟಿ-ಬಿಟಿ, ವಿಜ್ಞಾನ ತಂತ್ರಜ್ಞಾನ ಇಲಾಖೆಯಲ್ಲಿ ಶೇ. 10.86ರಷ್ಟು ಮಾತ್ರ ಆಗಿದೆ.

    ವಸತಿ ಸಚಿವ ಜಮೀರ್, ಡಿಸಿಎಂ ಡಿಕೆಶಿ ಇಲಾಖೆಗಳು ಹಿನ್ನಡೆ ಸಾಧಿಸಿವೆ. ಇದರಿಂದಾಗಿ ನಾಯಕತ್ವದ ಕುರಿತು ಚರ್ಚಿಸುವ ಸಚಿವರಿಂದ ಅಭಿವೃದ್ಧಿಯತ್ತ ಹೆಚ್ಚು ಗಮನವಿಲ್ಲವೋ? ಸರ್ಕಾರದ ಬಳಿ ಹಣವೇ ಇಲ್ಲವೋ? ಪವರ್‌ಶೇರ್ ಬಗ್ಗೆ ಹೈಕಮಾಂಡ್ ಮಂತ್ರ ಪಠಣ ಮಾಡುತ್ತಿರುವ ಸಚಿವರಿಂದ ಅಭಿವೃದ್ಧಿ ಹಿನ್ನಡೆ ಆಗುತ್ತಿದೆಯೋ ಎಂಬ ಪ್ರಶ್ನೆಗೆ ಅವರೇ ಉತ್ತರ ನೀಡಬೇಕಿದೆ.  ಇದನ್ನೂ ಓದಿ:  5 ವರ್ಷವೂ ನಾನೇ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯ ಮಾತು ಮೊದಲ ಬಾರಿಗೆ ಬದಲಾಯ್ತು!

    ಕುರ್ಚಿ ಕದನ; ಅಭಿವೃದ್ಧಿ ಪತನ
    > ಪ್ರಸಕ್ತ ಬಜೆಟ್‌ನಲ್ಲಿ ಇಲಾಖಾವಾರು ಹಂಚಿಕೆ – 3,53,492 ಕೋಟಿ ರೂ.
    > ಸೆಪ್ಟೆಂಬರ್ ತ್ರೈಮಾಸಿಕ ಅಂತ್ಯದಲ್ಲಿ ಬಿಡುಗಡೆಯಾದ ಮೊತ್ತ – 1,48,576 ಕೋಟಿ ರೂ.
    > ಸೆಪ್ಟೆಂಬರ್ ಅಂತ್ಯದಲ್ಲಿ ಬಳಕೆಯಾದ ಅನುದಾನ – 1,06,611 ಕೋಟಿ ರೂ.

     

    ಯಾವ ಇಲಾಖೆ ಎಷ್ಟು ಖರ್ಚು ಮಾಡಿದೆ?
    > ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) -5,780 ಕೋಟಿ ರೂ. (ಶೇ.46.74)
    (ಸಚಿವರು: ಕೃಷ್ಣ ಬೈರೇಗೌಡ)

    > ಜಲಸಂಪನ್ಮೂಲ ಇಲಾಖೆ -4,496 ಕೋಟಿ ರೂ. (ಶೇ.23.9)
    (ಸಚಿವರು: ಡಿ.ಕೆ. ಶಿವಕುಮಾರ್)

    > ವಸತಿ ಇಲಾಖೆ – 807 ಕೋಟಿ ರೂ. (ಶೇ.18.38)
    (ಸಚಿವರು: ಜಮೀರ್ ಅಹ್ಮದ್)

    > ಗ್ರಾಮೀಣಾಭಿವೃದ್ಧಿ- ಪಂಚಾಯತ್‌ರಾಜ್ -2,964 ಕೋಟಿ ರೂ. (ಶೇ.11.02)
    (ಸಚಿವರು: ಪ್ರಿಯಾಂಕ್ ಖರ್ಗೆ)

    > ಐಟಿ-ಬಿಟಿ, ವಿಜ್ಞಾನ- ತಂತ್ರಜ್ಞಾನ -117 ಕೋಟಿ ರೂ. (ಶೇ.10.86)
    (ಸಚಿವರು: ಪ್ರಿಯಾಂಕ್ ಖರ್ಗೆ)  ಇದನ್ನೂ ಓದಿ:  ಧರ್ಮಸ್ಥಳ ಕೇಸ್ – ಸುಜಾತ ಭಟ್ ಹೊರತುಪಡಿಸಿ ವಿಚಾರಣೆಗೆ ಗೈರಾದ ಬುರುಡೆ ಗ್ಯಾಂಗ್

    ಯಾವ ಗ್ಯಾರಂಟಿ ಯೋಜನೆಗೆ ಎಷ್ಟು ಖರ್ಚು?
    ಗೃಹಜ್ಯೋತಿ ಯೋಜನೆ
    > ಹಂಚಿಕೆ ಮೊತ್ತ – 26,896 ಕೋಟಿ ರೂ. (ಶೇ.50.29)
    ಇಂಧನ ಸಚಿವ : ಕೆಜೆ ಜಾರ್ಜ್)

    * ಗೃಹಲಕ್ಷ್ಮೀ ಯೋಜನೆ
    > ಹಂಚಿಕೆ ಮೊತ್ತ – 34,954 ಕೋಟಿ ರೂ. (ಶೇ.17.43)
    ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ : ಲಕ್ಷ್ಮಿ ಹೆಬ್ಬಾಳ್ಕರ್

    * ಶಕ್ತಿ ಯೋಜನೆ
    > ಹಂಚಿಕೆ ಮೊತ್ತ – 7,169 ಕೋಟಿ ರೂ. ( ಶೇ.34.88)
    ಸಾರಿಗೆ : ರಾಮಲಿಂಗಾರೆಡ್ಡಿ)

    * ಅನ್ನಭಾಗ್ಯ ಯೋಜನೆ
    > ಹಂಚಿಕೆ ಮೊತ್ತ – 8,274 ಕೋಟಿ ರೂ. (ಶೇ.28.23)
    ಆಹಾರ ಕೆ.ಹೆಚ್. ಮುನಿಯಪ್ಪ

  • ʻಗೃಹಲಕ್ಷ್ಮಿʼಯರಿಗೆ ಸಿಗದ ದೀಪಾವಳಿ ಗಿಫ್ಟ್‌ – ಸರ್ಕಾರದ ವಿರುದ್ಧ ಮಹಿಳೆಯರ ಆಕ್ರೋಶ

    ʻಗೃಹಲಕ್ಷ್ಮಿʼಯರಿಗೆ ಸಿಗದ ದೀಪಾವಳಿ ಗಿಫ್ಟ್‌ – ಸರ್ಕಾರದ ವಿರುದ್ಧ ಮಹಿಳೆಯರ ಆಕ್ರೋಶ

    – ಕಳೆದ 3-4 ತಿಂಗಳಿನಿಂದ ಹಣವೇ ಬಂದಿಲ್ಲ ಅಂತ ಆಕ್ಷೇಪ

    ಬೆಂಗಳೂರು: ಸರ್ಕಾರದ ಪಂಚ ಗ್ಯಾರಂಟಿಗಳಲ್ಲೊಂದು ಗೃಹಲಕ್ಷ್ಮಿ ಯೋಜನೆ (Gruhalakshmi Scheme). ಆದ್ರೆ ಕಳೆದ 3-4 ತಿಂಗಳಿಂದ ಎರಡು ಸಾವಿರ ರೂಪಾಯಿ ಹಣ ಮಹಿಳೆಯರ ಅಕೌಂಟ್‌ಗೆ ಜಮೆಯಾಗ್ತಿಲ್ಲ. ದೀಪಾವಳಿ (Deepavali) ಸಮಯದಲ್ಲೇ ಮನೆಗೆ ಮಹಾಲಕ್ಷ್ಮಿ ಬಾರದೇ ಇರೋದು ಗೃಹಲಕ್ಷ್ಮೀಯರ ಆಕ್ರೋಶಕ್ಕೆ ಕಾರಣವಾಗ್ತಿದೆ.

    ಕಾಂಗ್ರೆಸ್ ಸರ್ಕಾರ 2023ರ ವಿಧಾನಸಭಾ ಚುನಾವಣೆಯ ವೇಳೆ ಪಂಚ ಗ್ಯಾರಂಟಿ (Congress Guarantee) ಯೋಜನೆಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿದೆ. ಈ ಗ್ಯಾರಂಟಿಗಳಲ್ಲೊಂದು ಗೃಹಲಕ್ಷ್ಮಿ ಯೋಜನೆ ಮಹತ್ವದ್ದಾಗಿದೆ. ಇದ್ರಿಂದಾಗಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಜಮಾಯಾಗುತ್ತಿತ್ತು. ಆದ್ರೆ, ಕಳೆದ 4 ತಿಂಗಳಿನಿಂದ ಗೃಹಲಕ್ಷ್ಮಿ ಹಣ ಮಹಿಳೆಯರ ಅಕೌಂಟ್‌ಗೆ ಜಮೆಯಾಗ್ತಿಲ್ಲ. ಸರ್ಕಾರ ಹಣ ಹಾಕಲು ವಿಳಂಬ ಮಾಡುತ್ತಿದೆ. ಇದು ಗೃಹಲಕ್ಷ್ಮಿ ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗ್ತಿದೆ. ಇದನ್ನೂ ಓದಿ: ಭಟ್ಕಳ| ಮದುವೆ ಮಂಟಪದಲ್ಲಿ ಪಾರ್ಕಿಂಗ್ ವಿಷಯಕ್ಕೆ ನಡುರಸ್ತೆಯಲ್ಲೇ ಮಾರಾಮಾರಿ

    ಇನ್ನೂ ಸರ್ಕಾರ ಮಹಿಳೆಯರ ಮತಗಳ ಮೇಲೆ ಕಣ್ಣಿಟ್ಟು ಈ ಯೋಜನೆ ಜಾರಿಗೊಳಿಸಿತ್ತು. ಅದರಂತೆ ರಾಜ್ಯದ ಮಹಿಳೆಯರಿಗೆ ಆರ್ಥಿಕ ಸಬಲೀಕರಣ ಒದಗಿಸುವ ಗುರಿಯೊಂದಿಗೆ ಈ ಯೋಜನೆಯನ್ನ ಜಾರಿಗೆ ತಂದಿತ್ತು. ಆದ್ರೆ ಮಹಿಳೆಯರಿಗೆ ಮನೆ ನಡೆಸಲು, ಮಕ್ಕಳ ಶಿಕ್ಷಣಕ್ಕೆ ಮೊದಲಾದವುಗಳಿಗೆ ಈ ಹಣ ಸಹಾಯಕವಾಗ್ತಿಲ್ಲ ಅಂತಾ ಸರ್ಕಾರದ ವಿರುದ್ದ ಹರಿಹಾಯುತ್ತಿದ್ದಾರೆ. ಇದನ್ನೂ ಓದಿ: ಹಾಸನಾಂಬ ದೇವಿ ದರ್ಶನ ಪಡೆದ ಬಾನು ಮುಷ್ತಾಕ್

    ಕಳೆದ 3-4 ತಿಂಗಳಿನಿಂದ ಮಹಿಳೆಯರ ಬ್ಯಾಂಕ್ ಖಾತೆಗೆ ಸರಿಯಾಗಿ ಹಣ ಜಮಾ ಆಗದೇ ಇರೋದಕ್ಕೆ ಗೃಹಲಕ್ಷ್ಮಿ ಫಲಾನುಭವಿಗಳು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ಗೆ ಅಲೆದಾಡುತ್ತಿದ್ದಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗಮನ ಹರಿಸಿ, ಆದಷ್ಟು ಬೇಗ ಬಾಕಿ ಕಂತಿನ ಹಣ ಬಿಡುಗಡೆ ಮಾಡಿದ್ರೇ, ಮಹಿಳೆಯರು ದೀಪಾವಳಿ ಹಬ್ಬವನ್ನು ಖುಷಿಯಿಂದ ಮಾಡಬಹುದು ಅನ್ನೋದು ಜನರ ಕೋರಿಕೆ.ಇದನ್ನೂ ಓದಿ: ಪತಿಯಿಂದ ವೈದ್ಯೆ ಹತ್ಯೆ; ಮಗಳಿಗಾಗಿ ಕಟ್ಟಿಸಿದ್ದ 4 ಕೋಟಿ ರೂ. ಮನೆ ಇಸ್ಕಾನ್‌ಗೆ ದಾನ ಮಾಡಿದ ತಂದೆ

  • ನಾನು ಸಿಎಂ ಆಗಿದ್ದಿದ್ರೆ ʻಪಂಚ ಗ್ಯಾರಂಟಿʼ ಅನುಷ್ಠಾನ ಮಾಡ್ತಿರಲಿಲ್ಲ, ಗ್ಯಾರಂಟಿ ಹೊರೆಯಾಗಿದೆ: ಆರ್.ವಿ.ದೇಶಪಾಂಡೆ

    ನಾನು ಸಿಎಂ ಆಗಿದ್ದಿದ್ರೆ ʻಪಂಚ ಗ್ಯಾರಂಟಿʼ ಅನುಷ್ಠಾನ ಮಾಡ್ತಿರಲಿಲ್ಲ, ಗ್ಯಾರಂಟಿ ಹೊರೆಯಾಗಿದೆ: ಆರ್.ವಿ.ದೇಶಪಾಂಡೆ

    – ಗ್ಯಾರಂಟಿಗಳಿಂದ ಅಭಿವೃದ್ಧಿಯ ವೇಗ ತಗ್ಗಿದೆ ಎಂದು `ಕೈʼ ಶಾಸಕ ಬೇಸರ

    ಕಾರವಾರ: ನಾನು ಮುಖ್ಯಮಂತ್ರಿ ಆಗಿದ್ದಿದ್ರೆ ಪಂಚ ಗ್ಯಾರಂಟಿ ಯೋಜನೆಗಳನ್ನ (Congress Guarantee Scheme) ಅನುಷ್ಠಾನ ಮಾಡುತ್ತಿರಲಿಲ್ಲ ಎಂದು ಸ್ವಪಕ್ಷದ ಯೋಜನೆ ಬಗ್ಗೆ ಪಕ್ಷದ ಕಾರ್ಯಕ್ರಮದಲ್ಲೇ ಕಾಂಗ್ರೆಸ್ ಹಿರಿಯ ಶಾಸಕ ಆರ್.ವಿ ದೇಶಪಾಂಡೆ (RV Deshpande) ಹೇಳಿದ್ದಾರೆ.

    ಉತ್ತರ ಕನ್ನಡ (Uttara Kannada) ಜಿಲ್ಲೆಯ ದಾಂಡೇಲಿ ತಾಲೂಕಿನ ಅಂಬೇವಾಡಿ ನವಗ್ರಾಮದಲ್ಲಿ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಂಡಿದ್ದ ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಅಭಿಯಾನದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆ ಆಗಿದೆ. ಜನರಿಗೆ ಅನುಕೂಲವಾಗಿರುವುದು ಒಂದೆಡೆಯಾದ್ರೆ, ಇನ್ನೊಂದೆಡೆ ಸರ್ಕಾರ ನಡೆಸಲು ಕಷ್ಟವಾಗಿದೆ.

    ಮಹಿಳೆಯರು ಎಲ್ಲ ಸೌಲಭ್ಯಗಳನ್ನ ಪಡೆಯುತ್ತಿದ್ದಾರೆ. ಪುರುಷರಿಗೆ ಯಾವುದೇ ಯೋಜನೆಗಳು ಇಲ್ಲ. ಸರ್ಕಾರದ ಈ ಯೋಜನೆಗಳನ್ನ ಜನರಿಗೆ ತಲುಪಿಸಲು ಅನೇಕ ಸಮಿತಿಗಳನ್ನ ರಚಿಸಲಾಗಿದೆ. ಅವುಗಳನ್ನು ನಿಭಾಯಿಸುವುದೇ ಆಗಿದೆ. ಹೀಗಾಗಿ ರಾಜ್ಯದಲ್ಲಿ ಅಭಿವೃದ್ಧಿಯ ವೇಗ ತಗ್ಗಿದೆ ಎಂದು ಹೇಳಿದ್ದಾರೆ.

    ಇನ್ನೂ 5 ಕೆಜಿ ಅಕ್ಕಿ ಬದಲಿಗೆ ಸರ್ಕಾರದಿಂದ ಇಂದಿರಾ ಕಿಟ್‌ (INDIRA Food Kit) ಕೊಡುವ ನಿರ್ಧಾರ ಕುರಿತು ಮಾತನಾಡ್ತಾ, ಮುಖ್ಯಮಂತ್ರಿಗಳು ಇಂದಿರಾ ಕಿಟ್ ಕೊಡ್ತಾರೋ ತೆಂಗಿನಕಾಯಿ ಕೊಡ್ತಾರೋ ನಮಗೇ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

  • ಅವೈಜ್ಞಾನಿಕ ಗ್ಯಾರಂಟಿಗಳಿಂದ ರಾಜ್ಯದ ಆದಾಯ ಖೋತಾ: ಪ್ರಹ್ಲಾದ್ ಜೋಶಿ ಆರೋಪ

    ಅವೈಜ್ಞಾನಿಕ ಗ್ಯಾರಂಟಿಗಳಿಂದ ರಾಜ್ಯದ ಆದಾಯ ಖೋತಾ: ಪ್ರಹ್ಲಾದ್ ಜೋಶಿ ಆರೋಪ

    ನವದೆಹಲಿ: ರಾಜ್ಯ ಕಾಂಗ್ರೆಸ್‌ ಸರ್ಕಾರ ಐದು ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಆದಾಯವನ್ನೇ ನುಂಗಿಬಿಟ್ಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಆರೋಪಿಸಿದ್ದಾರೆ.

    ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ CAG ವರದಿಯೇ ಈ ವಾಸ್ತವವನ್ನು ಬಹಿರಂಗಪಡಿಸಿದೆ. ಕಾಂಗ್ರೆಸ್‌ನ ಐದು ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳು ರಾಜ್ಯದ ಆದಾಯ ವೆಚ್ಚದ ಶೇ.15‌ ರಷ್ಟನ್ನು ವ್ಯಯಿಸಿರುವುದನ್ನು ಉಲ್ಲೇಖಿಸಿದೆ ಎಂದಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯಿಂದ 2 ಲಕ್ಷ ಮಂದಿ ಅನರ್ಹರು ಹೊರಕ್ಕೆ

    CAG ವರದಿ ಪ್ರಕಾರ ಅಧಿಕ ಆದಾಯದ ರಾಜ್ಯವಾಗಿದ್ದ ಕರ್ನಾಟಕ ಈಗ ಅವೈಜ್ಞಾನಿಕ ಗ್ಯಾರಂಟಿಗಳಿಂದಾಗಿ ಆದಾಯದಲ್ಲಿ ಖೋತಾ ಕಂಡಿದೆ. ಆರ್ಥಿಕ ಅವ್ಯವಸ್ಥೆಗೆ ಕಾರಣವಾಗಿದೆ‌ ಎಂದಿರುವ ಸಚಿವರು, ರಾಜ್ಯ ಇನ್ನು ಆರ್ಥಿಕತೆಯಲ್ಲಿ ಸ್ಥಿರತೆ ಕಾಣಲು ಹಲವು ವರ್ಷಗಳೇ ಬೇಕಾಗಲಿದೆ ಎಂದು ಹೇಳಿದ್ದಾರೆ.

    2022-23ನೇ ಹಣಕಾಸು ವರ್ಷದಲ್ಲಿ ಕರ್ನಾಟಕ ಹೆಚ್ಚುವರಿ ಆದಾಯದ ರಾಜ್ಯವಾಗಿತ್ತು. ಆದರೆ, ಈಗ ಬಂಡವಾಳ ನಷ್ಟದ ರಾಜ್ಯವಾಗಿ ಅಭಿವೃದ್ಧಿಯಲ್ಲೂ ತೀವ್ರ ಕುಂಠಿತಗೊಂಡಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಒಳಮೀಸಲಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಸ್ವಾಗತಾರ್ಹ: ಮುಖ್ಯಮಂತ್ರಿ ಚಂದ್ರು

    2023-24ನೇ ಹಣಕಾಸು ವರ್ಷದಲ್ಲಿ 46,623 ಕೋಟಿ ರೂ.ನಿಂದ 65,522 ಕೋಟಿ ರೂ.ಗೆ ಹಣಕಾಸಿನ ಕೊರತೆ ಜತೆಗೆ 9,271 ಕೋಟಿ ರೂ. ಆದಾಯ ಕೊರತೆಗೆ ಕಾರಣವಾಗಿದೆ‌ ಎಂದು ಹೇಳಿದ್ದಾರೆ.

    ರಾಜ್ಯದ ಸಾಲ 63,000 ಕೋಟಿಗೆ ಏರಿಕೆ: ರಾಜ್ಯ ಕಾಂಗ್ರೆಸ್‌ ಸರ್ಕಾರದ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಸಾಲವೀಗ ಬರೋಬ್ಬರಿ 63,000 ಕೋಟಿಗೆ ಏರಿಕೆ ಕಂಡಿದೆ. ಈ ಮೂಲಕ ರಾಜ್ಯದಲ್ಲಿ ಬಂಡವಾಳ ಕಡಿತವಾಗಿದ್ದಲ್ಲದೆ, ಅಭಿವೃದ್ಧಿ ಸಹ ಕುಂಠಿತವಾಗಿದೆ ಎಂದು ಸಚಿವರು ಆರೋಪಿಸಿದ್ದಾರೆ.

    ಡೀಸೆಲ್, ಹಾಲು, ವಿದ್ಯುತ್, ಮೆಟ್ರೋ, ಬಿಎಂಟಿಸಿ ಸೇರಿದಂತೆ ಹಲವು ದಿನಬಳಕೆಗಳ ಬೆಲೆ ಏರಿಸಿ ಸಾರ್ವಜನಿಕರ ಜೀವನವನ್ನು ಬಲು ದುಬಾರಿಯಾಗಿಸಿದೆ ಎಂದು ಸಚಿವ ಜೋಶಿ ಖಂಡಿಸಿದರು.

  • ಹಣ ಸಂಗ್ರಹಿಸಿ 3 ಕಿ.ಮೀ. ರಾಜ್ಯ ಹೆದ್ದಾರಿಯ ಗುಂಡಿ ಮುಚ್ಚಿದ ಬೀದರ್‌ ಗ್ರಾಮಸ್ಥರು!

    ಹಣ ಸಂಗ್ರಹಿಸಿ 3 ಕಿ.ಮೀ. ರಾಜ್ಯ ಹೆದ್ದಾರಿಯ ಗುಂಡಿ ಮುಚ್ಚಿದ ಬೀದರ್‌ ಗ್ರಾಮಸ್ಥರು!

    – ಕಂದಗೋಳ ಗ್ರಾಮಸ್ಥರಿಂದ ಕೆಲಸ
    – ಗ್ಯಾರಂಟಿಯಿಂದ ಸರ್ಕಾರದ ಬಳಿ ದುಡ್ಡಿ ಇಲ್ಲ ಎಂದು ಆಕ್ರೋಶ

    ಬೀದರ್‌: ಪಂಚ ಗ್ಯಾರಂಟಿ (Congress Guarantee) ಯೋಜನೆಯನ್ನು ಜಾರಿ ಮಾಡಿದ ಬಳಿಕ ರಾಜ್ಯ ಸರ್ಕಾರದ ಬಳಿ ಡೆಡ್ಲಿ ಗುಂಡಿಗಳನ್ನು ಮುಚ್ಚಲು (Road Repair) ಹಣವಿಲ್ವಾ ಎಂಬ ಪ್ರಶ್ನೆ ಎದ್ದಿದೆ. ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿ ಸುಸ್ತಾದ ಜಿಲ್ಲೆಯ ಕಂದಗೋಳ ಗ್ರಾಮಸ್ಥರು ತಮ್ಮ ಸ್ವಂತ ಖರ್ಚಿನಲ್ಲೇ ಗುಂಡಿಗಳನ್ನು ಮುಚ್ಚಲು ಆರಂಭಿಸಿದ್ದಾರೆ.

    ಬೀದರ್‌ನಿಂದ (Bidar) ತೆಲಂಗಾಣದ ಹಾಗೂ ಮಹಾರಾಷ್ಟಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ಗುಂಡಿಗಳು (Potholes) ಸೃಷ್ಟಿಯಾಗಿವೆ. ಬೀದರ್‌ನಿಂದ ವಡಗಾಂವ್ ಮಾರ್ಗವಾಗಿ ತೆಲಂಗಾಣದ ಮತ್ತು ನಾಗಮಾರಪಳ್ಳಿ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಇದನ್ನೂ ಓದಿ: ಬೇಕರಿ, ದಿನಸಿ ಅಂಗಡಿಗಳಿಗೆ ಲಕ್ಷ ಲಕ್ಷ ಟ್ಯಾಕ್ಸ್ ಬಂದ್‌ ಎಚ್ಚರಿಕೆ ಕೊಟ್ಟ ಮಾಲೀಕರು

    ಭಾರೀ ಗಾತ್ರದ ವಾಹನಗಳ ಓಡಾಟದಿಂದ ರಸ್ತೆಗಳು ಮತ್ತಷ್ಟು ಹಾಳಾಗಿವೆ. ಪ್ರತಿದಿನ ಬೀದರ್‌ಗೆ ಹಾಗೂ ಔರಾದ್‌ಗೆ ಹೋಗಬೇಕಾದರೆ ಭಯದಲ್ಲೇ ಜನ ಸಂಚಾರ ಮಾಡುತ್ತಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರೂ ಪ್ರಯೋಜನ ಆಗಿರಲಿಲ್ಲ. ಶಾಸಕರು ಮತ್ತು ಮಾಜಿ ಸಚಿವರಾದ ಪ್ರಭು ಚೌಹಾಣ್‌ಗೆ ಹತ್ತಾರು ಬಾರಿ ಮನವಿ ಮಾಡಿದರೂ ಕೆಲಸ ಆಗಲಿಲ್ಲ.

    ಮನವಿಗೆ ಯಾವುದೇ ಸ್ಪಂದನೆ ಸಿಗದ ಕಾರಣ ಕಂದಗೋಳ ಗ್ರಾಮಸ್ಥರೇ ತಮ್ಮ ತಮ್ಮ ಕೈಯಿಂದ ಹಣ ಹಾಕಿಕೊಂಡು ರಸ್ತೆ ರಿಪೇರಿ ಮಾಡಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲೇ ಜಲ್ಲಿ, ಮರಳು ತಂದು ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚಿದ್ದಾರೆ. ಮೂರು ಕಿಲೋಮೀಟರ್ ದೂರದವರೆಗೆ ಇರುವ ಗುಂಡಿಗಳನ್ನು ಮಣ್ಣಿನಿಂದ ಮುಚ್ಚಿ ಮಾದರಿ ಆಗಿದ್ದಾರೆ. ಇದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮುಜುಗರವಾಗಿದೆ.

    ಗ್ರಾಮಸ್ಥ ಕಾಶಿನಾಥ್‌ ಪ್ರತಿಕ್ರಿಯಿಸಿ, ಪ್ರತಿದಿನ ಇಲ್ಲಿ ಸಾವಿರಾರು ವಾಹನಗಳು ಓಡಾಡುತ್ತಿವೆ. ಪ್ರತಿದಿನ ಬೈಕಿನಿಂದ ಸವಾರರು ರಸ್ತೆಗೆ ಬಿದ್ದು ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾವು ಈ ರಸ್ತೆಯಲ್ಲಿ ಓಡಾಡುತ್ತಿದ್ದು ಹಲವು ಬಾರಿ ಬಿದ್ದಿದ್ದೇವೆ. ಸಾಕಷ್ಟು ಬಾರಿ ಅಧಿಕಾರಿಗಳನ್ನು, ಜನಪ್ರತಿನಿಧಿಗಳ ಬಳಿ ಮನವಿ ಮಾಡಿ ರಿಪೇರಿ ಮಾಡುವಂತೆ ಕೇಳಿಕೊಂಡಿದ್ದೆವು. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಕೊನೆಗೆ ನಾವೇ ಗ್ರಾಮಸ್ಥರಿಂದ ಹಣವನ್ನು ಸಂಗ್ರಹ ಮಾಡಿ ಗುಂಡಿ ಮುಚ್ಚಲು ಮುಂದಾಗುತ್ತಿದ್ದೇವೆ. ಪಂಚ ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಬಳಿ ಗುಂಡಿ ಮುಚ್ಚಲು ಹಣವಿಲ್ಲ ಎಂದು ದೂರಿದರು. ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ಕೇಸ್ ವರದಿ ಬಹಿರಂಗಪಡಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

  • ಗೃಹ ಲಕ್ಷ್ಮಿ ಹಣ ಮೇ ತಿಂಗಳದ್ದು ಮಾತ್ರ ಬಾಕಿಯಿದೆ: ಹೆಬ್ಬಾಳ್ಕರ್

    ಗೃಹ ಲಕ್ಷ್ಮಿ ಹಣ ಮೇ ತಿಂಗಳದ್ದು ಮಾತ್ರ ಬಾಕಿಯಿದೆ: ಹೆಬ್ಬಾಳ್ಕರ್

    ಬೆಂಗಳೂರು: ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ (Grahalakshmi) ಫಲಾನುಭವಿಗಳ ಪರಿಷ್ಕರಣೆ ಮಾಡುವುದಿಲ್ಲ. ಈಗ ಇರುವಂತೆ ವ್ಯವಸ್ಥೆ ಮುಂದುವರೆಯುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಸ್ಪಷ್ಟಪಡಿಸಿದ್ದಾರೆ.

    ಗೃಹಲಕ್ಷ್ಮಿ ಹಣ ವಿಳಂಬದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಗೃಹಲಕ್ಷ್ಮಿ ಹಣ ಬಿಡುಗಡೆಗೆ ಯಾವುದೇ ತಾಂತ್ರಿಕ ಸಮಸ್ಯೆ ‌ಇಲ್ಲ. ಏಪ್ರಿಲ್ ತಿಂಗಳವರೆಗೂ ಹಣ ಕ್ಲಿಯರ್ ಆಗಿದೆ. ಮೇ (May) ತಿಂಗಳು ಮಾತ್ರ ಬಾಕಿ ಇದ್ದು ಪ್ರತಿ‌ ತಿಂಗಳು ಹಣಕಾಸು ‌ಇಲಾಖೆಗೆ ಹಣ ಬಿಡುಗಡೆ ಆಗುತ್ತಿದೆ ಎಂದರು. ಇದನ್ನೂ ಓದಿ: 400 ವರ್ಷಗಳಲ್ಲಿ ಇದೇ ಮೊದಲು – ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ 11 ದಿನ!

     

    ಈಗ ಹಣ ತಾಲೂಕು, ಜಿಲ್ಲಾ ಪಂಚಾಯತಿಗೆ ಸುತ್ತಾಡಿ ಬಿಡುಗಡೆ ಆಗಬೇಕಿದೆ. ಇದರಿಂದಾಗಿ ಒಂದು ವಾರ, ಎರಡು ವಾರ ತಡೆ ಆಗಬಹುದು ಅಷ್ಟೇ. ಬಾಕಿ ಹಣ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

    ಹಣಕಾಸು ‌ಇಲಾಖೆ ಪ್ರತಿ ತಿಂಗಳು ಹಣ ನೀಡುತ್ತಿದೆ. ಪ್ರತಿ ತಿಂಗಳು ಯಜಮಾನಿಯರು ಹೊಸದಾಗಿ ಸೇರುತ್ತಿದ್ದಾರೆ. ಈಗ 1.25 ಕೋಟಿ ಯಜಮಾನಿಯರು ಯೋಜನೆ ಅಡಿ ಇದ್ದಾರೆ. ನಮ್ಮ ಇಲಾಖೆಯಿಂದ ಫಲಾನುಭವಿಗಳ ಪರಿಷ್ಕರಣೆ ಮಾಡುವುದಿಲ್ಲ. ಈಗ ಹೇಗೆ ಇದೆಯೋ ಹಾಗೆಯೇ ಮುಂದುವರೆಯುತ್ತಿದೆ‌ ಅಂತ ಸ್ಪಷ್ಟಪಡಿಸಿದರು.

  • ಕಾಂಗ್ರೆಸ್ ಸರ್ಕಾರ ಇರೋವರೆಗೂ ಗ್ಯಾರಂಟಿ ಸ್ಕೀಂ ನಿಲ್ಲೋದಿಲ್ಲ: ಡಿಕೆಶಿ ಸ್ಪಷ್ಟನೆ

    ಕಾಂಗ್ರೆಸ್ ಸರ್ಕಾರ ಇರೋವರೆಗೂ ಗ್ಯಾರಂಟಿ ಸ್ಕೀಂ ನಿಲ್ಲೋದಿಲ್ಲ: ಡಿಕೆಶಿ ಸ್ಪಷ್ಟನೆ

    ವಿಜಯನಗರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋವರೆಗೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಸ್ಪಷ್ಟಪಡಿಸಿದ್ದಾರೆ.

    ರಾಜ್ಯದಲ್ಲಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರ ಅಧಿಕಾರ ಬಂದು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ (Hosapete) ನಡೆದ ‘ಸಮರ್ಪಣೆ ಸಂಕಲ್ಪ ಸಮಾವೇಶ’ದಲ್ಲಿ ಮಾತನಾಡಿದ ಡಿಕೆಶಿ, ಎರಡು ವರ್ಷದ ಹಿಂದೆ ಸಿದ್ದರಾಮಯ್ಯ ಮತ್ತು ನನ್ನ ಮೇಲೆ ಭರವಸೆ ಇಟ್ಟು ಮತ ಹಾಕಿದ್ರಿ. 136 ಸ್ಥಾನ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹಕ್ಕು ಪತ್ರ ನೀಡುವ ಮೂಲಕ ಆರನೇ ಗ್ಯಾರಂಟಿ ಜಾರಿ: ರಾಹುಲ್‌ ಗಾಂಧಿ

    ಮೊದಲು ಐದು ಗ್ಯಾರಂಟಿ, ಈಗ ಹಕ್ಕು ಪತ್ರ ಮೂಲಕ ಆರನೇ ಗ್ಯಾರಂಟಿ ನೀಡಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋವರೆಗೆ ಗ್ಯಾರಂಟಿ ಸ್ಕೀಮ್ ನಿಲ್ಲೋದಿಲ್ಲ. ಬಡವರು ಹಕ್ಕು ಪತ್ರ ಇಲ್ಲದೇ ಪರದಾಟ ಮಾಡುವ ಜನರಿಗಾಗಿ ಈ ಕಾರ್ಯಕ್ರಮ. ಈ ಸ್ವತ್ತು ಮೂಲಕ ಏಳನೇ ಗ್ಯಾರಂಟಿ ಕೂಡ ನೀಡುತ್ತಿದ್ದೇವೆ ಎಂದು ಭರವಸೆ ನೀಡಿದ್ದಾರೆ.

    ಇಂದಿರಾ ಗಾಂಧಿ ಹೊಸಪೇಟೆಯಲ್ಲಿ ಭಾಷಣ ಮಾಡಿದ್ರು. ಸೋನಿಯಾ ಗಾಂಧಿ ಬಿಟಿಪಿಎಸ್ ಘಟಕ ಸ್ಥಾಪನೆ ಮಾಡಿದ್ರು. ಭಾರತ್ ಜೋಡೋ ಯಾತ್ರೆ ಮೂಲಕ ಬಳ್ಳಾರಿ ರಾಹುಲ್ ಗಾಂಧಿ ಸಂಚಾರ ಮಾಡಿದ್ದಾರೆ. ಇದರ ಭಾಗ ಬಳ್ಳಾರಿ ಅಭಿವೃದ್ಧಿ ಹೆಚ್ಚುವರಿ ಹಣ ನೀಡಿದ್ದೇವೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು ಜನರು ಬ್ರ್ಯಾಂಡೆಡ್‌ ನರಕದಲ್ಲಿ ನರಳುತ್ತಿದ್ದಾರೆ – ಸರ್ಕಾರದ ವಿರುದ್ಧ ಹೆಚ್‌ಡಿಕೆ ಕಿಡಿ

    ರಾಜ್ಯದಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಮುಂದೆ ಬರುತ್ತಿದ್ದಾರೆ. ತುಂಗಭದ್ರಾ ನದಿ ತೀರದ ನೀರಿನ ಬವಣೆ ತೀರಿಸಲು ಹೊಸ ಅಭಿವೃದ್ಧಿ ಕೆಲಸ ಮಾಡ್ತೇವೆ. ಸಮಾನಾಂತರ ಜಲಾಶಯ ಮಾಡಲು ಅಂಧ್ರ ಸರ್ಕಾರ ಅನುಮತಿ ನೀಡುತ್ತಿಲ್ಲ. ತಾಂತ್ರಿಕ ತೊಂದರೆ ಸರಿಪಡಿಸಿ ನಿರ್ಮಾಣ ಮಾಡ್ತೇವೆ. ಸರ್ಕಾರದ ಎಲ್ಲಾ ಇಲಾಖೆಯಲ್ಲಿಯೂ ಮಂತ್ರಿಗಳು ಹೊಸ ಯೋಜನೆ ತಂದು ಅಭಿವೃದ್ಧಿ ಮಾಡ್ತಿದ್ದಾರೆ. ಬಸವಣ್ಣನವರ ಮಾತಿನಂತೆ ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿ ಮುಂದುವರಿಸಲು ರಾಹುಲ್ ಸಲಹೆ ನೀಡಿದ್ದಾರೆ. ಅದನ್ನ ಮಾಡ್ತೇವೆ ಎಂದು ಭರವಸೆ ನೀಡಿದ್ದಾರೆ.

  • ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಉಲ್ಟಾ ಹೊಡೆದ ಡಿಕೆಶಿ

    ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಉಲ್ಟಾ ಹೊಡೆದ ಡಿಕೆಶಿ

    ಬಳ್ಳಾರಿ: ಗೃಹಲಕ್ಷ್ಮಿ ಹಣವನ್ನ ಪ್ರತಿ ತಿಂಗಳೂ… ಕೊಡ್ತೀವಿ ಅಂತ ಹೇಳಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಉಲ್ಟಾ ಹೊಡೆದಿದ್ದಾರೆ.

    ಬಳ್ಳಾರಿಯಲ್ಲಿ ಕಾಂಗ್ರೆಸ್‌ ಸಾಧನಾ ಸಮಾವೇಶ ಕುರಿತ ಸುದ್ದಿಗೋಷ್ಠಿಯಲ್ಲಿ, ಗೃಹಲಕ್ಷ್ಮಿ ಹಣ (Gruhalakshmi Scheme Money) ಯಾವಾಗ ಬರುತ್ತೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ನೋಡ್ರಿ ತಿಂಗಳು ತಿಂಗಳು ಹಣ ಕೊಡ್ತೀವಿ ಅಂತ ನಾವು ಹೇಳಿಲ್ಲ. ನೀವು ಟ್ಯಾಕ್ಸ್‌ ಕಟ್ಟುತ್ತಾ ಇರಬೇಕು.. ನಾವು ದುಡ್ಡು ಕೊಡ್ತಾ ಇರಬೇಕು. ಈಗ ಗುತ್ತಿಗೆ ಕೆಲಸ ಮಾಡುವವರಿಗೆ ನಾಳೆನೇ ಹಣ ಬಂದುಬಿಡುತ್ತಾ? 2, 3, 5 ವರ್ಷ ಆಗುತ್ತೆ ಅಲ್ವಾ.. ಅದೇ ರೀತಿ ಇದೂ ಕೂಡ ಬಂದಾಗ ಬರುತ್ತೆ ಅಂತ ಹಾರಿಕೆ ಉತ್ತರ ನೀಡಿದ್ದಾರೆ.

    ಇದೇ ವೇಳೆ ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ವಿಪಕ್ಷ ಟೀಕೆ ಕುರಿತು ಮಾತನಾಡಿದ ಅವರು, ನಾನೇನು ಹಂಪಿ ಟೂರ್ ಮಾಡೋಕೆ ಬಂದಿದ್ದೇನಾ? ಕುಮಾರಸ್ವಾಮಿ, ಅಶೋಕ್‌ಗೆ ಟೀಕೆ ಮಾಡದೇ ಇರೋಕೆ ಅಗುತ್ತಾ? ಅಂತ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಕರ್ನೂಲ್ ಬಳಿ ಕಾರು ಅಪಘಾತ – ಪ್ರವಾಸಕ್ಕೆ ತೆರಳಿದ್ದ ತುಮಕೂರಿನ ಮೂವರು ಸಾವು

    ಇನ್ನೂ ಗ್ರೇಟರ್ ಬೆಂಗಳೂರು ಮಾಡಿ ರಿಯಲ್ ಎಸ್ಟೇಟ್ ಮಾಫಿಯಾ ಮಾಡ್ತಿದ್ದಾರೆ ಎಂಬ ವಿಪಕ್ಷ ನಾಯಕರ ಆರೋಪಕ್ಕೆ ಉತ್ತರಿಸಿ, ನಮ್ಮದು ಕಾಂಗ್ರೆಸ್ ಗ್ಯಾರಂಟಿ, ಅದ್ರೆ ಬಿಜೆಪಿಯದ್ದು ಪಕ್ಷದ ಗ್ಯಾರಂಟಿ ಅಲ್ಲ, ಮೋದಿಯ ಗ್ಯಾರಂಟಿ. ನಮ್ಮ ಗ್ಯಾರಂಟಿಯನ್ನೇ ಬಿಜೆಪಿ ಸರ್ಕಾರದಲ್ಲಿ ಅನುಕರಣೆ ಮಾಡ್ತಿದ್ದಾರೆ. ನರೇಗಾ ಟೀಕೆ ಮಾಡ್ತಿದ್ರು, ಅದನ್ನು ತೆಗೆಯೋಕೆ ಅಗಿದೆಯಾ? ಉಳುವವನೆ ಭೂಮಿಯ ಒಡೆಯ ತೆಗೆಯೋಕೆ ಆಯ್ತಾ? ಟೀಕೆ ಸಾಯ್ತವೆ ಕೆಲಸ ಉಳಿಯುತ್ತವೆ ಎಂದು ಹೇಳಿದರು.

    ತೆಲಂಗಾಣ ಸಿಎಂ ಗ್ಯಾರಂಟಿ ಹೊರೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಅವರ ರಾಜ್ಯಕ್ಕೆ ಬಿಟ್ಟ ವಿಚಾರ ಅಂತ ಜಾರಿಕೊಂಡರು. ಇದನ್ನೂ ಓದಿ: Bengaluru Rain | ನಾನು ನಿಮ್ಮಲ್ಲಿ ಒಬ್ಬ, ನಿಮ್ಮೊಂದಿಗೆ ನಿಲ್ಲುತ್ತೇನೆ: ಡಿಕೆಶಿ

  • ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ: ಪರಮೇಶ್ವರ್‌

    ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ: ಪರಮೇಶ್ವರ್‌

    ಬೆಂಗಳೂರು: ಬೆಲೆ ಏರಿಕೆಗೆ (Price Hike) ಕೇಂದ್ರ ಸರ್ಕಾರವೇ (Union Government) ಕಾರಣ ಎಂದು ಗೃಹ ಸಚಿವ ಪರಮೇಶ್ವರ್‌ (Parameshwar) ದೂರಿದ್ದಾರೆ.

    ಪೊಲೀಸ್ ಧ್ವಜ ದಿನಾಚರಣೆ (Police Flag Day) ಪ್ರಯುಕ್ತ ಇಂದು ಕೋರಮಂಗಲದ ಕೆಎಸ್‌ಆರ್‌ಪಿ (KSRP) ಆವರಣರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ ಪದಕ ನೀಡಿ ಗೌರವಿಸಲಾಯಿತು.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ್‌, ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಬೆಲೆ ಏರಿಕೆಯಾಗಿದೆ. ಗ್ಯಾರಂಟಿಗೂ (Congress Guarantee) ಬೆಲೆ ಏರಿಕೆಗೆ ಸಂಬಂಧ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡ್ತಿರೋ ಬಿಜೆಪಿಯವ್ರು ರೈತ ವಿರೋಧಿಗಳು: ಡಿಕೆಶಿ

    ರಾಜ್ಯ ಮತ್ತು ಕೇಂದ್ರದ ಸಂಬಂಧ ಸರಿಯಿಲ್ಲ. ನಾವು 20 ಸಾವಿರ ಕೋಟಿ ರೂ.ಗೂ ಹೆಚ್ಚು ತೆರಿಗೆ ಕೊಡುತ್ತೇವೆ. ಅವರು ನಮಗೆ ಬರಬೇಕಾದ ಪಾಲು ವಾಪಸ್ ಕೊಡುತ್ತಿಲ್ಲ. ಹೀಗಾಗಿ ಕೆಲ ಅನಿವಾರ್ಯ ಕಾರಣಗಳಿಂದಾಗಿ ಬೆಲೆ ಏರಿಕೆ ಆಗುತ್ತಿದೆ ಎಂದು ಸರ್ಕಾರದ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಗ್ಯಾರಂಟಿ ಸರ್ಕಾರದಿಂದ ಶಾಕ್‌ – ಡೀಸೆಲ್‌ ದರ 2 ರೂ. ಏರಿಕೆ

    ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ, ಡಿಜಿಪಿ ಅಲೋಕ್ ಮೋಹನ್ ಸೇರಿದಂತೆ ರಾಜ್ಯದ ಎಲ್ಲಾ ಹಿರಿಯ ಅಧಿಕಾರಿಗಳು ಭಾಗವಹಿಸಿದರು. ಸುಮಾರು 400 ಹೆಚ್ಚು ಅಧಿಕಾರಿಗಳಿಗೆ ಸಿಎಂ ಪದಕ ವಿತರಣೆ ಮಾಡಿ ಗೌರವಿಸಿದರು.

     

  • 6-7 ಸಾವಿರ ಕೋಟಿ ತೆರಿಗೆ ಜಾಸ್ತಿ ಮಾಡಿರೋದು ನಿಜ – ಗ್ಯಾರಂಟಿಗಳಿಗೆ ಸುಮ್ಮನೆ ಹಣ ಬರುತ್ತಾ?: ಸಿಎಂ

    6-7 ಸಾವಿರ ಕೋಟಿ ತೆರಿಗೆ ಜಾಸ್ತಿ ಮಾಡಿರೋದು ನಿಜ – ಗ್ಯಾರಂಟಿಗಳಿಗೆ ಸುಮ್ಮನೆ ಹಣ ಬರುತ್ತಾ?: ಸಿಎಂ

    – ಮುಂದಿನ ಬಾರಿ ಬಿಜೆಪಿಯನ್ನ ಧೂಳಿಪಟ ಮಾಡ್ತೀವಿ ಎಂದ ಸಿದ್ದರಾಮಯ್ಯ

    ಬೆಂಗಳೂರು: ನಾವು ಎಲ್ಲಾ ಬೆಲೆ, ತೆರಿಗೆ ಸೇರಿ 6-7 ಸಾವಿರ ಕೋಟಿ ರೂ. ಮಾತ್ರ ಹೆಚ್ಚಳ ಮಾಡಿರುವುದು ನಿಜ. ಯೋಜನೆಗಳಿಗೆ ಹಣ ಖರ್ಚು ಮಾಡಬೇಕಲ್ಲವಾ? ಸುಮ್ಮನೇ ಹಣ ಬರುತ್ತಾ? ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವಿಪಕ್ಷಗಳಿಗೆ ಪ್ರಶ್ನೆ ಮಾಡಿದರು.

    ವಿಧಾನ ಪರಿಷತ್‌ ಕಲಾಪದಲ್ಲಿಂದು ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿದ ಸಿಎಂ, ವಿಪಕ್ಷಗಳ ವಿರುದ್ಧ ಕೆರಳಿ ಕೆಂಡವಾದರು. ಇದನ್ನೂ ಓದಿ: ತಾಪಮಾನ ಹೆಚ್ಚಳದಿಂದಾಗಿ ಮುಂಜಾಗ್ರತಾ ಕ್ರಮ – ಬಿಸಿಲಿನಿಂದ ಅಸ್ವಸ್ಥಗೊಂಡವರಿಗೆ ಹೀಟ್ ಸ್ಟ್ರೋಕ್ ವಾರ್ಡ್ ಆರಂಭ

    ರೈಲ್ವೆ ಯೋಜನೆಗಳಿಗೆ ನಾವು ಜಮೀನು ಕೊಡ್ತೀವಿ. ಕೇಂದ್ರದ ಅರ್ಧದಷ್ಟು ಯೋಜನೆಗೆ ದುಡ್ಡು ನಾವೇ ಕೊಡ್ತೀವಿ. ಆದ್ರೆ ಲಾಭ ಹೋಗೋದು ಕೇಂದ್ರಕ್ಕೆ. ಫ್ಲಾಟ್‌ಫಾರ್ಮ್‌ ಟಿಕೆಟ್ ಹಣ ಕೂಡ ಕೇಂದ್ರ ಪಡೆಯುತ್ತದೆ. ನರೇಂದ್ರ ಮೋದಿ (PM Modi) ಕಾಲದಲ್ಲಿ ಬೆಲೆ ಏರಿಕೆ ಜಾಸ್ತಿ ಆಗಿದೆ. ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಮಾಡಲಿಲ್ಲ. ಆದ್ರೆ ನಾವು ಎಲ್ಲಾ ಬೆಲೆ, ತೆರಿಗೆ ಹೆಚ್ಚಳ ಮಾಡಿರೋದು 6-7 ಸಾವಿರ ಕೋಟಿ ರೂ. ಮಾತ್ರ. ನಾವು ಗ್ಯಾರಂಟಿಗೆ 60 ಸಾವಿರ ಕೋಟಿ ರೂ. ಖರ್ಚು ಮಾಡ್ತಿದ್ದೇವೆ. ನೀರಾವರಿ ಯೋಜನೆಗೆ 1 ಸಾವಿರ ಕೋಟಿ ರೂ. ಜಾಸ್ತಿ ಮಾಡಿದ್ದೇವೆ. ಯೋಜನೆಗಳಿಗೆ ಹಣ ಖರ್ಚು ಮಾಡಬೇಕು ಅಲ್ಲವಾ? ಸುಮ್ಮನೆ ಹಣ ಬರುತ್ತಾ? ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಮೋದಿ ಬಳಿ ಉದ್ಧವ್‌ ಠಾಕ್ರೆ ಕ್ಷಮೆಯಾಚಿಸಿ, ಬಿಜೆಪಿ ಜೊತೆ ಮತ್ತೆ ಮೈತ್ರಿಗೆ ಸಿದ್ಧ ಎಂದಿದ್ರು: ಏಕನಾಥ್‌ ಶಿಂಧೆ

    ಅಲ್ಲದೇ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿಲ್ಲವಾ? ಗ್ಯಾಸ್ ರೇಟ್ ಜಾಸ್ತಿ ಆಗಿಲ್ಲವಾ? ತೆರಿಗೆ ಜಾಸ್ತಿ ಹಾಕೋದು ನಿರಂತರ ಪ್ರಕ್ರಿಯೆ. ಯೋಜನೆಗಳಿಗೆ ಹಣ ಕೋಡೋಕೆ ತೆರಿಗೆ ಜಾಸ್ತಿ ಮಾಡಿದ್ದೇವೆ ಎಂದು ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿಕೊಂಡರು.

    ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯ ಪೂಜಾರ್‌, ನೀರಾವರಿ ಯೋಜನೆಗೆ ಏನೂ ಕೊಟ್ಟಿಲ್ಲ, ಚೊಂಬು ಕೊಟ್ಟಿದ್ದೀರಿ. ಉತ್ತರ ಕರ್ನಾಟಕವನ್ನ ನಾಶ ಮಾಡಿದ್ದೀರಿ ನೀವು ಎಂದು ಆಕ್ರೋಶ ಹೊರಹಾಕಿದರು. ಇದರಿಂದ ಮತ್ತಷ್ಟು ಸಿಟ್ಟಾದ ಸಿಎಂ, ಯಡಿಯೂರಪ್ಪ ಮಹದಾಯಿ ಯೋಜನೆ ಮಾಡಿಸೋದಾಗಿ ಹೇಳಿದ್ರು… ಮಾಡಿಸಿದ್ರಾ? ರಕ್ತದಲ್ಲಿ ಬರೆದುಕೊಡ್ತೀನಿ ಅಂದರು.. ಕೊಟ್ರಾ? ಅಂತ ಪ್ರಶ್ನೆ ಮಾಡಿದ್ರು. ಈ ವೇಳೆ ಬಿಜೆಪಿ- ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

    ಬಿಜೆಪಿಯನ್ನ ಧೂಳಿಪಟ ಮಾಡ್ತೀವಿ:
    ಕರ್ನಾಟಕದಲ್ಲಿ ಬಿಜೆಪಿ ಅವರು ಗೆದ್ದೇ ಇಲ್ಲ. ಕರ್ನಾಟಕದ ಜನ ಬಿಜೆಪಿಗೆ ಆಶೀರ್ವಾದ ಮಾಡೇ ಇಲ್ಲ. 1977 ವರೆಗೂ ಕಾಂಗ್ರೆಸ್ ಗೆಲ್ಲುತ್ತಿತ್ತು. ಈ ಬಾರಿ ಲೋಕಸಭೆಯಲ್ಲಿ ಕಾಂಗ್ರೆಸ್ 100 ಸ್ಥಾನ ಗೆದ್ದಿದ್ದೇವೆ. ಮುಂದಿನ ಬಾರಿ ಬಿಜೆಪಿಯನ್ನ ಧೂಳಿಪಟ ಮಾಡ್ತೀವಿ ಎಂದು ಸಿಎಂ ಹೇಳಿದರು. ಈ ವೇಳೆ ಬಿಜೆಪಿ ಸದಸ್ಯ ಎನ್‌. ರವಿಕುಮಾರ್‌ ಮುಂದಿನ ಬಾರಿಯೂ ಮೋದಿ ಪ್ರಧಾನಿ ಆಗ್ತಾರೆ ಅಂತ ಟಾಂಗ್‌ ಕೊಟ್ಟರು. ಇದನ್ನೂ ಓದಿ: ದೆಹಲಿಯಲ್ಲಿ ವೃದ್ಧದಂಪತಿಯ ಹತ್ಯೆ – ಮನೆಕೆಲಸದವರ ಸಹಕಾರದಿಂದಲೇ ಕೊಲೆ ಶಂಕೆ

    ಬಳಿಕ ಮೋದಿ ಕೀ ಗ್ಯಾರಂಟಿ ಅಂತ ಪ್ರಣಾಳಿಕೆ ಪ್ರದರ್ಶನ ಮಾಡಿದ ಸಿಎಂ, ಬಿಜೆಪಿ ಅಧಿಕಾರದಲ್ಲಿದ್ದಾಗ ಬಿಡುಗಡೆ ಮಾಡಿದ ಪ್ರಣಾಳಿಕೆ ಈಡೇರಿಕೆ ಮಾಡಿಲ್ಲ. 600 ಭರವಸೆ ಕೊಟ್ಟರು 10% ಜಾರಿ ಈಡೇರಿಸಿಲ್ಲ. ರೈತರ ಸಾಲಮನ್ನಾ ಮಾಡದೇ ಅಂಬಾನಿ, ಅದಾನಿ ಸಾಲಮನ್ನಾ ಮಾಡಿದ್ದಾರೆ ಎಂದು ಹೇಳಿದರು. ಈ ವೇಳೆ ವಿಪಕ್ಷ ಸದಸ್ಯರು ಸಿಎಂ ಸದನದ ದಾರಿ ತಪ್ಪಿಸುತ್ತಿದ್ದಾರೆ ಎಂದು ಹರಿಹಾಯ್ದರು. ಈ ವೇಳೆ ಸದನದಲ್ಲಿ ಗದ್ದಲ – ಕೋಲಾಹಲ ಉಂಟಾಯಿತು.