Tag: ಕಾಂಗ್ರೆಸ್ ಕಾರ್ಯಕರ್ತೆ

  • ಪಿಯು ವಿದ್ಯಾರ್ಥಿನಿ ಬದಲು ರಾಜ್ಯಶಾಸ್ತ್ರ ಪರೀಕ್ಷೆ ಬರೆದ ಕಾಂಗ್ರೆಸ್ ಕಾರ್ಯಕರ್ತೆ ಅರೆಸ್ಟ್

    ಪಿಯು ವಿದ್ಯಾರ್ಥಿನಿ ಬದಲು ರಾಜ್ಯಶಾಸ್ತ್ರ ಪರೀಕ್ಷೆ ಬರೆದ ಕಾಂಗ್ರೆಸ್ ಕಾರ್ಯಕರ್ತೆ ಅರೆಸ್ಟ್

    ಕಲಬುರಗಿ: ಜಿಲ್ಲೆಯ ಮಿಲಿಂದ್ ಕಾಲೇಜಿನಲ್ಲಿ (Milind College) ಪಿಯು ವಿದ್ಯಾರ್ಥಿನಿ ಬದಲಿಗೆ ಪರೀಕ್ಷೆ ಬರೆದ ಕಾಂಗ್ರೆಸ್ (Congress) ಕಾರ್ಯಕರ್ತೆ ಬಂಧನಕ್ಕೆ ಒಳಗಾಗಿರುವ ಘಟನೆ ನಡೆದಿದೆ.ಇದನ್ನೂ ಓದಿ: 6.5 ಲಕ್ಷ ಕೊಡದೇ ವಂಚಿಸಿದ ಆರೋಪ- ನವನಿರ್ದೇಶಕಿ ವಿರುದ್ಧ ದೂರು

    ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷೆ ನಡೆಯುತ್ತಿದ್ದು, ಮಾ.5ರಂದು ರಾಜ್ಯಶಾಸ್ತ್ರ ಪರೀಕ್ಷೆ ನಡೆದಿತ್ತು. ಈ ವೇಳೆ ಕಲಬುರಗಿ ನಗರದ ಖರ್ಗೆ ಕುಟಂಬದ ಒಡೆತನದ ಮಿಲಿಂದ್ ಕಾಲೇಜ್‌ನಲ್ಲಿ ಅಕ್ರಮ ನಡೆದಿದೆ. ಅರ್ಚನಾ ಎಂಬ ವಿದ್ಯಾರ್ಥಿನಿ ಬದಲಿಗೆ ಕಾನೂನು ವಿದ್ಯಾರ್ಥಿನಿಯೂ ಆಗಿರುವ ಕಾಂಗ್ರೆಸ್ ಕಾರ್ಯಕರ್ತೆ ಸಂಪೂರ್ಣಾ ಪಾಟೀಲ್ ಪರೀಕ್ಷೆ ಬರೆದಿದ್ದಾರೆ.

    ದಲಿತ ಸೇನೆ ಕಾರ್ಯಕರ್ತರು ಕಾಲೇಜಿಗೆ ತೆರಳಿ ಅಕ್ರಮವನ್ನು ಪ್ರಶ್ನಿಸಿದಾಗ ಬದಲಿ ಅಭ್ಯರ್ಥಿ ಪರೀಕ್ಷೆ ಬರೆದಿರುವುದು ಬೆಳಕಿಗೆ ಬಂದಿದೆ. ಸದ್ಯ ಮಿಲಿಂದ್ ಶಾಲೆಯ ಪ್ರಾಂಶುಪಾಲರು ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಸಂಪೂರ್ಣ ಪಾಟೀಲ್‌ಳನ್ನು ಬಂಧಿಸಿದ್ದಾರೆ.ಇದನ್ನೂ ಓದಿ:ಬೆಳಗಾವಿ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಗೆ ದಿನ ನಿಗದಿ – ಮಾ.15ಕ್ಕೆ ಎಲೆಕ್ಷನ್

     

  • ತೇಜಸ್ವಿ ಸೂರ್ಯಗೆ ಹೂ ಕೊಡಲು ಬಂದ ಕೈ ಕಾರ್ಯಕರ್ತೆ ವಶಕ್ಕೆ

    ತೇಜಸ್ವಿ ಸೂರ್ಯಗೆ ಹೂ ಕೊಡಲು ಬಂದ ಕೈ ಕಾರ್ಯಕರ್ತೆ ವಶಕ್ಕೆ

    ಬೆಂಗಳೂರು: ಸಂಸದ ತೇಜಸ್ವಿಸೂರ್ಯ ಅವರಿಗೆ ಹೂ ನೀಡಲು ಬಂದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಕಲ್ಲು ಹೊಡೆಯುವುದು ಬೇಡ ನಾವು ಉಡುಗೊರೆಯಾಗಿ ಕಲ್ಲುಗಳನ್ನು ಹಾಗೂ ಹೂ ಕೊಡುತ್ತೇವೆ ಅಂತಾ ಕಾಂಗ್ರೆಸ್ ಕಾರ್ಯಕರ್ತರು ತೇಜಸ್ವಿ ಸೂರ್ಯ ನಿವಾಸದ ಬಳಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಇದನ್ನೂ ಓದಿ: ಆರಗ ಮನೆಗೆ ನುಗ್ಗಿದ ABVP ಕಾರ್ಯಕರ್ತರಿಗೆ ಲಾಠಿ ಏಟು

    ಗಿರಿನಗರ ಸರ್ಕಲ್‍ನಿಂದ ತೇಜಸ್ವಿ ಸೂರ್ಯ ನಿವಾಸಕ್ಕೆ ರ್‍ಯಾಲಿ ನಡೆಸಲು ಪ್ಲ್ಯಾನ್ ಕೂಡ ಮಾಡಿದ್ದರು. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ ಹಿನ್ನೆಲೆ ಇಂದು ತೇಜಸ್ವಿ ಸೂರ್ಯ ನಿವಾಸ ಬಳಿ ಭದ್ರತೆ ವಹಿಸಲಾಗಿತ್ತು. ಆದರೂ ಪೊಲೀಸ್ ಸರ್ಪಗಾವಲು ನಡುವೆಯೂ ತೇಜಸ್ವಿ ಸೂರ್ಯ ನಿವಾಸದ ಮುಂದೆ ಬಂದು, ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದರು. ಆದರೆ ಪ್ರತಿಭಟನೆ ಆರಂಭಕ್ಕೂ ಮುನ್ನವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಇದೇ ವೇಳೆ ದ್ವಿಚಕ್ರವಾಹನದಲ್ಲಿ ಪ್ರೆಸ್ ಅಂತಾ ಬೋರ್ಡ್ ಹಾಕಿಕೊಂಡು ಬಂದು ಕಲ್ಲು ಹೊಡೆಯೋದು ಬೇಡ ಹೂ ಕೊಡುತ್ತೇವೆ ಅಂತಾ ಹೂ ತಂದಿದ್ದ ಕಾಂಗ್ರೆಸ್ ಕಾರ್ಯಕರ್ತೆಯನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡರು. ಇದನ್ನೂ ಓದಿ: ಬಚ್ಚನಕೇರಿ ಗ್ರಾಮದಲ್ಲಿ ಕಿತ್ತೂರು ಅರಮನೆ ನಿರ್ಮಾಣ – ಸ್ಥಳೀಯರಿಂದ ವಿರೋಧ

    ತೇಜಸ್ವಿ ಸೂರ್ಯ ಹೇಳಿದ್ದೇನು?
    ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆಯ ಬಳಿಕ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ದರೂ ರಕ್ಷಣೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಬಿಜೆಪಿ ಕಾರ್ಯಕರ್ತರು ಈಗ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ.

    ಇದೇ ವಿಚಾರವಾಗಿ ರಾಜೀನಾಮೆ ವಾಪಸ್ ಪಡೆಯುವಂತೆ ಚಿಕ್ಕಮಗಳೂರಿನ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂದೀಪ್‍ಗೆ ತೇಜಸ್ವಿ ಸೂರ್ಯ ಕರೆ ಮಾಡಿದ್ದರು. ಸರ್ಕಾರ ನಮ್ಮದೆ ಇದೆ. ಒಂದು ವೇಳೆ ಕಾಂಗ್ರೆಸ್ ಸರ್ಕಾರದಲ್ಲಿ ಹತ್ಯೆಯಾಗಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದು ಸಂದೀಪ್ ಜೊತೆ ಫೋನ್‍ನಲ್ಲಿ ತೇಜಸ್ವಿ ಸೂರ್ಯ ಮಾತನಾಡಿದ್ದರು. ಈ ಆಡಿಯೋ ವೈರಲ್ ಆಗಿತ್ತು. ಈ ಹೇಳಿಕೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ತಲ್ವಾರ್​ನಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತೆ..!

    ತಲ್ವಾರ್​ನಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತೆ..!

    ಚಿಕ್ಕೋಡಿ(ಬೆಳಗಾವಿ): ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ತಲ್ವಾರಿನಿಂದ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿ ಇದೀಗ ವಿವಾದಕ್ಕೀಡಾಗಿದ್ದಾರೆ..

    ಈ ಘಟನೆ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗ್ರಾಮ ಇಸ್ಲಾಂಪುರದಲ್ಲಿ ನಡೆದಿದೆ. ಅಮೀರಾ ದೇಸಾಯಿ ತಲ್ವಾರ್ ನಿಂದ ಕೇಕ್ ಕತ್ತರಿಸಿದ ಕಾಂಗ್ರೆಸ್ ಕಾರ್ಯಕರ್ತೆ.

    ಅಮೀರಾ ಹುಟ್ಟುಹಬ್ಬವಿದ್ದ ಕಾರಣ ಶುಕ್ರವಾರ ರಾತ್ರಿ ತಲ್ವಾರ್ ಮುಖಾಂತರ ಕೇಕ್ ಕಟ್ ಮಾಡಿ ತಮ್ಮ ಕಾರ್ಯಕರ್ತರೊಂದಿಗೆ ಬರ್ತ್ ಡೇ ಆಚರಣೆ ಮಾಡಿದ್ದಾರೆ. ಇದೀಗ ಕಾರ್ಯಕರ್ತೆಯ ಹುಟ್ಟುಹಬ್ಬ ಆಚರಣೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಯಮಕನಮರಡಿ ಫೋಲೀಸ್ ಠಾಣಾ ವ್ಯಾಪ್ಯಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv