Tag: ಕಾಂಗ್ರೆಸ್ ಅಭ್ಯರ್ಥಿ

  • ಚುನಾವಣೆ ಬೆನ್ನಲ್ಲೇ ತುಮಕೂರು ಸಿದ್ಧಗಂಗಾ ಮಠಕ್ಕೆ ಶಿವಣ್ಣ ದಂಪತಿ ಭೇಟಿ!

    ಚುನಾವಣೆ ಬೆನ್ನಲ್ಲೇ ತುಮಕೂರು ಸಿದ್ಧಗಂಗಾ ಮಠಕ್ಕೆ ಶಿವಣ್ಣ ದಂಪತಿ ಭೇಟಿ!

    – ಚುನಾವಣೆಯ ಫಲಿತಾಂಶ ಗೀತಾಳ ಪರವಾಗಿರಲಿದೆ ಎಂದ ನಟ

    ತುಮಕೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ (Geetha Shivarajkumar) ಅವರಿಂದು ಇಲ್ಲಿನ ಸಿದ್ಧಗಂಗಾ ಮಠಕ್ಕೆ (Siddaganga Mutt) ಭೇಟಿ ನೀಡಿ, ಶಿವಕುಮಾರ ಸ್ವಾಮೀಜಿ ಗದ್ದುಗೆಯ ದರ್ಶನದ ಪಡೆದರು. ಬಳಿಕ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಶಿವಮೊಗ್ಗದ (Shivamogga) ಜನ ನನ್ನ ಕೈ ಬಿಡುವುದಿಲ್ಲ ಎಂಬ ನಂಬಿಕೆಯಿದೆ. ಪ್ರಚಾರ ಕಾರ್ಯವೂ ಭರದಿಂದ ಸಾಗುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲ ವರ್ಗದ ಜನರಿಗೆ ತಲುಪಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಆಶಯ ಈಡೇರಿದೆ ಎಂದು ರಾಜ್ಯ ಸರ್ಕಾರದ ಸಾಧನೆಗಳನ್ನು ಶ್ಲಾಘಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ಗೆ ತನ್ನ ಸದಸ್ಯನ ಮಗಳನ್ನೇ ರಕ್ಷಣೆ ಮಾಡೋಕೆ ಆಗ್ಲಿಲ್ಲ: ನೇಹಾ ಹತ್ಯೆ ಖಂಡಿಸಿದ ಮೋದಿ

    ಶಿವಮೊಗ್ಗದಲ್ಲಿ ಇಂದಿಗೂ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಗಿಲ್ಲ. ಬಗರ್‌ಹುಕುಂ, ಕುಡಿಯುವ ನೀರು, ರಸ್ತೆ-ಚರಂಡಿ ಹೀಗೆ ಹಲವು ತೊಂದರೆಗಳಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಗೀತಾ ಅವರು ಗೆದ್ದರೆ ಇದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ಹೆಚ್‌.ಡಿ.ರೇವಣ್ಣ ಎ1, ಪ್ರಜ್ವಲ್‌ ರೇವಣ್ಣ ಎ2 ಆರೋಪಿ – ಮನೆ ಕೆಲಸದಾಕೆಯಿಂದ ದೂರು

    ಪತಿಯಾಗಿ ಗೀತಾಗೆ ಬೆಂಬಲ ಸೂಚಿಸುವುದು ನನ್ನ ಜವಾಬ್ದಾರಿ. ಈ ಸಲ ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚುನಾವಣೆಯ ಫಲಿತಾಂಶ ಗೀತಾಳ ಪರವಾಗಿ ಇರಲಿದೆ ಎಂಬ ನಂಬಿಕೆ ಇದೆ. ತಂದೆಯವರು ಮಠದ ಬಗ್ಗೆ ಅಪಾರ ಗೌರವ ಹೊಂದಿದ್ದರು. ಇಲ್ಲಿನ ಪರಿಸರ ನನಗೆ ಇಷ್ಟ. ಆದ್ದರಿಂದ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇವೆಂದು ತಿಳಿಸಿದರು. ಇದನ್ನೂ ಓದಿ: SC-ST ಸಮುದಾಯಗಳಿಗೆ ಸೇರಬೇಕಿದ್ದ 11,000 ಕೋಟಿ ಹಣವನ್ನ ಕಾಂಗ್ರೆಸ್ ನುಂಗಿ ನೀರು ಕುಡಿದಿದೆ: ಮೋದಿ ಕೆಂಡ

    ಈ ಸಂದರ್ಭದಲ್ಲಿ ಶಿವಮೊಗ್ಗ ಕ್ಷೇತ್ರದ ಉಸ್ತುವಾರಿ ಅನಿಲ್‌ಕುಮಾರ್‌ ತಡಕಲ್‌, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ವಿಜಯ ರಾಘವೇಂದ್ರ, ಮಠದ ಆಡಳಿತಾಧಿಕಾರಿ ನಾಗರಾಜ, ಮುಖಂಡರಾದ ರಾಧಾ ವಿಜಯ್, ದಯಾನಂದ ಇತರರು ಹಾಜರಿದ್ದರು.

  • ರಾಯಚೂರು ʻಕೈʼ ಅಭ್ಯರ್ಥಿ 4.12 ಕೋಟಿ ಆಸ್ತಿ ಒಡೆಯ, ಪತ್ನಿ 29 ಕೋಟಿ ಆಸ್ತಿಯ ಒಡತಿ!

    ರಾಯಚೂರು ʻಕೈʼ ಅಭ್ಯರ್ಥಿ 4.12 ಕೋಟಿ ಆಸ್ತಿ ಒಡೆಯ, ಪತ್ನಿ 29 ಕೋಟಿ ಆಸ್ತಿಯ ಒಡತಿ!

    – ಅಭ್ಯರ್ಥಿ ಕುಮಾರ್ ನಾಯಕ್‌ಗಿಂತ ಪತ್ನಿಯೇ ಹೆಚ್ಚು ಶ್ರೀಮಂತೆ!

    ರಾಯಚೂರು: ಇಲ್ಲಿನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ್ (G Kumar Naik) ಅವರಿಂದು ಸಾಂಕೇತಿಕವಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಗುರುವಾರ ಬೃಹತ್‌ ರ‍್ಯಾಲಿಯೊಂದಿಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.

    ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಹಾಗೂ ತಮ್ಮ ಕುಟುಂಬಸ್ಥರ ಆಸ್ತಿವಿವರ (Candidates Assets) ಘೋಷಿಸಿದ್ದು ಅಭ್ಯರ್ಥಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತರಿದ್ದಾರೆ. ಅಭ್ಯರ್ಥಿ ಜಿ.ಕುಮಾರ ನಾಯಕ್ ಒಟ್ಟು ಆಸ್ತಿ ಮೌಲ್ಯ 4,12,85,429 ರೂ. (4.12 ಕೋಟಿ ರೂ.) ಇದ್ದರೆ ಅವರ ಪತ್ನಿಯ ಹೆಸರಲ್ಲಿ ಒಟ್ಟು 29,28,43,075 ರೂ. (29. ಕೋಟಿ ರೂ.) ಮೌಲ್ಯದ ಆಸ್ತಿಯಿದೆ. ಇದನ್ನೂ ಓದಿ: ಪಾಕ್‌ನಲ್ಲಿ ನನ್ನ ಮಕ್ಕಳ ಜೀವಕ್ಕೆ ಅಪಾಯವಿದೆ.. ಅವರನ್ನು ಬಿಟ್ಟು ತವರಿಗೆ ಹೋಗಲ್ಲ: ಭಾರತದ ಮಹಿಳೆ ಅಳಲು

    ಅಭ್ಯರ್ಥಿಯ (Congress Candidate) ಒಟ್ಟು ಚರಾಸ್ತಿ ಮೌಲ್ಯ 1,72,22,929 ರೂ. ಇದ್ದರೆ, ಪತ್ನಿಯ ಒಟ್ಟು ಚರಾಸ್ತಿ ಮೌಲ್ಯ 2,57,80,575 ರೂ. ಇದೆ. 2,58,533 ರೂ ಮೌಲ್ಯದ ರಾಯಲ್ ಎನ್‌ಫೀಲ್ಡ್‌ ಬೈಕ್ಸ್‌ ಹೊಂದಿರುವ ಅಭ್ಯರ್ಥಿ ಸ್ವಂತ ಕಾರು ಹೊಂದಿಲ್ಲ. ಇದನ್ನೂ ಓದಿ: ಸಿಎಎ ರದ್ದು, ಎಲ್ಲಾ ವಿದ್ಯಾರ್ಥಿಗಳಿಗೆ ಮಾಸಿಕ ವಿದ್ಯಾರ್ಥಿ ವೇತನ, 10 ಉಚಿತ ಎಲ್‌ಪಿಜಿ ಸಿಲಿಂಡರ್‌ – ಟಿಎಂಸಿ ಪ್ರಣಾಳಿಕೆಯಲ್ಲಿ ಘೋಷಣೆ

    ಅಭ್ಯರ್ಥಿಯ ಬಳಿ 14,07,400 ರೂ. ಮೌಲ್ಯದ 207 ಗ್ರಾಂ ಚಿನ್ನ ಇದೆ. ಅವರ ಪತ್ನಿ ಬಳಿ 49,30,000 ರೂ. ಮೌಲ್ಯದ 725 ಗ್ರಾಂ ಚಿನ್ನ ಇದೆ. ಇನ್ನೂ ಅಭ್ಯರ್ಥಿಯ ಒಟ್ಟು ಸ್ಥಿರಾಸ್ಥಿ ಮೌಲ್ಯ 2,40,62,500 ರೂ. ಇದ್ರೆ ಅವರ ಪತ್ನಿಯ ಒಟ್ಟು ಸ್ಥಿರಾಸ್ತಿ ಮೌಲ್ಯ 26,70,62,500 ರೂ.ಇದೆ. ಅಭ್ಯರ್ಥಿ ಹೆಸರಲ್ಲಿ ಯಾವುದೇ ಸಾಲ ಇಲ್ಲಾ.‌ ಪತ್ನಿ ಹೆಸರಲ್ಲಿ 5,04,02,455 ರೂ. ಸಾಲವಿದೆ ಎಂದು ಘೋಷಿಸಿಕೊಂಡಿದ್ದಾರೆ.

  • ಬಾಡೂಟ ವಶಕ್ಕೆ ಪಡೆದ FST ಟೀಂ- ರಸ್ತೆಬದಿ ಚೆಲ್ಲಿದ ಊಟವನ್ನೇ ತಿಂದ ಕೆಲವರು!

    ಬಾಡೂಟ ವಶಕ್ಕೆ ಪಡೆದ FST ಟೀಂ- ರಸ್ತೆಬದಿ ಚೆಲ್ಲಿದ ಊಟವನ್ನೇ ತಿಂದ ಕೆಲವರು!

    ಹಾಸನ: ಕಾಂಗ್ರೆಸ್ ಅಭ್ಯರ್ಥಿ ಪ್ರಚಾರದ ವೇಳೆ ಬಾಡೂಟ ಆಯೋಜನೆ ಮಾಡಿದ್ದು, ಫ್ಲೈಯಿಂಗ್ ಸ್ಕ್ವಾಡ್ ತಂಡ ದಾಳಿ ನಡೆಸಿದೆ. ದಾಳಿ ಬಳಿಕ ತಂಡವು ಬಾಡೂಟವನ್ನು ವಶಕ್ಕೆ ಪಡೆದು ನಾಶ ಮಾಡಿದೆ.

    ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎಚ್.ಡಿ.ರೇವಣ್ಣ ಅವರ ಕುಮ್ಮಕ್ಕಿನಿಂದ ದಾಳಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಏ.16ರಿಂದ ಮಂಡ್ಯದಲ್ಲಿ ಹೆಚ್‌ಡಿಕೆ ಪ್ರಚಾರ – ʻಕೈʼ ಕಟ್ಟಿಹಾಕಲು ದಳಪತಿ ಪ್ಲ್ಯಾನ್‌ ಏನು?

    ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರು ಕೋಡಿಹಳ್ಳಿ ಗ್ರಾಮಕ್ಕೆ ಚುನಾವಣೆ ಪ್ರಚಾರಕ್ಕೆ ಆಗಮಿಸುವವರಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಪ್ರಚಾರ ಸಭೆಗೆ ಬರುವವರಿಗೆ ಬಾಡೂಟ ವ್ಯವಸ್ಥೆ ಮಾಡಿದ್ದರು. ಆದರೆ ಈ ವಿಚಾರ ತಿಳಿದು ಎಫ್‍ಎಸ್‍ಟಿ ತಂಡ ಗ್ರಾಮಕ್ಕೆ ಭೇಟಿ ನೀಡಿದೆ. ಅಲ್ಲದೇ ಪರಿಶೀಲಿಸಿದಾಗ ಬಾಡೂಟ ವ್ಯವಸ್ಥೆ ಮಾಡಿರುವುದು ಬೆಳಕಿಗೆ ಬಂದಿದೆ.

    ನೀತಿ ಸಂಹಿತೆ ಉಲ್ಲಂಘನೆ ಹಿನ್ನಲೆಯಲ್ಲಿ ಎಫ್‍ಎಸ್‍ಟಿ ತಂಡವು ನಾನ್‍ವೆಜ್ ಊಟವನ್ನು ವಶಕ್ಕೆ ಪಡೆದಿದೆ. ನಂತರ ರಸ್ತೆಗೆ ಬದಿಗೆ ಸುರಿದು ನಾಶ ಮಾಡಿ ಬಳಿಕ ಪೊಲೀಸ್ ಠಾಣೆಗೆ ತಂಡ ದೂರು ನೀಡಿದೆ. ಬಾಡೂಟ ಆಯೋಜನೆ ಸಂಬಂಧ ಗ್ರಾಮದ ಓರ್ವನ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹುಟ್ಟುಹಬ್ಬದ ಅಂಗವಾಗಿ ನಾನ್‍ವೆಜ್ ಊಟ ಮಾಡಿಸಲಾಗಿತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದು, ಇದೀಗ ವೀಡಿಯೋ ಮಾಡಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಕೆಲವರು ರಸ್ತೆಗೆ ಚೆಲ್ಲಿರುವ ಊಟವನ್ನೇ ತಿಂದಿದ್ದಾರೆ.

  • ಕೆಲಸ ಮಾಡುವವರಿಗೆ ಮಾತ್ರ ಮತ ಹಾಕಿ- ಕೈ ಅಭ್ಯರ್ಥಿಯಿಂದ ವಿಭಿನ್ನ ಪ್ರಚಾರ

    ಕೆಲಸ ಮಾಡುವವರಿಗೆ ಮಾತ್ರ ಮತ ಹಾಕಿ- ಕೈ ಅಭ್ಯರ್ಥಿಯಿಂದ ವಿಭಿನ್ನ ಪ್ರಚಾರ

    ದಾವಣಗೆರೆ: ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಅಭ್ಯರ್ಥಿಗಳು ತಮ್ಮದೇ ರೀತಿಯಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಅಂತೆಯೇ ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ವಿಭಿನ್ನವಾಗಿ ಚುನಾವಣಾ ಪ್ರಚಾರವನ್ನು ಮಾಡಿ ಗಮನಸೆಳೆದಿದ್ದಾರೆ.

    ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ (Congress Candidate Prabha Mallikarjun) ಅವರು ವಿಶೇಷವಾಗಿ ಚುನಾವಣಾ ಪ್ರಚಾರ ಮಾಡಿ ಗಮನಸೆಳೆದವರಾಗಿದ್ದಾರೆ. ಇವರು ಇಂದು ನಗರ ಸಾರಿಗೆ ಬಸ್ ನಲ್ಲಿ ಹೋಗಿ ಪ್ರಚಾರ ಮಾಡಿದ್ದಾರೆ. ಸದ್ಯ ಈ ರೀತಿ ವಿನೂತನವಾಗಿ ಚುನಾವಣಾ ಪ್ರಚಾರ ಮಾಡಿರುವ ಪ್ರಭಾ ಅವರ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ನಗರ ಸಾರಿಗೆ ಬಸ್ಸಿನಲ್ಲಿ ಆಧಾರ್ ಕಾರ್ಡ್ (Adhar Card) ತೋರಿಸಿ ಜನರ ಜೊತೆ ಪ್ರಯಾಣ ಮಾಡಿ, ಶಕ್ತಿ ಯೋಜನೆ ಬಗ್ಗೆ ಕೂಡ ಪ್ರಚಾರ ನಡೆಸಿರುವ ಪ್ರಭಾ ಅವರು ಕೆಲಸ ಮಾಡುವವರಿಗೆ ಮಾತ್ರ ಮತ ಹಾಕಿ. ಈ ಬಾರಿ ಕಾಂಗ್ರೆಸ್ ಗೆಲ್ಲಿಸಿ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಹೇಳಿದ್ದಾರೆ.

    ಚುನಾವಣಾ ಪ್ರಚಾರದ ವೇಳೆ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದರು. ಇದನ್ನೂ ಓದಿ: ಸಲೂನ್‌ನಲ್ಲಿ ಜನರಿಗೆ ಕ್ಷೌರ ಮಾಡಿ ಮತಯಾಚನೆ- ಗಮನ ಸೆಳೆದ ಅಭ್ಯರ್ಥಿಯ ಚುನಾವಣಾ ಪ್ರಚಾರ

  • ಕಾಂಗ್ರೆಸ್ ಅಭ್ಯರ್ಥಿಗೆ ಎಸ್‌ಟಿಎಸ್ ಬಹಿರಂಗ ಬೆಂಬಲ ಘೋಷಣೆ

    ಕಾಂಗ್ರೆಸ್ ಅಭ್ಯರ್ಥಿಗೆ ಎಸ್‌ಟಿಎಸ್ ಬಹಿರಂಗ ಬೆಂಬಲ ಘೋಷಣೆ

    ಬೆಂಗಳೂರು: ಯಶವಂತಪುರ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಬಿಜೆಪಿಗೆ ಮತ್ತೊಂದು ಶಾಕ್ ನೀಡಿದ್ದಾರೆ.

    ಬೆಂಗಳೂರು ಉತ್ತರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಎಸ್.ಟಿ ಸೋಮಶೇಖರ್ (ST Somashekhar) ಬಹಿರಂಗವಾಗಿ ಬೆಂಬಲ ಘೋಷಿಸಿದ್ದಾರೆ. ರಾಜೀವ್ ಗೌಡ ಪರ ಮನೆಮನೆ ಹೋಗಿ ಮತ ಕೇಳೋದಾಗಿ ಘೋಷಿಸಿದ್ದಾರೆ. ಯಶವಂತಪುರ ಕ್ಷೇತ್ರದಲ್ಲಿ ಬೆಂಬಲಿಗರ ಸಭೆ ನಡೆಸಿದ ಶಾಸಕ ಎಸ್. ಟಿ ಸೋಮಶೇಖರ್, ಈ ಘೋಷಣೆ ಮಾಡಿದ್ದಾರೆ.

    ಸಭೆ ಬಳಿಕ ಮಾತಾಡಿದ ಎಸ್ ಟಿ ಎಸ್‌, ಬಿಜೆಪಿಯಿಂದ (BJP) ಲೋಕಸಭೆ ಅಭ್ಯರ್ಥಿ ಘೋಷಣೆಯಾದರೂ, ಇದುವರೆಗೂ ಯಾರೊಬ್ಬರೂ ನನ್ನನ್ನ ಬೆಂಬಲ ಕೊಡಿ ಎಂದು ಕೇಳಿಲ್ಲ. ನನ್ನ ಕ್ಷೇತ್ರದಲ್ಲಿ 7-8 ಬಾರಿ ಪ್ರಚಾರ ಮಾಡಿದ್ದಾರೆ. ಆದರೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಯಾರು ನನ್ನನ್ನ ಸಂಪರ್ಕ ಮಾಡದೆ ಇದ್ದದ್ದಕ್ಕೆ ಸಭೆ ಕರೆದಿದ್ದೇನೆ. ಇಷ್ಟೆಲ್ಲಾ ಆದ ಮೇಲೆ ಸುಮ್ಮನೆ ಇದ್ದರೆ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತೆ.‌ ನನ್ನ ಕ್ಷೇತ್ರಕ್ಕೆ ಯಾರು ಸಹಾಯ ಮಾಡುತ್ತಾರೋ ಅವರಿಗೆ ಬೆಂಬಲ ನೀಡುತ್ತೇನೆ.‌ ಅವರ ಕೈಲಿ ಏನ್ ಮಾಡೋಕಾಗುತ್ತೋ ಮಾಡ್ಲಿ ಎಂದು ಸವಾಲು ಹಾಕಿದ್ರು. ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ – ಶ್ರೀನಿವಾಸ ಪೂಜಾರಿಗೆ ಕೋರ್ಟ್‌ ಸಮನ್ಸ್‌

    ರಾಜ್ಯ ನಾಯಕರು ಮಾತ್ರವಲ್ಲ, ಕೇಂದ್ರ ನಾಯಕರು ನನ್ನ ಸಂಪರ್ಕಿಸಿಲ್ಲ. ಮೊನ್ನೆ ಅಮಿತ್ ಶಾ ಬಂದ್ರೂ ಕೂಡ ನನಗೆ ಆಹ್ವಾನ ನೀಡಿಲ್ಲ. ನೆನ್ನೆವರೆಗೂ ಕಾದಿದ್ದೆ, ಯಾರೂ ಪ್ರಚಾರಕ್ಕೆ ಕರೆದಿಲ್ಲ.‌ ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದೇನೆ ಎಂದು ಸೋಮಶೇಖರ್ ಸ್ಪಷ್ಟನೆ ನೀಡಿದರು.

    ಇದೇ ವೇಳೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ (Shobha Karandlaje) ವಿರುದ್ಧ ಕಿಡಿಕಾರಿದ ಎಸ್‌ಟಿಎಸ್‌, ಚಿಕ್ಕಮಂಗಳೂರಿಂದ ಗೋ ಬ್ಯಾಕ್ ಎಂದು ಹೊರ ಹಾಕಿದವರನ್ನು ತಂದು ಚುನಾವಣೆಗೆ ನಿಲ್ಲಿಸಿದ್ದಾರೆ. ಅಂತಹವರನ್ನ ಬೆಂಗಳೂರಿನವರು ಸ್ವಾಗತಿಸಬೇಕಾ ಎಂದು ಪ್ರಶ್ನಿಸಿದರು.

  • Congress 1st List: ಮಾರ್ಚ್‌ 11ರ ಬಳಿಕ ಮತ್ತಷ್ಟು ಅಭ್ಯರ್ಥಿಗಳ ಹೆಸರು ಫೈನಲ್‌ – ಡಿಕೆಶಿ

    Congress 1st List: ಮಾರ್ಚ್‌ 11ರ ಬಳಿಕ ಮತ್ತಷ್ಟು ಅಭ್ಯರ್ಥಿಗಳ ಹೆಸರು ಫೈನಲ್‌ – ಡಿಕೆಶಿ

    ಬೆಂಗಳೂರು: ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಇಂದಿನ ಪಟ್ಟಿಯಲ್ಲಿ (Congress 1st List) ಇನ್ನಷ್ಟು ಹೆಸರು ಪ್ರಕಟವಾಗಬೇಕಿತ್ತು. ಮಾರ್ಚ್‌ 11ರಂದು ಸ್ಕ್ರೀನಿಂಗ್ ಕಮಿಟಿ ಸಭೆ ನಂತರ ಆ ಹೆಸರುಗಳು ಅಂತಿಮವಾಗಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಸ್ಥಳೀಯ ಶಾಸಕರು, ಮುಖಂಡರ ಜೊತೆಗೆ ಚರ್ಚೆ ಮಾಡಿದಾಗ ಅವರು ಯಾರ ಹೆಸರನ್ನ ಪ್ರಸ್ತಾಪ ಮಾಡಿದವರು ಹಾಗೂ ನಮ್ಮ ಸಮೀಕ್ಷೆಗಳ ಆಧಾರದ ಮೇಲೆ ಅಭ್ಯರ್ಥಿಯನ್ನ ಆಯ್ಕೆ ಮಾಡಿದ್ದೇವೆ. ಮಾರ್ಚ್ 11ರಂದು ನಡೆಯಲಿರುವ ಸಭೆ ನಂತರ ಮತ್ತಷ್ಟು ಕ್ಷೇತ್ರಗಳ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: Congress 1st Lok Sabha List: ಶಿವಮೊಗ್ಗದಿಂದ ದೊಡ್ಮನೆ ಸೊಸೆ ಕಣಕ್ಕೆ!

    ನಾನು ಎಷ್ಟು ಪಟ್ಟಿ ತೆಗೆದುಕೊಂಡು ಹೋಗಿದ್ದೆ ಎಂಬುದು ಮುಖ್ಯವಲ್ಲ. ಇದು ನನ್ನ ಪಕ್ಷ ಅಲ್ಲ. ನಮ್ಮ ಹೈಕಮಾಂಡ್ ನಾಯಕರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಸೋನಿಯಾ ಗಾಂಧಿ, ಕೆ.ಸಿ ವೇಣುಗೋಪಾಲ್, ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕರು ಚರ್ಚೆ ಮಾಡುತ್ತಾರೆ. ನಾವು ಕೇವಲ ಅಭ್ಯರ್ಥಿಗಳ ಹೆಸರನ್ನು ಪ್ರಸ್ತಾಪ ಮಾಡುತ್ತೇವೆ ಅಷ್ಟೇ. ನಮ್ಮ ಪಕ್ಷದ CEC ಸಮಿತಿ ಸದಸ್ಯರು ಅವರದ್ದೇ ಮೂಲಗಳಿಂದ ಮಾಹಿತಿ ಪಡೆದುಕೊಂಡಿರುತ್ತಾರೆ. ಇವರೆಲ್ಲ ಸೇರಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಈಗ ಪ್ರಕಟವಾಗಿರುವ 7 ಕ್ಷೇತ್ರಗಳ ಪೈಕಿ ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: Loksabha Elections 2024- ಕಾಂಗ್ರೆಸ್‌ನಿಂದ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

    ಫಸ್ಟ್‌ ಲಿಸ್ಟ್‌ನಲ್ಲಿ ರಾಜ್ಯದಿಂದ ಯಾರಿಗೆ ಟಿಕೆಟ್‌?
    ವಿಜಯಪುರ (SC) – ಹೆಚ್.ಆರ್.ಅಲಗೂರು (ರಾಜು)
    ಹಾವೇರಿ – ಆನಂದಸ್ವಾಮಿ ಗಡ್ಡದೇವರಮಠ
    ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್
    ಹಾಸನ – ಎಂ. ಶ್ರೇಯಸ್ ಪಟೇಲ್
    ತುಮಕೂರು – ಎಸ್.ಪಿ ಮುದ್ದಹನುಮೇಗೌಡ
    ಮಂಡ್ಯ – ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
    ಬೆಂಗಳೂರು ಗ್ರಾಮಾಂತರ – ಡಿಕೆ ಸುರೇಶ್

  • ಚುನಾವಣಾ ಪ್ರಚಾರದ ವೇಳೆ ನಮಾಜ್ ಕೂಗು ಕೇಳಿ ಭಾಷಣ ನಿಲ್ಲಿಸಿದ ರಾಹುಲ್ ಗಾಂಧಿ

    ಚುನಾವಣಾ ಪ್ರಚಾರದ ವೇಳೆ ನಮಾಜ್ ಕೂಗು ಕೇಳಿ ಭಾಷಣ ನಿಲ್ಲಿಸಿದ ರಾಹುಲ್ ಗಾಂಧಿ

    ತುಮಕೂರು: ಜಿಲ್ಲೆಯ ತುರುವೆರೆಗೆ ಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ (Congress Candidate) ಬೆಮೆಲ್ ಕಾಂತರಾಜು ಪರ ರಾಹುಲ್ ಗಾಂಧಿ (Rahul Gandhi) ಅಬ್ಬರದ ಪ್ರಚಾರ ನಡೆಸಿದರು. ಬಳಿಕ ಇಲ್ಲಿನ ಗುರುಭವನ ಮೈದಾನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದರು.

    ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದ ವೇಳೆ ಸಮೀಪದಲ್ಲೇ ಇದ್ದ ಮಸೀದಿಯಲ್ಲಿ ನಮಾಜ್ (Namazz) ಮಾಡುತ್ತಿದ್ದರು. ಈ ವೇಳೆ ನಮಾಜ್‌ ಕೂಗು ಕೇಳಿಬರುತ್ತಿದ್ದಂತೆ ತಮ್ಮ ಭಾಷಣಕ್ಕೆ ಬ್ರೇಕ್ ಹಾಕಿದ್ದ ರಾಹುಲ್ ನಮಾಜ್ ಮುಗಿದ ಬಳಿಕ ಭಾಷಣ ಆರಂಭಿಸಿದರು. ಇದನ್ನೂ ಓದಿ: ಹಾಲಿ ಸಚಿವರ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ತ್ರಿಕೋನ ಪೈಪೋಟಿ

    ಕಳೆದ ಬಾರಿ ನೀವು ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಲಿಲ್ಲ. ಆದ್ರೆ ಅವರು ಶಾಸಕರನ್ನ ಖರೀದಿ ಮಾಡಿ ಅಧಿಕಾರಕ್ಕೆ ಬಂದರು, ಈ ಮೂಲಕ ಲೋಕ ತಂತ್ರವನ್ನೇ ಹಾಳು ಮಾಡಿದರು. ಕಳೆದ 3 ವರ್ಷಗಳಲ್ಲಿ ಬಿಜೆಪಿ ಭ್ರಷ್ಟಾಚಾರ ಮಾಡಿದೆ. ಸಣ್ಣ ಸಣ್ಣ ಕೆಲಸಕ್ಕೂ 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಜನರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯಕ್ಕೆ ಹಣ ನೀಡುವ ಬದಲು ನಿಮ್ಮ ಜೇಬಿಗೆ ಕತ್ತರಿ ಹಾಕಿದ್ದಾರೆ. ಇದು ಪ್ರಧಾನ ಮಂತ್ರಿಗೂ ಗೊತ್ತು ಎಂದು ಕುಟುಕಿದರು. ಇದನ್ನೂ ಓದಿ: ಪ್ರಚಾರದ ನೆಪದಲ್ಲಿ ಮಹಿಳೆಯರನ್ನ ಮಂಚಕ್ಕೆ ಕರೆದ ಆರೋಪ – JDS ಅಭ್ಯರ್ಥಿ ವಿರುದ್ಧ ಕ್ರಮಕ್ಕೆ ಆಗ್ರಹ

    ಬಿಜೆಪಿ ಶಾಸಕರೊಬ್ಬರೇ `ಈಗಿನ ಸಿಎಂ 2 ಸಾವಿರ ಕೋಟಿ ಕೊಟ್ಟು ಸಿಎಂ ಆಗಿದ್ದಾರೆ’ ಅಂತಾ ಸಾರ್ವಜನಿಕವಾಗಿ ಹೇಳಿದ್ದಾರೆ. ಕರ್ನಾಟಕದ ಜನರ ಮತ ಕೇಳಲು ಬರುವ ನೀವು, ಭ್ರಷ್ಟಚಾರ ತಡೆಯಲು ನೀವು ಏನು ಕ್ರಮ ಕೈಗೊಂಡಿದ್ದೀರಾ ಎಂದು ಇಲ್ಲಿನ ಜನಕ್ಕೆ ಹೇಳಿ, ಕರ್ನಾಟಕದ ಜನತೆ ಕಟ್ಟಿದ ಟ್ಯಾಕ್ಸ್ ಹಣವನ್ನು ವಾಪಸ್ ಕೊಡಲಿಲ್ಲ ಅನ್ನೋದನ್ನು ಹೇಳಿ.. ಗೋವಾ – ಕರ್ನಾಟಕ ನಡುವಿನ ನೀರಿನ ಸಂಘರ್ಷಕ್ಕೆ ಏನು ಮಾಡಿದ್ರಿ ಅಂತಾ ಹೇಳಿ.. ರಾಜ್ಯದಲ್ಲಿ ಕಳೆದ 3 ವರ್ಷ ನಿಮ್ಮ ಸರ್ಕಾರ ಏನು ಮಾಡಿದೆ ಅಂತ ಹೇಳಿ… ಏಕೆಂದರೆ ಚುನಾವಣೆ ನಡೆಯುತ್ತಿರುವುದು ನಿಮಗೋಸ್ಕರ ಅಲ್ಲ, ಕರ್ನಾಟಕದ ಭವಿಷ್ಯಕ್ಕಾಗಿ ಎಂದು ಹೇಳಿದ್ದಾರೆ.

  • ಸನ್ ಸ್ಟ್ರೋಕ್ – ಪ್ರಚಾರಕ್ಕೆ ತೆರಳುವಾಗ ದಿಢೀರನೆ ಕುಸಿದು ಬಿದ್ದ ಸಿದ್ದರಾಮಯ್ಯ

    ಸನ್ ಸ್ಟ್ರೋಕ್ – ಪ್ರಚಾರಕ್ಕೆ ತೆರಳುವಾಗ ದಿಢೀರನೆ ಕುಸಿದು ಬಿದ್ದ ಸಿದ್ದರಾಮಯ್ಯ

    ಬಳ್ಳಾರಿ: ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಶನಿವಾರ ಹೆಲಿಕಾಪ್ಟರ್ ಮೂಲಕ ಕೂಡ್ಲಿಗಿಗೆ ಆಗಮಿಸಿದ ಸಿದ್ದರಾಮಯ್ಯ (Siddaramaiah) ಕಾರು ಹತ್ತುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ.

    ಕುಡ್ಲಿಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಎನ್.ಟಿ ಶ್ರೀನಿವಾಸ್ ಪರವಾಗಿ ಸಿದ್ದರಾಮಯ್ಯ ಪ್ರಚಾರಕ್ಕೆ ಆಗಮಿಸಿದ್ದರು. ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದ ಅವರು, ಬಳಿಕ ಮೊಬೈಲ್‌ನಲ್ಲಿ ಬ್ಯೂಸಿಯಾಗಿದ್ದರು. ಕೆಲ ಕ್ಷಣಗಳಲ್ಲೇ ಕಾರು ಹತ್ತುತ್ತಿದ್ದಂತೆ ಕಾರಿನ ಬಾಗಿಲ ಬಳಿ ಕುಸಿದಿದ್ದಾರೆ. ಇದನ್ನೂ ಓದಿ: 2 ವರ್ಷ 10Kg ಅಕ್ಕಿ ಕೊಟ್ರು, 40 ಲಕ್ಷ ಮನೆಗೆ ನೀರು ಕೊಟ್ರು, ರೈತರಿಗೆ ನೆರವು ಕೊಟ್ರು ಮೋದಿ – ಬೊಮ್ಮಾಯಿ ಗುಣಗಾನ

    ಸಿದ್ದರಾಮಯ್ಯ ಅವರು ಕುಸಿದು ಬೀಳುತ್ತಿದ್ದಂತೆ ಹಿಡಿದುಕೊಂಡ ವೈದ್ಯರು, ಬಳಿಕ ಕಾರಿನೊಳಗೆ ಕೂರಿಸಿ ಗ್ಲೂಕೋಸ್ ನೀಡಿದರು. ಗ್ಲೂಕೋಸ್ ಕುಡಿದ ಬಳಿಕ ಚೇತರಿಸಿಕೊಂಡ ಸಿದ್ದರಾಮಯ್ಯ ಜನರತ್ತ ಕೈ ಬೀಸಿ ಕಾರ್ಯಕ್ರಮಕ್ಕೆ ತೆರಳಲು ಸಿದ್ಧರಾದರು. ಬಳಿಕ ಅಭ್ಯರ್ಥಿ ಎನ್.ಟಿ ಶ್ರೀನಿವಾಸ್ ಮನೆಗೆ ತೆರಳಿ ಶುಭ ಹಾರೈಸಿದರು. ಇದನ್ನೂ ಓದಿ: 2 ಸಾವಿರ ರೂ. ಹಣದಾಸೆಗೆ ಬಾಂಗ್ಲಾದಿಂದ ಭಾರತಕ್ಕೆ ಅಕ್ರಮ ಚಿನ್ನ ಸಾಗಾಟ – ಮಹಿಳೆ ಅರೆಸ್ಟ್

    ಇದೇ ತಮ್ಮ ಕೊನೆಯ ಚುನಾವಣೆ ಎಂದು ಘೋಷಿಸಿರುವ ಸಿದ್ದರಾಮಯ್ಯ ಅವರು ಕಳೆದ ಕೆಲವು ದಿನಗಳಿಂದ ಚುನಾವಣಾ ಪ್ರಚಾರದಲ್ಲಿ ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದಾರೆ. ವರುಣಾ ಕ್ಷೇತ್ರದಲ್ಲಿ ಎರಡು ದಿನ ಮಾತ್ರ ಪ್ರಚಾರ ಕೈಗೊಳ್ಳುವುದಾಗಿ ಹೇಳಿದ್ದು, ಉಳಿದ ಸಮಯದಲ್ಲಿ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ.

  • ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಎಡವಟ್ಟು

    ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಎಡವಟ್ಟು

    ಯಾದಗಿರಿ: ಚುನಾವಣಾ ಪ್ರಚಾರದ (Election Campaign) ವೇಳೆ ಜೆಡಿಎಸ್ ಅಭ್ಯರ್ಥಿ (JDS Candidate) ಟೀಕಿಸೋ ಭರದಲ್ಲಿ ಹಣ-ಹೆಂಡ ಸ್ವೀಕರಿಸುವಂತೆ ಮತದಾರರಿಗೆ ಕಾಂಗ್ರೆಸ್ ಅಭ್ಯರ್ಥಿ (Congress Candidate) ಕರೆ ನೀಡಿ ಎಡವಟ್ಟು ಮಾಡಿಕೊಂಡಿರೋ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

    ಯಾದಗಿರಿಯ ಗುರುಮಠಕಲ್ ವಿಧಾನಸಭಾ ಕ್ಷೇತ್ರ (Gurumitkal Constituency) ದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ (BabuRao chinchanasur) ಎಡವಟ್ಟು ಮಾಡಿಕೊಂಡಿದ್ದು, ಜನರಿಗೆ ಹಣದ ಜೊತೆಗೆ ಹೆಂಡ ಸ್ವೀಕರಿಸುವಂತೆ ಪ್ರಚೋದನೆ ನೀಡಿದ್ದಾರೆ. ಇದನ್ನೂ ಓದಿ: ದೇಶಕ್ಕೆ ದೇವೇಗೌಡರು, ರಾಜ್ಯಕ್ಕೆ ಕುಮಾರಣ್ಣ, ಹಾಸನಕ್ಕೆ ರೇವಣ್ಣ; ಎ.ಮಂಜು – ಭವಾನಿ ಜುಗಲ್ ಬಂದಿ

    ಗುರುಮಠಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಮ್ಮನಳ್ಳಿ ಗ್ರಾಮದಲ್ಲಿ ಪ್ರಚಾರಕ್ಕೆ ಹೋಗಿದ್ದ ಬಾಬುರಾವ್ ಚಿಂಚನಸೂರ್ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರು (Sharana Gowda Kandakuru) ಟಿಕಿಸೋ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಪಾಪದ ದುಡ್ಡು ಅವರ ಬಳಿ ತುಂಬಿ ತುಳುಕುತ್ತಿದೆ. ತಾಯಂದಿರೇ- ತಂಗಿಯಂದಿರೇ ಅವರ ಬಳಿ ಇರೋ ಪಾಪದ ದುಡ್ಡು ತಿನ್ನಿರಿ. ಒಲ್ಲೆ ಅನ್ನಬ್ಯಾಡ್ರಿ, ರೊಕ್ಕ ಹರೀತಿದೆ, ತುಂಬಿ ತುಳುಕಿದೆ. ಕುಡಿರಿ, ತಿನ್ನಿರಿ ಸಂತೋಷದಾಗ ಡ್ಯಾನ್ಸ್ ಮಾಡ್ರಿ. ಬಂದ ದುಡ್ಡನ್ನ ಜಾಡಿಸಬ್ಯಾಡ್ರಿ, ಲಕ್ಷಗಟ್ಟಲೇ ದುಡ್ಡು ತಿನ್ನಿರಿ. ಆದರೆ ವೋಟು ಮಾತ್ರ ನನಗೆ ಹಾಕ್ರಿ ಎಂದು ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.

    ತಂದೆ ಎಮ್‍ಎಲ್‍ಎ ಆಗಿದ್ದಕ್ಕೆ ಈ ರೀತಿ ಆಗಿದೆ. ಇನ್ನೂ ಶರಣಗೌಡ ಎಮ್‍ಎಲ್‍ಎ ಆದರೆ ಎಲ್ಲಾ ಖಲ್ಲಾಸ್ ಎಂದು ಇದೇ ವೇಳೆ ಟೀಕಿಸಿದ್ದಾರೆ.

  • ಕೊರೊನಾ ಪಾಸಿಟಿವ್ ದೃಢಪಟ್ಟಿದ್ದ ಕಾಂಗ್ರೆಸ್ ಅಭ್ಯರ್ಥಿ ಸಾವು

    ಕೊರೊನಾ ಪಾಸಿಟಿವ್ ದೃಢಪಟ್ಟಿದ್ದ ಕಾಂಗ್ರೆಸ್ ಅಭ್ಯರ್ಥಿ ಸಾವು

    ಕೋಲ್ಕತ್ತಾ: ಕೊರೊನಾ ಪಾಸಿಟಿವ್ ದೃಢಪಟ್ಟಿದ್ದ ಕಾಂಗ್ರೆಸ್ ಅಭ್ಯರ್ಥಿ ಮೃತಪಟ್ಟಿದ್ದಾರೆ.

    ಮೃತ ದುರ್ದೈವಿಯನ್ನು ರೆಜೌಲ್ ಹಕ್ ಎಂದು ಗುರುತಿಸಲಾಗಿದೆ. ಕೊರೊನಾ ದೃಢಪಟ್ಟ ಬಳಿಕ ಇವರು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

    ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಶಂಶೇರ್ ಗಂಜ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಏಪ್ರಿಲ್ 26ಕ್ಕೆ ಚುನಾವಣೆ ನಿಗದಿಯಾಗಿತ್ತು. ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಹಕ್ ಗೆ ಕಲೆ ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸಿದೆ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಹಕ್ ಇಹಲೋಕ ತ್ಯಜಿಸಿದರು.

    ಈ ಸಂಬಂಧ ಬೆಂಗಾಳ್ ಪ್ರದೇಶ್ ಕಾಂಗ್ರೆಸ್ ಸೆಕ್ರೆಟರಿ ರೋಹನ್ ಮಿತ್ರಾ ಟ್ವೀಟ್ ಮಾಡಿ, ಮುರ್ಷಿದಾಬಾದ್ ಜಿಲ್ಲೆಯಲ್ಲಿ ಶಂಶೇರ್ ಗಂಜ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರೆಜೌಲ್ ಹಕ್ ರಾತ್ರಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ ನಾವು ವಾಸ್ತವವನ್ನು ಎದುರಿಸುತ್ತಿದ್ದೇವೆ. ಮುಂದಿನ ವರ್ಷ ಬಂಗಾಳಿ ಕ್ಯಾಲೆಂಡರ್ ನೋಡಲು ಜೀವಂತವಾಗಿರಿ ಎಂದು ಬರೆದುಕೊಂಡಿದ್ದಾರೆ.