Tag: ಕಾಂಗ್ರೆಸ್ ಅಪ್ಲಿಕೇಶನ್

  • ಕಾಂಗ್ರೆಸ್ ಆ್ಯಪ್ ಆಯ್ತು, ಈಗ ಸಿದ್ದರಾಮಯ್ಯ ಆ್ಯಪ್ ಪ್ಲೇ ಸ್ಟೋರ್ ನಿಂದ ಡಿಲೀಟ್!

    ಕಾಂಗ್ರೆಸ್ ಆ್ಯಪ್ ಆಯ್ತು, ಈಗ ಸಿದ್ದರಾಮಯ್ಯ ಆ್ಯಪ್ ಪ್ಲೇ ಸ್ಟೋರ್ ನಿಂದ ಡಿಲೀಟ್!

    ಬೆಂಗಳೂರು: ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ ಕಾಂಗ್ರೆಸ್ ಆ್ಯಪ್ ಡಿಲೀಟ್ ಆದ ಬಳಿಕ ಈಗ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆ್ಯಪ್ ಡಿಲೀಟ್ ಆಗಿದೆ.

    ಸಿದ್ದರಾಮಯ್ಯನವರ ಅಪ್ಲಿಕೇಶನ್ ಎನ್‍ಕ್ರಿಪ್ಟ್ ಆಗಿಲ್ಲ. ಸಿದ್ದರಾಮಯ್ಯನವರ ಅಪ್ಲಿಕೇಶನ್ ಸರ್ಕಾರವೇ ಸಿದ್ಧಪಡಿಸಿದರೂ citizenoutreachapp.in ಹೆಸರಿನ ಕಂಪೆನಿಗೆ ಹೋಗುತ್ತದೆ. ಸರ್ಕಾರವೇ ಸಿದ್ಧಪಡಿಸಿದ ಆ್ಯಪ್ ಡೇಟಾ ಖಾಸಗಿ ಕಂಪೆನಿಗೆ ಹೇಗೆ ನೀಡುತ್ತೀರಿ ಎಂದು ಶ್ರೀಹರ್ಷ ಪೆರ್ಲ ಅವರು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.

    ಈ ಟ್ವೀಟ್ ವ್ಯಾಪಕ ಪ್ರತಿಕ್ರಿಯೆ ಬಂದಿತ್ತು. ಸಿದ್ದರಾಮಯ್ಯನವರ ಆ್ಯಪ್‍ನಲ್ಲಿ ಭದ್ರತಾ ಲೋಪದ ಸುದ್ದಿ ಪ್ರಕಟವಾಗುತ್ತಿದ್ದಂತೆ ಈಗ ಆಂಡ್ರಾಯ್ಡ್ ಪ್ಲೇ ಸ್ಟೋರಿನಿಂದ ಈ ಅಪ್ಲಿಕೇಶನ್ ಡಿಲೀಟ್ ಮಾಡಲಾಗಿದೆ.

    ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, ನಮೋ ಅಪ್ಲಿಕೇಶನ್ ನಲ್ಲಿ ಭದ್ರತಾ ಲೋಪವಿದ್ದು ಅಮೆರಿಕದ ಕಂಪೆನಿಗೆ ಡೇಟಾವನ್ನು ಮಾರಾಟ ಮಾಡುತ್ತಿದೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದರು. ಈ ಆರೋಪ ಮಾಡಿದ ಬಳಿಕ ಕಾಂಗ್ರೆಸ್ ಆ್ಯಪ್‍ನಲ್ಲೂ ಭದ್ರತಾ ಲೋಪ ಕಂಡುಬಂದಿತ್ತು. ಬಳಿಕ ಕಾಂಗ್ರೆಸ್ ತನ್ನ ಆ್ಯಪ್ ಡಿಲೀಟ್ ಮಾಡಿತ್ತು. ಇದನ್ನೂ ಓದಿ: ಕಾಂಗ್ರೆಸ್ಸಿನಿಂದ #DeleteNaMoApp ಅಭಿಯಾನ- ದಿಢೀರ್ ಏರಿಕೆ ಆಯ್ತು ಮೋದಿ ಆ್ಯಪ್ ಡೌನ್‍ಲೋಡ್ ಸಂಖ್ಯೆ