Tag: ಕಾಂಗ್ರಸ್

  • ಕಾಂಗ್ರೆಸ್‍ನಿಂದ ಯಾರೇ ಸ್ಪರ್ಧಿಸಿದ್ರು ಅವರ ಪರ ಪ್ರಚಾರ ಮಾಡ್ತೇನೆ- ರಮ್ಯಾ ತಾಯಿ!

    ಕಾಂಗ್ರೆಸ್‍ನಿಂದ ಯಾರೇ ಸ್ಪರ್ಧಿಸಿದ್ರು ಅವರ ಪರ ಪ್ರಚಾರ ಮಾಡ್ತೇನೆ- ರಮ್ಯಾ ತಾಯಿ!

    ಮಂಡ್ಯ: ಕಾಂಗ್ರೆಸ್‍ನಿಂದ ಯಾರೇ ಸ್ಪರ್ಧಿಸಿದರು ಅವರ ಪರ ಮಂಡ್ಯಕ್ಕೆ ಬಂದು ಪ್ರಚಾರ ಮಾಡುತ್ತೇನೆ ಎಂದು ಮಾಜಿ ಸಂಸದೆ ರಮ್ಯಾ ತಾಯಿ ರಂಜಿತಾ ಹೇಳಿದ್ದಾರೆ.

    ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಸರಿಯಾಗಿ ಗುರುತಿಸುತ್ತಿಲ್ಲ ಎಂದು ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದಿದ್ದ ರಂಜಿತ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಬುಧವಾರ ಮಂಡ್ಯಕ್ಕೆ ಆಗಮಿಸಿ ಅಧಿಕೃತವಾಗಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದರು.

    ಹಿರಿಯ ನಾಯಕರು, ಹಿತೈಷಿಗಳ ಸಲಹೆಯಂತೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ. ಮುಂಬರುವ ದಿನಗಳಲ್ಲಿ ಪಕ್ಷದಿಂದ ಸೂಕ್ತ ಅವಕಾಶ ಸಿಗುವ ಭರವಸೆಯಿದೆ. ಬುಧವಾರ ಬಸವ ಜಯಂತಿ. ಈ ಶುಭದಿನದಿಂದ ಕಾಂಗ್ರೆಸ್ ಪರ ಪ್ರಚಾರ ಮಾಡಲು ಬಂದಿದ್ದೇನೆ. ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷದಿಂದ ಯಾರೇ ಸ್ಪರ್ಧಿಸಿದ್ದರು ಅವರ ಪರ ಪ್ರಚಾರ ಮಾಡುತ್ತೇನೆ. ಮಂಡ್ಯದಲ್ಲಿ ಸಕ್ರಿಯವಾಗಿರುತ್ತೇನೆ ಎಂದು ರಂಜಿತ ತಿಳಿಸಿದ್ದಾರೆ.

    ಇದೇ ಸಮಯದಲ್ಲಿ ರಮ್ಯಾ ಮಂಡ್ಯಕ್ಕೆ ಆಗಮಿಸುವ ಬಗ್ಗೆ ಮಾತನಾಡಿದ ಅವರು, ರಮ್ಯಾ ಅವರ ಹೆಸರು ಸ್ಟಾರ್ ಕ್ಯಾಂಪೇನ್ ಲಿಸ್ಟ್ ನಲ್ಲಿದೆ. ಅವರು ಎಲ್ಲ ಕಡೆ ಬಂದು ಪ್ರಚಾರ ಮಾಡುತ್ತಾರೆ. ಖಂಡಿತ ಮಂಡ್ಯಕ್ಕೆ ಬಂದು ಪ್ರಚಾರ ಮಾಡ್ತಾರೆ ಎಂದು ಹೇಳಿದ್ದರು. ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧವೇ ಸಿಡಿದ ರಮ್ಯಾ ತಾಯಿ-30 ವರ್ಷ ದುಡಿದ್ರೂ ಕಾಂಗ್ರೆಸ್‍ನಿಂದ ಅನ್ಯಾಯ!

    ಅಷ್ಟೇ ಅಲ್ಲದೇ ಸಿದ್ದರಾಮಯ್ಯ ಅವರ ಯೋಜನೆಗಳನ್ನು ಹಾಡಿ ಹೊಗಳಿದ ರಂಜಿತ, ಸಿಎಂ ಒಳ್ಳೊಳ್ಳೆ ಕೆಲಸ ಮಾಡಿದ್ದಾರೆ. ಎಲ್ಲ ರೀತಿಯ ಭಾಗ್ಯ ಕೊಟ್ಟಿದ್ದಾರೆ. ಜನರು ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಾರೆ. ಕಾಂಗ್ರೆಸ್ ಪಕ್ಷದ ಪರ ಯಾರೇ ನಿಂತರೂ ಗೆಲ್ಲುತ್ತಾರೆ. ಖಂಡಿತ ಈ ಬಾರೀ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಾಗಲೇ ರಮ್ಯಾ ತಾಯಿ ಕೈ ವಿರುದ್ಧ ಅಪಸ್ವರ ಎತ್ತಿದ್ದೇಕೆ?

    https://youtu.be/uwuE6Mz5wVU

  • ಈ ಬಾರಿ ಮುಂಗಡ ಬಜೆಟ್ ಮಂಡನೆ: ಸಿದ್ದರಾಮಯ್ಯ

    ಈ ಬಾರಿ ಮುಂಗಡ ಬಜೆಟ್ ಮಂಡನೆ: ಸಿದ್ದರಾಮಯ್ಯ

    ಬಳ್ಳಾರಿ: ಈ ಚುನಾವಣಾ ವರ್ಷ ಆಗಿರುವುದರಿಂದ ರಾಜ್ಯದ ಬಜೆಟ್ ನ್ನು ಮಾರ್ಚ್ ಬದಲಿಗೆ ಫೆಬ್ರವರಿ ತಿಂಗಳಲ್ಲಿ ಮಂಡಿಸುವುದಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರ ಅರ್ಥಿಕ ವರ್ಷವನ್ನು ಜನವರಿಯಿಂದ ಜಾರಿಗೆ ತರವ ಚಿಂತನೆ ಸರಿಯಲ್ಲ. ನಾನು ಅದನ್ನು ಒಪ್ಪುವುದಿಲ್ಲ ಎಂದರು.

    ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಲು ತಾವು ಮುಕ್ತರಾಗಿದ್ದು ಅವರ ತಾಯಿ ಬೇಡ ಎಂದಿದ್ದಾರೆ. ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ ಎಂದ ಸಿಎಂ, ಈ ಹಿಂದೆ ಸಿಬಿಐ ಯನ್ನು ಚೋರ್ ಬಚಾವ್ ಎನ್ನುತ್ತಿದ್ದವರು ಈಗ ಸಿಬಿಐಗೆ ವಹಿಸಿ ಎನ್ನುತ್ತಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.

    ಗಣಿ ಅಕ್ರಮದ ವಿಷಯ ಎಸ್‍ಐ ಟಿಗೆ ವಹಿಸಿದೆ ಅವರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇನ್ನು ಆಂದ್ರ ಮತ್ತು ಕರ್ನಾಟಕ ನಡುವಿನ ಗಣಿ ಗಡಿ ವಿವಾದ ಸರ್ವೆ ಮೂಲಕ ಬಗೆಹರಿಸಲು ತಾವು ಸಿದ್ಧರಿರುವುದಾಗಿ ತಿಳಿಸಿದರು.

    ಇದೆ ವೇಳೆ ವೀರಶೈವ ಲಿಂಗಾಯತ ವಿವಾದ ಪ್ರಶ್ನೆಗೆ ಉತ್ತರಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

  • ಬಿಜೆಪಿಯವರು ಬಡ್ಡಿ ನನ್ನಮಕ್ಳು: ರೋಷನ್ ಬೇಗ್

    ಬಿಜೆಪಿಯವರು ಬಡ್ಡಿ ನನ್ನಮಕ್ಳು: ರೋಷನ್ ಬೇಗ್

    ವಿಜಯಪುರ: ಬಿಜೆಪಿಯವರು ಬಡ್ಡಿ ನನ್ನಮಕ್ಳು ಅಂತ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ಅವರು ಹೀಯಾಳಿಸಿ ಬೈದಿದ್ದಾರೆ.

    ನಗರದ ಜೆ.ಬಿ ಗಾರ್ಡನ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಬ್ಲಾಕ್ ಕಾಂಗ್ರೆಸ್ ಸಮಾವೇಶದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಅವರು, ದೇಶ ಭಕ್ತಿ ಬಿಜೆಪಿಯವರಿಗೆ ಮಾತ್ರವಿಲ್ಲ. ಕಾಂಗ್ರೆಸ್ಸಿಗರ ರಕ್ತ ಕಣ-ಕಣದಲ್ಲಿ ದೇಶ ಭಕ್ತಿ ಹರಿಯುತ್ತಿದೆ ಎಂದು ಹೇಳಿದರು.

    ಬಡ್ಡಿ ಮಕ್ಳು ಬಿಜೆಪಿಯವರಿಂದ ದೇಶ ಭಕ್ತಿಯ ಬಗ್ಗೆ ನಾವು ಕಲಿಯಬೇಕಿಲ್ಲ. ಯಾವಾಗಲೂ ಬರೀ ಸುಳ್ಳು ಹೇಳುವುದೇ ಅವರ ಕೆಲಸ ಎಂದು ಬಿಜೆಪಿಯವರ ವಿರುದ್ಧ ಹರಿಹಾಯ್ದರು.

    ಸಚಿವರು ಭಾಷಣದಲ್ಲಿ ಬಡ್ಡಿ ಮಕ್ಳು ಶಬ್ಧ ಬಳಸಿದಕ್ಕೆ ಬಿಜೆಪಿಯಲ್ಲಿ ವಿರೋಧ ಕೇಳಿ ಬಂದಿದೆ.