Tag: ಕಸ

  • ಠಾಣೆ ಮೆಟ್ಟಿಲೇರಿದ ಕಸ ಫೈಟ್ – ಪ್ರೊಡ್ಯೂಸರ್ ಪುತ್ರ, ಪತ್ನಿ ವಿರುದ್ಧ FIR

    ಠಾಣೆ ಮೆಟ್ಟಿಲೇರಿದ ಕಸ ಫೈಟ್ – ಪ್ರೊಡ್ಯೂಸರ್ ಪುತ್ರ, ಪತ್ನಿ ವಿರುದ್ಧ FIR

    ಬೆಂಗಳೂರು: ಕಸ ಹಾಕುವ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು, ಸ್ಯಾಂಡಲ್‍ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಪತ್ನಿ ರೇಖಾ ಜಗದೀಶ್ ಹಾಗೂ ಪುತ್ರ ಸ್ನೇಹಿತ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

    ಸೌಂದರ್ಯ ಜಗದೀಶ್ ಮತ್ತು ಮಾಜಿ ಮೇಯರ್ ಪುತ್ರಿ ಮಂಜುಳಾ ಪುರುಷೋತ್ತಮ ನಡುವೆ ಗಲಾಟೆ ನಡೆದಿದ್ದು, ಮಂಜುಳಾ ಪುರುಷೋತ್ತಮ್ ಅವರ ಮನೆ ಕೆಲಸದ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಸೌಂದರ್ಯ ಜಗದೀಶ್ ಕುಟುಂಬಸ್ಥರು, ಬೌನ್ಸರ್ ಸೇರಿ ಹಲ್ಲೆ ಮಾಡಿರುವುದಾಗಿ ಮಂಜುಳಾ ಪುರುಷೋತ್ತಮ್ ತಿಳಿಸಿದ್ದಾರೆ. ಇಷ್ಟೇ ಅಲ್ಲದೇ ಸೌಂದರ್ಯ ಜಗದೀಶ್ ಮತ್ತು ಮಂಜುಳಾ ಪುರುಷೋತ್ತಮ್ ನಡುವೆ ಈ ಹಿಂದೆಯೂ ಹಲವು ಬಾರಿ ಜಗಳ ನಡೆದಿತ್ತು ಎನ್ನಲಾಗಿದ್ದು, ಸದ್ಯ ಕಸ ಗಲಾಟೆ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ನಾಳೆಯಿಂದ 1 ರಿಂದ 5ನೇ ತರಗತಿ ಮಕ್ಕಳಿಗೆ ಸ್ಕೂಲ್ ಓಪನ್ – ಶಾಲೆಗಳಲ್ಲಿ ಸಕಲ ಸಿದ್ಧತೆ

    ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ರೇಖಾ ಜಗದೀಶ್, ಇದು ಉದ್ದೇಶಪೂರ್ವಕವಾಗಿ ಮಾಡಿರುವ ಗಲಾಟೆ ಎಂದಿದ್ದಾರೆ. ನಾವು ಬೆಳೆಯುತ್ತಿರುವುದನ್ನು ಸಹಿಸಿಕೊಳ್ಳಲಾಗದೇ ಈ ರೀತಿ ಮಾಡಿದ್ದಾರೆ. ನನ್ನ ಮಕ್ಕಳು ದೇವರಿದ್ದಂತೆ ಎಂದು ಸಮರ್ಥಿಸಿಕೊಂಡಿದ್ದಾರೆ. ಸೋಮವಾರ ಕೂತು ಮಾತಾಡೋಣ ಎಂದಿದ್ದೆ. ಆದರೆ ಬೇಕು ಅಂತಲೇ ಹೀಗೆಲ್ಲ ಮಾಡಿದ್ದಾರೆ ಎಂದು ಮಂಜುಳಾ ಪುರುಷೋತ್ತಮ್ ವಿರುದ್ಧ ಆರೋಪಿಸಿದ್ದಾರೆ. ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

    ಸೌಂದರ್ಯ ಜಗದೀಶ್ ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ಮಾಪಕರಾಗಿದ್ದು, ಇವರ ಪುತ್ರ ಸ್ನೇಹಿತ್ ಅಭಿನಯಿಸಿದ್ದ ಅಪ್ಪು, ಪಪ್ಪು ಹಾಗೂ ಸ್ನೇಹಿತರು ಸಿನಿಮಾ ಸಖತ್ ಫೇಮಸ್ ಆಗಿತ್ತು.

  • ಕಸ ಸಂಗ್ರಹಣಾ ವಾಹನ ಚಲಾಯಿಸಿ ಜಾಗೃತಿ ಮೂಡಿಸಿದ ಶ್ರೀರಾಮುಲು

    ಕಸ ಸಂಗ್ರಹಣಾ ವಾಹನ ಚಲಾಯಿಸಿ ಜಾಗೃತಿ ಮೂಡಿಸಿದ ಶ್ರೀರಾಮುಲು

    ಚಿತ್ರದುರ್ಗ: ಮೊಳಕಾಲ್ಮೂರಿನಲ್ಲಿಂದು ಕಸ ಸಂಗ್ರಹಣಾ ವಾಹನಗಳಿಗೆ ಸ್ವಯಂ ವಾಹನ ಚಲಾಯಿಸುವ ಮೂಲಕ ಚಾಲನೆ ನೀಡಿದ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ. ಶ್ರೀರಾಮುಲು, ಸಾರ್ವಜನಿಕರು ಸ್ಚಚ್ಚತೆಯನ್ನು ಮೈಗೂಡಿಸಿಕೊಂಡು ಸ್ವಚ್ಚ, ಸುಂದರ ಹಾಗೂ ಆರೋಗ್ಯಯುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿ ಜಾಗೃತಿ ಮೂಡಿಸಿದರು.

    Sriramulu

    ಮೊಳಕಾಲ್ಮೂರಿನಲ್ಲಿಂದು ಪಟ್ಟಣ ಪಂಚಾಯಿತಿಯು ಆಯೋಜಿಸಿದ್ದ ಕಸಸಂಗ್ರಹಣಾ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ಚಚ್ಚ ಭಾರತ ಸ್ವಾಥ್ಯ ಭಾರತವಾಗಿದೆ. ಮಹಾತ್ಮ ಗಾಂಧೀಜಿಯವರ ಆಶಯವೂ ಇದಾಗಿತ್ತು. ಮಹಾತ್ಮ ಗಾಂಧೀಜಿ ಅವರ ಆಶಯವನ್ನು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಸಾಕಾರಗೊಳಿಸಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡ ಸಚಿವ ಯಶಪಾಲ್ ಆರ್ಯ, ಶಾಸಕ ಸಂಜೀವ್ ಆರ್ಯ

    Sriramulu

    ಮಕ್ಕಳಲ್ಲಿ ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಬೇಕು. ಸಾರ್ವಜನಿಕರು ಸ್ವಚ್ಚತೆಯನ್ನು ಮೈಗೂಡಿಸಿಕೊಂಡು ತಮ್ಮ ಮನೆ, ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಕಡ್ಡಾಯವಾಗಿ ಕಸವನ್ನು ಬೇರ್ಪಡಿಸಿ ಕಸಸಂಗ್ರಹಣಾ ವಾಹನಗಳಿಗೆ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಶೌಚಾಯಗಳನ್ನು ಬಳಕೆ ಮಾಡಬೇಕು. ಸ್ಚಚ್ಚತೆ ಕಾಪಾಡಲು ಸರ್ಕಾರವು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಸಾರ್ವಜನಿಕರು ಸಹಕರಿಸಿ, ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಹಣವೇ ಇಲ್ಲ ಲಾಕ್ ಮಾಡುವ ಅವಶ್ಯಕತೆ ಇತ್ತಾ?- ಮಾಲೀಕನಿಗೆ ಪತ್ರ ಬರೆದ ಕಳ್ಳರು

    Sriramulu

    ನಂತರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಇಸ್ಕಾನ್ ಸಂಸ್ಥೆಯ ವತಿಯಿಂದ ಪೌರಕಾರ್ಮಿಕರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು. ಸಂದರ್ಭದಲ್ಲಿ ವಿವಿಧ ಜನಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.

  • ಕಾಬೂಲ್‍ನಿಂದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದ ಪಾಕ್ – ಕಾರಣ ಏನು ಗೊತ್ತಾ?

    ಕಾಬೂಲ್‍ನಿಂದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದ ಪಾಕ್ – ಕಾರಣ ಏನು ಗೊತ್ತಾ?

    ಕಾಬೂಲ್: ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಡಾಂಬರಿನ ಮೇಲಿನ ಕಸದ ರಾಶಿಯನ್ನು ಉಲ್ಲೇಖಿಸಿ ಭಾನುವಾರ ಅಫ್ಘಾನಿಸ್ತಾನದಿಂದ ಪಾಕಿಸ್ತಾನ ಅಂತರಾಷ್ಟ್ರೀಯ ವಿಮಾನಗಳ ಮೂಲಕ ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

    ಕಳೆದ ವಾರ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಯುದ್ಧ-ಪೀಡಿತ ರಾಷ್ಟ್ರದಿಂದ ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ಕೆಲವು ದಿನಗಳಿಂದ ಕಾಬೂಲ್‍ಗೆ ಹೊರಗಿನ ವಿಮಾನಗಳನ್ನು ಕಳುಹಿಸಿಕೊಡುತ್ತಿದ್ದ ಏಕೈಕ ವಾಣಿಜ್ಯ ವಿಮಾನಯಾನ ಸಂಸ್ಥೆ ಪಾಕಿಸ್ತಾನ ಅಂತರಾಷ್ಟ್ರೀಯ ಏರ್ ಲೈನ್ಸ್ ಆಗಿದೆ. ಇದನ್ನೂ ಓದಿ:ಕಾಬೂಲ್‍ನಿಂದ ಭಾರತಕ್ಕೆ ಮರಳ್ತಿದ್ದಂತೆ ತಮ್ಮನಿಗೆ ಕಿಸ್ ಕೊಟ್ಟ ಅಕ್ಕ- ಭಾವನಾತ್ಮಕ ವೀಡಿಯೋ ವೈರಲ್

    ಪಾಕಿಸ್ತಾನ ಕಾಬೂಲ್‍ನ ಹಮೀದ್ ಕರ್ಜೈ ಅಂತರಾಷ್ಟ್ರೀಯವಿಮಾನ ನಿಲ್ದಾಣದ ಡಾಮ್ರ್ಯಾಕ್‍ನಲ್ಲಿನ ಕಸ ರಾಶಿ ಮತ್ತು ಸೌಲಭ್ಯಗಳ ಕೊರತೆಯಿಂದಾಗಿ ಕಾಬೂಲ್ ವಿಮಾನ ಕಾರ್ಯಾಚರಣೆಯನು ಪಾಕಿಸ್ತಾನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸದ್ಯ ಕಾಬೂಲ್ ವಿಮಾನ ನಿಲ್ದಾಣಕ್ಕೆ ಯುಎಸ್ ಮಿಲಿಟರಿಗಳನ್ನು ನಿಯೋಜಿಸಿದ್ದು, ಭದ್ರತೆ ಒದಗಿಸುತ್ತಿದೆ. ಇದನ್ನೂ ಓದಿ:ಪಾರ್ಕ್‍ಗೆ ಬಾ ಅಂತಿದ್ಳು – ಅಂಕಲ್‍ಗಳೇ ಈಕೆಯ ಟಾರ್ಗೆಟ್!

  • ಹಸಿವು ತಾಳಲಾರದೆ ರಸ್ತೆಬದಿ ಬಿದ್ದಿದ್ದ ಅನ್ನದ ಮೊರೆ ಹೋದ ಕೂಲಿಕಾರ್ಮಿಕ..!

    ಹಸಿವು ತಾಳಲಾರದೆ ರಸ್ತೆಬದಿ ಬಿದ್ದಿದ್ದ ಅನ್ನದ ಮೊರೆ ಹೋದ ಕೂಲಿಕಾರ್ಮಿಕ..!

    ಹಾಸನ: ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ವ್ಯಕ್ತಿಯೊಬ್ಬರು ರಸ್ತೆ ಬದಿ ಕಸದ ರಾಶಿಯಲ್ಲಿ ಬಿದ್ದಿದ್ದ ಅನ್ನದ ಅಗಳನ್ನು ಹುಡುಕಿ ತಿನ್ನುತ್ತಿದ್ದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

    ಹಾಸನ ಜಿಲ್ಲೆಥಿ ಆಲೂರು ತಾಲೂಕಿನ ಕೋನಪೇಟೆ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಮನಕಲಕುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ರಾಜು (38) ಎಂಬವರು ಹೊಟ್ಟೆ ಹಸಿವು ತಾಳಲಾರದೆ ರಸ್ತೆ ಬದಿ ಬಿದ್ದಿದ್ದ ಕಸದ ರಾಶಿಯಲ್ಲಿನ ಅನ್ನವನ್ನು ತಿನ್ನುತ್ತಿದ್ದರು.

    ದಾರಿಹೋಕ ಸಾರ್ವಜನಿಕರೊಬ್ಬರು ವಿಚಾರಿಸಿದಾಗ, ಹೊಟ್ಟೆ ಹಸಿವು ತಾಳಲಾರದೆ ಹೀಗೆ ಮಾಡುತ್ತಿದ್ದೇನೆ. ಶುಂಠಿ ತೋಟದ ಕೆಲಸಕ್ಕೆಂದು ಆಲೂರಿಗೆ ಬಂದಿದ್ದೆ. ಆದರೆ ಈಗ ಕೆಲಸ ಕೈ ಕೊಟ್ಟಿದ್ದು ಊರಿಗೆ ಹೋಗಲು ನನ್ನ ಬಳಿ ದುಡ್ಡಿಲ್ಲ. ಹೊಟ್ಟೆ ಹಸಿವು ತಾಳಲಾಗುತ್ತಿಲ್ಲ. ಪರಿಚಿತರು ಎಂದು ಹೇಳಿಕೊಳ್ಳಲು ಯಾರೂ ಇಲ್ಲ ಎಂದು ರಾಜು ಅಸಹಾಯಕತೆ ಹೊರಹಾಕಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕೆ ಬಂದ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಆನಂದ್ ಮನೆಯಿಂದ ಅನ್ನ-ಸಾಂಬರು ತಂದು ನೀಡಿ ಊಟ ಬಡಿಸಿದರು. ನಂತರ ತಾಲೂಕು ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಸಿಬ್ಬಂದಿ ಜೊತೆಗೆ ಬಂದು ರಾಜು ಅವರಿಗೆ ಕೊರೊನಾ ಪರೀಕ್ಷೆ ನಡೆಸಿದರು. ಆ ಬಳಿಕ ಆನಂದ್ ಅವರೇ ತಮ್ಮ ಮನೆಗೆ ರಾಜುನನ್ನು ಕರೆದುಕೊಂಡು ಹೋಗಿದ್ದು ಗಾರೆ ಕೆಲಸ ನೀಡುವುದಾಗಿ ತಿಳಿಸಿದ್ದಾರೆ.

  • ಕಸ ವಿಲೇವಾರಿ ಕಾರ್ಮಿಕನ ಮೇಲೆ ಹಲ್ಲೆ- ಎಲೆಕ್ಟ್ರಾನಿಕ್ಸ್ ಶಾಪ್ ಪರವಾನಿಗೆ ರದ್ದು

    ಕಸ ವಿಲೇವಾರಿ ಕಾರ್ಮಿಕನ ಮೇಲೆ ಹಲ್ಲೆ- ಎಲೆಕ್ಟ್ರಾನಿಕ್ಸ್ ಶಾಪ್ ಪರವಾನಿಗೆ ರದ್ದು

    ಉಡುಪಿ: ಕಸ ವಿಲೇವಾರಿಗೆ ಬಂದ ನಗರಸಭೆ ಪೌರಕಾರ್ಮಿಕನಿಗೆ ಥಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಗರಸಭೆ ಖಂಡನಾ ನಿರ್ಣಯ ತೆಗೆದುಕೊಂಡು, ಎಲೆಕ್ಟ್ರಾನಿಕ್ಸ್ ಶಾಪ್ ಮಾಲೀಕನ ಪರವಾನಿಗೆಯನ್ನು ರದ್ದುಗೊಳಿಸಿದೆ.

    ಜಿಲ್ಲೆಯ ನಗರಸಭೆ ಕಸ ವಿಲೇವಾರಿ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧ ಉಡುಪಿ ನಗರಸಭೆ ಖಡಕ್ ನಿರ್ಣಯ ತೆಗದುಕೊಂಡಿದೆ. ಉಡುಪಿ ನಗರಸಭೆಯಲ್ಲಿ ನಡೆದ ತುರ್ತು ಖಂಡನಾ ನಿರ್ಣಯ ಸಭೆಯಲ್ಲಿ ಆರೋಪಿಗಳಿಗೆ ಸಂಬಂಧಿಸಿದ ಆಸ್ಮಾ ಕ್ಯಾಸೆಟ್ ಕಾರ್ನರ್ ಅಂಗಡಿಯ ವ್ಯಾಪಾರ ಪರವಾನಿಗೆ ರದ್ದು ಮಾಡಲು ನಿರ್ಣಯಿಸಲಾಗಿದೆ.

    ಅಧಿಕಾರಿಗಳು, ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ಗುತ್ತಿಗೆ ನೌಕರರ ರಕ್ಷಣೆಗೆ ಆಡಳಿತ ವಿಭಾಗ ಬದ್ಧವಾಗಿದ್ದು, ಕೆಲವರು ಅನಗತ್ಯವಾಗಿ ನಗರಸಭೆ ವಿರುದ್ಧ ಪೌರಕಾರ್ಮಿಕರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಷಡ್ಯಂತ್ರಕ್ಕೆ ಅವಕಾಶ ಇಲ್ಲ ಎಂದು ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಹೇಳಿದ್ದಾರೆ.

    ಈ ಸಂದರ್ಭದಲ್ಲಿ ಶಾಸಕ ರಘುಪತಿ ಭಟ್ ಮಾತನಾಡಿ, ಸರ್ಕಾರಿ ಅಧಿಕಾರಿಗಳ ವಿರುದ್ಧ ದುವರ್ತನೆ ತೋರಿದರೆ ಪಕ್ಷ ಭೇದವಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ವಿರೋಧ ಪಕ್ಷದ ಸದಸ್ಯರು ಬೀದಿಯಲ್ಲಿ ನಿಂತು ಮಾತನಾಡುವ ಬದಲು ಅಧಿವೇಶನಕ್ಕೆ ಬಂದು ತಮ್ಮ ಅಭಿಪ್ರಾಯ ಮಂಡಿಸಬೇಕಿತ್ತು ಕಿಡಿಕಾರಿದರು.

  • ಕಸದ ವಾಹನ ಚಲಾಯಿಸಿದ ರೇಣುಕಾಚಾರ್ಯ

    ಕಸದ ವಾಹನ ಚಲಾಯಿಸಿದ ರೇಣುಕಾಚಾರ್ಯ

    ದಾವಣಗೆರೆ: ಕಸದ ಗಾಡಿ ಚಲಾಯಿಸುವ ಮೂಲಕ ಶಾಸಕ ಎಂ.ಪಿ.ರೇಣುಕಾಚಾರ್ಯ ವಾಹನಕ್ಕೆ ಚಾಲನೆ ನೀಡಿದರು.

    ಜಿಲ್ಲೆಯ ಹೊನ್ನಾಳಿ ತಾಲೂಕಿನ ಚೀಲೂರು ಗ್ರಾಮದಲ್ಲಿ ಹೊಸ ಕಸದ ಗಾಡಿಗೆ ಚಾಲನೆ ನೀಡಿದ್ದು, ಇದೇ ವೇಳೆ ಕಸದ ಆಟೋವನ್ನು ಚಲಾಯಿಸಿದ್ದಾರೆ. ಇದೇ ವೇಳೆ ‘ನಮ್ಮ ನಡಿಗೆ ತ್ಯಾಜ್ಯ ಮುಕ್ತದ ಕಡೆಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡದರು. ಶಾಸಕರು ವಾಹನ ಚಾಲನೆ ಮಾಡಿದ್ದಕ್ಕೆ ಗ್ರಾಮಸ್ಥರು ಫುಲ್ ಖುಷ್ ಆಗಿದ್ದಾರೆ. ನೆರೆದಿದ್ದ ಜನತೆ ಕೇಕೆ, ಹಾಕಿ ಶಿಳ್ಳೆ ಹೊಡೆದು ಖುಷಿ ಪಟ್ಟರು.

    ಹೊಸದಾಗಿ ಖರೀದಿಸಿದ್ದ ಕಸ ಸಂಗ್ರಹಿಸುವ ಆಟೋ ಚಲಾಯಿಸುವ ಮೂಲಕ ವಾಹನಗಳಿಗೆ ಚಾಲನೆ ನೀಡಿದರು. ನಂತರ ತ್ಯಾಜ್ಯ ವಿಲೇವಾರಿ ಘಟಕವನ್ನು ಸಹ ಲೋಕಾರ್ಪಣೆಗೊಳಿಸಿ, ವೀಕ್ಷಿಸಿದರು. ಇದೇ ವೇಳೆ ತ್ಯಾಜ್ಯ ವಿಲೇವಾರಿ ಘಟಕದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುರು.

  • EXCLUSIVE: ಬಿಬಿಎಂಪಿ ಕಸ ದಂಧೆ ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆ

    EXCLUSIVE: ಬಿಬಿಎಂಪಿ ಕಸ ದಂಧೆ ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆ

    ಬೆಂಗಳೂರು: ಬಿಬಿಎಂಪಿ ವತಿಯು ಕಸದ ಮೂಲಕ ಕಾಸು ಸಂಗ್ರಹಣೆ ಮಾಡುತ್ತಿರುವ ವಿಚಾರ ಪಬ್ಲಿಕ್ ಟಿವಿ ಕ್ಯಾಮೆರಾ ಮುಂದೆ ಬೆಳಕಿಗೆ ಬಂದಿದೆ.

    ಬಿಬಿಎಂಪಿ ಅಪಾರ್ಟ್ ಮೆಂಟ್ ಕಸ ತೆಗೆದುಕೊಂಡು ಹೋಗಲು ಒಬ್ಬೊಬ್ಬರಿಗೆ ಒಂದೊಂದು ರೇಟ್ ಫಿಕ್ಸ್ ಮಾಡುವ ಮೂಲಕ ಕಸದ ದಂಧೆ ನಡೆಸುತ್ತಿದೆ. ಕಸ ಹಾಕಲು ಹೋದವರಿಗೆ ಹಸಿ ,ಒಣ ಕಸ ಬೇರ್ಪಡಿಸಿ ಎಂದು ಹೇಳುತ್ತಾರೆ. ಆದರೆ ಹಣ ನೀಡುವವರಿಗೆ ಮಾತ್ರ ಕಸವನ್ನು ಮಿಕ್ಸ್ ಮಾಡಿ ಕೊಟ್ಟರು ಕೂಡ ಪರವಾಗಿಲ್ಲ ಎಂದು ಹೇಳುವ ಮೂಲಕ ಹಣ ಸಂಗ್ರಹಣೆ ಮಾಡುತ್ತಿದ್ದಾರೆ.

    ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ಕಾಯ್ದೆ ಪ್ರಕಾರ ಬಲ್ಕ್ ಜನರೇಟರ್ ಕಸ ಸಂಗ್ರಹಿಸುವಂತಿಲ್ಲ. 100 ಕೆಜಿ ಗಿಂತ ಹೆಚ್ಚು ಕಸ ಬಿದ್ದರೆ ಅದು ವಾಣಿಜ್ಯ ಕಸ ಆಗುತ್ತದೆ. ಬಿಬಿಎಂಪಿ ವಸತಿ ಕಸಗಳನ್ನು ಮಾತ್ರ ಸಂಗ್ರಹ ಮಾಡಲಿದ್ದು, ಒಂದು ಮನೆಯ ಕಸ 10 ಕೆಜಿಗಿಂತ ಮೀರಬಾರದು. ಆದರೆ ಬೊಮ್ಮನಹಳ್ಳಿ, ಬೆಳ್ಳಂದೂರು ಸಮೀಪದ ಅಪಾರ್ಟ್ ಮೆಂಟ್‍ಗಳಲ್ಲಿ ನಿತ್ಯ 100 ಕೆಜಿಗೂ ಹೆಚ್ಚು ಕಸ ಸಂಗ್ರಹ ಮಾಡುವ ಮೂಲಕ ಕಸದ ದಂಧೆ ನಡೆಯುತ್ತಿದೆ. ಅಲ್ಲದೆ ಈ ಕಸವನ್ನು ನಗರದ ಹೊರವಲಯಗಳಿಗೆ ವಾಣಿಜ್ಯ ಕಸ ಸಂಗ್ರಹಣೆ ಮಾಡಲಾಗುತ್ತದೆ.

    ನಗರದ ಹೊರವಲಯ ಬೆಳ್ಳಂದೂರಿನ ಖಾಸಗಿ ಅಪಾರ್ಟ್‍ಮೆಂಟ್ ಹಿಂಬಾಗಿಲಿನಿಂದ ಕಸ ತೆಗೆದುಕೊಳ್ಳುತ್ತಾರೆ. ಅಲ್ಲದೆ ಬಿನ್ನಿಮಿಲ್ ಅಪಾರ್ಟ್‍ಮೆಂಟ್ ಕಸ ತೆಗೆದುಕೊಂಡು ಹೋಗಲು ಬಿಬಿಎಂಪಿ ಸಿಬ್ಬಂದಿ , ಪಬ್ಲಿಕ್ ಟಿವಿ ಪ್ರತಿನಿಧಿಯೊಂದಿಗೆ ರೇಟ್ ಫಿಕ್ಸ್ ಮಾಡುವ ಅಸಲಿ ಸತ್ಯ ಬಯಲಾಗಿದೆ.

    ಪ್ರತಿನಿಧಿ – ನಮ್ ಅಪಾರ್ಟ್ ಮೆಂಟ್ ಕಸ ತಗೊಳ್ಳಿ
    ಸಿಬ್ಬಂದಿ – ಯಾವ್ ಏರಿಯಾ
    ಪ್ರತಿನಿಧಿ – ಇಲ್ಲಿ 12 ನೇ ಕ್ರಾಸ್ ಸ್ಟಾರ್ ಬಿಲ್ಡಿಂಗ್
    ಸಿಬ್ಬಂದಿ – ಹೌದಾ , ಎಷ್ಟ್ ಅಪಾರ್ಟ್ ಮೆಂಟ್ ಇದೇ ಹೇಳಿ ರೇಟ್ ಫಿಕ್ಸ್ ಮಾಡ್ತಿವಿ
    ಪ್ರತಿನಿಧಿ – 120 ಪ್ಲಾರ್ಟ್ ಇದೆ ,100 ಕೆಜಿಗಿಂತ ಜಾಸ್ತಿ ಕಸ .. 4 ಆಟೋ ಬೇಕೆ ಬೇಕು
    ಸಿಬ್ಬಂದಿ – ಆಗಲಿ ತಿಂಗಳಿಗೆ 100 ರೂ ಒಂದೊಂದು ಮನೆಗೆ ಕೊಡಿಸಿ
    ಪ್ರತಿನಿಧಿ – 50 ಮಾಡಿಕೊಳ್ಳಿ
    ಸಿಬ್ಬಂದಿ – ಆಗಲಿ ಓಕೆ,ಇವತ್ತೆ ಕಸ ತೆಗೆಯಬೇಕಾ
    ಪ್ರತಿನಿಧಿ – ಸೋಮವಾರದಿಂದ ಕಸ ತೆಗೆಯಿರಿ
    ಸಿಬ್ಬಂದಿ – ಹಂಗ ಆಗಲಿ , ಹಸಿ ,ಒಣ ಕಸ ಬೇರೆ ಮಾಡಿ . ಪೊಲೀಸವ್ರೇ ಮಾಡ್ತಾರೆ
    ಪ್ರತಿನಿಧಿ – ಅಯ್ಯೊ ಮಾಡಲ್ಲ ಅಂತಾರೆ
    ಸಿಬ್ಬಂದಿ – ಹೋಗಲಿ ಒಂದೊಂದು ಕವರ್ ನಲ್ಲಂತೂ ಕಟ್ಟಿ ಹಾಕಿರಬೇಕು
    ಪ್ರತಿನಿಧಿ – ಸರಿ ,ಡ್ರಮ್ ಗೆ ತುಂಬಿಸಿ ಇಡ್ತಿವಿ

    ಗುತ್ತಿಗೆದಾರ ಕೆಲಸದವರ ಮೇಲೆ ಹೆಲ್ತ್ ಇನ್ಸ್ ಪೆಕ್ಟರ್ ಇದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಸಿಬ್ಬಂದಿ ಪುಡಿಗಾಸಿನ ಆಸೆಗಾಗಿ ಬಿಬಿಎಂಪಿ ನಿಯಮಗಳನ್ನು ಗಾಳಿಗೆ ತೂರಿ ಕಸದ ದಂಧೆಯ ಮೂಲಕ ಹಣ ಸಂಗ್ರಹಣೆ ಮಾಡುತ್ತಿದ್ದಾರೆ.

  • ಮೊಬೈಲ್ ಅಂಗಡಿಗಳಿಗೆ ಕಸ ಗಿಫ್ಟ್ ಕೊಟ್ಟ ಪಾಲಿಕೆ ಅಧಿಕಾರಿಗಳು!

    ಮೊಬೈಲ್ ಅಂಗಡಿಗಳಿಗೆ ಕಸ ಗಿಫ್ಟ್ ಕೊಟ್ಟ ಪಾಲಿಕೆ ಅಧಿಕಾರಿಗಳು!

    ಮೈಸೂರು : ಬೀದಿ ಬದಿಯಲ್ಲಿ ಕಸ ಹಾಕಿದ ಮೊಬೈಲ್ ಅಂಗಡಿಗಳಿಗೆ ಅದೇ ಕಸವನ್ನು ಪಾಲಿಕೆ ಅಧಿಕಾರಿಗಳು ಗಿಫ್ಟ್ ಆಗಿ ಕೊಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರು ಮಹಾನಗರ ಪಾಲಿಕೆಯ ನಿಯಮವನ್ನು ಗಾಳಿಗೆ ತೂರಿ ಎಲ್ಲೆಂದರಲ್ಲಿ ಕಸ ಹಾಕಿದ ಎರಡು ಮೊಬೈಲ್ ಮಾರಾಟ ಮಳಿಗೆಗಳಿಗೆ ನಗರ ಪಾಲಿಕೆ ದಂಡ ವಿಧಿಸಿದೆ. ಸ್ವಚ್ಛ ಸರ್ವೇಕ್ಷಣ್ 2021ರ ಸರ್ವೇಕಾರ್ಯಗಳ ಅಂಗವಾಗಿ ಪಾಲಿಕೆಯ ಆಯುಕ್ತರು ಸೇರಿದಂತೆ ಎಲ್ಲಾ ಅಧಿಕಾರಿಗಳು ನಗರದ ವಿವಿಧ ವಾರ್ಡ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ವಾರ್ಡ್- 47 ರ ಕುವೆಂಪುನಗರದ ಅಕ್ಷಯ ಭಂಡಾರ್‍ನಲ್ಲಿರುವ ಸಂಗೀತ ಹಾಗೂ ಪೂರ್ವಿಕ ಮೊಬೈಲ್ ಮಳಿಗೆಯ ಹೆಸರಿನ ಬಿಲ್‍ಗಳು, ಮೊಬೈಲ್ ಬಾಕ್ಸ್ ಸೇರಿದಂತೆ ಇನ್ನಿತರ ತ್ಯಾಜ್ಯವಸ್ತುಗಳನ್ನು ರಸ್ತೆಬದಿಯಲ್ಲಿ ಸುರಿಯಲಾಗಿತ್ತು. ಮೊಬೈಲ್ ಬಿಲ್ ಅನ್ನು ಗಮನಿಸಿದ ಅಧಿಕಾರಿಗಳು ತ್ಯಾಜ್ಯವನ್ನು ಮತ್ತೆ ಆಯಾ ಮಳಿಗೆಯ ಮುಂದೆ ಹಾಕಿದ್ದಾರೆ. ನಂತರ ಎರಡೂ ಮಳಿಗೆಗಳಿಗೂ 1 ಸಾವಿರ ರೂ. ದಂಡ ವಿಧಿಸಿದ್ದಾರೆ. ಇಂತಹ ಬೇಜಾವಬ್ದಾರಿತನ ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

    ಕಸ ಹಾಕಲೆಂದು ಪಾಲಿಕೆಯಿಂದ ನಿಗದಿತ ಸ್ಥಳ ಗುರುತಿಸಲಾಗಿದೆ. ಪ್ರತಿದಿನವೂ ಕಸ ವಿಲೇವಾರಿ ಮಾಡಲು ಪೌರಕಾರ್ಮಿಕ ಸಿಬ್ಬಂದಿ ಶ್ರಮವಹಿಸುತ್ತಾರೆ. ಆದರೆ ಕೆಲವರು ಎಲ್ಲೆಂದರಲ್ಲಿ ಕಸ ಹಾಕುವುದರಿಂದ ನಗರವನ್ನು ಸ್ವಚ್ಛವಾಗಿಡಲು ಸಾಧ್ಯವಿಲ್ಲ. ಹಾಗಾಗಿ ಇನ್ನು ಮುಂದೆ ಇಂತಹ ಘಟನೆ ನಡೆಯಬಾರದೆಂದು ಎರಡು ಮಳಿಗೆಗಳಿಗೆ ದಂಡ ವಿಧಿಸಲಾಗಿದೆ ಎಂದು ವಲಯ 3ರ ಆಯುಕ್ತ ಟಿ.ಎಸ್.ಸತ್ಯಮೂರ್ತಿ ತಿಳಿಸಿದ್ದಾರೆ.

  • ಭೂಮಿಯಲ್ಲಿ ಮಾತ್ರವಲ್ಲ ಬಾಹ್ಯಾಕಾಶದಲ್ಲಿಯೂ ಕಸ

    ಭೂಮಿಯಲ್ಲಿ ಮಾತ್ರವಲ್ಲ ಬಾಹ್ಯಾಕಾಶದಲ್ಲಿಯೂ ಕಸ

    ವಾಷಿಂಗ್ಟನ್: ತಜ್ಞರು ನಡೆಸಿದ ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಬಾಹ್ಯಕಾಶದಲ್ಲಿ 6 ಸಾವಿರ ಟನ್ ತ್ಯಾಜ್ಯ ಸಂಗ್ರಹವಾಗಿದೆ ಎಂಬ ಸತ್ಯ ಹೊರಬಿದ್ದಿದೆ.

    ವಿಜ್ಞಾನಿಗಳು ಎಲ್ಲಾ ಉಪಗ್ರಹಗಳ ಕುರಿತಂತೆ ಹಲವು ರೀತಿಯ ಸಂಶೋಧನೆಗಳನ್ನು ನಡೆಸುತ್ತಲೇ ಇರುತ್ತಾರೆ. ಈಗಾಗಲೇ ಮಾನವರು ಹಾರಿಬಿಟ್ಟ ಬಾಹ್ಯಕಾಶ ಕುರಿತಂತೆ ಇತ್ತೀಚೆಗೆ ತಜ್ಞರು ನಡೆಸಿದ ಅಧ್ಯಯನದಲ್ಲಿ ಸಂಶೋಧನಾ ಸಾಧನಗಳು, ಉಪಗ್ರಹಗಳು, ನಿಷ್ಕ್ರಿಯಗೊಂಡ ಉಪಗ್ರಹ ಪಳೆಯುವಿಕೆ ಸೇರಿ 6 ಸಾವಿರ ಟನ್ ತ್ಯಾಜ್ಯ ಬಾಹ್ಯಾಕಾಶದಲ್ಲಿ ಸಂಗ್ರಹವಾಗಿದೆ. ಅಂದರೆ ಬಾಹ್ಯಕಾಶದಲ್ಲಿ ಅಂದಾಜಿನ ಪ್ರಕಾರ 12.8 ಕೋಟಿ ತುಣುಕುಗಳು ಸೇರಿಕೊಂಡಿದ್ದು ಅದರಲ್ಲಿ 1 ಮಿ.ಮೀಟರ್ ನಿಂದ 10 ಸೆಂ.ಮೀ ಗಾತ್ರದ ಅವಶೇಷಗಳು ಸೇರಿಕೊಂಡಿದೆ.

    ಈ ಕುರಿತಂತೆ 2018ರಲ್ಲಿ ನಾಸಾ ನಡೆಸಿದ ಅಧ್ಯನಯನ ಪ್ರಕಾರ ಅಂದಾಜು 5 ಲಕ್ಷಕ್ಕೂ ಅಧಿಕ ನಿಷ್ಕ್ರಿಯ ಉಪಗ್ರಹ ಅವಶೇಷ ಬಾಹ್ಯಕಾಶದಲ್ಲಿ ಭೂಮಿಯನ್ನು ಸುತ್ತುತ್ತಿದ್ದು, ಇಲ್ಲಿಯವರೆಗೂ ಅವಶೇಷಗಳಿಂದ ಭೂಮಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ಮೂಲಗಳು ತಿಳಿಸಿದೆ. ಆದರೆ ಉಪಗ್ರವೊಂದು 2015ರಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಪ್ಪಳಿಸುವ ಅಪಾಯದ ಸವಾಲು ಎದುರಾಗಿತ್ತು. ಆದ್ರೆ ಅದೃಷ್ಟವಶತ್ ಅಂತಹ ಯಾವುದೇ ಘಟನೆ ಸಂಭವಿಸಲಿಲ್ಲ. ಮುಂದೆ ಹೆಚ್ಚಿನ ಉಪಗ್ರಹಗಳ ಉಡಾವಣೆ ಮಾಡುವ ಯೋಜನೆಯನ್ನು ವಿಜ್ಞಾನಿಗಳು ಹೊಂದಿದ್ದು, ಭವಿಷ್ಯದಲ್ಲಿ ಯಾವುದೇ ಉಪಗ್ರಹಗಳು ಅಪ್ಪಳಿಸುವ ಸಾಧ್ಯತೆ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಹಲವು ವರ್ಷಗಳಿಂದ ಇದ್ದ ತ್ಯಾಜ್ಯಗಳು ಇದೀಗ ಆಯುಷ್ಯ ಕಳೆದುಕೊಂಡು ಅವಸಾನ ಹೊಂದಲಿದೆ. ಹೀಗಾಗಿ ಇದಕ್ಕೆಲ್ಲಾ ಪರಿಹಾರ ವಿಶ್ವದ ನಂ1 ಉದ್ಯಮಿ ಎಲಾನ್ ಮಾಸ್ಕ್ ಕಾರಣ ಈ ಹಿಂದೆ 2018ರಲ್ಲಿ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಸಂಸ್ಥೆ ಬಾಹ್ಯಕಾಶ ನಿಲ್ದಾಣಕ್ಕೆ ಫಾಲ್ಕನ್-9 ರಾಕೆಟ್ ನನ್ನು ಪ್ರಾಯೋಗಿಕವಾಗಿ ಸೇಸ್ ಸ್ವೀಪರ್ ಬಳಸುವ ಮೂಲಕ ತ್ಯಾಜ್ಯ ಸಂಗ್ರಹಿಸಲು ಸಾಹಾಯ ಮಾಡಿತ್ತು. ಮತ್ತೆ ಇದೀಗ ಬಾಹ್ಯಕಾಶದಲ್ಲಿ ತ್ಯಾಜ್ಯಗಳನ್ನು ಸಂಗ್ರಹಿಸಲು ಈ ಸಂಸ್ಥೆಯ ಸಹಾಯಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

  • ನಗರ ಸಭೆಯವರು ಕಸ ಮನೆ ಮುಂದೆ ಸುರಿದಿದ್ದಕ್ಕೆ ಆಘಾತಗೊಂಡು ಮಹಿಳೆ ಸಾವು

    ನಗರ ಸಭೆಯವರು ಕಸ ಮನೆ ಮುಂದೆ ಸುರಿದಿದ್ದಕ್ಕೆ ಆಘಾತಗೊಂಡು ಮಹಿಳೆ ಸಾವು

    ಹೈದರಾಬಾದ್: ನಗರಸಭೆಯವರು ಮನೆ ಮುಂದೆ ಕಸ ಹಾಕಿದ್ದಕ್ಕೆ ಆಘಾತಕ್ಕೊಳಗಾಗಿ ಮಹಿಳೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಾರಾಯಣಖೇಡ್ ಜಿಲ್ಲೆಯಲ್ಲಿ ನಡೆದಿದೆ.

    ನಾರಾಯಣ್‍ಖೇಡ್ ನಗರಸಭೆಯ ಅಧಿಕಾರಿಗಳು ಭೂಮವ್ವ ಅವರ ಮನೆಯ ಮುಂದೆ ಡಿ.15ರಂದು ಕಸ ತಂದು ಸುರಿದಿದ್ದರು. ಮನೆಯ ತೆರಿಗೆ ಪಾವತಿಸದ್ದಕ್ಕೆ ಅಧಿಕಾರಿಗಳು ಈ ರೀತಿ ದುರ್ವರ್ತನೆ ತೋರಿದ್ದರು. ಇದರಿಂದ ಆಘಾತಕ್ಕೊಳಗಾದ ಮಹಿಳೆ ಸಾವನ್ನಪ್ಪಿದ್ದಾಳೆ.

    ನಗರಸಭೆಯವರು ಮನೆಯ ಮುಂದೆ ಕಸ ಹಾಕಿದ್ದರಿಂದ ಭೂಮವ್ವ ಅವರು ತೀವ್ರ ಅಸಮಾಧಾನಗೊಂಡಿದ್ದರು. ಅಲ್ಲದೆ ಅವಮಾನವಾಗಿದ್ದರಿಂದ ತೀವ್ರ ಆಘಾತ ಉಂಟಾಗಿ ಮಹಿಳೆ ಸಾವನ್ನಪ್ಪಿದ್ದಾಳೆ. ಶನಿವಾರ ಮಹಿಳೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಬಳಿಕ ಕುಟುಂಬಸ್ಥರು ಸಂಗಾರೆಡ್ಡಿಯಲ್ಲಿನ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಇಂದು ಸಾವನ್ನಪ್ಪಿದ್ದಾಳೆ.

    ಕುಟುಂಬಸ್ಥರು ನಗರ ಸಭೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳ ವಿಪರೀತ ಕ್ರಮದಿಂದಾಗಿ ಭುಮವ್ವ ಅವರಿಗೆ ಅವಮಾನವಾಗಿ ಅಸ್ವಸ್ಥರಾಗಿದ್ದರು. ಬಳಿಕ ಸಾವನ್ನಪ್ಪಿದ್ದಾರೆ ಎಂದು ದೂರಿದ್ದಾರೆ.

    ನಗರಸಭೆ ಅಧಿಕಾರಿಗಳು ಡಿಸೆಂಬರ್ 15ರಂದು ಭುಮವ್ವ ಅವರ ಮನೆಯ ಮುಂದೆ ಕಸ ಸುರಿದಿದ್ದರು. ಬಳಿಕ ಡಿಸೆಂಬರ್ 17ರಂದು ಕಸವನ್ನು ತೆರವುಗೊಳಿಸಿದ್ದರು. ಇದರಿಂದ ಆಘಾತಕ್ಕೊಳಗಾಗಿ ಭೂಮವ್ವ ಆರೋಗ್ಯದಲ್ಲಿ ಏರುಪೇರಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ಕುರಿತು ಕುಟುಂಬಸ್ಥರಿಂದ ದೂರು ಸ್ವೀಕರಿಸಲಾಗಿದ್ದು, ಮಹಿಳೆ ಅಸ್ತಮಾದಿಂದ ಬಳಲುತ್ತಿದ್ದಳು. ಅಲ್ಲದೆ ವಿವಿಧ ಖಾಯಿಲೆ ಹೊಂದಿದ್ದರು ಎಂದು ಅಧಿಕಾರಿಗಳು ವಾದಿಸಿದ್ದಾರೆ.