Tag: ಕಸ್ಟಮ್ಸ್ ಅಧಿಕಾರಿ

  • ಕಸ್ಟಮ್ಸ್ ಅಧಿಕಾರಿ ಪತ್ನಿ ಬಾತ್ ರೂಂನಲ್ಲಿ ಬಿಸಾಡಿದ್ಲು 10 ಲಕ್ಷ- CISF ಪೊಲೀಸರ ಭರ್ಜರಿ ಬೇಟೆ

    ಕಸ್ಟಮ್ಸ್ ಅಧಿಕಾರಿ ಪತ್ನಿ ಬಾತ್ ರೂಂನಲ್ಲಿ ಬಿಸಾಡಿದ್ಲು 10 ಲಕ್ಷ- CISF ಪೊಲೀಸರ ಭರ್ಜರಿ ಬೇಟೆ

    ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಒಟ್ಟು 74.81 ಲಕ್ಷ ರೂ. ಜಪ್ತಿ

    ಬೆಂಗಳೂರು: ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂತೆ ಕಂತೆ ನೋಟುಗಳು ಸಿಕ್ಕಿದ್ದು, ಸಿಐಎಸ್‍ಎಫ್ ಪೊಲೀಸರು ಭರ್ಜರಿ ಬೇಟೆ ನಡೆಸಿ, ಕಸ್ಟಮ್ಸ್ ಅಧಿಕಾರಿಯನ್ನು ಬಲೆಗೆ ಕೆಡವಿದ್ದಾರೆ.

    ಸಿಐಎಸ್‍ಎಫ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಸ್ಟಮ್ಸ್ ಅಧಿಕಾರಿ ಇರ್ಫಾನ್ ಅಹಮದ್ ಮಹಮದ್ ಸಿಕ್ಕಿಬಿದ್ದಿದ್ದಾರೆ. ಅಧಿಕಾರಿಯಿಂದ ಸೂಟ್ ಕೇಸ್, ಬ್ಯಾಗ್ ನಲ್ಲಿದ್ದ ಒಟ್ಟು 74,81,500 ರೂ.ಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ ಬೆಲೆ ಬಾಳುವ ಮೊಬೈಲ್, ಆಪಲ್ ವಾಚ್ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಪರಿಶೀಲನೆ ವೇಳೆ ಕಂತೆ ಕಂತೆ ಹಣ ಪತ್ತೆಯಾಗಿದ್ದು, ಸಿಐಎಸ್‍ಎಫ್ ಪೊಲೀಸರು ಬೆರಗಾಗಿದ್ದಾರೆ. ಹಣವನ್ನು ವಶಪಡಿಸಿಕೊಳ್ಳುವುದನ್ನು ನೋಡುತ್ತಿದ್ದಂತೆ ಸಿಐಎಸ್‍ಎಫ್ ಅಧಿಕಾರಿಗಳ ಪರಿಶೀಲನೆ ವೇಳೆ ಕಸ್ಟಮ್ಸ್ ಅಧಿಕಾರಿಯ ಪತ್ನಿ ಬಾತ್ ರೂಂ ನಲ್ಲಿ ಕಂತೆ ಕಂತೆ ನೋಟುಗಳನ್ನು ಬಿಸಾಡಿದ್ದಾರೆ. ಅಧಿಕಾರಿಯ ಪತ್ನಿ ಬಾತ್ ರೂಂ ನಲ್ಲಿ 10 ಲಕ್ಷ ರೂ. ಬಿಸಾಡಿರುವುದು ಪತ್ತೆಯಾಗಿದೆ.

    ಪ್ರಕರಣವನ್ನು ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದ್ದು, ಕಸ್ಟಮ್ಸ್ ಅಧಿಕಾರಿ ಚೆನ್ನೈ ನಲ್ಲಿ ವಾಸ ಮಾಡುತ್ತಿದ್ದಾರೆ. ಚೆನ್ನೈನಿಂದ ಲಕ್ನೋಗೆ ತೆರಳಲು ಬೆಂಗಳೂರಿಗೆ ಬಂದಿದ್ದರು. ತಪಾಸಣೆ ವೇಳೆ ಅಧಿಕಾರಿ ಸಿಕ್ಕಿಬಿದ್ದಿದ್ದಾನೆ.

  • ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಂದ 24ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ

    ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಂದ 24ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ

    ಚಿಕ್ಕಬಳ್ಳಾಪುರ: ಅಕ್ರಮವಾಗಿ ವಿದೇಶಕ್ಕೆ ಎಕ್ಸ್ ಪೋರ್ಟ್ ಮಾಡಲು ಬೆಂಗಳೂರು ಕೆಂಪೆಗೌಡ ವಿಮಾನ ನಿಲ್ದಾಣಕ್ಕೆ ತಂದಿದ್ದ 24 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಿಶೇಷ ಕಾರ್ಯಚರಣೆ ನೆಡೆಸಿ 475 ಕೆಜಿ ತೂಕದ ಡ್ರಗ್ಸ್ ನ್ನ ವಶಪಡಿಸಿಕೊಂಡಿದ್ದಾರೆ.

    ಅಫೇಕ್ಸ್ ಇಫೇಕ್ಸ್ ಎಂಬ ಕಾರ್ಗೋ ಕಂಪನಿಯು ಶನಿವಾರ ಬೆಂಗಳೂರು ಕೆಂಪೆಗೌಡ ವಿಮಾನ ನಿಲ್ದಾಣದಿಂದ ಎರಡು 50 ಕೆಜಿಯ ಬ್ಯಾಗ್ ಗಳನ್ನು ಮಲೇಶಿಯಾ ಗೆ ಕೆಮಿಕಲ್ಸ್ ಅಂತ ಎಕ್ಸ್ ಪೋರ್ಟ್ ಮಾಡಲು ತಂದಿದ್ರು. ಆದ್ರೆ ಈ ವೇಳೆ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಬ್ಯಾಗ್ ಪರಿಶೀಲನೆ ಮಾಡಿದಾಗ, ಬ್ಯಾಗ್ ನಲ್ಲಿ ಎಕ್ಸ್ ಪೋರ್ಟ್ ಮಾಡುತ್ತಿರುವುದು ಕೆಮಿಕಲ್ ಅಲ್ಲ ಡ್ರಗ್ಸ್ ಎಂದು ತಿಳಿದು ಬಂದಿದೆ.

    ತಕ್ಷಣ ತನಿಖೆಗಾಗಿ ಮೂರು ತಂಡ ರಚನೆ ಮಾಡಿದ ಕಸ್ಟಮ್ ಅಧಿಕಾರಿಗಳು ಅಫೇಕ್ಸ್ ಇಂಫೇಕ್ಸ್ ಕಂಪೆನಿಯ ಗೋಡೌನ್ ಮೇಲೆ ದಾಳಿ ನೆಡೆಸಿದ್ದು, ದಾಳಿ ವೇಳೆ ಗೋಡೌನ್ ನಲ್ಲಿ ಅಕ್ರಮವಾಗಿ ಮಲೇಶಿಯಾ ಎಕ್ಸ್ ಪೋರ್ಟ್ ಮಾಡಲು ಸಂಗ್ರಹ ಮಾಡಿದ್ದ 400 ಕೆಜಿ ಡ್ರಗ್ಸ್ ಪತ್ತೆಯಾಗಿದೆ.

    ಸ್ಥಳೀಯ ಪೊಲೀಸರ ಮೂಲಕ ಅಫೇಕ್ಸ್ ಇಂಫೇಕ್ಸ್ ಗೋಡೌನನ್ನು ಸೀಜ್ ಮಾಡಿದ್ದು ತಲೆ ಮಾರೆಸಿಕೊಂಡಿರುವ ಮಾಲೀಕನಿಗಾಗಿ ಕಸ್ಟಮ್ ಅಧಿಕಾರಿಗಳು ಚೆನೈ ಮತ್ತು ಬೆಂಗಳೂರಿನಲ್ಲಿ ಹುಡುಕಾಟ ನೆಡೆಸಿದ್ದಾರೆ. ಇದು ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಿಗೆ ಕಸ್ಟಮ್ ನಲ್ಲಿ ನೆಡದ ಬೃಹತ್ ರೈಡ್ ಆಗಿದೆ.

     

  • ವಿಮಾನದಲ್ಲಿ ಬಂದಿಳಿದ ಈ ಮಹಿಳೆ ಚಿನ್ನ ಸಾಗಾಟ ಮಾಡ್ತಿದ್ದಿದ್ದು ಹೇಗೆ ಗೊತ್ತಾ..!?

    ವಿಮಾನದಲ್ಲಿ ಬಂದಿಳಿದ ಈ ಮಹಿಳೆ ಚಿನ್ನ ಸಾಗಾಟ ಮಾಡ್ತಿದ್ದಿದ್ದು ಹೇಗೆ ಗೊತ್ತಾ..!?

    ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

    ಚೆನ್ನೈ ಮೂಲದ ಮಹಿಳೆಯೊಬ್ಬರು ಬ್ಯಾಂಕಾಂಕ್‍ನಿಂದ ಬೆಂಗಳೂರಿಗೆ ಬಂದಿಳಿದ್ದಳು. ಈ ವೇಳೆ ಕಸ್ಟಮ್ಸ್ ಹಾಗೂ ಏರ್ ಇಂಟಲಿಜೆನ್ಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ಮಹಿಳೆ 12.48 ಮೌಲ್ಯದ ಚಿನ್ನ ಸಾಗಾಟ ಮಾಡುವ ಪ್ರಕರಣ ಬೆಳಕಿಗೆ ಬಂದಿದೆ. ಈಕೆ ತನ್ನ ಗುದದ್ವಾರದ ಮೂಲಕ ಚಿನ್ನ ಸಾಗಾಟ ಮಾಡುತ್ತಿದ್ದಳು ಎನ್ನಲಾಗಿದೆ. ಸದ್ಯ ಅಧಿಕಾರಿಗಳು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಮತ್ತೊಂದು ಪ್ರಕರಣದಲ್ಲಿ ಕಾರ್ ಸ್ವಚ್ಛಗೊಳಿಸುವ ಉಪಕರಣದಲ್ಲಿ ಚಿನ್ನ ತಂದಿದ್ದವನನ್ನು ಕೂಡ ಅಧಿಕಾರಿಗಳು ಬಂಧಿಸಿದ್ದಾರೆ. ಎಮಿರೇಟ್ಸ್ ಪ್ಲೈಟ್‍ನಲ್ಲಿ ದುಬೈ ನಿಂದ ಬೆಂಗಳೂರಿಗೆ ಬಂದಿದ್ದ ಅಸಾಮಿ ಕಬ್ಬಿಣದ ಉಪಕರಣದಲ್ಲಿ 14 ಲಕ್ಷದ ಚಿನ್ನದ ಬಿಸ್ಕೆಟ್ಸ್ ಇಟ್ಟು ತಂದಿದ್ದ. ಒಟ್ಟು ನಾಲ್ಕು ಪ್ರಕರಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸುಮಾರು 37.21 ಲಕ್ಷ ಮೌಲ್ಯದ ಚಿನ್ನವನ್ನ ಜಪ್ತಿ ಮಾಡಿದ್ದಾರೆ.