Tag: ಕಸ್ಟಡಿ

  • ‘ಕಸ್ಟಡಿ’ಯಲ್ಲಿ ಭೀಮ ಖ್ಯಾತಿಯ ನಟಿ ಪ್ರಿಯಾ

    ‘ಕಸ್ಟಡಿ’ಯಲ್ಲಿ ಭೀಮ ಖ್ಯಾತಿಯ ನಟಿ ಪ್ರಿಯಾ

    ಬೃಂದಾವನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಾಗೇಶ್ ಕುಮಾರ್ ಯು ಎಸ್ ನಿರ್ಮಾಣದ ಹಾಗೂ ಜೆ.ಜೆ.ಶ್ರೀನಿವಾಸ್ ನಿರ್ದೇಶನದ “ಕಸ್ಟಡಿ” (Custody) ಚಿತ್ರದ ಪ್ರಮುಖಪಾತ್ರದಲ್ಲಿ  “ಭೀಮ” ಚಿತ್ರದ ಗಿರಿಜಾ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಪ್ರಿಯ (Priya) ನಟಿಸುತ್ತಿದ್ದಾರೆ. ನಗರದ ಟೊರಿನೊ ಫ್ಯಾಕ್ಟರಿ ಆವರಣದಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.

    ನಮ್ಮ ಸಂಸ್ಥೆಯ ಮೂಲಕ “ಗಜಾನನ ಗ್ಯಾಂಗ್” ಸೇರಿದಂತೆ ನಾಲ್ಕು ಚಿತ್ರಗಳನ್ನು ನಿರ್ಮಿಸಿದ್ದೇನೆ. “ಕಸ್ಟಡಿ” ಐದನೇ ಚಿತ್ರ. ಸ್ನೇಹಿತ ಜೆ.ಜೆ.ಶ್ರೀನಿವಾಸ್, ಈ ಚಿತ್ರದ ಕಥೆ ಹೇಳಿದರು. ಕಥೆ ಇಷ್ಟವಾಯಿತು. ಈ ಚಿತ್ರದ ಪ್ರಮುಖಪಾತ್ರವನ್ನು “ಭೀಮ” ಖ್ಯಾತಿಯ ಪ್ರಿಯ ಅವರು ಮಾಡಿದರೆ ಚೆನ್ನಾಗಿರುತ್ತದೆ ಎಂದರು. ಪ್ರಿಯ ಅವರ ಪತಿ ಅವಿನಾಶ್ ನನ್ನ ಮಿತ್ರ. ಅವರ ಮೂಲಕ ಪ್ರಿಯ ಅವರನ್ನು ಸಂಪರ್ಕ ಮಾಡಿ ಈ ಚಿತ್ರದ ಕಥೆ ಹೇಳಲಾಯಿತು. ಕೆಲವೇ ದಿನಗಳಲ್ಲಿ ಚಿತ್ರಕ್ಕೆ ಚಾಲನೆ ನೀಡಲಾಯಿತು. ಸದ್ಯ ಚಿತ್ರೀಕರಣ ಬಿರುಸಿನಿಂದ ಸಾಗಿದೆ ಎಂದು ನಿರ್ಮಾಪಕ ನಾಗೇಶ್ ಕುಮಾರ್ ಯು ಎಸ್ ತಿಳಿಸಿದರು.

    “ಕಸ್ಟಡಿ” ಸೈಬರ್ ಕ್ರೈಮ್ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ ಎಂದು ಮಾತು ಆರಂಭಿಸಿದ ನಿರ್ದೇಶಕ ಜೆ ಜೆ.ಶ್ರೀನಿವಾಸ್, ಮಕ್ಕಳಿಂದ ವೃದ್ಧರವರೆಗೂ ಎಲ್ಲರೂ ಬಳಸುವ ಮೊಬೈಲ್ ಸುತ್ತ ಈ ಚಿತ್ರದ ಕಥೆ ನಡೆಯುತ್ತದೆ‌. ಸೈಬರ್ ಕ್ರೈಮ್ ನ ಕುರಿತಾದ ಕಥೆಗಳು ಸಾಕಷ್ಟು ಬಂದಿದೆಯಾದರೂ ಈ ಕಥೆ ಸ್ವಲ್ಪ ವಿಭಿನ್ನ. ಒಂದು ವರ್ಷದ ಹಿಂದೆ ಈ ಚಿತ್ರದ ಕಥೆ ಸಿದ್ದವಾಗಿತ್ತು. ಈ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದ ಅನ್ವೇಷಣೆಯಲ್ಲಿದ್ದಾಗ “ಭೀಮ” ಖ್ಯಾತಿಯ ಪ್ರಿಯ ಅವರು ಈ ಪಾತ್ರ ಮಾಡಬಹುದು ಅನಿಸಿತು‌. ಪ್ರಿಯ ಅವರು ಕಥೆ ಕೇಳಿ ಒಪ್ಪಿಕೊಂಡರು. ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭಿಸಲಾಯಿತು. ಈಗ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ‌. ಕಾಕ್ರೋಜ್ ಸುಧೀ ಸಹ ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ‌. ನಾನು ಸಹ ನಿರ್ದೇಶನದ ಜತೆಗೆ ನಟನಾಗೂ ಅಭಿನಯಿಸುತ್ತಿದ್ದೇನೆ ಎಂದರು.

    “ಭೀಮ” ಚಿತ್ರದ ನನ್ನ ಗಿರಿಜಾ ಪಾತ್ರಕ್ಕೆ ತಾವು ತೋರಿದ ಪ್ರೀತಿಗೆ ಧನ್ಯವಾದ. ಈ ಚಿತ್ರದಲ್ಲೂ ನಾನು ಖಡಕ್ ಪೊಲೀಸ್ ಅಧಿಕಾರಿ. ದುರ್ಗಾಪರಮೇಶ್ವರಿ ನನ್ನ ಪಾತ್ರದ ಹೆಸರು. ನಿರ್ದೇಶಕರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಒಂದೊಳ್ಳೆ ಕಥೆ ಮಾಡಿಕೊಂಡಿದ್ದಾರೆ. ನಾನು ಈ ಚಿತ್ರ ಒಪ್ಪಿಕೊಳ್ಳಲು ಪ್ರಮುಖ ಕಾರಣ ಕಥೆ ಹಾಗೂ ನಿರ್ಮಪಕ ನಾಗೇಶ್ ಕುಮಾರ್ ಅವರು ನನ್ನ ರಂಗಭೂಮಿ ದಿನಗಳಲ್ಲಿ ರಂಗ ಕಲಾವಿದರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರ ಅನ್ನದ ಋಣ ನನ್ನ ಮೇಲುದೆ. “ಭೀಮ” ನಂತರ ನಾನು ನಟಿಸುತ್ತಿರುವ ಚಿತ್ರವಿದು ಎಂದರು ನಟಿ ಪ್ರಿಯ. ಚಿತ್ರದಲ್ಲಿ ನಟಿಸುತ್ತಿರುವ ನಾಗೇಂದ್ರ ಅರಸ್, ಚಿಂಗಾರಿ ಮಹಾದೇವ್, ಮ್ಯಾಜಿಕ್ ರಮೇಶ್, ಮಧು ಕೆ.ಆರ್ ಪೇಟೆ, ಪವನ್ ಕುಮಾರ್, ಆರಾಧ್ಯ, ಕುಮಾರ್ ಶ್ರೀನಿವಾಸಮೂರ್ತಿ, ವಿನ್ಯಾ, ಅಶ್ವಿತಾ, ಆರಾಧ್ಯ, ತೇಜಸ್ವಿನಿ ಹಾಗೂ ಛಾಯಾಗ್ರಾಹಕ ಶಂಕರ್, ಸಾಹಸ ನಿರ್ದೇಶಕ ನರಸಿಂಹ “ಕಸ್ಟಡಿ” ಕುರಿತು ಮಾತನಾಡಿದರು.

  • ಕಸ್ಟಡಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆದ  ನಾಗ ಚೈತನ್ಯ: ಸ್ಟಾರ್ ಬದ್ಧತೆಗೆ ಮೆಚ್ಚಿದ ಫ್ಯಾನ್ಸ್

    ಕಸ್ಟಡಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆದ ನಾಗ ಚೈತನ್ಯ: ಸ್ಟಾರ್ ಬದ್ಧತೆಗೆ ಮೆಚ್ಚಿದ ಫ್ಯಾನ್ಸ್

    ತೆಲುಗಿನ ಹೆಸರಾಂತ ನಟ ನಾಗ ಚೈತನ್ಯ ನಟನೆಯ ಕಸ್ಟಡಿ (Custody) ಸಿನಿಮಾದ ಇಂದು ರಿಲೀಸ್ ಆಗಿದ್ದು, ಅಭಿಮಾನಿಗಳು ನಾಗ ಚೈತನ್ಯ (Nagachaitanya) ನಿರ್ವಹಿಸಿದ ಪಾತ್ರ ನೋಡಿ ಶಾಕ್ ಆಗಿದ್ದಾರೆ. ಕೋಟ್ಯಾಂತರ ಅಭಿಮಾನಿಯನ್ನು ಹೊಂದಿರುವ ಈ ನಟ, ಪೊಲೀಸ್ (Police) ಕಾನ್ಸ್ ಟೇಬಲ್ (Constable) ಪಾತ್ರ ಮಾಡಿದ್ದು ಅಭಿಮಾನಿಗಳಿಗೆ ಅಚ್ಚರಿ ಮತ್ತು ಕುತೂಹಲವನ್ನು ಮೂಡಿಸಿದೆ.

    ಸಾಮಾನ್ಯವಾಗಿ ಸ್ಟಾರ್ ನಟರು ಈ ರೀತಿಯ ಪಾತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಕಥೆಯಲ್ಲೇ ಆ ರೀತಿ ಇದ್ದರೆ, ಬದಲಾಯಿಸಲು ನೋಡುತ್ತಾರೆ. ಆದರೆ, ನಾಗ ಚೈತನ್ಯ ಇದಾವುದನ್ನೂ ಮಾಡದೇ, ನಿರ್ದೇಶಕರು ಹೆಣೆದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಾಗಾಗಿಯೇ ಕಸ್ಟಡಿ ಸಿನಿಮಾ ನೋಡಿದ ಅಭಿಮಾನಿಗಳು ನಾಗಚೈತನ್ಯಗೆ ದೊಡ್ಡ ಗೆಲುವು ಸಿಗಲಿ ಎಂದು ಶುಭ ಹಾರೈಸಿದ್ದಾರೆ. ಅಲ್ಲದೇ, ಅತ್ಯುತ್ತಮವಾಗಿ ಸಿನಿಮಾ ಮೂಡಿ ಬಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ.

    ವೆಂಕಟ್ ಪ್ರಭು ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಇಳಯರಾಜ ಹಾಗೂ ಯುವನ್ ಶಂಕರ್ ರಾಜ್ ಜಂಟಿಯಾಗಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೃತಿ ಶೆಟ್ಟಿ ನಾಯಕಿಯಾದರೆ, ಮಹತ್ವದ ಪಾತ್ರವೊಂದನ್ನು ಅರವಿಂದ್ ಸ್ವಾಮಿ ನಿಭಾಯಿಸಿದ್ದಾರೆ. ಪ್ರಿಯಾಮಣಿ, ಶರತ್ ಕುಮಾರ್ ಸೇರಿದಂತೆ ಅನುಭವಿ ಕಲಾವಿದರ ತಂಡವೇ ತಾರಾ ಬಳಗದಲ್ಲಿದೆ. ಇದನ್ನೂ ಓದಿ:ಲವರ್‌ಗಾಗಿ ಕವಿತೆ ಬರೆದ ‘ಗಟ್ಟಿಮೇಳ’ ನಟಿ ನಿಶಾ? ಹುಡುಗ ಯಾರು?

    ನಾಗ ಚೈತನ್ಯಗೆ ಈಗ ತುರ್ತಾಗಿ ಒಂದು ಗೆಲವು ಬೇಕಿದೆ. ಇತ್ತೀಚಿನ ದಿನಗಳಲ್ಲಿ ಮಾಡಿದ ಅಷ್ಟೂ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿವೆ. ಹಾಗಾಗಿ ಕಸ್ಟಡಿ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸ್ವತಃ ನಾಗ ಚೈತನ್ಯ ಅವರೇ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದಾರೆ. ರಿಲೀಸ್ ಆದ ಚಿತ್ರಕ್ಕೆ ರೆಸ್ಪಾನ್ಸ್ ಹೇಗ ಬರಬಹುದು ಎಂದು ಕಾದು ನೋಡಬೇಕಿದೆ.

  • ಕಸ್ಟಡಿಯಲ್ಲಿ ಸಹೋದರರಿಬ್ಬರಿಗೆ ಚಿತ್ರಹಿಂಸೆ – ನಾಲ್ವರು ಪೊಲೀಸರು ಟ್ರಾನ್ಸ್‌ಫರ್

    ಕಸ್ಟಡಿಯಲ್ಲಿ ಸಹೋದರರಿಬ್ಬರಿಗೆ ಚಿತ್ರಹಿಂಸೆ – ನಾಲ್ವರು ಪೊಲೀಸರು ಟ್ರಾನ್ಸ್‌ಫರ್

    ತಿರುವನಂತರಂ: ಕಸ್ಟಡಿಯಲ್ಲಿ ಸಹೋದರರಿಬ್ಬರಿಗೆ ಚಿತ್ರಹಿಂಸೆ ನೀಡಿದ ಹಿನ್ನೆಲೆ ಕೇರಳದ (Kerala) ಕಿಲ್ಲಿಕೋಳೂರು ಪೊಲೀಸ್ ಠಾಣೆಯ (Killikolur police station) ನಾಲ್ವರು ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ. ಇದೀಗ ಗಂಭೀರವಾಗಿ ಗಾಯಗೊಂಡ ಇಬ್ಬರು ಸಹೋದರರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಆಗಸ್ಟ್ 25ರಂದು ಈ ಘಟನೆ ನಡೆದಿದ್ದು, ಮಾದಕ ದ್ರವ್ಯ ದಂಧೆ ಪ್ರಕರಣದಡಿ ಬಂಧಿತನಾಗಿದ್ದ ಆರೋಪಿಗೆ ಜಾಮೀನು ನೀಡಲು ವಿಘ್ನೇಶ್ ಠಾಣೆಗೆ ಬಂದಿದ್ದನು. ಆದರೆ ಇದು ಮಾದಕ ದ್ರವ್ಯ ದಂಧೆ ಪ್ರಕರಣವಾಗಿರುವುದರಿಂದ ಆರೋಪಿಗೆ ಜಾಮೀನು ನೀಡಲು ಪೊಲೀಸರು ನಿರಾಕರಿಸಿದರು. ಇದನ್ನೂ ಓದಿ: ಭಾರತ-ಪಾಕ್ ಕ್ರಿಕೆಟ್ ಬೋರ್ಡ್‍ಗಳ ಕದನ – ಭಾರತ ಯಾರ ಮಾತನ್ನು ಕೇಳಲ್ಲ: ಅನುರಾಗ್ ಠಾಕೂರ್

    ಈ ವೇಳೆ ತನ್ನ ಕಿರಿಯ ಸಹೋದರ ವಿಘ್ನೇಶ್ ಅನ್ನು ಹುಡುಕಿಕೊಂಡು ವಿಷ್ಣು ಠಾಣೆಗೆ ಬಂದಿದ್ದಾರೆ. ನಂತರ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ಚೌಹಾಣ್ ಅವರು ಸಂಚಾರ ಉಲ್ಲಂಘನೆಯನ್ನು ಉಲ್ಲೇಖಿಸಿ ವಿಷ್ಣು ಅವರೊಂದಿಗೆ ಜಗಳವಾಡಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿದ್ದ ಚೌಹಾಣ್ ಇಬ್ಬರು ಸಹೋದರರನ್ನು ಎಳೆದೊಯ್ದು ಹಲವಾರು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ. ಘಟನೆಯಿಂದ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ತಮ್ಮ ದೈನಂದಿನ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

    ಮತ್ತೊಂದೆಡೆ ಪೊಲೀಸರು, ಮಾದಕ ದ್ರವ್ಯ ದಂಧೆಯ ಆರೋಪಿಗೆ ಜಾಮೀನು ನೀಡಲು ಆಗಮಿಸಿದ ಸಹೋದರರು ಠಾಣೆಯೊಳಗೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೈವಾರಾಧನೆ ಹಿಂದುತ್ವದ ಭಾಗವಲ್ಲವೆಂದ ಚೇತನ್ ವಿರುದ್ಧ ದೂರು ದಾಖಲು

    Live Tv
    [brid partner=56869869 player=32851 video=960834 autoplay=true]

  • ಪೊಲೀಸ್ ಕಸ್ಟಡಿಯಲ್ಲಿ ಮಹಿಳೆಗೆ ಚಿತ್ರಹಿಂಸೆ – 4 ಪೊಲೀಸ್ ಅಧಿಕಾರಿಗಳು ಅಮಾನತು

    ಪೊಲೀಸ್ ಕಸ್ಟಡಿಯಲ್ಲಿ ಮಹಿಳೆಗೆ ಚಿತ್ರಹಿಂಸೆ – 4 ಪೊಲೀಸ್ ಅಧಿಕಾರಿಗಳು ಅಮಾನತು

    ಚೆನ್ನೈ: ಕಳ್ಳತನದ ಆರೋಪದ ಮೇಲೆ ಮಹಿಳೆಯೊಬ್ಬಳಿಗೆ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದಕ್ಕೆ 4 ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

    ತಮಿಳುನಾಡಿನಲ್ಲಿ ಮತ್ತೊಂದು ಕಸ್ಟಡಿ ಚಿತ್ರಹಿಂಸೆ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಾರಿ ತೂತುಕುಡಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತನ್ನ ನೆರೆಹೊರೆಯವರ ಚಿನ್ನಾಭರಣಗಳನ್ನು ಕದ್ದಿದ್ದಾಳೆ ಎಂಬ ಶಂಕೆಯ ಮೇಲೆ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿದೆ ಎಂಬ ಆರೋಪ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಬ್ಇನ್ಸ್‌ಪೆಕ್ಟರ್ ಮುತ್ತುಮಲೈ ಅವರನ್ನು ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ನವಜೋತ್‌ ಸಿಂಗ್‌ ಸಿಧುಗೆ 1 ವರ್ಷ ಜೈಲು ಶಿಕ್ಷೆ

    ಸುಮತಿ (42) ಕಸ್ಟಡಿಯೊಳಗೆ ಚಿತ್ರಹಿಂಸೆಗೊಳಗಾದ ಮಹಿಳೆ. ತೂತುಕುಡಿ ಜಿಲ್ಲೆಯ ಮುತ್ತಯ್ಯಪುರಂ ಗ್ರಾಮದಲ್ಲಿ ಘಟನೆ ವರದಿಯಾಗಿದೆ. ಈ ಹಿಂದೆ ಪ್ರಭಾಕರನ್ (45) ತಮಗೆ ಸೇರಿದ ಚಿನ್ನಾಭರಣಗಳನ್ನು ಕಳ್ಳತನ ಮಾಡಲಾಗಿದೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆ ಮಹಿಳೆಯನ್ನು ಪೊಲೀಸ್ ಅಧಿಕಾರಿಗಳು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದರು.

    ಮೇ 4ರಂದು ಮದುವೆ ಮಂಟಪದಲ್ಲಿರುವ ವಧುವಿನ ಕೊಠಡಿಯಲ್ಲಿದ್ದ 4ರಿಂದ 5 ಕೆಜಿ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಮೇ 7ರಂದು ಸುಮತಿ ಅವರನ್ನು ವಿಚಾರಣೆಗೆ ಕರೆದೊಯ್ದಾಗ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿತ್ತು. ಇದನ್ನೂ ಓದಿ: ಶಿವಲಿಂಗದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ AIMIM ನಾಯಕ ಅರೆಸ್ಟ್

    ಮಹಿಳೆಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಮುತ್ತಯ್ಯಪುರಂ ಪೊಲೀಸ್ ಅಧಿಕಾರಿಗಳು, ಪೊಲೀಸ್ ಠಾಣೆಯಲ್ಲಿ ಮಹಿಳೆಗೆ ಚಿತ್ರಹಿಂಸೆ ನೀಡಿದ್ದಾರೆ. ನಂತರ ಸುಮತಿ ತೂತುಕುಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

    ಘಟನೆಯ ನಂತರ ಸುಮತಿ ತೂತುಕುಡಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ), ಬಾಲಾಜಿ ಸರವಣನ್ ಅವರಿಗೆ ಅಧಿಕೃತ ದೂರು ದಾಖಲಿಸಿದ್ದಾರೆ. ವಿಚಾರಣೆಯ ನಂತರ, ಸಂತ್ರಸ್ತೆ ಸುಮತಿಯನ್ನು ಎಫ್‍ಐಆರ್ ಅಥವಾ ಔಪಚಾರಿಕ ದೂರು ಇಲ್ಲದೆ ಠಾಣೆಯಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

    ದೂರಿನ ಮೇರೆಗೆ ಎಸ್‍ಪಿ ತಕ್ಷಣ ಕ್ರಮ ಕೈಗೊಂಡು ಮೂವರು ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ಮರ್ಸಿನಾ, ಕಲ್ಪನಾ ಮತ್ತು ಉಮಾ ಮಹೇಶ್ವರಿ. ಮತ್ತೊಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದ್ದು, (ಎಸ್ಪಿ) ಮುತ್ತುಮಲೈ ಅವರನ್ನು ಅಮಾನತುಗೊಳಿಸಿದ್ದಾರೆ.

  • ಹುಬ್ಬಳ್ಳಿ ಗಲಭೆ ಪ್ರಕರಣ – ಮೌಲ್ವಿ ವಾಸೀಂ ಪಠಾಣ್ ಇಂದು ಕೋರ್ಟ್‍ಗೆ

    ಹುಬ್ಬಳ್ಳಿ ಗಲಭೆ ಪ್ರಕರಣ – ಮೌಲ್ವಿ ವಾಸೀಂ ಪಠಾಣ್ ಇಂದು ಕೋರ್ಟ್‍ಗೆ

    ಹುಬ್ಬಳ್ಳಿ: ನಗರದ ಗಲಭೆ ಪ್ರಕರಣದ ಮಾಸ್ಟರ್ ಮೈಂಡ್ ಮೌಲ್ವಿ ವಾಸೀಂ ಪಠಾಣ್‍ನನ್ನು ಇಂದು ಪೊಲೀಸರು ಕೋರ್ಟ್‍ಗೆ ಹಾಜರುಪಡಿಸಲಿದ್ದಾರೆ.

    HUBBALLI_ MOULVI 3

    ಮೌಲ್ವಿಯ ಪೊಲೀಸ್ ಕಸ್ಟಡಿ ಇಂದಿಗೆ (ಬುಧವಾರ) ಅಂತ್ಯವಾದ ಹಿನ್ನೆಲೆ ಆತನನ್ನು ಪೊಲೀಸರು ಹುಬ್ಬಳ್ಳಿಯ 4ನೇ ಹೆಚ್ಚುವರಿ ನ್ಯಾಯಾಲಕ್ಕೆ ಹಾಜರುಪಡಿಸಲಿದ್ದಾರೆ. ಖಾಕಿ ಪಡೆಯು ಆತನನ್ನ 11 ಗಂಟೆಗೆ ಕೋರ್ಟ್‍ಗೆ ಕರೆತರಲಿದೆ. ಈಚೆಗೆ ಹಳೇ ಹುಬ್ಬಳ್ಳಿ ಪೊಲೀಸರು ಏ.21ರಂದು ಈತನನ್ನು ಕೋರ್ಟ್‍ಗೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಲಯವು ವಿಚಾರಣೆಗಾಗಿ 5 ದಿನ ಪೊಲೀಸ್ ಕಸ್ಟಡಿಗೆ ನೀಡಿತ್ತು. ಇದನ್ನೂ ಓದಿ: ಪತ್ನಿ ಸಂಬಳ ನೀಡದಿದ್ದಕ್ಕೆ ಶಿಕ್ಷಣ ಇಲಾಖೆಯ ಮಹಿಳಾ ಅಧಿಕಾರಿ ಮೇಲೆ ಪತಿಯಿಂದ ಹಲ್ಲೆ

    HUBBALLI WASIM ARREST

    ಪೊಲೀಸರು ವಾಸೀಂ ಮತ್ತು ಆತನ ಸಹಚರರನ್ನೂ ಮತ್ತೆ 5 ದಿನ ಕಸ್ಟಡಿಗೆ ಕೇಳಲಿದ್ದಾರೆ. ಆರೋಪಿ ವಾಸೀಂ ಪಠಾಣ್, ಈ ಹಿಂದೆ ಹುಬ್ಬಳ್ಳಿ ಗಲಭೆಗೆ ಸಂಬಂಧಪಟ್ಟಂತೆ ಪ್ರಚೋದನಾಕರಿ ವೀಡಿಯೋ ರಿಲೀಸ್ ಮಾಡಿದ ಕೆಲವೇ ಗಂಟೆಗಳಲ್ಲಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದ. ವಾಸೀಂ ವೀಡಿಯೋ ರಿಲೀಸ್ ಮಾಡುತ್ತಿದ್ದಂತೆ ಹುಬ್ಬಳ್ಳಿ ಕೇಶ್ವಾಪೂರ ಠಾಣೆ ಇನ್ಸ್‌ಪೆಕ್ಟರ್ ಜಗದೀಶ್ ಹಂಚಿನಾಳ ತಂಡವು ಕಾರ್ಯಾಚರಣೆ ನಡೆಸಿ ಮುಂಬೈನಲ್ಲಿ ಆರೋಪಿಯನ್ನು ಬಂಧಿಸಿ ಕರೆತರಲಾಗಿತ್ತು. ಇದನ್ನೂ ಓದಿ: ರಥೋತ್ಸವದಲ್ಲಿ ವಿದ್ಯುತ್ ತಗುಲಿ ಇಬ್ಬರು ಮಕ್ಕಳು ಸೇರಿ 11 ಮಂದಿ ದುರ್ಮರಣ

  • ಸರ್ಕಾರಿ ಕಸ್ಟಡಿಯಿಂದ ಮೂವರು ಬಾಂಗ್ಲಾದೇಶದ ಮಹಿಳೆಯರು ಎಸ್ಕೇಪ್

    ಸರ್ಕಾರಿ ಕಸ್ಟಡಿಯಿಂದ ಮೂವರು ಬಾಂಗ್ಲಾದೇಶದ ಮಹಿಳೆಯರು ಎಸ್ಕೇಪ್

    ಅಗರ್ತಲಾ: ತ್ರಿಪುರಾಕ್ಕೆ ಪ್ರವೇಶಿಸಿದ ಮೂವರು ಬಾಂಗ್ಲಾದೇಶದ ಮಹಿಳೆಯರನ್ನು 2020ರ ಮಾರ್ಚ್‍ನಲ್ಲಿ ಬಂಧಿಸಲಾಗಿತ್ತು. ಆದರೆ ಭಾನುವಾರ ಈ ಮೂವರು ಮಹಿಳೆಯರು ಉತ್ತರ ತ್ರಿಪುರಾದ ಯುನೊಕೋಟಿ ಜಿಲ್ಲಾಡಳಿತದ ಕಸ್ಟಡಿಯಿಂದ ನಾಪತ್ತೆಯಾಗಿದ್ದಾರೆ.

    ಬಾಂಗ್ಲಾದೇಶದ ಹಬಿಗಂಜ್ ಜಿಲ್ಲೆಯ ನಬಿಗಂಜ್ ನಿವಾಸಿಗಳಾದ ಇಸ್ತಮುರ್ ಅಲಿ ಮತ್ತು ಲಾಲ್ಮತಿ ರಾಣಿ ಸರ್ಕಾರ್, ಜನತಾ ರಾಣಿ ಸರ್ಕಾರ್ ಮತ್ತು ಖೇಲಾ ರಾಣಿ ಸರ್ಕಾರ್ ಅವರನ್ನು ಮಾರ್ಚ್ 2020ರಲ್ಲಿ ತ್ರಿಪುರಾಕ್ಕೆ ಪ್ರವೇಶಿಸಿದ್ದಕ್ಕಾಗಿ ಕೈಲಾಶಹರ್‍ನ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಶ್ರೀಕಾಕುಳಂನ ರೈಲು ಅಪಘಾತಕ್ಕೆ ಐವರು ಬಲಿ

    crime

    ಮೂವರು ಮಹಿಳೆಯರು ಯಾವುದೇ ಪಾಸ್‍ಪೋರ್ಟ್ ಇಲ್ಲದೇ ನೆರೆಯ ಅಸ್ಸಾಂಗೆ ಹೋಗಲು ಯತ್ನಿಸಿದ್ದರು. ಹಾಗಾಗಿ ಮೂವರನ್ನು ಬಂಧಿಸಲಾಗಿತ್ತು. ಏಳು ತಿಂಗಳ ಹಿಂದೆ ಅವರ ಜೈಲು ಶಿಕ್ಷೆ ಮುಗಿದ ನಂತರ, ಎಲ್ಲಾ ನಾಲ್ವರು ಬಾಂಗ್ಲಾದೇಶಿಯರನ್ನು ಯುನೋಕೋಟಿ ಜಿಲ್ಲಾಡಳಿತದ ವಶದಲ್ಲಿದ್ದರು. ಭಾನುವಾರ ಅವರನ್ನು ಅವರ ದೇಶಕ್ಕೆ ವಾಪಸ್ ಕಳುಹಿಸಲು ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಅಷ್ಟರಲ್ಲಿ ಕಸ್ಟಡಿಯಿಂದ ಕಾಲ್ಕೆತ್ತಿದ್ದಾರೆ. ಇದೀಗ ಪರಾರಿಯಾಗಿರುವ ಮೂವರು ವಿದೇಶಿ ಮಹಿಳೆಯರಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಅಗರ್ತಲಾದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಠಾಣೆಯಲ್ಲೇ ಕರ್ತವ್ಯನಿರತ ಹೆಡ್‌ ಕಾನ್ಸ್‌ಟೇಬಲ್‌ ಸಾವು

  • ಪಿಸ್ತೂಲ್ ಕಸಿದುಕೊಂಡು ಪೊಲೀಸರ ಮೇಲೆ ದಾಳಿ ಮಾಡಿದ ಆರೋಪಿ..!

    ಪಿಸ್ತೂಲ್ ಕಸಿದುಕೊಂಡು ಪೊಲೀಸರ ಮೇಲೆ ದಾಳಿ ಮಾಡಿದ ಆರೋಪಿ..!

    ನವದೆಹಲಿ: ಕಸ್ಟಡಿಯಲ್ಲಿದ್ದ ದುಷ್ಕರ್ಮಿ ಪೊಲೀಸರ ಬಳಿ ಇದ್ದ ಪಿಸ್ತೂಲ್ ಕಸಿದುಕೊಂಡಿದ್ದು, ಅವರ ಮೇಲೆಯೇ ಗುಂಡು ಹಾರಿಸಿ ಪರಾರಿಯಾಗಲೂ ಯತ್ನಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಪೊಲೀಸ್ ಕಸ್ಟಡಿಯಲ್ಲಿದ್ದ ಕುಖ್ಯಾತ ಸ್ನ್ಯಾಚರ್, ಕಾನ್‍ಸ್ಟೆಬಲ್‍ನ ಪಿಸ್ತೂಲ್ ಕಸಿದುಕೊಂಡು ಅಲ್ಲಿದ್ದ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾನೆ. ಈ ವೇಳೆ ಒಬ್ಬ ಪೊಲೀಸ್ ಪೇದೆಗೆ ಗುಂಡು ತಗುಲಿದೆ. ಗುಂಡು ಹಾರಿಸಿದ ತಕ್ಷಣ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರು ಕೂಡ ಆರೋಪಿ ವಿರುದ್ಧ ಪ್ರತಿದಾಳಿ ನಡೆಸಿ ಗುಂಡು ಹಾರಿಸಿದ್ದಾರೆ. ಬಳಿಕ ಆರೋಪಿಯ ಕಾಲಿಗೆ ಗುಂಡು ತಗುಲಿದ್ದು, ತಕ್ಷಣ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಬೆಂಬಲಿಸಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ!

    ಗಾಯಗೊಂಡಿದ್ದ ಪೇದೆ ಹಾಗೂ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯನ್ನು ಫೈಝಲ್ ಎಂದು ಹೆಸರಿಸಲಾಗಿದ್ದು, ಈತ ಈಗಾಗಲೇ ಹಲವು ಸರಗಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಬಂಧಿತ ಫೈಸಲ್‍ನನ್ನು ಪೊಲೀಸರು ಉತ್ತರ ದೆಹಲಿಯ ಸೆಕ್ಟರ್ ಎ 5 ರಲ್ಲಿ ಆತನ ಇತರ ಸಹಚರರು ಮತ್ತು ಲೂಟಿ ಮಾಡಿದ ಮೊಬೈಲ್ ಫೋನ್ ಹುಡುಕಲು ಕರೆದುಕೊಂಡು ಹೋಗಿದ್ದಾರೆ.

    ಅವಕಾಶ ನೋಡಿ ಪಿಸ್ತೂಲ್ ಕಿತ್ತುಕೊಂಡ!
    ಅವಕಾಶ ನೋಡಿದ ಫೈಝಲ್ ಏಕಾಏಕಿ ಸಿಪತಿ ವಿಕ್ರಮ್ ಬಳಿ ಇದ್ದ ಪಿಸ್ತೂಲ್ ಕಸಿದುಕೊಂಡಿದ್ದು, ಗುಂಡು ಹಾರಿಸಿ ಓಡಿ ಹೋಗಿದ್ದಾನೆ. ಈ ಹಿನ್ನೆಲೆ ಪೇದೆ ಕೈಗೆ ಗುಂಡು ತಗುಲಿದೆ. ಈ ವೇಳೆ ಪೊಲೀಸರು ಓಡಿ ಹೋಗದೆ ನಿಲ್ಲುವಂತೆ ಎಷ್ಟೇ ಹೇಳಿದರೂ, ಆತ ಹಿಂದೆ ಗುಂಡು ಹಾರಿಸುತ್ತಾ ಓಡಿ ಹೋಗುತ್ತಿದ್ದ. ಪರಿಣಾಮ ಪೊಲೀಸರು ಆತನ ಮೇಲೆ ಪ್ರತಿದಾಳಿ ಮಾಡಿದ್ದಾರೆ.

    ಫೈಝಲ್ ಕಾಲಿಗೆ ಗುಂಡು!
    ಗುಂಡು ಫೈಝಲ್‍ನ ಎಡಗಾಲಿಗೆ ತಗುಲಿದ್ದು, ನಂತರ ಅವನು ಅಲ್ಲಿಯೇ ಬಿದ್ದನು. ಪೊಲೀಸರು ಆತನನ್ನು ಸದೆಬಡಿದು ಪಿಸ್ತೂಲ್ ಕಸಿದುಕೊಂಡಿದ್ದಾರೆ. ಇದಾದ ನಂತರ ಕಾನ್‍ಸ್ಟೆಬಲ್ ಮತ್ತು ಆರೋಪಿ ಇಬ್ಬರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಇದನ್ನೂ ಓದಿ: ಬಿಜೆಪಿ ಶಾಸಕನಿಂದ 25 ವರ್ಷದ ಯುವತಿ ಕಿಡ್ನಾಪ್ – ಕೇಸ್ ದಾಖಲು

    POLICE

    ಫೈಸಲ್ ಸ್ಪೋರ್ಟ್ಸ್ ಬೈಕ್ ಓಡಿಸುವುದರಲ್ಲಿ ಪರಿಣತಿ!
    ಫೈಝಲ್ ಬಳಿ ಸ್ಪೋಟ್ರ್ಸ್ ಬೈಕ್ ಇದ್ದು, ಅದನ್ನು ಚಲಾಯಿಸುವುದರಲ್ಲಿ ಆತ ನಿಪುಣನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸರಗಳ್ಳತನದಂತಹ ಕೃತ್ಯ ನಡೆಸಿ ಬೈಕ್ ಚಲಾಯಿಸಿಕೊಂಡು ವೇಗವಾಗಿ ಓಡಿಸುತ್ತಾನೆ. ಅತಿವೇಗದಲ್ಲಿ ಟ್ರಾಫಿಕ್ ನಲ್ಲಿ ಬೈಕ್ ಓಡಿಸುವುದರಿಂದ ಆರೋಪಿ ಜನ ಮತ್ತು ಪೊಲೀಸರ ಕೈಗೆ ಸಿಕ್ಕಿಬೀಳುವುದಿಲ್ಲ. ಫೈಝಲ್ ದಿನಕ್ಕೆ 7 ರಿಂದ 8 ಸರಗಳ್ಳತನ ಅಥವಾ ದರೋಡೆ ಮಾಡುತ್ತಾನೆ ಎಂದು ಪೊಲೀಸರು ವಿವರಿಸಿದ್ದಾರೆ.

  • ಸಿಬಿಐ ಕಸ್ಟಡಿಯಲ್ಲಿದ್ದ 45 ಕೋಟಿ ಬೆಲೆಯ ಚಿನ್ನ ಮಂಗ ಮಾಯ

    ಸಿಬಿಐ ಕಸ್ಟಡಿಯಲ್ಲಿದ್ದ 45 ಕೋಟಿ ಬೆಲೆಯ ಚಿನ್ನ ಮಂಗ ಮಾಯ

    – 72 ಕೀಲಿಗಳನ್ನು ಕೋರ್ಟ್‍ಗೆ ನೀಡಿದ ಸಿಬಿಐ
    – 103 ಕೆ.ಜಿ.ಚಿನ್ನ ನಾಪತ್ತೆ

    ಚೆನ್ನೈ: ಕುತೂಹಲಕಾರಿ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದ್ದು, ಸಿಬಿಐ ಕಸ್ಟಡಿಯಲ್ಲಿದ್ದ ಬರೋಬ್ಬರಿ 45 ಕೋಟಿ ರೂ. ಬೆಲೆ ಬಾಳುವ 103 ಕೆ.ಜಿ. ಚಿನ್ನ ಕಾಣೆಯಾಗಿದೆ. ಸಿಬಿಐ ದಾಳಿ ನಡೆಸಿದ ವೇಳೆ ವಶಪಡಿಸಿಕೊಳ್ಳಲಾದ ಚಿನ್ನ ಇದಾಗಿದ್ದು, ನಾಪತ್ತೆಯಾಗಿದೆ.

    ಕಾಣೆಯಾಗಿರುವ ಚಿನ್ನದ ಬಗ್ಗೆ ತನಿಖೆ ನಡೆಸುವಂತೆ ಮದ್ರಾಸ್ ಹೈ ಕೋರ್ಟ್ ಆದೇಶ ನೀಡಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ತನಿಖೆ ನಡೆಸುವಂತೆ ಸಿಬಿ-ಸಿಐಡಿಗೆ ವಹಿಸಲಾಗಿದೆ. 2012ರಲ್ಲಿ ಚೆನ್ನೈನ ಸುರಾನಾ ಕಾರ್ಪೋರೇಷನ್ ಲಿಮಿಟೆಡ್ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದಾಗ 400.5 ಕೆ.ಜಿ. ಬೆಳ್ಳಿ ಹಾಗೂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿತ್ತು. ಇದರಲ್ಲಿ 103 ಕೆ.ಜಿ.ಚಿನ್ನವನ್ನು ಎಗರಿಸಲಾಗಿದೆ.

    ದಾಳಿ ಬಳಿಕ ವಶಪಡಿಸಿಕೊಳ್ಳಲಾದ ಚಿನ್ನಾಭರಣವನ್ನು ಸಿಬಿಐ ತನ್ನ ವಶದಲ್ಲಿ ಸುರಾನಾ ಕಾರ್ಪ್‍ನ ಸುರಕ್ಷಿತ ಕೊಠಡಿಗಳಲ್ಲಿ ಇಟ್ಟುಕೊಂಡಿತ್ತು. ಅಲ್ಲದೆ ಸಿಬಿಐ ಪ್ರಕರಣಗಳಿಗಾಗಿ ಇರುವ ಚೆನ್ನೈನ ಪ್ರಧಾನ ವಿಶೇಷ ನ್ಯಾಯಾಲಯಕ್ಕೆ 72 ಕೀಲಿಗಳನ್ನು ನೀಡಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ.

    ನ್ಯಾಯಾಲಯಕ್ಕೆ ನೀಡಿದ ವಿವರಣೆಯಲ್ಲಿ ಸಿಬಿಐ ಆಶ್ಚರ್ಯಕರ ಪ್ರತಿಕ್ರಿಯೆ ನೀಡಿದ್ದು, ವಶಪಡಿಸಿಕೊಳ್ಳುವ ಸಮಯದಲ್ಲಿ ಚಿನ್ನವನ್ನು ಒಟ್ಟಿಗೆ ತೂಕ ಮಾಡಲಾಗಿದೆ. ಇದನ್ನು ಲಿಕ್ವಿಡೇಟರ್‍ಗೆ ಹಸ್ತಾಂತರಿಸುವಾಗ ಚಿನ್ನವನ್ನು ಪ್ರತ್ಯೇಕವಾಗಿ ತೂಗಿಸಲಾಗುತ್ತದೆ. ವ್ಯತ್ಯಾಸಕ್ಕೆ ಇದೂ ಸಹ ಕಾರಣವಾಗಿದೆ ಎಂದು ತಿಳಿಸಿದೆ. ಸುರಾನಾ ಹಾಗೂ ಎಸ್‍ಬಿಐ ನಡುವಿನ ಸಾಲ ತೀರಿಸಲು ಲಿಕ್ವಿಡೇಟರ್ ನೇಮಿಸಲಾಗಿದೆ.

    ಸಿಬಿಐ ವಾದವನ್ನು ಮದ್ರಾಸ್ ಹೈ ಕೋರ್ಟ್ ತಿರಸ್ಕರಿಸಿದ್ದು, ಎಸ್‍ಪಿ ಅಧಿಕಾರಿಯೊಂದಿಗೆ ಸಿಬಿ-ಸಿಐಡಿ ಅಧಿಕಾರಿಗಳಿಂದ ತನಿಖೆ ನಡೆಸಲು ಸೂಚಿಸಿದೆ. 6 ತಿಂಗಳೊಳಗೆ ತನಿಖೆ ಮುಗಿಸುವಂತೆ ನ್ಯಾಯಾಲಯ ಸಿಬಿ-ಸಿಐಡಿಗೆ ಸೂಚಿಸಿದೆ.

    ಪ್ರಕರಣವನ್ನು ಸ್ಥಳೀಯ ಪೊಲೀಸರಿಗೆ ವಹಿಸಿದರೆ ನಮ್ಮ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ಇದಕ್ಕೆ ಹೈ ಕೋರ್ಟ್ ಪ್ರತಿಕ್ರಿಯಿಸಿ, ಕಾನೂನು ಅಂತಹ ಅನುಮಾನವನ್ನು ಅನುಮತಿಸುವುದಿಲ್ಲ. ಎಲ್ಲ ಪೊಲೀಸರನ್ನು ನಂಬಬೇಕು. ಸಿಬಿಐಗೆ ವಿಶೇಷ ಕೊಂಬುಗಳಿವೆ, ಸ್ಥಳೀಯ ಪೊಲೀಸರಿಗೆ ಬಾಲ ಮಾತ್ರ ಇದೆಯೇ ಎಂದು ಖಾರವಾಗಿ ಪ್ರಶ್ನಿಸಿದೆ.

  • ಮಾಜಿ ಸಚಿವ ರೇಣುಕಾಚಾರ್ಯ ಪೊಲೀಸ್ ಕಸ್ಟಡಿಗೆ

    ಮಾಜಿ ಸಚಿವ ರೇಣುಕಾಚಾರ್ಯ ಪೊಲೀಸ್ ಕಸ್ಟಡಿಗೆ

    ಬೆಂಗಳೂರು: ಮಾಜಿ ಸಚಿವ ರೇಣುಕಾಚಾರ್ಯ ಅವರನ್ನು ಜನಪ್ರತಿನಿಧಿಗಳ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ.

    ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಹಲವು ಬಾರಿ ರೇಣುಕಾಚಾರ್ಯ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಜಾರಿಯಾಗಿದ್ದರೂ ರೇಣುಕಾಚಾರ್ಯ ವಿಚಾರಣೆಗೆ ಗೈರು ಹಾಜರಿ ಹಾಕುತ್ತಿದ್ದರು.

    ಇಂದು ಬೆಳಗ್ಗೆ ರೇಣುಕಾಚಾರ್ಯ ತಮ್ಮ ಮೇಲಿರುವ ಜಾಮೀನು ರಹಿತ ವಾರೆಂಟ್ (ಎನ್‍ಬಿಡಬ್ಲು) ರೀಕಾಲ್ ಮಾಡಿಸಲು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ನ್ಯಾಯಾಧೀಶರು ಪದೇ ಪದೇ ವಿಚಾರಣೆಗೆ ಗೈರು ಆಗಿದ್ದಕ್ಕೆ ಇಂದು ಸಂಜೆಯವರೆಗೆ ರೇಣುಕಾಚಾರ್ಯ ಕೋರ್ಟ್‍ನಲ್ಲೇ ಇರಬೇಕು ನ್ಯಾ. ರಾಮಚಂದ್ರ ಡಿ. ಹುದ್ದಾರ್ ಆದೇಶಿಸಿದ್ದಾರೆ.

    2016 ರಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರೇಣುಕಾಚಾರ್ಯ ವಿರುದ್ಧ ಕೇಸ್ ದಾಖಲಾಗಿತ್ತು.