Tag: ಕಸ್ಕರ್

  • ಪಾತಕಿ ದಾವೂದ್ ಸಹೋದರನಿಗೆ ಜೈಲಿನಲ್ಲಿ ಸಕಲ ಸೌಲಭ್ಯ ಒದಗಿಸಿದ್ದ ಐವರು ಪೊಲೀಸರು ಸಸ್ಪೆಂಡ್

    ಪಾತಕಿ ದಾವೂದ್ ಸಹೋದರನಿಗೆ ಜೈಲಿನಲ್ಲಿ ಸಕಲ ಸೌಲಭ್ಯ ಒದಗಿಸಿದ್ದ ಐವರು ಪೊಲೀಸರು ಸಸ್ಪೆಂಡ್

    ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿ ಸಹೋದರ ಇಕ್ಬಾಲ್ ಕಸ್ಕರ್ ಗೆ ಜೈಲಿನಲ್ಲಿ ವಿಶೇಷ ಉಪಚಾರ ನೀಡುತ್ತಿದ್ದ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ 5 ಪೊಲೀಸರನ್ನು ಅಮಾನತು ಮಾಡಲಾಗಿದೆ.

    ಸುಲಿಗೆ ಪ್ರಕರಣದಲ್ಲಿ ಕಸ್ಕರ್ ನನ್ನು ಬಂಧಿಸಿ, ಥಾಣೆ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಕಸ್ಕರ್ ಖಾಸಗಿ ಕಾರಿನಲ್ಲಿ ಕುಳಿತು ತೆರಳುತ್ತಿರುವ ಹಾಗೂ ಜೈಲಿನಲ್ಲಿ ಬಿರಿಯಾನಿ ತಿನ್ನುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಈ ವಿಡಿಯೋ ನೋಡಿದ ಥಾಣೆ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್, ಜೈಲಿನ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಐವರು ಪೊಲೀಸರನ್ನು ಅಮಾನತುಗೊಳಿಸಿ, ಪ್ರಕರಣದ ತನಿಖೆಗೆ ಆದೇಶ ಹೊರಡಿಸಿದ್ದಾರೆ.

    ಕಸ್ಕರ್ ಜೈಲು ಸೇರಿದ್ದೇಕೆ?:
    ದಾವೂದ್ ಇಬ್ರಾಹಿಂ ಸಹೋದರ ಕಸ್ಕರ್ 2013ರಿಂದ ನನ್ನ ಬಳಿ ನಿರಂತವಾಗಿ ಹಣ ವಸೂಲಿ ಮಾಡುತ್ತಿದ್ದಾನೆ ಎಂದು ಮುಂಬೈನ ಕಟ್ಟಡ ನಿರ್ಮಾಣ ಮಾಡುವ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು 2017ರ ಸೆಪ್ಟೆಂಬರ್ 18 ರಂದು ದು ಕಸ್ಕರ್ ನನ್ನು ಥಾಣೆಯಲ್ಲಿ ಬಂಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv