Tag: ಕಸಿ

  • ತೋಳಿನಲ್ಲಿ ಮೂಗು ಬೆಳೆಸಿ ಮಹಿಳೆ ಮುಖಕ್ಕೆ ಯಶಸ್ವಿ ಕಸಿ!

    ತೋಳಿನಲ್ಲಿ ಮೂಗು ಬೆಳೆಸಿ ಮಹಿಳೆ ಮುಖಕ್ಕೆ ಯಶಸ್ವಿ ಕಸಿ!

    ಪ್ಯಾರಿಸ್: ಕ್ಯಾನ್ಸರ್ ರೋಗದಿಂದ ಮೂಗನ್ನೇ ಕಳೆದುಕೊಂಡ ಮಹಿಳೆಗೆ (Woman) ತನ್ನದೇ ತೋಳಿನಲ್ಲಿ ಮೂಗನ್ನು ಬೆಳೆಸಿ, ಅದನ್ನು ಮುಖಕ್ಕೆ ಯಶಸ್ವಿಯಾಗಿ ಕಸಿ (Transplant) ಮಾಡಿರುವ ಹೊಸ ರೀತಿಯ ಪ್ರಯತ್ನವನ್ನು ಫ್ರಾನ್ಸ್‌ನ (France) ಶಸ್ತ್ರಚಿಕಿತ್ಸಕರು ಮಾಡಿದ್ದಾರೆ. ಈ ಮೂಲಕ ವೈದ್ಯಕೀಯ ಲೋಕದಲ್ಲಿ ಹೊಸ ಹೆಜ್ಜೆಯನ್ನಿರಿಸಿದ್ದಾರೆ.

    ಟೌಲೌಸ್‌ನ ಮಹಿಳೆ 2013 ರಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ರೇಡಿಯೊಥೆರಪಿ ಮತ್ತು ಕೀಮೋಥೆರಪಿ ಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದಾಗಿ ಅವರು ತಮ್ಮ ಮೂಗಿನ ಒಂದು ಭಾಗವನ್ನೇ ಕಳೆದುಕೊಂಡಿದ್ದರು. ಇದಾದ ಬಳಿಕ ಹಲವು ವರ್ಷಗಳ ವರೆಗೆ ಮುಖದಲ್ಲಿ ಮೂಗಿಲ್ಲದೇ ಕಳೆದ ಮಹಿಳೆಗೆ ತನ್ನದೇ ದೇಹದಲ್ಲಿ ಬೆಳೆದ ಮೂಗನ್ನು ಶಸ್ತ್ರಚಿಕಿತ್ಸಕರು ಕಸಿ ಮಾಡಿದ್ದಾರೆ. ಇದನ್ನೂ ಓದಿ: ಕಬ್ಬನ್ ಪಾರ್ಕ್‍ನಲ್ಲಿ ಇನ್ಮುಂದೆ ಹೊಸ ರೂಲ್ಸ್ – ವಾಹನ ಸವಾರರು ಹಾರ್ನ್ ಹೊಡೆದರೆ ದಂಡ

    ಮೂಲಗಳ ಪ್ರಕಾರ ಮೊದಲಿಗೆ 3ಡಿ ಮುದ್ರಿತ ಜೈವಿಕ ವಸ್ತುಗಳಿಂದ ತಯಾರಿಸಿದ ಮೂಗನ್ನು ಮಹಿಳೆಯ ತೋಳಿಗೆ ಅಳವಡಿಸಲಾಯಿತು. ನಂತರ ಅದು ಮಹಿಳೆಯ ಚರ್ಮದಿಂದ ಸುತ್ತುವರಿಯುವಂತೆ ಮಾಡಲಾಯಿತು. ಶಸ್ತ್ರಚಿಕಿತ್ಸಕರು ಮಹಿಳೆಯ ತೋಳಿನಲ್ಲಿ ಮೂಗನ್ನು ಬೆಳೆಯಲು 2 ತಿಂಗಳು ನೀಡಿದರು. ಬಳಿಕ ಆ ಮೂಗನ್ನು ಮಹಿಳೆಯ ಮುಖಕ್ಕೆ ಕಸಿ ಮಾಡಿದ್ದಾರೆ.

    ಈ ಹೊಸ ಪ್ರಯತ್ನದ ಬಗ್ಗೆ ಟೌಲೌಸ್ ಯೂನಿವರ್ಸಿಟಿ ಹಾಸ್ಪಿಟಲ್ (ಸಿಹೆಚ್‌ಯು) ಫೇಸ್‌ಬುಕ್‌ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದೆ. ಮಹಿಳೆಯ ತೋಳಿನಲ್ಲಿ ಮೂಗು ಬೆಳೆದಿರುವ ಫೋಟೋವನ್ನು ಹಂಚಿಕೊಳ್ಳಲಾಗಿದ್ದು, ಅದನ್ನು ಮಹಿಳೆಯ ಮುಖಕ್ಕೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಾರಿಗೆ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಮುತ್ತಿಗೆ

    Live Tv
    [brid partner=56869869 player=32851 video=960834 autoplay=true]

  • ಜಯನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಮೊದಲ ಆಟೋಲೋಗಸ್ ಕಾರ್ಟಿಲೆಜ್ ಕಸಿ ಶಸ್ತ್ರಚಿಕಿತ್ಸೆ

    ಜಯನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಮೊದಲ ಆಟೋಲೋಗಸ್ ಕಾರ್ಟಿಲೆಜ್ ಕಸಿ ಶಸ್ತ್ರಚಿಕಿತ್ಸೆ

    ಬೆಂಗಳೂರು: ಫುಟ್‌ಬಾಲ್ ಆಟದಲ್ಲಿ ಪಾದದ ಕಾರ್ಟಿಲೆಜ್‌ಗೆ ಹಾನಿಮಾಡಿಕೊಂಡಿದ್ದ ಕ್ರೀಡಾಪಟುವಿಗೆ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಅತ್ಯಾಧುನಿಕ ಆಟೋಲೋಗಸ್ ಕಾರ್ಟಿಲೆಜ್ ಕಸಿ ಶಸ್ತ್ರಚಿಕಿತ್ಸೆಯನ್ನು ಜಯನಗರದ ಯುನೈಟೆಡ್ ಆಸ್ಪತ್ರೆಯ ವೈದ್ಯರು ನೆರವೇರಿಸಿದ್ದಾರೆ.

    ರಾಜ್ಯದಲ್ಲೆ ಪ್ರಪ್ರಥಮ ಬಾರಿಗೆ ನಡೆಸಿದ ಈ ಅತ್ಯಾಧುನಿಕ ತಂತ್ರಜ್ಞಾನದ ಶಸ್ತ್ರಚಿಕಿತ್ಸೆಯ ಬಗ್ಗೆ ಆಸ್ಪತ್ರೆಯ ವೈದ್ಯರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

    ಇತ್ತೀಚಿಗೆ ಫುಟ್‌ಬಾಲ್ ಆಟಗಾರ ಅಜಯ್ ಪಂದ್ಯವೊಂದರಲ್ಲಿ ತನ್ನ ಪಾದಕ್ಕೆ ಗಾಯ ಮಾಡಿಕೊಂಡಿದ್ದರು. ಕೀಲುಗಳ ಕಾರ್ಟಿಲೆಜ್ ಸಮಸ್ಯೆಯನ್ನು ಸಾಮಾನ್ಯವಾಗಿ ಯಾವುದೇ ಶಸ್ತ್ರಚಿಕಿತ್ಸೆಗಳಿಲ್ಲದೆ ನಿವಾರಿಸಲಾಗುತ್ತದೆ. ದೀರ್ಘಕಾಲದ ವಿಶ್ರಾಂತಿ ತೆಗೆದುಕೊಳ್ಳುವುದು ಸಾಮಾನ್ಯವಾಗಿ ಭಾರತದಲ್ಲಿ ರೂಢಿಯಲ್ಲಿದೆ. ಆದರೆ ಇದು ಕ್ರೀಡಾಪಟುಗಳು ತಮ್ಮ ಚಟುವಟಿಕೆಗಳಲ್ಲಿ ಮುಂದುವರಿಯುವುದನ್ನು ತಡೆಯುತ್ತದೆ ಹಾಗೂ ನಿಧಾನವಾಗಿ ಚೇತರಿಸಿಕೊಳ್ಳುವ ಮೂಲಕ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಮರಳಿ ಪಡೆದುಕೊಳ್ಳಲು ಬಹಳಷ್ಟು ಸಮಯಾವಕಾಶ ಬೇಡುತ್ತದೆ ಎಂದರು.

    ನೂತನ ವಿಧಾನದ ಶಸ್ತ್ರಚಿಕಿತ್ಸೆಯ ಬಗ್ಗೆ ವಿವರಿಸಿದ ಯುನೈಟೆಡ್ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪಿಡಿಶಿಯನ್ ಡಾ. ಪ್ರದ್ಯುಮ್ನ ಆರ್, ಅಥ್ಲೆಟಿಕ್‌ನಲ್ಲಿ ಪಾಲ್ಗೊಳ್ಳುವ ಮಂದಿಗೆ ಕೀಲಿನ ಕಾರ್ಟಿಲೆಜ್ ಗಾಯಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ವೃತ್ತಿಪರ ಕ್ರೀಡಾಪಟುಗಳು ಮತ್ತು ಕ್ರೀಡಾ ಹವ್ಯಾಸಿಗಳು ಕಾರ್ಟಿಲೆಜ್ ಹಾನಿಗೆ ಗುರಿಯಾಗುತ್ತಾರೆ. ಇದು ಟ್ವಿಸ್ಟ್ ಮಾಡುವಾಗ, ಜಂಪ್ ಮಾಡುವಾಗ ಜಿಗಿಯುವಾಗ ಮೊಣಕಾಲನ್ನು ತೀವ್ರವಾಗಿ ಬಾಗಿಸಿದಾಗ ಅಥವಾ ಹಠಾತ್ ಆಘಾತಕಾರಿ ಗಾಯದಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದನ್ನು ಗುಣಪಡಿಸುವ ಸೀಮಿತ ಚಿಕಿತ್ಸೆಗಳಿಂದಾಗಿ, ನೋವು ಹೆಚ್ಚಾಗಿರುತ್ತದೆ. ಹೆಚ್ಚಿನ ಬಾರಿ ಇದು ಅಪೂರ್ಣ ಚಿಕಿತ್ಸೆಗೆ ಕಾರಣವಾಗುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ, ಕಾರ್ಟಿಲೆಜ್ ಗಾಯಗಳು ಪ್ರೊಗ್ರೆಸ್ಸಿವ್ ಕೊಂಡ್ರೊಜೆನಿಕ್ ನಷ್ಟಕ್ಕೆ ಕಾರಣವಾಗಬಹುದು ಅಥವಾ ಕಾಲಕ್ರಮೇಣ ಕಾರ್ಟಿಲೆಜ್ ಕಳೆದುಹೋಗಬಹುದು ಎಂದು ಹೇಳಿದರು.

    ಕೇವಲ ಕೀಹೋಲ್ ವಿಧಾನದ ಮೂಲಕ ರೋಗಿಗೆ ಒಂದೇ ಹಂತದ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅಜಯ್ ಈಗ ಗುಣಮುಖವಾಗುವುದರ ಜೊತೆಗೆ ವ್ಯಾಯಾಮ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಹಜ ಸ್ಥಿತಿಗೆ ಕ್ಷಿಪ್ರವಾಗಿ ಮರಳುತ್ತಿದ್ದಾರೆ. ಶೀಘ್ರದಲ್ಲೇ ಅವರು ತಮ್ಮ ನೆಚ್ಚಿನ ಕ್ರೀಡೆಯನ್ನು ಮತ್ತೆ ಆಡಲು ಸಾಧ್ಯವಾಗುತ್ತದೆ ಎಂದು ಯುನೈಟೆಡ್ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪಿಡಿಶಿಯನ್ ಡಾ. ಪ್ರದ್ಯುಮ್ನ ಆರ್ ತಿಳಿಸಿದರು. ಇದನ್ನೂ ಓದಿ: ಬಿಎಸ್‍ವೈ ಅಂದ್ರೆ ಒಂದು ದೊಡ್ಡ ಶಕ್ತಿ, ಅವರ ಹೇಳಿಕೆಯಿಂದ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲ್ಲ: ಬೊಮ್ಮಾಯಿ

    ಯುನೈಟೆಡ್ ಆಸ್ಪತ್ರೆಯ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿಕ್ರಮ್ ಸಿದ್ದಾರೆಡ್ಡಿ ಮಾತನಾಡಿ, ನೂತನ ವಿಧಾನದ ತಂತ್ರಜ್ಞಾನದಲ್ಲಿ ರೋಗಿಯ ಕೀಲಿನಿಂದ ಸಂಗ್ರಹಿಸಿದ ರೋಗಿಯ ಕಾರ್ಟಿಲೆಜ್ ಕೋಶಗಳನ್ನು ಬಳಸಿಕೊಳ್ಳಲಾಗುತ್ತದೆ. ಈ ಅಂಗಾಂಶವನ್ನು ರೋಗಿಯ ರಕ್ತದ ಪ್ರೋಟೀನ್ ಸಮೃದ್ಧ ಭಾಗದೊಂದಿಗೆ ಬೆರೆಸಿ ಜೆಲ್ ತರಹದ ವಸ್ತುವನ್ನು ರೂಪಿಸಿಕೊಳ್ಳಲಾಗುತ್ತದೆ. ಇದನ್ನು ನೋವಿರುವ ಜಾಗಗಳಿಗೆ ಹಾಕುವುದರ ಮೂಲಕ ಕೆಲವು ವಾರಗಳಲ್ಲಿ ಹೊಸ ಕಾರ್ಟಿಲೆಜ್ ಆಗಿ ಬೆಳೆಯಲು ಅನುವು ಮಾಡಿಕೊಡಲಾಗುತ್ತದೆ. ಇದರಿಂದ ಕೀಲುಗಳಿಗೆ ಹೆಚ್ಚಿನ ಹಾನಿಯಾಗುವುದನ್ನು ತಡೆಯಬಹುದು ಮತ್ತು ಕೀಲುಗಳಲ್ಲಿ ಸಂಧಿವಾತ ಹೆಚ್ಚುವುದನ್ನು ತಪ್ಪಿಸುತ್ತದೆ ಎಂದರು.

    ಕೋವಿಡ್ ಸಾಂಕ್ರಾಮಿಕ ರೋಗದ ನಂತರ ತಮ್ಮ ಕ್ರೀಡಾ ಚಟುವಟಿಕೆಗಳಿಗೆ ಮತ್ತೆ ಮರಳಿರುವ ಹೆಚ್ಚಿನ ಮಂದಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯುನೈಟೆಡ್ ಹಾಸ್ಪಿಟಲ್ ಬೆಂಗಳೂರಿನಲ್ಲಿ ಮೂಲಸೌಕರ್ಯ, ಉಪಕರಣಗಳು, ಆಪರೇಷನ್ ಥಿಯೇಟರ್‌ಗಳು, ತರಬೇತಿ ಪಡೆದ ಸಿಬ್ಬಂದಿ, ರೋಗಿಗಳ ಯೋಗಕ್ಷೇಮಕ್ಕೆ ಮೀಸಲಾದ ನಿರ್ವಹಣೆ ಮತ್ತು ಭಾರತದ ಮೊದಲ ಆಟೋಲೋಗಸ್ ಕಾರ್ಟಿಲೆಜ್ ಟ್ರಾನ್ಸ್ಪ್ಲಾಂಟ್ ಸೌಲಭ್ಯಗಳ ಮೂಲಕ ಬೆಂಗಳೂರಿನ ಅತ್ಯುತ್ತಮ ಕ್ರೀಡೆ ಸಂಬಂಧಿತ ಗಾಯಗಳಿಗೆ ಚಿಕಿತ್ಸೆ ನೀಡುವ ಸುಸಜ್ಜಿತ ಆಸ್ಪತ್ರೆಗಳಲ್ಲಿ ಒಂದಾಗಿದೆ. ಕ್ರೀಡಾ ಸಮಸ್ಯೆಗಳ ನಿವಾರಣೆಗೆ ಇದೊಂದು ಉತ್ತಮವಾದ ಸ್ಥಳ ಎಂದು ಜಯನಗರದ ಯುನೈಟೆಡ್ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಡಯಾಗ್ನೋಸ್ಟಿಕ್ ಮತ್ತು ವೆಲ್ನೆಸ್ ಮುಖ್ಯಸ್ಥ ಡಾ. ಶಾಂತಕುಮಾರ್ ಮುರುಡಾ ಹೇಳಿದರು. ಇದನ್ನೂ ಓದಿ: ಕಸ ಹಾಕಿದ್ದಕ್ಕೆ ಸಿಎಂ ನಿವಾಸಕ್ಕೆ 10,000 ರೂ. ದಂಡ ವಿಧಿಸಿದ ಕಾರ್ಪೊರೇಷನ್

    ಯುನೈಟೆಡ್ ಆಸ್ಪತ್ರೆಯಲ್ಲಿ ಎಲ್ಲಾ ಕ್ರೀಡೆಗಳಿಗೆ ಸಂಬಂಧಿಸಿದ ಗಾಯಗಳಿಗೆ ಚಿಕಿತ್ಸೆ ನೀಡಲು ವಿಶ್ವದ ಅತ್ಯುತ್ತಮ ತಂತ್ರಗಳನ್ನು ಬಳಸಲಾಗುತ್ತದೆ. ಆಟೋಲೋಗಸ್ ಕಾರ್ಟಿಲೆಜ್ ಟ್ರಾನ್ಸ್‌ಪ್ಲಾಂಟ್ ಅನ್ನು ಒಂದೇ ಸೆಟ್ಟಿಂಗ್‌ನಲ್ಲಿ ಮಾಡಲಾಗುತ್ತದೆ. ಕೀಹೋಲ್ ಶಸ್ತ್ರಚಿಕಿತ್ಸೆ, ಸಾಂಪ್ರದಾಯಿಕ 6 ವಾರಗಳ ಅಂತರದಲ್ಲಿ ನಡೆಯುವ 2 ಎಸಿಐ ಗಿಂತ ಕಡಿಮೆ ವೆಚ್ಚದಾಯಕವಾಗಿದೆ ಮತ್ತು ರೋಗಿಗೆ ಅನುಕೂಲಕರವಾಗಿದೆ ಎಂದು ಡಾ. ಮುರುಡಾ ವಿವರಿಸಿದರು.

    ಹಲವಾರು ವೈದ್ಯರನ್ನು ಭೇಟಿ ಮಾಡಿದ ಬಳಿಕ ಯುನೈಟೆಡ್ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪೆಡಿಶಿಯನ್ ಡಾ. ಪ್ರದ್ಯುಮ್ನ ಅವರನ್ನು ಭೇಟಿಯಾದೆ. ನನ್ನ ಪಾದದ ಕಾರ್ಟಿಲೇಜ್ ಹಾನಿಗೊಳಗಾಗಿದ್ದನ್ನು ಕಂಡು ವೈದ್ಯರಾದ ಪ್ರದ್ಯುಮ್ನ ಅವರು ಆರ್ಥೋಸ್ಕೊಪಿ ಮೂಲಕ ಆಟೋಲೋಗಸ್ ಕಾರ್ಟಿಲೆಜ್ ಕಸಿ ಮಾಡಲು ನಿರ್ಧರಿಸಿದರು. ಕಡಿಮೆ ಇನ್ ವೇಸಿವ್ ಸರ್ಜರಿ (ಕೀಹೋಲ್) ಮೂಲಕ ಹಾನಿಗೊಳಗಾದ ಕಾರ್ಟಿಲೆಜ್‌ಗೆ ಚಿಕಿತ್ಸೆ ನೀಡಲು ನಿರ್ಧರಿಸಿದರು. ಇದರಿಂದ ಒಂದೇ ಶಸ್ತ್ರಚಿಕಿತ್ಸೆಯ ಮೂಲಕ ನನ್ನ ಗಾಯಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ಶಸ್ತ್ರಚಿಕಿತ್ಸೆಗೆ ಒಳಪಟ್ಟ ಕ್ರೀಡಾಪಟು ಅಜಯ್ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಇದೇ ಮೊದಲ ಬಾರಿಗೆ ಜೀವಂತ 3ಡಿ ಮುದ್ರಿತ ಕಿವಿಯ ಯಶಸ್ವೀ ಕಸಿ

    ಇದೇ ಮೊದಲ ಬಾರಿಗೆ ಜೀವಂತ 3ಡಿ ಮುದ್ರಿತ ಕಿವಿಯ ಯಶಸ್ವೀ ಕಸಿ

    ವಾಷಿಂಗ್ಟನ್: ವೈದ್ಯಕೀಯ ಲೋಕ ದಿನೇ ದಿನೇ ಹೆಚ್ಚುತ್ತಿರುವ ಪ್ರಗತಿಯಿಂದಾಗಿ ರೋಗಿಗಳನ್ನು ಹಾಗೂ ಜನರ ಜೀವನವನ್ನು ಸರಾಗಗೊಳಿಸುತ್ತಿದೆ. ಇದೀಗ ವೈದ್ಯಕೀಯ ರಂಗದಲ್ಲಿ ಹೊಸ ಪ್ರಯತ್ನ ಮಾಡಲಾಗಿದೆ. ವಿಶ್ವದಲ್ಲೇ ಮೊದಲ ಬಾರಿಗೆ 3ಡಿ ಮುದ್ರಿತ ಜೀವಂತ ಕಿವಿಯನ್ನು ವ್ಯಕ್ತಿಯೊಬ್ಬರಿಗೆ ಕಸಿ ಮಾಡಲಾಗಿದೆ.

    ಹೌದು, ಜನಿಸುವಾಗಲೇ ಅಲ್ಪ ಸ್ವಲ್ಪ ಕಿವಿಯೊಂದಿಗೆ ಹುಟ್ಟಿದ ಯುವತಿಗೆ ತಮ್ಮ ಸ್ವಂತ ಜೀವಕೋಶಗಳಿಂದ 3ಡಿ ಕಿವಿಯನ್ನು ರಚಿಸಿ, ಅದನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಈ ಮೂಲಕ ವೈದ್ಯಕೀಯ ಲೋಕದಲ್ಲೊಂದು ಮೈಲಿಗಲ್ಲು ಸ್ಥಾಪನೆಯಾಗಿದೆ.

    ಮೆಕ್ಸಿಕೋ ಮೂಲದ ಯುವತಿ ಅಲೆಕ್ಸಾ ಹುಟ್ಟುವಾಗಲೇ ತಮ್ಮ ಬಲಭಾಗದ ಕಿವಿಯನ್ನು ಅಲ್ಪ ಸ್ವಲ್ಪವಾಗಿ ಹೊಂದಿದ್ದರು. ಇದೀಗ ವೈದ್ಯಕೀಯ ಲೋಕದ ಹೊಸ ಪ್ರಯತ್ನದ ಮೂಲಕ ಅವರ ಇನ್ನೊಂದು ಕಿವಿಯನ್ನು ಅನುಕರಿಸಿ 3ಡಿ ಮುದ್ರಣದ ಇನ್ನೊಂದು ಕಿವಿಯನ್ನು ರಚಿಸಿ ಕಸಿ ಮಾಡಲಾಗಿದೆ. ಇದನ್ನೂ ಓದಿ: ಜೂಮ್ ಕ್ಲಾಸ್ ಮಿಸ್ ಮಾಡ್ದೆ ಹಾಜರಾಗಿದ್ದ ಬೆಕ್ಕು – ಹ್ಯಾಟ್ ಕೊಟ್ಟ ವಿಶ್ವವಿದ್ಯಾಲಯ

    ವೈದ್ಯಕೀಯ ಲೋಕದ ಈ ಹೊಸ ಕ್ರಾಂತಿ ಸದ್ಯ 3ಡಿ ಮುದ್ರಿತ ಅಂಗಗಳನ್ನು ಜನರಿಗೆ ಜೋಡಿಸುವ ಪ್ರಯೋಗದ ಒಂದು ಭಾಗವಾಗಿದೆ. ಇದನ್ನು ಸಾಮಾನ್ಯ ವೈದ್ಯಕೀಯ ಲೋಕಕ್ಕೆ ತರುವುದಕ್ಕೂ ಮೊದಲು ಹಲವಾರು ಸುರಕ್ಷತಾ ತಪಾಸಣೆ ನಡೆಸಬೇಕಿದೆ. ಇದನ್ನೂ ಓದಿ: ಕರಾವಳಿ, ಮಲೆನಾಡಿನಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಆಕ್ಟೀವ್ – 10 ದಿನಗಳಲ್ಲಿ 4 ಕಡೆ ರಿಂಗಣಿಸಿದ ಲೊಕೇಷನ್ ಟ್ರೇಸ್

    ಜನರು ಹುಟ್ಟುವಾಗಲೇ ಅಥವಾ ಅಪಘಾತದಲ್ಲಿ ದೇಹದ ಅಂಗಗಳನ್ನು ಕಳೆದುಕೊಂಡರೆ, 3ಡಿ ಮುದ್ರಿತ ಜೀವಂತ ಅಂಗಗಳ ಕಸಿ ಮಾಡಬಹುದು ಎಂಬುದು ಇದೀಗ ಸಾಬೀತಾಗಿದೆ.

  • ರಾಜ್ಯದ ಮೊದಲ ಕಿಡ್ನಿ ಕಸಿಮಾಡಲು ಅನುಮತಿ ಪಡೆದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ

    ರಾಜ್ಯದ ಮೊದಲ ಕಿಡ್ನಿ ಕಸಿಮಾಡಲು ಅನುಮತಿ ಪಡೆದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ

    ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯು ಕಿಡ್ನಿ ಕಸಿ ಮಾಡಲು ಅನುಮತಿಯನ್ನು ಪಡೆದ ರಾಜ್ಯದ ಮೊದಲ ಆಸ್ಪತ್ರೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಈ ಭಾಗದ ರೋಗಿಗಳು ಕಿಡ್ನಿ ಕಸಿ ಮಾಡಿಸಿಕೊಳ್ಳಲು, ಬೆಂಗಳೂರು, ಮುಂಬೈನಂತ ಮಹಾನಗರಗಳಿಗೆ ಹೋಗುವ ಅನಿವಾರ್ಯತೆ ಈ ಹಿಂದಿತ್ತು. ಜೊತೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂ. ಖರ್ಚು ಮಾಡಬೇಕಿತ್ತು. ಹೀಗೆ ಮಾಡಲು ಶಕ್ತರಿಲ್ಲದವರು, ಸಕಾಲಕ್ಕೆ ಚಿಕಿತ್ಸೆ ಪಡೆಯದೆ ಸಾವಿಗೀಡಾದ ಉದಾಹರಣೆಗಳಿವೆ. ಇದನ್ನೂ ಓದಿ:  ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿ ಮನಗೆದ್ದ ಹುಡುಗಿ – ನೆಟ್ಟಿಗರು ಫುಲ್ ಆಕ್ಟಿವ್

    ಈ ದಿಸೆಯಲ್ಲಿ ಕಿಮ್ಸ್ ಆಡಳಿತ ಮಂಡಳಿ, ಕಿಮ್ಸ್‍ನಲ್ಲಿಯೇ ಕಿಡ್ನಿ ಕಸಿ ಮಾಡಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕಿಮ್ಸ್ ಮನವಿಯನ್ನು ಒಪ್ಪಿಕೊಂಡ ಸರ್ಕಾರ, ಕಳೆದ ಫೆಬ್ರವರಿ 18ಕ್ಕೆ ಕಿಡ್ನಿ ಕಸಿಗೆ ಅನುಮತಿ ನೀಡಿದೆ. ಈ ಮೂಲಕ ಕಿಡ್ನಿ ಕಸಿಗೆ ಅನುಮತಿ ಪಡೆದ ರಾಜ್ಯದ ಏಕೈಕ ಸರ್ಕಾರಿ ಮೆಡಿಕಲ್ ಕಾಲೇಜು ಎಂಬ ಹೆಗ್ಗಳಿಕೆಗೆ ಕಿಮ್ಸ್ ಪಾತ್ರವಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬ್ರಾಹ್ಮಣರನ್ನು ಸಿಎಂ ಆಗಿ ನೋಡಲು ಬಯಸುತ್ತೇನೆ: ರಾವ್‍ಸಾಹೇಬ್ ಪಾಟೀಲ್ ದಾನ್ವೆ

    ಇಷ್ಟು ದಿನ ಸರಿಯಾದ ಚಿಕಿತ್ಸೆಯಿಲ್ಲದೆ ಕಿಡ್ನಿ ಸೋಂಕಿನಿಂದ ಬಳಲಿ ಸಾವನ್ನಪ್ಪುತಿದ್ದ ಬಡ ರೋಗಿಗಳ ಪಾಲಿಗೆ ಕಿಮ್ಸ್ ಮತ್ತೊಂದು ಸಂಜೀವಿನಿಯಾಗಿದೆ.

  • ಗುಡ್‍ನ್ಯೂಸ್.. ಹೃದಯದ ಸ್ಟೆಂಟ್ ಬಳಿಕ ಮೊಣಕಾಲಿನ ಕಸಿ ಬೆಲೆ ಭಾರೀ ಇಳಿಕೆ

    ಗುಡ್‍ನ್ಯೂಸ್.. ಹೃದಯದ ಸ್ಟೆಂಟ್ ಬಳಿಕ ಮೊಣಕಾಲಿನ ಕಸಿ ಬೆಲೆ ಭಾರೀ ಇಳಿಕೆ

    ನವದೆಹಲಿ: ಆರೋಗ್ಯ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ ಪ್ರಕಟವಾಗಿದ್ದು, ಮೊಣಕಾಲಿನ ಕಸಿ ಬೆಲೆಯನ್ನು ಇಳಿಕೆ ಮಾಡಲಾಗಿದೆ.

    ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ವಿವರವನ್ನು ಪ್ರಕಟಿಸಿದ್ದು, ಇಂದಿನಿಂದಲೇ(ಆಗಸ್ಟ್ 16) ಈ ದರ ಜಾರಿಗೆ ಬರಲಿದೆ ಎಂದು ತಿಳಿಸಿದರು.

    ರಾಷ್ಟ್ರೀಯ ಔಷಧಿ ಪ್ರಾಧಿಕಾರವು(ಎನ್‍ಪಿಪಿಎ) ಮೊಣಕಾಲಿನ ಕಸಿ ಉಪಕರಣದ ಬೆಲೆಯನ್ನು 54,720 ರೂ.ಗೆ ಇಳಿಕೆ ಮಾಡಿದೆ. ಈ ಹಿಂದೆ ಇವುಗಳ ಬೆಲೆ 2.50 ಲಕ್ಷ ರೂ. ನಿಂದ 4.50 ಲಕ್ಷ ರೂ.ಇತ್ತು.

    ದರ ನಿಗದಿ ಉಲ್ಲಂಘಿಸುವ ಆಸ್ಪತ್ರೆಗಳು, ವೈದ್ಯರ ವಿರುದ್ಧ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಹೃದಯದ ಸ್ಟೆಂಟ್ ಬೆಲೆಯನ್ನು ಇಳಿಕೆ ಮಾಡಿದ ಬಳಿಕ ಕಸಿಗೆ ಬಳಸುವ ಉಪಕರಣದ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಇಳಿಕೆ ಮಾಡಿದ್ದರಿಂದ 1,500 ಕೋಟಿ ರೂ. ಉಳಿಕೆಯಾಗಲಿದ್ದು, ಅಂದಾಜು 1.5 ಲಕ್ಷ ಮಂದಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರು 71ನೇ ಸ್ವಾತಂತ್ರ್ಯ ದಿನಾಚರಣೆಯಂದು ಮೊಣಕಾಲು ಶಸ್ತ್ರಚಿಕಿತ್ಸೆಯ ಬೆಲೆಗಳನ್ನು ಇಳಿಸಲಾಗುವುದು ಎಂದು ಪ್ರಕಟಿಸಿದರು. ಈ ಘೋಷಣೆಯಾದ ಮರುದಿನವೇ ಬೆಲೆಗಳನ್ನು ಇಳಿಸಲಾಗಿದೆ.

    ಯಾವುದಕ್ಕೆ ಎಷ್ಟು?
    ಮೊಣಕಾಲಿನ ಕಸಿ ಉಪಕರಣದ ಬೆಲೆಯನ್ನು 54,720 ರೂ.ಗೆ ಇಳಿಕೆ ಮಾಡಿದೆ. ಈ ಹಿಂದೆ ಇವುಗಳ ಬೆಲೆ 2.50 ಲಕ್ಷ ರೂ. ನಿಂದ 4.50 ಲಕ್ಷ ರೂ.ಇತ್ತು. ಟೈಟಾನಿಯಂ ಅಕ್ಸಿಡೈಸ್ಡ್ ಝಿಂಕೋನಿಯಂ ಉಪಕರಣಕ್ಕೆ 2.50 ಲಕ್ಷ ರೂ. ನಿಂದ 4.50 ಲಕ್ಷ ರೂ. ವೆಚ್ಚವಾಗುತಿತ್ತು. ಈಗ 76, 600 ರೂ. ನಿಗದಿ ಯಾಗಿದೆ.

    ಬ್ರೈನ್ ಟ್ಯೂಮರ್, ಕ್ಯಾನ್ಸರ್ ರೋಗಚ ಚಿಕಿತ್ಸೆಗೆ ಬಳಸುವ ವಿಶೇಷ ಕಸಿ ಉಪಕರಣಕ್ಕೆ 1,13,950 ರೂಪಾಯಿ ನಿಗದಿಯಾಗಿದೆ. ಸದ್ಯ ಇವುಗಳ ಮಾರುಕಟ್ಟೆ ಬೆಲೆ 2.75 ಲಕ್ಷದಿಂದ 6 ಲಕ್ಷ ರೂಪಾಯಿ ಇತ್ತು. ಕೋಬಾಲ್ಟ್ ಕ್ರೋಮಿಯಂ ಮೊಣಕಾಲು ಕಸಿ ಉಪಕರಣಕ್ಕೆ 54,720 ರೂಪಾಯಿ ನಿಗದಿಯಾಗಿದ್ದು, ಈ ಹಿಂದೆ 1,58,324 ರೂ. ಇತ್ತು.

    ಹೃದಯದ ಸ್ಟೆಂಟ್ ಬೆಲೆ ಇಳಿಸಿತ್ತು:
    ಈ ವರ್ಷದ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಹೃದಯಕ್ಕೆ ಅಳವಡಿಸುವ ಕೊರೊನರಿ ಸ್ಟೆಂಟ್‍ಗಳ ದರವನ್ನು ಶೇ.80ರಷ್ಟು ಇಳಿಸಿತ್ತು. ಇದರಿಂದಾಗಿ 45,000 ರೂ. ಬೆಲೆಗೆ ಮಾರಾಟವಾಗುತ್ತಿದ್ದ ಸ್ಟೆಂಟ್ ಬೆಲೆ 29,600 ರೂ.ಗೆ ಇಳಿಕೆಯಾಗಿತ್ತು.