Tag: ಕಸದ ವಾಹನ

  • ಕಸದ ವಾಹನಗಳ ಮೇಲೆ BBMP ನಾಮಫಲಕ ಹಾಕುವಂತಿಲ್ಲ – ಹೆಸರು ಹಾಕಿದ ವಾಹನಗಳ ಮೇಲೆ ಕ್ರಿಮಿನಲ್ ಕೇಸ್

    ಕಸದ ವಾಹನಗಳ ಮೇಲೆ BBMP ನಾಮಫಲಕ ಹಾಕುವಂತಿಲ್ಲ – ಹೆಸರು ಹಾಕಿದ ವಾಹನಗಳ ಮೇಲೆ ಕ್ರಿಮಿನಲ್ ಕೇಸ್

    ಬೆಂಗಳೂರು: ನಗರ ಪ್ರದೇಶದಲ್ಲಿ ಪದೇ ಪದೇ ಕಸದ ಲಾರಿಗಳು ಮಾಡುತ್ತಿರುವ ಅಪಘಾತಗಳಿಂದ ಮುಜುಗರಕ್ಕೀಡಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇದೀಗ ಸಮಸ್ಯೆಯಿಂದ ಪಾರಾಗಲು ಹೊಸ ತಂತ್ರ ರೂಪಿಸಿದೆ.

    ಕಸದ ವಾಹನಗಳಿಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ಮುಂದೆ ಪಾಲಿಕೆ ವ್ಯಾಪ್ತಿಯ ಕಸದ ವಾಹನಗಳ ಮೇಲೆ ಬಿಬಿಎಂಪಿ ನಾಮಫಲಕ ಹಾಕುವಂತಿಲ್ಲ. ಗುತ್ತಿಗೆದಾರರ ಮೂಲಕ ಸರಬರಾಜು ಮಾಡಲಾದ ಎಲ್ಲ ವಾಹನಗಳಿಗೂ ಆದೇಶ ಅನ್ವಯವಾಗಲಿದೆ. ಒಂದೊಮ್ಮೆ ಸದರಿ ಕಸದ ವಾಹನಗಳಿಂದ ಅಪಘಾತ ಸಂಭವಿಸಿ ಸಾವು ನೋವಾದರೆ, ದಂಡದ ರೂಪದಲ್ಲಿ ಆ ವಾಹನ ಮಾಲೀಕರೇ ಪರಿಹಾರ ನೀಡಬೇಕು ಎಂದು ಬಿಬಿಎಂಪಿ ಘನತ್ಯಾಜ್ಯ ವಿಶೇಷ ಆಯುಕ್ತ ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಮಂಗಳವಾರ BBMP ಚುನಾವಣಾ ಭವಿಷ್ಯ ನಿರ್ಧಾರ?

    ಪಾಲಿಕೆಗೆ ಸಂಬಂಧಿಸದ ಅನಾಮಧೇಯ ವಾಹನಗಳ ಮೇಲೆ ಪಾಲಿಕೆಯ ಸೇವೆಯಲ್ಲಿ, ಬಿಬಿಎಂಪಿ, ಬಿಬಿಎಂಪಿ ಸೇವೆಯಲ್ಲಿ ಎಂಬ ನಾಮಫಲಕವನ್ನು ಹಾಕಿದ್ದಲ್ಲಿ ಅಂತಹ ವಾಹನಗಳ ಚಾಲಕರ ಮೇಲೆ ಮತ್ತು ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದೆ.

    ಆದೇಶದಲ್ಲಿ ಏನಿದೆ:
    ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ಆಟೋ, ಟಿಪ್ಪರ್, ಕಾಂಪ್ಯಾಕ್ಟರ್‌ಗಳ ಮೇಲೆ ಪಾಲಿಕೆ ಹೆಸರು ಹಾಕುವಂತಿಲ್ಲ. ಗುತ್ತಿಗೆದಾರರ ಮೂಲಕ ಸರಬರಾಜು ಮಾಡಲಾದ ಎಲ್ಲಾ ಆಟೋ, ಟಿಪ್ಪರ್, ಕಾಂಪ್ಯಾಕ್ಟರ್‌ಗಳಿಗೂ ಅನ್ವಯ. ಪಾಲಿಕೆಯ ಸೇವೆಯಲ್ಲಿ, ಬಿಬಿಎಂಪಿ, ಬಿಬಿಎಂಪಿ ಸೇವೆಯಲ್ಲಿ ಎಂದು ನಮೂದಿಸುವಂತಿಲ್ಲ. ಪಾಲಿಕೆ ಹೆಸರು ಹಾಕಿದ್ದಲ್ಲಿ ಅಂತಹ ವಾಹನ, ಮಾಲೀಕರ ಮೇಲೆ ಕ್ರಿಮಿನಲ್ ಕೇಸ್. ಎಲ್ಲಾ ಚಾಲಕರ ಡಿಎಲ್, ದೈಹಿಕ ಸಧೃಡತೆಯ ಪ್ರಮಾಣಪತ್ರ, ಫಿಟ್ನೆಸ್ ಪ್ರಮಾಣಪತ್ರ ಕಡ್ಡಾಯ. ಇನ್ಶುರೆನ್ಸ್ ಪ್ರಮಾಣ ಪತ್ರಗಳ ತಪಾಸಣೆ ಕೂಡ ಕಡ್ಡಾಯ ಮಾಡಲಾಗಿದೆ. ಅನಧಿಕೃತವಾಗಿ ಪಾಲಿಕೆಯ ಹೆಸರನ್ನು ನಮೂದಿಸಿರುವ ನಾಮಫಲಕ ತೆಗೆಸುವುದು ವಲಯ ಮತ್ತು ವಾರ್ಡ್ ಮಾರ್ಷಲ್ಸ್, ಕಿರಿಯ ಆರೋಗ್ಯ ಪರಿವೀಕ್ಷಕರ ಜವಾಬ್ದಾರಿ. ಈ ವಾಹನಗಳಿಂದ ಅಪಘಾತ ಸಂಭವಿಸಿದ್ದಲ್ಲಿ ವಾಹನಗಳ ಮಾಲೀಕರೇ ಪರಿಹಾರ ಕೊಡಬೇಕು ಎಂದು ಆದೇಶಿಸಲಾಗಿದೆ. ಇದನ್ನೂ ಓದಿ: ಅಗ್ನಿಪಥ್ ಪ್ರತಿಭಟನೆಗಳಿಂದ ರೈಲ್ವೇ ಇಲಾಖೆಗೆ 259 ಕೋಟಿ ಲಾಸ್

    Live Tv
    [brid partner=56869869 player=32851 video=960834 autoplay=true]

  • ಪಾಲಿಕೆಯ ಕಸದ ವಾಹನಗಳ ಬ್ಯಾಟರಿ ಕಳ್ಳತನ

    ಪಾಲಿಕೆಯ ಕಸದ ವಾಹನಗಳ ಬ್ಯಾಟರಿ ಕಳ್ಳತನ

    ಹುಬ್ಬಳ್ಳಿ: ಮಹಾನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದೆ. ಮನೆ, ಅಂಗಡಿ ಕಳ್ಳತನ ಹೆಚ್ಚಾದ ಬೆನ್ನಲ್ಲೇ ಇದೀಗ ಕಳ್ಳರು ಕಸದ ವಾಹನಗಳ ಬ್ಯಾಟರಿಗಳನ್ನು ಕಳ್ಳತನ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

    ಹುಬ್ಬಳ್ಳಿ ಮಹಾನಗರ ಪಾಲಿಕೆ ವಲಯ ಕಚೇರಿ 11ರಲ್ಲಿ ಬರುವ 09 ಆಟೋ ಟಿಪ್ಪರ್‍ಗಳ ಬ್ಯಾಟರಿ ಕಳ್ಳತನ ಮಾಡಿ ಕಳ್ಳರು ತಮ್ಮಕೈಚಳಕ ತೋರಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಮನೆ ಮನೆಯ ಕಸ ಸಂಗ್ರಹಣೆ ಮಾಡುವ 9 ಆಟೋ ಟಿಪ್ಪರಗಳ ಬ್ಯಾಟರಿ ಕಳ್ಳತನ ಆಗಿದ್ದು, ವಲಯ ಕಚೇರಿ 11ರ ಕಂಪ್ಯಾಕ್ಟರ್ ಸ್ಟೇಷನ್‍ನಲ್ಲಿ ನಿಲ್ಲಿಸಿದ್ದ 09 ಗಾಡಿಗಳ ಬ್ಯಾಟರಿಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.

    ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ವರದಿಯಾಗಿದ್ದು, ಪಾಲಿಕೆ ವಾಹನಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡಿದ ಖದೀಮರಿಗೆ ಕಾನೂನು ರೀತಿಯಲ್ಲಿ ಬಿಸಿ ಮುಟ್ಟಿಸಬೇಕಿದೆ. ಅಲ್ಲದೇ ಕಾವಲು ಸಿಬ್ಬಂದಿ ಸಿಸಿ ಕ್ಯಾಮರಾ ಇದ್ದಾಗಲೂ ಬ್ಯಾಟರಿ ಕಳ್ಳತನ ನಡೆದಿದ್ದಾದರೂ ಹೇಗೆ ಎನ್ನುವ ಅನುಮಾನ ಪಾಲಿಕೆ ಅಧಿಕಾರಿಗಳದ್ದಾಗಿದೆ. ಈ ಘಟನೆಯ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.