Tag: ಕಸದ ರಾಶಿ

  • ಕಸದ ರಾಶಿಯ ಪಕ್ಕ 14ರ ಬಾಲಕಿಯ ಸುಟ್ಟ ಮೃತದೇಹ ಪತ್ತೆ

    ಕಸದ ರಾಶಿಯ ಪಕ್ಕ 14ರ ಬಾಲಕಿಯ ಸುಟ್ಟ ಮೃತದೇಹ ಪತ್ತೆ

    – ಕಸ ಎಸೆಯಲು ಹೋದಾಗ ನಾಪತ್ತೆ

    ಚೆನ್ನೈ: 14 ವರ್ಷದ ಬಾಲಕಿಯ ಸುಟ್ಟ ಮೃತದೇಹ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಪತ್ತೆಯಾಗಿರುವ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದೆ.

    ತಿರುಚ್ಚಿಯ ಸೋಮರಸಂಪೆಟ್ಟಾಯ್ ಗ್ರಾಮದಲ್ಲಿ ಕಸದ ರಾಶಿಯ ಪಕ್ಕದಲ್ಲಿ ಬಾಲಕಿಯ ಸುಟ್ಟ ಶವ ಪತ್ತೆಯಾಗಿದೆ. ಸ್ಥಳೀಯರು ಕಸ ವಿಲೇವಾರಿ ಪ್ರದೇಶದ ಬಳಿ ಬಾಲಕಿಯ ಶವವನ್ನು ನೋಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯಕ್ಕೆ ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಮೃತ ಬಾಲಕಿ ಸೋಮವಾರ ಮಧ್ಯಾಹ್ನ ಕಸ ಎಸೆಯಲು ತನ್ನ ಮನೆಯಿಂದ ಬಂದಿದ್ದಾಳೆ. ಆದರೆ ತುಂಬಾ ಸಮಯವಾದರೂ ಬಾಲಕಿ ಮನೆಗೆ ಹಿಂದಿರುಗಿಲ್ಲ. ಹೀಗಾಗಿ ಪೋಷಕರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಬಾಲಕಿ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಪೋಷಕರು ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ದಾಖಲಿಸಿದ್ದಾರೆ.

    ಸ್ಥಳೀಯರು ಬಾಲಕಿಯ ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ಅರೆ-ಬರೆ ಸುಟ್ಟ ಬಾಲಕಿಯ ಬಟ್ಟೆಯಿಂದ ಪೋಷಕರು ತಮ್ಮ ಮಗಳು ಎಂದು ಗುರುತಿಸಿದ್ದಾರೆ.

    ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಹುಡುಗಿ ಮಧ್ಯಾಹ್ನ 12.15ಕ್ಕೆ ಮನೆಯಿಂದ ಹೊರ ಬಂದಿದ್ದಾಳೆ. ಸಂಜೆಯಾದರೂ ಮನೆಗೆ ಹಿಂದಿರುಗಿಲ್ಲ ಎಂದು ಪೋಷಕರು ಮಗಳಿಗಾಗಿ ಹುಡುಕಾಡಿದ್ದಾರೆ. ಕೊನೆಗೆ ಆಕೆಯ ಪೋಷಕರು ಸಂಜೆ 5ಕ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಯಾರೂ ಈ ಕೊಲೆ ಮಾಡಿದ್ದಾರೆ ಎಂಬುದು ನಿಖರವಾಗಿ ತಿಳಿದಿಲ್ಲ. ನಾವು ತನಿಖೆ ನಡೆಸುತ್ತಿದ್ದೇವೆ. ಆದರೆ ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಡಿಐಜಿ ಅನ್ನಿ ವಿಜಯಾ ತಿಳಿಸಿದ್ದಾರೆ.

  • ಕಸದ ರಾಶಿಯಲ್ಲಿ ಯುಪಿಎಸ್ ಬ್ಯಾಟರಿ ಸ್ಫೋಟಕ್ಕೆ ಕಂದಕ ನಿರ್ಮಾಣ

    ಕಸದ ರಾಶಿಯಲ್ಲಿ ಯುಪಿಎಸ್ ಬ್ಯಾಟರಿ ಸ್ಫೋಟಕ್ಕೆ ಕಂದಕ ನಿರ್ಮಾಣ

    ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಬಳಿ ಕಸದ ರಾಶಿಯಲ್ಲಿ ಯುಪಿಎಸ್ ಬ್ಯಾಟರಿ ಸ್ಫೋಟಗೊಂಡ ಪರಿಣಾಮ ಆ ಪ್ರದೇಶದಲ್ಲಿ ಕಂದಕ ನಿರ್ಮಾಣವಾಗಿದೆ.

    ಸೋಮವಾರ ಸಂಜೆ ವೇಳೆ ಗ್ರಾಮದ ಸರ್ಕಾರಿ ಜಾಗದಲ್ಲಿ ಶೇಖರಣೆಯಾಗುತ್ತಿದ್ದ ಕಸದ ರಾಶಿಯಿಂದ ಯುಪಿಎಸ್ ಬ್ಯಾಟರಿ ಸ್ಫೋಟಗೊಂಡಿತ್ತು. ಕಸದ ರಾಶಿಯಲ್ಲಾದ ಸ್ಫೋಟದ ತೀವ್ರತೆಗೆ ಭೂಮಿಯಲ್ಲಿ ಸಮಾರು 2 ಅಡಿ ಆಳಕ್ಕೆ ಕಂದಕ ನಿರ್ಮಾಣವಾಗಿದೆ.

    ಈ ನಿಗೂಢ ಸದ್ದು ಎಲ್ಲಿದ ಬಂತು? ಏನು ಸ್ಫೋಟವಾಗಿದೆ ಎಂದು ಅರಿಯದ ಸ್ಥಳೀಯರು ಬೆಚ್ಚಿ ಬಿದ್ದಿದ್ದರು. ಬರೋಬ್ಬರಿ ನಾಲ್ಕು ಕಿ.ಮೀ ವರೆಗೂ ಹಬ್ಬಿದ ಸ್ಫೋಟ ಸದ್ದಿಗೆ ಬೆಟ್ಟದಪುರ ಗ್ರಾಮಸ್ಥರು ಭಯಗೊಂಡಿದ್ದರು.

    ಸ್ಪೋಟದ ಸದ್ದು ಕೇಳಿದ ಕೂಡಲೇ ಗ್ರಾಮಸ್ಥರು ಬೆಟ್ಟದಪುರ ಪೊಲೀಸರಿಗೆ ಸ್ಥಳಿಯರು ವಿಷಯ ತಿಳಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಕಸದ ರಾಶಿಯಲ್ಲಿ ಸ್ಫೋಟಗೊಂಡಿದ್ದು ಯುಪಿಎಸ್ ಬ್ಯಾಟರಿ ಎಂದು ಸ್ಪಷ್ಟಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಕಸ್ಮಿಕವಾಗಿ 65 ಲಕ್ಷ ರೂ. ಮೌಲ್ಯದ ಆಭರಣಗಳನ್ನ ಕಸದ ರಾಶಿಗೆ ಎಸೆದ ಮಹಿಳೆ!

    ಆಕಸ್ಮಿಕವಾಗಿ 65 ಲಕ್ಷ ರೂ. ಮೌಲ್ಯದ ಆಭರಣಗಳನ್ನ ಕಸದ ರಾಶಿಗೆ ಎಸೆದ ಮಹಿಳೆ!

    ಅಟ್ಲಾಂಟ: ಮಹಿಳೆಯೊಬ್ಬಳು ತನ್ನ 100,000 ಡಾಲರ್(ಅಂದಾಜು 65 ಲಕ್ಷ ರೂ.) ಮೌಲ್ಯದ ವಜ್ರದ ಆಭರಣಗಳನ್ನ ಕಸದ ರಾಶಿಗೆ ಎಸೆದಿರುವ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ.

    ಮಹಿಳೆ ತನ್ನ ವಜ್ರದ ಆಭರಣಗಳನ್ನ ಆಕಸ್ಮಿಕವಾಗಿ ಕಸದ ರಾಶಿಗೆ ಎಸೆದಿದ್ದರು. ನಂತರ ಕಸ ವಿಲೇವಾರಿ ಮಾಡುವವರಿಗೆ ಕರೆ ಮಾಡಿ ತಾನು ಕಳೆದುಕೊಂಡ ಭಾರೀ ಮೊತ್ತದ ಆಭರಣದ ಬಗ್ಗೆ ತಿಳಿಸಿದ್ದರು.

    ಮಹಿಳೆಯ ಆಭರಣಗಳನ್ನ ಕಳೆದುಕೊಂಡ ಬಗ್ಗೆ ಮಾಹಿತಿ ತಿಳಿದ ನಂತರ ಹಾಲ್ ಕೌಂಟಿಯ ಘನ ತಾಜ್ಯ ವಿಭಾಗದ ನಿರ್ದೇಶಕರಾದ ಜಾನ್ನಿ ವಿಕ್ಕರ್ಸ್ ಅವರು ತಮ್ಮ ಕಾರ್ಮಿಕರೊಂದಿಗೆ ಆಭರಣ ಹುಡುಕುವ ಕಾರ್ಯಾಚರಣೆಯನ್ನ ಶುರುಮಾಡಿದ್ದರು. ಆದರೆ ಆ ಮಹಿಳೆಯು ಕರೆ ಮಾಡಿದಾಗ ಒಂದು ಸುಳಿವನ್ನ ಮಾತ್ರ ಕೊಟ್ಟಿದ್ದರು. ಮಹಿಳೆಯು ತನ್ನ ಆಭರಣವನ್ನ ಕಪ್ಪು ಬ್ಯಾಗ್‍ನಲ್ಲಿ ಇಟ್ಟಿದ್ದು, ಆ ಕಪ್ಪು ಬ್ಯಾಗ್‍ನ ಹುಡುಕಾಟ ಪ್ರಾರಂಭವಾಯಿತು.

    ಪ್ರತಿ ದಿನ 300 ಟನ್‍ಗಳ ಕಸದ ರಾಶಿ ಬೀಳುತ್ತಿದ್ದ ಸ್ಥಳದಲ್ಲಿ, ಮೂರು ಗಂಟೆಗಳ ನಿರಂತರ ಪ್ರಯತ್ನದಿಂದ, ಪ್ರತಿ 20 ನಿಮಿಷಕ್ಕೆ 9-10 ಟನ್‍ಗಳ ಕಸದ ರಾಶಿಯನ್ನ ಹುಡುಕಿ ಕೊನೆಗೂ ಆ ಕಪ್ಪು ಬ್ಯಾಗನ್ನು ಕಾರ್ಮಿಕರು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.

    ಕಸದ ರಾಶಿಯಲ್ಲಿ ಆ ಕಪ್ಪು ಬ್ಯಾಗ್ ಸಿಕ್ಕ ಬಳಿಕ ಅಲ್ಲಿಯ ಕಾರ್ಮಿಕರು ತಮ್ಮದೇ ವಸ್ತು ಕಳೆದು ಹೋದಾಗ ಮತ್ತೆ ಹುಡುಕಿದಷ್ಟು ಸಂತಸವನ್ನ ವ್ಯಕ್ತಪಡಿಸಿದರು.

    ಆ ಕಪ್ಪು ಬ್ಯಾಗ್‍ನಲ್ಲಿ 100,000 ಡಾಲರ್(ಅಂದಾಜು 65 ಲಕ್ಷ ರೂ.) ಬೆಲೆ ಬಾಳುವ ಎರಡು ಉಂಗುರಗಳು ಮತ್ತು ಒಂದು ಕೈಬಳೆ ಇದ್ದವು. ವಜ್ರದ ಆಭರಣವನ್ನ ಹುಡುಕಿದ ಕಾರ್ಮಿಕರಿಗೆ ಆ ಮಹಿಳೆ ಅಭಿನಂದನೆ ಸಲ್ಲಿಸಿದರು.