Tag: ಕಸದ ಬುಟ್ಟಿ

  • ಕಸದ‌ ಬುಟ್ಟಿಯಲ್ಲಿ ನವಜಾತ ಶಿಶು ಪತ್ತೆ

    ಕಸದ‌ ಬುಟ್ಟಿಯಲ್ಲಿ ನವಜಾತ ಶಿಶು ಪತ್ತೆ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್‌ ಪಟ್ಟಣದಲ್ಲಿ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆಯಾಗಿದೆ. ಪಟ್ಟಣದ ಮೇಗಳಪೇಟೆ ನಿರ್ಜನ ಪ್ರದೇಶದ ಕಸದ ರಾಶಿಯಲ್ಲಿ ನವಜಾತ ಗಂಡು ಶಿಶು ಕಳೆಬರ ಸಿಕ್ಕಿದೆ.

    ಕಸದ‌ ರಾಶಿಯಲ್ಲಿ (Garbage) ಶಿಶುವನ್ನು (Baby) ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಶಿಶುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕರಳುಬಳ್ಳಿ ಸಹಿತ ಶಿಶುವನ್ನು ತಿಪ್ಪೆಯಲ್ಲಿ ಎಸೆಯಲಾಗಿದ್ದು, ಮಗು ಜನಿಸಿದ ಬಳಿಕ ಸಾವನ್ನಪ್ಪಿತ್ತಾ ಅಥವಾ ಜೀವಂತ ಶಿಶುವನ್ನೇ ಬಿಟ್ಟು ಹೋಗಿದ್ದರಾ ಅನ್ನೋ ಬಗ್ಗೆ ಮಾಹಿತಿಯಿಲ್ಲ. ತಿಪ್ಪೆಯಲ್ಲಿ ಬಿದ್ದಿದ್ದರಿಂದ ನಾಯಿಗಳು ಶಿಶುವಿನ ಕಾಲನ್ನು ಕಚ್ಚಿ ಗಾಯಗೊಳಿಸಿವೆ. ಇದನ್ನೂ ಓದಿ: ಎಚ್‌ಡಿಕೆ ಹೇಳಿಕೆ ಬೆನ್ನಲ್ಲೇ ಶೃಂಗೇರಿಗೆ ಭೇಟಿ ನೀಡಲಿದ್ದಾರೆ ನಡ್ಡಾ

    ಆಸ್ಪತ್ರೆಯಲ್ಲಿ (Hospital) ಜನಿಸಿದ್ದ ಮಗುವನ್ನು ಬೀಸಾಡಿರಬಹುದಾ ಅಂತ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಶುವನ್ನು ಬೀಸಾಡಿದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: ನನ್ನ ಹತ್ಯೆಗೆ ಸುಪಾರಿ ನೀಡಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ: ಸತೀಶ್ ರೆಡ್ಡಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಮಾನ ನಿಲ್ದಾಣದ ಕಸದ ಬುಟ್ಟಿಯಲ್ಲಿ ಸಿಕ್ತು 34 ಲಕ್ಷ ಮೌಲ್ಯದ ಚಿನ್ನದ ಬಿಸ್ಕತ್

    ವಿಮಾನ ನಿಲ್ದಾಣದ ಕಸದ ಬುಟ್ಟಿಯಲ್ಲಿ ಸಿಕ್ತು 34 ಲಕ್ಷ ಮೌಲ್ಯದ ಚಿನ್ನದ ಬಿಸ್ಕತ್

    ಲಕ್ನೋ: ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸದ ಬುಟ್ಟಿಯಲ್ಲಿ ಲಕ್ಷಾಂತರ ಮೌಲ್ಯ ಬೆಲೆ ಬಾಳುವ 6 ಚಿನ್ನದ ಬಿಸ್ಕತ್ ಪತ್ತೆ ಆಗಿದೆ.

    ಉತ್ತರಪ್ರದೇಶದ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ 6 ಚಿನ್ನದ ಬಿಸ್ಕತ್‍ಗಳ ಬೆಲೆಯೂ ಒಟ್ಟಾರೆಯಾಗಿ 36.60 ಲಕ್ಷ ರೂ.ಗಳಾಗಿವೆ. 6 ಚಿನ್ನದ ಬಾರ್‌ಗಳನ್ನು ಕಪ್ಪು ಟೇಪ್‍ನಿಂದ ಸುತ್ತಿರುವ ಪ್ಲಾಸ್ಟಿಕ್‍ನಲ್ಲಿ ಅಡಗಿಸಿಟ್ಟಿದ್ದರು. ನಂತರ ಇದನ್ನು ವಿಮಾನ ನಿಲ್ದಾಣದ ಕಸದ ಬುಟ್ಟಿಗೆ ಎಸೆಯಲಾಗಿತ್ತು.

    ಇದನ್ನು ನೋಡಿದ ಅಧಿಕಾರಿಗಳು ಚಿನ್ನದ ಬಿಸ್ಕತ್‍ನ್ನು ಜಪ್ತಿ ಮಾಡಲಾಗಿದ್ದು, ಕಸದ ಬುಟ್ಟಿಯಲ್ಲಿ ಚಿನ್ನ ಹೇಗೆ ಬಂತು. ಯಾರು ತಂದರು ಎಂಬ ಬಗ್ಗೆ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ದುಬೈನಿಂದ ಬಂದ ಕೆಲವು ಪ್ರಯಾಣಿಕರನ್ನು ವಿಚಾರಣೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಅಲ್ಲಿರುವ ಸಿಬ್ಬಂದಿಯನ್ನು ತನಿಖೆ ನಡೆಸುತ್ತಿದ್ದಾರೆ. ಆದರೂ ಈವರೆಗೂ ಆ ಚಿನ್ನದ ಬಿಸ್ಕತ್ ಯಾರದ್ದು ಎನ್ನುವುದು ಪತ್ತೆ ಆಗಿಲ್ಲ. ಇದನ್ನೂ ಓದಿ: ಡಿಕೆಶಿ ಕೈಎತ್ತಿದ ಬಳಿಕ ಕುಮಾರಸ್ವಾಮಿ ಅಬ್ಬೇಪಾರಿ ಆಗಿ ಬೀದಿಗೆ ಬಂದ್ರು, ಸಿದ್ದರಾಮಯ್ಯಗೂ ಇದೇ ಗತಿ: ಆರ್. ಅಶೋಕ್

    Live Tv
    [brid partner=56869869 player=32851 video=960834 autoplay=true]

  • ನವಜಾತ ಶಿಶುವನ್ನು ಕಸದ ಬುಟ್ಟಿಗೆ ಎಸೆದು ಹೋದ ಪಾಪಿ ತಾಯಿ

    ನವಜಾತ ಶಿಶುವನ್ನು ಕಸದ ಬುಟ್ಟಿಗೆ ಎಸೆದು ಹೋದ ಪಾಪಿ ತಾಯಿ

    – ನಗರಸಭೆ ನೌಕರನಿಂದ ಮಗು ರಕ್ಷಣೆ

    ಉಡುಪಿ: ಸುರಿಯುವ ಮಳೆಯಲ್ಲಿ ಪಾಪಿ ತಾಯಿಯೊಬ್ಬಳು ನವಜಾತ ಶಿಶುವನ್ನು ಕಸದಬುಟ್ಟಿಯಲ್ಲಿ ಎಸೆದು ಹೋಗಿದ್ದಾಳೆ. ಈ ಅಮಾನವೀಯ ಘಟನೆ ಉಡುಪಿ ನಗರದ ಚಿತ್ತರಂಜನ್ ಸರ್ಕಲ್ ಬಳಿ ನಡೆದಿದೆ.

    ಉಡುಪಿಯಲ್ಲಿ ಕಳೆದ 10 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಇಂದು ಬೆಳಗ್ಗೆಯಿಂದ ನಿರಂತರ ಮಳೆಯಾಗುತ್ತಿದೆ. ಭಾರೀ ಮಳೆಯ ನಡುವೆಯೇ ಹೋಟೆಲೊಂದರ ಮುಂಭಾಗದ ಕಸದ ಬುಟ್ಟಿಗೆ ಪಾಪಿಗಳು ಮಾನವೀಯತೆ ಮರೆತು ಮಗು ಎಸೆದು ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಉಡುಪಿ ನಗರಸಭೆಯ ಪೌರಕಾರ್ಮಿಕರು ಕಸ ಕೊಂಡೊಯ್ಯಲು ಬರುವಾಗ ಮಗುವಿನ ಅಳು ಕೇಳಿದೆ.

    ಕಸದ ಬುಟ್ಟಿಯನ್ನು ಪರಿಶೀಲಿಸಿದಾಗ ನವಜಾತ ಶಿಶು ಪತ್ತೆಯಾಗಿದೆ. ಹೋಟೆಲ್ ಮಾಲೀಕರಿಗೆ, ಸುತ್ತಮುತ್ತ ಸಾರ್ವಜನಿಕರ ವಿಚಾರ ಗಮನಕ್ಕೆ ತಂದಿದ್ದಾರೆ. ಉಡುಪಿ ಜಿಲ್ಲಾ ನಾಗರಿಕ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಸ್ಥಳಕ್ಕಾಗಮಿಸಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಉಡುಪಿ ಜಿಲ್ಲಾ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಸರ್ಕಾರಿ ಮಹಿಳಾ ಹೆರಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಮಗು ಇಂದು ಬೆಳಗ್ಗೆ ಹುಟ್ಟಿದ್ದು ಮಗುವಿನ ಕರುಳಬಳ್ಳಿಯನ್ನು ಕೂಡ ಕತ್ತರಿಸಲಾಗಿಲ್ಲ. 9 ತಿಂಗಳು ಹೊತ್ತು, ಮಗುವನ್ನು ಯಾವುದೇ ಕರುಣೆ ಇಲ್ಲದೆ ಕಸದಬುಟ್ಟಿಯಲ್ಲಿ ಎಸೆದ ಪ್ರಕರಣ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಹೆಣ್ಣು ಮಗುವೆಂದು ನವಜಾತ ಶಿಶುವನ್ನು ಕಸದಬುಟ್ಟಿಗೆ ಎಸೆದಿರುವ ಸಾಧ್ಯತೆ ಇದೆ. ಸದ್ಯ ಮಗು ಹೆರಿಗೆ ಆಸ್ಪತ್ರೆಯಲ್ಲಿ ಆರೋಗ್ಯವಾಗಿದೆ ಎಂದು ನಿತ್ಯಾನಂದ ಒಳಕಾಡು ಹೇಳಿದ್ದಾರೆ. ಉಡುಪಿ ನಗರ ಠಾಣೆಯ ಎಸ್ ಐ ಶಕ್ತಿವೇಲು, ಮಹಿಳಾ ಠಾಣೆ ಎಸ್ ಐ ವೈಲೆಟ್ ಫೆಮಿನಾ ಮತ್ತಿತರರು ಸಮ್ಮುಖದಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  • ಅಂಚೆ ಕಚೇರಿ ಸಿಬ್ಬಂದಿ ಒಳ ಜಗಳಕ್ಕೆ ಕಸವಾಯ್ತು ಸಾಲಮನ್ನಾ ಪತ್ರ, ಆಧಾರ್ ಕಾರ್ಡ್

    ಅಂಚೆ ಕಚೇರಿ ಸಿಬ್ಬಂದಿ ಒಳ ಜಗಳಕ್ಕೆ ಕಸವಾಯ್ತು ಸಾಲಮನ್ನಾ ಪತ್ರ, ಆಧಾರ್ ಕಾರ್ಡ್

    ಬೆಂಗಳೂರು: ಆಧಾರ್ ಕಾರ್ಡ್ ಎಂಬುದು ಭಾರತೀಯ ಪ್ರತಿಯೊಬ್ಬ ಪ್ರಜೆಯ ಸಾಮಾನ್ಯ ಹಕ್ಕು, ಇಂತಹ ಆಧಾರ್ ಕಾರ್ಡ್ ಜನರ ಕೈ ಸೇರುವ ಬದಲು ಕಸದ ತೊಟ್ಟಿ ಸೇರಿದ ಘಟನೆ ಬೆಂಗಳೂರು ಹೊರವಲಯ ಮಂಡೂರು ಗ್ರಾಮದಲ್ಲಿ ನಡೆದಿದೆ.

    ಮಂಡೂರಿನ ಅಂಚೆ ಕಚೇರಿ ಸಿಬ್ಬಂದಿಯ ಒಳ ಜಗಳದಿಂದ ಆಧಾರ್ ಕಾರ್ಡ್ ಜೊತೆಗೆ ರಾಜ್ಯ ಸರ್ಕಾರದಿಂದ ರೈತರಿಗೆ ನೀಡಿದ್ದ ಸಾಲಮನ್ನಾ ಪತ್ರಗಳು ಕಸದ ಬುಟ್ಟಿಗೆ ಸೇರಿದೆ. ರಾಜ್ಯ ಸರ್ಕಾರ ರೈತರಿಗೆ ಸಾಲಮನ್ನಾ ಪತ್ರಗಳನ್ನು ಅಂಚೆ ಮುಖಾಂತರ ಕಳುಹಿಸಿತ್ತು. ಆದ್ರೆ ಅಂಚೆ ಸಿಬ್ಬಂದಿಗಳ ಎಡವಟ್ಟು ಕೆಲಸದಿಂದ ರೈತರಿಗೆ ಅನ್ಯಾನವಾಗಿದೆ. ಜೊತೆಗೆ ಆಧಾರ್ ಗೆ ನೊಂದಣಿಯಾದವರ ಕಾರ್ಡ್ ಗಳು ಕೂಡ ಸೇರಬೇಕಾದವರಿಗೆ ತಲುಪದೇ ಕಸದ ಬುಟ್ಟಿ ಸೇರಿದೆ.

    ಕಚೇರಿಗೆ ಬಂದ ಪೋಸ್ಟ್ ಗಳನ್ನು ಜನರಿಗೆ ತಲುಪಿಸದೇ ಕಸದ ತೊಟ್ಟಿಗೆ ಎಸೆದಿದ್ದ ವಿಷಯ ಗ್ರಾಮಸ್ಥರಿಗೆ ತಿಳಿದಿದೆ. ಬಳಿಕ ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಸದಸ್ಯ ಕೆಂಪರಾಜು ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿ ಅಂಚೆ ಕಚೇರಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೆಯೇ ಕಸದ ತೊಟ್ಟಿಗೆ ಎಸೆದಿರುವ ಆಧಾರ್ ಕಾರ್ಡ್ ಹಾಗೂ ಸರ್ಕಾರದಿಂದ ರೈತರಿಗೆ ನೀಡಿರುವ ಸವಲತ್ತು ಪತ್ರಗಳನ್ನು ಅವರ ಮನೆಬಾಗಲಿಗೆ ತಲುಪಿಸುವಂತೆ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv