Tag: ಕಸದ ತೊಟ್ಟಿ

  • ಕಸದ ತೊಟ್ಟಿಯಲ್ಲಿ ಹೆಣ್ಣು ಮಗು ಪತ್ತೆ – ಸ್ಥಳೀಯರಿಂದ ರಕ್ಷಣೆ

    ಕಸದ ತೊಟ್ಟಿಯಲ್ಲಿ ಹೆಣ್ಣು ಮಗು ಪತ್ತೆ – ಸ್ಥಳೀಯರಿಂದ ರಕ್ಷಣೆ

    ಚೆನ್ನೈ: ಹೆಣ್ಣುಮಗುವನ್ನು ಕಸದ ತೊಟ್ಟಿಯಲ್ಲಿ ನಿರ್ದಾಕ್ಷಿಣ್ಯವಾಗಿ ಪೋಷಕರು ಬಿಟ್ಟು ಹೋಗಿರುವ ಘಟನೆ ವೆಲ್ಲೂರಿನಲ್ಲಿ ನಡೆದಿದೆ.

    ಮಗು ಅಳುತ್ತಿರುವ ಶಬ್ದವನ್ನು ಕೇಳಿ ಸ್ಥಳೀಯರು ಕಸದ ತೊಟ್ಟಿಯನ್ನು ಪರಿಶೀಲಿಸಿದಾಗ ಕಸದ ರಾಶಿಯ ಮಧ್ಯೆ ಮಗು ಪತ್ತೆಯಾಗಿದೆ. ಕೂಡಲೇ ಸ್ಥಳೀಯರು ವೆಲ್ಲೂರು ಉತ್ತರ ಠಾಣೆಯ ಪೊಲೀಸರಿಗೆ ಹಾಗೂ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಾಚ್ ಆರ್ಡರ್ ಮಾಡಿ ಬಂದಿದ್ದು ಕಾಂಡೋಮ್!

    ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಮಗು ಪತ್ತೆಯಾದ ಸ್ಥಳದ ಪಕ್ಕದಲ್ಲಿ ಬಟ್ಟೆಗಳಿರುವ ಸಣ್ಣ ಬ್ಯಾಗ್ ಕಂಡು ಬಂದಿದೆ. ಇದೀಗ ಮಗುವನ್ನು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗು ಚೇತರಿಸಿಕೊಳ್ಳುತ್ತಿದೆ. ಸದ್ಯ ಘಟನೆ ಕುರಿತಂತೆ ಪ್ರಾಥಮಿಕ ತನಿಖೆ ವೇಳೆ ಮಗುವಿಗೆ ಕೇವಲ ಎರಡ್ಮೂರು ದಿನವಾಗಿರಬಹುದು ಎಂದು ಶಂಕಿಸಲಾಗಿದ್ದು, ಇದೀಗ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದದ್ದಾರೆ ಹಾಗೂ ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    POLICE JEEP

    ಇದೇ ರೀತಿ ಇತ್ತೀಚೆಗಷ್ಟೇ ನವಜಾತ ಶಿಶುವೊಂದನ್ನು ವಿಮಾನದ ಟಾಯ್ಲೆಟ್‍ನಲ್ಲಿ ಪೇಪರ್‌ನಿಂದ ಸುತ್ತಿ ಅಲ್ಲಿದ್ದ ಕಸದ ಬುಟ್ಟಿಗೆ ಎಸೆದು ಹೋದ ಘಟನೆ ಮಾರಿಷಸ್‍ನಲ್ಲಿ ನಡೆದಿತ್ತು. ಏರ್‍ಮರಿಷಸ್ ಏರ್‌ಬಸ್ 330-900 ವಿಮಾನವನ್ನು ತಪಾಸಣೆ ನಡೆಸುವ ವೇಳೆ ಟಾಯ್ಲೆಟ್‍ನಲ್ಲಿ ನವಜಾತ ಶಿಶು ಪತ್ತೆಯಾಗಿತ್ತು. ಆ ಬಳಿಕ ಈ ಸಂಬಂಧ ಮಡಗಾಸ್ಕರ್‌ನ ಮಹಿಳೆಯನ್ನು(20) ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಇದನ್ನೂ ಓದಿ: ವಿಮಾನದ ಟಾಯ್ಲೆಟ್‍ನಲ್ಲಿ ನವಜಾತ ಶಿಶು ಪತ್ತೆ

    ಬಂಧಿತ ಮಹಿಳೆ ನಾನು ಆ ಮಗವಿಗೆ ಜನ್ಮನೀಡಿಲ್ಲ ಎಂದು ವಾದಿಸುತ್ತಿದ್ದು, ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆ ಮಾಡಲು ಮುಂದಾಗಿದ್ದರು. ಅಂತರಾಷ್ಟ್ರೀಯ ವಿಮಾನ ಪ್ರಯಾಣದ ನಿಯಮದ ಪ್ರಕಾರ 28 ವಾರದ ಬಳಿಕ ಗರ್ಭಿಣಿ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ಇಲ್ಲದ ಕಾರಣ ಮಹಿಳೆ ಸುಳ್ಳು ಹೇಳಿರುವುದಾಗಿ ತಿಳಿಸಿ ಮಗು ತನ್ನದೇ ಎಂದು ಒಪ್ಪಿಕೊಂಡಳು. ನಂತ ಇಬ್ಬರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.

  • ಕಸದ ತೊಟ್ಟಿಗೆ ಎಳೆದು 8ರ ಬಾಲಕಿಯ ಮೇಲೆ ರೇಪ್ – ಬಾಯಿ ಮುಚ್ಚಿಸಲು ಕೊಟ್ಟ 5 ರೂ.

    ಕಸದ ತೊಟ್ಟಿಗೆ ಎಳೆದು 8ರ ಬಾಲಕಿಯ ಮೇಲೆ ರೇಪ್ – ಬಾಯಿ ಮುಚ್ಚಿಸಲು ಕೊಟ್ಟ 5 ರೂ.

    ಭೋಪಾಲ್: ಆಟವಾಡುತ್ತಿದ್ದ ಬಾಲಕಿಯನ್ನು ಕಿರಾತಕನೊಬ್ಬ ಕಸದ ತೊಟ್ಟಿಯೊಳಗೆ ಹೊತ್ತೊಯ್ದು ಅತ್ಯಾಚಾರ ಎಸಗಿ ಈ ವಿಚಾರವನ್ನು ಎಲ್ಲೂ ಹೇಳಬೇಡ ಎಂದು 5 ರೂಪಾಯಿ ನೀಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    8 ವರ್ಷದ ಬಾಲಕಿ ಮನೆಯ ಅಂಗಳದಲ್ಲಿ ಆಟವಾಡುತ್ತಾ ಕುಳಿತಿದ್ದಳು. ಈ ವೇಳೆ ಓರ್ವ ವ್ಯಕ್ತಿ ಆಕೆಯ ಕೈಗೆ 100 ರೂಪಾಯಿ ಇಟ್ಟು ಅಂಗಡಿಗೆ ಹೋಗಿ ತಂಬಾಕು ತೆಗೆದುಕೊಂಡು ಬಂದು ಕಸದ ತೊಟ್ಟಿಯಲ್ಲಿರುವ ಅಂಕಲ್‍ಗೆ ಕೊಡು ಎಂದು ಹೇಳಿದ್ದಾನೆ. ಏನು ಅರಿಯದ ಬಾಲಕಿ ಕೊಡಲು ಹೋಗಿದ್ದಾಳೆ. ಆಗ ಕಸದ ತೊಟ್ಟಿ ಬಳಿ ಇರುವ ವ್ಯಕ್ತಿ ಬಾಲಕಿಯನ್ನು ಎಳೆದುಕೊಂಡು ಅತ್ಯಾಚಾರ ಮಾಡಿದ್ದಾನೆ. ನಂತರ ಈ ವಿಚಾರ ಹೇಳದಂತೆ ಆಕೆಯ ಕೈಗೆ 5 ರೂಪಾಯಿ ಇಟ್ಟು ಕಳಿಸಿದ್ದಾನೆ.

    ಮನೆಗೆ ಬಂದ ಬಾಲಕಿ ನಡೆದಿರುವ ವಿಚಾರವನ್ನು ಹೇಳಿದ್ದಾಳೆ. ನಂತರ ಬಾಲಕಿಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲಕಿಗೆ 40 ಮಂದಿ ಅನುಮಾನಸ್ಪದ ವ್ಯಕ್ತಿಗಳ ಫೋಟೋವನ್ನು ತೋರಿಸಲಾಗಿದೆ. ಬಾಲಕಿ ರವಿ ಎನ್ನುವ ವ್ಯಕ್ತಿಯ ಫೋಟೋವನ್ನು ಗುರುತಿಸಿದ್ದಾಳೆ. ಆರೋಪಿ ರವಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

  • ನವಜಾತ ಹೆಣ್ಣುಮಗು ಬದುಕಲ್ಲ ಎಂದು ಕಸದ ತೊಟ್ಟಿಗೆ ಎಸೆದ ನಿರ್ದಯಿ ತಂದೆ- ನಂತರ ನಡೆದಿದ್ದು ಪವಾಡ

    ನವಜಾತ ಹೆಣ್ಣುಮಗು ಬದುಕಲ್ಲ ಎಂದು ಕಸದ ತೊಟ್ಟಿಗೆ ಎಸೆದ ನಿರ್ದಯಿ ತಂದೆ- ನಂತರ ನಡೆದಿದ್ದು ಪವಾಡ

    ಬೀಜಿಂಗ್: ಆ ಮಗು ಜನಿಸಿ ಕೇವಲ 2 ಗಂಟೆಗಳಷ್ಟೇ ಕಳೆದಿತ್ತು. ಅದರ ಕರುಳ ಬಳ್ಳಿಯೂ ಕೂಡ ಹಾಗೇ ಇತ್ತು. ಮಗು ಬದುಕುಳಿಯೋದಿಲ್ಲ ಎಂದು ತಂದೆ ಅದನ್ನ ಬ್ಯಾಗ್‍ನಲ್ಲಿ ತುಂಬಿ ಕಸದ ತೊಟ್ಟಿಗೆ ಎಸೆದು ಹೋಗಿದ್ದ. ಆದ್ರೆ ಆ ಮಗು ಇನ್ನೂ ಜೀವಂತವಾಗಿದ್ದು, ಆರೋಗ್ಯಕರವಾಗೇ ಇತ್ತು.

    ಇಂತಹ ಅಮಾನವೀಯ ಘಟನೆ ನಡೆದಿರೋದು ಚೀನಾದ ಕ್ಸುವಾಂಕೀನಲ್ಲಿ. ಮಗುವನ್ನ ಕಸದ ಬುಟ್ಟಿಗೆ ಎಸೆದು ಹೋದ ವ್ಯಕ್ತಿಯನ್ನ ಸದ್ಯ ಪೊಲೀಸರು ಬಂಧಿಸಿದ್ದಾರೆ. 8 ತಿಂಗಳ ಗರ್ಭಿಣಿಯಾಗಿದ್ದ ಈತನ ಗರ್ಲ್ ಫ್ರೆಂಡ್ ಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ನಂತರ ಆಕೆ ಮನೆಯ ಹಾಲ್‍ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಗುವನ್ನ ಆಸ್ಪತ್ರೆಗೆ ಕೊಂಡೊಯ್ಯೋ ಬದಲು ತಂದೆ ಮಗುವನ್ನ ಹಾಸಿಗೆ ಮೇಲೆ ಹಾಕಿ ತನ್ನ ಗರ್ಲ್ ಫ್ರೆಂಡ್ ಆರೈಕೆ ಮಾಲು ಹೋಗಿದ್ದ. 2 ಗಂಟೆಗಳ ಬಳಿಕ ಆತ ವಾಪಸ್ ಬಂದು ನೋಡಿದಾಗ ಮಗುವಿನ ದೇಹ ನೇರಳೆ ಬಣ್ಣಕ್ಕೆ ತಿರುಗಿತ್ತು. ಮಗು ಬದುಕಲ್ಲ ಅಂತ ಅಂದುಕೊಂಡಿದ್ದೆ ಎಂದು ಆರೋಪಿ ತಂದೆ ಹೇಳಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

    ಬಳಿಕ ವೃದ್ಧ ವ್ಯಕ್ತಿಯೊಬ್ಬರು ಮಗುವನ್ನ ಕಸದ ತೊಟ್ಟಿಯಲ್ಲಿ ನೋಡಿ ಅದನ್ನ ರಕ್ಷಣೆ ಮಾಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗುವನ್ನ ತೆಗೆದುಕೊಂಡು ಅದರ ಮೇಲೆ ಹೊದಿಕೆ ಹಾಕಿ ಬೆಚ್ಚಗಿರುವಂತೆ ನೋಡಿಕೊಂಡಿದ್ದಾರೆ. ನಂತರ ಮಗುವನ್ನ ಆಸ್ಪತ್ರೆಗೆ ಕೊಂಡೊಯ್ದಿದ್ದು, ಪರೀಕ್ಷೆ ಮಾಡಿದ ನಂತರ ವೈದ್ಯರು, ಮಗು ಸಂಪೂರ್ಣವಾಗಿ ಆರೋಗ್ಯಕರವಾಗಿದೆ ಎಂದು ಹೇಳಿದ್ದಾರೆ.

    ಚಳಿಯಿಂದಾಗಿ ಮಗುವಿನ ಮುಖ ನೇರಳೆ ಬಣ್ಣಕ್ಕೆ ತಿರುಗಿತ್ತು. ನಂತರ ಮಗುವನ್ನ ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಿದ್ದು, ಬಳಿಕ ಅಲ್ಲಿಂದ ಅನಾಥಾಶ್ರಮಕ್ಕೆ ತೆಗೆದುಕೊಂಡು ಹೋಗಲಾಗಿದೆ ಎಂದು ಇಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ.

    ನಿರ್ದಯಿ ತಂದೆ ಮಗುವನ್ನ ಕಸದ ತೊಟ್ಟಿಯಲ್ಲಿ ಎಸೆದು, ತನ್ನ ಕೈಗಳನ್ನ ಜೇಬಿನಲ್ಲಿ ಇರಿಸಿಕೊಂಡು ಆತುರದಿಂದ ನಡೆದುಕೊಂಡು ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
    ಸದ್ಯ ಮಗುವಿನ ತಂದೆ-ತಾಯಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.