Tag: ಕಷ್ಣ ಬೈರೇಗೌಡ

  • ಸುಳ್ಳು ಮಾಹಿತಿ ನೀಡಿ ಪಿಂಚಣಿ ಪಡೆಯೋರಿಗೆ ಶಾಕ್ – 23 ಲಕ್ಷ ಪಿಂಚಣಿದಾರರ ಮೇಲೆ ಕಂದಾಯ ಇಲಾಖೆ ಅನುಮಾನ

    ಸುಳ್ಳು ಮಾಹಿತಿ ನೀಡಿ ಪಿಂಚಣಿ ಪಡೆಯೋರಿಗೆ ಶಾಕ್ – 23 ಲಕ್ಷ ಪಿಂಚಣಿದಾರರ ಮೇಲೆ ಕಂದಾಯ ಇಲಾಖೆ ಅನುಮಾನ

    ಬೆಂಗಳೂರು: ಅರ್ಹರಿಗೆ ಗ್ಯಾರಂಟಿ ಯೋಜನೆಗಳು (Guarantee Scheme) ಸಿಗಬೇಕು ಅನರ್ಹರಿಗೆ ಅಲ್ಲ ಅನ್ನೋದನ್ನ ಗಮನದಲ್ಲಿಟ್ಟುಕೊಂಡು ಸರ್ಕಾರ ಅನರ್ಹರಿಗೆ ಶಾಕ್ ಕೊಡಲು ಮುಂದಾಗಿದೆ. ಅದರ ಭಾಗವಾಗಿ ಸುಳ್ಳು ಹೇಳಿ ಪಿಂಚಣಿ ಪಡೆಯುತ್ತಿರುವವರ ಮೇಲೆ ಕಂದಾಯ ಇಲಾಖೆ ಕಣ್ಣಿಟ್ಟಿದೆ.

    ವಯಸ್ಸಿನ ಮಿತಿ ತಪ್ಪು ಮಾಹಿತಿ ನೀಡಿ ಸರ್ಕಾರಿ ನೌಕರರು ಆದಾಯ ತೆರಿಗೆ ಪಾವತಿ ಮಾಡ್ತಾ ಇರುವವರು ಪಿಂಚಣಿ (Pension) ಪಡೆಯುತ್ತಿದ್ದಾರೆ ಅಂತಾ 23 ಲಕ್ಷ ಪಿಂಚಣಿದಾರರ ಮೇಲೆ ಕಂದಾಯ ಇಲಾಖೆ (Revenue Department) ಕಣ್ಣಿಟ್ಟಿದೆ. ಹೀಗಾಗಿ 23 ಲಕ್ಷ ಪಿಂಚಣಿದಾರರನ್ನ ಬಗ್ಗೆ ಪರಿಶೀಲಿಸುವಂತೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ – ಗೋಕಾಕ್ ಜಲಪಾತಕ್ಕೆ ಜೀವಕಳೆ

    ಅಂಕಿ-ಅಂಶ
    ವೃದ್ಧಾಪ್ಯ ವೇತನ ಫಲಾನುಭವಿಗಳು – 21.87 ಲಕ್ಷ
    ವೃದ್ಧಾಪ್ಯ ವೇತನ ಅನರ್ಹ ಫಲಾನುಭವಿಗಳು – 9.04 ಲಕ್ಷ
    ಸಂಧ್ಯಾ ಸುರಕ್ಷಾ ಫಲಾನುಭವಿಗಳು – 31.33 ಲಕ್ಷ ಜನ
    ಸಂಧ್ಯಾ ಸುರಕ್ಷಾ ಅನರ್ಹ ಫಲಾನುಭವಿಗಳು – 14.15 ಲಕ್ಷ

    ಹೀಗೆ 23 ಲಕ್ಷ ಅನರ್ಹ ಪಿಂಚಣಿದಾರರಿಗೆ ಕಡಿವಾಣ ಹಾಕಲು ಕಂದಾಯ ಇಲಾಖೆ ಮುಂದಾಗಿದೆ. ಇನ್ನೂ 23 ಲಕ್ಷ ಪಿಂಚಣಿದಾರರು ಅನರ್ಹರು ಅಂತಾ ಹೇಳ್ತಿಲ್ಲ. ಅವರ ಬಗ್ಗೆ ಅನುಮಾನ ಇದೆ. ಆಧಾರ್ ಕಾರ್ಡ್‌ನಲ್ಲಿ 40 ವರ್ಷ ಇರುವವರು ಕೂಡ ಪಿಂಚಣಿ ಪಡೆಯುತ್ತಿದ್ದಾರೆ. ಈ ರೀತಿ ಮಾಡೋದು ಫ್ರಾಡ್. ಕೂಡಲೇ ಪರಿಶೀಲನೆ ಮಾಡ್ತೇವೆ. ಅನರ್ಹರನ್ನು ಕೂಡಲೇ ರದ್ದು ಮಾಡ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಇದನ್ನೂ ಓದಿ: Chikkamagaluru | ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು