Tag: ಕಷಾಯ

  • ಆರೋಗ್ಯಕರ ಕಷಾಯ ರೆಸಿಪಿ – ನೀವೊಮ್ಮೆ ಮಾಡಿ

    ಆರೋಗ್ಯಕರ ಕಷಾಯ ರೆಸಿಪಿ – ನೀವೊಮ್ಮೆ ಮಾಡಿ

    ದೀಗ ಚಳಿಯ ವಾತಾವರಣ ಹೆಚ್ಚಿರುವ ಕಾಲವಾದ್ದರಿಂದ, ನೆಗಡಿ, ಗಂಟಲುನೋವು ಸಾಮಾನ್ಯವಾಗಿ ಕಂಡುಬರುತ್ತದೆ. ಈ ಸಂದರ್ಭ ನೀವು ಆರೋಗ್ಯ ಹಾಗೂ ದೇಹವನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕೆಂದರೆ ಉತ್ತಮ ಆಹಾರಾಭ್ಯಸವನ್ನು ಮೈಗೂಡಿಸಿಕೊಳ್ಳುವುದೂ ಅಗತ್ಯ. ನಾವಿಂದು ಚಹಾ ಅಥವಾ ಕಾಫಿ ಬದಲಿಗೆ ಸವಿಯಬಹುದಾದ ಆರೋಗ್ಯಕರ ಕಷಾಯ ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ನೆಗಡಿ ಮಾತ್ರವಲ್ಲದೇ ಜೀರ್ಣಕ್ರಿಯೆ, ಆಮ್ಲೀಯತೆಗೂ ಈ ರೆಸಿಪಿ ಮದ್ದಾಗುತ್ತದೆ. ನೀವು ಕಷಾಯದ ಪುಡಿಯನ್ನು ಮಾಡಿಟ್ಟುಕೊಂಡರೆ ಬೇಕೆನಿಸಿದಾಗ ಹಾಲಿನೊಂದಿಗೆ ಸವಿಯಬಹುದು.

    ಬೇಕಾಗುವ ಪದಾರ್ಥಗಳು:
    ಕಷಾಯ ಪುಡಿ ತಯಾರಿಸಲು:
    ಕೊತ್ತಂಬರಿ ಬೀಜ – 1 ಕಪ್
    ಜೀರಿಗೆ – ಅರ್ಧ ಕಪ್
    ಸೋಂಪು – 3 ಟೀಸ್ಪೂನ್
    ಮೆಂತ್ಯ – 2 ಟೀಸ್ಪೂನ್
    ಕರಿ ಮೆಣಸು – 2 ಟೀಸ್ಪೂನ್
    ಲವಂಗ – 10
    ಏಲಕ್ಕಿ – 5
    ಜಾಯಿಕಾಯಿ – 1
    ಅರಿಶಿನ – 2 ಟೀಸ್ಪೂನ್
    ಒಣ ಶುಂಠಿ ಪುಡಿ – 2 ಟೀಸ್ಪೂನ್
    ಕಷಾಯ ಮಾಡಲು:
    ನೀರು – 1 ಕಪ್
    ಹಾಲು – 1 ಕಪ್
    ಕಷಾಯ ಪುಡಿ – 1-2 ಟೀಸ್ಪೂನ್
    ಬೆಲ್ಲ – ಸ್ವಾದಕ್ಕನುಸಾರ

    ಮಾಡುವ ವಿಧಾನ:
    * ಮೊದಲಿಗೆ ಪ್ಯಾನ್ ಅನ್ನು ಬಿಸಿ ಮಾಡಿ, ಅದರಲ್ಲಿ ಕೊತ್ತಂಬರಿ ಬೀಜ, ಜೀರಿಗೆ ಹಾಗೂ ಸೋಂಪು ಹಾಕಿ ಕಡಿಮೆ ಉರಿಯಲ್ಲಿ ರೋಸ್ಟ್ ಮಾಡಿಕೊಳ್ಳಿ.
    * ಮಸಾಲೆ ಪದಾರ್ಥಗಳು ಪರಿಮಳ ಹಾಗೂ ಗರಿಗರಿಯಾಗುವವರೆಗೆ ಹುರಿದುಕೊಂಡು ಬಳಿಕ ಅದನ್ನು ಇನ್ನೊಂದು ಪಾತ್ರೆಗೆ ಹಾಕಿ ತಣ್ಣಗಾಗಲು ಬಿಡಿ.
    * ಈಗ ಅದೇ ಪ್ಯಾನ್‌ಗೆ ಮೆಂತ್ಯ, ಕರಿಮೆಣಸು, ಲವಂಗ, ಏಲಕ್ಕಿ ಹಾಗೂ ಜಾಯಿಕಾಯಿ ಹಾಕಿ ಹುರಿದುಕೊಳ್ಳಿ.
    * ಈಗ ಹುರಿದ ಎಲ್ಲಾ ಮಸಾಲೆಗಳನ್ನೂ ತಟ್ಟೆಗೆ ವರ್ಗಾಯಿಸಿ, ಅರಶಿನ ಮತ್ತು ಒಣ ಶುಂಠಿ ಪುಡಿ ಸೇರಿಸಿ.
    * ಹುರಿದ ಎಲ್ಲಾ ಮಸಾಲೆ ಪದಾರ್ಥಗಳು ತಣ್ಣಗಾಗಿದೆ ಎಂದು ಖಚಿತಪಡಿಸಿಕೊಂಡ ಬಳಿಕ ಅವುಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ಚೆನ್ನಾಗಿ ಪುಡಿ ಮಾಡಿ (ನೀರು ಹಾಕುವುದು ಬೇಡ).
    * ಇದೀಗ ಕಷಾಯ ಪುಡಿ ತಯಾರಾಗಿದ್ದು, ಗಾಳಿಯಾಡದ ಡಬ್ಬಿಯಲ್ಲಿ ಹಾಕಿಡಿ. ನೀವು ಬೇಕೆಂದಾಗ ಇದನ್ನು ಬಳಸಬಹುದು.
    * ಇದೀಗ ಕಷಾಯ ತಯಾರಿಸಲು ಒಂದು ಸಣ್ಣ ಪಾತ್ರೆ ತೆಗೆದುಕೊಳ್ಳಿ. ಒಂದು ಕಪ್ ನೀರು ಹಾಕಿ, ಬೆಲ್ಲ ಸೇರಿಸಿ ಕುದಿಸಿಕೊಳ್ಳಿ.
    * ನೀರು ಕುದಿ ಬರಲು ಪ್ರಾರಂಭವಾದಾಗ ಕಷಾಯ ಪುಡಿಯನ್ನು 1-2 ಟೀಸ್ಪೂನ್‌ನಷ್ಟು ಹಾಕಿ. ಚಮಚದ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಕಷಾಯವನ್ನು ಚೆನ್ನಾಗಿ ಕುದಿಯಲು ಬಿಡಿ.
    * ಬಳಿಕ ಉರಿಯನ್ನು ಆಫ್ ಮಾಡಿ, ಬಿಸಿ ಹಾಲನ್ನು ಕಷಾಯಕ್ಕೆ ಸೇರಿಸಿ. ಹಾಗೂ ಮಿಶ್ರಣ ಮಾಡಿ.
    * ಇದೀಗ ಆರೋಗ್ಯಕರ ಕಷಾಯ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ಜೀರಿಗೆ ಕಷಾಯ ಮಾಡಿ ನಾಲಿಗೆಗೆ ರುಚಿ ಆರೋಗ್ಯಕ್ಕೆ ಒಳ್ಳೆಯದು

    ಜೀರಿಗೆ ಕಷಾಯ ಮಾಡಿ ನಾಲಿಗೆಗೆ ರುಚಿ ಆರೋಗ್ಯಕ್ಕೆ ಒಳ್ಳೆಯದು

    ವಾತಾವರಣ ಬದಲಾದಂತೆ ಶೀತ, ಜ್ವರದಂತಹ ಸಮಸ್ಯೆಗಳು ಎಲ್ಲರನ್ನೂ ಬಾಧಿಸುತ್ತವೆ. ಆರೋಗ್ಯಕರವಾದ ಹಾಗೂ ನಾಲಿಗೆಗೆ ರುಚಿ ನೀಡುವ ಈ ಜೀರಿಗೆ ಕಷಾಯವನ್ನು ಸೇವಿಸಬಹುದಾಗಿದೆ. ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಈ ಕಷಾಯವನ್ನು ಮಾಡುವ ವಿಧಾನ ನಿಮಗಾಗಿ.

    ಬೇಕಾಗುವ ಸಾಮಗ್ರಿಗಳು:
    * ಜೀರಿಗೆ- 4 ಚಮಚ
    * ಉಪ್ಪು- ಸ್ವಲ್ಪ
    * ಹಾಲು- ಸ್ವಲ್ಪ
    * ಬೆಲ್ಲ- ಅರ್ಧ ಕಪ್
    * ಪುದೀನ- ಸ್ವಲ್ಪ
    * ಏಲಕ್ಕಿ-2
    * ದನಿಯಾ- ಕುಟ್ಟಿದ್ದು ಸ್ವಲ್ಪ ಇದನ್ನೂ ಓದಿ:   ಫಟಾ ಫಟ್ ಅಂತ ಮಾಡಿ ಘಮ್ ಎನ್ನುವ ಜೀರಿಗೆ ರಸಂ

    ಮಾಡುವ ವಿಧಾನ:

    * ಒಂದು ಪಾತ್ರೆಯನ್ನು ಗ್ಯಾಸ್ ಮೇಲೆ ಇಟ್ಟು ನೀರನ್ನು ಹಾಕಿ ಕುದಿಸಿಕೊಳ್ಳಬೇಕು. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ನಂತರ ದನಿಯಾ, ಜೀರಿಗೆ, ಏಲಕ್ಕಿ, ಬೆಲ್ಲ, ಪುದೀನ ಎಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    * ನಂತರ ಕೊನೆಯಲ್ಲಿ ಹಾಲನ್ನು ಸೇರಿಸಿ ಸೋಸಿಕೊಳ್ಳಬೇಕು. ಈಗ ರುಚಿಯಾದ ಜೀರಿಗೆ ಕಷಾಯ ಸವಿಯಲು ಸಿದ್ಧವಾಗುತ್ತದೆ.

  • ಕೊರೋನಾ ವಿರುದ್ಧ ಊರಿಗೆ ಊರೇ ಫೈಟ್- ಕಷಾಯ ಕುಡಿದ್ರಷ್ಟೇ ಹೋಟೆಲ್‍ನಲ್ಲಿ ಟಿಫನ್..!

    ಕೊರೋನಾ ವಿರುದ್ಧ ಊರಿಗೆ ಊರೇ ಫೈಟ್- ಕಷಾಯ ಕುಡಿದ್ರಷ್ಟೇ ಹೋಟೆಲ್‍ನಲ್ಲಿ ಟಿಫನ್..!

    ಗದಗ: ಇಲ್ಲಿನ ಗ್ರಾಮವೊಂದರಲ್ಲಿ ಯಾವುದೇ ಹೋಟೆಲ್‍ಗೆ ಹೋದರೂ ಒಂದು ಲೋಟ ಕಷಾಯ ಕೊಡ್ತಾರೆ. ಬೇಡಪ್ಪ ಕಷಾಯ ಕುಡಿಯೋಕ್ಕಾಗಲ್ಲ ಅಂದ್ರೆ ಅಲ್ಲಿಂದ ಜಾಗ ಖಾಲಿ ಮಾಡು ಅಂತಾರೆ. ಇಡೀ ಊರೇ ರೋಗ ನಿರೋಧಕ ಶಕ್ತಿ ಇದ್ದವನೇ ಮಹಾಶೂರ ಅಂತಿದೆ.

    ಹೌದು. ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಇಡೀ ಊರಿಗೆ ಊರೇ ಕೊರೋನಾ ವಿರುದ್ಧ ಟೊಂಕಕಟ್ಟಿ ನಿಂತಿದೆ. ಹೆಮ್ಮಾರಿ ಕೊರೋನಾ ಹಿಮ್ಮೆಟ್ಟಿಸಲು ಗ್ರಾಮ ಪಂಚಾಯ್ತಿ ಮಾಡಿರೋ ಮಾಸ್ಟರ್ ಪ್ಲಾನ್‍ನಿಂದಾಗಿ ಗ್ರಾಮಸ್ಥರು ಆರೋಗ್ಯವೇ ಭಾಗ್ಯ ಅಂತಿದ್ದಾರೆ.

    ಗ್ರಾಮದಲ್ಲಿ ಯಾವುದೇ ಹೋಟೆಲ್‍ಗೆ ಹೋದ್ರೂ ಮೊದ್ಲು ಒಂದು ಲೋಟ ಕಷಾಯ ಕೊಡ್ತಾರೆ. ಆಮೇಲೆ ಊಟ, ತಿಂಡಿ ಏನ್ ಬೇಕು ಅಂತ ಕೇಳ್ತಾರೆ. ಕಷಾಯಕ್ಕೆ ಆಯುರ್ವೇದಲ್ಲಿ ವಿಶೇಷ ಸ್ಥಾನ ಇದೆ. ಗಂಟಲಿನಲ್ಲಿನ ವೈಸರ್‍ಗಳನ್ನು ಕೊಲ್ಲಬಲ್ಲ, ರೋಗನಿರೋಧಕ ಶಕ್ತಿಯನ್ನ ಹೆಚ್ವಿಸುವಲ್ಲೂ ಕಷಾಯ ಸಹಕಾರಿ. ಹೀಗಾಗಿ ಅಬ್ಬಿಗೇರಿ ಗ್ರಾಮ ಪಂಚಾಯ್ತಿ ಗ್ರಾಮದ ಪ್ರತಿ ಹೋಟೆಲ್‍ಗಳಲ್ಲಿ ಕಷಾಯ ನೀಡುವಂತೆ ಮನವಿ ಮಾಡಿದೆ. ಟೀ ಅಂಗಡಿಗೆ ಹೋದ್ರೂ ಅಲ್ಲೂ ಮೊದಲಿಗೆ ಒಂದು ಕಪ್ ಕಷಾಯ ಕೊಡ್ತಾರೆ. ಹೋಟೆಲ್‍ಗಳಲ್ಲಿ ಒಂದು ವೇಳೆ ಕಷಾಯ ಬೇಡಪ್ಪ ಅಂದ್ರೆ ಎದ್ದು ಮುಂದಕ್ಕೆ ಹೋಗಯ್ಯ ಅಂತಾರೆ.. ಇನ್ನು ಎಲ್ಲೇ ಕಷಾಯ ಕುಡಿದ್ರೂ ಹಣ ಪಡೆಯಲ್ಲ.

    ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಅಧಿಕಾರಿಗಳ ಮನವಿಯಂತೆ ಸದ್ಯ ಹೋಟೆಲ್‍ನವರೇ ಉಚಿತವಾಗಿ ಕಷಾಯ ಕೊಡ್ತಿದ್ದಾರೆ. ಕೆಲ ದಿನದಲ್ಲೇ ಗ್ರಾಮ ಪಂಚಾಯ್ತಿ ವತಿಯಿಂದ ಕಷಾಯ ಪೌಡರ್, ಬೆಲ್ಲ, ಇತರೆ ಸಾಮಗ್ರಿಯನ್ನು ಪೂರೈಸಲಿದೆ.  ಇದನ್ನೂ ಓದಿ:ಆನ್‍ಲೈನ್ ಕ್ಲಾಸ್‍ಗಾಗಿ 2 ಕಿ.ಮೀ ದೂರದಲ್ಲಿ ತಾವೇ ಕ್ಲಾಸ್ ರೂಂ ರೆಡಿ ಮಾಡಿದ ವಿದ್ಯಾರ್ಥಿಗಳು..!

    ಒಟ್ಟಿನಲ್ಲಿ ಕೊರೋನಾ ಸಂದಿಗ್ಧ ಸ್ಥಿತಿಯಲ್ಲಿ ಆರೋಗ್ಯದ ಬಗ್ಗೆ ಜನತೆ ಕಾಳಜಿ ವಹಿಸಲು ಅಬ್ಬಿಗೇರಿ ಗ್ರಾಮ ಪಂಚಾಯ್ತಿ ಕೈಗೊಂಡಿರೋ ಕ್ರಮ ಇತರರಿಗೆ ಮಾದರಿಯೇ ಸರಿ.

  • ಇಂದು ಆಷಾಢ ಅಮಾವಾಸ್ಯೆ- ಕರಾವಳಿಯಲ್ಲಿ ಹಾಳೆ ಮರದ ಕಷಾಯ ಕುಡಿದು ಆಚರಣೆ

    ಇಂದು ಆಷಾಢ ಅಮಾವಾಸ್ಯೆ- ಕರಾವಳಿಯಲ್ಲಿ ಹಾಳೆ ಮರದ ಕಷಾಯ ಕುಡಿದು ಆಚರಣೆ

    ಉಡುಪಿ: ಇಂದು ಆಷಾಢ ಅಮಾವಾಸ್ಯೆ. ಕರಾವಳಿಯಲ್ಲಿ ಆಷಾಢ ಅಮಾವಾಸ್ಯೆಯನ್ನು ಹಾಳೆ ಮರದ ಕಷಾಯ ಕುಡಿಯುವ ಮೂಲಕ ಆಚರಣೆ ಮಾಡಲಾಗುತ್ತದೆ.

    ಕಷಾಯ ತಯಾರಿಸುವ ದ್ರವ್ಯಗಳು ನಗರವಾಸಿಗಳಿಗೆ ಲಭಿಸದ ಕಾರಣ ತುಳುಕೂಟ ಉಡುಪಿ ಸಂಘಟನೆ ಹಾಳೆ ಮರದ ಕಷಾಯದ ವ್ಯವಸ್ಥೆ ಮಾಡಿತ್ತು. ಉಡುಪಿಯ ಅಮ್ಮಣ್ಣಿ ರಾಮಣ್ಣ ಸಭಾಂಗಣದಲ್ಲಿ ಹಾಳೆ ಮರದ ಕಷಾಯ, ಮೆಂತೆ ಗಂಜಿ ಮತ್ತು ತುಪ್ಪದ ವ್ಯವಸ್ಥೆ ಮಾಡಿತ್ತು.

    ಆಷಾಢ ಮಾಸದಲ್ಲಿ ಹಾಳೆ ಮರದ ತೊಗಟೆಯಲ್ಲಿ ಅಪಾರ ಪ್ರಮಾಣದ ಔಷಧೀಯ ಗುಣ ಇರುತ್ತದೆ. ಅದರ ರಸ ತೆಗೆದು ಬೆಳ್ಳುಳ್ಳಿ, ಜೀರಿಗೆ, ಓಂ ಕಾಳು, ಮೆಣಸು, ಬೆರೆಸಿ ಒಗ್ಗರಣೆ ಕೊಟ್ಟು ಕಷಾಯ ಮಾಡಿ ಕುಡಿದರೆ ಸಕಲ ರೋಗ ಗುಣವಾಗುತ್ತದೆ. ಮಳೆಗಾಲದಲ್ಲಿ ಬರುವ ಯಾವುದೇ ರೋಗಗಳು ಬಾಧಿಸುವುದಿಲ್ಲ.

    ಇದು ಆಯುರ್ವೇದದಲ್ಲೂ ಸಾಬೀತಾಗಿದೆ. ಹಾಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಆಯುರ್ವೇದ ಆಸ್ಪತ್ರೆ ಕಾರ್ಯಕ್ರಮಕ್ಕೆ ಕೈ ಜೋಡಿಸಿ ಕಷಾಯ ತಯಾರಿಸುವ ವ್ಯವಸ್ಥೆ ಮಾಡಿತ್ತು. ಸಾವಿರಾರು ಜನ ಒಂದೇ ಕಡೆ ಕಷಾಯ ಕುಡಿದು, ಮೆಂತೆ ಗಂಜಿ ತಿಂದು ಆಷಾಢ ಅಮಾವಾಸ್ಯೆ ಆಚರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews