Tag: ಕವಿತಾ ಸನಿಲ್

  • ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆರಂಭಿಸಿ- ಮಾಜಿ ಮೇಯರ್ ಕವಿತಾ ಸನಿಲ್

    ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆರಂಭಿಸಿ- ಮಾಜಿ ಮೇಯರ್ ಕವಿತಾ ಸನಿಲ್

    ಮಂಗಳೂರು: ಭಕ್ತರ ಹಾಗೂ ಅರ್ಚಕರ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಸೇವೆಗಳನ್ನು ಆರಂಭಿಸಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್, ಕಾಂಗ್ರೆಸ್ ಮುಖಂಡೆ ಕವಿತಾ ಸನಿಲ್ ಆಗ್ರಹಿಸಿದ್ದಾರೆ.

    ಮಂಗಳೂರಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಸಾಕಷ್ಟು ದೇಗುಲಗಳಿವೆ, ಅದರಲ್ಲೂ ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ, ಕಟೀಲು ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿ ಕೊರೊನಾದಿಂದಾಗಿ ವಿಶೇಷ ಪೂಜಾ ಸೇವೆಗಳು ನಡೆಯುತ್ತಿಲ್ಲ. ಹೀಗಾಗಿ ದೇಗುಲದ ಅರ್ಚಕರಿಗೆ ತಮ್ಮ ಕಷ್ಟವನ್ನು ಯಾರ ಹತ್ತಿರವೂ ಹೇಳಲಾಗುತ್ತಿಲ್ಲ ಎಂದರು.

    ಅರ್ಚಕರಿಗೆ ದೇವರ ಕೆಲಸ ಬಿಟ್ಟು ಬೇರೆ ಏನೂ ಕೆಲಸ ಮಾಡುವ ಹಾಗಿಲ್ಲ. ಈ ರೀತಿಯ ಪರಿಸ್ಥಿತಿ ಮುಂದುವರಿದರೆ ದೇಗುಲಗಳ ಬಾಗಿಲನ್ನು ಮುಚ್ಚಬೇಕಾದ ಅನಿವಾರ್ಯ ಪರಿಸ್ಥಿತಿ ಬರಬಹುದು. ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಸರ್ಕಾರ ಬಾರ್, ವೈನ್ ಶಾಪ್‍ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಅವರು ಯಾವ ರೀತಿ ಸಾಮಾಜಿಕ ಅಂತರ ಪಾಲಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತು ಎಂದು ವ್ಯಂಗ್ಯವಾಡಿದರು.

    ಆದ್ದರಿಂದ ದೇವಸ್ಥಾನಗಳಲ್ಲಿ ಸೇವೆಯನ್ನು ಅರಂಭಿಸಿದರೆ ಅರ್ಚಕರ ವೃಂದ, ಅಡಳಿತ ಮಂಡಳಿಯವರು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸವನ್ನು ನಡೆಸುತ್ತಾರೆ ಎಂಬ ವಿಶ್ವಾಸ ಇದೆ. ಹೀಗಾಗಿ ಸರ್ಕಾರ ಶೀಘ್ರದಲ್ಲೇ ದೇವಸ್ಥಾನಗಳಲ್ಲಿ ಸೇವೆ ಅರಂಭಿಸಲು ಅವಕಾಶ ಕೊಡಬೇಕೆಂದು ಒತ್ತಾಯಿಸಿದರು.

  • ಮಂಗ್ಳೂರು ಮೇಯರ್‍ಗೆ ಚಿನ್ನದ ಪದಕ – ಕರಾಟೆ ಚಾಂಪಿಯನ್‍ಶಿಪ್ ನಲ್ಲಿ ಕವಿತಾ ಸನಿಲ್ ಕಮಾಲ್

    ಮಂಗ್ಳೂರು ಮೇಯರ್‍ಗೆ ಚಿನ್ನದ ಪದಕ – ಕರಾಟೆ ಚಾಂಪಿಯನ್‍ಶಿಪ್ ನಲ್ಲಿ ಕವಿತಾ ಸನಿಲ್ ಕಮಾಲ್

    ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಪಂಚ್ ಪಡೆದಿದ್ದ ಮಂಗಳೂರಿನ ಮೇಯರ್ ಈಗ ಅದೇ ಕೂಟದಲ್ಲಿ ಚಾಂಪಿಯನ್ ಆಗುವ ಮೂಲಕ ಕರಾಟೆಯಲ್ಲಿ ತಾನೇ ಕಿಂಗ್ ಎಂಬುದನ್ನು ನಿರೂಪಿಸಿದ್ದಾರೆ.

    ಇದನ್ನೂ ಓದಿ: ವಿಡಿಯೋ: ಮಂಗ್ಳೂರು ಮೇಯರ್ ಗೆ ಪಂಚ್ ಕೊಟ್ರು ಸಿಎಂ!

    ಮೇಯರ್ ಮೇಡಂ ವಿಶೇಷ ಆಸಕ್ತಿ ವಹಿಸಿ ಮಂಗಳೂರಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ, ಸುದೀರ್ಘ 9 ವರ್ಷಗಳ ಬಳಿಕ ಕಣಕ್ಕಿಳಿದಿದ್ದ ಮೇಯರ್ ಕವಿತಾ ಸನಿಲ್, 65 ಕೇಜಿ ಮೇಲ್ಪಟ್ಟ ವಿಭಾಗದಲ್ಲಿ ಎದುರಾಳಿ ಹಾಲಿ ಚಾಂಪಿಯನ್ ನಿಶಾ ನಾಯಕ್‍ರನ್ನು 7-3 ಅಂತರದಲಿ ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

    ಇದನ್ನೂ ಓದಿ: ಮಂಗಳೂರು ಮೇಯರ್ ಗುಂಡಾಗಿರಿ- ಅಪಾರ್ಟ್‌ಮೆಂಟ್‌ ಕಾವಲುಗಾರ ದಂಪತಿ ಮೇಲೆ ಹಲ್ಲೆ

    ಇದಕ್ಕೂ ಮುನ್ನ ನಡೆದ ಸೆಮಿಫೈನಲ್‍ನಲ್ಲಿ ಕವಿತಾ, ಪ್ರತಿಸ್ಪರ್ಧಿ ಕಾವ್ಯರನ್ನು 8-0 ಅಂಕಗಳ ನೇರ ಪಂಚ್‍ಗಳಿಂದ ಮಣಿಸಿದ್ರು. 1996 ರಿಂದ 2008ರ ವರೆಗೆ ಸತತವಾಗಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಕವಿತಾ, ವರುಷಗಳ ಬಳಿಕವೂ ತಮ್ಮ ಚಾರ್ಮ್ ಕಳೆದುಕೊಂಡಿಲ್ಲ.

    ಇದನ್ನೂ ಓದಿ: ಕಟೀಲಿಗೆ ಬನ್ನಿ, ಪ್ರಮಾಣ ಮಾಡೋಣ: ಬಿಜೆಪಿಗೆ ಮಂಗ್ಳೂರು ಮೇಯರ್ ಸವಾಲ್

  • ವಿಡಿಯೋ: ಮಂಗ್ಳೂರು ಮೇಯರ್ ಗೆ ಪಂಚ್ ಕೊಟ್ರು ಸಿಎಂ!

    ವಿಡಿಯೋ: ಮಂಗ್ಳೂರು ಮೇಯರ್ ಗೆ ಪಂಚ್ ಕೊಟ್ರು ಸಿಎಂ!

    ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಗಳೂರಿಗೆ ಭೇಟಿ ನೀಡಿದ್ದು, ಮೇಯರ್ ಕವಿತಾ ಸನಿಲ್ ಗೆ ಸಖತ್ ಪಂಚ್ ನೀಡಿದ್ದಾರೆ.

    ಮಂಗಳೂರಿನ ಮೇಯರ್, ಕರಾಟೆ ಚಾಂಪಿಯನ್ ಕವಿತಾ ಸನಿಲ್ ನೇತೃತ್ವದಲ್ಲಿ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲು ಆಗಮಿಸಿದ್ದ ಸಿಎಂ ಸಿದ್ರಾಮಯ್ಯ, ಮಕ್ಕಳು ಕರಾಟೆ ಆಡುವುದನ್ನು ನೋಡಿ ಉತ್ತೇಜಿತರಾದ್ರು. ಹೀಗಾಗಿ ನ್ಯಾಷನಲ್ ಚಾಂಪಿಯನ್ ಮೇಯರ್ ಕವಿತಾ ಸನಿಲ್ ಮೊದಲು ಸಿಎಂಗೆ ಕರಾಟೆ ಪಂಚ್ ನೀಡಿ ಗಮನ ಸೆಳೆದರು. ಮೇಯರ್ ನೀಡಿದ ಪಂಚ್ ಗೆ ತಿರುಗೇಟಾಗಿ ಸಿಎಂ ಕೂಡ ಪಂಚ್ ಮಾಡಿ ನೆರೆದಿದ್ದವರಲ್ಲಿ ನಗೆಯ ಬುಗ್ಗೆ ಉಕ್ಕಿಸಿದ್ರು.

    ಇತ್ತೀಚೆಗಷ್ಟೇ ತಮ್ಮ ಅಪಾರ್ಟ್ ಮೆಂಟ್ ಕಾವಲುಗಾರರಾದ ಮೂಲತಃ ಬಾಗಲಕೋಟೆ ಜಿಲ್ಲೆಯ ನಿವಾಸಿಗಳಾದ ಕಮಲ ಮತ್ತು ಪುಂಡಲೀಕ ದಂಪತಿ ಮೇಲೆ ಹಲ್ಲೆಗೈದು ಗೂಂಡಾಗಿರಿ ತೋರಿದ್ದಾರೆ ಎಂದು ಮೇಯರ್ ಕವಿತಾ ಸನಿಲ್ ವಿರುದ್ಧ ಆರೋಪ ಕೇಳಿಬಂದಿತ್ತು. ಅಪಾರ್ಟ್ ಮೆಂಟ್ ಕಾವಲುಗಾರನ ಮನೆಗೆ ಮೇಯರ್ ಏಕಾಏಕಿ ನುಗ್ಗಿ, ಕಾವಲುಗಾರನ ಪತ್ನಿಯ ಜುಟ್ಟು ಹಿಡಿದು ಕಿವಿ ಹಾಗೂ ಮುಖಕ್ಕೆ ಹೊಡೆದಿದ್ದಾರೆ. ಅಲ್ಲದೇ ಅಶ್ಲೀಲ ಭಾಷೆಯಲ್ಲಿ ನಿಂದಿಸಿದ್ದಾರೆಂದು ಮೇಯರ್ ವಾಸವಿರುವ ಮಂಗಳೂರಿನ ಬಿಜೈನ ಅಪಾರ್ಟ್ ಮೆಂಟ್ ಕಾವಲುಗಾರ ದಂಪತಿ ಆರೋಪಿಸಿದ್ದರು.

    ಈ ಕುರಿತು ಸಾಮಾನ್ಯ ಸಭೆಯ ವೇಳೆ ಬಿಜೆಪಿ ಕಾರ್ಯಕರ್ತರು ಮೇಯರ್ ರಾಜೀನಾಮೆ ನೀಡುವಂತೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಮೇಯರ್ ತಮ್ಮ ಮೇಲಿನ ಆರೋಪವನ್ನು ಅಲ್ಲಗೆಳೆದಿದ್ದು, ನಾನು ಬೇಕಿದ್ರೆ ಕಟೀಲಿನಲ್ಲಿ ಪ್ರಮಾಣ ಮಾಡ್ತೀನಿ. ಬಿಜೆಪಿಯವರೂ ಅಲ್ಲಿ ಬನ್ನಿ ಅಂತ ಸವಾಲೆಸೆದಿದ್ದರು.

    https://www.youtube.com/watch?v=QZy7hqE1yGI

     

  • ಕಟೀಲಿಗೆ ಬನ್ನಿ, ಪ್ರಮಾಣ ಮಾಡೋಣ: ಬಿಜೆಪಿಗೆ ಮಂಗ್ಳೂರು ಮೇಯರ್ ಸವಾಲ್

    ಕಟೀಲಿಗೆ ಬನ್ನಿ, ಪ್ರಮಾಣ ಮಾಡೋಣ: ಬಿಜೆಪಿಗೆ ಮಂಗ್ಳೂರು ಮೇಯರ್ ಸವಾಲ್

    ಮಂಗಳೂರು: ಶೀಘ್ರವೇ ಮಂಗಳೂರು ಮೇಯರ್ ಕವಿತಾ ಸನಿಲ್ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದ ಘಟನೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದಿದೆ.

    ಸಾಮಾನ್ಯ ಸಭೆ ಸೇರುತ್ತಿದ್ದಾಗಲೇ ಧಿಕ್ಕಾರ ಘೋಷಣೆ ಕೂಗುತ್ತ ಒಳನುಗ್ಗಿದ ಬಿಜೆಪಿ ಸದಸ್ಯರು, ಸಭೆಯಲ್ಲಿ ರಂಪಾಟ ನಡೆಸಿದ್ರು. ಇದೇ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ, ತಳ್ಳಾಟ ನಡೆಯಿತು.

    ಕೆಲವರು ಕೈ-ಕೈ ಮಿಲಾಯಿಸಲು ಮುಂದಾದರು. ಆದರೆ ಬಿಜೆಪಿ ಸದಸ್ಯರು ಮೇಯರ್ ಮುಂದೆ ಧಿಕ್ಕಾರ ಕೂಗುತ್ತ ರಾಜಿನಾಮೆಗೆ ಒತ್ತಾಯಿಸಿದರು. ಮೇಯರ್ ಕವಿತಾ ಸನಿಲ್ ತನ್ನ ಬಿಜೈನಲ್ಲಿರುವ ಫ್ಲಾಟ್ ನಲ್ಲಿ ವಾಚ್ ಮ್ಯಾನ್ ಪತ್ನಿಗೆ ಹಲ್ಲೆ ನಡೆಸಿದ್ದಾರೆಂಬ ವಿಚಾರ ಭಾರೀ ಸುದ್ದಿಯಾಗಿತ್ತು. ಬಳಿಕ ಮೇಯರ್ ತನ್ನ ಪ್ರಭಾವ ಬಳಸಿ ಬಡಪಾಯಿ ವಾಚ್ ಮ್ಯಾನ್ ಪತ್ನಿಯ ವಿರುದ್ಧ ಕೊಲೆಯತ್ನ ದೂರು ದಾಖಲಿಸಿದ್ದರು.

    ಇದನ್ನೂ ಓದಿ: ಮಂಗಳೂರು ಮೇಯರ್ ಗುಂಡಾಗಿರಿ- ಅಪಾರ್ಟ್‌ಮೆಂಟ್‌ ಕಾವಲುಗಾರ ದಂಪತಿ ಮೇಲೆ ಹಲ್ಲೆ

    ಈ ವಿಚಾರ ವಿವಾದಕ್ಕೆ ತಿರುಗಿದ್ದು ಬಿಜೆಪಿ ಸದಸ್ಯರು ಸಭೆಯಲ್ಲಿ ರಂಪ ನಡೆಸಿದ್ದಾರೆ. ಕೊನೆಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮೇಯರ್ ಕವಿತಾ ಸನಿಲ್ ಕಣ್ಣೀರು ಹಾಕಿದ್ರು. ತಾನು ಬಡ ಮಹಿಳೆಗೆ ಹಲ್ಲೆ ನಡೆಸಿಲ್ಲ. ಬೇಕಾದ್ರೆ ಕಟೀಲು ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡ್ತೀನಿ. ಬಿಜೆಪಿಯವರೂ ಬರಲಿ ಅಂತಾ ಸವಾಲು ಹಾಕಿದರು.

    https://www.youtube.com/watch?v=5stm9HG3J8s