ಗತಿಸಿದ ಹಳೆ ಕಾಲದ ಕಾಸು ನೋಡಿ ಜಗ್ಗೇಶ್ ಕವಿಯಾಗಿದ್ದಾರೆ. ತಮ್ಮ ಚಿಕ್ಕ ವಯಸ್ಸಿನಲ್ಲಿದ್ದ, ತಮ್ಮ ತಂದೆ ಹಾಗೂ ತಾತನ ಕಾಲದ ನಾಣ್ಯಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಕವಿತೆಯನ್ನೇ ಬರೆದಿದ್ದಾರೆ. ಜೊತೆಗೆ ಅದರ ಹಿಂದಿನ ಕಥನವನ್ನೂ ಅವರು ಬರೆದುಕೊಂಡಿದ್ದಾರೆ.
ಓ ಕಾಸುಗಳೆ ನಿಮ್ಮ ನೋಡಿದಾಗ
ಅಮ್ಮನ ದೇವರ ಹುಂಡಿ ನೆನಪಾಯಿತು
ಓ ಕಾಸುಗಳೆ ನಿಮ್ಮ ನೋಡಿದಾಗ
ಅಪ್ಪನ ಬೆವರಿನ ಶ್ರಮ ನೆನಪಾಯಿತು
ಓ ಕಾಸುಗಳೆ ನಿಮ್ಮ ನೋಡಿದಾಗ
ನನ್ನ ತಾತ ಕೊಟ್ಟ ಪ್ರೀತಿ ಕಾಣಿಕೆ ನೆನಪಾಯಿತು
ಓ ಕಾಸುಗಳೆ ನಿನ್ನ ನಾನು ಕೂಡಿಟ್ಟು
ಒಂದು ದಿನ ಶ್ರೀಮಂತ ಆಗುವೆ ಎಂದ ಶಪಥ ನೆನಪಾಯಿತು
ಓ ಕಾಸುಗಳೆ ನೀವೇ ನನ್ನ ಬಾಲ್ಯದ ಗೆಳೆಯರಾಗಿದ್ದು ನೆನಪಾಯಿತು
ಓ ಕಾಸುಗಳೆ ನಿಮ್ಮ ಬಳಸಿ ರಾಜಣ್ಣನ ಸಿನಿಮಾ ನೋಡಿದ ನೆನಪಾಯಿತು
ಹೀಗೆ ಕಾವ್ಯದ ಮೂಲಕ ತಮ್ಮ ಜೀವನವನ್ನು ಮೆಲುಕು ಹಾಕಿದ್ದಾರೆ ಜಗ್ಗೇಶ್. ಇವರ ಕವಿತ್ವಕ್ಕೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ತಮ್ಮ ನೆನಪುಗಳನ್ನೂ ಜಗ್ಗೇಶ್ ಜೊತೆ ಹಲವಾರು ಜನರು ಹಂಚಿಕೊಂಡಿದ್ದಾರೆ.
ಅಲ್ಲು ಇಲ್ಲು ಎಲ್ಲೆಲ್ಲೂ ರಮ್ಯಾ (Ramya ) ಮಿಂಚ್ತಿದ್ದಾರೆ. ಅಂದವಾದ ಹೂವಿನ (Flower) ಜೊತೆ ಚಂದವಾದ ಹೀರೋಯಿನ್‌ನ ನೋಡಿದ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಹೂವು ಅರಳಿದೆ ರಮ್ಯಾ ಮೊಗದಲ್ಲಿ ಮಂದಹಾಸ ಮೂಡಿದೆ ಜೊತೆಗೆ ಈ ಚೆಲುವೆ ಪೋಣಿಸಿದ ಸಾಲುಗಳು (Poem) ಸಖತ್ ಸೌಂಡ್ ಮಾಡ್ತಿದೆ.
ಮೋಹಕತಾರೆಯ ಹೊಸ ಅಪ್‌ಡೇಟ್ ನೊಡಿಕೊಂಡು ರಮ್ಯಾ ಬರೆದಿರುವ ಕವಿತೆಯ ಸಾರವನ್ನ ತಿಳಿದುಕೊಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸುರಲೋಕದ ಸುಂದರಿಯನ್ನ ಯಾರೂ ನೋಡಿಲ್ಲ ಅವರು ಕಾಣಿಸ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಸ್ಯಾಂಡಲ್‌ವುಡ್ ಸಿನಿಮಾ ಅಭಿಮಾನಿಗಳಿಗೆ ಮೋಹಕತಾರೆ ರಮ್ಯಾ ದೇವಲೋಕದ ಸುಂದರಿಯಂತೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ ಕೊಡ್ತಿರ್ತಾರೆ.
ಸದ್ಯ ರಮ್ಯಾ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡ್ತಿದ್ದಾರೆ. ಈ ಕ್ಯೂಟ್ ಫೋಟೋಸ್ ನೋಡಿ ರಮ್ಯಾ ಅಭಿಮಾನಿಗಳು ಲೈಕ್ಸ್, ಕಾಮೆಂಟ್‌ಗಳ ಸುರಿಮಳೆ ಸುರಿಸ್ತಿದ್ದಾರೆ. ಫೋಟೋದಲ್ಲಿ ನಗ್ತಿರುವ ರಮ್ಯಾ ಮಂದಹಾಸವನ್ನ ಮನದಲ್ಲಿ ತುಂಬಿಕೊಳ್ತಿದ್ದಾರೆ ಈಕೆಯ ಅಭಿಮಾನಿಗಳು.
ರಮ್ಯಾ ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಗುಲಾಬಿ ಹೂವುಗಳ ಮುಂದೆ ನಿಂತು ಮುಗುಳು ನಗೆ ಕೊಟ್ಟಿದ್ದಾರೆ. ಈ ಸುಂದರಿಯ ಸ್ಮೈಲ್ ನೋಡಿ ಹೂವುಗಳು ಕೂಡ ಖುಷಿ ಪಟ್ಟಿದೆ ಅನ್ನೊದು ದೂರದಿಂದ ಬಂದ ಸಮಾಚಾರ. ಅಂದವಾದ ಫೋಟೋಗಳ ಜೊತೆ ಚಂದವಾದ ಸಾಲುಗಳನ್ನ ಕೂಡ ಪೋಣಿಸಿದ್ದಾರೆ ಮೋಹಕತಾರೆ.
ನಿರ್ಮಾಪಕಿಯಾಗಿ ಹೊಸ ಅಧ್ಯಾಯ ಶುರು ಮಾಡಿರುವ ರಮ್ಯಾ ನಟಿಯಾಗಿ ಕೂಡ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಶೂಟಿಂಗ್ ಶುರು ಮಾಡುವ ಮೊದಲು ಒಂದು ವೆಕೇಷನ್‌ಗೆ ಹೋಗಿದ್ದಾರೆ ಅನ್ನೊದು ಮೂಲಗಳ ಮಾಹಿತಿ. ಹೂವು ಅಂದ… ರಮ್ಯಾ ನಗು ಚೆಂದ… ನಮ್ಗು ನಿಮ್ಗು ಇರಲಿ ಜನುಮ ಜನುಮಕ್ಕು ಅನುಬಂಧ ಅಂತಿದ್ದಾರೆ ಅಭಿಮಾನಿಗಳು.
ಬೆಂಗಳೂರು: ಕನ್ನಡದ ಖ್ಯಾತ ಕತೆಗಾರ, ಕವಿ ವಿಮರ್ಶಕ ಕೆ.ವಿ. ತಿರುಮಲೇಶ್ (KV Tirumalesh) ನಿಧನರಾಗಿದ್ದಾರೆ.
ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ತಿರುಮಲೇಶ್(82) ಇಂದು ಮುಂಜಾನೆ ಹೈದರಾಬಾದಿನ ತಮ್ಮ ಮಗಳ ನಿವಾಸದಲ್ಲಿ ವಿಧಿವಶರಾಗಿದ್ದಾರೆ.
ಇತ್ತೀಚೆಗೆ ತಿರುಮಲೇಶ್ ಅವರಿಗೆ ಹೃದಯದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಕಳೆದ ವಾರದವರೆಗೂ ಆಸ್ಪತ್ರೆಯಲ್ಲಿದ್ದ ಅವರು ಭಾನುವಾರ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರು. ಪತ್ನಿ, ಮೂವರು ಹೆಣ್ಣು ಮಕ್ಕಳನ್ನು ತಿರುಮಲೇಶ್ ಅಗಲಿದ್ದಾರೆ.
ಕೇರಳದ ಕಾಸರಗೋಡು (Kasaragod) ಜಿಲ್ಲೆಯ ಕಾರಡ್ಕ ಗ್ರಾಮದಲ್ಲಿ 1940ರ ಸೆಪ್ಟೆಂಬರ್ 12ರಂದು ಜನಿಸಿದ ತಿರುಮಲೇಶ್ ಇವರು ಕನ್ನಡ ಭಾಷೆಯ ಬಹು ಮುಖ್ಯ ಕವಿ, ಕತೆಗಾರ, ಭಾಷಾ ವಿಜ್ಞಾನಿ, ವಿದ್ವಾಂಸ ಹಾಗೂ ವಿಮರ್ಶಕರಾಗಿ ಗುರುತಿಸಿಕೊಂಡಿದ್ದರು. ಇದನ್ನೂ ಓದಿ: ವಿಷ್ಣುವರ್ಧನ್ ಗೆ ‘ಕರ್ನಾಟಕ ರತ್ನ’: ಭರವಸೆ ನೀಡಿದ ಸಿಎಂ ಬೊಮ್ಮಾಯಿ
1975ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹೈದರಾಬಾದಿಗೆ ತೆರಳಿದ ತಿರುಮಲೇಶರು ಅಲ್ಲಿ ಭಾಷಾ ವಿಜ್ಞಾನದಲ್ಲಿ ಪಿಎಚ್.ಡಿ ಗಳಿಸಿದರು. ಹೈದರಾಬಾದಿನ ಸೆಂಟ್ರಲ್ ಇನ್ಸಿಟ್ಯೂಟ್ ಆಫ್ ಇಂಗ್ಲೀಷ್ ಆಂಡ್ ಫಾರಿನ್ ಲಾಂಗ್ವಿಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತಿ ಹೊಂದಿದ್ದರು. ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲಿಷ್ ಅಧ್ಯಾಪನ ಮಾಡಿದ್ದರು. ಅಮೇರಿಕದ ಅಯೋವ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.
ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದ ಅವರು ವಿವಿಧ ಪತ್ರಿಕೆಗಳಿಗೆ, ಜಾಲತಾಣಗಳಿಗೆ ನಿರಂತರವಾಗಿ ಅಂಕಣಗಳನ್ನು ಬರೆಯುತ್ತಿದ್ದರು.
Live Tv
[brid partner=56869869 player=32851 video=960834 autoplay=true]
ಹೆಸರು ಶಿಫಾರಸ್ಸು ಮಾಡಿರುತ್ತಾರೆ. ಯಾರಿಗಾದರೂ ಒಬ್ಬರಿಗೆ ಪ್ರಶಸ್ತಿ ಕೊಡುತ್ತಾರೆ. ಶಿಫಾರಸ್ಸು ಮಾಡಿದ್ದಕ್ಕೆ ಪ್ರಶಸ್ತಿ ಬರುತ್ತದೆ ಅಂತಾ ಅಲ್ಲಾ. ಇನ್ನು ಪ್ರಶಸ್ತಿ ನನಗೆ ಬಂದರೂ ಸಂತೋಷ ಹೇಳಬಹುದು, ವೀರಪ್ಪ ಮೊಯ್ಲಿ ಹಾಗೂ ಎಸ್ ಎಲ್ ಭೈರಪ್ಪ ಯಾರಿಗೆ ಸಿಕ್ಕರೂ ಸಂತೋಷ. ನನಗೆ ಸಿಗಬೇಕು ಅಂತಾ ಏನಿಲ್ಲ. ಜನರು ಪ್ರಶಸ್ತಿ ನನಗೆ ಸಿಗಬೇಕು ಎನ್ನುವ ಮಾತಿನಲ್ಲಿ ಹುರುಳಿಲ್ಲ ಎಂದಿದ್ದಾರೆ. ಇದನ್ನೂ ಓದಿ:RSS ಜಾತಿ, ಧರ್ಮ ಮೀರಿದ ಮಾತೃಹೃದಯಿ ಸಂಘಟನೆ: ಜಗ್ಗೇಶ್
ಬೆಂಗಳೂರು: ಬಂಡಾಯ ಸಾಹಿತಿ ಡಾ.ಸಿದ್ದಲಿಂಗಯ್ಯ (67) ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಿದ್ದಲಿಂಗಯ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
ಸಿದ್ಧಲಿಂಗಯ್ಯನವರು ಮಾಗಡಿ ತಾಲೂಕಿನ ಮಂಚನಬೆಲೆ’ ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.
ಇಂದು ಸಂಜೆ 4.45ಕ್ಕೆ ಸಿದ್ದಲಿಂಗಯ್ಯ ನಿಧನರಾಗಿದ್ದು, ಇವತ್ತೇ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಗಳಿವೆ.
ಹೊಲೆಮಾದಿಗರ ಹಾಡು, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಆಯ್ದ ಕವಿತೆಗಳು, ಮೆರವಣಿಗೆ, ನನ್ನ ಜನಗಳು ಮತ್ತು ಇತರ ಕವಿತೆಗಳು, ಕುದಿವ ನೀಲಿಯ ಕಡಲು, ಊರು ಸಾಗರವಾಗಿ ಸೇರಿದಂತೆ ಮುಂತಾದ ಕವನ ಸಂಕಲನಗಳನ್ನು ರಚಿಸಿದ್ದಾರೆ. ಊರು ಕೇರಿ ಎಂಬ ಆತ್ಮಕಥನ ಬರೆದಿದ್ದಾರೆ. ಅಲ್ಲದೆ ಪಂಚಮ, ನೆಲಸಮ, ಏಕಲವ್ಯ ನಾಟಕಗಳನ್ನು ರಚಿಸಿದ್ದಾರೆ. ಹಕ್ಕಿನೋಟ, ಗ್ರಾಮದೇವತೆಗಳು, ಅವತಾರಗಳು, ಜನ ಸಂಸ್ಕೃತಿ, ಆ ಮುಖ ಈ ಮುಖ ಎಂಬ ವಿಮರ್ಶಾ ಕೃತಿಗಳನ್ನು ಬರೆದಿದ್ದಾರೆ.
ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಲ್ಲದೆ 2015ರಲ್ಲಿ ನಡೆದ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸಹ ಆಗಿದ್ದರು.
ಸಿದ್ದಲಿಂಗಯ್ಯನವರು 1988-94 ಮತ್ತು 1995-2001ರವರೆಗೆ ಎರಡುಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ನಾಮಕರಣಗೊಂಡಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಪ್ರಶಸ್ತಿಗಳು:
* ಉತ್ತಮ ಚಲನಚಿತ್ರಗೀತ ರಚನೆಗಾಗಿ ಕರ್ನಾಟಕ ಸರ್ಕಾರ ಪ್ರಶಸ್ತಿ-1984
* ರಾಜ್ಯೋತ್ಸವ ಪ್ರಶಸ್ತಿ -ಕರ್ನಾಟಕ ಸರ್ಕಾರ-1986
* ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ -1992
* ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ -1996
* ಜಾನಪದ ತಜ್ಞ ಪ್ರಶಸ್ತಿ -2001
* ಸಂದೇಶ್ ಪ್ರಶಸ್ತಿ -2001
* ಡಾ.ಅಂಬೇಡ್ಕರ್ ಪ್ರಶಸ್ತಿ -2002
* ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ -2002
* ಬಾಬುಜಗಜೀವನರಾಮ್ ಪ್ರಶಸ್ತಿ -2005
* ನಾಡೋಜ ಪ್ರಶಸ್ತಿ -2007
* ಪ್ರೆಸಿಡೆನ್ಸಿ ಇನ್ಷಿಟ್ಯೂಷನ್ ಪ್ರಶಸ್ತಿ -2012
* ಆಳ್ವಾಸ್ ನುಡಿಸಿರಿ ಪ್ರಶಸ್ತಿ -2012
* ನೃಪತುಂಗ ಪ್ರಶಸ್ತಿ -2018
* ಪಂಪ ಪ್ರಶಸ್ತಿ – 2019 ಗೌರವ ಪ್ರಶಸ್ತಿಗೆ ಭಾಜನರಾಗಿದ್ದರು
ಬೆಂಗಳೂರು: ಕನ್ನಡ ಹಿರಿಯ ಸಾಹಿತಿ ನಿತ್ಯೋತ್ಸವ ಕವಿ ಎಂದೇ ಖ್ಯಾತಿ ಗಳಿಸಿದ್ದ ಕೆ.ಎಸ್ ನಿಸಾರ್ ಅಹಮದ್(84) ಇಂದು ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಿಸಾರ್ ಅಹಮದ್ ಈ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ನಿಸಾರ್ ಅಹಮದ್‍ರವರು ನವೋದಯ ಹಾಗೂ ನವ್ಯ ಕಾವ್ಯ ಪರಂಪರೆಗಳಲ್ಲಿ ಉತ್ತಮ ಅಂಶಗಳನ್ನು ಪಡೆದು, ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸಿ ತಮ್ಮದೇ ಆದ ವೈಶಿಷ್ಟ್ಯವನ್ನು ಬೆಳೆಸಿದ ಶ್ರೇಷ್ಠ ಕವಿಗಳಲ್ಲೊಬ್ಬರಾಗಿದ್ದಾರೆ.
10ನೇ ವಯಸ್ಸಿನಲ್ಲೇ ಸಾಹಿತ್ಯದ ಮೇಲೆ ಆಸಕ್ತಿ ಹೊಂದಿದ್ದ ಕವಿಗೆ ರಾಜ್ಯೋತ್ಸವ, ನಾಡೋಜ, ಪದ್ಮಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಒಲಿದು ಬಂದಿದೆ. 1974ರಲ್ಲಿ ಪ್ರಕಟವಾದ ‘ನಿತ್ಯೋತ್ಸವ’ ಕವನ ಸಂಕಲನ ನಿಸಾರ್ ಅವರಿಗೆ ಬಹಳ ಜನಪ್ರಿಯತೆ ತಂದು ಕೊಟ್ಟಿತು. ಇಂದು ಕೂಡ ಕನ್ನಡದ ಹಬ್ಬ ಎಲ್ಲೇ ನಡೆದರು ನಿತ್ಯೋತ್ಸವ ಕವಿತೆಯ ಗಾಯನವಿಲ್ಲದೆ ಅದು ಅಪೂರ್ಣ. ಕೆಎಸ್‍ಆರ್ ಅವರ ಅನೇಕ ಕವಿತೆಗಳು ಸುಗಮ ಸಂಗೀತದ ಧ್ವನಿ ಸುರುಳಿಗಳ ಮೂಲಕ ಕನ್ನಡಿಗರನ್ನು ತಲುಪಿವೆ.
ಜನಪ್ರಿಯತೆ ಗಳಿಸಿರುವ ‘ಸುಮಧುರ’ ಮತ್ತು ‘ನವೋಲ್ಲಾಸ’ ಕನ್ನಡದ ಮೊದಲ ಜೋಡಿ ಧ್ವನಿ ಸುರುಳಿಗಳು. ಈವರೆಗೆ ಅವರ ಕವನಗಳ ಏಳು ಧ್ವನಿ ಸುರುಳಿಗಳು ಬಿಡುಗಡೆ ಗೊಂಡಿವೆ.
ಧಾರವಾಡ: ಸಾಹಿತಿಗಳೆಂದರೆ ಕೇವಲ ಕವಿತೆ, ಸಾಹಿತ್ಯ ರಚನೆಗೆ ಹಾಗೂ ಪ್ರಶಸ್ತಿಗಳನ್ನು ಸ್ವೀಕರಿಸಲು ಮಾತ್ರ ಸೀಮಿತವಲ್ಲ. ರಾಷ್ಟ್ರಕ್ಕೆ ಏನಾದರೂ ವಿಪತ್ತು ಎದುರಾದಾಗ ಅದಕ್ಕೆ ಸಹಾಯ ಮಾಡುವ ಹೃದಯವನ್ನೂ ಹೊಂದಿರುತ್ತಾರೆ ಎಂಬುದನ್ನು ಧಾರವಾಡ ಕಲ್ಯಾಣನಗರ ಚೆಂಬೆಳಕಿನ ಕವಿ ಡಾ. ಚೆನ್ನವೀರ ಕಣವಿ ಅವರು ಸಾಬೀತು ಮಾಡಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಕವಿ ಕಣವಿ ಅವರು 1 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಉಳಿದ ಸಾಹಿತಿ ಹಾಗೂ ಕವಿಗಳಿಗೆ ಮಾದರಿಯಾಗಿದ್ದಾರೆ. ಈ ಮೂಲಕ ಕಣವಿ ಅವರು ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ದೇಣಿಗೆ ನೀಡಿದ ಮೊದಲ ಕವಿಯಾಗಿದ್ದಾರೆ.
ಶಾಸಕ ಅರವಿಂದ ಬೆಲ್ಲದ ಅವರ ಮುಖಾಂತರ ಕವಿ ಕಣವಿ ಪಿಎಂ ಪರಿಹಾರ ನಿಧಿಗೆ 1 ಲಕ್ಷ ರೂಪಾಯಿ ಮೊತ್ತದ ಚೆಕ್‍ನ್ನು ಹಸ್ತಾಂತರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದು ನನಗೆ ಖುಷಿಯಾಗಿದೆ. ಕೋಟ್ಯಧಿಪತಿಗಳಾದ ಕವಿಗಳು, ಸಾಹಿತಿಗಳು ಕೂಡ ಮುಕ್ತವಾಗಿ ಪರಿಹಾರ ನಿಧಿಗೆ ಸಹಾಯ ಮಾಡಬೇಕು. ಮುಂದೆಯೂ ಲಾಕ್‍ಡೌನ್ ವಿಸ್ತರಣೆ ಮಾಡಿದರೆ ಒಳ್ಳೆಯದು. ಜನ ಹೆಚ್ಚು ಹೊರಗಡೆ ಓಡಾಡಬಾರದು. ಮನೆ ಬಾಗಿಲಿಗೇ ತರಕಾರಿಗಳು ಬರುತ್ತಿದ್ದು, ಅವುಗಳನ್ನು ಖರೀದಿಸುವ ಮೂಲಕ ಹೆಚ್ಚು ಹೊರಗಡೆ ಹೋಗುವುದನ್ನು ಬಿಡಬೇಕು ಎಂದು ಮನವಿ ಮಾಡಿದರು.
ಬೆಂಗಳೂರು: ಕನ್ನಡದ ಪ್ರಮುಖ ಕವಿ ಮತ್ತು ವಿಮರ್ಶಕರಾಗಿ ಪ್ರಸಿದ್ಧರಾಗಿದ್ದ ಡಾ. ಸುಮತೀಂದ್ರ ನಾಡಿಗರವರು ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.
83 ವರ್ಷದ ಡಾ. ಸುಮತೀಂದ್ರ ನಾಡಿಗ್ ರವರು ಕಳೆದ ಮೂರು ದಿನಗಳ ಹಿಂದೆ ಕಿಡ್ನಿ ಹಾಗೂ ಉಸಿರಾಟದ ಸಮಸ್ಯೆಯಿಂದಾಗಿ ನಗರದ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಕುಟುಂಬಸ್ಥರು ನಗರದ ಸಾರಕ್ಕಿ ಸಿಗ್ನಲ್ ಬಳಿ ಇರುವ ಸುಮತೀಂದ್ರ ನಾಡಿಗ ಸಮುದಾಯ ಭವನದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.
ಡಾ. ಸುಮತೀಂದ್ರ ನಾಡಿಗರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಳಸದವರು. ಇವರು 1935 ಮೇ 4ರಂದು ಜನಿಸಿದ್ದರು. ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯಗಳ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಅಮೆರಿಕದ ಫಿಲೆಡೆಲ್ಫಿಯಾ ವಿಶ್ವವಿದ್ಯಾಲಯಗಳಿಂದ ಇಂಗ್ಲಿಷ್ ಎಂ.ಎ. ಪದವಿಯನ್ನು ಪಡೆದುಕೊಂಡಿದ್ದರು. 1985ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ `ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು’ ಎನ್ನುವ ಕಥಾಸಂಕಲದಿಂದಾಗಿ ಗೌರವ ಡಾಕ್ಟರೇಟನ್ನು ಸಹ ಪಡೆದಿದ್ದರು. ಇವರು ದಾ.ರಾ.ಬೇಂದ್ರೆ, ಗೋಪಾಲಕೃಷ್ಣ ಅಡಿಗ ಮತ್ತು ಕೆ.ಎಸ್.ನರಸಿಂಹಸ್ವಾಮಿಯವರ ಕಾವ್ಯದ ಬಗ್ಗೆ ವಿಶೇಷವಾದ ಅಧ್ಯಯನ ನಡೆಸಿದ್ದರು. ಅಲ್ಲದೇ ಕನ್ನಡದ ಹಿರಿಯ ಪ್ರಮುಖ ಕವಿ ಹಾಗೂ ಸಾಹಿತಿಗಳಾಗಿ ಗುರುತಿಸಿಕೊಂಡಿದ್ದರು.
ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಕಾರ್ಯಕ್ರಮಗಳಿಗೆ ಚಾಮುಂಡಿ ಬೆಟ್ಟದಲ್ಲಿ ನಿತ್ಯೋತ್ಸವ ಕವಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರು ಇಂದು ಅಧಿಕೃತವಾಗಿ ಚಾಲನೆ ನೀಡಿದರು.
ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಹಬ್ಬ ಗತಕಾಲದ ವೈಭವ. ಜಾತಿ ಧರ್ಮದ ಮಿತಿಗಳಿಲ್ಲದೆ ದಸರಾ ಹಬ್ಬವನ್ನ ಆಚರಣೆ ಮಾಡಲಾಗುತ್ತದೆ. ಹಜ್ ನಲ್ಲಿ ಮುಸ್ಲಿಮರು, ಕುಂಭ ಮೇಳದಲ್ಲಿ ಹಿಂದುಗಳು. ಆದರೆ ಮೈಸೂರು ದಸರಾದಲ್ಲಿ ಮಾತ್ರ ಧರ್ಮಗಳ ಮೀತಿಯೇ ಇಲ್ಲದೆ ಎಲ್ಲರೂ ತಾಯಿ ಚಾಮುಂಡಿ ದೇವಿ ಆಶೀರ್ವಾದ ಪಡೆದು ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇದೇ ಮೈಸೂರು ದಸರಾ ವೈಶಿಷ್ಟ ಎಂದು ನಿಸಾರ್ ಅಹಮದ್ ಹೇಳಿದರು.
ನಾಡಹಬ್ಬದ ಉದ್ಘಾಟನೆಗೆ ನನ್ನನ್ನು ಆಹ್ವಾನ ಮಾಡಿದಾಗ ನನಗೆ ದಸರಾಗೆ ಚಾಲನೆ ನೀಡುವ ಅರ್ಹತೆ ಇದೆಯಾ ಅಂತ ಭಯ ಶುರುವಾಗಿತ್ತು. ಕಾರಣ ಈಡೀ ವಿಶ್ವವೇ ಒಂಭತ್ತು ದಿನಗಳ ಕಾಲ ದಸರಾ ವೀಕ್ಷಣೆ ಮಾಡುತ್ತದೆ. ಇಂತಹ ಹಬ್ಬವನ್ನು ಉದ್ಘಾಟನೆ ಮಾಡುವುದು ಸುಲಭದ ಮಾತಲ್ಲ. ನನಗೆ ಪದ್ಮಶ್ರೀ, ನಾಡೋಜ ಪ್ರಶಸ್ತಿ ಗೌರವ ಸಿಕ್ಕಿರಬಹುದು. ಆದರೆ ದಸರಾ ಚಾಲನೆ ಮಾಡುವ ಭಾಗ್ಯ ಸಿಕ್ಕಿರುವುದು ದೊಡ್ಡದು ಎಂದು ಸಂತೋಷ ವ್ಯಕ್ತಪಡಿಸಿದರು.
ಅರಮನೆಯ ಸಿಂಹಾಸನ ಜೋಡಣೆ ಕಾರ್ಯ ಮುಕ್ತಾಯವಾಗಿದ್ದು, ಅರಮನೆಯಲ್ಲಿ ಖಾಸಗಿ ದರ್ಬಾರ್ ಕಾರ್ಯ ಶುರುವಾಗಿದೆ. ರಾಜಮನೆತನದ ಸಂಪ್ರದಾಯದಂತೆ ಇಂದು ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿವೆ.
ರಾಜ ಯದುವೀರ್ ಒಡೆಯರ್‍ಗೆ ಈಗಾಗಲೇ ಕಂಕಣಧಾರಣೆ ನಡೆದಿದ್ದು ಬೆಳಗ್ಗೆ 11 ಗಂಟೆಗೆ ರಾಜರ ಪಟ್ಟದ ಕಾರ್ಯಕ್ಕೆ ಆನೆ, ಕುದುರೆ, ಹಸು ಆರಮನೆ ಪ್ರವೇಶಿಸುತ್ತವೆ. ಬಳಿಕ ರಾಜ ಯದುವೀರ್ ಒಡೆಯರ್‍ಗೆ ಸಿಂಹಾಸನಾರೋಹಣ ಕಾರ್ಯಕ್ರಮ ನಡೆಯಲಿದೆ.
Inauguration of #MysuruDasara 2017 by Nadoja Prof. K.S Nissar Ahmed in the presence of Hon'ble Chief Minister and other Chief Guests. pic.twitter.com/0saP75mYYz