Tag: ಕವರ್

  • ಆಲೂಗೆಡ್ಡೆ ಚಿಪ್ಸ್ ಪ್ಯಾಕೆಟ್ ಕವರ್‌ನ್ನು ಸೀರೆಯಾಗಿ ಉಟ್ಟ ಮಹಿಳೆ- ನೆಟ್ಟಿಗರು ಹೇಳಿದ್ದೇನು ಗೊತ್ತಾ?

    ಆಲೂಗೆಡ್ಡೆ ಚಿಪ್ಸ್ ಪ್ಯಾಕೆಟ್ ಕವರ್‌ನ್ನು ಸೀರೆಯಾಗಿ ಉಟ್ಟ ಮಹಿಳೆ- ನೆಟ್ಟಿಗರು ಹೇಳಿದ್ದೇನು ಗೊತ್ತಾ?

    ಲೂಗೆಡ್ಡೆ ಚಿಪ್ಸ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ನಾಲಿಗೆ ಚಪ್ಪರಿಸಿ ತಿಂದ ನಂತರ ಅದರ ಪ್ಯಾಕೆಟ್‍ನ್ನು ಕಸದ ತೊಟ್ಟಿಯಲ್ಲಿ ಎಸೆಯುತ್ತೇವೆ. ಆದರೆ ಇಲ್ಲೊಬ್ಬಳು ಕ್ರಿಯೇಟಿವ್ ಆಗಿ ಯೋಚನೆ ಮಾಡಿದ್ದಾಳೆ. ಈ ವೀಡಿಯೋ ನೋಡಿದರೆ ಹೀಗೂ ಮಾಡಬಹುದಾ ಎಂದು ನಿಮಗೆ ಅನ್ನಿಸದೇ ಇರುವುದಿಲ್ಲ.

    ವೀಡಿಯೋದಲ್ಲಿ ಏನಿದೆ?: ಆಲೂಗಡ್ಡೆ ಚಿಪ್ಸ್ ಪ್ಯಾಕೆಟ್‍ನ್ನು ಕೈಯಲ್ಲಿ ಹಿಡಿದುಕೊಂಡಿರುವ ಮಹಿಳೆ ಆಲೂಗಡ್ಡೆ ಚಿಪ್ಸ್‍ನ ಕವರ್ ನಿಂದ ಮಾಡಿದ ಬೆಳ್ಳಿ ಬಣ್ಣದ ಸೀರೆಯನ್ನು ಧರಿಸಿರುವ ವೀಡಿಯೋವನ್ನು ನಾವು ನೋಡಬಹುದು. ಅವಳು ಸೀರೆಗೆ ಹೊಂದುವ ಬಳೆ, ಕಿವಿ ಒಲೆಯನ್ನು ಧರಿಸಿದ್ದಾಳೆ. ಈ ವೀಡಿಯೋ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾಳೆ. ನೆಟ್ಟಿಗರು ಮಹಿಳೆಯ ಕ್ರಿಯೆಟಿವಿಟಿಯನ್ನು ಮೆಚ್ಚಿಕೊಂಡು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಅಂತಾರಾಜ್ಯ ಜಲ ವಿವಾದ ಕುರಿತು ಕಾನೂನು ತಜ್ಞರೊಂದಿಗೆ ಬೊಮ್ಮಾಯಿ ಸಭೆ

     

    View this post on Instagram

     

    A post shared by BeBadass.in (@bebadass.in)

    ಕೆಲವರು ಚಿಪ್ಸ್ ಪ್ಯಾಕೆಟ್ ಸೀರೆಯ ಕಲ್ಪನೆಯನ್ನು ಸ್ವಾಗತಿಸಿದರೆ, ಕೆಲವರು ಸೀರೆಯನ್ನು ಧರಿಸಿ ಅಥವಾ ಅದನ್ನು ಧರಿಸಲೇಬೇಡಿ ಎಂದು ತಮಾಷೆಯಾಗಿ ಬರೆದಿದ್ದಾರೆ. ಸೀರೆ ಪ್ರೇಮಿ ಮತ್ತು ಕಲಾವಿದನಾಗಿ, ನಾನು ಇದನ್ನು ನೋಡಿದಾಗ ಸಂಪೂರ್ಣವಾಗಿ ವಿಚಲಿತನಾಗಿದ್ದೇನೆ. ಜನರು ಕಲೆಯ ಹೆಸರಿನಲ್ಲಿ ಏನೆಲ್ಲಾ ಮಾಡುತ್ತಾರೆ ಎಂದು ಹೀಗೆ ಹಲವು ಕಾಮೆಂಟ್‍ಗಳು ಬಂದಿವೆ.

  • ಅಜ್ಜಿ ಕೈಗೆ ಕಲ್ಲಿನ ಕವರ್ ಕೊಟ್ಟು ಚಿನ್ನದ ಸರ ಕದ್ದ ಕಳ್ಳರು

    ಅಜ್ಜಿ ಕೈಗೆ ಕಲ್ಲಿನ ಕವರ್ ಕೊಟ್ಟು ಚಿನ್ನದ ಸರ ಕದ್ದ ಕಳ್ಳರು

    ಚಿಕ್ಕಬಳ್ಳಾಪುರ: ವೃದ್ಧೆಯ ಕೈಗೆ ಕಲ್ಲು ಕೊಟ್ಟು ಚಿನ್ನದ ಸರ ಕಳವು ಮಾಡಿ ಕಳ್ಳರು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.

    ಆಂದಹಾಗೆ ಚಿನವಂಡನಹಳ್ಳಿ ಗ್ರಾಮದ ರತ್ನಮ್ಮ(55) ಸರ ಕಳೆದುಕೊಂಡ ಮಹಿಳೆ. ದಿನಸಿ ಪದಾರ್ಥ ಹಾಗೂ ಮಟನ್ ಖರೀದಿಗೆ ಅಂತ ವಿಜಯಪುರ ಪಟ್ಟಣಕ್ಕೆ ಅಜ್ಜಿ ಬಂದಿದ್ದು, ಕೋಲಾರ ಮಾರ್ಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಮುಂದೆ ಸರಗಳ್ಳರಿದ್ದಾರೆ. ಮೈ ಮೇಲಿರೋ ಸರ ಬಿಚ್ಚಿ ಕವರ್ ನಲ್ಲಿ ಹಾಕಿಕೊಳ್ಳಿ ಅಂತ ಅಜ್ಜಿಯನ್ನ ನಂಬಿಸಿ ಸರ ಬಿಚ್ಚಿಸಿದ್ದಾರೆ. ಈ ವೇಳೆ ಅಜ್ಜಿಯನ್ನು ಯಾಮಾರಿಸಿ ಸರ ಇದ್ದ ಕವರ್‌ನನ್ನು ತಾವು ತೆಗೆದುಕೊಂಡು, ಕಲ್ಲಿಟ್ಟಿದ್ದ ಕವರ್‌ನನ್ನು ಅಜ್ಜಿಯ ಕೈಗೆ ಕೊಟ್ಟು ಕಳ್ಳರು ಪರಾರಿಯಾಗಿದ್ದಾರೆ.

    ಸರಿಸುಮಾರು 35 ಗ್ರಾಂ ತೂಕದ ಒಂದೂವರೆ ಲಕ್ಷ ಮೌಲ್ಯದ ಚಿನ್ನಾಭರಣ ಕಳೆದುಕೊಂಡು ಅಜ್ಜಿ ಕಣ್ಣೀರಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ರತ್ನಮ್ಮನವರು, ನನ್ನನ್ನು ಯಾಮಾರಿಸಿ ನನ್ನ ಬಳಿ ಇದ್ದ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ. ನಾನು ಕೂಲಿ ಕೆಲಸ ಮಾಡಿ ಜೀವನ ನಡೆಸುವವಳು, ಕಷ್ಟ ಪಟ್ಟು ಸಂಪಾದನೆ ಮಾಡಿ ಸರ ಮಾಡಿಸಿಕೊಂಡಿದ್ದೆ. ಈಗ ಸರ ಕಳುವಾಗಿದೆ. ನಾನು ಏನು ಮಾಡಲಿ ಎಂದು ಕಣ್ಣೀರಿಟ್ಟಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿವೈಎಸ್‍ಪಿ ರಂಗಪ್ಪ ಅಜ್ಜಿ ಜೊತೆ ಮಾತನಾಡಿ ಘಟನಾ ಸ್ಥಳ ಪರೀಶೀಲನೆ ಮಾಡಿದರು. ಈ ವೇಳೆ ಮಾತನಾಡಿದ ಡಿವೈಎಸ್‍ಪಿ ರಂಗಪ್ಪ, ದೊಡ್ಡಬಳ್ಳಾಪುರ ಹಾಗೂ ವಿಜಯಪುರ ವ್ಯಾಪ್ತಿಯಲ್ಲಿ ಸರ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಿಳೆಯರು ಜಾಗೃತರಾಗಬೇಕು ಬೆಲೆ ಬಾಳುವ ಒಡವೆಗಳನ್ನು ಧರಿಸುವುದು ಮುಖ್ಯವಲ್ಲ. ಅದನ್ನು ಕಾಪಾಡಿಕೊಳ್ಳುವುದು ಸಹ ಮುಖ್ಯ. ನಾನಾ ರೀತಿಯಲ್ಲಿ ಮಾರುವೇಷ ಧರಿಸಿ ಕಳ್ಳರು ತಮ್ಮ ಕೈಚಳಕಗಳನ್ನು ತೋರುತ್ತಿದ್ದಾರೆ. ಜನತೆ ಜಾಗೃತೆಯಿಂದ ಇರಬೇಕು ಮತ್ತು ಸಾರ್ವಜನಿಕರ ಸಹಕಾರ ಸಹಾಯ ಬಹಳ ಮುಖ್ಯವಾಗಿ ಬೇಕು. ಇಂತಹ ಯಾವುದೇ ಘಟನೆಗಳು ಕಂಡು ಬಂದಲ್ಲಿ ಅನುಮಾನಸ್ಪದವಾಗಿ ಯಾರಾದರೂ ಹೊಸಬರು ಓಡಾಡುವುದು ಕಂಡು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಡಿವೈಎಸ್ಪಿ ರಂಗಪ್ಪ ಮನವಿ ಮಾಡಿದ್ದಾರೆ. ಇದನ್ನೂ ಓದಿ:ನಕಲಿ ಕೀ ಬಳಸಿ ನಿರ್ಮಾಪಕನ ಮನೆ ದೋಚಿದ್ದ ಕಳ್ಳರ ಬಂಧನ

  • ಮೊಬೈಲ್ ಕವರಿನೊಳಗಡೆ ತುಳಸಿ ದಳ ಇಟ್ಟರೆ ರೇಡಿಯೇಷನ್ ಕಮ್ಮಿಯಾಗುತ್ತೆ – ಬಾಬಾ ರಾಮ್‍ದೇವ್

    ಮೊಬೈಲ್ ಕವರಿನೊಳಗಡೆ ತುಳಸಿ ದಳ ಇಟ್ಟರೆ ರೇಡಿಯೇಷನ್ ಕಮ್ಮಿಯಾಗುತ್ತೆ – ಬಾಬಾ ರಾಮ್‍ದೇವ್

    ಉಡುಪಿ: ಮೊಬೈಲ್ ಬ್ಯಾಕ್ ಕವರಿನ ಒಳಗಡೆ ಒಂದು ತುಳಸಿ ದಳ ಇಡುವುದರಿಂದ ರೇಡಿಯೇಶನ್ ದುಷ್ಪರಿಣಾಮ ತಪ್ಪಿಸಬಹುದು ಎಂದು ಯೋಗ ಗುರು ಬಾಬಾ ರಾಮ್ ದೇವ್ ಸಲಹೆ ನಿಡಿದ್ದಾರೆ.

    ಉಡುಪಿ ಪರ್ಯಾಯ ಪಲಿಮಾರು ಮಠ, ಶ್ರೀಕೃಷ್ಣ ಮಠ ಹಾಗೂ ಪತಂಜಲಿ ಯೋಗ ಪೀಠ ಟ್ರಸ್ಟ್ ಹರಿದ್ವಾರದ ನೇತೃತ್ವದಲ್ಲಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ಅವರಿಂದ ನ.16ರಿಂದ 20ರವರೆಗೆ ಬೃಹತ್ ಯೋಗ ಶಿಬಿರಕ್ಕೆ ಯೋಗ ಗುರು ಬಾಬಾ ರಾಮ್ ದೇವ್ ಶನಿವಾರ ಚಾಲನೆ ನೀಡಿದ ಬಳಿಕ ಪ್ರಾತ್ಯಕ್ಷಿಕೆ ಮಾಡಿದರು.

    ನಮ್ಮ ದೇಹಕ್ಕೆ ಅತೀ ಅಪಾಯಕಾರಿಯಾದ ಮೊಬೈಲ್ ಗಳ ವಿಕಿರಣಗಳ ದುಷ್ಪರಿಣಾಮಗಳನ್ನು ತಡೆಯಲು ಮೊಬೈಲಿನ ಹಿಂಬದಿಯ ಕವರಿನ ಒಳಗೆ ಒಂದು ತುಳಸಿ ದಳವನ್ನು ಇಡಿ. ತುಳಸಿ ಎಲೆಗೆ ಮೊಬೈಲ್ ಮಾತ್ರವಲ್ಲದೇ ನಾವು ಬಳಸುವ ಯಾವುದೇ ಇಲೆಕ್ಟ್ರಾನಿಕ್ ಉತ್ಪನ್ನಗಳ ವಿಕಿರಣ ದುಷ್ಪರಿಣಾಮಗಳನ್ನು ತಡೆಯುವ ಅದ್ಭುತ ಶಕ್ತಿ ಇದೆ. ಪ್ರತೀ ಮನೆ ಕಚೇರಿಗಳಲ್ಲಿ ಸಾಧ್ಯವಾದಷ್ಟು ತುಳಸಿ ಸಸಿಗಳನ್ನು ಬೆಳೆಸಿರಿ ಎಂದು ಬಾಬಾ ರಾಮ್ ದೇವ್ ಕರೆ ನೀಡಿದರು.

    ಬಾಬಾ ರಾಮ್ ದೇವ್ ಅವರು ಉಡುಪಿಯ ಜನತೆಗೆ ಇಂದಿನಿಂದ ಯೋಗ ಶಿಬಿರ ಆಯೋಜಿಸಿದ್ದು, ಮುಂಜಾನೆಯಿಂದಲೇ ಸಾವಿರಾರು ಜನ ಯೋಗ ಶಿಬಿರದಲ್ಲಿ ಪಾಲ್ಗೊಂಡರು. ಬೆಳಗ್ಗೆ ಮೂರು ಗಂಟೆಗಳ ಕಾಲ ಯೋಗ ಶಿಬಿರ ನಡೆಸಿಕೊಟ್ಟ ಯೋಗ ಗುರು ಬಾಬಾ ರಾಮ್ ದೇವ್, ಇಂದಿನಿಂದ ಐದು ದಿನ ಉಡುಪಿಯಲ್ಲಿ ಯೋಗ ಮತ್ತು ಧ್ಯಾನ ಶಿಬಿರ ನಡೆಸಿ ಕೊಡಲಿದ್ದಾರೆ.

    ಉಡುಪಿ ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಬೃಹತ್ ವೇದಿಕೆ ಹಾಕಿ ಶಿಬಿರ, ಧ್ಯಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಒಂದು ವಾರ ಹಲವು ಕಾರ್ಯಕ್ರಮದಲ್ಲಿ ಬಾಬಾ ಭಾಗವಹಿಸುತ್ತಾರೆ. ಹಲವು ಕ್ಲಿಷ್ಟಕರ ಯೋಗ ಭಂಗಿಯನ್ನು ಹೇಳಿಕೊಡುತ್ತಿದ್ದಾರೆ.