Tag: ಕಳ್ಳ ಸಾಗಣೆ

  • ಸೀರೆಯ ಮಡಿಕೆಗಳಲ್ಲಿತ್ತು 4 ಕೋಟಿ ಮೌಲ್ಯದ ನಗದು – ಇಬ್ಬರು ಹಿರಿಯ ನಾಗರಿಕರು ಅರೆಸ್ಟ್

    ಸೀರೆಯ ಮಡಿಕೆಗಳಲ್ಲಿತ್ತು 4 ಕೋಟಿ ಮೌಲ್ಯದ ನಗದು – ಇಬ್ಬರು ಹಿರಿಯ ನಾಗರಿಕರು ಅರೆಸ್ಟ್

    ಮುಂಬೈ: ಹಣ, ಚಿನ್ನ ಕಳ್ಳಸಾಗಣೆ ಮಾಡಲು ಜನರು ಚಿತ್ರ ವಿಚಿತ್ರ ಮಾರ್ಗಗಳನ್ನು ಕಂಡುಹಿಡಿಯುತ್ತಾರೆ. ಆದರೂ ಏರ್‌ಪೋರ್ಟ್‌ಗಳಲ್ಲಿ (Airport) ಅಧಿಕಾರಿಗಳ ಕೈಯಿಂದ ತಪ್ಪಿಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಇಲ್ಲೊಂದು ಕುಟುಂಬ ಹಣವನ್ನು ಕಳ್ಳಸಾಗಣೆ (smuggling) ಮಾಡುವಾಗ ಸಿಕ್ಕಿಬಿದ್ದಿರುವ ಘಟನೆ ಮುಂಬೈ ಏರ್‌ಪೋರ್ಟ್‌ನಲ್ಲಿ (Mumbai Airport) ನಡೆದಿದೆ. ಅಧಿಕಾರಿಗಳು ಬರೋಬ್ಬರಿ 4 ಕೋಟಿ ರೂ. ಮೌಲ್ಯದ ನಗದನ್ನು ವಶಪಡಿಸಿಕೊಂಡಿದ್ದಾರೆ.

    ದುಬೈನಿಂದ (Dubai) ಮುಂಬೈ ಏರ್‌ಪೋರ್ಟ್‌ಗೆ ಬಂದಿಳಿದ ಕುಟುಂಬವೊಂದರ ಲಗೇಜ್ ಬ್ಯಾಗ್‌ನಿಂದ ಅಧಿಕಾರಿಗಳು ಸುಮಾರು 479 ಸಾವಿರ ಡಾಲರ್ ನಗದನ್ನು ವಶಪಡಿಸಿಕೊಂಡಿದ್ದಾರೆ. ಇಷ್ಟೊಂದು ಮೌಲ್ಯದ ಹಣವನ್ನು ಅವರು ಮಡಚಿಟ್ಟ ಸೀರೆಯ (Saree) ಮಡಿಕೆಗಳೊಳಗೆ ಹಾಗೂ ಶೂಗಳೊಳಗೆ ಪತ್ತೆ ಮಾಡಿದ್ದಾರೆ. ಇದನ್ನೂ ಓದಿ: ಚೆಂಡೆ ಬಾರಿಸಿದ ಮಮತಾ ಬ್ಯಾನರ್ಜಿ

    ವರದಿಗಳ ಪ್ರಕಾರ ನವೆಂಬರ್ 2 ರಂದು 3 ಸದಸ್ಯರ ಕುಟುಂಬ ಫ್ಲೈ ದುಬೈ ವಿಮಾನ ಎಫ್‌ಝಡ್-446 ಮೂಲಕ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಕಳ್ಳಸಾಗಣೆಯ ಸುಳಿವು ದೊರಕುತ್ತಿದ್ದಂತೆಯೇ ಏರ್ ಇಂಟೆಲಿಜೆನ್ಸ್ ಯೂನಿಟ್ ಕಾರ್ಯಾಚರಣೆ ನಡೆಸಿದೆ. ಇದನ್ನೂ ಓದಿ: ಕೆಂಪುಕೋಟೆಯ ಮೇಲೆ ದಾಳಿ – ಲಷ್ಕರ್‌ ಉಗ್ರ ಅಶ್ಫಾಕ್ ಆರಿಫ್‌ ಗಲ್ಲು ಖಾಯಂ

    ಇಬ್ಬರು ಹಿರಿಯ ನಾಗರಿಕರು ಸೇರಿದಂತೆ 3 ಸದಸ್ಯರ ಕುಟುಂಬವನ್ನು ವಿಮಾನ ನಿಲ್ದಾಣದಲ್ಲಿ ತಡೆದು, ಹುಡುಕಾಟ ನಡೆಸಿದಾಗ ಅವರು ತಂದಿದ್ದ ಸೀರೆಯ ಮಡಿಕೆಗಳಲ್ಲಿ ಅಮೆರಿಕನ್ ಡಾಲರ್‌ನ ಭಾರೀ ಮೊತ್ತದ ನಗದನ್ನು ಪತ್ತೆಹಚ್ಚಿದ್ದಾರೆ. ಬಳಿಕ ಕಳ್ಳಸಾಗಣೆ ಮಾಡುತ್ತಿದ್ದ ಮೂವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಲಂಡನ್‌ನಲ್ಲಿ ಕಳುವಾಗಿದ್ದ ಐಷಾರಾಮಿ ಬೆಂಟ್ಲಿ ಕಾರು ಪಾಕಿಸ್ತಾನದಲ್ಲಿ ಪತ್ತೆ – ಸಾಗಾಟ ಹೇಗಾಯ್ತು ಗೊತ್ತಾ?

    ಲಂಡನ್‌ನಲ್ಲಿ ಕಳುವಾಗಿದ್ದ ಐಷಾರಾಮಿ ಬೆಂಟ್ಲಿ ಕಾರು ಪಾಕಿಸ್ತಾನದಲ್ಲಿ ಪತ್ತೆ – ಸಾಗಾಟ ಹೇಗಾಯ್ತು ಗೊತ್ತಾ?

    ಲಂಡನ್: ಕೆಲವು ವಾರಗಳ ಹಿಂದೆ ಲಂಡನ್‌ನಲ್ಲಿ ಕಳುವಾಗಿದ್ದ 3 ಲಕ್ಷ ಡಾಲರ್(ಸುಮಾರು 2 ಕೋಟಿ ರೂ.)ಗೂ ಹೆಚ್ಚಿನ ಮೌಲ್ಯದ ಐಷಾರಾಮಿ ಬೆಂಟ್ಲಿ ಕಾರು ಪಾಕಿಸ್ತಾನದ ಕರಾಚಿಯಲ್ಲಿ ಬಂಗಲೆಯೊಂದರಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಈ ಅತ್ಯಾಧುನಿಕ ಕಾರನ್ನು ಸಾಗಾಟ ಮಾಡಲು ಹೇಗೆ ಸಾಧ್ಯವಾಯಿತು ಎಂಬುದು ಇದೀಗ ತನಿಖೆಯಲ್ಲಿ ತಿಳಿದುಬಂದಿದೆ.

    ವರದಿಯ ಪ್ರಕಾರ ಕಳ್ಳತನದಲ್ಲಿ ಭಾಗಿಯಾಗಿದ್ದವರು ಅತ್ಯಾಧುನಿಕ ಕಾರಿನಲ್ಲಿದ್ದ ಟ್ರೇಸಿಂಗ್ ಟ್ರ‍್ಯಾಕರ್ ಅನ್ನು ತೆಗೆದುಹಾಕಲು ವಿಫಲರಾಗಿದ್ದಾರೆ. ಇದರ ಸುಧಾರಿತ ಟ್ರ‍್ಯಾಕಿಂಗ್ ಸಿಸ್ಟಮ್ ಮೂಲಕ ವಾಹನದ ನಿಖರವಾದ ಸ್ಥಳವನ್ನು ಪತ್ತೆ ಹಚ್ಚಲು ಬ್ರಿಟನ್ ಅಧಿಕಾರಿಗಳಿಗೆ ಅನುಕೂಲವಾಗಿದೆ.

    ಬ್ರಿಟನ್‌ನ ರಾಷ್ಟ್ರೀಯ ಅಪರಾಧ ಏಜೆನ್ಸಿ ಮೊದಲಿಗೆ ಕರಾಚಿಯ ಕಸ್ಟಮ್ಸ್ ಎನ್‌ಫೋರ್ಸ್ಮೆಂಟ್ ಕಲೆಕ್ಟರೇಟ್(ಸಿಸಿಇ)ಗೆ ಕದ್ದ ಬೆಂಟ್ಲಿ ಕಾರಿನ ಬಗ್ಗೆ ಮಾಹಿತಿ ನೀಡಿದೆ. ಮುಲ್ಸನ್ನೆ ಸೆಡಾನ್ ನಗರದ ಡಿಹೆಚ್‌ಎ ಪ್ರದೇಶದ ಮನೆಯೊಂದರಲ್ಲಿ ಕಾರನ್ನು ನಿಲ್ಲಿಸಲಾಗಿದೆ ಎಂಬ ಸುಳಿವು ಪಡೆದ ಬಳಿಕ ಕರಾಚಿಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ತಮ್ಮ ಮಗುವಿಗೆ ಭಾರತೀಯ ಖಾದ್ಯದ ಹೆಸರಿಟ್ಟ ವಿದೇಶಿ ದಂಪತಿ

    ದಾಳಿಯ ವೇಳೆ ಅಧಿಕಾರಿಗಳು ಪಾಕಿಸ್ತಾನಿ ನೋಂದಣಿ ಹಾಗೂ ನಂಬರ್ ಪ್ಲೇಟ್ ಇರುವ ಬೆಂಟ್ಲಿ ಕಾರನ್ನು ಕಂಡುಹಿಡಿದರು. ಬಳಿಕ ತಪಾಸಣೆ ನಡೆಸಿದಾಗ ಕಾರಿನ ಚಾಸಿಸ್ ಸಂಖ್ಯೆಯು ಬ್ರಿಟನ್ ಅಧಿಕಾರಿಗಳು ಒದಗಿಸಿದ ಕದ್ದ ವಾಹನದ ವಿವರಗಳಿಗೆ ಹೊಂದಿಕೆಯಾಗಿದೆ. ಬಳಿಕ ಬಂಗಲೆ ಮಾಲೀಕರ ಬಳಿ ಕಾರಿನ ದಾಖಲೆಗಳನ್ನು ಕೇಳಿದಾಗ ಅವರು ಅದನ್ನು ನೀಡಲು ವಿಫಲರಾಗಿದ್ದಾರೆ.

    ವಾಹನದ ನೊಂದಣಿ ನಕಲಿ ಎಂಬುದು ತಿಳಿದ ತಕ್ಷಣ ಅಧಿಕಾರಿಗಳು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಬಂಗಲೆ ಮಾಲೀಕ ಹಾಗೂ ಆತನಿಗೆ ಕಾರನ್ನು ಮಾರಾಟ ಮಾಡಿದ್ದ ದಲ್ಲಾಳಿಯನ್ನೂ ಬಂಧಿಸಿದ್ದಾರೆ. ಇದನ್ನೂ ಓದಿ: ಮುಂದಿನ ಐಪಿಎಲ್‌ಗೂ ಧೋನಿ ಚೆನ್ನೈ ತಂಡ ನಾಯಕ

    ಘಟನೆಯ ಬಗ್ಗೆ ತನಿಖೆ ನಡೆಸಿದಾಗ ಈ ಐಷಾರಾಮಿ ಕಾರನ್ನು ಲಂಡನ್‌ನಿಂದ ಪಾಕಿಸ್ತಾನಕ್ಕೆ ಸಾಗಾಟ ಮಾಡಲು ಪೂರ್ವ ಯುರೋಪಿಯನ್ ದೇಶದ ಉನ್ನತ ರಾಜತಾಂತ್ರಿಕರ ದಾಖಲೆಗಳನ್ನು ಬಳಸಲಾಗಿದೆ ಎಂಬುದು ತಿಳಿದುಬಂದಿದೆ. ಈ ಮೂಲಕ ಯಶಸ್ವಿಯಾಗಿ ಕಾರನ್ನು ಪಾಕಿಸ್ತಾನಕ್ಕೆ ಕಳ್ಳ ಸಾಗಣೆ ಮಾಡಿದ್ದಾರೆ. ಈ ಕಳ್ಳ ಸಾಗಣೆಯ ಮುಖ್ಯ ಮಾಸ್ಟರ್‌ಮೈಂಡ್‌ಗಾಗಿ ಇನ್ನೂ ಶೋಧ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೊಟ್ಟೆಯಲ್ಲಿ 1 ಕೆ.ಜಿ ಕೊಕೇನ್ ಬಚ್ಚಿಟ್ಟು ಪ್ರಯಾಣ – ವಿದೇಶಿ ಮಹಿಳೆ ಅರೆಸ್ಟ್

    ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಐಜಿಐ)ದಲ್ಲಿ ಉಗಾಂಡಾ ಮೂಲದ ಮಹಿಳೆಯನ್ನು ಬಂಧಿಸಲಾಗಿದೆ. ಆಕೆ ತನ್ನ ಹೊಟ್ಟೆಯಲ್ಲಿ 1ಕೆಜಿ ಕೊಕೇನ್ ತುಂಬಿದ ಮಾತ್ರೆಗಳನ್ನು ಬಚ್ಚಿಟ್ಟು, ಕಳ್ಳಸಾಗಣೆ ಮಾಡುತ್ತಿದ್ದಳು.

    ಉಗಾಂಡಾ ಮೂಲದ ಮಹಿಳೆ ಕೆಲವು ದಿನಗಳ ಹಿಂದೆ ಐಜಿಐ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಆಕೆಯ ಚಲನವಲನಗಳು ಅಸಾಮಾನ್ಯವಾಗಿದ್ದವು. ಆಕೆಯನ್ನು ಗುರುತಿಸಿದ ಕಸ್ಟಮ್ಸ್ ಅಧಿಕಾರಿಗಳು ಮಾತಾಡಿಸಿದಾಗ ಆಕೆ ವಿಚಿತ್ರವಾಗಿ ನಡೆದುಕೊಂಡಿದ್ದಳು. ಆಕೆಯನ್ನು ಪ್ರಶ್ನಿಸಿದಾಗ ಕೊಕೇನ್ ಮಾತ್ರೆಗಳನ್ನು ನುಂಗಿರುವ ವಿಚಾರವನ್ನು ತಿಳಿಸಿದ್ದಾಳೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ನ್ಯೂ ಇಯರ್‌ಗೆ ಹೊಸ ಮಾರ್ಗಸೂಚಿ ಬಿಡುಗಡೆ

    ಮಹಿಳೆ ಹೊಟ್ಟೆಯಲ್ಲಿ ಕೊಕೇನ್ ಬಚ್ಚಿಟ್ಟಿದ್ದ ವಿಚಾರ ತಿಳಿಯುತ್ತಿದ್ದಂತೆ ಆಕೆಯನ್ನು ಆರ್‍ಎಂಎಲ್ ಆಸ್ಪತ್ರೆಗೆ ಕರೆದೊಯ್ದು, 91 ಕೊಕೇನ್ ತುಂಬಿದ ಮಾತ್ರೆಗಳನ್ನು ಆಕೆಯ ದೇಹದಿಂದ ತೆಗೆಯಲಾಯಿತು. ಒಟ್ಟು 996 ಗ್ರಾಂ ಕೊಕೇನ್ ಅನ್ನು ಆಕೆಯ ದೇಹದಿಂದ ತೆಗೆಯಲು 4 ದಿನಗಳು ಬೇಕಾಯಿತು ಎಂದು ಹಿರಿಯ ಕಸ್ಟಮ್ಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

    ಸಾಮಾನ್ಯವಾಗಿ ವ್ಯಕ್ತಿ ತನ್ನ ಹೊಟ್ಟೆಯಲ್ಲಿ 400 ರಿಂದ 500 ಗ್ರಾಂ ವರೆಗಿನ ಬಾಹ್ಯ ವಸ್ತುಗಳನ್ನು ಹೊಟ್ಟೆಯೊಳಗೆ ಬಚ್ಚಿಡಲು ಸಾಧ್ಯವಿರುತ್ತದೆ. ಆದರೆ ಈ ಮಹಿಳೆ 1 ಕೆಜಿ ಕೊಕೇನ್ ತುಂಬಿದ ಮಾತ್ರೆಗಳನ್ನು ಬಚ್ಚಿಟ್ಟಿರುವುದು ಅಪರೂಪ ಹಾಗೂ ಆಘಾತ ಮೂಡಿಸಿರುವ ವಿಷಯ ಎಂದು ಹೇಳಿದರು. ಇದನ್ನೂ ಓದಿ: ಪುನೀತ್ ಪ್ರೇರಣೆ – ಚಾಮರಾಜನಗರದಲ್ಲಿ ಇದುವರೆಗೆ 9,500 ಮಂದಿ ನೇತ್ರದಾನಕ್ಕೆ ನೋಂದಣಿ

    ಈ ಕೊಕೇನ್ ಗುಳಿಗೆಯನ್ನು ಹೊಟ್ಟೆಯಲ್ಲಿ ಬಚ್ಚಿಡಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಿದ್ದಾರೆ. ಒಂದುವೇಳೆ ಗುಳಿಗೆಗಳು ಹೊಟ್ಟೆಯ ಒಳಗೆ ಸಿಡಿದಿದ್ದರೆ ಮಹಿಳೆಯ ಜೀವಕ್ಕೆ ಅಪಾಯವಿತ್ತು ಎಂದು ತಿಳಿಸಿದರು.

  • 2.5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ – ಇಬ್ಬರ ಬಂಧನ

    2.5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ – ಇಬ್ಬರ ಬಂಧನ

    ತಿರುವನಂತಪುರಂ: ಕೇರಳದ ಆಲುವಾ ರೈಲು ನಿಲ್ದಾಣದಲ್ಲಿ 2.5ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಪೊಲೀಸರು ಪತ್ತೆ ಮಾಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ಆಲುವಾ ರೈಲ್ವೇ ನಿಲ್ದಾಣಕ್ಕೆ ಬಂದಿದ್ದ ಇಬ್ಬರು, ಸುಮಾರು 2.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದರು. ಎಕ್ಸ್‍ಟಸಿ ಅಥವಾ ಎಂಡಿಎಂಎ ಎನ್ನಲಾಗುವ 3ಕೆಜಿ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿ 7 ವರ್ಷಗಳ ಬಳಿಕ ಪತಿಯನ್ನು ಸೇರಿದ ಪತ್ನಿ!

    POLICE JEEP

    ರಾಹುಲ್ ಸುಭಾಷ್(28) ಹಾಗೂ ಸೈನುಲ್(19) ಬಂಧಿತ ಆರೋಪಿಗಳು. ಇವರು ಹೊಸ ವರ್ಷಾಚರಣೆಗೆ ಮಾದಕ ದ್ರವ್ಯವನ್ನು ಸಾಗಿಸುತ್ತಿರುವುದಾಗಿ ಹೇಳುವ ಮೂಲಕ ಪೊಲೀಸರ ಬಳಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

    ಪಾನಿಪುರಿ ಹಾಗೂ ಜ್ಯೂಸ್ ಪ್ಯಾಕೆಟ್ ಗಳಲ್ಲಿ ಮಾದಕ ವಸ್ತುಗಳನ್ನು ಬಚ್ಚಿಟ್ಟಿದ್ದನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಆರೋಪಿಗಳು ದೆಹಲಿಯಿಂದ ಕೇರಳಕ್ಕೆ ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ದಂಧೆಯಿಂದ ಮಗಳನ್ನು ರಕ್ಷಿಸುವಂತೆ ವಿಎಚ್‌ಪಿಗೆ ತಾಯಿ ಪತ್ರ – ಆರೋಪಿ ಅರೆಸ್ಟ್

    ಕಳೆದ ಕೆಲವು ತಿಂಗಳುಗಳಿಂದ ಇಬ್ಬರು ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದು, ಅವರ ಮೇಲೆ ಪೊಲೀಸರು ಮೊದಲೇ ನಿಗಾ ಇಟ್ಟಿದ್ದರು. ಖಚಿತ ಮಾಹಿತಿಯ ಬಳಿಕ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ.