Tag: ಕಳ್ಳಿಯರು

  • ಜಗನ್ನಾಥ ರಥಯಾತ್ರೆಯಲ್ಲಿ ಸರಗಳ್ಳತನ – ನಾಲ್ವರು ಚಾಲಾಕಿ ಕಳ್ಳಿಯರ ಬಂಧನ

    ಜಗನ್ನಾಥ ರಥಯಾತ್ರೆಯಲ್ಲಿ ಸರಗಳ್ಳತನ – ನಾಲ್ವರು ಚಾಲಾಕಿ ಕಳ್ಳಿಯರ ಬಂಧನ

    ಬೆಂಗಳೂರು: ಜಾತ್ರೆ, ಸಮಾರಂಭಗಳಿದ್ದಾಗ ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಸರಗಳ್ಳತನ ಮಾಡುತ್ತಿದ್ದ ಖತರ್ನಾಕ್ ಲೇಡಿ ಗ್ಯಾಂಗ್ ಅನ್ನು ಬಾಣಸವಾಡಿ ಪೊಲೀಸರು (Banasawadi Police) ಬಂಧಿಸಿದ್ದಾರೆ.

    ಯಶೋಧಾ, ಗಾಯತ್ರಿ, ಆಶಾ ಮತ್ತು ಪ್ರಿಯಾ ಬಂಧಿತ ಕಳ್ಳಿಯರು. ಜೂನ್ 29ರಂದು ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಗನ್ನಾಥ ರಥಯಾತ್ರೆ (Jagannath Rath Yatra) ನಡೆದಿತ್ತು. ನೂಕುನುಗ್ಗಲು ಹೆಚ್ಚಿದ ಕಾರಣ ಕಳ್ಳಿಯರಿಗೆ ಕಳ್ಳತನಕ್ಕೆ ಹೆಚ್ಚು ಅನುಕೂಲವಾಗಿತ್ತು. ಇದನ್ನೂ ಓದಿ: ಡಾಲರ್ ಎಕ್ಸ್‌ಚೇಂಜ್‌ಗೆ ಬಂದಾಗ 2 ಕೋಟಿ ರೂ. ದರೋಡೆ ನಾಟಕ – ದೂರುದಾರ ಸೇರಿ 15 ಮಂದಿ ಅರೆಸ್ಟ್!

    ಮಹಿಳೆಯರ ಚಿನ್ನದ ಸರ ಟಾರ್ಗೆಟ್ ಮಾಡಿದ್ದ ಐನಾತಿಗಳು 4 ಚಿನ್ನದ ಸರ ಕದ್ದು ಎಸ್ಕೇಪ್ ಆಗಿದ್ದರು. ಚಿನ್ನದ ಸರ ಕಳೆದುಕೊಂಡವರು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿ – ಮಹಿಳೆ ಸಾವು

    ತನಿಖೆ ಕೈಗೊಂಡ ಪೊಲೀಸರು 300ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 14 ಲಕ್ಷ ಮೌಲ್ಯದ 140 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಕ್ಕೆ ಪಡೆದಿದ್ದಾರೆ.

    ಆರೋಪಿಗಳು ಬೆಂಗಳೂರು ಅಷ್ಟೇ ಅಲ್ಲದೆ ಬೇರೆ-ಬೇರೆ ಜಿಲ್ಲೆಗಳಲ್ಲಿ ಕೈಚಳಕ ತೋರಿರುವುದು ಸಹ ತನಿಖೆಯಲ್ಲಿ ಬಯಲಾಗಿದೆ.

  • ಸಾರಿಗೆ ಬಸ್‌ನಲ್ಲಿ ಕಳ್ಳತನಕ್ಕೆ ಯತ್ನ – ಖತರ್ನಾಕ್ ಕಳ್ಳಿಯರು ಅರೆಸ್ಟ್

    ಸಾರಿಗೆ ಬಸ್‌ನಲ್ಲಿ ಕಳ್ಳತನಕ್ಕೆ ಯತ್ನ – ಖತರ್ನಾಕ್ ಕಳ್ಳಿಯರು ಅರೆಸ್ಟ್

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸಾರಿಗೆ ಬಸ್‌ನಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಮೂವರು ಖತರ್ನಾಕ್ ಕಳ್ಳಿಯರನ್ನು ಪೊಲೀಸರು ಬಂಧಿಸಿದ್ದಾರೆ.

    ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಬಸ್‌ನಲ್ಲಿ ಮೂವರು ಕಳ್ಳಿಯರು, ಪ್ರಯಾಣಿಕರ ಬಳಿ ಇದ್ದಂತಹ ಚಿನ್ನಾಭರಣವನ್ನು ಕಳ್ಳತನ ಮಾಡಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಪ್ರಯಾಣಿಕರೊಬ್ಬರು ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಕಲುಷಿತ ನೀರು ಕುಡಿದು 4 ಸಾವು ಪ್ರಕರಣ – ಜನರಲ್ಲಿ ಇನ್ನೂ ನಿಲ್ಲದ ವಾಂತಿ, ಭೇದಿ

    ಮಾಹಿತಿ ಪಡೆದ ಪೊಲೀಸರು ಸಿನಿಮೀಯಾ ರೀತಿಯಲ್ಲಿ ಬಸ್ಸನ್ನು ಅಡ್ಡಗಟ್ಟಿ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಬಳಿ ಆರೋಪಿಗಳನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ವೃದ್ಧ ದಂಪತಿಯನ್ನು ಕೋಣೆಯಲ್ಲಿ ಕೂಡಿ ಹಾಕಿ ದರೋಡೆ

     

  • ಭಿಕ್ಷೆ ಬೇಡುವ ನೆಪದಲ್ಲಿ ಮಕ್ಕಳಿಗೆ ಕಳ್ಳತನದ ಟ್ರೈನಿಂಗ್

    ಭಿಕ್ಷೆ ಬೇಡುವ ನೆಪದಲ್ಲಿ ಮಕ್ಕಳಿಗೆ ಕಳ್ಳತನದ ಟ್ರೈನಿಂಗ್

    ರಾಮನಗರ: ಜಿಲ್ಲೆಯಲ್ಲಿ ಭಿಕ್ಷೆ ಬೇಡುವ ನೆಪದಲ್ಲಿ ಮಕ್ಕಳನ್ನು ಮುಂದಿಟ್ಟುಕೊಂಡು ಕಳ್ಳತನ ಮಾಡಿಸುತ್ತಿದ್ದ ಗ್ಯಾಂಗ್‍ನ್ನು ಪೊಲೀಸರು ಬಂಧಿಸಿದ್ದಾರೆ.

    ಕಲಬುರ್ಗಿ ಜಿಲ್ಲೆಯ ಸಂಜನಾ ಹಾಗೂ ಮೀನಾಕ್ಷಿ ಬಂಧಿತರು. ದೊಡ್ಡ ದೊಡ್ಡ ಅಂಗಡಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್ ಕ್ಷಣ ಮಾತ್ರದಲ್ಲಿ ಗಲ್ಲ ಪೆಟ್ಟಿಗೆಯಲ್ಲಿದ್ದ ಹಣವನ್ನ ಲಪಟಾಯಿಸುತ್ತಿದ್ದರು. ಕದ್ದ ಹಣವನ್ನ ತಾವು ತಂದಿದ್ದ ಬಿರಿಯಾನಿ ಪೊಟ್ಟಣದಲ್ಲಿ ಅಡಗಿಸಿಟ್ಟುಕೊಳ್ಳುತ್ತಿದ್ದರು. ಮಕ್ಕಳಿಗೂ ಇದೇ ರೀತಿ ಕಳ್ಳತನದ ಟ್ರೈನಿಂಗ್ ನೀಡುತ್ತಿದ್ದ ಖತರ್ನಾಕ್ ಮಹಿಳೆಯರ ಬಂಧನವಾಗಿದೆ.

    ರಾಮನಗರದ ಐಜೂರು ಪೊಲೀಸರು ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 8ಕ್ಕೂ ಹೆಚ್ಚು ಜನರಿದ್ದ ಗ್ಯಾಂಗ್‍ನಲ್ಲಿ ಪ್ರತಿಯೊಬ್ಬರ ಬಳಿಯೂ ಹಸುಗೂಸುಗಳಿದ್ದು, 2 ತಿಂಗಳ ಹಿಂದಷ್ಟೇ ರಾಮನಗರಕ್ಕೆ ಈ ಖತರ್ನಾಕ್ ಗ್ಯಾಂಗ್ ಕಾಲಿಟ್ಟಿದೆ. ಇವರ ಕೃತ್ಯ ಸಿಸಿಟಿವಿಯಲ್ಲೂ ಸೆರೆಸಿಕ್ಕಿದೆ.

  • ಬೆಡ್‍ಶೀಟ್ ಹೊತ್ತು ಮಾಡ್ತಾರೆ ಕಳ್ಳತನ- ಖತರ್ನಾಕ್ ಕಳ್ಳಿಯರ ಕೈಚಳಕ ಸಿಸಿಟಿವಿಯಲ್ಲಿ ಸೆರೆ..!

    ಬೆಡ್‍ಶೀಟ್ ಹೊತ್ತು ಮಾಡ್ತಾರೆ ಕಳ್ಳತನ- ಖತರ್ನಾಕ್ ಕಳ್ಳಿಯರ ಕೈಚಳಕ ಸಿಸಿಟಿವಿಯಲ್ಲಿ ಸೆರೆ..!

    ಬೆಂಗಳೂರು: ಬೆಡ್‍ಶೀಟ್ ಹೊತ್ತು ಬಂದ ಆರು ಮಂದಿ ಕಳ್ಳಿಯರು, ಶೆಟರ್ ಮುರಿದು ಲಕ್ಷಾಂತರ ರೂಪಾಯಿ ನಗದು ದೋಚಿರೋ ಘಟನೆ ಬೆಂಗಳೂರಿನ ಚಿಕ್ಕಪೇಟೆಯ ಭೈರಪ್ಪ ಅಂಡ್ ಸನ್ಸ್ ಸಿಲ್ಕ್ಸ್ ಮಳಿಗೆಯಲ್ಲಿ ನಡೆದಿದೆ.

    ಜನವರಿ 2ರಂದು ಚಿಕ್ಕಪೇಟೆಯ ಭೈರಪ್ಪ ಅಂಡ್ ಸನ್ಸ್ ಸಿಲ್ಕ್ ಮಳಿಗೆಯಲ್ಲಿ ಖತರ್ನಾಕ್ ಕಳ್ಳಿಯರು ತಮ್ಮ ಕೈಚಳಕ ತೋರಿದ್ದಾರೆ. ಕಳ್ಳತನದ ದೃಶ್ಯಾವಳಿಗಳು ಮಳಿಗೆಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಳಗಿನ ಜಾವ 5.30ಕ್ಕೆ ಮಳಿಗೆ ಮುಂದೆ ಆರು ಮಂದಿ ಕಳ್ಳಿಯರು ಮತ್ತು ಒಬ್ಬ ಬಾಲಕ ಬೆಡ್‍ಶೀಟ್ ಹೊದ್ದು ಬಂದಿದ್ದಾರೆ. ಬಳಿಕ ಯಾರಿಗೂ ಕಾಣಬಾರದೆಂದು ಬೆಡ್‍ಶೀಟ್ ಅಡ್ಡ ಹಿಡಿದು ಅಂಗಡಿ ಶೆಟರ್‌ನ್ನು ತೆಗೆದು, ಆರಾಮಾಗಿ ಒಬ್ಬ ಕಳ್ಳಿಯನ್ನ ಒಳಗೆ ಕಳಿಸಿ, ಆಕೆ ಕೈಯಿಂದ ಕಳ್ಳತನ ಮಾಡಿಸಿದ್ದಾರೆ.

    ಒಳಗೆ ಬಂದ ಕಳ್ಳಿ, ಸ್ಕ್ರೂ ಡ್ರೈವರ್  ನಿಂದ ಕ್ಯಾಶ್ ಬಾಕ್ಸ್ ತೆಗೆದು ಡ್ರಾವರ್‌ನಲ್ಲಿದ್ದ ಬರೋಬ್ಬರಿ 4.20 ಲಕ್ಷ ರೂ. ಹಣವನ್ನು ಎತ್ತಿಕೊಂಡು ಹೊರಗೆ ಬರೋ ಮುನ್ನ ಶೆಟರ್ ಬಡಿದಿದ್ದಾಳೆ. ನಂತರ ಹೊರಗಿದ್ದವರು ಪುನಃ ಶೆಟರ್ ಮೇಲೆತ್ತಿ ಒಳಗಿನಿಂದ ಬರೋದಕ್ಕೆ ಸಹಾಯ ಮಾಡಿದ್ದಾರೆ. ಒಳಗೆ ಹೋಗಿ ಒಬ್ಬಳು ಕಳ್ಳತನ ಮಾಡ್ತಿದ್ರೆ ಇನ್ನುಳಿದವರು ಚಳಿಗೆ ಕೂತಿದ್ದಾರೆನೋ ಅನ್ನೋ ರೀತಿ ನಟಿಸ್ತಿರ್ತಾರೆ. ಆ ಮೇಲೆ ಎಲ್ಲರೂ ಬೆಡ್‍ಶೀಟ್ ಹೊದ್ದುಕೊಂಡೇ ಏನೂ ತಿಳಿಯದವರ ರೀತಿ ಎಸ್ಕೇಪ್ ಆಗಿದ್ದಾರೆ. ಈ ಎಲ್ಲಾ ದೃಶ್ಯಾವಳಿಗಳು ಮಳಿಗೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸದ್ಯ ಈ ಬಗ್ಗೆ ಅಂಗಡಿ ಮಾಲೀಕ ಭೈರೇಶ್ ಅವರು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳಿಯರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

    https://www.youtube.com/watch?v=jlk-Jc9f_JU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv