Tag: ಕಳ್ಳಿ

  • ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನ ಮಾಡ್ತಿದ್ದ ಒಂಟಿ ಕಳ್ಳಿ ಅರೆಸ್ಟ್

    ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನ ಮಾಡ್ತಿದ್ದ ಒಂಟಿ ಕಳ್ಳಿ ಅರೆಸ್ಟ್

    ಬೆಂಗಳೂರು: ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಒಂಟಿ ಕಳ್ಳಿಯೊಬ್ಬಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

    ಜಯಂತಿ ಅಲಿಯಾಸ್ ಕುಟ್ಟಿಯಮ್ಮ ಬಂಧಿತ ಕಳ್ಳಿ. ಈಕೆ ನಗರದಲ್ಲಿ ಒಟ್ಟು 23 ಕಡೆ ಕಳ್ಳತನ ಪ್ರಕರಣದಲ್ಲಿ ಬೇಕಾಗಿದ್ದಾಳೆ. ಕಳ್ಳಿಯು ಮೊದಲಿಗೆ ಬೀಗ ಹಾಕಿದ್ದ ಮನೆಗಳನ್ನು ಗುರುತಿಸುತ್ತಿದ್ದಳು. ಬಳಿಕ ಒಂಟಿಯಾಗಿ ಮನೆಗಳಿಗೆ ಪ್ರವೇಶ ನೀಡಿ, ಮನೆ ಬಾಗಿಲಿನ ಬೀಗ ಒಡೆದು ಕಳ್ಳತನ ಮಾಡುತ್ತಿದ್ದಳು. ಇದನ್ನೂ ಓದಿ: ಬಹುಕಾಲದ ಗೆಳೆಯ ದೇವರಾಜ್ ಭೇಟಿಯಾಗಿ ಭಾವುಕರಾದ ಜಗ್ಗೇಶ್

    ಈಕೆ ಒಂದೇ ಏರಿಯಾದಲ್ಲಿ ಎರಡು ಕಳ್ಳತನ ಮಾಡಿದ್ದಳು. ಈ ವೇಳೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ತನಿಖೆ ವೇಳೆ ಇದು ಕಳ್ಳಿ ಜಯಂತಿ ಎಂಬುದು ಪತ್ತೆಯಾಗಿದೆ. ಜಯಂತಿಯನ್ನು ಬಂಧಿಸಿದ ನಂತರ ಮತ್ತೆ ಎರಡು ಹೊಸ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

    ಈ ಕುರಿತು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಸೆಮಿಸ್ಟರ್ ಪರೀಕ್ಷೆಗೆ ಗೈರು

  • ಕೆಲಸ ಮಾಡುವ ಮನೆಯಲ್ಲಿ ಕಳ್ಳತನ ಮಾಡಿ ಖಾಕಿ ಬಲೆಗೆ ಬಿದ್ದ ಐನಾತಿ ಕಳ್ಳಿ

    ಕೆಲಸ ಮಾಡುವ ಮನೆಯಲ್ಲಿ ಕಳ್ಳತನ ಮಾಡಿ ಖಾಕಿ ಬಲೆಗೆ ಬಿದ್ದ ಐನಾತಿ ಕಳ್ಳಿ

    ಬೆಂಗಳೂರು: ಮನೆ ಗುಡಿಸುವ ಕೆಲಸದ ಜೊತೆಗೆ ಮನೆಯಲ್ಲಿದ್ದ ಚಿನ್ನಾಭರಣವನ್ನ ದೋಚಿಕೊಂಡು ಹೋಗುತ್ತಿದ್ದ ಐನಾತಿ ಕಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

    ಆಂಧ್ರ ಮೂಲದ ಲಕ್ಷ್ಮಿ ಬಂಧಿತ ಐನಾತಿ ಕಳ್ಳಿ. ಬಂಧಿತ ಕಳ್ಳಿಯಿಂದ 12 ಲಕ್ಷ ಮೌಲ್ಯದ 310 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಯಲಹಂಕದಲ್ಲಿ ವಾಸವಾಗಿದ್ದ ಲಕ್ಷ್ಮೀ ಸಂಪಗಿಹಳ್ಳಿಯಲ್ಲಿರುವ ಬ್ರಿಗೇಡ್ ಅಪಾರ್ಟ್‍ಮೆಂಟ್‍ನಲ್ಲಿ ಮನೆ ಕೆಲಸ ಮಾಡಿಕೊಂಡಿದ್ದಳು.

    ಬ್ರಿಗೇಡ್ ಅಪಾರ್ಟ್‍ಮೆಂಟ್ ನಲ್ಲಿರುವ ನಾಲ್ಕು ಮನೆಗಳಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದ ಲಕ್ಷ್ಮೀ, ರಘುವೀರ್, ಗೋಪಾಲ್, ಅವಿನಾಶ್ ಸೇರಿದಂತೆ ಒಟ್ಟು ಅಪಾರ್ಟ್‍ಮೆಂಟ್ ನಾಲ್ಕು ಮನೆಗಳಲ್ಲಿ ಕೈಚಳಕ ತೋರಿದ್ದಾಳೆ. ಬ್ಯಾಕ್ ಟೂ ಬ್ಯಾಕ್ ಲಕ್ಷ್ಮಿ ಕೆಲಸ ಮಾಡುತ್ತಿದ್ದ ನಾಲ್ಕು ಮನೆಗಳಲ್ಲಿ ಕಳ್ಳತನವಾಗಿದೆ. ಲಕ್ಷ್ಮಿಯ ಮೇಲೆ ಅನುಮಾನ ಬಂದು ಕಳ್ಳತನ ವಿಚಾರವಾಗಿ ಮಾಲೀಕರು ವಿಚಾರಿಸಿದ್ದಾರೆ.

    ಲಕ್ಷ್ಮಿ ನಾನು ಕಳ್ಳತನ ಮಾಡೇ ಇಲ್ಲ ಎಂದು ವಾದಿಸಿದ್ದಾಳೆ. ಆಗ ಮಾಲೀಕ ರಘುವೀರ್ ಕಳ್ಳತನವಾಗಿರುವ ಬಗ್ಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಾಲೀಕರಿಗೆ ಮನೆ ಕೆಲಸದವಳ ಮೇಲೆ ಅನುಮಾನ ಇದ್ದ ಕಾರಣ ಲಕ್ಷ್ಮಿಯ ಹೆಸರು ನಮೂದಿಸಿ ಪೊಲೀಸರಿಗೆ ದೂರು ನೀಡಿದ್ದರು. ಲಕ್ಷ್ಮಿಯನ್ನು ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ಮಾಡಿದಾಗ ಮನೆಯಲ್ಲಿ ಕಷ್ಟ ಇದ್ದ ಕಾರಣ ನಾಲ್ಕು ಮನೆಯಲ್ಲಿ ತಾನೇ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

  • ಚೈನ್ ಕದ್ದು ಸಿನಿಮಾ ಸ್ಟೈಲಿನಲ್ಲೇ ರೈಲಿನಿಂದ ಜಂಪ್ ಮಾಡಿ ಮಹಿಳೆ ಎಸ್ಕೇಪ್- ವಿಡಿಯೋ ನೋಡಿ

    ಚೈನ್ ಕದ್ದು ಸಿನಿಮಾ ಸ್ಟೈಲಿನಲ್ಲೇ ರೈಲಿನಿಂದ ಜಂಪ್ ಮಾಡಿ ಮಹಿಳೆ ಎಸ್ಕೇಪ್- ವಿಡಿಯೋ ನೋಡಿ

    ಮುಂಬೈ: ಮಹಿಳಾ ಪ್ರಯಾಣಿಕರೊಬ್ಬರನ್ನು ದರೋಡೆ ಮಾಡಿ ಬಳಿಕ ಸಿನಿಮಾ ಹೀರೋನಂತೆ ರೈಲಿನಿಂದ ಜಂಪ್ ಮಾಡಿ ಕಳ್ಳಿಯೊಬ್ಬಳು ಪರಾರಿಯಾದ ಘಟನೆ ಮುಂಬೈನಲ್ಲಿ ನಡೆದಿದೆ.

    ಈ ಘಟನೆ ಮುಂಬೈನ ವಿಖ್ರೋಲಿ ರೈಲ್ವೆ ನಿಲ್ದಾಣದಲ್ಲಿ ಗುರುವಾರ ನಡೆದಿದೆ. ಮಹಿಳೆಯಿಂದ ರೈಲಿನಿಂದ ಜಿಗಿದು ಎದ್ದನೋ ಬಿದ್ನೋ ಅಂತ ಓಡುತ್ತಿರುವ ದೃಶ್ಯ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ವಿಡಿಯೋದಲ್ಲೇನಿದೆ?:
    ಮಹಿಳೆಯೊಬ್ಬಳು ಏಕಾಏಕಿ ರೈಲಿನಿಂದ ಜಿಗಿಯುತ್ತಾಳೆ. ನಂತರ ರೈಲ್ವೇ ಟ್ರ್ಯಾಕ್ ಮೇಲೆ ಬಿದ್ದು ಎದ್ದು ನಿಲ್ದಾಣದಲ್ಲಿದ್ದ ಪ್ರಯಾಣಿಕರು ನೋಡ ನೋಡುತ್ತಿದ್ದಂತೆಯೇ ಫ್ಲ್ಯಾಟ್ ಫಾರಂ ಗೆ ಪರಾರಿಯಾಗುವುದನ್ನು ನಾವು ಗಮನಿಸಬಹುದು.

    ಮಹಿಳೆಯೊಬ್ಬಳು ನನ್ನ ಹಿಂದೆ ನಿಂತಿದ್ದಳು. ನಂತರ ನನ್ನ ಕುತ್ತಿಗೆಯಲ್ಲಿದ್ದ ಸರವನ್ನು ಏಕಾಏಕಿ ಕಸಿದುಕೊಂಡು ರೈಲಿನಿಂದ ಟ್ರ್ಯಾಕ್ ಮೇಲೆ ಜಿಗಿದು ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಕೂಡಲೇ ಅಲ್ಲಿದ್ದ ಸಾರ್ವಜನಿಕರು ಆಕೆಯನ್ನು ಹಿಡಿದಿದ್ದಾರೆ. ಅಲ್ಲದೇ ಇನ್ಮುಂದೆ ಇಂತಹ ಕೆಟ್ಟ ಅಭ್ಯಾಸವನ್ನು ಬಿಟ್ಟುಬಿಡುವಂತೆ ಹೇಳಿ ಕಳುಹಿಸಿದ್ದಾರೆ. ಆದ್ರೆ ಈ ಬಗ್ಗೆ ನಾನು ಆಕೆಯ ವಿರುದ್ಧ ದೂರು ನಿಡಿದ್ದೇನೆ ಅಂತ ಸಂತ್ರಸ್ತೆ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=p7fS8PlSHog

  • ಬೆಂಗ್ಳೂರಲ್ಲಿದ್ದ ಐನಾತಿ ಕಳ್ಳಿಯರಿಬ್ಬರ ಬಂಧನ

    ಬೆಂಗ್ಳೂರಲ್ಲಿದ್ದ ಐನಾತಿ ಕಳ್ಳಿಯರಿಬ್ಬರ ಬಂಧನ

    ಬೆಂಗಳೂರು: ನಗರದ ಕಳ್ಳತನ ಮಾಡುತ್ತಿದ್ದ ಇಬ್ಬರು ಖರ್ತಾನಕ್ ಕಳ್ಳಿಯರನ್ನು ಪೊಲೀಸರು ಬಂಧಿಸಿದ್ದಾರೆ.

    ಉಷಾವಾಣಿ ಹಾಗೂ ಮೀನಾಕ್ಷಿ ಎಂಬ ಆರೋಪಿಗಳು ಬಸ್‍ನ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದರು. ಈ ಅಕ್ಕ-ತಂಗಿಯರ ಬೇಟೆಗೆ ಆರ್ ಎಂ ಸಿ ಯಾರ್ಡ್ ಪೊಲೀಸ್ ತಂಡ ತಿಂಗಳು ಕಟ್ಟಲೆ ಕಾದು ಕುಳಿತ್ತಿತ್ತು. ಪೊಲೀಸರ ಸತತ ಪ್ರಯತ್ನಕ್ಕೆ ಕೊನೆಗೆ ಆರೋಪಿಗಳಾದ ಉಷಾವಾಣಿ ಹಾಗೂ ಮೀನಾಕ್ಷಿ ಸಿಕ್ಕಿಬಿದ್ದಿದ್ದಾರೆ.

    ಸತತ ಎರಡು ತಿಂಗಳುಗಳ ಕಾಲ ಆರ್ ಎಂ ಸಿ ಯಾರ್ಡ್ ಪೊಲೀಸರು ಬಸ್ ನಿಲ್ದಾಣದಲ್ಲೇ ಠಿಕಾಣಿ ಹೂಡಿ ಮಫ್ತಿಯಲ್ಲೇ ನಿಂತು ಆರೋಪಿಗಳ ಭೇಟೆಯಾಡಿದ್ದಾರೆ. ಪೊಲೀಸರು ಕಳ್ಳಿಯರನ್ನ ವಾಚ್ ಮಾಡಿ ಹಿಡಿದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

  • ಪರ್ಸ್ ನಲ್ಲಿ ಹಣ, ಮೊಬೈಲ್ ತಗೊಂಡು ಹೊರಗಡೆ ಹೋಗೋವಾಗ ಹುಷಾರ್!

    ಪರ್ಸ್ ನಲ್ಲಿ ಹಣ, ಮೊಬೈಲ್ ತಗೊಂಡು ಹೊರಗಡೆ ಹೋಗೋವಾಗ ಹುಷಾರ್!

    ಬೆಂಗಳೂರು: ಮನೆ ಕೆಲಸಕ್ಕೆ ಬಂದಿದ್ದೇವು ಎಂದು ಹೇಳಿ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳಿಯರನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ.

    ದಿಲ್ ಶಾದ್ ಮತ್ತು ಪ್ಯಾರೇಜಾನ್ ಬಂಧಿತ ಆರೋಪಿಗಳು. ಸೋಮವಾರ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನಕ್ಕೆ ಮುಂದಾದಾಗ ಇಬ್ಬರು ಕಳ್ಳಿಯರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

    ಈ ಹಿಂದೆ ಡಿಜೆ ಹಳ್ಳಿ ಪೊಲೀಸರಿಂದ ಬಂಧನಕ್ಕೊಳಗಾಗಿ ಮೂರು ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದರು. ಜೈಲಿನಿಂದ ಬಂದ ಬಳಿಕ ಮತ್ತೆ ತಮ್ಮ ಕೈಚಳಕ ಮುಂದುವರಿಸಿದ್ದರು. ಏರಿಯಾದಲ್ಲಿ ಅಕ್ಕ-ತಂಗಿ ಎಂದು ಹೇಳಿಕೊಂಡು ಮನೆ ಕೆಲಸ ಮಾಡುತ್ತೀವಿ ಎಂದು ಕಳ್ಳತನ ಮಾಡುತ್ತಾರೆ.

    ಅಲ್ಲದೇ ಇವರಿಬ್ಬರು ಮದುವೆ ಕಾರ್ಯಕ್ರಮಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಪರ್ಸ್ ಎಗರಿಸೋಕೆ ನಿಂತಿರುತ್ತಾರೆ. ಜನರ ಗಮನವನ್ನು ಬೇರೆಡೆ ಸೆಳೆದು, ಸ್ವಲ್ಪ ಯಾಮಾರುವಷ್ಟರಲ್ಲಿ ಪರ್ಸ್, ಮೊಬೈಲ್ ಕಳ್ಳತನ ಮಾಡುತ್ತಾರೆ.

  • ವೈದ್ಯರಂತೆ ವೇಷ ಧರಿಸಿ ಮಕ್ಕಳನ್ನ ಕದಿಯಲು ಬಂದಿದ್ದ ಖತರ್ನಾಕ್ ಕಳ್ಳಿ ಸಿಕ್ಕಿಬಿದ್ಳು

    ವೈದ್ಯರಂತೆ ವೇಷ ಧರಿಸಿ ಮಕ್ಕಳನ್ನ ಕದಿಯಲು ಬಂದಿದ್ದ ಖತರ್ನಾಕ್ ಕಳ್ಳಿ ಸಿಕ್ಕಿಬಿದ್ಳು

    ಕಲಬುರಗಿ: ವೈದ್ಯರಂತೆ ವೇಷ ಹಾಕಿಕೊಂಡು ಕಳ್ಳಿಯೊಬ್ಬಳು ಮಕ್ಕಳನ್ನ ಕದಿಯಲು ಬಂದಿದ್ದ ಘಟನೆ ಕಲಬುರಗಿಯ ಎಚ್‍ಕೆಇ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಯಲ್ಲಿ ನಡೆದಿದೆ.

     

    ಯುವತಿ ಮಾರುವೇಷ ಧರಿಸಿ 5 ದಿನಗಳಿಂದ ಆಸ್ಪತ್ರೆಯಲ್ಲಿ ಸುತ್ತಾಡುತ್ತಿದ್ದಳು. ವೈದ್ಯರಂತೆ ಕೋಟ್ ಧರಿಸಿ ಮಕ್ಕಳ ಕಳ್ಳತನಕ್ಕೆ ಬಂದಿದ್ದಳು. ಸದ್ಯ ಆಸ್ಪತ್ರೆಯ ಸಿಬ್ಬಂದಿ ಚಾಲಕಿ ಕಳ್ಳಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಎಂಬಿ ನಗರ ಠಾಣೆ ಪೊಲೀಸರು ಯುವತಿಯನ್ನ ವಶಕ್ಕೆ ಪಡೆದಿದ್ದಾರೆ.

  • 6 ಜೊತೆ ಬೆಳ್ಳಿ ಕಾಲುಂಗುರ ಕದ್ರು ಕಳ್ಳಿಯರು

    6 ಜೊತೆ ಬೆಳ್ಳಿ ಕಾಲುಂಗುರ ಕದ್ರು ಕಳ್ಳಿಯರು

    ಚಿಕ್ಕಬಳ್ಳಾಪುರ: ನಗರದ ಚಿನ್ನದಂಗಡಿಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ನಿನ್ನೆಯಷ್ಟೇ ಚೆಮ್ಮನೂರ್ ಜ್ಯುವೆಲ್ಲರ್ಸ್ ದರೋಡೆ ಮಾಡಿದ್ರೆ ರವಿವಾರ ನಗರದ ತಿರುಮಲ ಜ್ಯುವೆಲ್ಲರ್ಸ್‍ನಲ್ಲಿ ಕಳ್ಳಿಯರು ತಮ್ಮ ಕೈಚಳಕ ತೋರಿದ್ದಾರೆ.

    ಹೌದು ಚಿಕ್ಕಬಳ್ಳಾಪುರ ನಗರದ ಗಂಗಮ್ಮ ಗುಡಿ ಬಜಾರ್‍ನಲ್ಲಿರುವ ತಿರುಮಲ ಜ್ಯುವೆಲ್ಲರ್ಸ್‍ಗೆ ಬಂದ ನಾಲ್ವರು ಕಳ್ಳಿಯರು 6 ಜೊತೆ ಬೆಳ್ಳಿ ಕಾಲುಂಗರಗಳನ್ನ ಕಳ್ಳತನ ಮಾಡಿದ್ದಾರೆ.

    ನಾಲ್ವರು ಮಹಿಳೆಯರಲ್ಲಿ ಇಬ್ಬರು ಮಹಿಳೆಯರು ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ಉಳಿದ ಇಬ್ಬರು ಮಹಿಳೆಯರು ಕುಳಿತುಕೊಂಡಿದ್ದಾರೆ. ಈ ವೇಳೆ ಮಾಲೀಕನ ಗಮನ ಬೇರೆಡೆ ಸೆಳೆದಿದ್ದರಿಂದ ಇಬ್ಬರು ವ್ಯಾಪಾರದ ತರ ಮಾತು ಆಡುತ್ತಲೇ ಬೆಳ್ಳಿ ಕಾಲು ಚೈನುಗಳನ್ನ ಕೆಳಗೆ ಬಿಸಾಡಿದ್ದು, ಅವುಗಳನ್ನು ಅಂಗಡಿಯಲ್ಲಿ ಕೂತಿದ್ದ ಇಬ್ಬರು ಮಹಿಳೆಯರು ಎತ್ತಿಕೊಂಡು ಕಳವು ಮಾಡಿದ್ದಾರೆ.

    ಇನ್ನೂ ಕಳವು ಮಾಡಿದ ಬೆಳ್ಳಿ ಕಾಲು ಚೈನುಗಳನ್ನ ಎತ್ತಕೊಂಡು ಇಬ್ಬರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆದ್ರೆ ಕಾಲು ಚೈನುಗಳು ಕಡಿಮೆ ಇದ್ದ ಕಾರಣ ಅನುಮಾಮಗೊಂಡ ಮಾಲೀಕ ಅಂಗಡಿಯಲ್ಲೇ ಉಳಿದ ಇಬ್ಬರನ್ನ ಪ್ರಶ್ನೆ ಮಾಡಿದಾಗ ಕಳ್ಳತನ ಮಾಡಿದ ಪ್ರಕರಣ ಬಯಲಾಗಿದೆ.

    ಹೀಗಾಗಿ ಇಬ್ಬರು ಕಳ್ಳಿಯರನ್ನ ಚಿಕ್ಕಬಳ್ಳಾಪುರ ನಗರ ಪೊಲೀಸರ ವಶಕ್ಕೆ ನೀಡಿದ್ದಾರೆ. ಇನ್ನಿಬ್ಬರನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ.

    ಅಂದ ಹಾಗೆ ಪೊಲೀಸರ ಬಳಿ ತಾವು ಗೌನಿಪಲ್ಲಿ ಮೂಲದವರು ತಮ್ಮ ಹೆಸರು ಶ್ವೇತಾ ಹಾಗೂ ಲಕ್ಷ್ಮೀದೇವಮ್ಮ ಅಂತ ತಿಳಿಸಿದ್ದು, ಪರಾರಿಯಾದ ಮತ್ತೊಬ್ಬರು ನಿರ್ಮಲಮ್ಮ ಹಾಗೂ ಶಾರದ ಅಂತ ತಿಳಿಸಿದ್ದಾರೆ. ಇನ್ನೂ ಈ ಕಳ್ಳಿಯರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    https://youtu.be/WM-UpC-IpOE

  • ಮೋದಿ ಸ್ಕೀಮ್‍ನಡಿ ಮನೆ ಮಾಡಿಕೊಡ್ತೀನೆಂದು ಹೇಳಿ ಲಕ್ಷಾಂತರ ರೂ. ಲಪಟಾಯಿಸಿದ ಕಿಲಾಡಿ ಲೇಡಿ

    ಮೋದಿ ಸ್ಕೀಮ್‍ನಡಿ ಮನೆ ಮಾಡಿಕೊಡ್ತೀನೆಂದು ಹೇಳಿ ಲಕ್ಷಾಂತರ ರೂ. ಲಪಟಾಯಿಸಿದ ಕಿಲಾಡಿ ಲೇಡಿ

    ಮಂಗಳೂರು: ಪ್ರಧಾನಿ ಮೋದಿ ಅವರ ಸ್ಕೀಮ್‍ನಡಿ ಮನೆ ಮಾಡಿಕೊಡ್ತೀನಿ ಎಂದು ಮಂಗಳೂರಿನ ಮಹಿಳೆಯೊಬ್ಬಳು ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿದ್ದಾಳೆ.

    ಗೀತಾ ಶೆಣೈ ಎಂಬಾಕೆ ಪ್ರತಿಯೊಬ್ಬರಿಂದ 30 ಸಾವಿರ ರೂ. ಪಡೆದುಕೊಂಡು ಸುಮಾರು ಐನೂರಕ್ಕೂ ಹೆಚ್ಚು ಜನರಿಗೆ ಪಂಗನಾಮ ಹಾಕಿದ್ದಾಳೆ. ಈ ವಂಚಕಿಯ ಮೋಸದಾಟಕ್ಕೆ ಗಂಡನೂ ಸಹ ಸಾಥ್ ನೀಡಿದ್ದಾನೆ.

    ಸದ್ಯ ಮೋಸ ಹೋದವರೆಲ್ಲರೂ ಈಕೆಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರೂ ಈಕೆ ಯಾವ ಅಂಜಿಕೆಯೂ ಇಲ್ಲದೆ ಮಾಧ್ಯಮದವರ ಮೇಲೆ ಹಲ್ಲೆಗೆ ಮುಂದಾಗಿದ್ದಳು. ಪೊಲೀಸರ ಎದುರೇ ಹಣ ಕೊಡಲ್ಲ ಅಂತಾ ಅವಾಜ್ ಹಾಕಿದ್ದಳು.

    ಸದ್ಯ ಬಂದರು ಠಾಣೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    https://youtu.be/w0xwzjDw8pc

     

  • ಉಡುಪಿ ಆಸ್ಪತ್ರೆ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಕದ್ದು ಸಿಕ್ಕಿ ಬಿದ್ದ ಕಳ್ಳಿ!

    ಉಡುಪಿ ಆಸ್ಪತ್ರೆ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಕದ್ದು ಸಿಕ್ಕಿ ಬಿದ್ದ ಕಳ್ಳಿ!

    ಉಡುಪಿ: ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕಿಯೊಬ್ಬಳನ್ನು ಮಹಿಳೆಯೋರ್ವಳು ಅಪಹರಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

    ಮೂಲತಃ ಕುಂದಾಪುರದ ಉಪ್ಪುಂದ ನಿವಾಸಿ ಗೀತಾ(42) ಬಾಲಕಿಯನ್ನು ಕದ್ದು ಸಿಕ್ಕಿಬಿದ್ದ ಕಳ್ಳಿ. ಪೊಲೀಸರು ಈಗ ಈಕೆಯನ್ನು ಬಂಧಿಸಿದ್ದಾರೆ.

    ಉಡುಪಿ ನಗರದ ಕಿನ್ನಿಮೂಲ್ಕಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾಳೆ. ಈಕೆಯ ಗಂಡನ ಚಿಕಿತ್ಸೆಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕಳೆದ 20 ನಗಳಿಂದ ಇದ್ದು ಗಂಡ ಡಿಸ್ಜಾರ್ಜ್ ಆದರೂ ವಾರ್ಡ್ ನಲ್ಲಿ ಅಡ್ಡಾಡುತ್ತಿದ್ದಳು ಎನ್ನಲಾಗಿದೆ.

    ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
    ಕಳ್ಳಿ ಗೀತಾ ಆಸ್ಪತ್ರೆ ವಾರ್ಡ್ ನಲ್ಲಿ ದಾಖಲಾಗಿದ್ದ ಹುನಗುಂದ ತಾಲೂಕಿನ ಕೂಲಿಕಾರ್ಮಿಕ ಮುತ್ತಪ್ಪ ಮತ್ತವರ ಪತ್ನಿ ಆಸ್ಮಾ ಜೊತೆಗಿದ್ದ ಸಂದರ್ಭ 6 ವರ್ಷದ ಬಾಲಕಿ ಹೊರಗಡೆ ಆಟವಾಡುತ್ತಿದ್ದಳು. ಇದನ್ನು ಗಮನಿಸಿದ ಆರೋಪಿ ಗೀತಾ ಆಕೆಗೆ ಚಾಕ್ಲೇಟ್ ತೋರಿಸಿ ಕರೆದು ಬಾಲಕಿಯನ್ನು ಕಿನ್ನಿಮೂಲ್ಕಿಯ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಮನೆಯಲ್ಲಿ ಬಾಲಕಿ ಅತ್ತಾಗ ಕೆನ್ನೆಗೆ ಹೊಡೆದಿದ್ದಾಳೆ. ಆಕೆಯ ಅಳು ಹೆಚ್ಚಾದಾಗ ಸ್ಥಳೀಯರಿಗೆ ಅನುಮಾನ ಬರುತ್ತದೆ ಎಂಬ ಭಯದಲ್ಲಿ ಸಂಜೆ ಮತ್ತೆ ಬಾಲಕಿಯನ್ನು ಆಸ್ಪತ್ರೆಯ ಬಳಿ ಬಿಡಲು ಬಂದಿದ್ದಾಳೆ.

    ಈ ವೇಳೆ ಇತ್ತ ಬಾಲಕಿ ನಾಪತ್ತೆಯಾಗಿದೆಯೆಂದು ಆಕೆಯ ಹೆತ್ತವರು ಆಸ್ಪತ್ರೆ ಸಿಬ್ಬಂದಿಗಳು ಸಿಸಿ ಕ್ಯಾಮರಾ ಚೆಕ್ ಮಾಡುತ್ತಿದ್ದರು. ಇದೇ ಸಂದರ್ಭ ಆರೋಪಿ ಗೀತಾ ಬಾಲಕಿಯನ್ನು ಬಿಡಲು ಆಸ್ಪತ್ರೆಗೆ ಬಂದಿದ್ದು, ಬಂದ ಕಳ್ಳಿಯನ್ನು ಹಿಡಿದು ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.