Tag: ಕಳ್ಳಸಾಗಾಣೆ

  • ವಿಚಿತ್ರ ವಿಗ್ ಮೂಲಕವೇ ಸಿಕ್ಕಿಬಿದ್ದ ಕಳ್ಳ

    ವಿಚಿತ್ರ ವಿಗ್ ಮೂಲಕವೇ ಸಿಕ್ಕಿಬಿದ್ದ ಕಳ್ಳ

    ತಿರುವನಂತಪುರಂ: ಕಳ್ಳಸಾಗಾಣಿಕೆದಾರರು ವಿವಿಧ ರೀತಿಯಲ್ಲಿ ಚಿನ್ನ, ವಜ್ರ, ಡ್ರಗ್ ಸೇರಿದಂತೆ ಮುಂತಾದವುಗಳನ್ನು ಕಳವು ಮಾಡುತ್ತಾರೆ. ಆದರೆ ಕೇರಳದ ಮೂಲದ ವ್ಯಕ್ತಿಯೊಬ್ಬ ವಿಚಿತ್ರವಾಗಿ ತಲೆ ಕೂದನ್ನು ಕತ್ತರಿಸಿದಾಗೆ ಕಾಣುವಂತೆ ನೆತ್ತಿಯ ಮೇಲೆ ವಿಗ್ ಧರಿಸಿಕೊಂಡು ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ್ದು, ಕೊನೆಗೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.

    ಆರೋಪಿಯನ್ನು ಮಲಪ್ಪುರಂನ ನೌಶಾದ್ ಎಂದು ಗುರುತಿಸಲಾಗಿದೆ. ಆರೋಪಿ ನೌಶಾದ್ ಯುಎಇಯ ಶಾರ್ಜಾದಿಂದ ವಿಮಾನ ನಿಲ್ದಾಣಕ್ಕೆ ಬಂದಿದ್ದನು. ಈತ ನೆತ್ತಿಯ ಮಧ್ಯದ ಸುತ್ತ ಕೂದಲನ್ನು ಬೋಳಿಸಿಕೊಂಡ ರೀತಿ, ತಲೆಯ ಮಧ್ಯ ಭಾಗದಲ್ಲಿ ವಿಗ್ ಅಡಿಯಲ್ಲಿ 1.13 ಕೆಜಿ ಚಿನ್ನವನ್ನು ಸಾಗಾಟ ಮಾಡಲು ಯತ್ನಿಸಿದ್ದನು.

    ಕೊಚ್ಚಿನ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ (ಸಿಐಎಎಲ್)ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಆತನ ವಿಗ್ ನೋಡಿ ಅನುಮಾನಗೊಂಡು ಪರಿಶೀಲಿಸಿದ್ದಾರೆ. ನಂತರ ಆತನನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡಿದ್ದಾರೆ. ಆಗ ಆತನ ತಲೆ ಮೇಲಿದ್ದ ವಿಗ್ ಕೆಳಗೆ 1.13 ಕೆಜಿ ಚಿನ್ನ ಪತ್ತೆಯಾಗಿದೆ. ಚಿನ್ನವು ಪೇಸ್ಟ್ ರೀತಿಯಲ್ಲಿ ಪತ್ತೆಯಾಗಿದೆ. ತಕ್ಷಣ ಆತನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

    ಈ ಹಿಂದೆ ಕಳ್ಳಸಾಗಾಣಿಕೆದಾರರು ತಮ್ಮ ದೇಹದ ವಿವಿಧ ಭಾಗಗಳಲ್ಲಿ ಕಳ್ಳಸಾಗಾಣೆ ಮಾಡುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಈ ರೀತಿ ವಿಗ್‍ನಲ್ಲಿ ಚಿನ್ನವನ್ನು ಇಟ್ಟುಕೊಂಡು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಿ, ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

  • ಸಿಬಿಐ ವಶಪಡಿಸಿದ್ದ ಕಬ್ಬಿಣದ ಅದಿರನ್ನೇ ಕದ್ದ ಚೋರ – ಏಳು ಲಾರಿಗಳಲ್ಲಿ ಲೂಟಿ

    ಸಿಬಿಐ ವಶಪಡಿಸಿದ್ದ ಕಬ್ಬಿಣದ ಅದಿರನ್ನೇ ಕದ್ದ ಚೋರ – ಏಳು ಲಾರಿಗಳಲ್ಲಿ ಲೂಟಿ

    ಬಳ್ಳಾರಿ: ಸಿಬಿಐ ಅಧಿಕಾರಿಗಳು ಜಪ್ತಿ ಮಾಡಿದ್ದ ಅದಿರನ್ನ ಅಕ್ರಮವಾಗಿ ಕಳ್ಳಸಾಗಾಣೆ ಮಾಡುತ್ತಿದ್ದ ಪ್ರಕರಣವೊಂದು ಬಳ್ಳಾರಿಯಲ್ಲಿ ಬಯಲಿದೆ ಬಂದಿದೆ.

    ಈ ಹಿಂದೆ ಅಕ್ರಮ ಗಣಿಗಾರಿಕೆ ಮಾಡಿದ್ದ ಅದಿರನ್ನ ಸಿಬಿಐ ಅಧಿಕಾರಿಗಳು ಜಪ್ತಿ ಮಾಡಿ ಸೀಜ್ ಮಾಡಿದ್ದರು. ಆದ್ರೆ ಹೊಸಪೇಟೆ ಮೂಲದ ಲುಂಗಿನಾಯ್ಕ್ ಹಾಗೂ ಕೆಲ ಖದೀಮರು ಸಿಬಿಐ ಜಪ್ತಿ ಮಾಡಿದ್ದ ಅದಿರನ್ನ ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದರು.

    ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಕಳೆದ ರಾತ್ರಿ ದಾಳಿ ನಡೆಸಿದ ಹೊಸಪೇಟೆ ಗ್ರಾಮಾಂತರ ಠಾಣೆ ಪೊಲೀಸರ ದಾಳಿ ನಡೆಸಿ ಏಳು ಲಾರಿಗಳಲ್ಲಿ ಕಳ್ಳ ಸಾಗಾಣೆ ಮಾಡುತ್ತಿದ್ದ ಅದಿರು ಹಾಗೂ ಲಾರಿಗಳನ್ನ ಜಪ್ತಿ ಮಾಡಿ ವಶಪಡಿಸಿಕೊಂಡಿದ್ದಾರೆ. ಅದಿರನ್ನು ಸತತವಾಗಿ ಕದ್ದು ಮಾರಾಟ ಮಾಡುತ್ತಿದ್ದ ಖದೀಮರು, ಆಂಧ್ರ ಹಾಗೂ ತೆಲಂಗಾಣ ಪಾಸಿಂಗ್ ನಂಬರ್ ಹೊಂದಿರುವ ಲಾರಿಗಳಲ್ಲಿ ಅದಿರನ್ನ ಸಾಗಾಟ ಮಾಡುತ್ತಿದ್ದರು. ಹೀಗಾಗಿ ಏಳು ಲಾರಿಗಳ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಹೊಸಪೇಟೆ ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೂ ಬಾಕ್ಸ್ ಒಳಗಡೆ ಪತ್ತೆಯಾದ್ವು ಮೂರು ಉಡಗಳು!

    ಶೂ ಬಾಕ್ಸ್ ಒಳಗಡೆ ಪತ್ತೆಯಾದ್ವು ಮೂರು ಉಡಗಳು!

    ಬೆಂಗಳೂರು: ಕೊರಿಯರ್ ಮೂಲಕ ತಮಿಳುನಾಡಿಗೆ ಅಕ್ರಮವಾಗಿ ಉಡ ಕಳುಹಿಸುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಬೆಂಗಳೂರಿನ ಮೈಸೂರ್ ರಸ್ತೆಯ ಮಹಾಲಕ್ಷ್ಮೀ ಕೊರಿಯರ್ ಆಫೀಸ್ ಬಳಿ ಇಂದು ಸಂಜೆ ನಾಲ್ಕು ಗಂಟೆಗೆ ಅನಾಮಿಕ ವ್ಯಕ್ತಿಯೊಬ್ಬ ಶೂ ಬಾಕ್ಸ್ ನೀಡಿ ತಮಿಳುನಾಡಿನ ಬಸ್ ಗೆ ಪಾರ್ಸಲ್ ಕಳಿಸುವಂತೆ ಹೇಳಿದ್ದ.

    ಪಾರ್ಸೆಲ್ ಒಳಗಡೆ ಉಡವನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಸಿಐಡಿ ಅರಣ್ಯ ಘಟಕದ ಅಧಿಕಾರಿಗಳಾದ ಪಿ.ಐ ಪುರುಷೋತ್ತಮ್, ಎಂ.ಎಸ್ ರಾಮಮೂರ್ತಿ, ಮುಂಕುಂದ ಅವರು ಕೊರಿಯರ್ ಆಫೀಸ್ ಮೇಲೆ ದಾಳಿ ಮಾಡಿ ಬಾಕ್ಸ್ನಲ್ಲಿದ್ದ ಮೂರು ಉಡಾಗಳು ಪತ್ತೆಮಾಡಿ ವಶಕ್ಕೆ ಪಡೆದಿದ್ದಾರೆ. ನಂತರ ಕೊರಿಯರ್ ಬಾಯ್ ವಿಚಾರಣೆಗೆ ಒಳಪಡಿಸಿದಾಗ ಯಾರೋ ಅನಾಮಿಕ ವ್ಯಕ್ತಿ ನೀಡಿರುವುದಾಗಿ ತಿಳಿಸಿದ್ದಾನೆ.

    ಮೂರು ಉಡಾಗಳು ರಾಜಸ್ಥಾನ ಜಾತಿಗೆ ಸೇರಿದ ಉಡಾಗಳು ಎಂದು ಪತ್ತೆ ಹಚ್ಚಿದ್ದಾರೆ. ಘಟನೆಯ ಕುರಿತು ಬ್ಯಾಟರಾಯನಪುರ ಪೊಲೀಸ್ ಠಾಣೆ ದೂರು ದಾಖಲಿಸಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.