Tag: ಕಳ್ಳಸಾಗಾಣಿಕೆ

  • ಪಾಕಿಸ್ತಾನದಿಂದ ಭಾರತಕ್ಕೆ ಡ್ರಗ್ಸ್ ಸಾಗಾಟ – ಎರಡು ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

    ಪಾಕಿಸ್ತಾನದಿಂದ ಭಾರತಕ್ಕೆ ಡ್ರಗ್ಸ್ ಸಾಗಾಟ – ಎರಡು ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

    ಚಂಡೀಗಢ: ಡ್ರೋನ್ ಮೂಲಕ ಕಳ್ಳಸಾಗಾಣಿಕೆ (Smuggling) ಮಾಡುತ್ತಿದ್ದ ಪಾಕಿಸ್ತಾನದ (Pakistan) ಎರಡು ಡ್ರೋನ್‌ಗಳನ್ನು (Drone) ಪಂಜಾಬ್‌ನ (Punjab) ಭಾರತ-ಪಾಕಿಸ್ತಾನ ಗಡಿಯಲ್ಲಿ ಗಡಿ ಭದ್ರತಾ ಪಡೆಯು ಹೊಡೆದುರುಳಿಸಿದೆ.

    ಮೇ 19ರಂದು ರಾತ್ರಿ 8:55ರ ಸುಮಾರಿಗೆ ಜಿಲ್ಲೆಯ ಅಮೃತಸರದ ಉದಾರ್ ಧರಿವಾಲ್ ಗ್ರಾಮದ ಬಳಿಯಿರುವ ಪ್ರದೇಶವೊಂದರಲ್ಲಿ ಡ್ರೋನ್ ಶಬ್ದ ಕೇಳಿಬರುತ್ತಿತ್ತು. ಅಲ್ಲಿದ್ದ ಗಡಿ ಭದ್ರತಾ ಪಡೆ (BSF) ತಕ್ಷಣವೇ ಗುಂಡುಗಳನ್ನು ಹಾರಿಸಿ ಡ್ರೋನ್ ಅನ್ನು ಹೊಡೆದುರುಳಿಸಿದರು. ಬಳಿಕ ಶೋಧ ನಡೆಸಿದ ಅವರು, ಮುರಿದ ಸ್ಥಿತಿಯಲ್ಲಿ ಪತ್ತೆಯಾದ ಕಪ್ಪು ಬಣ್ಣದ ಡ್ರೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿವಿ ಕ್ಯಾಂಪಸ್‌ನಲ್ಲೇ ಸ್ನೇಹಿತೆಯನ್ನು ಶೂಟ್ ಮಾಡಿ ಕೊಂದ ವಿದ್ಯಾರ್ಥಿ – ಬಳಿಕ ತಾನೂ ಆತ್ಮಹತ್ಯೆ

    ವಶಪಡಿಸಿಕೊಂಡ ಡ್ರೋನ್‌ನಲ್ಲಿ ಕಬ್ಬಿಣದ ಉಂಗುರದ ಜೊತೆಗೆ ಎರಡು ಪ್ಯಾಕೆಟ್ ಮಾದಕವಸ್ತುಗಳು (Drugs) ಪತ್ತೆಯಾಗಿವೆ. ಪತ್ತೆಯಾದ ಮಾದಕವಸ್ತುಗಳು ಸುಮಾರು 2.6 ಕೆಜಿ ತೂಕವನ್ನು ಹೊಂದಿತ್ತು. ವಶಪಡಿಸಿಕೊಂಡ ಮತ್ತೊಂದು ಡ್ರೋನ್‌ನಲ್ಲಿಯೂ ಸಹ ಮಾದಕ ವಸ್ತುಗಳಿರುವ ಬ್ಯಾಗ್ ಪತ್ತೆಯಾಗಿದ್ದು, ಭದ್ರತಾ ಪಡೆ ಜಪ್ತಿ ಮಾಡಿಕೊಂಡಿದೆ. ಇದನ್ನೂ ಓದಿ: ಮಗನನ್ನು ಕೊಲೆಗೈದು ಅಪಘಾತವೆಂದು ಬಿಂಬಿಸಿದ ಪೋಷಕರು ಅರೆಸ್ಟ್

    ಭದ್ರತಾ ಪಡೆ ಹೊಡೆದುರುಳಿಸಿದ ಎರಡನೇ ಡ್ರೋನ್ ಇದಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಬಿಎಸ್‌ಎಫ್ ಹೇಳಿದೆ. ಇದನ್ನೂ ಓದಿ: ಮಸ್ಕತ್‌ನಿಂದ ಭಾರತಕ್ಕೆ ಅಕ್ರಮ ಚಿನ್ನ ಸಾಗಾಟ – 2.28 ಕೋಟಿ ರೂ. ಮೌಲ್ಯದ ಚಿನ್ನದ ಧೂಳು ವಶ

  • ಸುಟ್ಟ ಸ್ಥಿತಿಯಲ್ಲಿ ಇಬ್ಬರ ಮೃತ ದೇಹ ಪತ್ತೆ – ಗೋ ರಕ್ಷಕರ ವಿರುದ್ಧ ಪ್ರಕರಣ ದಾಖಲು

    ಸುಟ್ಟ ಸ್ಥಿತಿಯಲ್ಲಿ ಇಬ್ಬರ ಮೃತ ದೇಹ ಪತ್ತೆ – ಗೋ ರಕ್ಷಕರ ವಿರುದ್ಧ ಪ್ರಕರಣ ದಾಖಲು

    ಜೈಪುರ್: ಕಾರಿನಲ್ಲಿ ಇಬ್ಬರ ಮೃತ ದೇಹ ಸುಟ್ಟ ಸ್ಥಿತಿಯಲ್ಲಿ (Burnt Bodies) ಪತ್ತೆಯಾದ ಒಂದು ದಿನದ ನಂತರ ಐವರು ಗೋರಕ್ಷಕರ ಮೇಲೆ ಅಪಹರಣ ಪ್ರಕರಣ ದಾಖಲಾದ ಘಟನೆ ರಾಜಸ್ಥಾನದ (Rajasthan) ಭರತ್‍ಪುರ್ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಭರತ್‍ಪುರನ ನಾಸಿರ್ (25) ಹಾಗೂ ಜುನೈದ್ (35) ಎಂಬ ಇಬ್ಬರು ಬುಧವಾರದಿಂದ ನಾಪತ್ತೆಯಾಗಿದ್ದರು. ಇಬ್ಬರನ್ನು ಅಪಹರಿಸಲಾಗಿದೆ ಎಂದು ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಕಿವಿಯಿಂದ ಹೂ ತೆಗೆದ ಯಡಿಯೂರಪ್ಪ

    ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ಬೊಲೆರೋ (Bolero) ವಾಹನದಲ್ಲಿ ಸುಟ್ಟ ಸ್ಥಿತಿಯಲ್ಲಿ ಇಬ್ಬರ ಮೃತ ದೇಹ ಪತ್ತೆಯಾಗಿತ್ತು. ಮೃತ ದೇಹಗಳು ನಾಸಿರ್ ಮತ್ತು ಜುನೈದ್ ಅವರದ್ದೇ ಎಂಬುದನ್ನು ಖಚಿತ ಪಡಿಸಲು ಕುಟುಂಬಸ್ಥರನ್ನು ಸ್ಥಳಕ್ಕೆ ಕರೆದೊಯ್ಯಲಾಗುವುದು. ಮರಣೋತ್ತರ ಪರೀಕ್ಷೆ ಹಾಗೂ ಡಿಎನ್‍ಎ ವರದಿ ಆಧರಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರತ್‍ಪುರದ ಇನ್ಸ್‍ಪೆಕ್ಟರ್ ಜನರಲ್ ಗೌರವ್ ಶ್ರೀವಾಸ್ತವ ತಿಳಿಸಿದ್ದಾರೆ.

    ಮೃತ ದೇಹಗಳು ಪತ್ತೆಯಾದ ಕಾರನ್ನು ಕುಟುಂಬಸ್ಥರು ಪತ್ತೆಹಚ್ಚಿದ್ದಾರೆ. ನಾಸಿರ್ ಹಾಗೂ ಜುನೈದ್ ಅವರ ಪರಿಚಿತರ ಕಾರು ಎಂದು ಅವರು ಹೇಳಿದ್ದಾರೆ.

    ಜುನೈದ್ ವಿರುದ್ಧ ಗೋವು ಕಳ್ಳಸಾಗಾಣಿಕೆಯ ಐದು ಪ್ರಕರಣಗಳಿದ್ದವು. ಆದರೆ ನಾಸಿರ್ ಯಾವುದೇ ಕ್ರಿಮಿನಲ್ ಹಿನ್ನಲೆ ಹೊಂದಿರಲಿಲ್ಲ. ಈ ಪ್ರಕರಣದಲ್ಲಿ ಗೋ ರಕ್ಷಕರ ಪಾತ್ರವಿರುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಶ್ರೀವಾಸ್ತವ ತಿಳಿಸಿದ್ದಾರೆ.

    ಮೋನು ಮನೆಸರ್, ಲೋಕೇಶ್ ಸಿಂಘಿಯಾ, ರಿಂಕು ಸೈನಿ, ಅನಿಲ್ ಮತ್ತು ಶ್ರೀಕಾಂತ್ ಅಪಹರಿಸಿದ್ದಾರೆ. ಆರೋಪಿಗಳೆಲ್ಲ ಬಲಪಂಥೀಯ ಬಜರಂಗದಳದ ಕಾರ್ಯಕರ್ತರು ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಗುಂಡಿಟ್ಟು ಕೊಲ್ತೀನಿ, ಕಸ ಗುಡಿಸ್ತೀನಿ ಎಂದವನು ಎಲ್ಲಿ ಹೋದ?- ಅಶ್ವಥ್ ವಿರುದ್ಧ ಡಿಕೆಶಿ ವಾಗ್ದಾಳಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜಾಕೆಟ್, ಪ್ಯಾಂಟ್, ತೊಡೆಸಂದಿನಲ್ಲಿ ಹಲ್ಲಿ, ಹಾವು ಬಚ್ಚಿಟ್ಟು ಸಾಗಿಸುತ್ತಿದ್ದವ ಅರೆಸ್ಟ್

    ಜಾಕೆಟ್, ಪ್ಯಾಂಟ್, ತೊಡೆಸಂದಿನಲ್ಲಿ ಹಲ್ಲಿ, ಹಾವು ಬಚ್ಚಿಟ್ಟು ಸಾಗಿಸುತ್ತಿದ್ದವ ಅರೆಸ್ಟ್

    ವಾಷಿಂಗ್ಟನ್: ಬಟ್ಟೆಯೊಳಗೆ 52 ಹಲ್ಲಿ ಮತ್ತು ಹಾವುಗಳನ್ನು ಅಡಗಿಸಿಟ್ಟುಕೊಂಡು ಗಡಿ ದಾಟುತ್ತಿದ್ದ ವ್ಯಕ್ತಿಯ ಬಂಧಿಸಲಾಗಿದೆ. ಈ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

    30 ವರ್ಷದ ವ್ಯಕ್ತಿ ಬಂಧಿತ ಆರೋಪಿಯಾಗಿದ್ದಾನೆ. ಈತ ಹಲ್ಲಿ, ಹಾವುಗಳನ್ನು ಬಚ್ಚಿಟ್ಟುಕೊಂಡು ಕ್ಯಾಲಿಫೋರ್ನಿಯಾದಲ್ಲಿ ಯುಎಸ್ ಗಡಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ದೇಶಾದ್ಯಂತ ಸುದ್ದಿಯಾಗಿದ್ದ ಹತ್ರಾಸ್‌, ಲಖೀಂಪುರದಲ್ಲಿ ಬಿಜೆಪಿಗೆ ಮುನ್ನಡೆ

    ನಡೆದಿದ್ದೇನು?: ಫೆ. 25 ರಂದು ಮೆಕ್ಸಿಕೋದಿಂದ ಸ್ಯಾನ್ ಯಸಿಡ್ರೊ ಗಡಿ ದಾಟಲು ಹೊರಟಿದ್ದನು. ಈ ವೇಳೆ ಹೆಚ್ಚುವರಿ ತಪಾಸಣೆ ಮಾಡಿದಾಗ ಹಲ್ಲಿ, ಹಾವುಗಳು ಕಂಡುಬಂದಿದೆ. ಒಂಬತ್ತು ಹಾವುಗಳು, 43 ಕೊಂಬಿನ ಹಲ್ಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಟ್ರಕ್‍ನ್ನು ಓಡಿಸಿಕೊಂಡು ಹೋಗುತ್ತಿದ್ದಾಗ ಬಲೆಗೆ ಬಿದ್ದಿದ್ದಾನೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್‌ ಹೇಳಿಕೆಯಲ್ಲಿ ತಿಳಿಸಿದೆ.

    ಸದ್ಯ ಆತನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಆತ ಜಾಕೆಟ್, ಪ್ಯಾಂಟ್ ಪಾಕೆಟ್‍ಗಳು ಮತ್ತು ತೊಡೆಸಂದು ಪ್ರದೇಶದಲ್ಲಿ ಸಣ್ಣ ಚೀಲಗಳಲ್ಲಿ 52 ಹಲ್ಲಿಗಳು ಮತ್ತು ಹಾವುಗಳನ್ನು ಅಡಗಿಸಿಟ್ಟುಕೊಂಡಿದ್ದನು. ವ್ಯಕ್ತಿಯ ಬಟ್ಟೆಯ ಒಳಗೆ ಹಾವು, ಹಲ್ಲಿಗಳನ್ನು ನೋಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ ಎಂದು ಯುಎಸ್ ಗಡಿ ಏಜೆಂಟರು ತಿಳಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ ಅಂಚೆ ಮತ ಎಣಿಕೆ: ಆರಂಭದಲ್ಲಿ ಬಿಜೆಪಿ ಮುನ್ನಡೆ

    ಕಳ್ಳಸಾಗಾಣಿಕೆ ಮಾಡಲು ಜನರು ವಿವಿಧ ರೀತಿಯ ತಂತ್ರಗಳನ್ನು ಉಪಯೋಗಿಸುತ್ತಾರೆ. ಆದರೆ ಬಾರ್ಡರ್‌ಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ. ಹೀಗಾಗಿ ಅಷ್ಟು ಸುಲಭವಾಗಿ ಪ್ರಾಣಿಗಳನ್ನಾಗಲೀ ಅಥವಾ ವ್ಯಕ್ತಿಗಳನ್ನಾಗಲೀ ಕಳ್ಳ ಸಾಗಾಣಿಕೆ ಮಾಡಲು ಸಾಧ್ಯವಿಲ್ಲ ಎಂದು ಸ್ಯಾನ್ ಡಿಯಾಗೋದಲ್ಲಿನ ಕ್ಷೇತ್ರ ಕಾರ್ಯಾಚರಣೆಗಳ ಕಸ್ಟಮ್ಸ್ ಮತ್ತು ಗಡಿ ಸಂರಕ್ಷಣಾ ನಿರ್ದೇಶಕ ಸಿಡ್ನಿ ಅಕಿ ತಿಳಿಸಿದ್ದಾರೆ.

  • ಅಕ್ರಮವಾಗಿ ಹಸುಗಳ ಸಾಗಣೆ- 5 ಸಾವು, 15 ಗೋವುಗಳ ರಕ್ಷಣೆ

    ಅಕ್ರಮವಾಗಿ ಹಸುಗಳ ಸಾಗಣೆ- 5 ಸಾವು, 15 ಗೋವುಗಳ ರಕ್ಷಣೆ

    – ಉಸಿರುಗಟ್ಟಿ ಲಾರಿಯಲ್ಲೇ 5 ಹಸು ಸಾವು

    ಕೋಲಾರ: ಕಳೆದ ರಾತ್ರಿ ಅಕ್ರಮವಾಗಿ ಗೋವುಗಳನ್ನ ಕಸಾಯಿಖಾನೆಗೆ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಲಾರಿಯಲ್ಲಿದ್ದ 20ಕ್ಕೂ ಹೆಚ್ಚು ಹಸುಗಳಲ್ಲಿ 5 ಗೋವುಗಳು ಸಾವನ್ನಪ್ಪಿವೆ.

    ಕೋಲಾರ ತಾಲೂಕಿನ ಚಾಕರಸನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳೆದ ರಾತ್ರಿ ಎರಡು ಲಾರಿಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಚಾಕಾರಸನಹಳ್ಳಿ ಮಾರ್ಗವಾಗಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಕೋಲಾರ ತಾಲೂಕಿನ ವಕ್ಕಲೇರಿ ವೆಂಕಟೇಶ್ ಗೌಡ ಎಂಬುವರ ಫಾರ್ಮ್ ಹೌಸ್ ಗೆ ಕರೆತರಲಾಗಿತ್ತು ಎನ್ನಲಾಗಿದೆ. ಹಸುಗಳಿಗೆ ಮೇವು ನೀಡದೆ ಕೊಲೆ ಮಾಡಿದ ಹಿನ್ನೆಲೆ ಮಾಲೀಕ ವೆಂಕಟೇಶ ಗೌಡ ಹಾಗೂ ಲಾರಿ ಚಾಲಕರಾದ ಇದಾಯಿತ್, ಕಂಸ ಪ್ರಸಾದ್ ವಿರುದ್ಧ ಪ್ರಕರಣ ದಾಖಲಾಗಿದೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ತಂದೆ ತಾಲಿಬಾನ್ ವಿರೋಧಿಯಾಗಿದ್ದಕ್ಕೆ ಮಗುವನ್ನು ಗಲ್ಲಿಗೇರಿಸಿದ್ರು

    ಈ ವೇಳೆ ಅನುಮಾನಗೊಂಡ ಗ್ರಾಮಸ್ಥರು ಲಾರಿಗಳನ್ನು ತಡೆದು ಪರಿಶೀಲನೆ ನಡೆಸಿದ ವೇಳೆ ಲಾರಿಗಳಲ್ಲಿ ಹಸುಗಳು ಇರುವುದು ಕಂಡುಬಂದಿದೆ. ಲಾರಿಗಳಲ್ಲಿದ್ದ 20ಕ್ಕೂ ಹೆಚ್ಚು ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ, ಚಾಕಾರಸನಹಳ್ಳಿ ಮಾರ್ಗವಾಗಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು. ಈ ಕುರಿತು ತಿಳಿಯುತ್ತಿದ್ದಂದೆ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.  ಇದನ್ನೂ ಓದಿ:  ಕೋವಿಡ್ 19 ಬೂಸ್ಟರ್ ಡೋಸ್ ಪಡೆದ ಜೋ ಬೈಡನ್

    ಲಾರಿಗಳಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಗೋವುಗಳಿದ್ದ ಹಿನ್ನೆಲೆ ಉಸಿರಾಡಲಾಗದೆ, ಕಳೆದೆರಡು ದಿನಗಳಿಂದ ಸರಿಯಾದ ಮೇವು ಇಲ್ಲದೆ ಸುಮಾರು ಐದು ಹಸುಗಳು ಲಾರಿಯಲ್ಲೇ ಸಾವನ್ನಪ್ಪಿವೆ. ಇದರಿಂದ ಲಾರಿಗಳಿಂದ ದುರ್ವಾಸನೆ ಬರುತ್ತಿದ್ದು, ಗೋವುಗಳ ಆಕ್ರಂದನ ಮುಗಿಲುಮುಟ್ಟಿದೆ. ಸದ್ಯ ಗ್ರಾಮಸ್ಥರ ಸಹಾಯದಿಂದ ವೇಮಗಲ್ ಪೊಲೀಸರು ಎರಡು ಲಾರಿಗಳನ್ನ ವಶಕ್ಕೆ ಪಡೆದು ಹಸುಗಳನ್ನು ರಕ್ಷಣೆ ಮಾಡಿದ್ದಾರೆ.

  • ಕೋರ್ಟ್ ಮೆಟ್ಟಿಲೇರಿದ್ವು ಶೂ ಬಾಕ್ಸಿನಲ್ಲಿದ್ದ 13 ಗಿಳಿಗಳು

    ಕೋರ್ಟ್ ಮೆಟ್ಟಿಲೇರಿದ್ವು ಶೂ ಬಾಕ್ಸಿನಲ್ಲಿದ್ದ 13 ಗಿಳಿಗಳು

    ನವದೆಹಲಿ: ದೆಹಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ವಿಚಿತ್ರ ಪ್ರಕರಣಕ್ಕೆ ಸಂಬಂಧ ಪಟ್ಟ 13 ಗಿಳಿಗಳನ್ನು ನ್ಯಾಯಾಲಯದ ಮುಂದೆ ಬುಧವಾರ ಹಾಜರು ಪಡಿಸಲಾಯಿತು.

    ಈ ಸುದ್ದಿ ಕೇಳಿದ ತಕ್ಷಣ ಪಾಪ ಆ ಮುಗ್ಧ ಪಕ್ಷಿಗಳು ಏನು ತಪ್ಪು ಮಾಡಿತ್ತು? ಅವುಗಳನ್ನು ನ್ಯಾಯಾಲಯಕ್ಕೆ ಯಾಕೆ ಕರೆದೊಯ್ದರು ಅಂತ ಹಲವು ಪ್ರಶ್ನೆ ಕಾಡುತ್ತೆ. ಅಚ್ಚರಿ ಕೂಡ ಆಗುತ್ತೆ. ಆದರೆ ನ್ಯಾಯಾಲಯಕ್ಕೆ ಅವುಗಳನ್ನು ಕರೆದಂದಿದ್ದು ಅವುಗಳ ತಪ್ಪಿಗಲ್ಲ, ಬದಲಾಗಿ ಅವನ್ನು ಕದ್ದೊಯ್ಯುತ್ತಿದ್ದ ಆರೋಪಿಯಿಂದಾಗಿ ಈ ಗಿಳಿಗಳನ್ನು ನ್ಯಾಯಾಲಯಕ್ಕೆ ಕರೆತರಲಾಗಿತ್ತು.

    ವನ್ಯಜೀವಿ ಕಾಯ್ದೆಯ ಅನ್ವಯ ಗಿಳಿಗಳನ್ನು ರಫ್ತು ಮಾಡುವುದನ್ನು ನಿಷೇಧಿಸಲಾಗಿದೆ. ಆದರೂ ಭಾರತದಿಂದ 13 ಜೀವಂತ ಗಿಳಿಗಳನ್ನು ಆರೋಪಿ ಅನ್ವರ್ಜೋನ್ ರಾಖಮತ್ಜೊನೊವ್ ಶೂ ಪೆಟ್ಟಿಗೆಗಳಲ್ಲಿ ಇರಿಸಿ ವಿದೇಶಕ್ಕೆ ಕಳ್ಳಸಾಗಣೆ ಮಾಡಲು ಯತ್ನಿಸಿದ್ದನು. ಈ ವೇಳೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್‍ಎಫ್(ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಸಿಬ್ಬಂದಿ ಆತನನ್ನು ಬಂಧಿಸಿದ್ದರು. ಆಗ ಆತನ ಬಳಿಯಿದ್ದ ಗಿಳಿಗಳನ್ನು ಸಿಐಎಸ್‍ಎಫ್ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದರು.

    ಗಿಳಿಗಳನ್ನು ಕಳ್ಳ ಸಾಗಾಣಿಕೆ ಮಾಡುವ ಆರೋಪಿ ವಿರುದ್ಧ ಕಸ್ಟಮ್ಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡಿತ್ತು. ಕಾನೂನಿನ ಪ್ರಕಾರ, ನ್ಯಾಯಾಲಯದಲ್ಲಿ ಯಾವುದೇ ಪ್ರಕರಣದ ವಿಚಾರಣೆ ನಡೆದರೂ ಅದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಹೀಗಾಗಿ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಿದ್ದ ಗಿಳಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಗಿಳಿಗಳು ಜೀವಂತವಾಗಿದ್ದ ಕಾರಣಕ್ಕೆ ಅವುಗಳನ್ನು ವನ್ಯಜೀವಿ ಅಧಿಕಾರಿಗಳಿಗೆ ಹಸ್ತಾಂತರಿಸುವುದಕ್ಕಾಗಿ ನ್ಯಾಯಾಲಯಕ್ಕೆ ಕರೆತರಲಾಯಿತು ಎಂದು ಕಸ್ಟಮ್ಸ್ ವಕೀಲ ಪಿಸಿ ಶರ್ಮಾ ತಿಳಿಸಿದರು.

    ಗಿಳಿಗಳ ಜೊತೆ ಆರೋಪಿಯನ್ನು ಕೂಡ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಆತ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದನು. ಆದರೆ ನ್ಯಾಯಾಲಯ ಆತನ ಅರ್ಜಿಯನ್ನು ವಜಾಗೊಳಿಸಿದ್ದು ಅಕ್ಟೋಬರ್ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

    ಸದ್ಯ ವಶಪಡಿಸಿಕೊಂಡಿದ್ದ ಎಲ್ಲಾ ಗಿಳಿಗಳನ್ನು ಓಖ್ಲಾ ಪಕ್ಷಿಧಾಮಕ್ಕೆ ಕಳುಹಿಸುವಂತೆ ನ್ಯಾಯಾಧೀಶರು ಸೂಚಿಸಿದ್ದು, ಪಕ್ಷಿಗಳನ್ನು ಸುರಕ್ಷಿತವಾಗಿ ಪಕ್ಷಿಧಾಮಕ್ಕೆ ಬಿಟ್ಟು ಬರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ಸ್ವಿಫ್ಟ್ ಕಾರಿನಲ್ಲಿ ಸಾಗಿಸುತ್ತಿದ್ದ 250 ಕೆ.ಜಿ.ಗಾಂಜಾ ವಶಕ್ಕೆ

    ಸ್ವಿಫ್ಟ್ ಕಾರಿನಲ್ಲಿ ಸಾಗಿಸುತ್ತಿದ್ದ 250 ಕೆ.ಜಿ.ಗಾಂಜಾ ವಶಕ್ಕೆ

    ಬೆಂಗಳೂರು: ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದು, ಆತನಿಂದ 250 ಕೆಜೆ ಗಾಂಜಾ ವಶಕ್ಕೆ ಪಡೆದಿದ್ದಾರೆ.

    ಆರೋಪಿಯನ್ನು ಮಧುರೈ ಮೂಲದ ಕುಮಾರ್ ಎಂದು ಗುರುತಿಸಲಾಗಿದ್ದು, ಆರೋಪಿ ಜೊತೆಗಿದ್ದ ಮತ್ತೊರ್ವ ಪೊಲೀಸರ ದಾಳಿ ವೇಳೆ ಪರಾರಿಯಾಗಿದ್ದಾನೆ.

    ಆರೋಪಿ ಸ್ವಿಫ್ಟ್ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಹೊರವಲಯದ ಅತ್ತಿಬೆಲೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ 125 ಪ್ಯಾಕೆಟ್ ನಲ್ಲಿದ್ದ 250 ಕೆ.ಜಿ. ಗಾಂಜಾ ಹಾಗೂ ಆಂಧ್ರ, ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ನಂಬರ್ ಪ್ಲೇಟ್ ವಶಕ್ಕೆ ಪಡೆದಿದ್ದಾರೆ. ಆರೋಪಿ ಯಾವ ರಾಜ್ಯ ಪ್ರವೇಶಿಸುತ್ತಾನೋ ಆಗೆಲ್ಲ ಆಯಾ ರಾಜ್ಯದ ನಂಬರ್ ಪ್ಲೇಟ್‍ನ್ನು ಬದಲಿಸಿ ಕಾರಿಗೆ ಅಳವಡಿಸುತ್ತಿದ್ದ ಎನ್ನುವ ವಿಚಾರ ತಿಳಿದು ಬಂದಿದೆ.