Tag: ಕಳ್ಳಸಾಗಣೆ

  • ಟೊಮೆಟೋ ಕ್ರೇಟ್‌ಗಳ ನಡುವೆ ರಾಸುಗಳನ್ನು ಬಚ್ಚಿಟ್ಟು ಸಾಗಿಸ್ತಿದ್ದ ವಾಹನ ಅಪಘಾತ

    ಟೊಮೆಟೋ ಕ್ರೇಟ್‌ಗಳ ನಡುವೆ ರಾಸುಗಳನ್ನು ಬಚ್ಚಿಟ್ಟು ಸಾಗಿಸ್ತಿದ್ದ ವಾಹನ ಅಪಘಾತ

    ಚಾಮರಾಜನಗರ: ಟೊಮೆಟೋ ಕ್ರೇಟ್‌ಗಳ (Tomato Crate) ನಡುವೆ ಹಸುಗಳನ್ನು (Cow) ಬಚ್ಚಿಟ್ಟು ಸಾಗಿಸುತ್ತಿದ್ದ ವಾಹನ ಅಪಘಾತವಾಗಿರುವ (Accident) ಘಟನೆ ಚಾಮರಾಜನಗರ (Chamarajanagarತಾಲೂಕಿನ ಪುಣ್ಯದ ಹುಂಡಿ ಬಳಿ ನಡೆದಿದೆ.

    ಗೂಡ್ಸ್ ವಾಹನದಲ್ಲಿ ಒಟ್ಟು 11 ಹಸುಗಳನ್ನು ಸಾಗಿಸಲಾಗುತ್ತಿದ್ದು, ಅದರಲ್ಲಿ 1 ಹಸು ಅಪಘಾತದಲ್ಲಿ ಸಾವನ್ನಪ್ಪಿದೆ. ಅವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಶಂಕೆ ಮೂಡಿದೆ. ಸದ್ಯ ಉಳಿದ 10 ಹಸುಗಳನ್ನು ರಕ್ಷಣೆ ಮಾಡಲಾಗಿದೆ.

    ಇಂದು ಮುಂಜಾನೆ 5:30ರ ವೇಳೆಗೆ ಅಪಘಾತ ಸಂಭವಿಸಿದೆ. ಚಾಲಕ 11 ರಾಸುಗಳನ್ನು ವಾಹನದಲ್ಲಿ ತುಂಬಿ, ಹಿಂಭಾಗದಲ್ಲಿ ಟೊಮೆಟೋ ಕ್ರೇಟ್‌ಗಳನ್ನು ಜೋಡಿಸಿದ್ದ. ವಾಹನದ ಹಿಂಭಾಗ ನೋಡಿದರೆ ಟೊಮೆಟೋ ಲೋಡ್‌ನಂತೆ ಕಾಣುವ ಹಾಗೆ ಬಿಂಬಿಸಿದ್ದಾನೆ. ಇದನ್ನೂ ಓದಿ: ಬೆಂಗಳೂರು ಸೇರಿ ದಕ್ಷಿಣ ಒಳನಾಡಿನಲ್ಲಿ 2 ದಿನ ವರುಣಾರ್ಭಟ – ಯೆಲ್ಲೋ ಅಲರ್ಟ್ ಘೋಷಣೆ

    ನಿದ್ದೆಯ ಮಂಪರಿನಲ್ಲಿ ಅತಿ ವೇಗವಾಗಿ ಬರುತ್ತಿದ್ದ ವಾಹನ ತಿರುವು ನೋಡದೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತವಾಗುತ್ತಿದ್ದಂತೆ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಘಟನೆ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಲ್ಲಿ ಪಟಾಕಿ ಬ್ಯಾನ್ ಆಗುತ್ತಾ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪುಷ್ಪಾ ಸಿನಿಮಾ ರೀತಿ ಲಿಕ್ಕರ್ ಸ್ಮಗ್ಲಿಂಗ್ – 54 ಲಕ್ಷ ಮೌಲ್ಯದ ಮದ್ಯ ಜಪ್ತಿ ಮಾಡಿದ ಅಬಕಾರಿ ಪೊಲೀಸರು

    ಪುಷ್ಪಾ ಸಿನಿಮಾ ರೀತಿ ಲಿಕ್ಕರ್ ಸ್ಮಗ್ಲಿಂಗ್ – 54 ಲಕ್ಷ ಮೌಲ್ಯದ ಮದ್ಯ ಜಪ್ತಿ ಮಾಡಿದ ಅಬಕಾರಿ ಪೊಲೀಸರು

    ಬೆಳಗಾವಿ: ಪುಷ್ಪಾ ಸಿನಿಮಾ ಮಾದರಿಯಲ್ಲಿ ಲಿಕ್ಕರ್ ಸ್ಮಗ್ಲಿಂಗ್ (Liquor Smuggling) ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, 54 ಲಕ್ಷ ರೂ. ಮೌಲ್ಯದ ಮದ್ಯವನ್ನು ಅಬಕಾರಿ ಪೊಲೀಸರು (Excise Police) ಜಪ್ತಿ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.

    ಖಚಿತ ಮಾಹಿತಿ ಮೇರೆಗೆ ಬೆಳಗಾವಿಯ ಸುವರ್ಣಸೌಧ ಬಳಿ ಅಬಕಾರಿ ಪೊಲೀಸರು ದಾಳಿ ನಡೆಸಿದ್ದು ಖದೀಮರ ಕೈಚಳಕಕ್ಕೆ ಅಬಕಾರಿ ಪೊಲೀಸರೇ ಹೌಹಾರಿದ್ದಾರೆ. ಪುಷ್ಪಾ ಸಿನಿಮಾದಲ್ಲಿ ಹಾಲು ಪೂರೈಸುವ ಟ್ಯಾಂಕರ್‌ನಲ್ಲಿ ರಕ್ತ ಚಂದನ ಸಾಗಾಟ ಮಾಡಿದರೆ ಈ ಗ್ಯಾಂಗ್ ಪ್ಲೈವುಡ್ ಸಾಗಿಸುವ ಲಾರಿಯಲ್ಲಿ ಲಿಕ್ಕರ್ ಸ್ಮಗ್ಲಿಂಗ್ ಮಾಡಿದೆ.

    ಹೈಟೆಕ್ ಲಿಕ್ಕರ್ ಸ್ಮಗ್ಲಿಂಗ್ ಜಾಲ ಭೇದಿಸಿದ ಬೆಳಗಾವಿ ಅಬಕಾರಿ ಪೊಲೀಸರು ಲಾರಿ ಸೇರಿ 54 ಲಕ್ಷ ರೂ. ಮೌಲ್ಯದ ಬೆಳೆಬಾಳುವ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮ ಸಾಗಾಟ ಮಾಡುತ್ತಿದ್ದ ಗ್ಯಾಂಗ್ ಗೋವಾದಲ್ಲಿ ಚೀಪ್ ರೇಟ್‌ಗೆ ಮದ್ಯ ಖರೀದಿಸಿ ಅಕ್ರಮವಾಗಿ ಬೇರೆ ರಾಜ್ಯಕ್ಕೆ ಸಾಗಾಟ ಮಾಡುತ್ತಿತ್ತು. ಗೋವಾದಿಂದ ಈ ಮದ್ಯವನ್ನು ಯಾವ ರಾಜ್ಯಕ್ಕೆ ಕಳುಹಿಸಲಾಗುತ್ತಿತ್ತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಮಹಿಳೆಯ ಮೇಲೆ ಅತ್ಯಾಚಾರ ಆರೋಪ- ತೆಲಂಗಾಣ ಕಾಂಗ್ರೆಸ್ ನಾಯಕನಿಗೆ ನೋಟಿಸ್

    ಪ್ರಕರಣ ಸಂಬಂಧ ಉತ್ತರ ಪ್ರದೇಶದ ಬನಾರಸ್ ಮೂಲದ ವೀರೇಂದ್ರ ಮಿಶ್ರಾ (34) ಬಂಧನ ಮಾಡಲಾಗಿದೆ. ಪ್ರಕರಣ ಕುರಿತು ಅಬಕಾರಿ ಅಪರ ಆಯುಕ್ತ ಮಂಜುನಾಥ್ ಮಾಹಿತಿ ನೀಡಿದ್ದು ಹೈಟೆಕ್ ಆಗಿ ಗೋವಾದಿಂದ ಲಿಕ್ಕರ್ ಸ್ಮಗ್ಲಿಂಗ್ ಮಾಡುತ್ತಿದ್ದ ವಾಹನದ ಮೇಲೆ ದಾಳಿ ಮಾಡಿದ್ದೇವೆ. ಇದು ಹೈಪ್ರೋಲ್ ಹಾಗೂ ವಿಶೇಷ ಪ್ರಕರಣವಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಬೆಲೆಬಾಳುವ ಮದ್ಯದ ಬಾಟಲಿಗಳನ್ನೇ ಪ್ಲೈವುಡ್ ಮಧ್ಯದಲ್ಲಿಟ್ಟು ಸಾಗಾಟ ಮಾಡುತ್ತಿದ್ದರು. ಇದು ಯಾರೂ ಪತ್ತೆ ಮಾಡದ ವಿಶೇಷ ಪ್ರಕರಣವಾಗಿದೆ. ಕಳೆದ 20 ದಿನಗಳ ಹಿಂದೆ ನಮ್ಮಿಂದ ವಾಹನ ತಪ್ಪಿಸಿಕೊಂಡಿತ್ತು. ಸದ್ಯ ವಿಶೇಷ ಕಾರ್ಯಾಚರಣೆ ಮೂಲಕ ಪ್ರಕರಣ ಭೇದಿಸಿದ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ – ಅಭಿಮಾನಿಯಿಂದ ಕುಂಕುಮ ಅಕ್ಷತೆ ಸ್ವೀಕರಿಸಿದ ಮಾಜಿ ಸಿಎಂ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡ್ರೋನ್ ಮೂಲಕ ಪಂಜಾಬ್‌ಗೆ ಡ್ರಗ್ಸ್ ಸಪ್ಲೈ ಮಾಡಲಾಗ್ತಿದೆ: ಪಾಕ್ ಪ್ರಧಾನಿ ಆಪ್ತ

    ಡ್ರೋನ್ ಮೂಲಕ ಪಂಜಾಬ್‌ಗೆ ಡ್ರಗ್ಸ್ ಸಪ್ಲೈ ಮಾಡಲಾಗ್ತಿದೆ: ಪಾಕ್ ಪ್ರಧಾನಿ ಆಪ್ತ

    ಇಸ್ಲಾಮಾಬಾದ್/ ನವದೆಹಲಿ: ಪಾಕಿಸ್ತಾನದ (Pakistan) ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರ ಪ್ರಮುಖ ಆಪ್ತ ಸಹಾಯಕ ಭಾರತದ ಗಡಿಯುದ್ದಕ್ಕೂ ಡ್ರಗ್ಸ್ (Drugs) ಪೂರೈಕೆಯನ್ನು ಹೆಚ್ಚಿಸಲು ಡ್ರೋನ್‌ಗಳನ್ನು (Drone) ಬಳಸಲಾಗುತ್ತಿರುವುದಾಗಿ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

    ಪಾಕಿಸ್ತಾನದ ಹಿರಿಯ ಪತ್ರಕರ್ತ ಹಮೀದ್ ಮಿರ್ ಅವರೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ಷರೀಫ್ ಅವರ ರಕ್ಷಣಾ ವಿಶೇಷ ಸಹಾಯಕ ಮಲಿಕ್ ಮೊಹಮ್ಮದ್ ಅಹ್ಮದ್ ಖಾನ್ (Malik Muhammad Ahmad Khan) ಪಾಕಿಸ್ತಾನ-ಭಾರತ ಗಡಿಯ ಬಳಿ ಕಸೂರ್‌ನ ಪ್ರವಾಹ ಪೀಡಿತ ಪ್ರದೇಶದಲ್ಲಿ ಡ್ರೋನ್‌ಗಳನ್ನು ಬಳಸಿ ಹೆರಾಯಿನ್ ಅನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಪ್ರವಾಹ ಸಂತ್ರಸ್ತರ ಪುನರ್ವಸತಿಗಾಗಿ ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಲಾಗಿದ್ದು, ಇಲ್ಲದೇ ಹೋದರೆ ಸಂತ್ರಸ್ತರು ಕಳ್ಳಸಾಗಣೆಯಲ್ಲಿ ತೊಡಗಿಕೊಳ್ಳುತ್ತಾರೆ ಎಂದು ತಿಳಿಸಿರುವುದಾಗಿ ಹಮೀದ್ ಮಿರ್ ಜುಲೈ 17ರಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಮಿರ್, ಮೊಹಮ್ಮದ್ ಅಹ್ಮದ್ ಖಾನ್ ಅವರು ಕಸೂರ್‌ನಿಂದ ಎಂಪಿಎ ಆಗಿದ್ದಾರೆ. ಅವರು ಪಾಕಿಸ್ತಾನದ ರಾಜಕೀಯ ಮತ್ತು ಮಿಲಿಟರಿ ಸ್ಥಾಪನೆಗೆ ಬಹಳ ಹತ್ತಿರವಾಗಿದ್ದಾರೆ. ಅವರು ಹಿಂದಿನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಮತ್ತು ಈಗಿನ ಮಿಲಿಟರಿ ಶ್ರೇಣಿಗೆ ತುಂಬಾ ಹತ್ತಿರವಾಗಿದ್ದರು ಎಂದಿದ್ದಾರೆ. ಇದನ್ನೂ ಓದಿ: ಟೇಕಾಫ್ ಬಳಿಕ ರನ್ ವೇನಲ್ಲಿ ಟಯರ್ ಭಾಗಗಳು ಪತ್ತೆ – ದೆಹಲಿಗೆ ವಿಮಾನ ವಾಪಸ್

    ಕಸೂರ್ ಹಳ್ಳಿಗರಿಗೆ ಮೊಬೈಲ್ ಸಿಗ್ನಲ್‌ಗಳು ಸಿಗುವುದಿಲ್ಲ ಎಂದು ಹೇಳುತ್ತಾರೆ. ಅವರು ಡ್ರೋನ್‌ಗಳ ಚಲನೆ, ಪಾಕಿಸ್ತಾನದಿಂದ ಭಾರತಕ್ಕೆ ಮಾದಕವಸ್ತುಗಳ ಕಳ್ಳಸಾಗಣೆ ಮತ್ತು ಭಾರತದಿಂದ ಪಾಕಿಸ್ತಾನಕ್ಕೆ ಮದ್ಯದ ಸಾಗಾಟದ ಬಗ್ಗೆ ಮಾತನಾಡುತ್ತಾರೆ. ಗಡಿಯಾಚೆಗಿನ ಡ್ರೋನ್ ಚಲನವಲನಗಳಿಂದಾಗಿ ಇಲ್ಲಿನ ಮೊಬೈಲ್ ಸಿಗ್ನಲ್‌ಗಳು ಭದ್ರತಾ ಏಜೆನ್ಸಿಗಳಿಂದ ಜಾಮ್ ಆಗಿವೆ ಎಂದು ಖಾನ್ ನನಗೆ ತಿಳಿಸಿದ್ದಾರೆ ಎಂದು ಮಿರ್ ಹೇಳಿದ್ದಾರೆ.

    ಕಸೂರ್ ಪಂಜಾಬ್‌ನ ಖೇಮ್‌ಕರನ್ ಮತ್ತು ಫಿರೋಜ್‌ಪುರ ಪ್ರದೇಶದ ಗಡಿಗೆ ಅಂಟಿಕೊಂಡಿದೆ. ಪಂಜಾಬ್ ಪೊಲೀಸರ ಅಂಕಿಅಂಶಗಳ ಪ್ರಕಾರ ಫಿರೋಜ್‌ಪುರ ಜಿಲ್ಲೆಯೊಂದರಲ್ಲೇ 2022-2023 ಜುಲೈ ವರೆಗೆ ಎನ್‌ಡಿಪಿಎಸ್ ಕಾಯ್ದೆಯಡಿ 795 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಪಾಕಿಸ್ತಾನದ ಗಡಿಯಲ್ಲಿರುವ ಪಂಜಾಬ್‌ನ ಆ ಜಿಲ್ಲೆಗಳಿಂದ ಹೆಚ್ಚಿನ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದತ್ತಾಂಶವು ತೋರಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರಾಹುಲ್‌ಗೆ ಮೊಣಕಾಲು ನೋವು – ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಬರ್ ಅಪ್ಲಿಕೇಶನ್ ಮೂಲಕ 800 ಭಾರತೀಯರ ಕಳ್ಳಸಾಗಣೆ – ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ

    ಉಬರ್ ಅಪ್ಲಿಕೇಶನ್ ಮೂಲಕ 800 ಭಾರತೀಯರ ಕಳ್ಳಸಾಗಣೆ – ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ

    ವಾಷಿಂಗ್ಟನ್: ಉಬರ್‌ನ (Uber) ರೈಡ್-ಹೈಲಿಂಗ್ (Raid-Hailing) ಎಂಬ ಅಪ್ಲಿಕೇಶನ್ ಬಳಿಸಿಕೊಂಡು ಸುಮಾರು 800ಕ್ಕೂ ಹೆಚ್ಚು ಭಾರತೀಯರನ್ನು (Indians) ಅಮೆರಿಕಾಗೆ (America) ಕಳ್ಳಸಾಗಣೆ (Smuggling) ಮಾಡಿದ ಭಾರತೀಯ ಮೂಲದ ವ್ಯಕ್ತಿಗೆ ನ್ಯಾಯಾಲಯ 3 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿದೆ.

    ರಾಜಿಂದರ್ ಪಾಲ್ ಸಿಂಗ್ (49), ಅಕಾ ಜಸ್ಪಾಲ್ ಗಿಲ್, ಫೆಬ್ರವರಿಯಲ್ಲಿ ತಪ್ಪೊಪ್ಪಿಕೊಂಡಿದ್ದು, ಕೆನಡಾದಿಂದ ಗಡಿಯುದ್ದಕ್ಕೂ ನೂರಾರು ಭಾರತೀಯ ಪ್ರಜೆಗಳನ್ನು ಕರೆತರುವ ಸಲುವಾಗಿ 500,000 ಅಮೆರಿಕನ್ ಡಾಲರ್ (ಅಂದಾಜು 4.10 ಕೋಟಿ ರೂ.) ಹಣವನ್ನು ಪಡೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಮೋದಿ ಪ್ರಶ್ನಿಸಿದ್ದ ಅಮೆರಿಕ ಪತ್ರಕರ್ತೆಗೆ ಕಿರುಕುಳ – ವೈಟ್‍ಹೌಸ್ ಪ್ರತಿಕ್ರಿಯೆ

    ರಾಜಿಂದರ್ ಪಾಲ್ ಸಿಂಗ್ ಕ್ಯಾಲಿಫೋರ್ನಿಯಾ ನಿವಾಸಿಯಾಗಿದ್ದು, 4 ವರ್ಷಗಳ ಅವಧಿಯಲ್ಲಿ 800ಕ್ಕೂ ಹೆಚ್ಚು ಜನರನ್ನು ಉತ್ತರದ ಗಡಿಯ ಮೂಲಕ ವಾಷಿಂಗ್ಟನ್ (Washington) ರಾಜ್ಯಕ್ಕೆ ಕಳ್ಳಸಾಗಣಿಕೆ ಮಾಡಲು ವ್ಯವಸ್ಥೆ ಮಾಡಿದ್ದ ಎಂದು ಯುಎಸ್ (US) ಅಟಾರ್ನಿ ಟೆಸ್ಸಾ ಎಂ ಗೊರ್ಮನ್ ತಿಳಿಸಿದ್ದಾರೆ. ಇದನ್ನೂ ಓದಿ: ಒಂದೂವರೆ ವರ್ಷದ ಮಗಳನ್ನು ಬಿಟ್ಟು 10 ದಿನ ಟ್ರಿಪ್ ಹೋದ ತಾಯಿ- ಮಗು ಸಾವು

    ಜುಲೈ 2018ರಿಂದ ರಾಜಿಂದರ್ ಪಾಲ್ ಸಿಂಗ್ ಮತ್ತು ಅವರ ಸಹಚರರು ಕೆನಡಾದಿಂದ ಸಿಯಾಟಲ್ ಪ್ರದೇಶಕ್ಕೆ ಅಕ್ರಮವಾಗಿ ಗಡಿ ದಾಟಿದ ಜನರನ್ನು ಸಾಗಿಸಲು ಉಬರ್ ಅನ್ನು ಬಳಸಿದ್ದಾರೆ ಎಂದು ಪ್ರಕರಣದಲ್ಲಿ ದಾಖಲಿಸಲಾದ ದಾಖಲೆಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. 2018ರಿಂದ 2022ರ ಮಧ್ಯದಲ್ಲಿ ಭಾರತೀಯರನ್ನು ಯುಎಸ್‌ಗೆ ಸಾಗಿಸುವ ಸಲುವಾಗಿ ರಾಜಿಂದರ್ ಸುಮಾರು 600ಕ್ಕೂ ಹೆಚ್ಚು ಪ್ರವಾಸ ಬೆಳೆಸಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಗಗನಯಾತ್ರಿಗಳ ಮೂತ್ರ, ಬೆವರಿನಿಂದಲೇ ಕುಡಿಯುವ ನೀರಿನ ಉತ್ಪಾದನೆ – ಬಾಹ್ಯಾಕಾಶದಲ್ಲಿ ಮಹತ್ವದ ಸಂಶೋಧನೆ

    ಪ್ರಕರಣದ ತನಿಖೆಯ ಪ್ರಕಾರ, 2018ರಿಂದ 2022ರ ಒಳಗಾಗಿ ಸುಮಾರು 80,000 ಅಮೆರಿಕನ್ ಡಾಲರ್ ಹಣಕ್ಕೆ 17 ಉಬರ್ ಖಾತೆಗಳು ಇದರೊಂದಿಗೆ ಕೈಜೋಡಿಸಿದ್ದವು. ಜನರನ್ನು ಸಾಗಿಸುವ ಸಲುವಾಗಿ ರಾಜಿಂದರ್ ಸಹಚರರು ಬಾಡಿಗೆಯ ಏಕಮುಖ ವಾಹನವನ್ನು ಬಳಸುತ್ತಿದ್ದರು. ಬಳಿಕ ಅವರನ್ನು ವಾಷಿಂಗ್ಟನ್‌ನ ಹೊರಪ್ರದೇಶಕ್ಕೆ ಸಾಗಿಸುತ್ತಿದ್ದರು. ಕ್ಯಾಲಿಫೋರ್ನಿಯಾದ ರಾಜಿಂದರ್ ಮನೆಯಿಂದ ತನಿಖಾಧಿಕಾರಿಗಳು ಸುಮಾರು 45,000 ಡಾಲರ್ ಹಣವನ್ನು ಮತ್ತು ನಕಲಿ ಗುರುತಿನ ದಾಖಲೆಯನ್ನು ಪತ್ತೆಹಚ್ಚಿದ್ದಾರೆ. ಕಾನೂನುಬದ್ದವಾಗಿ ಹಾಜರಾಗದ ರಾಜಿಂದರ್‌ನನ್ನು ಜೈಲುಶಿಕ್ಷೆಯ ಬಳಿಕ ಗಡಿಪಾರು ಮಾಡುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಸಿಖ್‌ ವ್ಯಾಪಾರಿಗೆ ಗುಂಡಿಕ್ಕಿ ಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೋಮಾಂಸ ಕಳ್ಳಸಾಗಣೆ ಮಾಡ್ತಿದ್ದಾನೆಂದು ಶಂಕಿಸಿ ಥಳಿಸಿ ವ್ಯಕ್ತಿಯ ಹತ್ಯೆ

    ಗೋಮಾಂಸ ಕಳ್ಳಸಾಗಣೆ ಮಾಡ್ತಿದ್ದಾನೆಂದು ಶಂಕಿಸಿ ಥಳಿಸಿ ವ್ಯಕ್ತಿಯ ಹತ್ಯೆ

    ಮುಂಬೈ: ಗೋಮಾಂಸ ಕಳ್ಳಸಾಗಣೆ (Beef Smuggling) ಮಾಡುತ್ತಿದ್ದಾನೆ ಎಂದು ಶಂಕಿಸಿ ಗೋರಕ್ಷಕರ ಗುಂಪೊಂದು ಶನಿವಾರ ರಾತ್ರಿ ವ್ಯಕ್ತಿಯೊಬ್ಬನನ್ನು ಥಳಿಸಿ ಕೊಂದಿರುವ ಘಟನೆ ಮಹಾರಾಷ್ಟ್ರದ (Maharashtra) ನಾಸಿಕ್‌ನಲ್ಲಿ (Nashik) ನಡೆದಿದೆ.

    ಮುಂಬೈನ ಕುರ್ಲಾದ ಅಫಾನ್ ಅನ್ಸಾರಿ (32) ಕೊಲೆಯಾದ ವ್ಯಕ್ತಿ. ಅನ್ಸಾರಿ ತನ್ನ ಸಹಾಯಕ ನಾಸಿರ್ ಶೇಖ್ ಜೊತೆ ಕಾರಿನಲ್ಲಿ ಮಾಂಸವನ್ನು ಸಾಗಿಸುತ್ತಿದ್ದಾಗ ಗೋರಕ್ಷಕರು ಅವರನ್ನು ಅಡ್ಡಗಟ್ಟಿ ಥಳಿಸಿದ್ದಾರೆ. ಬಳಿಕ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅನ್ಸಾರಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಕಾರಿನಲ್ಲಿ ಗೋಮಾಂಸ ಪತ್ತೆಯಾದ ಬಳಿಕ 10-15 ಜನ ಅಪರಿಚಿತ ವ್ಯಕ್ತಿಗಳು ಕಬ್ಬಿಣದ ರಾಡ್ ಹಾಗೂ ದೊಣ್ಣೆಗಳಿಂದ ಇಬ್ಬರ ಮೇಲೆ ಗಂಭೀರ ದಾಳಿ ಮಾಡಿದ್ದಾರೆ. ಇದರಿಂದ ಅನ್ಸಾರಿ ಸಾವನ್ನಪ್ಪಿದ್ದು, ಆತನ ಸಹಾಯಕ ಗಂಭೀರ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, 11 ಜನರನ್ನು ಈಗಾಗಲೇ ಬಂಧಿಸಿದ್ದಾರೆ. ಇದನ್ನೂ ಓದಿ: ಬಸ್ ನಿಲ್ಲಿಸದ್ದಕ್ಕೆ ಕಲ್ಲು ಎಸೆದು ಶಕ್ತಿ ಪ್ರದರ್ಶಿಸಿದ ಮಹಿಳೆ – 5 ಸಾವಿರ ದಂಡ ಕಟ್ಟಿ ಅದೇ ಬಸ್‍ನಲ್ಲಿ ಪ್ರಯಾಣ

    ಮಾರ್ಚ್‌ನಲ್ಲಿಯೂ ಇದೇ ರೀತಿಯ ಘಟನೆ ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿತ್ತು. ಗೋಮಾಂಸ ಸಾಗಿಸುತ್ತಿದ್ದಾನೆ ಎಂಬ ಶಂಕೆಯ ಮೇಲೆ ನಸೀಮ್ ಖುರೇಷಿ ಎಂದು ಗುರುತಿಸಲಾದ (56) ವ್ಯಕ್ತಿಯನ್ನು ಹತ್ಯೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಸರಪಂಚ್ ಸುಶೀಲ್ ಸಿಂಗ್, ಗ್ರಾಮಸ್ಥರಾದ ರವಿ ಸಾಹ್ ಹಾಗೂ ಉಜ್ವಲ್ ಶರ್ಮಾರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಒಡಿಶಾದಲ್ಲಿ ಮತ್ತೊಂದು ಭೀಕರ ಅಪಘಾತ – ಮದುವೆ ಮುಗಿಸಿ ಮನೆಗೆ ತೆರಳುತ್ತಿದ್ದ 12 ಮಂದಿ ಮಸಣಕ್ಕೆ

  • 50 ಕೋಟಿಯ 30 ಹೆಬ್ಬಾವು, ಅಪರೂಪದ ಪ್ರಾಣಿಗಳನ್ನು ರೈಲಿನಲ್ಲಿ ಸಾಗಿಸುತ್ತಿದ್ದ ಮಹಿಳೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ಲು

    50 ಕೋಟಿಯ 30 ಹೆಬ್ಬಾವು, ಅಪರೂಪದ ಪ್ರಾಣಿಗಳನ್ನು ರೈಲಿನಲ್ಲಿ ಸಾಗಿಸುತ್ತಿದ್ದ ಮಹಿಳೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ಲು

    ನವದೆಹಲಿ: ಪೆಟ್ಟಿಗೆಯೊಂದರಲ್ಲಿ ಸುಮಾರು 30 ಹೆಬ್ಬಾವುಗಳು (Python) ಸೇರಿದಂತೆ ಅಪರೂಪದ ಇತರ ಪ್ರಾಣಿಗಳನ್ನು ರೈಲಿನ ಮೂಲಕ (Train) ಸಾಗಿಸುತ್ತಿದ್ದ ಮಹಿಳೆ (Woman) ಅಧಿಕಾರಿಗಳ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಮಹಿಳೆ ಸುಮಾರು 50 ಕೋಟಿ ರೂ. ಬೆಲೆಬಾಳುವ ಪ್ರಾಣಿಗಳನ್ನು ಸಾಗಿಸುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪೊಲೀಸರ ಅತಿಥಿಯಾಗಿರುವ ಮಹಿಳೆ ಪುಣೆ ಮೂಲದ ದೇವಿ ಚಂದ್ರ ಎಂಬುದು ತಿಳಿದುಬಂದಿದೆ. ಆಕೆ ಖರಗ್‌ಪುರದ ಹಿಜ್ಲಿಯಿಂದ ದೆಹಲಿಗೆ ನೀಲಾಚಲ ಎಕ್ಸ್‌ಪ್ರೆಸ್ (Neelachal Express) ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾಳೆ.

    ರಹಸ್ಯ ಮೂಲಗಳಿಂದ ಮಾಹಿತಿ ಪಡೆದ ರೈಲ್ವೇ ಪೊಲೀಸರು ಹಾಗೂ ಅರಣ್ಯ ಇಲಾಖೆಯ ತಂಡ ನೀಲಾಚಲ ಎಕ್ಸ್ಪ್ರೆಸ್ ರೈಲಿನ ಮೇಲೆ ದಾಳಿ ನಡೆಸಿದೆ. ಈ ವೇಳೆ ಮಹಿಳೆ ತಂದಿದ್ದ ಸಾಮಾನ್ಯ ಪೆಟ್ಟಿಗೆಯನ್ನು ತೆರೆದು ನೋಡಿದಾಗ ಸಹ ಪ್ರಯಾಣಿಕರು ದಂಗಾಗಿದ್ದಾರೆ. ಪೆಟ್ಟಿಗೆಯಲ್ಲಿ 30 ಹೆಬ್ಬಾವು, ಜೇಡಗಳು, ಗೋಸುಂಬೆಗಳು, ಜೀರುಂಡೆ ಹೀಗೆ ಅನೇಕ ಜಾತಿಯ ಪ್ರಾಣಿಗಳು ಪತ್ತೆಯಾಗಿವೆ. ಈ ಎಲ್ಲಾ ಪ್ರಾಣಿಗಳೂ ಅತ್ಯಂತ ಅಪರೂಪದ ಪ್ರಭೇದಕ್ಕೆ ಸೇರಿದ್ದಾಗಿದ್ದು, ದುಬಾರಿ ಬೆಲೆಯದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ಮುಖಂಡ ಹೃದಯಾಘಾತದಿಂದ ನಿಧನ

    ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಈ ಎಲ್ಲಾ ಪ್ರಾಣಿಗಳನ್ನು ನಾಗಾಲ್ಯಾಂಡ್‌ನಿAದ ತರಿಸಲಾಗಿರುವುದು ತಿಳಿದುಬಂದಿದೆ. ನಾಗಾಲ್ಯಾಂಡ್‌ನ ವ್ಯಕ್ತಿ ಈ ಅಪರೂಪದ ಪ್ರಭೇದಗಳನ್ನು ಪೂರೈಸುವ ಕೆಲಸವನ್ನು ಮಹಿಳೆಗೆ ನೀಡಿದ್ದಾನೆ. ಆಕೆಗೆ ಈ ಪ್ರಾಣಿಗಳ ಜಾತಿಯಾಗಲೀ, ಅದರ ಮೌಲ್ಯವಾಗಲೀ ತಿಳಿದಿಲ್ಲ. ಕೇವಲ 8 ಸಾವಿರ ರೂ.ಗಾಗಿ ಈ ಅಕ್ರಮ ಸಾಗಾಟವನ್ನು ಮಾಡುತ್ತಿದ್ದುದಾಗಿ ಮಹಿಳೆ ಬಾಯಿಬಿಟ್ಟಿದ್ದಾಳೆ.

    train

    ತಜ್ಞರ ಪ್ರಕಾರ ಪೆಟ್ಟಿಗೆಯಲ್ಲಿ ಪತ್ತೆಯಾಗಿರುವ ಹಾವುಗಳಲ್ಲಿ ಸ್ಯಾಂಡ್ ಬೋವಾಸ್, ಅಲ್ಬಿನೋ ಹೆಬ್ಬಾವು, ಬಾಲ್ ಹೆಬ್ಬಾವು ಮತ್ತು ರೆಡ್ ಹೆಬ್ಬಾವು ಸೇರಿವೆ. ವಿಷಕಾರಿ ಜೇಡಗಳು, ಅಪರೂಪದ ಗೋಸುಂಬೆಗಳನ್ನೂ ಆಕೆ ಸಾಗಿಸುತ್ತಿದ್ದಳು. ಇದೀಗ ಎಲ್ಲಾ ಪ್ರಾಣಿಗಳನ್ನು ರಕ್ಷಣೆ ಮಾಡಲಾಗಿದ್ದು, ಅವುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಜ್ವರಕ್ಕೆ ಚುಚ್ಚು ಮದ್ದು ತೆಗೆದುಕೊಂಡ ಬಾಲಕ ಸಾವು – ನಕಲಿ ವೈದ್ಯ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • 9 ವರ್ಷದ ಬಾಲಕನಾಗಿದ್ದಾಗ ನನ್ನನ್ನು ಕಳ್ಳಸಾಗಣೆ ಮಾಡಲಾಗಿತ್ತು: ಒಲಿಂಪಿಕ್, ವಿಶ್ವ ಚಾಂಪಿಯನ್‌ನ ಸ್ಫೋಟಕ ಹೇಳಿಕೆ

    9 ವರ್ಷದ ಬಾಲಕನಾಗಿದ್ದಾಗ ನನ್ನನ್ನು ಕಳ್ಳಸಾಗಣೆ ಮಾಡಲಾಗಿತ್ತು: ಒಲಿಂಪಿಕ್, ವಿಶ್ವ ಚಾಂಪಿಯನ್‌ನ ಸ್ಫೋಟಕ ಹೇಳಿಕೆ

    ಲಂಡನ್: ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಆಗಿರುವ ಓಟಗಾರ ಮೊ ಫರಾ ತಮ್ಮ 9ನೇ ವಯಸ್ಸಿನಲ್ಲಿ ಜಿಬೌಟಿಯಿಂದ ಬ್ರಿಟನ್‌ಗೆ ಕಳ್ಳಸಾಗಣೆ ಮಾಡಲಾಗಿತ್ತು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ತಾನು ಹಿಂದೆಂದೂ ಭೇಟಿಯಾಗದ ಮಹಿಳೆ ತನ್ನ ನಕಲಿ ಪ್ರಯಾಣದ ದಾಖಲೆಗಳನ್ನು ಸೃಷ್ಟಿಸಿ ಬ್ರಿಟನ್‌ಗೆ ಕರೆದೊಯ್ದಿದ್ದಳು. ತನ್ನ ಹೊಟ್ಟೆಪಾಡಿಗಾಗಿ ಅಲ್ಲಿ ಮನೆಕೆಲಸ ಹಾಗೂ ಮಕ್ಕಳನ್ನು ಆರೈಕೆ ಮಾಡಲು ಒತ್ತಾಯಿಸಲಾಗಿತ್ತು. ಮಾತ್ರವಲ್ಲದೇ ತನ್ನ ನಿಜ ಹೆಸರು ಹುಸೇನ್ ಅಬ್ದಿ ಕಹಿನ್‌ನಿಂದ ಮೊಹಮ್ಮದ್ ಫರಾ ಎಂದು ಬದಲಿಸಲಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ.

    ತಾನು ಬ್ರಿಟನ್‌ಗೆ ಬಂದ ಬಳಿಕ ಮಹಿಳೆ ಪಶ್ಚಿಮ ಲಂಡನ್‌ನ ಹೌನ್ಸ್ಲೋನಲ್ಲಿರುವ ಆಕೆಯ ಮನೆಗೆ ಕರೆದುಕೊಂಡು ಹೋಗಿದ್ದಳು. ತನ್ನ ಸಂಬಂಧಿಕರ ಸಂಪರ್ಕದ ದಾಖಲೆಗಳನ್ನು ಆಕೆ ಹರಿದು ಹಾಕಿದ್ದಳು. ತನಗೆ 12 ವರ್ಷಗಳ ವರೆಗೂ ಆಕೆ ಶಾಲೆಗೆ ಹೋಗಲು ಬಿಟ್ಟಿರಲಿಲ್ಲ ಎಂದು ಹಿಂದಿನ ಘಟನೆಯನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್‌ ನೋಡಿ ಕಲಿಯಬೇಕು – ಐಸಿಸಿ ವಿರುದ್ಧ ಕ್ರೀಡಾ ವಾಹಿನಿಗಳು ಕಿಡಿ

    ಈ ಸಂದರ್ಭ ನನಗೆ ಅಲ್ಲಿಂದ ಹೊರ ಬರಬೇಕಿತ್ತು. ಆಗಾಗ ನಾನು ಬಾತ್‌ರೂಮ್‌ನಲ್ಲಿ ಬೀಗ ಹಾಕಿಕೊಂಡು ಅಳುತ್ತಿದ್ದೆ. ಬಳಿಕ ನಾನು ಈ ಪರಿಸ್ಥಿತಿಯಿಂದ ಓಡಿ ಹೋಗುವ ನಿರ್ಧಾರ ಮಾಡಿದೆ. ನನಗೆ ಆಗ ದೈಹಿಕ ಶಿಕ್ಷಕ ಅಲನ್ ವಾಟ್ಕಿನ್ಸನ್ ಅವರ ಪರಿಚಯವಾಗಿ, ಅವರು ನನಗಾಗಿ ಸಾಮಾಜಿಕ ಸೇವಾ ಕೇಂದ್ರವನ್ನು ಸಮಪರ್ಕಿಸಿದರು. ನನ್ನನ್ನು ಸಾಕಲು ಸೋಮಾಲಿ ಸಮುದಾಯದ ಕುಟುಂಬವನ್ನು ಹುಡುಕಲು ಸಹಾಯ ಮಾಡಿದರು ಎಂದರು.

    ಅವರ ಸಹಾಯದಿಂದ ನನಗೆ ನನ್ನ ಭುಜದಿಂದ ಒಂದು ದೊಡ್ಡ ಹೊರೆ ಇಳಿದಂತಾಗಿತ್ತು. ನನ್ನಂತಹ ಅದೆಷ್ಟೋ ಮಕ್ಕಳು ಇದೇ ರೀತಿ ಕಳ್ಳಸಾಗಣೆಗೊಳಪಟ್ಟಿದ್ದಾರೆ. ಆದರೆ ನಾನೊಬ್ಬ ಅದೃಷ್ಟಶಾಲಿಯಾಗಿದ್ದೆ. ಇದರಿಂದ ನಾನು ಉಳಿದುಕೊಂಡೆ, ಇತರರಿಗಿಂತ ಭಿನ್ನವಾದೆ ಎಂದು ಹೇಳಿದರು. ಇದನ್ನೂ ಓದಿ: ವಿಂಬಲ್ಡನ್‌ ಟೆನ್ನಿಸ್‌ ಟೂರ್ನಿಯಲ್ಲೂ ಕೆಜಿಎಫ್‌ ಹವಾ

    2012 ಹಾಗೂ 2016ರ ಒಲಿಂಪಿಕ್‌ನಲ್ಲಿ 5,000 ಹಾಗೂ 10,000 ಮೀ.ನ ಓಟದಲ್ಲಿ ಗೆದ್ದಿರುವ ಫರಾ ಈ ಬಾರಿ ಅಕ್ಟೋಬರ್‌ನಲ್ಲಿ ಲಂಡನ್ ಮ್ಯಾರಥಾನ್‌ನಲ್ಲಿ ಭಾಗವಹಿಸಲಿದ್ದಾರೆ. ಕಳೆದ ಬಾರಿ ಲಂಡನ್‌ನ 10,000 ಮೀ. ಓಟದಲ್ಲಿ ರನ್ನರ್ ಅಪ್ ಆದ ಫರಾ ಈ ತಿಂಗಳ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವುದನ್ನು ತಳ್ಳಿಹಾಕಿದ್ದಾರೆ. ಮೇ ತಿಂಗಳಿನಲ್ಲಿ ತಮ್ಮ ವೃತ್ತಿ ಜೀವನಕ್ಕೆ ಶೀಘ್ರವೇ ವಿದಾಯ ಹೇಳುವ ಸುಳಿವನ್ನು ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಜಾನುವಾರು ಕಳ್ಳರನ್ನು 22 ಕೀ.ಮೀ.ವರೆಗೂ ಬೆನ್ನಟ್ಟಿ ಹಿಡಿದ ಖಾಕಿಪಡೆ

    ಜಾನುವಾರು ಕಳ್ಳರನ್ನು 22 ಕೀ.ಮೀ.ವರೆಗೂ ಬೆನ್ನಟ್ಟಿ ಹಿಡಿದ ಖಾಕಿಪಡೆ

    ನವದೆಹಲಿ: ಸಿನಿಮಾ ದೃಶ್ಯವನ್ನೂ ಮೀರಿಸುವಂತೆ ಜಾನುವಾರು ಕಳ್ಳಸಾಗಣೆ ಮಾಡುತ್ತಿದ್ದ ಐವರನ್ನು 22 ಕಿ.ಮೀ. ಬೆನ್ನಟ್ಟಿದ ಖಾಕಿಪಡೆ ಕೊನೆಗೂ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

    ದೆಹಲಿ ಬಳಿಯ ಗುರುಗ್ರಾಮ್ ನಲ್ಲಿ ಜಾನುವಾರು ಕಳ್ಳರನ್ನು ಬಂಧಿಸಲಾಗಿದೆ. ಸೈಬರ್ ಸಿಟಿ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳಿಂದ ಕೆಲವು ದೇಶೀಯ ಬಂದೂಕುಗಳು ಹಾಗೂ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಶೌಚಾಲಯದಲ್ಲಿ 12ರ ಹುಡುಗಿ ಮೇಲೆ ಅತ್ಯಾಚಾರ

    crime

    ಖಾಕಿ ಪಡೆ ದೆಹಲಿ ಗಡಿಯಿಂದ ಆರೋಪಿಗಳನ್ನು ಬೆನ್ನಟ್ಟಿದಾಗ ಗುರುಗ್ರಾಮಕ್ಕೆ ಪ್ರವೇಶಿಸುವ ವೇಳೆ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿತು. ಇದನ್ನು ಲೆಕ್ಕಿಸದೇ ವಾಹನವನ್ನು ವೇಗವಾಗಿ ಚಲಾಯಿಸಿದರು. ಅಲ್ಲಿಂದ ನಮ್ಮ ಚೇಸಿಂಗ್ ಪ್ರಾರಂಭವಾಯಿತು. ಅವರ ವಾಹನದ ಒಂದು ಟಯರ್ ಪಂಕ್ಚರ್ ಮಾಡಿದರೂ ಆರೋಪಿಗಳು ಅತಿ ವೇಗವಾಗಿಯೇ ಚಲಾಯಿಸುತ್ತಿದ್ದರು. ಇದರಿಂದ ಟಯರ್ ಜಾಗದಲ್ಲಿ ಬೆಂಕಿ ಕಿಡಿಗಳು ಕಾಣಿಸಿಕೊಳ್ಳುತ್ತಿದ್ದವು. ಈ ವೇಳೆ ಅವರು ಪೊಲೀಸರ ಗಮನವನ್ನು ಬೇರೆಡೆ ಸೆಳೆಯಲು ಕಳ್ಳಸಾಗಣೆ ಮಾಡಿದ ಹಸುಗಳನ್ನು ಚಲಿಸುವ ವಾಹನದಿಂದಲೇ ಹೊರಕ್ಕೆ ತಳ್ಳಿದ್ದರು. ಆದರೂ ಬಿಡದೇ ಕಳ್ಳರನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ಹುಡುಗಿ ಮೇಲೆ ನಿರಂತರ ಅತ್ಯಾಚಾರ- 7 ಮಂದಿ ಕಾಮುಕರ ಬಂಧನ

    cow

    ಗುರುಗ್ರಾಮ್‌ನಲ್ಲಿ ಜಾನುವಾರುಗಳ ಕಳ್ಳಸಾಗಣೆ ಇದೇ ಮೊದಲಲ್ಲ. ಅದಕ್ಕಾಗಿಯೇ ಹರಿಯಾಣ ಸರ್ಕಾರ ಗೋವು ಕಳ್ಳಸಾಗಣೆ ವಿರುದ್ಧ ಕಠಿಣ ಕಾನೂನುಗಳನ್ನು ಕೈಗೊಂಡಿದೆ. ಅವುಗಳ ರಕ್ಷಣೆಗಾಗಿ ಆಯೋಗವನ್ನೂ ರಚಿಸಿದೆ. ಆದರೆ ಈ ಕ್ರಮಗಳ ಹೊರತಾಗಿಯೂ ರಾಜ್ಯದಲ್ಲಿ ಜಾನುವಾರು ಕಳ್ಳಸಾಗಣೆ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.

  • 43.2 ಕೋಟಿ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ – ಮಹಿಳೆ ಅರೆಸ್ಟ್

    43.2 ಕೋಟಿ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ – ಮಹಿಳೆ ಅರೆಸ್ಟ್

    ನವದೆಹಲಿ: ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 43.2 ಕೋಟಿ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಸೂಟ್‍ಕೇಸ್ ಟ್ರಾಲಿಯಲ್ಲಿ 43.2 ಕೋಟಿ ಮೌಲ್ಯದ ಕೊಕೇನ್(ಡ್ರಗ್ಸ್) ಬೇರೆ ಕಡೆ ಸಾಗಿಸಲು ಪ್ರಯತ್ನಿಸುತ್ತಿದ್ದಳು. ಆದರೆ ಅಧಿಕಾರಿಗಳಿಗೆ ಅನುಮಾನ ಬಂದು ಆಕೆಯ ಸೂಟ್‍ಕೇಸ್ ಪರಿಶೀಲಿಸಿದಾಗ ಬಿಳಿ ಬಣ್ಣದ ಪುಡಿ ಪತ್ತೆಯಾಗಿದೆ. ನಂತರ ಅದನ್ನು ಪರೀಕ್ಷಿಸಿದಾಗ ಅದು ಡ್ರಗ್ಸ್ ಎಂದು ತಿಳಿದುಬಂದಿದೆ. ನಂತರ ಆಕೆಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 60ಕ್ಕೂ ಹೆಚ್ಚು ಅಡಿಕೆ ಗಿಡ ಕಡಿದ ದುಷ್ಕರ್ಮಿಗಳು – ಕಣ್ಣೀರಿಟ್ಟ ರೈತ ಮಹಿಳೆ

    ಘಟನೆ ವಿವರ: ಮಹಿಳೆಯೂ ಮೊದಲು ಲಾವೋಸ್‍ನಿಂದ ದೋಹಾಗೆ ಮತ್ತು ದೋಹಾದಿಂದ ನವದೆಹಲಿಗೆ ವಿಮಾನದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದಳು. ಅನುಮಾನದ ಆಧಾರದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಆಕೆಯನ್ನು ತಡೆದಿದ್ದಾರೆ. ಆಕೆಯ ಲಗೇಜ್ ಅನುಮಾನಾಸ್ಪದವಾಗಿ ಕಂಡುಬಂದಿದ್ದು, ಅದನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಹಿಳೆ ಸೂಟ್‍ಕೇಸ್ ನಲ್ಲಿ ನಮಗೆ ಬಿಳಿ ಪುಡಿ ಸಿಕ್ಕಿದೆ. ನಂತರ ಅದನ್ನು ಪರೀಕ್ಷಿಸಿದಾಗ ಅದು ಡ್ರಗ್ಸ್ ಎಂದು ಪತ್ತೆಯಾಗಿದೆ. ಇದು 2,880 ಗ್ರಾಂ. ತೂಕ ಇದ್ದು, 43.2 ಕೋಟಿ ರೂ. ಬೆಲೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

    ಎನ್‍ಡಿಪಿಎಸ್(ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್) ಕಾಯ್ದೆಯ ಸೆಕ್ಷನ್ 21, 23 ಮತ್ತು 29 ರ ಅಡಿಯಲ್ಲಿ ಇದು ಶಿಕ್ಷಾರ್ಹ ಅಪರಾಧವಾಗಿದೆ. ಮಹಿಳೆ ವಿರುದ್ಧ ಕಸ್ಟಮ್ಸ್ ಅಧಿಕಾರಿ ಪ್ರಕರಣ ದಾಖಲಿಸಿಕೊಂಡಿದ್ದು, ಎನ್‍ಡಿಪಿಎಸ್ ಕಾಯ್ದೆಯ ಸೆಕ್ಷನ್ 43(ಬಿ) ಅಡಿಯಲ್ಲಿ ಆಕೆಯನ್ನು ಬಂಧಿಸಲಾಗಿದೆ. ಆಕೆಯ ಸೂಟ್‍ಕೇಸ್ ಟ್ರೋಲಿಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಮಹಿಳೆಯನ್ನು ಮೊದಲು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಕೆಗೆ ಕೋವಿಡ್ ನೆಗೆಟಿವ್ ಬಂದಿದೆ. ನಂತರ ಮಹಿಳೆಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ವೇಳೆ ಕಸ್ಟಮ್ಸ್ ಅಧಿಕಾರಿಗಳು, ಆಕೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಅಗತ್ಯವಿಲ್ಲ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಅಧಿಕಾರಿಗಳ ವಾದವನ್ನು ಆಲಿಸಿದ ನ್ಯಾಯಾಲಯ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಅನುಮತಿಸಿತು.  ಇದನ್ನೂ ಓದಿ: ‘ಉಜ್ವಲಾ ಯೋಜನೆ’ಯಡಿ 35 ಫಲಾನುಭವಿಗಳಿಗೆ ಸಿಲಿಂಡರ್ ವಿತರಣೆ

    ಪ್ರಸ್ತುತ ಆಕೆಯನ್ನು ನ್ಯಾಯಾಲಯ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮಹಿಳೆ ಬಗ್ಗೆ ಅಧಿಕಾರಿಗಳು ಯಾವುದೇ ರೀತಿಯ ಹೆಸರನ್ನು ಬಿಟ್ಟುಕೊಟ್ಟಿಲ್ಲ. ಆದರೆ ಆಕೆ ವಿಚ್ಛೇದನ ಪಡೆದುಕೊಂಡಿದ್ದಾಳೆ ಎಂದು ಮಾತ್ರ ಹೇಳಿದ್ದಾರೆ.

  • ಕೂದಲು ರಫ್ತಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

    ಕೂದಲು ರಫ್ತಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

    ನವದೆಹಲಿ: ಭಾರತದಿಂದ ಬೇರೆ ದೇಶಗಳಿಗೆ ಕೂದಲು ರಫ್ತು ಮಾಡುವುದಕ್ಕೆ ವಿದೇಶಿ ವ್ಯವಹಾರಗಳ ಮಹಾ ನಿರ್ದೇಶನಾಲಯ(ಡಿಜಿಎಫ್‍ಟಿ)ಕೆಲವು ನಿರ್ಬಂಧ ಹೇರಿದೆ.

    ಪರವಾನಗಿ ಇರುವವರು ಅಥವಾ ಡಿಜಿಎಫ್‍ಟಿಯಿಂದ ಅನುಮತಿ ಪಡೆದವರು ಮಾತ್ರವೇ ಕೂದಲು ರಪ್ತು ಮಾಡಬಹುದು. ಕೂದಲಿನ ಕಳ್ಳಸಾಗಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಾಗಿದೆ. ರಫ್ತುದಾರರು ಭಾರತದ ಹೊರಗೆ ಕೂದಲಿನ ಸಾಗಣೆಯನ್ನು ಕಳುಹಿಸಲು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದಿಂದ ಅನುಮತಿ ಅಥವಾ ಪರವಾನಗಿಯನ್ನು ಪಡೆಯಬೇಕಾಗುತ್ತದೆ ಎಂದು ಡಿಜಿಎಫ್‍ಟಿ ತಿಳಿಸಿದೆ.

    ದೇಶದಲ್ಲಿ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳನಾಡು ಅತಿ ಹೆಚ್ಚು ಕೂದಲು ರಪ್ತು ಮಡುವ ರಾಜ್ಯಗಳಾಗಿವೆ. ಭಾರತ ಈ ಆರ್ತೀಕ ವರ್ಷದ ಏಪ್ರಿಲ್-ನವೆಂಬರ್ ಅವಧಿಯಲ್ಲಿ 1 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಕೂದಲು ರಫ್ತು ಮಾಡಿದೆ.

    ಕೂದಲು ರಫ್ತುದಾರರು ಈ ಕ್ರಮವನ್ನು ಸ್ವಾಗತಿಸಿದ್ದಾರೆ.  ಮ್ಯಾನ್ಮಾರ್ ಮತ್ತು ಚೀನಾದಂತಹ ದೇಶಗಳಿಗೆ ಕಚ್ಚಾ ಮಾನವ ಕೂದಲನ್ನು ಕಳ್ಳಸಾಗಣೆ ಮಾಡುವ ವಿಚಿತ್ರ ಸವಾಲನ್ನು ಎದುರಿಸುತ್ತಿದೆ ಆರೋಪಿಸಿದ್ದಾರೆ. ಇದು ಸ್ಥಳೀಯ ಕೈಗಾರಿಕೆಗಳು ಮತ್ತು ರಫ್ತುಗಳಿಗೆ ಹಾನಿಯನ್ನುಂಟುಮಾಡುತ್ತಿದೆ. ಈಗ ಈ ನಿರ್ಬಂಧದಿಂದ, ನಿಜವಾದ ರಫ್ತುದಾರರು ಮಾತ್ರ ಉತ್ಪನ್ನವನ್ನು ರಫ್ತು ಮಾಡಲು ಸಾಧ್ಯವಾಗುತ್ತದೆ. ಇದು ತಮ್ಮ ಬಹುಕಾಲದ ಬೇಡಿಕೆಯಾಗಿದೆ ಎಂದು ಮಾನವ ಕೂದಲು ಮತ್ತು ಕೂದಲಿನ ಉತ್ಪನ್ನಗಳ ತಯಾರಕರು ಮತ್ತು ರಫ್ತುದಾರರ ಸಂಘ ಆಫ್ ಇಂಡಿಯಾ ಸುನೀಲ್ ಎಮಾನಿ ಹೇಳಿದ್ದಾರೆ.