Tag: ಕಳ್ಳಸಾಗಣಿಕೆ

  • ರಿಕ್ಷಾದಲ್ಲಿ ಬಿತ್ತನೆ ಬೀಜ ಸಾಗಾಟಕ್ಕೆ ಯತ್ನ – ರೈತರಿಂದ ದಿಢೀರ್ ದಾಳಿ

    ರಿಕ್ಷಾದಲ್ಲಿ ಬಿತ್ತನೆ ಬೀಜ ಸಾಗಾಟಕ್ಕೆ ಯತ್ನ – ರೈತರಿಂದ ದಿಢೀರ್ ದಾಳಿ

    ದಾವಣಗೆರೆ: ಬಿತ್ತನೆಗೆ ವಿತರಣೆ ಮಾಡಬೇಕಿದ್ದ ಶೇಂಗಾ ಬೀಜಗಳನ್ನು ಕಳ್ಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಜಾಲದವರ ಮೇಲೆ ರೈತರು ದಾಳಿ ನಡೆಸಿದ್ದಾರೆ.

    ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಚಿಕ್ಕ ಮಲ್ಲನಹೊಳೆ ಗ್ರಾಮದಲ್ಲಿ ದಾಳಿ ನಡೆಸಲಾಗಿದೆ. ಶೇಂಗಾ ಬೀಜವನ್ನು ಬೇರೆಡೆಗೆ ಗೂಡ್ಸ್ ಆಟೋ ಮೂಲಕ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ರೈತರು ದಾಳಿ ನಡೆಸಿದ್ದಾರೆ. ಗೂಡ್ಸ್ ಆಟೋ ಚಾಲಕ ಸೇರಿ ಇಬ್ಬರನ್ನು ರೈತರು ಜಗಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೈತರಿಗೆ ಸೇರಬೇಕಿದ್ದ ಬಿತ್ತನೆ ಶೇಂಗಾ ಬೀಜಗಳು ಎಲ್ಲಿಂದ ಎಲ್ಲಿಗೆ ತೆಗೆದುಕೊಂಡು ಹೋಗಲಾಗುತಿತ್ತು ಎಂಬುದರ ಕುರಿತಾಗಿ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

  • ಡ್ರಗ್ಸ್ ಬದಲು ಚಿನ್ನ ಕಳ್ಳಸಾಗಣೆ ಮಾಡಿ: ರಾಜಸ್ಥಾನ ಶಾಸಕ ಪ್ರಚೋದನಾಕಾರಿ ಹೇಳಿಕೆ ವೈರಲ್!

    ಡ್ರಗ್ಸ್ ಬದಲು ಚಿನ್ನ ಕಳ್ಳಸಾಗಣೆ ಮಾಡಿ: ರಾಜಸ್ಥಾನ ಶಾಸಕ ಪ್ರಚೋದನಾಕಾರಿ ಹೇಳಿಕೆ ವೈರಲ್!

    ಜೈಪುರ: ಡ್ರಗ್ಸ್ ಕಳ್ಳಸಾಗಣೆ ಮಾಡುವ ಬದಲು ಚಿನ್ನ ಕಳ್ಳ ಸಾಗಣೆ ಮಾಡಿ ಎಂದು ರಾಜಸ್ಥಾನದ ಜೋಧಪುರ ಜಿಲ್ಲೆಯ ಬಿಲಾರ ಕ್ಷೇತ್ರದ ಬಿಜೆಪಿ ಶಾಸಕ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ.

    ರಾಜ್ಯದಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ ಅತಿ ಹೆಚ್ಚು ನಡೆಯುತ್ತಿದ್ದು, ಯುವ ಪೀಳಿಗೆ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಕಳ್ಳಸಾಗಣೆಯಲ್ಲಿ ಬಿಶೋಯಿ ಸಮುದಾಯಕ್ಕಿಂತ ಹೆಚ್ಚು ದೇವಾಸಿ ಸಮುದಾಯದವರು ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮಾದಕ ದ್ರವ್ಯ ಕಳ್ಳಸಾಗಾಣಿಕೆಯಲ್ಲಿ ಸೆರೆ ಸಿಕ್ಕ ಇವರನ್ನು ಮಾದಕ ದ್ರವ್ಯ ಕೇಸ್ ಅಡಿಯಲ್ಲಿ ಬಂಧಿಸಿ ಜೋಧಪುರ ಜೈಲಿನಲ್ಲಿ ಇರಿಸಲಾಗಿದೆ.

    ಏನಿದು ವಿಡಿಯೋ?
    ಬಿಲಾರ ಕ್ಷೇತ್ರದ ಬಿಜೆಪಿ ಶಾಸಕ ಅರ್ಜುನ್ ಲಾಲ್ ಜಾರ್ಜ್ ರವರು ಕಳೆದ ಮೇ 7ರಂದು ಜೈತ್ವಾಸ್ ಗ್ರಾಮದ ದೇವಸ್ಥಾನ ಉದ್ಘಾಟನೆ ಸಮಾರಂಭದಲ್ಲಿ ದೇವಾಸಿ ಸಮುದಾಯವನ್ನು ಕುರಿತು ಹೇಳಿಕೆ ನೀಡಿದ್ದಾರೆ. ನೀವು ಡ್ರಗ್ಸ್ ಕಳ್ಳಸಾಗಣೆ ಮಾಡುವ ಬದಲು ಚಿನ್ನ ಕಳ್ಳ ಸಾಗಣೆ ಮಾಡಿ ಎಂದಿದ್ದಾರೆ. ಚಿನ್ನ ಮತ್ತು ಡ್ರಗ್ಸ್ ಬೆಲೆಗಳು ಒಂದೇ ಆಗಿದೆ. ಈ ಡ್ರಗ್ಸ್ ಕೇಸ್‍ನಲ್ಲಿ ನಿಮಗೆ ಯಾವುದೇ ಕಾರಣಕ್ಕೂ ಬೇಲ್ ಸಿಗುವುದಿಲ್ಲ, ಚಿನ್ನದ ಕಳ್ಳಸಾಗಣೆಯಲ್ಲಿ ನಿಮಗೆ ಬೇಲ್ ಸುಲಭವಾಗಿ ಸಿಗುವುದು. ಡ್ರಗ್ಸ್ ಕೇಸ್‍ನಲ್ಲಿ ಸಿಕ್ಕಿ ಬೀಳೊಕ್ಕಿಂತ ಚಿನ್ನ ಕದ್ದು ಸಿಕ್ಕಿ ಬಿದ್ರೆ ಮರ್ಯಾದೆ ಜಾಸ್ತಿ ಎಂದು ಹೇಳಿದ್ದಾರೆ. ಶಾಸಕರ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಕುರಿತಂತೆ ರೇಖಾ ಮಹಾ ಸಭಾದ ಜಿಲ್ಲಾ ಕಾರ್ಯದರ್ಶಿಯವರು ಜಾರ್ಜ್ ರವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು ದೇವಾಸಿ ಸುಮುದಾಯದವರು ಹೆಮ್ಮೆ ಪಟ್ಟುಕೊಳ್ಳುವ ವಿಚಾರವಲ್ಲ ಹಾಗೂ ಯಾವುದೇ ಕಳ್ಳ ಸಾಗಣೆಯಲ್ಲಿ ಸಿಕ್ಕರೆ ಶಿಕ್ಷೆ ತಪ್ಪಿದ್ದಲ್ಲ ಎಂದು ಹೇಳಿದ್ದಾರೆ.