Tag: ಕಳ್ಳರ ಗ್ಯಾಂಗ್

  • ಪೊಲೀಸರ ಮೇಲೆ ಹಲ್ಲೆ, ಪರಾರಿಗೆ ಯತ್ನ – ದರೋಡೆಕೋರನ ಕಾಲಿಗೆ ಗುಂಡೇಟು

    ಪೊಲೀಸರ ಮೇಲೆ ಹಲ್ಲೆ, ಪರಾರಿಗೆ ಯತ್ನ – ದರೋಡೆಕೋರನ ಕಾಲಿಗೆ ಗುಂಡೇಟು

    ಗದಗ: ಹೈಟೆಕ್ ದರೋಡೆ ಗ್ಯಾಂಗ್ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗುವ ವೇಳೆ ಪೊಲೀಸರಿಂದ ಗುಂಡೇಟು ತಿಂದ ಘಟನೆ ಜಿಲ್ಲೆಯ ಮುಂಡರಗಿ (Mundaragi) ತಾಲೂಕಿನ ಡಂಬಳ (Dambala) ಹಾಗೂ ಡೋಣಿ ಗ್ರಾಮದ ಮಧ್ಯೆ ನಡೆದಿದೆ.

    ಆರೋಪಿ ಜಯಸಿಂಹ ಮೊಡಕೆರ್ ಎಡಗಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ದರೋಡೆಕೋರನ ಕಾಲಿಗೆ ಎರಡು ಸುತ್ತು ಗುಂಡೇಟು ಹಾರಿಸಿದ್ದಾರೆ. ಇದನ್ನೂ ಓದಿ: ಮೋದಿ ಖಾಸಗಿ ಕಾರ್ಯದರ್ಶಿಯಾಗಿ ಯುವ ಐಎಫ್‌ಎಸ್‌ ಅಧಿಕಾರಿ ನಿಧಿ ತಿವಾರಿ ನೇಮಕ

    ಈ ನಟೋರಿಯಸ್ ಗ್ಯಾಂಗ್ ಮೊಬೈಲ್ ಸಂಪರ್ಕ ಬಿಟ್ಟು ಇನ್ಸ್ಟಾದ ಮೂಲಕ ಸಂಪರ್ಕ ಹೊಂದಿದ್ದರು. ಕಳ್ಳತನ, ದರೋಡೆ ಮಾಡಿ ಮಾಹಿತಿ ಸಿಗದಂತೆ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನುಸುತ್ತಿದ್ದ ಗ್ಯಾಂಗ್‌ನನ್ನು ಬಂಧಿಸುವಲ್ಲಿ ಕೊನೆಗೂ ಗದಗ ಪೊಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕೊನೆಗೂ ಭಾವಿ ಪತಿಯ ಫೋಟೋ ಹಂಚಿಕೊಂಡ ‘ಹುಡುಗರು’ ಚಿತ್ರದ ನಟಿ ಅಭಿನಯ

    ಆರೋಪಿ ಮಂಜುನಾಥ ಮೊಡಕೆರ್, ರಮೇಶ್ ಮೊಡಕೆರ್ ಹಾಗೂ ಜಯಸಿಂಹ ಮೊಡಕೆರ್‌ರನ್ನು ಪೊಲೀಸ್ ವಾಹನದಲ್ಲಿ ಠಾಣೆಗೆ ಕರೆತರುತ್ತಿದ್ದರು. ಜಯಸಿಂಹ ಕೈಗೆ ಹಾಕಿದ್ದ ಬೇಡಿಯಿಂದ ಪೊಲೀಸ್ ಸಿಬ್ಬಂದಿ ವೀರೇಶ್ ಬಿಸ್ನಳ್ಳಿ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ಮುಂಡರಗಿ ಸಿಪಿಐ ಮಂಜುನಾಥ ಕುಸುಗಲ್ ಅವರು ಆರೋಪಿ ಜಯಸಿಂಹನ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ದರೋಡೆ, ಮನೆ ಕಳ್ಳತನ ಸೇರಿದಂತೆ ಹಲವು ಪ್ರಕರಣದ ಮೋಸ್ಟ್ ವಾಟೆಂಡ್ ನಟೋರಿಯಸ್ ದರೋಡೆಕೋರ ಗ್ಯಾಂಗ್ ಇದಾಗಿತ್ತು. ಇದನ್ನೂ ಓದಿ: 300 ಕಿಮೀ ವೇಗದಲ್ಲಿ ಚಾಲನೆ; ಲ್ಯಾಂಬೊರ್ಗಿನಿ ಕಾರು ಹತ್ತಿಸಿ ಫುಟ್‌ಪಾತ್‌ನಲ್ಲಿದ್ದ ಕಾರ್ಮಿಕರಿಗೆ ಗಾಯ!

    ಗಾಯಾಳು ಆರೋಪಿ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಎಸ್.ಪಿ, ಬಿ.ಎಸ್ ನೇಮಗೌಡ ಭೇಟಿ ನೀಡಿ ಪರಿಶೀಲನೆ ಮಾಡಿದರು. ಆರೋಪಿ ಜಯಸಿಂಹ ಮೊಡಕೆರ್ ಹಾಗೂ ಪೊಲೀಸ್ ಸಿಬ್ಬಂದಿ ವೀರೇಶ್ ಬಿಸ್ನಳ್ಳಿ ಆರೋಗ್ಯ ವಿಚಾರಿಸಿದರು.

  • ಬಾಗಿಲು ಮುರಿದು ಕಳ್ಳತನ – ನಾಲ್ವರು ಅರೆಸ್ಟ್, 5 ಕೆಜಿ ಚಿನ್ನ ವಶ

    ಬಾಗಿಲು ಮುರಿದು ಕಳ್ಳತನ – ನಾಲ್ವರು ಅರೆಸ್ಟ್, 5 ಕೆಜಿ ಚಿನ್ನ ವಶ

    ರಾಮನಗರ: ಮಾಗಡಿ ಪಟ್ಟಣದಲ್ಲಿ ಮನೆಯ ಬಾಗಿಲು ಮುರಿದು ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಕಳ್ಳತನ ಮಾಡಿದ್ದ ಪ್ರಕರಣದ ನಾಲ್ವರು ಆರೋಪಿಗಳನ್ನು ಮಾಗಡಿ ಪೊಲೀಸರು (Magadi Police) ಬಂಧಿಸಿದ್ದಾರೆ.

    ಸಾಧಿಕ್, ಖಾಲಿದ್, ಹಂಜಾ ಹಾಗೂ ಚೂರಿಕಟ್ಟೆ ಶಿವ ಬಂಧಿತ ಆರೋಪಿಗಳು. ಬಂಧಿತರಿಂದ 4 ಕೋಟಿ ರೂ. ಮೌಲ್ಯದ 5 ಕೆಜಿ 500 ಗ್ರಾಂ ಚಿನ್ನಾಭರಣ, ನಗದು ಹಾಗೂ 1 ಆಲ್ಟೋ ಕಾರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಹೊಸ ವಿವಾದದಲ್ಲಿ ನಿತ್ಯಾನಂದ – ವರ್ಷಕ್ಕೆ 8.96 ಲಕ್ಷ, ಬೊಲಿವಿಯಾದಲ್ಲಿ ಬೆಂಗಳೂರಿನ 5 ಪಟ್ಟು ಭೂಮಿ ಲೀಸ್‌ಗೆ ಪಡೆದು ವಂಚನೆ

    ಆರೋಪಿ ಸಾಧಿಕ್ ತನ್ನ ಸಹಚರರೊಂದಿಗೆ ಸೇರಿ ಕಾರಿನಲ್ಲಿ ಬಂದು, ಬೀಗ ಹಾಕಿದ ಮನೆಗಳನ್ನು ಗುರುತಿಸಿ, ಮನೆಯಲ್ಲಿ ಯಾರೂ ಇಲ್ಲವೆಂದು ಖಚಿತಪಡಿಸಿಕೊಂಡು ಬಳಿಕ ರಾತ್ರಿ ವೇಳೆ ಮನೆಯ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದರು. ಇದನ್ನೂ ಓದಿ: ರಾಯಚೂರಿನಲ್ಲಿ ಹೆಚ್ಚುತ್ತಿರುವ ಬೆಕ್ಕು ಜ್ವರ – 38 ಬೆಕ್ಕು ಸಾವು

    ಈ ನಾಲ್ವರ ಗ್ಯಾಂಗ್ ತರೀಕೆರೆ, ಬೇಲೂರು, ಸಾಗರ ಟೌನ್, ಮೂಡಿಗೆರೆ, ಕೆ.ಆರ್.ಪೇಟೆ ಟೌನ್, ಮಂಡ್ಯ ಗ್ರಾಮಾಂತರ, ಹಳೇಬೀಡು, ಹೊಳೇನರಸಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಮಾಗಡಿ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ರಾಜಣ್ಣಗೆ ಪರಮೇಶ್ವರ್‌ ನ್ಯಾಯ ಕೊಡಿಸೋ ಕೆಲ್ಸ ಮಾಡ್ತಾರೆ: ಡಿಕೆಶಿ

  • ಪ್ರೀತಿಸುವ ನಾಟಕವಾಡಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

    ಪ್ರೀತಿಸುವ ನಾಟಕವಾಡಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

    ಬೆಂಗಳೂರು: ಕೊರೊನಾ ಸಮಯದಲ್ಲಿ ಪ್ರೀತಿ ನಾಟಕವಾಡಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಸದಸ್ಯರನ್ನು ಬಂಧಿಸುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತರನ್ನು ಮುನೇಂದ್ರ, ನಾಗೇಶ್, ನವೀನ್, ಶಂಶಾಕ್, ಮಹೇಂದ್ರ ಹಾಗೂ ಅಣ್ಣಮ್ಮ ಎಂದು ಗುರುತಿಸಲಾಗಿದೆ. ಈ ಗ್ಯಾಂಗ್ ಯುವತಿಯಿಂದ ಕರೆ ಮಾಡಿಸಿ ಯುವಕರನ್ನು ಯಾರು ಇಲ್ಲದ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ನಂತರ ಅವರನ್ನು ಹೆದರಿಸಿ ಅವರ ಹತ್ತಿರ ಇದ್ದ ಹಣವನ್ನು ಕಸಿದುಕೊಂಡು ಕಳುಹಿಸುತ್ತಿತ್ತು.

    ಇತ್ತೀಚೆಗೆ ಈ ಗ್ಯಾಂಗ್ ಆನೇಕಲ್‍ನ ಕಿರಣ್‍ಗೆ ಯುವತಿಯಿಂದ ಕರೆ ಮಾಡಿಸಿ. ಪ್ರೀತಿ ಪ್ರೇಮದ ನಾಟಕವಾಡಿಸಿದ್ದಾರೆ. ನಂತರ ಒಂದು ದಿನ ಯುವತಿ ಕಾಲ್ ಮಾಡಿ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾಳೆ. ಅಲ್ಲಿ ಈ ಗ್ಯಾಂಗ್‍ನ ಯುವಕರು ಕಿರಣ್‍ನನ್ನು ಹೆದರಿಸಿ ಸುಲಿಗೆ ಮಾಡಿದ್ದರು. ಈ ವಿಚಾರವಾಗಿ ಕಿರಣ್ ಆನೇಕಲ್ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.

  • ಉಮಾಮಹೇಶ್ವರಿ ದೇವಾಲಯದಲ್ಲಿ ಕಳ್ಳತನ – ದೇವಸ್ಥಾನಗಳೇ ಗ್ಯಾಂಗ್‍ನ ಟಾರ್ಗೆಟ್

    ಉಮಾಮಹೇಶ್ವರಿ ದೇವಾಲಯದಲ್ಲಿ ಕಳ್ಳತನ – ದೇವಸ್ಥಾನಗಳೇ ಗ್ಯಾಂಗ್‍ನ ಟಾರ್ಗೆಟ್

    ಮಡಿಕೇರಿ: ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಸಮೀಪದ ಕೊಳಕೇರಿ ಗ್ರಾಮದ ಉಮಾಮಹೇಶ್ವರಿ ದೇವಾಲಯದ ಗಣಪತಿ ವಿಗ್ರಹ, ಹುಂಡಿ, ಬೆಳ್ಳಿ ಚೆಂಬು ಮತ್ತು ಎರಡು ಬೆಳ್ಳಿ ತಟ್ಟೆಗಳನ್ನು ಕಳ್ಳರು ದೋಚಿರುವ ಪ್ರಕರಣ ಕಳೆದ ರಾತ್ರಿ ನಡೆದಿದೆ.

    ಹುಂಡಿಯ ಬೀಗ ಮುರಿದು ಸುಮಾರು 40 ಸಾವಿರ ಹಣವನ್ನು ಕದ್ದಿರುವ ಕಳ್ಳರು, ಹೊರ ಭಾಗದಲ್ಲಿದ್ದ ಗಣಪತಿ ಗುಡಿಯ ಬೀಗ ಒಡೆದು ಒಳಗಿದ್ದ ಪಂಚಲೋಹದ ವಿಗ್ರಹವನ್ನು ಕದ್ದಿದ್ದಾರೆ.

    ಮುಖ್ಯ ಗರ್ಭಗುಡಿಯ ಬೀಗ ಒಡೆದಿದ್ದು, ಅಲ್ಲಿದ್ದ ಬೆಳ್ಳಿಯ ಒಂದು ಚೆಂಬು ಮತ್ತು ಎರಡು ಬೆಳ್ಳಿ ತಟ್ಟೆಗಳನ್ನು ಕದ್ದಿರುವುದು ಬೆಳಕಿಗೆ ಬಂದಿದೆ. ಆದರೆ ಗರ್ಭಗುಡಿಯಲ್ಲಿದ್ದ ಗಣಪತಿ ದೇವರ ಪಾಣಿಪೀಠ ಮತ್ತು ಪ್ರಭಾವಳಿಯನ್ನು ಅಲ್ಲಿಯೇ ಬಿಟ್ಟಿದ್ದು, ಮುಖ್ಯ ಗರ್ಭಗುಡಿಯಲ್ಲಿದ್ದ ಶಿವಲಿಂಗದ ಪ್ರಭಾವಳಿ ಮತ್ತು ಅಲ್ಲಿದ್ದ ಉತ್ಸವ ಮೂರ್ತಿಯ ಪ್ರಭಾವಳಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೋಗಿರುವುದು ಕಂಡು ಬಂದಿದೆ.

    ಇಂದು ಬೆಳಗ್ಗೆ 6 ಗಂಟೆಗೆ ಮುಕ್ಕಾಟಿರ ಅಣ್ಣಯ್ಯ ಅವರು ದೇವಸ್ಥಾನಕ್ಕೆ ಆಗಮಿಸಿದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಸುದ್ದಿ ಹಬ್ಬುತ್ತಿದ್ದಂತೆ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ರೆಮ್ಮಿ ನಾಣಯ್ಯ ಸೇರಿದಂತೆ ಎಲ್ಲಾ ಗ್ರಾಮಸ್ಥರು ದೇವಾಲಯದಲ್ಲಿ ಸೇರಿದರು.

    ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ದಿವಾಕರ್, ಜಿಲ್ಲಾ ಅಪರಾಧ ಪತ್ತೆ ದಳದ ಎಎಸ್‍ಐ ಹಮೀದ್, ನಾಪೋಕ್ಲು ಠಾಣಾಧಿಕಾರಿ ಆರ್. ಮಂಚಯ್ಯ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೇ ಕಳೆದ 15 ದಿನಗಳ ಹಿಂದೆ ಮಡಿಕೇರಿ ನಗರದ ಐತಿಹಾಸಿಕ ದೇವಾಲಯ ಕರವಲೆ ಭಗವತಿ ದೇವಸ್ಥಾನಲ್ಲೂ ಇದೇ ರೀತಿ ಕಳ್ಳತನವಾಗಿತ್ತು.

  • ಸಿಲಿಕಾನ್ ಸಿಟಿಗೆ ಲಗ್ಗೆಯಿಟ್ಟಿದೆ ದನ ಕಳ್ಳರ ಗ್ಯಾಂಗ್!

    ಸಿಲಿಕಾನ್ ಸಿಟಿಗೆ ಲಗ್ಗೆಯಿಟ್ಟಿದೆ ದನ ಕಳ್ಳರ ಗ್ಯಾಂಗ್!

    ಬೆಂಗಳೂರು: ಸಿಲಿಕಾನ್ ಸಿಟಿಗೆ ಕೂಡ ದನ ಕಳ್ಳರ ಗ್ಯಾಂಗೊಂದು ಲಗ್ಗೆ ಇಟ್ಟಿದೆ. ಮನೆಯ ಮುಂದೆ ಕಟ್ಟಿರುವ ದನಗಳನ್ನ ಖದೀಮರು ರಾತ್ರೋರಾತ್ರಿ ಸಾಗಿಸುತ್ತಾರೆ.

    ದನಗಳನ್ನ ಕಳ್ಳತನ ಮಾಡಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ. ಬೆಂಗಳೂರಿನ ಮಾರತಹಳ್ಳಿ ಬಳಿ ಸುಮಾರು 10 ಕ್ಕೂ ದನಗಳನ್ನ ಕಳ್ಳತನ ಮಾಡಿದ್ದಾರೆ. ನರೇಶ್ ಎಂಬವರ ನಾಲ್ಕು ದನಗಳನ್ನ ಕಳವು ಮಾಡಿದ್ದಾರೆ.

    ಈ ಕುರಿತು ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

  • ಬೆಂಗಳೂರಿಗೂ ಕಾಲಿಟ್ಟ ಚಡ್ಡಿ ಗ್ಯಾಂಗ್ – ಅರೆಬೆತ್ತಲಾಗಿ ಬಂದು ಕಳ್ಳತನ ಮಾಡ್ತಾರೆ – ವಿಡಿಯೋ ನೋಡಿ

    ಬೆಂಗಳೂರಿಗೂ ಕಾಲಿಟ್ಟ ಚಡ್ಡಿ ಗ್ಯಾಂಗ್ – ಅರೆಬೆತ್ತಲಾಗಿ ಬಂದು ಕಳ್ಳತನ ಮಾಡ್ತಾರೆ – ವಿಡಿಯೋ ನೋಡಿ

    ಬೆಂಗಳೂರು: ದಂಡುಪಾಳ್ಯ ಗ್ಯಾಂಗ್ ಬಳಿಕ ನಗರಕ್ಕೆ ಮತ್ತೊಂದು ಕಳ್ಳರ ಗ್ಯಾಂಗ್ ಕಾಲಿಟ್ಟಿದೆ. ಅರೆಬೆತ್ತಲಾಗಿ ಲಾಂಗು, ಮಚ್ಚು ಹಿಡಿದು, ಮೈಗೆ ಎಣ್ಣೆ ಹಚ್ಚಿಕೊಂಡು ಗ್ಯಾಂಗ್‍ವೊಂದು ಕಳ್ಳತನಕ್ಕೆ ಯತ್ನಿಸಿರುವ ಪ್ರಕರಣಗಳು ನಗರದ ಹೊರವಲಯದ ಬನ್ನೇರುಘಟ್ಟ ಸುತ್ತಮುತ್ತಲಿನ ಪ್ರದೇಶದ ಮನೆಗಳಲ್ಲಿ ನಡೆದಿದೆ.

    ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವ ಮುಸುಕುದಾರಿ ಗ್ಯಾಂಗ್ ಅರೆಬೆತ್ತಲಾಗಿ ಆಗಮಿಸಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಬನ್ನೇರುಘಟ್ಟ, ಜಿಗಣಿ ಕೈಗಾರಿಕ ಪ್ರದೇಶದಲ್ಲಿ ಗ್ಯಾಂಗ್ ಕಾಣಿಸಿಕೊಂಡಿದ್ದು ಹೊರವಲಯದ ಮನೆಗಳ ಬಳಿ ಕಳ್ಳತನಕ್ಕೆ ಬಂದು ವಿಫಲ ಯತ್ನ ನಡೆಸಿ ವಾಪಸ್ಸಾಗಿದೆ. ಬನ್ನೇರುಘಟ್ಟ, ಸಕಲವಾರ, ಮಂಟಪಾ ಗ್ರಾಮಗಳ ಕೆಲ ಮನೆಗಳಿಗೆ ಕಳ್ಳತನಕ್ಕೆಂದು ಬಂದ ಗ್ಯಾಂಗ್‍ನ ಚಲನವಲನಗಳು ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಘಟನೆ ಜೂನ್ 7ರಂದು ನಡೆದಿದ್ದು, ಗ್ಯಾಂಗ್ ಬನ್ನೇರುಘಟ್ಟದ ಹಲವೆಡೆಗಳಲ್ಲಿ ಸಂಚರಿಸಿದ್ದ ಕಳ್ಳತನಕ್ಕೆ ಯತ್ನಿಸಿದೆ. ಸದ್ಯ ಸಿಸಿಟಿವಿ ದೃಶ್ಯ ಆಧಾರಿಸಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಗ್ಯಾಂಗ್ ಪತ್ತೆಗೆ ಈಗಾಗಲೇ ಪೊಲೀಸರು ಬಲೆ ಬೀಸಿದ್ದು ತಮಿಳುನಾಡು ಕಡೆಯಿಂದ ಈ ಗ್ಯಾಂಗ್ ಬಂದಿರಬಹುದು ಎಂಬ ಶಂಕೆ ಪೊಲೀಸ್ ವಲಯದಲ್ಲಿ ವ್ಯಕ್ತವಾಗಿದೆ.

    ಇನ್ನು ಆನೇಕಲ್, ಅತ್ತಿಬೆಲೆ ಗಡಿಭಾಗ ಸೇರಿದಂತೆ ಈ ಗ್ಯಾಂಗ್ ಬಗ್ಗೆ ಪೊಲೀಸರು ಎಲ್ಲಾ ಠಾಣೆಗಳಿಗೆ ಮಾಹಿತಿ ನೀಡಿದ್ದು ಅವರ ಚಲನವಲನ ಕಂಡು ಬಂದಲ್ಲಿ ಸೆರೆಹಿಡಿಯುವಂತೆ ಮಾಹಿತಿ ನೀಡಿದ್ದಾರೆ.

    https://www.youtube.com/watch?v=zA1Y_tlISQQ