Tag: ಕಳ್ಳಭಟ್ಟಿ

  • ರಾಯಚೂರಲ್ಲಿ ಅಬಕಾರಿ ಪೊಲೀಸ್ ದಾಳಿ – ಸಾವಿರಾರು ಲೀಟರ್ ಕಳ್ಳಭಟ್ಟಿ ಜಪ್ತಿ

    ರಾಯಚೂರಲ್ಲಿ ಅಬಕಾರಿ ಪೊಲೀಸ್ ದಾಳಿ – ಸಾವಿರಾರು ಲೀಟರ್ ಕಳ್ಳಭಟ್ಟಿ ಜಪ್ತಿ

    ರಾಯಚೂರು: ಜಿಲ್ಲಾ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ ಏಕಕಾಲದಲ್ಲಿ ದಾಳಿ ನಡೆಸಿ ಸಾವಿರಾರು ಲೀಟರ್ ನಷ್ಟು ಕಳ್ಳಭಟ್ಟಿ ತಯಾರಿಕೆಗೆ ಬಳಸುವ ಬೆಲ್ಲದ ಕೊಳೆ ಜಪ್ತಿ ಮಾಡಿದ್ದಾರೆ.

    ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಜಕ್ಕೆರುಮಡು ತಾಂಡದಲ್ಲಿ ದಾಳಿ ನಡೆಸಿ ಕಾಳಪ್ಪ, ಪೊನ್ನಪ್ಪ ರಾಥೋಡ್ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಐವತ್ತಕ್ಕೂ ಅಧಿಕ ಸಿಬ್ಬಂದಿಗಳು ಏಕಕಾಲದಲ್ಲಿ ದಾಳಿ ಮಾಡಿದ್ದು ಕಳ್ಳಭಟ್ಟಿ ತಯಾರಿಕೆಯಲ್ಲಿ ತೊಡಗಿದ್ದ ತಾಂಡಾ ನಿವಾಸಿಗಳು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.

    ದಾಳಿ ಸಂದರ್ಭದಲ್ಲಿ ಪೊಲೀಸ್ ಮತ್ತು ಕೆಲ ತಾಂಡಾ ನಿವಾಸಿಗಳೊಂದಿಗೆ ಮಾತಿನ ಚಕಮಕಿ ನಡೆದಿದೆ. ದಾಳಿ ಬಳಿಕ ಅಧಿಕಾರಿಗಳು ಕಳ್ಳಭಟ್ಟಿ ಕೊಳೆ ಹಾಗೂ ಕೊಡಗಳನ್ನು ನೆಲದಲ್ಲಿ ಹೂತು ಹಾಕಿದ್ದಾರೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆದಿದ್ದು ಪ್ರಕರಣ ದಾಖಲಿಸಲಾಗಿದೆ. ಲಾಕ್‍ಡೌನ್ ಹಿನ್ನೆಲೆ ಮದ್ಯ ಮಾರಾಟ ನಿಷೇಧವಾಗಿರುವುದರಿಂದ ಅಕ್ರಮ ಮದ್ಯಕ್ಕೆ ಡಿಮ್ಯಾಂಡ್ ಬಂದಿದೆ. ಹೀಗಾಗಿ ಕಳ್ಳಭಟ್ಟಿ ದಂಧೆ ಜಿಲ್ಲೆಯಲ್ಲಿ ಜೋರಾಗಿ ನಡೆದಿದೆ.

    ನಿರಂತರವಾಗಿ ದಾಳಿ ನಡೆಸಿರುವ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಲಿಂಗಸುಗೂರು ತಾಲೂಕಿನಲ್ಲಿ ಭರ್ಜರಿ ಬೇಟೆಯಾಡಿದ್ದಾರೆ. ಇಡೀ ತಾಂಡವೇ ಕಳ್ಳಭಟ್ಟಿಯಲ್ಲಿ ತೊಡಗಿದ್ದು ಸಾವಿರಾರು ಲೀಟರ್ ಕಳ್ಳಭಟ್ಟಿ ಕೊಳೆ ಜಪ್ತಿ ಮಾಡಿದ್ದಾರೆ.

  • ಟೈರ್ ಟ್ಯೂಬ್‍ನಲ್ಲಿ ಸಾಗಿಸುತ್ತಿದ್ದ 300 ಲೀಟರ್ ಕಳ್ಳಭಟ್ಟಿ ವಶ

    ಟೈರ್ ಟ್ಯೂಬ್‍ನಲ್ಲಿ ಸಾಗಿಸುತ್ತಿದ್ದ 300 ಲೀಟರ್ ಕಳ್ಳಭಟ್ಟಿ ವಶ

    ಚಿಕ್ಕೋಡಿ (ಬೆಳಗಾವಿ): ಟೈರ್ ಟ್ಯೂಬ್‍ನಲ್ಲಿ ಸಾಗಿಸುತ್ತಿದ್ದ 300 ಲೀಟರ್ ಕಳ್ಳಭಟ್ಟಿಯನ್ನು ಹುಕ್ಕೇರಿ ತಾಲೂಕಿನ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಕೊರೊನಾ ವೈರಸ್ ಹರಡದಂತೆ ತಡೆದಲು ಕೇಂದ್ರ ಸರ್ಕಾರವು ದೇಶಾದ್ಯಂತ ಮೇ 3ರವರೆಗೂ ಲಾಕ್‍ಡೌನ್ ಘೋಷಿಸಿದೆ. ಇದರಿಂದಾಗಿ ಮದ್ಯ ಮಾರಾಟ ಬಂದ್ ಆಗಿದ್ದು, ಎಣ್ಣೆ ಪ್ರಿಯರು ಪರದಾಡುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಕಳ್ಳಭಟ್ಟಿ ದಂಧೆಕೋರರು ಮತ್ತೆ ಹೆಡೆ ಬಿಚ್ಚುತ್ತಿದ್ದು, ದಿನದಿಂದ ದಿನಕ್ಕೆ ಕಳ್ಳಭಟ್ಟಿ ತಯಾರಿಕೆ ಹೆಚ್ಚುತ್ತಲೇ ಇದೆ. ಇದರಿಂದಾಗಿ ಹುಕ್ಕೇರಿ ತಾಲೂಕಿನ ಅಬಕಾರಿ ಪೊಲೀಸರು ಕಳ್ಳ ಭಟ್ಟಿ ದಂಧೆಕೋರರ ಮೇಲೆ ದಾಳಿ ನಡೆಸಿ ಒಂದೇ ದಿನ ಯಮಕನಮರಡಿ ಹಾಗೂ ಹುಕ್ಕೇರಿ ಮತಕ್ಷೇತ್ರದಲ್ಲಿ 300 ಲೀಟರ್ ಕಳ್ಳಭಟ್ಟಿ ವಶಕ್ಕೆ ಪಡೆದುಕೊಡಿದ್ದಾರೆ.

    ಪ್ರತ್ಯೇಕ ಸ್ಥಳಗಳಲ್ಲಿ ಇಂದು ಪೊಲೀಸರು ದಾಳಿ ನಡೆಸಿ, ಕಳ್ಳಭಟ್ಟಿಯನ್ನ ವಶಕ್ಕೆ ಪಡೆದಿದ್ದಾರೆ. ಆದರೆ ಆರೋಪಿ ಬರುವ ಮಾಹಿತಿ ತಿಳಿದು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಗೆ ಬಲೆ ಬೀಸಿದೆ.

    ಲಾಕ್‍ಡೌನ್ ಆದಾಗಿನಿಂದ ಈವರೆಗೂ ಹುಕ್ಕೇರಿ ಅಬಕಾರಿ ಠಾಣೆಯ ಅಧಿಕಾರಿಗಳು 13 ಪ್ರಕರಣಗಳಲ್ಲಿ 5 ಜನರನ್ನು ಬಂಧಿಸಿದ್ದು, 450 ಲೀಟರ್ ಕಳ್ಳಭಟ್ಟಿ ವಶಕ್ಕೆ ಪಡೆಯಲಾಗಿದೆ. ಅಲ್ಲದೇ 11 ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಲಾಗಿದೆ. ಮಹಾರಾಷ್ಟ್ರದ ಗಡಿ ಭಾಗದಲ್ಲಿ ಮಾರುತ್ತಿದ್ದ 10 ಲೀಟರ್ ಮದ್ಯವನ್ನು ಹುಕ್ಕೇರಿ ಅಬಕಾರಿ ಪೊಲೀಸರು ಸೀಜ್ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಅಬಕಾರಿ ದಾಳಿಯಲ್ಲಿ ನಿರೀಕ್ಷಕ ಸತೀಶ್ ಕಾಗಲಿ, ಉಪ ನೀರಿಕ್ಷಕ ಮಲ್ಲೇಶ ಉಪ್ಪಾರ, ಮಲಿಕಸಾಬ್ ಪಾಶ್ಚಾಪೂರೆ, ಸಿಬ್ಬಂದಿ ಜಿ.ಡಿ.ಗಾಡೆ, ಬಸವರಾಜ, ಶಿವಾನಂದ ಚಿಕ್ಕಮಠ, ಬಸನಗೌಡ ಪಾಟೀಲ, ಕಾಡೇಶಿ ಗಡಾದ, ಉಮೇಶ್ ಕೋಳಿ, ಸುಶಾಂತ ಗುಗ್ಗರಿ ಇದ್ದರು.