Tag: ಕಳ್ಳತನ

  • ಮಧ್ಯರಾತ್ರಿ ಕಿಟಕಿಯಿಂದ ಕೈ ಹಾಕಿ ನಿದ್ದೆಯಲ್ಲಿದ್ದ ಮಹಿಳೆಯ ಚಿನ್ನದ ಸರ ಕಿತ್ತ ಕಳ್ಳ

    ಮಧ್ಯರಾತ್ರಿ ಕಿಟಕಿಯಿಂದ ಕೈ ಹಾಕಿ ನಿದ್ದೆಯಲ್ಲಿದ್ದ ಮಹಿಳೆಯ ಚಿನ್ನದ ಸರ ಕಿತ್ತ ಕಳ್ಳ

    ಬೆಂಗಳೂರು: ಮಧ್ಯರಾತ್ರಿ ಕಿಟಕಿಯಿಂದ ಕೈ ಹಾಕಿ ನಿದ್ದೆಯಲ್ಲಿದ್ದ ಮಹಿಳೆಯ ಚಿನ್ನದ ಸರವನ್ನು ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಕಿಟಕಿ ಮೂಲಕ ನಿದ್ದೆ ಮಾಡ್ತಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರ ಕಿತ್ತು ಎಸ್ಕೇಪ್ ಆಗಿದ್ದ ಖತರ್ನಾಕ್ ಕಳ್ಳನನ್ನು ಬಂಧಿಸಲಾಗಿದೆ. ಸೈಯದ್ ಅಸ್ಲಾಂ ಬಂಧಿತ ಮನೆಗಳ್ಳ. ಎರಡು ತಿಂಗಳ ಹಿಂದೆ ಸಾಯಿ ಲೇಔಟ್ ನಿವಾಸಿಯೊಬ್ಬರು ಮನೆಯಲ್ಲಿ ಮಲಗಿದ್ದಾಗ ಕಿಟಕಿ ಒಳಗಿಂದ ಕೈ ಹಾಕಿ ಮಾಂಗಲ್ಯ ಸರ ಕದ್ದಿದ್ದ. ಕತ್ತಿನ ಬಳಿ ಏನೋ ಸ್ಪರ್ಶವಾದಂತಾಗಿ ಮಹಿಳೆ ಎಚ್ಚರಗೊಂಡು ನೋಡಿದಾಗ ಮಾಂಗಲ್ಯ ಸರ ಮಂಗಮಾಯವಾಗಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಡಹಗಲೇ ಪ್ರಿಯಕರನಿಂದ ವಿದ್ಯಾರ್ಥಿನಿಯ ಬರ್ಬರ ಕೊಲೆ

    ಮಹಿಳೆ ನೀಡಿದ ದೂರು ದಾಖಲಿಸಿಕೊಂಡ ವಿದ್ಯಾರಣ್ಯಪುರಂ ಪೊಲೀಸರು ಮೈಸೂರಿನ ಸೈಯದ್ ಅಸ್ಲಾಂನನ್ನು ಬಂಧಿಸಿದ್ದಾರೆ. ಕಳ್ಳನಿಂದ 23 ಲಕ್ಷದ 126 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ, ವಾಚ್, ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆಯಲ್ಲಿ ಆರೋಪಿ ಬೇರೆ ಬೇರೆ ಕಡೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿ ಕೊಟ್ಟ ಮಾಹಿತಿ ಮೇರೆಗೆ 23 ಲಕ್ಷ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.

  • ರಾಯಚೂರಿನಲ್ಲಿ ನಿಲ್ಲದ ಮನೆಗಳ್ಳರ ಹಾವಳಿ – ಸಿಸಿಟಿವಿಯಲ್ಲಿ ಕಳ್ಳರ ಚಲನವಲನ ಕಂಡು ನಿವಾಸಿಗಳು ಶಾಕ್‌

    ರಾಯಚೂರಿನಲ್ಲಿ ನಿಲ್ಲದ ಮನೆಗಳ್ಳರ ಹಾವಳಿ – ಸಿಸಿಟಿವಿಯಲ್ಲಿ ಕಳ್ಳರ ಚಲನವಲನ ಕಂಡು ನಿವಾಸಿಗಳು ಶಾಕ್‌

    ರಾಯಚೂರು: ಬಿಸಿಲನಾಡು ರಾಯಚೂರು (Raichuru) ಜಿಲ್ಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಬೇರೆ ಬೇರೆ ಗ್ಯಾಂಗ್‌ಗಳು ಆಕ್ಟಿವ್ ಆಗಿದ್ದು, ಸಿಸಿಟಿವಿಯಲ್ಲಿ ಕಳ್ಳರ ಚಲನವಲನ ಕಂಡು ಜನರು ಬೆಚ್ಚಿಬಿದ್ದಿದ್ದಾರೆ.

    ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಮನೆಗಳಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿಕೊಳ್ಳಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಸಿಸಿಟಿವಿ ಕ್ಯಾಮರಾಗಳಲ್ಲಿ ಕಳ್ಳರ ಚಲನವಲನಗಳು ಸೆರೆಯಾಗುತ್ತಿವೆ ಹೊರತು ಕಳ್ಳತನ ಪ್ರಕರಣಗಳು ಕಡಿಮೆಯಾಗಿಲ್ಲ. ಬೇರೆ ಬೇರೆ ಗ್ಯಾಂಗ್‌ಗಳು ನಗರ ಹಾಗೂ ಜಿಲ್ಲೆಯ ವಿವಿಧೆಡೆ ಆಕ್ಟಿವ್ ಆಗಿದ್ದು, ಕಳ್ಳತನಕ್ಕೆ ಯತ್ನಿಸುವ ದೃಶ್ಯಗಳು ಜನರನ್ನು ಭಯಭೀತರನ್ನಾಗಿಸಿವೆ.ಇದನ್ನೂ ಓದಿ: ಕುರುಬರನ್ನು ಎಸ್‌ಟಿಗೆ ಸೇರಿಸಿದರೆ ST ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು: ಸಿದ್ದರಾಮಯ್ಯ

    ಕೆಲವೆಡೆ ಕಳ್ಳರ ಗ್ಯಾಂಗ್ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ರೆ, ಇನ್ನೂ ಕೆಲವೆಡೆ ರಾಜಾರೋಷವಾಗಿ ಓಡಾಡಿಕೊಂಡು ಮನೆಗಳ್ಳತನ ಮಾಡುತ್ತಿದ್ದಾರೆ. ಬೆಳಗಿನ ಜಾವದಲ್ಲಿ ಕಳ್ಳರು ಓಡಾಡುವ ದೃಶ್ಯಗಳು ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗುತ್ತಿದ್ದು, ಸಾರ್ವಜನಿಕರು ಪೊಲೀಸರಿಗೆ ರಕ್ಷಣೆಗಾಗಿ ಒತ್ತಾಯಿಸಿದ್ದಾರೆ. ರಾತ್ರಿ, ಬೆಳಗಿನ ಜಾವದಲ್ಲಿ ಹೆಚ್ಚು ಬೀಟ್ ಹಾಕುವಂತೆ ಮನವಿ ಮಾಡಿದ್ದಾರೆ. ರೈಲು ನಿಲ್ದಾಣ, ರೈಲು ಹಳಿ ಅಕ್ಕಪಕ್ಕದ ಮನೆಗಳನ್ನ ಕಳ್ಳರು ಟಾರ್ಗೆಟ್ ಮಾಡುತ್ತಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಅಂತ ಆಗ್ರಹಿಸಿದ್ದಾರೆ.

    ರಾಯಚೂರು ನಗರ ಸೇರಿದಂತೆ ಹಲವೆಡೆ ನಡೆಯುತ್ತಿರುವ ಕಳ್ಳತನ ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳ ಕಳ್ಳರು ಪತ್ತೆಯಾಗಿಲ್ಲ. ಪಕ್ಕದ ಆಂಧ್ರಪ್ರದೇಶ, ತೆಲಂಗಾಣದಿಂದಲೂ ಕಳ್ಳರ ಕಾಟ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.ಇದನ್ನೂ ಓದಿ: ಕೆಮ್ಮಿನ ಸಿರಪ್‌ ಸೇವಿಸಿ ಮಕ್ಕಳ ಸಾವು ಪ್ರಕರಣ – ಸುಪ್ರೀಂಕೋರ್ಟ್‌ಗೆ ಪಿಐಎಲ್

  • ದಸರಾ ನೋಡಲು ಹೋಗಿದ್ದ ಉದ್ಯಮಿ ಮನೆಯಲ್ಲಿ ಕಳ್ಳತನ – 12 ಲಕ್ಷ ಮೌಲ್ಯದ ಚಿನ್ನ, 29 ಲಕ್ಷ ಕ್ಯಾಶ್ ಕಳವು

    ದಸರಾ ನೋಡಲು ಹೋಗಿದ್ದ ಉದ್ಯಮಿ ಮನೆಯಲ್ಲಿ ಕಳ್ಳತನ – 12 ಲಕ್ಷ ಮೌಲ್ಯದ ಚಿನ್ನ, 29 ಲಕ್ಷ ಕ್ಯಾಶ್ ಕಳವು

    ಚಾಮರಾಜನಗರ: ದಸರಾ ನೋಡಲು ಹೋಗಿದ್ದ ಉದ್ಯಮಿ ಮನೆಗೆ ಕನ್ನ ಹಾಕಿರುವ ಘಟನೆ ನಡೆದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಘಟನೆ ನಡೆದಿದೆ. ದಸರಾ ಲೈಟಿಂಗ್ಸ್ ನೋಡಲು ಮೈಸೂರಿಗೆ ಕುಟುಂಬಸ್ ಹೋಗಿದ್ದರು. ಉಮೇಶ್ ಅವರು ಹೆಂಡತಿ ಸವಿತಾ ಮತ್ತು ಇಬ್ಬರು ಮಕ್ಕಳು ಮೈಸೂರು ದಸರಾ ಲೈಟಿಂಗ್ ನೋಡಲು ಮನೆಗೆ ಬೀಗ ಹಾಕಿಕೊಂಡು ತೆರಳಿದ್ದರು.

    ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಖದೀಮರು ಮನೆ ಬಾಗಿಲು ಮುರಿದು ಬೀರುವಿನಲ್ಲಿದ್ದ ಸುಮಾರು 29 ಲಕ್ಷ ರೂ. ನಗದು ಮತ್ತು ಚಿನ್ನದ ತಾಳಿಸರ, ನೆಕ್ಷೇಸ್, ಬಳೆಗಳು, ಸಣ್ಣ ಚೈನ್ ಗಳು, ಓಲೆಗಳು, ಮುತ್ತಿನ ಸರ ಸೇರಿದಂತೆ ಒಟ್ಟು 300 ಗ್ರಾಂ ಚಿನ್ನಾಭರಣ (12 ಲಕ್ಷ ಮೌಲ್ಯ) ಹಾಗೂ 2 ಕೆ.ಜಿ ಬೆಳ್ಳಿ ನಾಣ್ಯ, 2 ರೇಷ್ಮೆ ಸೀರೆ ಮತ್ತು 2 ದುಬಾರಿ ವಾಚ್ ಸೇರಿದಂತೆ ಒಟ್ಟು 42.70 ಲಕ್ಷ ರೂ. ಮೌಲ್ಯದ ಹಣ ಹಾಗೂ ಚಿನ್ನಾಭರಣ ಕದ್ದೊಯ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಗುಂಡ್ಲುಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೀದರ್ | ಮನೆಯ ಬೀಗ ಮುರಿದು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ

    ಬೀದರ್ | ಮನೆಯ ಬೀಗ ಮುರಿದು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ

    ಬೀದರ್: ಮನೆಯ ಬೀಗ ಮುರಿದು 10 ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಬೀದರ್ (Bidar) ಜಿಲ್ಲೆಯ ಭಾಲ್ಕಿ (Bhalki) ಪಟ್ಟಣದ ಬಾಲಾಜಿ ನಗರದಲ್ಲಿ ನಡೆದಿದೆ.

    ಜಾಲೇಂದರ್ ಭೀಮಣ್ಣ ಮತ್ರೆ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಕಳ್ಳರು ಕೈಚಳಕ ತೋರಿಸಿದ್ದಾರೆ. 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ 250 ಗ್ರಾಂ ಬೆಳ್ಳಿ ಆಭರಣಗಳು ಕದ್ದು ಪರಾರಿಯಾಗಿದ್ದಾರೆ.ಇದನ್ನೂ ಓದಿ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ – ಯೋಗ ಗುರು ನಿರಂಜನಾ ಮೂರ್ತಿ ಅರೆಸ್ಟ್

    ಮಾಲೀಕರು ಮನೆಗೆ ಮರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಶ್ವಾನದಳದಿಂದ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ವಾಕಿಂಗ್‌ ಹೋಗುತ್ತಿದ್ದ ಮಹಿಳೆಯ ಕುತ್ತಿಗೆಗೆ ಲಾಂಗ್‌ – ಬೆದರಿಸಿ ಸರ ಕಿತ್ತ ದರೋಡೆಕೋರರು

    ವಾಕಿಂಗ್‌ ಹೋಗುತ್ತಿದ್ದ ಮಹಿಳೆಯ ಕುತ್ತಿಗೆಗೆ ಲಾಂಗ್‌ – ಬೆದರಿಸಿ ಸರ ಕಿತ್ತ ದರೋಡೆಕೋರರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೈಕಿನಲ್ಲಿ (Bike) ಆಗಮಿಸಿ ಸರಗಳ್ಳತನ ಮಾಡುತ್ತಿದ್ದ ದುಷ್ಕರ್ಮಿಗಳು ಇದೀಗ ಮಹಿಳೆಯರ ಕುತ್ತಿಗೆಗೆ ಲಾಂಗ್ ಇಟ್ಟು ಸರ ಕಸಿದು ಪರಾರಿಯಾಗುತ್ತಿದ್ದಾರೆ.

    ಕೈಯಲ್ಲಿ ಲಾಂಗ್ ಹಿಡಿದು ಮಹಿಳೆಯರನ್ನು ಬೆದರಿಸಿ ಚಿನ್ನದ (Gold) ಸರ ಕಳ್ಳತನ ಮಾಡುವ ಇವರ ಕೃತ್ಯ ನೋಡಿದರೆ ಎಂಥವರಿಗೂ ಭಯ ಹುಟ್ಟುತ್ತೆ.

    ಗಿರಿನಗರ, ಕೋಣನಕುಂಟೆಯ ಆರ್‌ಬಿಐ ಲೇಔಟ್ ನಲ್ಲಿ ಲಾಂಗ್ ಹಿಡಿದು ಸರಗಳ್ಳರು ಕಳ್ಳತನ ಮಾಡಿದ್ದಾರೆ. ಶನಿವಾರ ರಾತ್ರಿ ಗಿರಿನಗರದಲ್ಲಿ ಲಾಂಗ್ ಬೀಸಿ ವರಲಕ್ಷ್ಮೀ ಎಂಬವರ ಕೈ ಬೆರಳು ತುಂಡರಿಸಿ ಚಿನ್ನದ ಸರ ಕಸಿದು ಪರಾರಿಯಾಗಿದ್ದರು.  ಇದನ್ನೂ ಓದಿ: ಕೆಲಸದಿಂದ ತೆಗೆದಿದ್ದಕ್ಕೆ ಸಿಟ್ಟು; ಫುಡ್ ಡೆಲಿವರಿ ನೆಪದಲ್ಲಿ ವೃದ್ಧೆ ಕೈ-ಕಾಲು ಕಟ್ಟಿಹಾಕಿ 8 ಲಕ್ಷ ದರೋಡೆ

     

    ಅದೇ ದಿನ ಕೋಣನಕುಂಟೆಯ ಆರ್‌ಬಿಐ ಲೇಔಟ್ ನಲ್ಲೂ ಲಾಂಗ್ ತೋರಿಸಿ ನಡೆದುಕೊಂಡು ಬರುತ್ತಿದ್ದ ಇಬ್ಬರು ಮಹಿಳೆಯರಿಗೆ ಬೆದರಿಸಿ ಸರ ಕಸಿದು ಪರಾರಿಯಾಗಿದ್ದಾರೆ.

    ಮಹಿಳೆಗೆ ಲಾಂಗ್ ಹಿಡಿದು ಬೆದರಿಸುವ ವೀಡಿಯೊ ಲಭ್ಯವಾಗಿದ್ದು ದರೋಡೆಕೋರರ ಅಟ್ಟಹಾಸ ಭಯ ಹುಟ್ಟಿಸುವಂತಿದೆ. ಸದ್ಯ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

  • ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    – ಸಿಬ್ಬಂದಿಯನ್ನು ಕಟ್ಟಿ ಹಾಕಿ ದೋಚಿದ ಕಳ್ಳರು

    ವಿಜಯಪುರ: ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಬ್ಯಾಂಕ್‌ನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿರುವ ಘಟನೆ ನಡೆದಿದೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಚಡಚಣ ಪಟ್ಟಣದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ನಲ್ಲಿ (SBI Bank) ದರೋಡೆ (Robbery) ನಡೆದಿದೆ.

    ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್, ಮಾರಕಾಸ್ತ್ರಗಳನ್ನು ತೋರಿಸಿ ತೋರಿಸಿ ಕಟ್ಟಿಹಾಕಿ ಕಳ್ಳರು ಕಳ್ಳತನ ಮಾಡಿದ್ದಾರೆ. ಬ್ಯಾಂಕ್ ವಹಿವಾಟು ಸಮಯ ಮುಗಿದ ಮೇಲೆ ಬ್ಯಾಂಕ್‌‌ಗೆ 5ಕ್ಕೂ ಹೆಚ್ಚು ಮುಸುಕುಧಾರಿಗಳು ನುಗ್ಗಿ ಕೃತ್ಯ ಎಸಗಿದ್ದಾರೆ.

     

    ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬ್ಯಾಂಕ್‌‌ನಲ್ಲಿ ಎಷ್ಟು ಹಣ ಕಳ್ಳತನದ ಆಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಅಂದಾಜು 8 ಕೋಟಿ ರೂ. ನಗದು ಹಣ ಹಾಗೂ ಸುಮಾರು 50 ಕೆಜಿಗೂ ಆಧಿಕ ಚಿನ್ನಾಭರಣ ದರೋಡೆಯಾಗಿರೋ ಶಂಕೆ ವ್ಯಕ್ತವಾಗಿದೆ.

    ಪೊಲೀಸರು ಬ್ಯಾಂಕಿನ ಸಿಸಿ ಕ್ಯಾಮೆರಾ ಮತ್ತು ಹಾರ್ಡ್‌ ಡಿಸ್ಕ್‌ ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರ ಸಂಪರ್ಕಿಸುವ ಹಾಗೂ ಚಡಚಣದ ಇತರೇ ರಸ್ತೆಗಳಿಗೂ ಪೊಲೀಸರು ನಾಕಾ ಬಂದಿ ಹಾಕಿ ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

    ಬ್ಯಾಂಕ್‌ನಲ್ಲಿ ಚಿನ್ನಾಭರಣ ಇಟ್ಟ ಗ್ರಾಹಕರಲ್ಲಿ ಆತಂಕ ಎದುರಾಗಿದ್ದು ಭಾರೀ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಜಮಾವಣೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ಜನರನ್ನು ಚದುರಿಸುವ ಕೆಲಸ ಮಾಡುತ್ತಿದ್ದಾರೆ.

  • ಮಗನ ಮದ್ವೆಗಾಗಿ ಇಟ್ಟಿದ್ದ 300 ಗ್ರಾಂ ಚಿನ್ನ, 10 ಲಕ್ಷ ಮೌಲ್ಯದ ಬೆಳ್ಳಿ, 3 ಲಕ್ಷ ಹಣ ಕಳವು

    ಮಗನ ಮದ್ವೆಗಾಗಿ ಇಟ್ಟಿದ್ದ 300 ಗ್ರಾಂ ಚಿನ್ನ, 10 ಲಕ್ಷ ಮೌಲ್ಯದ ಬೆಳ್ಳಿ, 3 ಲಕ್ಷ ಹಣ ಕಳವು

    – ಬಾಗಿಲು ಮುರಿಯದೇ, ಬೀಗ ಒಡೆಯದೇ ಚಿನ್ನದ ಗಣಿ ಹೊತ್ತೊಯ್ದ ಕಳ್ಳ

    ಬೆಂಗಳೂರು: ಎರಡು ಮೂರು ದಿನ ಮನೆ ಬಿಟ್ಟು ಹೊರಗೆ ಹೋಗುವ ಮುನ್ನ ಎಚ್ಚರ ವಹಿಸಬೇಕಾದ ಸ್ಟೋರಿ ಇದು. ಹೌದು. ಬರಿಗೈಯಲ್ಲಿ ಬಂದ ಕಳ್ಳನೊಬ್ಬ (Thief) ಬಾಗಿಲು ಮುರಿಯದೇ, ಬೀಗ ಒಡೆಯದೇ ಒಳಗೆ ನುಗ್ಗಿ ಚಿನ್ನದ ಗಣಿಯನ್ನೇ ದೋಚಿರುವ ಘಟನೆ ಸಿಲಿಕಾನ್‌ ಸಿಟಿಯಲ್ಲಿ ನಡೆದಿದೆ.

    ವಿಂಡೋ ಓಪನ್ ಮಾಡಿ ಲಾಕ್‌ನ ಸ್ಕ್ರೂ ಬಿಚ್ಚಿ ಮಗನ ಮದುವೆಗೆ ಮನೆಯಲ್ಲಿಟ್ಟಿದ್ದ ಹಣ, ಚಿನ್ನಾಭರಣವನ್ನ (Gold Jewellery) ಹೊತ್ತೊಯ್ದಿದ್ದಾನೆ. ಇದನ್ನೂ ಓದಿ: ಬೆಂಗಳೂರಲ್ಲಿ ಟ್ರಯಾಂಗಲ್ ಲವ್ ಸ್ಟೋರಿಗೆ ಯುವಕ ಬಲಿ

    ಬಗಲಗುಂಟೆ ರಾಮಯ್ಯ ಬಡಾವಣೆಯಲ್ಲಿ ದರ್ಶನ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದ್ದು, 45 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಮೂರು ಲಕ್ಷ ನಗದು ದೋಚಿ ಪರಾರಿಯಾಗಿದ್ದಾನೆ. ಒಂದೂವರೆ ಗಂಟೆಗಳ ಕಾಲ ಮನೆಯ ಮೂಲೆ ಮೂಲೆ ಹುಡುಕಿರುವ ಕತರ್ನಾಕ್ ಕಳ್ಳ ಬರುವಾಗ ಬರಿಗೈಲಿ ಬಂದು ವಾಪಸ್ ಆಗುವಾಗ ಬ್ಯಾಗ್ ಸಮೇತ ಹೋಗುವ ದೃಶ್ಯ ಲಭ್ಯವಾಗಿದೆ.

    300 ಗ್ರಾಂ ಗೋಲ್ಡ್, 10 ಲಕ್ಷ ಬೆಲೆ ಬಾಳುವ ಬೆಳ್ಳಿ, 3ಲಕ್ಷ ನಗದು ಒಂದು ಹೊಸ ಮೊಬೈಲ್ ಬಾಕ್ಸ್ ದೋಚಿ ಪರಾರಿಯಾಗಿದ್ದಾನೆ. ಖತರ್ನಾಕ್ ಕಳ್ಳ ಬರಿಗೈಲಿ ಬಂದು ಬ್ಯಾಗ್ ತುಂಬಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ರೋಗಿ ಜೊತೆ ಸೆಕ್ಸ್ – ಕೆನಡಾದಲ್ಲಿ ಭಾರತ ಮೂಲದ ವೈದ್ಯೆಯ ಮೆಡಿಕಲ್ ಲೈಸೆನ್ಸ್ ಅಮಾನತು

    ಘಟನೆ ಸಂಬಂಧ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಬಗಲಗುಂಟೆ ಪೊಲೀಸರು ಕಳ್ಳನಿಗಾಗಿ ಹುಡುಕಾಟ ನಡೆಸ್ತಿದ್ದಾರೆ. ಇದನ್ನೂ ಓದಿ: ಭಟ್ಕಳ ಅರಣ್ಯದಲ್ಲಿ ಗೋವುಗಳ ನರಮೇಧ? – ನೂರಾರು ಗೋವುಗಳ ಎಲುಬುಗಳು ಪತ್ತೆ; ಪೊಲೀಸರಿಂದ ತನಿಖೆ

  • Kolar| ದೇವಾಲಯ, ಮನೆ ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    Kolar| ದೇವಾಲಯ, ಮನೆ ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    – 3.78 ಲಕ್ಷ ರೂ. ಮೌಲ್ಯದ ಚಿನ್ನ, 380 ಗ್ರಾಂ ಬೆಳ್ಳಿ ಆಭರಣಗಳು ವಶಕ್ಕೆ

    ಕೋಲಾರ: ದೇವಾಲಯ, ಮನೆ ಕಳವು (Theft) ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಕೋಲಾರದ (Kolar) ಕಾಮಸಮುದ್ರ ಪೊಲೀಸರು (Kamasamudra Police) ಬಂಧಿಸಿದ್ದಾರೆ.

    ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯ ನಿಮ್ಮಕಂಪಲ್ಲಿ ಗ್ರಾಮದ ವಾಸಿ ಕೆ.ಚಿನ್ನಸ್ವಾಮಿ (57), ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ವಾಸಿ ಮಣಿ ಬಾಬು (55) ಬಂಧಿತ ಆರೋಪಿಗಳು. ಬಂಗಾರಪೇಟೆ ತಾಲೂಕಿನ ಕುಂದರಸನಹಳ್ಳಿ ಗ್ರಾಮದ ಕಾಳಿಕಾಂಭ ದೇವಸ್ಥಾನ, ದೋಣಿಮಡಗು ಗ್ರಾಮದ ಸತೀಶ್‌ರೆಡ್ಡಿ, ಸೀನಪ್ಪ ಕೊಂಗರಹಳ್ಳಿ ಗ್ರಾಮದ ವೆಂಕಟೇಶಪ್ಪ, ಮುನಿಯಮ್ಮ, ಶೇಖ್ ಲಿಯಾಕತ್ ಮತ್ತು ಗೌರಮ್ಮ ಮನೆಗಳಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿತ್ತು. ಈ ಹಿನ್ನೆಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬದುಕಲು ಸಾಧ್ಯವಾಗುತ್ತಿಲ್ಲ, ದಯಮಾಡಿ ನನಗೆ ವಿಷ ಕೊಡಿ: ಜಡ್ಜ್‌ ಮುಂದೆ ದರ್ಶನ್‌ ಮನವಿ

    ಬಂಧಿತರಿಂದ 3.78 ಲಕ್ಷ ರೂ. ಮೌಲ್ಯದ 34 ಗ್ರಾಂ ಚಿನ್ನಾಭರಣ, 380 ಗ್ರಾಂ ಬೆಳ್ಳಿ ಆಭರಣಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಂದು ದ್ವಿಚಕ್ರವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಯಾದಗಿರಿ | ಅಕ್ಕಿ ಅಕ್ರಮ ಮಾರಾಟ ಜಾಲ ಪತ್ತೆ – 1.17 ಕೋಟಿ ಮೌಲ್ಯದ 4,108 ಕ್ವಿಂಟಾಲ್ ಸೀಜ್

  • ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಎಗರಿಸುತ್ತಿದ್ದ ಖತರ್ನಾಕ್ ಕಳ್ಳಿ ಅಂದರ್

    ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಎಗರಿಸುತ್ತಿದ್ದ ಖತರ್ನಾಕ್ ಕಳ್ಳಿ ಅಂದರ್

    ಚಾಮರಾಜನಗರ: ಗ್ರಾಹಕರ ಸೋಗಿನಲ್ಲಿ ಜ್ಯುವೆಲರಿ ಶಾಪ್‌ಗೆ ಹೋಗಿ ಚಿನ್ನದ ಸರ ಎಗರಿಸುತ್ತಿದ್ದ ಖತರ್ನಾಕ್ ಕಳ್ಳಿಯನ್ನು ಚಾಮರಾಜನಗರ ಪಟ್ಟಣ ಪೊಲೀಸರು (Chamarajanagar Town Police) ಬಂಧಿಸಿದ್ದಾರೆ.

    ಲೀಲಾ ಬಂಧಿತ ಕಳ್ಳಿ. ಈಕೆ ಆಭರಣ ಖರೀದಿಸುವ ನೆಪದಲ್ಲಿ ಚಾಮರಾಜನಗರದ ಜ್ಯುವೆಲರಿ ಶಾಪ್‌ಗೆ ಎಂಟ್ರಿ ಕೊಟ್ಟು, 9 ಗ್ರಾಂ ಚಿನ್ನದ ಸರ ಹಾಗೂ ಪಿರಿಯಾಪಟ್ಟಣದಲ್ಲಿ 5 ಗ್ರಾಂನ ಒಡವೆಯನ್ನು ಕಳ್ಳತನ ಮಾಡಿದ್ದಳು. ಇದನ್ನೂ ಓದಿ: ʻಬುರುಡೆʼ ಕೇಸ್‌ | ಮತ್ತೊಂದು ರಹಸ್ಯ ಸ್ಫೋಟ – ಕಾಡಿನಿಂದ ಬರುಡೆ ತಂದಿದ್ದ ಒರಿಜಿನಲ್ ವಿಡಿಯೋ ಲಭ್ಯ

    ಅಂಗಡಿಯ ಸಿಬ್ಬಂದಿಯನ್ನು ಯಾಮಾರಿಸಿ ಆರೋಪಿಯು ಚಿನ್ನ ಕಳ್ಳತನ ಮಾಡುತ್ತಿದ್ದಳು. ಕಳ್ಳಿಯ ಕೈಚಳಕದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಖತರ್ನಾಕ್ ಕಳ್ಳಿಯನ್ನು ಚಾಮರಾಜನಗರ ಪಟ್ಟಣ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಕಾರು ಸಮೇತ ಲಕ್ಷ ಲಕ್ಷ ಹಣ ಕದ್ದು ಪರಾರಿ – ಸಿನಿಮೀಯ ಶೈಲಿಯಲ್ಲಿ ಆರೋಪಿ ಅರೆಸ್ಟ್

    ಕಾರು ಸಮೇತ ಲಕ್ಷ ಲಕ್ಷ ಹಣ ಕದ್ದು ಪರಾರಿ – ಸಿನಿಮೀಯ ಶೈಲಿಯಲ್ಲಿ ಆರೋಪಿ ಅರೆಸ್ಟ್

    – ನಿವೃತ್ತ ಪೊಲೀಸ್‌ಗೆ ಚಾಲಾಕಿ ಚಾಲಕ ವಂಚನೆ

    ಚಿತ್ರದುರ್ಗ: ಕಾರು ಚಾಲಕರನ್ನೇ ನಂಬಿ ಎಷ್ಟೋ ಜನರು ದೂರದೂರಿಗೆ ಪ್ರಯಾಣ ಮಾಡುತ್ತಾರೆ. ಆದರೆ ಇಲ್ಲೊಬ್ಬ ಚಾಲಾಕಿ ಚಾಲಕ ಕಾರು ಸಮೇತ ಲಕ್ಷಾಂತರ ರೂ. ಕದ್ದು (Money Theft) ಪಾರಾರಿಯಾಗಿದ್ದ. ಪೊಲೀಸರು ಸಿನಿಮೀಯ ಶೈಲಿಯಲ್ಲಿ ಆರೋಪಿ ಬೆನ್ನತ್ತಿ ಹೆಡೆಮುರಿ ಕಟ್ಟಿದ್ದಾರೆ.

    ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ (Challakere) ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ ನಿವೃತ್ತ ಎಸ್ಪಿ ಗುರುಪ್ರಸಾದ್ ತಮ್ಮ ಪತ್ನಿಯೊಂದಿಗೆ ಬಳ್ಳಾರಿಯಲ್ಲಿ ಜಮೀನು ಮಾರಾಟ ಮಾಡಲು ಬಾಡಿಗೆ ಕಾರಿನಲ್ಲಿ ತೆರಳಿದ್ದರು. ಅಲ್ಲಿ ಸರಿ ಸುಮಾರು 97 ಲಕ್ಷ ರೂ.ಗೆ ಜಮೀನು ಮಾರಾಟ ಮಾಡಿದ್ದು, ಕಾರಲ್ಲಿಯೇ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಈ ಮಧ್ಯೆ ಚಳ್ಳಕೆರೆಯಲ್ಲಿ ಊಟಕ್ಕೆಂದು ಕಾರು ನಿಲ್ಲಿಸಿ ತೆರಳಿದ್ದರು. ಆಗ ಕಾರು ಚಾಲಕ ಇವರಿಗೆ ಗೊತ್ತಿಲ್ಲದೇ 97 ಲಕ್ಷ ಹಣದೊಂದಿಗೆ ಕಾರು ಸಮೇತ ಪರಾರಿಯಾಗಿದ್ದ. ಇದನ್ನೂ ಓದಿ: ಏಕಾಂಗಿ ನಿರೂಪಣೆ ಬಳಿಕ ಹೊಸ ಮನ್ವಂತರಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ

    ಈ ಬಗ್ಗೆ ನಿವೃತ್ತ ಎಸ್ಪಿ ಗುರುಪ್ರಸಾದ್ ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಚ್ಚೆತ್ತ ಪೊಲೀಸರ ತಂಡ ಕಳ್ಳನ ಪತ್ತೆಗೆ ಬಲೆ ಬೀಸಿದ್ದರು. ಆರೋಪಿ ರಮೇಶ್ ಮೂಲತಃ ಆಂಧ್ರದ ಹಿಂದೂಪುರ ಮೂಲದವನಾದ ಹಿನ್ನೆಲೆ ಆಂಧ್ರದತ್ತ ಪ್ರಯಾಣ ಬೆಳೆಸಿ ಸಿನಿಮಾ ಶೈಲಿಯಲ್ಲಿ ಚೇಸ್ ಮಾಡಿದ್ದರು. ಆಂಧ್ರದ ಬಳಿ ರಮೇಶ್ ಕಾರು ಮರಕ್ಕೆ ಡಿಕ್ಕಿಯಾಗಿತ್ತು. ಕೂಡಲೇ ಆರೋಪಿಯನ್ನು ಸೆರೆಹಿಡಿದ ಪೊಲೀಸರು 97 ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: Jammu Kashmir | ಅಕ್ರಮವಾಗಿ ಗಡಿ ನುಸುಳಲು ಯತ್ನ – ಇಬ್ಬರು ಉಗ್ರರ ಎನ್‌ಕೌಂಟರ್

    ಆರೋಪಿ ರಮೇಶ್ ಚಳ್ಳಕೆರೆ ಪಟ್ಟಣದ ಹೋಟೆಲ್ ಬಳಿಯಿಂದ ಕಾರು ಸಮೇತ ಎಸ್ಕೇಪ್ ಆಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಜಾಡು ಹಿಡಿದು ಬೆನ್ನತ್ತಿದ್ದ ಪೊಲೀಸರು ಆತನ ಹೆಡೆಮುರಿಕಟ್ಟಿದ್ದಾರೆ. ಇದನ್ನೂ ಓದಿ: ಉಕ್ರೇನ್ ರಷ್ಯಾ ಯುದ್ಧವನ್ನು ಮೋದಿ ಯುದ್ಧ ಎಂದು ಕರೆದ ಅಮೆರಿಕ