Tag: ಕಳ್ಳ

  • ಕಳ್ಳ ಎಂದು ಅಟ್ಟಾಡಿಸಿದ ಗ್ರಾಮಸ್ಥರು – ಭಯದಿಂದ ತೆಂಗಿನ ಮರವೇರಿ ಕುಳಿತ ಯುವಕ

    ಕಳ್ಳ ಎಂದು ಅಟ್ಟಾಡಿಸಿದ ಗ್ರಾಮಸ್ಥರು – ಭಯದಿಂದ ತೆಂಗಿನ ಮರವೇರಿ ಕುಳಿತ ಯುವಕ

    ಗದಗ: ಇಲ್ಲಿನ ವಿವೇಕಾನಂದ ನಗರ ಬಡಾವಣೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಹೈಡ್ರಾಮಾ ನಡೆದಿದೆ. ಕಳ್ಳತನದ ಆರೋಪದ ಮೇಲೆ ಗ್ರಾಮಸ್ಥರು ಬೆನ್ನಟ್ಟಿದಾಗ, ಯುವಕ ಭಯದಿಂದ ತೆಂಗಿನ ಮರವೇರಿ ಕುಳಿತ ಘಟನೆ ನಡೆದಿದೆ.

    ಬಸವರಾಜ್ ಸೊಲ್ಲಾಪುರ ಎಂಬ ಯುವಕ ಸುಮಾರು 40 ಅಡಿ ಎತ್ತರದ ತೆಂಗಿನ ಮರವನ್ನು ಏರಿ ಕುಳಿತಿದ್ದಾನೆ. ಮೂಲತಃ ಬೆಳಗಾವಿ ಜಿಲ್ಲೆಯ ಕಬ್ಬೂರು ಗ್ರಾಮದ ನಿವಾಸಿಯಾಗಿರುವ ಬಸವರಾಜ್, ನಸುಕಿನ ಜಾವ ರೈಲಿನಲ್ಲಿ ಬಂದು ಗದಗದಲ್ಲಿ ಇಳಿದಿದ್ದ. ನಂತರ ವಿವೇಕಾನಂದ ಬಡಾವಣೆಯ ಮನೆ ಬಾಗಿಲು ಬಡಿದಿದ್ದ ಎನ್ನಲಾಗಿದೆ. ಇದನ್ನೂ ಓದಿ: ದಾವಣಗೆರೆ | ಇಬ್ಬರು ಬೈಕ್ ಕಳ್ಳರ ಬಂಧನ – 16.52 ಲಕ್ಷ ಮೌಲ್ಯದ 30 ಬೈಕ್ ವಶಕ್ಕೆ

    ಇದರಿಂದ ಭಯಗೊಂಡ ಸ್ಥಳೀಯರು ಆತನನ್ನು ಕಳ್ಳ ಎಂದು ಶಂಕಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ವಾಹನದ ಸೈರನ್ ಶಬ್ದ ಕೇಳುತ್ತಿದ್ದಂತೆ ಭಯಗೊಂಡ ಬಸವರಾಜ್, ತಪ್ಪಿಸಿಕೊಳ್ಳಲು ತೆಂಗಿನ ಮರ ಏರಿದ್ದ.

    ಸ್ಥಳೀಯರು ಕೆಳಗೆ ಇಳಿಯುವಂತೆ ಸಾಕಷ್ಟು ಮನವಿ ಮಾಡಿಕೊಂಡರೂ ಇಳಿಯದೇ ಸುಮಾರು ಎರಡರಿಂದ ಮೂರು ಗಂಟೆಗೂ ಹೆಚ್ಚು ಕಾಲ ಮರದಲ್ಲೇ ಕುಳಿತಿದ್ದ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯರ ಸಹಾಯದಿಂದ ಸುರಕ್ಷಿತವಾಗಿ ಆತನನ್ನು ಕೆಳಗಿಳಿಸಿದ್ದಾರೆ. ನಂತರ ಯುವಕನನ್ನು ಬೆಟಗೇರಿ ಬಡಾವಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

  • ಕಳ್ಳನ ಜೊತೆಗೆ ಪೊಲೀಸಪ್ಪ ರೂಮ್ ಶೇರ್ – ಕರ್ತವ್ಯ ಲೋಪ; ಪೇದೆ ಸಸ್ಪೆಂಡ್

    ಕಳ್ಳನ ಜೊತೆಗೆ ಪೊಲೀಸಪ್ಪ ರೂಮ್ ಶೇರ್ – ಕರ್ತವ್ಯ ಲೋಪ; ಪೇದೆ ಸಸ್ಪೆಂಡ್

    – ಪೊಲೀಸ್ ಯೂನಿಫಾರ್ಮ್ ಧರಿಸಿ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದ ಕಳ್ಳ

    ಬೆಂಗಳೂರು: ಕೈತುಂಬಾ ಸಂಬಳ ಇದ್ರೂ, ಕಳ್ಳನ ಜೊತೆ ರೂಮ್ ಶೇರ್ ಮಾಡಿ ಕರ್ತವ್ಯ ಲೋಪವೆಸಗಿದ್ದ ಪೊಲೀಸ್ ಪೇದೆಯನ್ನು ಕೆಲಸದಿಂದ ಅಮಾನತು ಮಾಡಿದ ಘಟನೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ (Govindapura Police Station) ನಡೆದಿದೆ.

    ಗೋವಿಂದಪುರ ಠಾಣೆಯ ಕಾನ್ಸ್ಟೇಬಲ್‌ (Police Constable) ಹೆಚ್.ಆರ್ ಸೋನಾರ್, ಕುಖ್ಯಾತ ಸಲೀಂ ಅಲಿಯಾಸ್ ಬಾಂಬೆ ಸಲೀಂ ಜೊತೆ ರೂಂ ಶೇರ್ ಮಾಡಿದ್ದ. ಖದೀಮ ಬಾಂಬೆ ಸಲೀಂನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ಪೇದೆಯ ಕಳ್ಳಾಟ ಬಯಲಾಗಿದೆ. ಇದನ್ನೂ ಓದಿ: Raichur| ಅಂಗನವಾಡಿ ಕೇಂದ್ರದ ಛಾವಣಿ ಮೇಲ್ಪದರ ಕುಸಿತ – ಶಿಕ್ಷಕಿಗೆ ಗಂಭೀರ ಗಾಯ

    ಸಲೀಂ ಮೊಬೈಲ್‌ನಲ್ಲಿ ಸೋನಾರ್‌ನ ಪೊಲೀಸ್ ಯೂನಿಫಾರ್ಮ್ ಧರಿಸಿದ್ದ ಫೋಟೊಗಳು ಪತ್ತೆಯಾಗಿವೆ. ಪೊಲೀಸ್ ಯೂನಿಫಾರ್ಮ್ ಹಾಕೊಂಡು ಪತ್ನಿಗೆ ಖದೀಮ ಸಲೀಂ ವಿಡಿಯೋ ಕಾಲ್ ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: 25 ಲಕ್ಷ ವಂಚನೆ, ಸುಧಾಕರ್‌ ಹೆಸರು ಬರೆದಿಟ್ಟು ಚಾಲಕ ಸೂಸೈಡ್‌ – ಡೆತ್‌ನೋಟ್‌ನಲ್ಲಿ ಏನಿದೆ?

    ವಿಚಾರಣೆಯ ವೇಳೆ ಖದೀಮ ಸಲೀಂ, ಪೊಲೀಸ್ ಕಾನ್ಸ್ಟೇಬಲ್‌ ಸೋನಾರ್‌ನ ಮನೆಯಲ್ಲಿ ವಾಸವಿದ್ದ ವಿಚಾರ ಬಯಲಾಗಿದೆ. ಕಳ್ಳನ ಜೊತೆ ರೂಂ ಶೇರ್ ಮಾಡಿ ಕರ್ತವ್ಯ ಲೋಪವೆಸಗಿದ ಪೊಲೀಸ್ ಕಾನ್ಸ್ಟೇಬಲ್‌ ಸೋನಾರ್‌ನನ್ನು ಪೂರ್ವ ವಿಭಾಗ ಡಿಸಿಪಿ ದೇವರಾಜ್ ಕೆಲಸದಿಂದ ಅಮಾನತು ಮಾಡಿದ್ದಾರೆ.

    ಇದೀಗ ಪೊಲೀಸರು ಸಲೀಂನ ಜೊತೆ ಪೊಲೀಸ್ ಪೇದೆ ಬರೀ ಸ್ನೇಹ ಮಾತ್ರ ಇಟ್ಟುಕೊಂಡಿದ್ನಾ ಅಥವಾ ಬೇರೆ ಲಿಂಕ್ ಇದ್ಯಾ ಎಂದು ಪರಿಶೀಲನೆ ನಡೆಸುತ್ತಿದ್ದಾರೆ.

  • ಸರಣಿ ಮನೆಗಳ್ಳತನ ಮಾಡ್ತಿದ್ದ ಖದೀಮ ಅಂದರ್ – 6 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

    ಸರಣಿ ಮನೆಗಳ್ಳತನ ಮಾಡ್ತಿದ್ದ ಖದೀಮ ಅಂದರ್ – 6 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

    ಹುಬ್ಬಳ್ಳಿ: ಟಾಯ್ಲೆಟ್ ಕಿಟಕಿ ಮುರಿದು 6 ಲಕ್ಷ ಮೌಲ್ಯದ 62 ಗ್ರಾಂ ಚಿನ್ನ ಕಳ್ಳತನ ಮಾಡಿದ್ದ ಖದೀಮನನ್ನು ಹುಬ್ಬಳ್ಳಿಯ (Hubballi) ಬೆಂಡಿಗೇರಿ ಪೊಲೀಸರು (Bendigeri Police) ಬಂಧಿಸಿದ್ದಾರೆ.

    ನಗರದ ದೊಡ್ಡಮನಿ ಕಾಲೋನಿಯ ಜಾಫರ್ ಬೇಪಾರಿ(24) ಬಂಧಿತ ಕಳ್ಳ. ಇದನ್ನೂ ಓದಿ: ಕಲಬುರಗಿ ಗುತ್ತಿಗೆದಾರನಿಗೆ ಸರ್ಕಾರದ ವರ್ಕ್ ಆರ್ಡರ್ ಕೊಡಿಸುವುದಾಗಿ ಆಮಿಷ – 1.21 ಕೋಟಿ ವಂಚನೆ ಆರೋಪ

    ಆರೋಪಿ ಜಾಫರ್, ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ, ಟಾಯ್ಲೆಟ್ ಕಿಟಕಿ ಮುರಿದು ಮನೆ ಕಳ್ಳತನ ಮಾಡುತ್ತಿದ್ದ. ಅದೇ ದುಡ್ಡಿನಲ್ಲಿ ಮೋಜು ಮಸ್ತಿ ಮಾಡುತ್ತಿದ್ದ. ಬೆಂಡಿಗೇರಿ ಪೊಲೀಸರು ಆರೋಪಿ ಜಾಫರ್‌ನನ್ನು ಬಂಧಿಸಿ, ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಿಗೆ 2 ದಿನ ರಜೆ ಘೋಷಣೆ

    ಕಳೆದ 1 ತಿಂಗಳ ಹಿಂದೆ ನಗರದಲ್ಲಿ ಮನೆಗಳಲ್ಲಿ ಸರಣಿ ಕಳ್ಳತನವಾಗಿತ್ತು. ಕೂಡಲೇ ಅಲರ್ಟ್ ಆದ ಇನ್ಸ್ಪೆಕ್ಟರ್ ಎಸ್.ಆರ್ ನಾಯಕ್ ನೇತೃತ್ವದ ತಂಡ, ಸಿಸಿ ಕ್ಯಾಮೆರಾಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯ ಜಾಡು ಹಿಡಿದು ಬಂಧಿಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಭಾರತದ ದಿಟ್ಟ ಹೋರಾಟಕ್ಕೆ ಬೆಂಬಲ – ಸ್ಲೊವೇನಿಯಾದಲ್ಲಿ ಸಂಸದ ಕ್ಯಾ. ಚೌಟ ಒಳಗೊಂಡ ಸರ್ವಪಕ್ಷ ನಿಯೋಗ

    ಬಂಧಿತ ಆರೋಪಿಯಿಂದ 6 ಲಕ್ಷ ಮೌಲ್ಯದ 62 ಗ್ರಾಂ ತೂಕದ ಚಿನ್ನ ಹಾಗೂ 27 ಸಾವಿರ ಮೌಲ್ಯದ ಬೆಳ್ಳಿ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೇಡ ಖರೀದಿ ನೆಪದಲ್ಲಿ 15 ಕೆ.ಜಿ ತುಪ್ಪ ಹೊತ್ತೊಯ್ದ!

    ಪೇಡ ಖರೀದಿ ನೆಪದಲ್ಲಿ 15 ಕೆ.ಜಿ ತುಪ್ಪ ಹೊತ್ತೊಯ್ದ!

    ಬೆಂಗಳೂರು: ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತೆ ಚಾಲಾಕಿ ಕಳ್ಳನೊಬ್ಬ ಪೇಡ ಖರೀದಿ ನೆಪದಲ್ಲಿ 15 ತುಪ್ಪವನ್ನೇ ಹೊತ್ತೊಯ್ದ ಘಟನೆಯೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

    ಕೆಂಗೇರಿ ಕೊಮ್ಮಘಟ್ಟ ನಂದಿನಿ ಪಾರ್ಲರ್ ನಲ್ಲಿ (Nandini Parlour) ಚಾಲಾಕಿ ಕಳ್ಳ ತನ್ನ ಕೈಚಳಕ ತೋರಿದ್ದಾನೆ. ಕಳ್ಳನ ಕರಾಮತ್ತು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ನಡೆದಿದ್ದೇನು..?: ನಂದಿನಿ ಪಾರ್ಲರ್ ಬಂದ ಚಾಲಾಕಿ, ಮನೆಯಲ್ಲಿ ಫಂಕ್ಷನ್ ಇದೆ. ಹೀಗಾಗಿ 15 ಕೆಜಿ ತುಪ್ಪ ಕೊಡಿ ಎಂದಿದ್ದಾನೆ. ಅದರಂತೆ ಅಂಗಡಿಯವರು 15 ಕೆ.ಜಿ ತುಪ್ಪವನ್ನು ಕೊಟ್ಟಿದ್ದಾರೆ. ನಂತರ ಏನು ಬೇಕು ಎಂದಿದ್ದಾರೆ ಆಗ, ಪೇಡ ಬೇಕು ಅಂತಾ ಚಾಲಾಕಿ ಕಳ್ಳ ಹೇಳಿದ್ದಾನೆ. ಇದನ್ನೂ ಓದಿ: KSRTC ಬಸ್ ಕಿಟಕಿಯಿಂದ ಉಗುಳೋಕೆ ಹೋಗಿ ಮಹಿಳೆಯ ತಲೆ ಲಾಕ್!‌

    ಅಂಗಡಿಯವರು ಪೇಡ ಕೊಡಲೆಂದು ಅಂಗಡಿಯೊಳಗೆ ತಿರುಗಿದಾಗ ಖತರ್ನಾಕ್ ಕಳ್ಳ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇತ್ತ ಅಂಡಿಯವರು ಪೇಡ ಕೊಡಲೆಂದು ತಿರುಗಿದಾಗ ಗ್ರಾಹಕ ಜಾಗ ಖಾಲಿ ಮಾಡಿದ್ದನ್ನು ಕಂಡು ಗಾಬರಿಗೊಂಡಿದ್ದಾರೆ.

    ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಗೆ ಮಾಲೀಕರು ದೂರು ನೀಡಿದ್ದಾರೆ. ದೂರು ಸ್ವೀಕರಿಸುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

  • ಪೊಲೀಸ್ ಕಸ್ಟಡಿಯಿಂದ ಕಳ್ಳ ಎಸ್ಕೇಪ್ – ಪಿಎಸ್‌ಐ ಸೇರಿ ಐವರು ಪೊಲೀಸರು ಸಸ್ಪೆಂಡ್

    ಪೊಲೀಸ್ ಕಸ್ಟಡಿಯಿಂದ ಕಳ್ಳ ಎಸ್ಕೇಪ್ – ಪಿಎಸ್‌ಐ ಸೇರಿ ಐವರು ಪೊಲೀಸರು ಸಸ್ಪೆಂಡ್

    ತುಮಕೂರು: ಪೊಲೀಸ್ ಕಸ್ಟಡಿಯಿಂದ (Police Custody) ಕಳ್ಳ (Thief) ಎಸ್ಕೇಪ್ ಆದ ಹಿನ್ನೆಲೆ ಗುಬ್ಬಿ ಪೊಲೀಸ್ ಠಾಣೆ ಪಿಎಸ್‌ಐ (PSI) ಸೇರಿ ಐವರು ಪೊಲೀಸರನ್ನು ಅಮಾನತು (Suspend) ಮಾಡಲಾಗಿದೆ.

    ಪಿಎಸ್‌ಐ ದೇವಿಕಾ, ಮೂವರು ಹೆಡ್ ಕಾನ್ಸ್ಟೇಬಲ್, ಒಬ್ಬ ಪೊಲೀಸ್ ಪೇದೆ ಸೇರಿ ಒಟ್ಟು ಐವರನ್ನು ಸಸ್ಪೆಂಡ್ ಮಾಡಲಾಗಿದೆ. ಕರ್ತವ್ಯಲೋಪ ಹಿನ್ನೆಲೆ ಪಿಎಸ್‌ಐ ಸೇರಿ ಐವರು ಪೊಲೀಸರು ಅಮಾನತು ಮಾಡಿದ್ದು, ತುಮಕೂರು ಎಸ್‌ಪಿ ಅಶೋಕ್ ಕೆವಿ ಐವರು ಪೊಲೀಸರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಡಕಾಯಿತಿ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು ಗುಬ್ಬಿ ಠಾಣೆಗೆ ಕರೆತಂದಿದ್ದರು. ಕಳೆದ ಗುರುವಾರ ಬೆಳಗ್ಗಿನಜಾವ 4 ಗಂಟೆಯಲ್ಲಿ ಆರೋಪಿ ಠಾಣೆಯಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಮುಸ್ಲಿಮರ ತುಷ್ಟೀಕರಣಕ್ಕೆ ಶುಕ್ರವಾರ ಮಧ್ಯಾಹ್ನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಿಗದಿ: ಮುತಾಲಿಕ್ ಆರೋಪ

    ಆರೋಪಿ ಸೈಯದ್ ಗದಗ ಜಿಲ್ಲೆಯ ಹುಲ್ಲೂರು ಗ್ರಾಮದ ವಾಸಿ ಆಗಿದ್ದು, ಡ್ಯಾನ್ಸ್ ಕೋರಿಯೋಗ್ರಾಫರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಸದ್ಯ ನಾಪತ್ತೆಯಾಗಿರುವ ಆರೋಪಿಗಾಗಿ ಪೊಲೀಸರಿಂದ ಹುಡುಕಾಟ ನಡೆಯುತ್ತಿದ್ದು, ಮೂರು ತಂಡ ರಚಿಸಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೊಡಗಿನ ಚೇಲವಾರ ಫಾಲ್ಸ್‌ನಲ್ಲಿ ಮುಳುಗಿ ಕೇರಳದ ಯುವಕ ಸಾವು

  • ಕಳ್ಳನಿಗೆ ಮಹಿಳಾ ಪೇದೆಯ ಸಿಡಿಆರ್‌ – ಪೊಲೀಸರಿಂದಲೇ ಮಾರಾಟ

    ಕಳ್ಳನಿಗೆ ಮಹಿಳಾ ಪೇದೆಯ ಸಿಡಿಆರ್‌ – ಪೊಲೀಸರಿಂದಲೇ ಮಾರಾಟ

    ಕಲಬುರಗಿ: ನಗರದಲ್ಲಿ ಮತ್ತೆ ಪೊಲೀಸರ (Kalaburgi) ಕಳ್ಳಾಟ ಬಯಲಾಗಿದ್ದು, ಈ ಬಾರಿ ಮಹಿಳಾ ಪೇದೆಯ (Women Constable) ಮೊಬೈಲ್ ನಂಬರ್‌ನ ಸಿಡಿಆರ್‌ (ಕರೆ ವಿವರದ ದಾಖಲೆಗಳು) ಅನ್ನು ಕಳ್ಳನಿಗೆ ಪೊಲೀಸರು ಮಾರಾಟ ಮಾಡಿದ್ದಾರೆ.

    ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಮಹಿಳಾ ಪೇದೆಗೆ ಒನ್ ಸೈಡ್ ಲವ್ (Onne Side Love) ಮಾಡುತ್ತಿದ್ದ ಅಶೋಕ ನಗರ ಠಾಣಾ ವ್ಯಾಪ್ತಿಯ ಕಳ್ಳನಾದ ಮಹೇಶ್ ಎಂಬವನಿಗೆ ಪೊಲೀಸರು (Police) ಸಿಡಿಆರ್ ಮಾರಾಟ ಮಾಡಿದ್ದಾರೆ.  ಇದನ್ನೂ ಓದಿ: ಅನುದಾನ ಖಾಲಿ – 3 ವರ್ಷ ಜಾರಿಯಿದ್ದ ಮಹಿಳಾ ಪರ ಯೋಜನೆ ಸ್ಥಗಿತ

    ಈ ಸಿಡಿಆರ್ ಬಳಸಿ ಆ ಕಳ್ಳ ಮಹಿಳಾ ಪೇದೆಗೆ ಪ್ರೀತಿಸುವಂತೆ ಮಾನಸಿಕ ಕಿರುಕುಳ ನೀಡಿದ್ದಾನೆ. ಪೇದೆ ಪ್ರೀತಿಯನ್ನು ಒಪ್ಪದಾಗ ಕರೆ ಮಾಹಿತಿಯನ್ನು ಆಕೆಯ ಜೊತೆ ನಿಶ್ಚಿತಾರ್ಥವಾಗಿದ್ದ ಯುವಕನಿಗೆ ಕಳುಹಿಸಿ ನಾವಿಬ್ಬರು ಪರಸ್ಪರ ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ. ಕಳ್ಳನ ಮಾತನ್ನು ನಂಬಿದ ಆ ಯುವಕ ಮಹಿಳಾ ಪೇದೆ ಜೊತೆ ಮಾಡಿಕೊಂಡಿದ್ದ ನಿಶ್ಚಿತಾರ್ಥವನ್ನು ರದ್ದು ಮಾಡಿದ್ದಾನೆ.

    ನೊಂದ ಪೇದೆ ಈಗ ಸಿಡಿಆರ್ ನೀಡಿರುವ ಅಧಿಕಾರಿಗಳ ವಿರುದ್ಧ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ್ ಗೆ ದೂರು ನೀಡಿದ್ದಾರೆ. ತನಿಖೆ ವೇಳೆ ಮಹಿಳಾ ಠಾಣೆಯಲ್ಲಿ ದಾಖಲಾದ ಕ್ರೈ ನಂಬರ್ 47 ರ ತನಿಖೆ ಹೆಸರಲ್ಲಿ ಮಹಿಳಾ ಪೇದೆ ನಂಬರ್ ಸೇರಿಸಿ ಸಿಡಿಆರ್ ಕೊಟ್ಟಿರುವ ವಿಷಯ ಬೆಳಕಿಗೆ ಬಂದಿದೆ.

  • ಕೊಳಚೆ ಪ್ರದೇಶದಲ್ಲಿ ಮುಕ್ಕಾಲು ಕೆಜಿ ಚಿನ್ನ ಬಚ್ಚಿಟ್ಟಿದ್ದ ಖದೀಮ – 18 ಅರೆಸ್ಟ್ ವಾರೆಂಟ್ ಇದ್ದ ಸೆಲೆಬ್ರಿಟಿ ಮನೆಗಳ್ಳನ ಬಂಧನ

    ಕೊಳಚೆ ಪ್ರದೇಶದಲ್ಲಿ ಮುಕ್ಕಾಲು ಕೆಜಿ ಚಿನ್ನ ಬಚ್ಚಿಟ್ಟಿದ್ದ ಖದೀಮ – 18 ಅರೆಸ್ಟ್ ವಾರೆಂಟ್ ಇದ್ದ ಸೆಲೆಬ್ರಿಟಿ ಮನೆಗಳ್ಳನ ಬಂಧನ

    – ಗರ್ಲ್‌ಫ್ರೆಂಡ್ ಜೊತೆ ಕ್ಯಸಿನೋದಲ್ಲಿ ಹೆಡೆಮುರಿಕಟ್ಟಿದ ಪೊಲೀಸರು

    ಬೆಂಗಳೂರು: ದೊಡ್ಡ ದೊಡ್ಡ ಬಂಗಲೆಗಳನ್ನೇ ಟಾರ್ಗೆಟ್ ಮಾಡಿ ಕೆಜಿ ಕೆಜಿ ಚಿನ್ನ (Gold) ದೋಚುತ್ತಿದ್ದ (Theft) ಖತರ್ನಾಕ್ ಕಳ್ಳನನ್ನು ಗೋವಿಂದರಾಜನಗರ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

    ಬೆಂಗಳೂರಿನ (Bengaluru) ಸೆಲೆಬ್ರಿಟಿ ಮನೆಗಳ್ಳ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ (Escape Karthik) ಅರೆಸ್ಟ್ ಆಗಿದ್ದಾನೆ. ಆರೋಪಿ ಬಳಿಯಿಂದ ಬರೋಬ್ಬರಿ 1 ಕೆಜಿ 200 ಗ್ರಾಂ ಕದ್ದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತನ ವಿರುದ್ಧ ಬೆಂಗಳೂರಿನಲ್ಲಿ 83 ಕ್ಕೂ ಹೆಚ್ಚು ಮನೆಗಳ್ಳತನ ಕೇಸ್‌ಗಳಿವೆ. ನಗರ ಮಾತ್ರವಲ್ಲದೆ ಕರ್ನಾಟಕದ ಬೇರೆ ಭಾಗಗಳಲ್ಲಿಯೂ ಕಳ್ಳತನದ ಆರೋಪವಿದೆ.

    ಕೊಳಚೆ ಪ್ರದೇಶದಲ್ಲಿ ಬಚ್ಚಿಟ್ಟಿದ್ದ ಚಿನ್ನ:
    ಎಸ್ಕೇಪ್ ಕಾರ್ತಿಕ್ ಮನೆಯೊಂದರಲ್ಲಿ ಮುಕ್ಕಾಲು ಕೆಜಿ ಚಿನ್ನವನ್ನು ಕದ್ದು ತನ್ನ ಗರ್ಲ್‌ಫ್ರೆಂಡ್ ಜೊತೆ ಗೋವಾದ ಕ್ಯಸಿನೋಗೆ ಹೊರಟಿದ್ದ. ಆದರೆ ರೈಲು ತಡವಾಗಿದ್ದರಿಂದ ಕದ್ದಿದ್ದ ಚಿನ್ನವನ್ನು ಅಡವಿಡಲಾಗದೇ ಖತರ್ನಾಕ್ ಪ್ಲ್ಯಾನ್ ಮಾಡಿ ಕೊಳಚೆ ಪ್ರದೇಶದಲ್ಲಿ ಹೂತಿಟ್ಟು ಎಸ್ಕೇಪ್ ಆಗಿದ್ದ.

    ಓಕಳಿಪುರಂನಲ್ಲಿ ರೈಲ್ವೆ ಕಾಲೋನಿಯಲ್ಲಿ ಮೂತ್ರ ವಿಸರ್ಜನೆಗೆಂದು ಹೋಗಿದ್ದ ಕಾರ್ತಿಕ್ ಯಾರೂ ಓಡಾಡದ ಕೊಳಚೆ ಜಾಗದಲ್ಲಿ 2 ಅಡಿ ಗುಂಡಿ ತೆಗೆದು ಕದ್ದ ಚಿನ್ನವನ್ನು ಹೂತಿಟ್ಟಿದ್ದ. ಗುಂಡಿ ತೆಗೆದ ಜಾಗದಲ್ಲಿ ಗುರುತಿಗೆ ಮೇಲೆ ಕಲ್ಲೊಂದನ್ನು ಇಟ್ಟಿದ್ದ. ಬಳಿಕ ಗರ್ಲ್‌ಫ್ರೆಂಡ್ ಜೊತೆ ಗೋವಾಕ್ಕೆ ಹೋಗಿದ್ದ.

    ಕೆಲ ದಿನಗಳ ಹಿಂದೆ ಗೋವಾದ ಕ್ಯಸಿನೋದಲ್ಲಿ ಗೆಳತಿಯ ಜೊತೆ ಸಿಕ್ಕಿಬಿದ್ದಿದ್ದ ಆರೋಪಿ ಕದ್ದ ಚಿನ್ನ ಎಲ್ಲಿಟ್ಟಿದ್ದ ಎಂಬುದನ್ನು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ಚಿನ್ನವನ್ನು ಹೂತಿಟ್ಟಿದ್ದ ಜಾಗ ಕಂಡು ಪೊಲೀಸರೇ ದಂಗಾಗಿದ್ದಾರೆ. ಮುಕ್ಕಾಲು ಕೆಜಿ ಚಿನ್ನವನ್ನು ಮಣ್ಣಿನಿಂದ ಕಾರ್ತಿಕ್ ಹೊರಗೆ ತೆಗೆದು ಗೋವಿಂದರಾಜನಗರ ಪೊಲೀಸರ ಕೈಗೆ ಕೊಟ್ಟಿದ್ದಾನೆ. ಇದನ್ನೂ ಓದಿ: ಸೌದಿಯಲ್ಲಿ 11 ತಿಂಗಳ ಜೈಲುವಾಸದ ಬಳಿಕ ಯುವಕ ತಾಯ್ನಾಡಿಗೆ ವಾಪಸ್

    ಚನ್ನೈ, ತಿರುಪತಿ ಸೇರಿದಂತೆ ಬೇರೆ ಬೇರೆ ರಾಜ್ಯದಲ್ಲಿಯೂ ಕಳ್ಳತನ ಮಾಡುತ್ತಿದ್ದ ಕಾರ್ತಿಕ್ ವಿರುದ್ಧ ನ್ಯಾಯಾಲಯದಿಂದ 18 ಅರೆಸ್ಟ್ ವಾರೆಂಟ್ ಬಾಕಿ ಇತ್ತು. ಆರೋಪಿ ಕಾರ್ತಿಕ್ ಒಂಟಿ ಮನೆಗಳನ್ನು ಮತ್ತು ಬೀಗ ಹಾಕಿದ್ದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ. ಯಾವಾಗಲೂ ಒಂಟಿಯಾಗಿ ಕಳ್ಳತನ ಮಾಡುತ್ತಿದ್ದ ಕಾರ್ತಿಕ್ ಈ ಬಾರಿ ಇಬ್ಬರು ಸಹಚಚರ ಜೊತೆಗೆ ಕಳ್ಳತನ ಮಾಡಿದ್ದಾನೆ.

    ಈ ಹಿಂದೆ ಕೊಲೆ ಕೇಸ್‌ಗಳಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಜೊತೆಗೆ ಸೇರಿಸಿಕೊಂಡು ಕಾರ್ತಿಕ್ ಕಳ್ಳತನ ಮಾಡುತ್ತಿದ್ದ. ಕದ್ದ ಚಿನ್ನವನ್ನು ಒಂದೇ ಕಡೆ ಅಡವಿಡುತ್ತಿದ್ದ. ನಂತರ ಗರ್ಲ್‌ಫ್ರೆಂಡ್ ಜೊತೆ ಗೋವಾದ ಕ್ಯಸಿನೋಗೆ ಹೋಗಿ ಆ ಹಣ ಖರ್ಚು ಮಾಡುತ್ತಿದ್ದ. ಸದ್ಯ ಆರೋಪಿ ಬಳಿಯಿಂದ 70 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಶಿವಾಜಿಗೆ ಅಪಮಾನ – ಧಾರವಾಡದ ಇಬ್ಬರು ಅರೆಸ್ಟ್‌

  • ಮಾಜಿ ಸಂಸದರ ಪತ್ನಿಯ ಕುತ್ತಿಗೆಯಿಂದ ಸರ ಎಗರಿಸಿದ ಕಳ್ಳನ ಬಂಧನ

    ಮಾಜಿ ಸಂಸದರ ಪತ್ನಿಯ ಕುತ್ತಿಗೆಯಿಂದ ಸರ ಎಗರಿಸಿದ ಕಳ್ಳನ ಬಂಧನ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿಯಲ್ಲಿ ಮಾಜಿ ಸಂಸದನ ಮನೆಗೆ ಹಾಡಹಗಲೇ ಅಪರಿಚಿತ ವ್ಯಕ್ತಿಯೋರ್ವ ನೀರು ಕೇಳುವ ನೆಪದಲ್ಲಿ ನೀರು ಕೊಡಲು ಬಂದ ಮಾಜಿ ಸಂಸದನ ಪತ್ನಿಯ ಬಂಗಾರದ ಸರವನ್ನು ಹರಿದು ಪರಾರಿಯಾಗಿದ್ದ ಕಳ್ಳನನ್ನು ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತ ಹಾನಗಲ್ ಮೂಲದ ಪರಶುರಾಮ ಸಣ್ಣಮನಿ ಎಂಬ ವ್ಯಕ್ತಿ. ಈತನಿಂದ 1,85೦೦೦ ಮೌಲ್ಯದ 37ಗ್ರಾಂ ತೂಕದ ಬಂಗಾರದ ಚೈನ್ ಹಾಗೂ ಕೃತ್ಯಕ್ಕೆ ಬಳಸಿದ 15,೦೦೦ರೂ. ಮೌಲ್ಯದ ಬಜಾಜ್ ಡಿಸ್ಕವರ್ ಬೈಕ್ ವಶಕ್ಕೆ ಪಡೆಯಲಾಗಿದೆ.

    ಘಟನೆ ಏನು?: ಕಾಂಗ್ರೆಸ್ ನಿಂದ ನಾಲ್ಕು ಬಾರಿ ಉತ್ತರ ಕನ್ನಡ ಜಿಲ್ಲೆಯ ಸಂಸದರಾಗಿ ಆಯ್ಕೆಯಾಗಿದ್ದ ದೇವರಾಯ ನಾಯ್ಕರವರ ಪತ್ನಿ ಗೀತಾರವರು ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಅಪರಿಚಿತ ವ್ಯಕ್ತಿ ನೀರು ಕೇಳುವ ನೆಪ ಮಾಡಿಕೊಂಡು, ಅವರ ಕುತ್ತಿಗೆಯಲ್ಲಿ ಸರವನ್ನು ಕಸಿದುಕೊಂಡು ಹೋಗಿದ್ದನು. ಇದನ್ನೂ ಓದಿ: ಮಗು ಮಾಡಿಕೊಳ್ಳುವ‌ ಬಗ್ಗೆ ಪ್ಲ್ಯಾನ್ ಇಲ್ವಾ- ವಿಕ್ಕಿ ಕೌಶಲ್ ಹೇಳೋದೇನು?

    ತಕ್ಷಣ ಕಾರ್ಯಪ್ರವೃತ್ತರಾದ ಶಿರಸಿ ಮಾರುಕಟ್ಟೆ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಸಿಪಿಐ ರಾಮಚಂದ್ರ ನಾಯ್ಕ ನೇತೃತ್ವದಲ್ಲಿ ತಂಡ ರಚಿಸಿ ಕೊನೆಗೂ ಆರೋಪಿಯನ್ನು ಹಾವೇರಿ ಜಿಲ್ಲೆಯಲ್ಲಿ ದಸ್ತಗಿರಿ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೊಮೆಟೋ ಕಳ್ಳತನದ ವೇಳೆ ರೈತನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ

    ಟೊಮೆಟೋ ಕಳ್ಳತನದ ವೇಳೆ ರೈತನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ

    ಚಿಕ್ಕೋಡಿ: ಟೊಮೆಟೋ (Tomato) ಕಳ್ಳತನ ಮಾಡುವಾಗ ವ್ಯಕ್ತಿಯೋರ್ವ ರೆಡ್ ಹ್ಯಾಂಡ್ ಆಗಿ ರೈತನ ಕೈಯಲ್ಲಿ ಸಿಕ್ಕಿಬಿದ್ದ ಘಟನೆ ಬೆಳಗಾವಿ (Belegavi) ಜಿಲ್ಲೆಯ ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದಲ್ಲಿ ನಡೆದಿದೆ.

    ಟೊಮೆಟೋ ಬೆಳೆದಿದ್ದ ರೈತ ಕುಮಾರ್ ಅಲಗೌಂಡ ಗೂಡೋಡಗಿ ಕೈಯಲ್ಲಿ ಟೊಮೆಟೋ ಕಳ್ಳತನ (Theft) ಮಾಡುವಾಗ ಕಳ್ಳ ಭುಜಪ್ಪ ಗಾಣೀಗೇರ ಸಿಕ್ಕಿಬಿದ್ದಿದ್ದಾನೆ. ಯಲ್ಪಾರಟ್ಟಿ ಗ್ರಾಮದಲ್ಲಿ ಅರ್ಧ ಎಕರೆ ಜಾಗದಲ್ಲಿ ರೈತ ಟೊಮೆಟೋ ಬೆಳೆದಿದ್ದ. ಕಳೆದ 2 ಬಾರಿ 25 ಕೆಜಿಯ 200 ಟ್ರೇ ಟೊಮೆಟೋ ಕಳ್ಳತನವಾಗಿದ್ದರಿಂದ ರೈತ ಎಚ್ಚೆತ್ತುಕೊಂಡಿದ್ದು, ಮಂಗಳವಾರ ಬೆಳ್ಳಂ ಬೆಳಗ್ಗೆ 5:30ರ ಸುಮಾರಿಗೆ ಕಳ್ಳತನ ಮಾಡುವಾಗ ಭುಜಪ್ಪ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಹೆಣ್ಣಿನ ವ್ಯಾಮೋಹಕ್ಕೆ ಬಿದ್ದು 41 ಲಕ್ಷ ಕಳೆದುಕೊಂಡ ಯುವಕ

    ಯಲ್ಪಾರಟ್ಟಿ ಗ್ರಾಮದ ಪಕ್ಕದ ಗ್ರಾಮ ಸಿದ್ದಾಪುರ ನಿವಾಸಿ ಭುಜಪ್ಪ ಗಾಣಿಗೇರ ಕಳೆದ ಹಲವು ದಿನಗಳಿಂದ ಟೊಮೆಟೋ ಕಳ್ಳತನ ಮಾಡುತ್ತಿದ್ದ ಎಂದು ರೈತ ಕುಮಾರ್ ಆರೋಪಿಸಿದ್ದಾರೆ. ಕಳ್ಳತನ ಮಾಡುವದನ್ನು ಗಮನಿಸಿ 112ಕ್ಕೆ ಕರೆ ಮಾಡಿದ್ದು, ಟೊಮೆಟೋ ಕಳ್ಳ ಭುಜಪ್ಪ ಗಾಣಿಗೇರನನ್ನು ಸ್ಥಳೀಯರ ಸಹಾಯದಿಂದ ಪೋಲಿಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತರಕಾರಿ ಬೆಲೆಯೂ ತುಟ್ಟಿ – ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ; ಯಾವ ತರಕಾರಿಗೆ ಎಷ್ಟು ದರ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಸೀದಿಗೆ ನುಗ್ಗಿ ಕಂಪ್ಯೂಟರ್, ಕ್ಯಾಮೆರಾ ಹೊತ್ತೊಯ್ದ ಚೋರ – 3 ತಿಂಗಳಲ್ಲಿ 3ನೇ ಕಳ್ಳತನ

    ಮಸೀದಿಗೆ ನುಗ್ಗಿ ಕಂಪ್ಯೂಟರ್, ಕ್ಯಾಮೆರಾ ಹೊತ್ತೊಯ್ದ ಚೋರ – 3 ತಿಂಗಳಲ್ಲಿ 3ನೇ ಕಳ್ಳತನ

    ಹಾಸನ: ಉಪಕರಣಗಳ ಸಮೇತ ಮಸೀದಿಗೆ (Mosque) ನುಗ್ಗಿದ ಖತರ್ನಾಕ್ ಕಳ್ಳ (Thief) ಕಚೇರಿಯಲ್ಲಿದ್ದ ಕಂಪ್ಯೂಟರ್, ಕ್ಯಾಮೆರಾ ಹೊತ್ತೊಯ್ದಿರುವ ಘಟನೆ ಹಾಸನ (Hassana) ನಗರದ ಶರೀಫ್ ಕಾಲೋನಿಯಲ್ಲಿ ನಡೆದಿದೆ.

    ತಡರಾತ್ರಿ ಖುಬಾ ಮಸೀದಿಗೆ ಬಂದಿರುವ ಕಳ್ಳ ಕೆಲಕಾಲ ಹೊಂಚು ಹಾಕಿದ್ದಾನೆ. ನಂತರ ಗೇಟ್ ಹಾರಿ ಒಳಬಂದಿರುವ ಚೋರ ಮಸೀದಿಯ ಮುಖ್ಯದ್ವಾರದ ಬೀಗ ಮುರಿದು ಹುಂಡಿ ಕದಿಯಲು ಯತ್ನಿಸಿದ್ದಾನೆ. ಇದು ಸಾಧ್ಯವಾಗದಿದ್ದಾಗ ಮಸೀದಿಯ ಕಚೇರಿಯ ಬೀಗ ಮುರಿದು ಒಳ್ಳನುಗ್ಗಿದ್ದಾನೆ. ಅಲ್ಲಿದ್ದ ಕಂಪ್ಯೂಟರ್ ಹಾಗೂ ಕೆನಾನ್ ಕ್ಯಾಮೆರಾವನ್ನು ಕದ್ದೊಯ್ದಿದ್ದಾನೆ.

    ಕಳ್ಳತನದ ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಮಾರು 3 ಲಕ್ಷ ರೂ. ಬೆಲೆಬಾಳುವ ಕಂಪ್ಯೂಟರ್, ಕ್ಯಾಮೆರಾ ಕಳುವಾಗಿದೆ. ರಾತ್ರಿ ಮಳೆ ಬರುತ್ತಿದ್ದ ಕಾರಣ ಪ್ರಮುಖ ಪತ್ರಿಕೆಯ ಛಾಯಾಗ್ರಾಹಕ ಅತೀಕ್ ಉರ್ ರೆಹಮಾನ್ ತಮ್ಮ ಕ್ಯಾಮೆರಾವನ್ನು ಮಸೀದಿಯ ಕಚೇರಿಯಲ್ಲಿಟ್ಟು ಮನೆಗೆ ತೆರಳಿದ್ದರು. ಆ ಕ್ಯಾಮೆರಾದೊಂದಿಗೆ ಕಳ್ಳ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: 3 ದಿನಗಳ ಹಿಂದೆ ಉದ್ಘಾಟನೆಗೊಂಡಿದ್ದ ವಂದೇ ಭಾರತ್ ರೈಲಿಗೆ ಮಳೆಯಿಂದ ಹಾನಿ – ಸಂಚಾರ ಸ್ಥಗಿತ

    ಕಳೆದ 3 ತಿಂಗಳ ಅವಧಿಯಲ್ಲಿ ಇದೇ ಮಸೀದಿಯಲ್ಲಿ 3 ಬಾರಿ ಕಳ್ಳತನವಾಗಿದೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಸಿಲುಕಿದ್ದ ಐವರ ರಕ್ಷಣೆ – ಪಬ್ಲಿಕ್ ಟಿವಿ ಡ್ರೈವರ್‌ಗೆ ಬಹುಮಾನ ಘೋಷಣೆ