ಕೋಲಾರ: ಹಸುಗಳನ್ನು ಕದ್ದಿದ್ದ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಜಾರಕಲ ಹಟ್ಟಿ ಗ್ರಾಮದ ಎ.ಮುನಿರಾಜು ಎಂಬುದಾಗಿ ಗುರುತಿಸಲಾಗಿದೆ.
ಒಂದೂವರೆ ವರ್ಷಗಳ ಹಿಂದೆ ಈ ಘಟನೆ ಬೂದಿಕೋಟೆ ಸಮೀಪದ ಶ್ರೀರಂಗಬಂ- ಡಹಳ್ಳಿಯಲ್ಲಿ ನಡೆದಿತ್ತು. ಚನ್ನಕೇಶವ ಎಂಬವರ ಶೆಡ್‌ನಲ್ಲಿದ್ದ ಸುಮಾರು 1.70 ಲಕ್ಷ ಮೌಲ್ಯದ ಎರಡು ಸೀಮೆ ಹಸುಗಳು ಕಳವಾಗಿದ್ದವು. ಈ ಸಂಬಂಧ ಹಸುಗಳ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜೊತೆಗೆ ಕಳವಾಗಿದ್ದ ಹಸುಗಳನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದರು.
ಮಾಲೀಕನ ದೂರು ಸ್ವೀಕರಿಸಿದ ಬೂದಿಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಳವು ಮಾಡಿದ ಆರೋಪಿ ಹಾಗೂ ಹಸುಗಳನ್ನು ಪತ್ತೆ ಮಾಡಿದ್ದಾರೆ.
ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಅವರ ಪತ್ನಿಯ ಕಾರು ಕಳ್ಳತನವಾಗಿದ್ದು, ಇದೀಗ ಭಾನುವಾರ ವಾರಣಾಸಿಯಲ್ಲಿ ಪತ್ತೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಉತ್ತರ ಪ್ರದೇಶದ ಫರಿದಾಬಾದ್ ಬಳಿಯ ಬದ್ಖಾಲ್ ನಿವಾಸಿಗಳಾದ ಶಾಹಿದ್ ಮತ್ತು ಶಿವಾಂಗ್ ತ್ರಿಪಾಠಿ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿಗಳು ನಡ್ಡಾ ಅವರ ಕಾರನ್ನು ಕಳ್ಳತನ ಮಾಡಲೆಂದು ದೆಹಲಿಗೆ ಪ್ರಯಾಣಿಸಲು ಕ್ರೆಟಾ ಕಾರನ್ನು ಬಳಸಿದ್ದರು. ಕಾರನ್ನು ಮೊದಲು ಬದ್ಖಾಲ್‌ಗೆ ಕೊಂಡೊಯ್ಯಲಾಯಿತು. ಅಲ್ಲಿ ಅದರ ನಂಬರ್ ಪ್ಲೇಟ್ ಅನ್ನು ಬದಲಾಯಿಸಲಾಯಿತು. ಆರೋಪಿಗಳು ಕಾರನ್ನು ನಾಗಾಲ್ಯಾಂಡ್‌ಗೆ ಕಳುಹಿಸಲು ಯೋಜಿಸಿದ್ದರು. ಹೀಗಾಗಿ ಅಲಿಗಢ್, ಲಖಿಂಪುರ ಖೇರಿ, ಬರೇಲಿ, ಸೀತಾಪುರ್, ಲಖನೌ ಮಾರ್ಗವಾಗಿ ವಾರಾಣಸಿ ತಲುಪಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಪ್ರಣಾಳಿಕೆ ಪಾಕ್ ಚುನಾವಣೆಗೆ ಹೆಚ್ಚು ಸೂಕ್ತವಾಗಿದೆ: ಹಿಮಂತ್ ಶರ್ಮಾ
ಮಾರ್ಚ್ 18 ರ ತಡರಾತ್ರಿ ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿ ಮಲ್ಲಿಕಾ ನಡ್ಡಾ (Mallika Nadda) ಅವರ ಫಾರ್ಚುನರ್ ಕಾರನ್ನು ಕಳವು ಮಾಡಲಾಗಿತ್ತು. ಕಾರನ್ನು ಗೋವಿಂದಪುರಿಯಲ್ಲಿರುವ ಸರ್ವೀಸ್ ಸೆಂಟರ್‌ಗೆ ಕೊಂಡೊಯ್ದು, ಅದನ್ನು ಕಳವು ಮಾಡಲಾಗಿದೆ ಎಂದು ಹೇಳಲಾಗಿತ್ತು. ಈ ಸಂಬಂಧ ಕಾರು ಚಾಲಕ ಮಾರ್ಚ್ 19 ರಂದು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರಿಗೆ ಹುಡುಕಾಟ ಆರಂಭಿಸಿದ್ದರು.
ಬೆಂಗಳೂರು: ಅಂತಾರಾಜ್ಯ ಅಡಿಕೆ ವ್ಯಾಪಾರಿಯ 1 ಕೋಟಿ ರೂ. ಹಣ ಕಳವು ಪ್ರಕರಣ ಆರೋಪಿಗಳ ಜಾಡು ಪತ್ತೆ ಹಚ್ಚಿದ ಉಪ್ಪಾರಪೇಟೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕಾರು ಚಾಲಕ ಸಂತೋಷ್ ಸೇರಿ ಮೂವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಅಂತಾರಾಜ್ಯ ಅಡಿಕೆ ವ್ಯಾಪಾರಿ ಹೆಚ್.ಎಸ್. ಉಮೇಶ್ ಅ.7 ರಂದು ಚಿತ್ರದುರ್ಗದಿಂದ ವಿವಿಧ ಜಿಲ್ಲೆಗಳ ಅಡಿಕೆ ಖರೀದಿಗೆ ಕಾರಿನಲ್ಲಿ 1 ಕೋಟಿ ರೂ. ಹಣ ತಂದಿದ್ದರು. ನೀಲಿ ಬಣ್ಣದ ಬ್ಯಾಗಿನಲ್ಲಿ ಬರೋಬ್ಬರಿ 1 ಕೋಟಿ ರೂ. ಹಣವನ್ನು ಕಾರಿನ ಡಿಕ್ಕಿಯಲ್ಲಿ ತಂದಿದ್ದರು. ಊಟಕ್ಕೆಂದು ಗಾಂಧೀನಗರದ ಹೋಟೆಲ್ ಮುಂಭಾಗ ಕಾರು ನಿಲ್ಲಿಸಿದ್ದರು. ಇದನ್ನೂ ಓದಿ: ಝಿಕಾ ಆತಂಕ; ಚಿಕ್ಕಬಳ್ಳಾಪುರದ 5 ಗ್ರಾಮಗಳಲ್ಲಿ ಅಲರ್ಟ್ – 31 ಮಂದಿ ಗರ್ಭಿಣಿಯರಿಗೆ ರಕ್ತ ಪರೀಕ್ಷೆ
ನಂತರ ಚಂದ್ರಾಲೇಔಟ್, ದಾಬಸ್ ಪೇಟೆ ಬಳಿಯೂ ಕಾರು ನಿಲ್ಲಿಸಿದ್ದರು. ಸಂಜೆ 7:45 ರ ವೇಳೆಗೆ ಚಿತ್ರದುರ್ಗದ ಭೀಮಸಮುದ್ರದ ಅಂಗಡಿಗೆ ತೆರಳಿ ಕಾರಿನ ಡಿಕ್ಕಿ ಪರಿಶೀಲಿಸಿದಾಗ ಕಳವು ಬೆಳಕಿಗೆ ಬಂದಿತ್ತು. ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಲಾಗಿತ್ತು. ಶಿರಾ, ತುಮಕೂರು ಮಾರ್ಗವಾಗಿ ಬೆಂಗಳೂರಿನ ಗಾಂಧೀನಗರಕ್ಕೆ ಬಂದಿದ್ದ ವೇಳೆ ಕಳವಾಗಿರಬಹುದು ಎಂದು ಶಂಕಿಸಲಾಗಿತ್ತು.
ಬೀದರ್: ಉಸ್ಮಾನಿಯಾ ಬಿಸ್ಕೆಟ್ (Biscuit) ಕದ್ದು ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. 88,920 ರೂಪಾಯಿ ಮೌಲ್ಯದ ಬಿಸ್ಕೆಟ್ ಅನ್ನು ಕಳ್ಳರಿಂದ ಪೊಲೀಸರು ಜಪ್ತಿ ಮಾಡಿದ್ದಾರೆ.
ಹೈದರಾಬಾದ್ (Hyderabad) ನಿಂದ ಬೀದರ್ ಗೆ ಬಿಸ್ಕೆಟ್ ಡೆಲಿವರಿ ಮಾಡಲು ಬಂದಾಗ ಕಳವು ಮಾಡಲಾಗಿತ್ತು. ಬೀದರ್ (Bidar) ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9 ರ ಭಂಗೂರು ಬಳಿ ಗಾಡಿ ನಿಲ್ಲಿಸಿ ಊಟಕ್ಕೆ ಕುಳಿತಾಗ ಖದೀಮರು 114 ಬಿಸ್ಕೆಟ್ ಬಾಕ್ಸ್ ಕದ್ದು ಪರಾರಿಯಾಗಿದ್ದರು. ಈ ಕುರಿತು ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬೆನ್ನಲ್ಲೇ ಖದೀಮರ ಬೆನ್ನು ಬಿದ್ದ ಮನ್ನಳ್ಳಿ ಪೊಲೀಸರು ಮೂರು ದಿನಗಳಲ್ಲೇ ಬಿಸ್ಕೆಟ್ ಕಳ್ಳರನ್ನು ಬಂಧಿಸಿದ್ದಾರೆ. ಇದೀಗ ಕಳ್ಳರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಮೈಸೂರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ
Live Tv
[brid partner=56869869 player=32851 video=960834 autoplay=true]
ರಾಯಚೂರು: ತಾವು ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಚಿನ್ನಕ್ಕೆ ಕನ್ನ ಹಾಕಿದ್ದ ಖದೀಮ ಕಳ್ಳರನ್ನು ಕೊನೆಗೂ ರಾಯಚೂರು ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ನಿಖಿಲ್, ಲಕ್ಷ್ಮಿಕಾಂತ್ ಆರೋಪಿಗಳು. ನಗರದ ಸರಫ್ ಬಜಾರ್‌ನಲ್ಲಿ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇವರಿಬ್ಬರು ಅದೇ ಅಂಗಡಿಯಲ್ಲಿ 11 ಲಕ್ಷ 86 ಸಾವಿರ ರೂ. ಮೌಲ್ಯದ 205 ಗ್ರಾಂ ಚಿನ್ನವನ್ನು ಕದ್ದು ಸಿಕ್ಕಿಬಿದ್ದಿದ್ದಾರೆ.
ಕಳ್ಳತನ ಮಾಡುವಾಗ ಅಂಗಡಿಯಲ್ಲಿನ ಸಿಸಿ ಕ್ಯಾಮೆರಾವನ್ನು ಆಫ್ ಆನ್ ಮಾಡುತ್ತಿದ್ದರು ಎನ್ನುವುದು ಬೆಳಕಿಗೆ ಬಂದಿದೆ. ಸಿಸಿ ಕ್ಯಾಮೆರಾ ಬಂದ್ ಮಾಡಿ ಕಳ್ಳತನ ಮಾಡಿ, ಪುನಃ ಕ್ಯಾಮೆರಾ ಆನ್ ಮಾಡುತ್ತಿದ್ದರು. ಸಿಸಿ ಕ್ಯಾಮೆರಾ ದೃಶ್ಯಾವಳಿ ವೀಕ್ಷಿಸಿದ ಮಾಲೀಕನಿಗೆ ಅನುಮಾನ ಬಂದು ಪರಿಶೀಲಿಸಿದಾಗ ಚಿನ್ನ ಕಳುವಾಗಿರುವುದು ತಿಳಿದಿದೆ. ಈ ಕುರಿತು ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೊನೆಗೂ ಪೊಲೀಸರು ಕಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ:ಡಿಎಂಕೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ತಮಿಳುನಾಡಿಗೆ ಪಾದಯತ್ರೆ ಯಾವಾಗ: ಡಿಕೆಶಿಗೆ ಬಿಜೆಪಿ ಪ್ರಶ್ನೆ
ಇನ್ನೂ ಪ್ರತ್ಯೇಕ ಪ್ರಕರಣಗಳಲ್ಲಿ ನಗರದ ಪಶ್ಚಿಮ ಠಾಣೆ, ನೇತಾಜಿ ನಗರ ಠಾಣೆ ಹಾಗೂ ಆಂಧ್ರಪ್ರದೇಶದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಮನೆಕಳ್ಳತನ ಮಾಡುತ್ತಿದ್ದ ಆರೋಪಿ ನೆಹಮೀಯಾಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರತ್ಯೇಕ ಪ್ರಕರಣಗಳಿಂದ 12 ಲಕ್ಷ 50 ಸಾವಿರ ಮೌಲ್ಯದ 250 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಚುನಾವಣೆವರಗೆ ಸುಮ್ಮನಿದ್ದು, ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ: ಡಿಕೆಶಿ
ಹೈದರಾಬಾದ್: ಮಹಿಳೆಯೊಬ್ಬಳು ಹಣದ ಆಸೆಗಾಗಿ ಹಾರ್ಪಿಕ್ ಮತ್ತು ಝಂಡುಬಾಂಬ್‍ನ ಮಿಶ್ರಣದ ದ್ರವ್ಯವನ್ನು ವೃದ್ಧೆಯ ಕಣ್ಣಿಗೆ ಹಾಕಿ ಅವರನ್ನು ಕುರುಡು ಮಾಡಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
ಪಿ. ಭಾರ್ಗವಿ(32) ಬಂಧಿತ ಆರೋಪಿ ಹಾಗೂ ಹೇಮಾವತಿ (73) ವೃದ್ಧೆ. ಹೇಮಾವತಿಯೂ ಸಿಕಂದರಾಬಾದ್‍ನ ನಾಚರಮ್‍ನಲ್ಲಿರುವ ಅಪಾರ್ಟ್‍ಮೆಂಟ್‍ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಅವರ ಮಗ ಶಶಿಧರ್ ಅವರು ಲಂಡನ್‍ನಲ್ಲಿ ವಾಸಿಸುತ್ತಿದ್ದರು. ಇದರಿಂದಾಗಿ 2021ರ ಅಗಸ್ಟ್‌ನಲ್ಲಿ ಹೇಮಾವತಿಯನ್ನು ನೋಡಿಕೊಳ್ಳಲು ಭಾರ್ಗವಿಯನ್ನು ಕೇರ್‌ಟೇಕರ್ ಹಾಗೂ ಮನೆಕೆಲಸದಾಕೆಯಾಗಿ ನೇಮಿಸಿದ್ದರು.
ಭಾರ್ಗವಿಯೂ ತನ್ನ 7 ವರ್ಷದ ಮಗಳೊಂದಿಗೆ ಹೇಮಾವತಿಯ ಅಪಾರ್ಟ್‍ಮೆಂಟ್‍ಗೆ ಬಂದರು. ಆದರೆ ಭಾರ್ಗವಿಯೂ ಹೇಮಾವತಿಯ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ನೊಡಿ, ಅದನ್ನು ಕದಿಯಲು ಅವಕಾಶಕ್ಕಾಗಿ ಕಾಯುತ್ತಿದ್ದಳು.
ಇದರಿಂದಾಗಿ ಹೇಮಾವತಿ ಸಂಪೂರ್ಣವಾಗಿ ಕಣ್ಣು ಕಳೆದುಕೊಂಡರು. ಇದರಿಂದಾಗಿ ಶಶಿಧರ್ ಹೈದರಾಬಾದ್‍ಗೆ ಬಂದು ಪ್ರತಿಷ್ಠಿತ ಆಸ್ಪತ್ರೆಗೆ ಹೇಮಾವತಿಯನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರಿಗೆ ವೈದ್ಯರೂ ಹೇಮಾವತಿಯೂ ಸಂಪೂರ್ಣವಾಗಿ ಕುರುಡುತನಕ್ಕೆ ಜಾರಲು ವಿಷಕಾರಿ ದ್ರವ್ಯ ಕಾರಣ ಎಂದು ತಿಳಿಸಿದ್ದಾರೆ. ಇದರಿಂದಾಗಿ ಹೇಮಾವತಿಯ ಕುಟುಂಬದವರು ಭಾರ್ಗವಿಯ ಮೇಲೆ ಅನುಮಾನಪಟ್ಟಿದ್ದಾರೆ. ಇದನ್ನೂ ಓದಿ:ಬಾಹ್ಯಾಕಾಶ ರಾಕೆಟ್‌ನಿಂದ ಅಮೆರಿಕ, ಜಪಾನ್ ಧ್ವಜ ತೆಗೆದು ಭಾರತ ಧ್ವಜ ಉಳಿಸಿಕೊಂಡ ರಷ್ಯಾ- Video Viral
ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಈ ಬಗ್ಗೆ ಪೊಲೀಸರು ಭಾರ್ಗವಿಯನ್ನು ವಿಚಾರಣೆ ನಡೆಸಿದಾಗ ಹೇಮಾವತಿಯನ್ನು ಕುರುಡುಗೊಳಿಸಿ 40 ಸಾವಿರ ನಗದು, 2 ಚಿನ್ನದ ಬಳೆ, ಚಿನ್ನದ ಸರ ಹಾಗೂ ಇತರೆ ಬೆಲೆ ಬಾಳುವ ವಸ್ತುಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಘಟನೆ ಸಂಬಂಧಿಸಿ ಹೈದರಾಬಾದ್ ಪೊಲೀಸ್‍ರು ಭಾರ್ಗವಿಯನ್ನು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ: ವೃದ್ಧ ದಂಪತಿಯನ್ನು ಭೀಕರವಾಗಿ ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದ ಕಾಮಾಟಿಗರ ಪೇಟೆಯಲ್ಲಿ ನಡೆದಿದೆ.
ಕಾಮಟಿಗರಪೇಟೆ ಬಡಾವಣೆಯ ಶ್ರೀನಿವಾಸಲು(77) ಹಾಗೂ ಪದ್ಮಾವತಿ(70) ಕೊಲೆಯಾದ ದಂಪತಿ. ಶ್ರೀನಿವಾಸಲು ರನ್ನು ಎಳೆದು ತಂದು ಬಾತ್‍ರೂಮ್‍ನಲ್ಲಿ ಹತ್ಯೆ ಮಾಡಲಾಗಿದೆ. ಪತ್ನಿ ಪದ್ಮಾವತಿಯನ್ನು ಮನೆಯ ಹಾಲ್‍ನಲ್ಲಿ ಬಲವಾದ ಆಯುಧದಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ.
ಎಂದಿನಂತೆ ಇಂದು ಬೆಳಿಗ್ಗೆ ಮನೆಯ ಕೆಲಸದಾಳು ಮನೆ ಬಳಿ ಬಂದು ಬಾಗಿಲು ಬಡಿದರೆ ವೃದ್ಧ ದಂಪತಿ ಬಾಗಿಲು ತೆಗೆದಿಲ್ಲ. ಇದರಿಂದ ಕೆಲಸದಾಳು ಮನೆಯ ಹಿಂಬದಿಯಿಂದ ಬಂದು ಇನ್ನೊಂದು ಡೋರ್ ನೋಡಿದರೆ ಅದು ತೆರೆದಿತ್ತು, ಅನುಮಾನದಿಂದ ಒಳಗೆ ಹೋಗಿ ನೋಡಿದಾಗ ಕೆಲಸದಾಳಿಗೆ ಒಳಗೆ ಇಬ್ಬರು ಕೊಲೆಯಾಗಿರುವ ಭಯಾನಕ ದೃಶ್ಯ ಕಂಡುಬಂದಿದೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಶಿಡ್ಲಘಟ್ಟ ನಗರ ಠಾಣೆ ಪೊಲೀಸರು ಹಾಗೂ ಚಿಕ್ಕಬಳ್ಳಾಪುರ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಪರಿಶೀಲನೆ ನಡೆಸಿದರು. ಮನೆಯ ಮೇಲಿನ ಗವಾಕ್ಷಿ ಕಿಟಕಿಯ ಮೂಲಕ ಮನೆಯ ಒಳಗೆ ಇಳಿದಿರುವ ದುಷ್ಕರ್ಮಿಗಳು, ಮನೆಯಲ್ಲಿದ್ದ ವೃದ್ಧ ದಂಪತಿಯನ್ನು ಹತ್ಯೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿರುವ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಡಿಕೆಶಿ ಪಾಕಿಸ್ತಾನ ಪರ ಹೇಳಿಕೆ ಕೊಡುವವರ ಪರವೋ ಅಥವಾ ಭಾರತ ಮಾತೆಯ ಪರವೋ: ರೇಣುಕಾಚಾರ್ಯ
ಘಟನೆ ಕುರಿತು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಪ್ರಕರಣದಲ್ಲಿ ಆರೋಪಿಗಳ ಪತ್ತೆಗೆ 4 ತಂಡಗಳನ್ನು ನೇಮಕ ಮಾಡಲಾಗಿದೆ. ಬಡಾವಣೆಯಲ್ಲಿ ಯಾರ ತಂಟೆಗೂ ಹೋದವರಲ್ಲ. ಆದರೂ ಮನೆಯ ಒಳಗೆ ನುಗ್ಗಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಕೊಲೆ ಪ್ರಕರಣ ಭೇದಿಸಲು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದು, ವಿವಿಧ ದೃಷ್ಟಿಕೋನದಿಂದ ತನಿಖೆ ನಡೆಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಬಾಹುಬಲಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ವಿರೋಧಿಸಿ ಶ್ರವಣಬೆಳಗೊಳದಲ್ಲಿ ಮೌನ ಪ್ರತಿಭಟನೆ
ಮನೆ ಮಂದಿ ಹಬ್ಬಕ್ಕೆ ಬಟ್ಟೆ ತರಲು ತೆರಳಿದ್ದರು. ಈ ವೇಳೆ ಕನ್ನ ಹಾಕಿರುವ ಖದೀಮರು ಮನೆಯಲ್ಲಿ ಯಾರೂ ಇಲ್ಲದ್ದನ್ನು ಮನಗಂಡು ಹೊಂಚು ಹಾಕಿ ಕೈಚಳಕ ತೋರಿದ್ದಾರೆ. ಇತ್ತ ಹಬ್ಬದ ವಸ್ತು ಖರಿದಿಸಿ ವಾಪಸ್ ಮನೆಗೆ ಬರುವಷ್ಟರಲ್ಲಿ ರಾತ್ರಿಯಾಗಿತ್ತು. ಮನೆಗೆ ಬಂದು ನೋಡಿದಾಗ ಕಳ್ಳತನ ಕೃತ್ಯ ಬಯಲಿಗೆ ಬಂದಿದೆ. ಇದನ್ನೂ ಓದಿ: ನೇಪಾಳದಲ್ಲಿ ಪ್ರವಾಹ – 50ಕ್ಕೂ ಹೆಚ್ಚು ಮಂದಿ ನೀರಿನಲ್ಲಿ ಕೊಚ್ಚಿ ಹೋದ್ರು!
ಮೈಸೂರು: ಅರಮನೆ ನಗರಿಯನ್ನು ಬೆಚ್ಚಿ ಬೀಳಿಸಿದ್ದ ದರೋಡೆ ಹಾಗೂ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖತರ್ನಾಕ್ ಬಾಂಬೆ ಬುಡ್ಡಾನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮೈಸೂರಿನ ಚಿನ್ನದಂಗಡಿಯಲ್ಲಿ ನಡೆದಿದ್ದ ದರೋಡೆ, ಶೂಟ್‍ಔಟ್ ಪ್ರಕರಣ ಮಾತ್ರವಲ್ಲದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ದರೋಡೆಕೋರ ಮುದುಕನನ್ನು ಇದೀಗ ಬಂಧಿಸಲಾಗಿದೆ. ಈ ಮೂಲಕ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಮುದುಕನನ್ನು ಮೈಸೂರು ಖಾಕಿ ಪಡೆ ಬಂಧಿಸಿದಂತಾಗಿದೆ. ಇದನ್ನೂ ಓದಿ: ಕೋವಿಡ್‌ಗೂ ಮೊದಲು ಬಂದಿದ್ದ ನಿಫಾ ವೈರಸ್‌ಗೆ ಕೇರಳದಲ್ಲಿ 12ರ ಬಾಲಕ ಬಲಿ
60 ವರ್ಷದ ವೃದ್ಧ ದರೋಡೆಕೋರನ ಸೆರೆಗಾಗಿ ಮೈಸೂರು ಪೊಲೀಸರು ಬಾಂಬೆಯಲ್ಲಿ ಬೀಡುಬಿಟ್ಟಿದ್ದರು. ಬಾಂಬೆಯಲ್ಲಿ ಅಡಗಿದ್ದ ಬುಡ್ಡಾ ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಪೊಲೀಸರು ಎಲ್ಲ ದರೋಡೆಕೋರರ ಹೆಡೆಮುರಿ ಕಟ್ಟಿದ್ದು, ಪ್ರಕರಣ ಸಂಬಂಧ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಯನ್ನು ಸೆರೆ ಹಿಡಿದು ದರೋಡೆ ಶೂಟೌಟ್ ಪ್ರಕರಣಕ್ಕೆ ಪೊಲೀಸರು ತಿಲಾಂಜಲಿ ಹಾಡಿದ್ದಾರೆ.
ಆಗಸ್ಟ್ 23 ರಂದು ಮೈಸೂರಿನ ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್‍ನಲ್ಲಿ ದರೋಡೆ ಹಾಗೂ ಶೂಟೌಟ್ ಘಟನೆ ನಡೆದಿತ್ತು. ಡಕಾಯಿತರು ದರೋಡೆ ಮಾಡಿ ಶೂಟ್‍ಔಟ್ ಮಾಡಿದ್ದರು. ಈ ವೇಳೆ ದಡದಹಳ್ಳಿ ಚಂದ್ರು ಮೃತಪಟ್ಟಿದ್ದರು. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸಾರಿಗೆ ಸಚಿವರ ಜಿಲ್ಲೆಯಲ್ಲೇ ಇಲ್ಲ ಸಿಟಿ ಬಸ್- ವಿದ್ಯಾರ್ಥಿಗಳು, ಕಾರ್ಮಿಕರ ಪರದಾಟ
ಚಿನ್ನದಂಗಡಿಯಲ್ಲಿ ನಡೆದ ದರೋಡೆ ಶೂಟ್‍ಔಟ್ ಪ್ರಕರಣದಲ್ಲಿ 2 ಕೆ.ಜಿ.ಗೂ ಹೆಚ್ಚು ಚಿನ್ನಾಭರಣ ಕಳ್ಳತನವಾಗಿತ್ತು. ದರೋಡೆ ಮಾಡಿದವರಲ್ಲಿ ವೃದ್ಧನ ಪಾತ್ರ ಹಾಗೂ ಚಿನ್ನಾಭರಣದ ಪ್ರಮಾಣ ಸಿಂಹಪಾಲಿದೆ. ಈ 60 ವರ್ಷದ ವೃದ್ಧನ ಬಳಿಯೇ 1 ಕೆ.ಜಿ.ಗೂ ಹೆಚ್ಚು ಚಿನ್ನಾಭರಣವಿದೆ ಎನ್ನಲಾಗಿತ್ತು.
20 ವರ್ಷದವನಿದ್ದಾಗಲಿಂದಲೂ ಆಭರಣ ಕಳ್ಳತನದಲ್ಲಿ ಪರಿಣಿತಿ ಹೊಂದಿರುವ ವೃದ್ಧ, ಬಾಂಬೆ ಬುಡ್ಡಾ ಅಂತಲೇ ಕುಖ್ಯಾತಿ ಹೊಂದಿದ್ದಾನೆ. ಹೀಗಾಗಿ ಈತನ ಪತ್ತೆಗೆ ಮೈಸೂರು ಪೊಲೀಸರು ಮುಂಬೈಗೆ ತೆರಳಿದ್ದರು.
ಕಾರವಾರ: ಕೋಣಿ ಬೀಚ್ ನಲ್ಲಿ ನಿಲ್ಲಿಸಿದ್ದ ದೋಣಿಯನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಲ್ಲಿ ಕದ್ದು, ಅರಬ್ಬಿ ಸಮುದ್ರದ ಮಧ್ಯದಲ್ಲಿರುವ ಲೈಟ್ ಹೌಸ್ ಪಕ್ಕದ ದ್ವೀಪದಲ್ಲಿ ಸಿಲುಕಿ ಪರದಾಡಿರುವ ಘಟನೆ ನಡೆದಿದೆ.
ಲೈಟ್ ಹೌಸ್ ನೋಡಲು ಹೋದ ಮಹಾರಾಷ್ಟ್ರ ಮೂಲದ ಸಪ್ನಲ್ (21) ಅರಬ್ಬಿ ಸಮುದ್ರದ ಮಧ್ಯದಲ್ಲಿರುವ ಲೈಟ್ ಹೌಸ್ ಪಕ್ಕದ ದ್ವೀಪದಲ್ಲಿ ಸಿಲುಕಿಕೊಂಡಿದ್ದ. ಬಳಿಕ ಕರಾವಳಿ ಕಾವಲುಪಡೆ ಸಿಬ್ಬಂದಿ ರಕ್ಷಣೆ ಮಾಡಿ, ಕಾರವಾರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಅರಗ ಜ್ಞಾನೇಂದ್ರಗೆ ಅಲ್ಪನಿಗೆ ಐಶ್ವರ್ಯ ಸಿಕ್ಕ ಹಾಗೇ ಆಗಿದೆ: ಬಿ.ಕೆ ಸಂಗಮೇಶ್
ಇಂದು ಕಾರವಾರದ ಕೋಣಿ ಬೀಚ್ ಗೆ ಬಂದಿದ್ದ ಈತನಿಗೆ ಅರಬ್ಬಿ ಸಮುದ್ರದ ಮಧ್ಯ ಭಾಗದಲ್ಲಿರುವ ಲೈಟ್ ಹೌಸ್ ನೋಡುವ ಹಂಬಲವಾಗಿದೆ. ಬೀಚ್ ನಲ್ಲಿ ನಿಲ್ಲಿಸಿದ್ದ ಓಂ ಯತಾಳ ಎಂಬ ನಾಡದೋಣಿಯನ್ನು ಕುಡಿದ ಮತ್ತಲ್ಲಿ ಕದ್ದು, ಸಮುದ್ರದಲ್ಲಿ ಹೋಗಿ ಲೈಟ್ ಹೌಸ್ ತಲುಪಿದ್ದಾನೆ. ಈ ವೇಳೆ ದೋಣಿಯ ಲಂಗುರನ್ನು ಸರಿಯಾಗಿ ಹಾಕದ್ದರಿಂದ ಲೈಟ್ ಹೌಸ್ ಬಳಿಯ ದ್ವೀಪದಲ್ಲಿರುವ ಬಂಡೆಯ ಬಳಿ ಸಿಲುಕಿಕೊಂಡಿದೆ.
ಈ ಕುರಿತು ಮಾಹಿತಿ ಪಡೆದ ಕರಾವಳಿ ಕಾವಲುಪಡೆ ಸಿಪಿಐ ನಿಶ್ಚಲ್ ಕುಮಾರ್, ಇಂಟರ್‍ಸೆಪ್ಟರ್ ಬೋಟ್ ಮೂಲಕ ಸ್ಥಳಕ್ಕೆ ತೆರಳಿ, ಈತನನ್ನು ರಕ್ಷಿಸಿ ಕರೆತಂದಿದ್ದಾರೆ. ಬಳಿಕ ಕಾರವಾರದ ಆಸ್ಪತ್ರೆಗೆ ದಾಖಲಿಸಿದ್ದಾರೆ.