Tag: ಕಳಪೆ ಬೀಜ

  • ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳಪೆ ಬೀಜಗಳ ಮಾರಾಟ ಹೆಚ್ಚಳ – ರೈತರಿಗೆ ಭಾರೀ ನಷ್ಟ

    ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳಪೆ ಬೀಜಗಳ ಮಾರಾಟ ಹೆಚ್ಚಳ – ರೈತರಿಗೆ ಭಾರೀ ನಷ್ಟ

    – ವಿಜಯನಗರಕ್ಕೆ ಮೊದಲ ಸ್ಥಾನ

    ಕೊಪ್ಪಳ: ಮುಂಗಾರು, ಹಿಂಗಾರು ಸಮಯದಲ್ಲಿ ಬಿತ್ತನೆ ಮಾಡುವ ರೈತರಿಗೆ ಕಂಪನಿಗಳು ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳನ್ನು ನೀಡುತ್ತಿದ್ದು, ಈ ರೀತಿಯ ಪ್ರಕರಣಗಳು ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಕಂಡುಬಂದಿದೆ. ಈ ಪೈಕಿ ವಿಜಯನಗರ ಜಿಲ್ಲೆ ಮೊದಲ ಸ್ಥಾನದಲ್ಲಿರುವ ಅಂಶ ಬೆಳಕಿಗೆ ಬಂದಿದೆ.

    ಹಿಂದುಳಿದ ಜಿಲ್ಲೆಗಳು ಎಂದು ಗುರುತಿಸಿಕೊಂಡಿರುವ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಜನರು ಹೆಚ್ಚಿನ ಪ್ರಮಾಣದಲ್ಲಿ ಕೃಷಿಯನ್ನು ಅವಲಂಬಿಸಿದ್ದಾರೆ. ಪ್ರತಿ ವರ್ಷ ಮುಂಗಾರು ಮಳೆಯ ಸಂದರ್ಭದಲ್ಲಿ ಮಳೆಯನ್ನು ಆಧಾರಿಸಿ ರೈತರು ಬೆಳೆ ಬೆಳೆಯಲು ಮುಂದಾಗುತ್ತಾರೆ.ಇದನ್ನೂ ಓದಿ: ನೀವು ಗೆದ್ದಾಗ ಮಾತ್ರ ಇವಿಎಂ ತಿರುಚಿರಲ್ವಾ? – ಬ್ಯಾಲೆಟ್‌ ಪೇಪರ್‌ ಮತದಾನ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ರೈತರನ್ನು ಗುರಿ ಮಾಡಿಕೊಂಡಿರುವ ಕೆಲ ಬೀಜದ ಕಂಪನಿಗಳು ನಕಲಿ, ಕಳಪೆ ಗುಣಮಟ್ಟದ ಬೀಜಗಳನ್ನು ನೀಡಿ, ರೈತರನ್ನು ಯಾಮಾರಿಸುವ ಪ್ರಕರಣಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿದೆ. ಅದನ್ನು ತಡೆಯಬೇಕು ಎನ್ನುವ ಉದ್ದೇಶದಿಂದ ಆಯಾ ಜಿಲ್ಲೆಗಳ ಕೃಷಿ ಇಲಾಖೆಯ ಕೃಷಿ ಜಾಗೃತ ದಳದ ಅಧಿಕಾರಿಗಳು ಬೀಜದ ಅಂಗಡಿಗಳ ಮೇಲೆ ದಾಳಿ ನಡೆಸಿ, ಬೀಜದ ಮಾದರಿಗಳನ್ನು ಪಡೆದುಕೊಂಡು ಬೀಜ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಪರೀಕ್ಷೆಗೆ ಕಳುಹಿಸಿದ ಬೀಜಗಳಲ್ಲಿ ಅಧಿಕ ಸಂಖ್ಯೆಯ ಕಳಪೆ ಗುಣಮಟ್ಟದ ಬೀಜಗಳು ಇರುವುದು ಗಮನಾರ್ಹ ವಿಷಯವಾಗಿದೆ.

    7 ಜಿಲ್ಲೆಗಳಲ್ಲಿ 1,963 ಮಾದರಿಗಳ ಸಂಗ್ರಹ:
    ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಕಳಪೆ ಗುಣಮಟ್ಟದ ಬೀಜಗಳ ಮಾರಾಟದ ದಂಧೆ ಜೋರಾಗಿಯೇ ನಡೆಯುತ್ತಿದೆ. ನಾಟಿ ಮಾಡಿದ ಬೀಜಗಳು ಮೊಳಕೆಯಾಗದೆ ಇರುವುದು, ಬೆಳೆದಿರುವ ಬೆಳೆ ಹೂ ಬಿಡದೇ ಇರುವುದು ಹಾಗೂ ಕಾಳು ಕಟ್ಟದೆ ಇರುವ ಕಾರಣಕ್ಕೆ ಈ ಭಾಗದ ಲಕ್ಷಾಂತರ ರೈತರು ನಷ್ಟವನ್ನು ಅನುಭವಿ ಸಿದ್ದಾರೆ.

    ಸಾಕಷ್ಟು ದೂರುಗಳು ಕೇಳಿ ಬಂದಿರುವ ಹಿನ್ನೆಲೆ ಪ್ರಸಕ್ತ 2023-24ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳನ್ನು ಸೇರಿಕೊಂಡು ಕೃಷಿ ಜಾಗೃತ ದಳದ ಅಧಿಕಾರಿಗಳು 1,963 ಬೀಜದ ಮಾದರಿಗಳನ್ನು ಪಡೆದುಕೊಂಡು ಬೀಜ ಪರೀಕ್ಷಾ ಕೇಂದ್ರಕ್ಕೆ ಗುಣಮಟ್ಟ ಪರೀಕ್ಷೆಗಾಗಿ ಕಳುಹಿಸಿ ಕೊಟ್ಟಿದ್ದಾರೆ.

    ಇದರಲ್ಲಿ ಪರೀಕ್ಷಾ ಕೇಂದ್ರದ ಅಧಿಕಾರಿಗಳು 1,919 ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆಯಲ್ಲಿ 63 ಕಂಪನಿಗಳ ಬೀಜಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಬಿತ್ತನೆಗೆ ಯೋಗ್ಯವಲ್ಲ ಎನ್ನುವ ಅಂಶ ತಿಳಿದುಬಂದಿದೆ. ಇನ್ನೂಳಿದ 44 ಮಾದರಿಗಳು ಅಧಿಕಾರಿಗಳು ಸರಿಯಾಗಿ ಸಂಗ್ರಹ ಮಾಡಿಲ್ಲ ಎನ್ನುವ ಕಾರಣಕ್ಕೆ ಪರೀಕ್ಷಾ ಕೇಂದ್ರದಲ್ಲಿ ತಿರಸ್ಕೃತಗೊಂಡಿವೆ.

    ಪರೀಕ್ಷಾ ಕೇಂದ್ರದಲ್ಲಿ ಬೀಜಗಳ ಪರೀಕ್ಷೆ ನಡೆಸಿದ ವೇಳೆ ವಿಜಯನಗರ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಂದರೆ 30 ಕಂಪನಿಗಳ ಬೀಜಗಳು ಕಳಪೆಯಾಗಿರುವುದು ಬೆಳಕಿಗೆ ಬಂದಿದೆ. ಇನ್ನೂ ಕೊಪ್ಪಳ ಜಿಲ್ಲೆಯಲ್ಲಿ 13 ಕಂಪನಿಗಳ ಬೀಜಗಳು ಕಳಪೆಯಾಗಿದ್ದು, ಎರಡನೇ ಸ್ಥಾನದಲ್ಲಿ ಇದೆ.

    ಜಿಲ್ಲಾವಾರು ಬೀಜಗಳ ಸಂಗ್ರಹ:
    ಕೊಪ್ಪಳ: ಒಟ್ಟು ಬೀಜಗಳು 287, ತಿರಸ್ಕೃತ ಬೀಜಗಳು 00, ಪರೀಕ್ಷಿಸಿದ ಬೀಜಗಳು 287, ಕಳಪೆ ಬೀಜ ಕಂಪನಿಗಳು 13
    ರಾಯಚೂರು: ಒಟ್ಟು ಬೀಜಗಳು 242, ತಿರಸ್ಕೃತ ಬೀಜಗಳು 12, ಪರೀಕ್ಷಿಸಿದ ಬೀಜಗಳು 230, ಕಳಪೆ ಬೀಜ ಕಂಪನಿಗಳು 04
    ಬಳ್ಳಾರಿ: ಒಟ್ಟು ಬೀಜಗಳು 359, ತಿರಸ್ಕೃತ ಬೀಜಗಳು 01, ಪರೀಕ್ಷಿಸಿದ ಬೀಜಗಳು 358, ಕಳಪೆ ಬೀಜ ಕಂಪನಿಗಳು 06
    ವಿಜಯನಗರ: ಒಟ್ಟು ಬೀಜಗಳು 390, ತಿರಸ್ಕೃತ ಬೀಜಗಳು 08, ಪರೀಕ್ಷಿಸಿದ ಬೀಜಗಳು 382, ಕಳಪೆ ಬೀಜ ಕಂಪನಿಗಳು 30
    ಕಲಬುರಗಿ: ಒಟ್ಟು ಬೀಜಗಳು 251, ತಿರಸ್ಕೃತ ಬೀಜಗಳು 05, ಪರೀಕ್ಷಿಸಿದ ಬೀಜಗಳು 246, ಕಳಪೆ ಬೀಜ ಕಂಪನಿಗಳು 01
    ಯಾದಗಿರಿ: ಒಟ್ಟು ಬೀಜಗಳು 146, ತಿರಸ್ಕೃತ ಬೀಜಗಳು 05, ಪರೀಕ್ಷಿಸಿದ ಬೀಜಗಳು 141, ಕಳಪೆ ಬೀಜ ಕಂಪನಿಗಳು 03
    ಬೀದರ್: ಒಟ್ಟು ಬೀಜಗಳು 288, ತಿರಸ್ಕೃತ ಬೀಜಗಳು 13, ಪರೀಕ್ಷಿಸಿದ ಬೀಜಗಳು 275, ಕಳಪೆ ಬೀಜ ಕಂಪನಿಗಳು 06.ಇದನ್ನೂ ಓದಿ: ರಾಮನಗರ| ಆಯುಧಪೂಜೆಯಲ್ಲಿ ರೌಡಿಶೀಟರ್‌ಗಳನ್ನು ಸನ್ಮಾನಿಸಿದ ಪೊಲೀಸರು

  • ಕಾಂಗ್ರೆಸ್‍ಗೆ ಭವಿಷ್ಯ ಇಲ್ಲವೆಂದು ಈಗಾಗಲೇ ಮನೆಗೆ ಕಳಿಸಿದ್ದಾರೆ: ಸಿದ್ದರಾಮಯ್ಯಗೆ ಶೆಟ್ಟರ್ ತಿರುಗೇಟು

    ಕಾಂಗ್ರೆಸ್‍ಗೆ ಭವಿಷ್ಯ ಇಲ್ಲವೆಂದು ಈಗಾಗಲೇ ಮನೆಗೆ ಕಳಿಸಿದ್ದಾರೆ: ಸಿದ್ದರಾಮಯ್ಯಗೆ ಶೆಟ್ಟರ್ ತಿರುಗೇಟು

    ಧಾರವಾಡ: ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ ಎಂದು ಇಗಾಗಲೇ ಮನೆಗೆ ಕಳಿಸಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.

    ಬಿಜೆಪಿ ಪಕ್ಷದಿಂದ ರಾಜ್ಯದ ಜನರಿಗೆ ಭವಿಷ್ಯ ಇಲ್ಲ ಎಂದು ಧಾರವಾಡದಲ್ಲಿ ಸಿದ್ದರಾಮಯ್ಯ ಈ ಹಿಂದೆ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ ಜಗದೀಶ್ ಶೆಟ್ಟರ್, ಕಾಂಗ್ರೆಸ್‍ಗೆ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಭವಿಷ್ಯ ಇಲ್ಲ. ರಾಹುಲ್ ಗಾಂಧಿ ಅವರಂಥ ಫೇಸ್ ಇಟ್ಟುಕೊಂಡು ಹೊರಟಿದ್ದಾರಲ್ಲ, ಅದಕ್ಕೆ ಅವರಿಗೆ ಭವಿಷ್ಯ ಇಲ್ಲ. ಡಿಕೆಶಿಯವರನ್ನು ಕೆಪಿಸಿಸಿ ಅಧ್ಯಕ್ಷ ಮಾಡಿದ್ದಾರೆ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ, ಅದಕ್ಕೆ ನಾನು ಏನೂ ಹೇಳಲ್ಲ ಎಂದರು.

    ಇದೇ ವೇಳೆ ಕಳಪೆ ಗುಣಮಟ್ಟದ ಬಿತ್ತನೆ ಬೀಜ ವಿಚಾರವಾಗಿ ಮಾತನಾಡಿ, ಈಗಾಗಲೇ ಕೃಷಿ ಸಚಿವರು ಈ ಬಗ್ಗೆ ಸಭೆ ಮಾಡಿದ್ದಾರೆ. ಧಾರವಾಡ ಜಿಲ್ಲೆ ಮಾತ್ರವಲ್ಲ ಈ ಭಾಗದ 3-4 ಜಿಲ್ಲೆಗಳಲ್ಲಿ ಎಫೆಕ್ಟ್ ಆಗಿದೆ. ಕಳಪೆ ಬಿತ್ತನೆ ಬೀಜ ವಿಷಯವಾಗಿ ಕ್ಯಾಬಿನೆಟ್ ಸಭೆಯಲ್ಲಿ ಸಮಾಲೋಚನೆ ಮಾಡುತ್ತೇವೆ ಎಂದು ಶಟ್ಟರ್ ಹೇಳಿದರು. ಬೀಜ ನಾಟದ ರೈತರಿಗೆ ಪರಿಹಾರ ಕೊಡಬೇಕಿದೆ. ಬೀಜದ ಕಂಪನಿಯವರೇ ಪರಿಹಾರ ಕೊಡಬೇಕಾಗುತ್ತದೆ. ಈ ಕುರಿತು ಕೃಷಿ ಸಚಿವರು ಮತ್ತು ಕೃಷಿ ಅಧಿಕಾರಿಗಳ ಜೊತೆ ಚರ್ಚಿಸುತ್ತೇವೆ. ನಷ್ಟಕ್ಕೊಳಗಾದ ರೈತರಿಗೆ ಯಾವ ರೀತಿ ಪರಿಹಾರ ಕೊಡಬೇಕು ಎಂಬ ನಿರ್ಧಾರ ಮಾಡುತ್ತೇವೆ ಎಂದರು.

  • ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಯತ್ನ

    ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಯತ್ನ

    ಹಾವೇರಿ: ಕಳಪೆ ಗುಣಮಟ್ಟದ ಬಿತ್ತನೆ ಬೀಜದಿಂದ ಫಸಲು ಬಾರದ ಹಿನ್ನಲೆಯಲ್ಲಿ ರೈತರೊಬ್ಬರು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಯತ್ನಿಸಿದ ರೈತನನ್ನು 52 ವರ್ಷ ವಯಸ್ಸಿನ ಪ್ರಕಾಶ ಯರಬಾಳ್ ಎಂದು ಗುರುತಿಸಲಾಗಿದೆ. ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ವಡೇರಾಯನಹಳ್ಳಿ ಗ್ರಾಮದ ರೈತ ಮೂರು ಎಕರೆ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆಯನ್ನು ಹಾಕಿದ್ದರು. ಆದರೆ ಬೆಳೆ ಬೆಳೆದರೂ ಫಸಲು ಮಾತ್ರ ಬಂದಿಲ್ಲ. ಇದರಿಂದ ಬೇಸತ್ತ ರೈತ ಕಾವೇರಿ ಕಂಪನಿಗೆ ದೂರು ನೀಡಿದ್ದರು. ಕೃಷಿ ಸಂಶೋಧಕರು ಜಮೀನಿಗೆ ಭೇಟಿ ಪರಿಶೀಲನೆ ನಡೆಸಿ ವರದಿ ನೀಡಿದ್ದರು. ವರದಿಯಲ್ಲಿ ವಾತಾವರಣ ಸರಿ ಇಲ್ಲದ ಕಾರಣ ಫಸಲು ಬಂದಿಲ್ಲ ಅಂತಾ ಹೇಳಲಾಗಿದೆ.

    ಇದರಿಂದಾಗಿ ಪರಿಹಾರ ಸಿಗೋದಿಲ್ಲ ಎಂದು ತಿಳಿದ ರೈತ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡ ರೈತನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.