Tag: ಕಲ್ಲಂಗಡಿ ಹಣ್ಣು

  • ಕಲ್ಲಂಗಡಿ ಸಿಪ್ಪೆಯನ್ನು ಎಸೆಯುವ ಬದಲು ಮಾಡಿ ನೋಡಿ ದೋಸೆ

    ಕಲ್ಲಂಗಡಿ ಸಿಪ್ಪೆಯನ್ನು ಎಸೆಯುವ ಬದಲು ಮಾಡಿ ನೋಡಿ ದೋಸೆ

    ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣನ್ನು ತಿಂದ ಬಳಿಕ ನಾವದರ ಸಿಪ್ಪೆಯನ್ನು ಎಸೆಯುತ್ತೇವೆ. ಆದರೆ ಅದೇ ಸಿಪ್ಪೆಯಿಂದ ಎಂತೆಂತಹ ರುಚಿಕರವಾದ ಅಡುಗೆಗಳನ್ನು ಮಾಡಬಹುದು ಎಂಬುದು ನಿಮಗೆ ತಿಳಿದಿದೆಯಾ? ಕಲ್ಲಂಗಡಿ ಸಿಪ್ಪೆಯ ರಾಯಿತಾ ಮಾಡುವುದು ಹೇಗೆಂದು ನಾವು ಇತ್ತೀಚೆಗಷ್ಟೇ ಹೇಳಿಕೊಟ್ಟಿದ್ದೇವೆ. ಇಂದು ನಾವು ಕಲ್ಲಂಗಡಿ ಸಿಪ್ಪೆ ಬಳಸಿಕೊಂಡು ದೋಸೆ (Watermelon Rind Dosa) ಹೇಗೆ ಮಾಡಬಹುದು ಎಂದು ಹೇಳಿಕೊಡುತ್ತೇವೆ. ನೀವು ಕೂಡಾ ಕಲ್ಲಂಗಡಿ ಹಣ್ಣಿನ ಸಿಪ್ಪೆ ಎಸೆಯದೇ ಈ ರೀತಿ ಡಿಫರೆಂಟ್ ರೆಸಿಪಿಗಳನ್ನು ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ದೋಸೆ ಅಕ್ಕಿ – 4 ಕಪ್
    ಕಲ್ಲಂಗಡಿ ಸಿಪ್ಪೆ – 2 ಕಪ್
    ಉದ್ದಿನಬೇಳೆ – ಅರ್ಧ ಕಪ್
    ಮೆಂತ್ಯ – 2 ಟೀಸ್ಪೂನ್
    ಮಂಡಕ್ಕಿ – 2 ಕಪ್
    ತೆಂಗಿನ ತುರಿ – ಅರ್ಧ ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ದೋಸೆ ಮಾಡಲು ಬೇಕಾಗುವಷ್ಟು

    ಮಾಡುವ ವಿಧಾನ:
    * ಮೊದಲಿಗೆ ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು, ಅದರ ಹಸಿರು ಪದರವನ್ನು ಪೀಲರ್ ಸಹಾಯದಿಂದ ತೆಗೆದುಹಾಕಿ. ನಮಗೆ ದೋಸೆ ಮಾಡಲು ಸಿಪ್ಪೆಯ ಬಿಳಿ ಪದರ ಮಾತ್ರ ಉಪಯೋಗಕ್ಕೆ ಬರುತ್ತದೆ. ಬಳಿಕ ಅದನ್ನು ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕಿಡಿ.
    * ಅಕ್ಕಿ ಹಾಗೂ ಉದ್ದಿನಬೇಳೆಯನ್ನು ತೊಳೆದು, 4-5 ಗಂಟೆಗಳ ಕಾಲ ನೆನೆಸಿಡಿ. ಅಕ್ಕಿಯನ್ನು ರುಬ್ಬುವುದಕ್ಕೂ 1 ಗಂಟೆ ಮೊದಲು ಮಂಡಕ್ಕಿಯನ್ನು ಸೇರಿಸಿ ನೆನೆಸಿ.
    * ಈಗ ಮಿಕ್ಸರ್ ಜಾರ್‌ಗೆ ಕತ್ತರಿಸಿಟ್ಟ ಕಲ್ಲಂಗಡಿ ಹಣ್ಣಿನ ಸಿಪ್ಪೆ ಹಾಗೂ ತೆಂಗಿನ ತುರಿ ಹಾಕಿ ನೀರನ್ನು ಸೇರಿಸದೇ ಸ್ವಲ್ಪ ರುಬ್ಬಿಕೊಳ್ಳಿ.
    * ಈಗ ನೆನೆಸಿದ ಅಕ್ಕಿ ಮಿಶ್ರಣವನ್ನು ಸೇರಿಸಿ, ಎಲ್ಲವನ್ನೂ ನಯವಾಗಿ ರುಬ್ಬಿಕೊಳ್ಳಿ. ಇದನ್ನೂ ಓದಿ: ಡಿಫರೆಂಟ್ ರುಚಿ – ಸಬ್ಬಕ್ಕಿ ಇಡ್ಲಿ ಮಾಡಿ ನೋಡಿ

    * ಬಳಿಕ ಹಿಟ್ಟಿಗೆ ಉಪ್ಪು ಸೇರಿಸಿ, ಮಿಶ್ರಣ ಮಾಡಿ 6-7 ಗಂಟೆಗಳ ಕಾಲ ಹುದುಗಲು ಬಿಡಿ. (ರಾತ್ರಿಯಿಡೀ ಹುದುಗಲು ಬಿಡಬಹುದು)
    * ಬೆಳಗ್ಗೆ ದೋಸೆ ಹಿಟ್ಟಿನ ಸ್ಥಿರತೆ ಪರಿಶೀಲಿಸಿ, ಅಗತ್ಯವಿದ್ದರೆ ಇನ್ನಷ್ಟು ನೀರು ಸೇರಿಸಿ ಮಿಶ್ರಣ ಮಾಡಿ.
    * ಈಗ ದೋಸೆ ಮಾಡುವ ತವಾ ಬಿಸಿ ಮಾಡಿ, ಒಂದು ಸೌಟು ಹಿಟ್ಟನ್ನು ಸುರಿದು, ದೋಸೆಯನ್ನು ದಪ್ಪನೆ ಹರಡಿ. ಕೆಲ ಹನಿ ಎಣ್ಣೆ ಹಾಕಿ, ಮುಚ್ಚಿ ದೋಸೆಯನ್ನು ಬೇಯಿಸಿ.
    * ದೋಸೆ 2 ನಿಮಿಷ ಕಾದ ಬಳಿಕ ಮಗುಚಿ ಹಾಕಿ 1 ನಿಮಿಷ ಕಾಯಿಸಿಕೊಳ್ಳಿ.
    * ಇದೀಗ ಕಲ್ಲಂಗಡಿ ಹಣ್ಣಿನ ಸಿಪ್ಪೆಯ ದೋಸೆ ತಯಾರಾಗಿದ್ದು, ಚಟ್ನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಕಲ್ಲಂಗಡಿ ಸಿಪ್ಪೆಯ ರಾಯಿತಾ – ಒಮ್ಮೆ ನೀವೂ ಟ್ರೈ ಮಾಡಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಲ್ಲಂಗಡಿ ಸಿಪ್ಪೆಯ ರಾಯಿತಾ – ಒಮ್ಮೆ ನೀವೂ ಟ್ರೈ ಮಾಡಿ

    ಕಲ್ಲಂಗಡಿ ಸಿಪ್ಪೆಯ ರಾಯಿತಾ – ಒಮ್ಮೆ ನೀವೂ ಟ್ರೈ ಮಾಡಿ

    ನಾವು ಅದೆಷ್ಟೋ ಹಣ್ಣು, ತರಕಾರಿಗಳನ್ನು ಸೇವಿಸಿ, ಅದರ ಸಿಪ್ಪೆ, ಬೀಜಗಳ ಉಪಯುಕ್ತ ಗುಣಗಳನ್ನು ತಿಳಿಯದೇ ಎಸೆಯುತ್ತೇವೆ. ನಾವಿಂದು ಅಂತಹುದೇ ಒಂದು ಪದಾರ್ಥದಿಂದ ರುಚಿಕರ ಹಾಗೂ ಆರೋಗ್ಯಕರ ಅಡುಗೆ ಮಾಡುವುದನ್ನು ಹೇಳಿಕೊಡುತ್ತೇವೆ. ನೀವು ಕಲ್ಲಂಗಡಿ ಹಣ್ಣನ್ನು ಸವಿದಿರುತ್ತೀರಿ. ಆದರೆ ಅದರ ಸಿಪ್ಪೆಯನ್ನು ಪ್ರತಿ ಬಾರಿ ಎಸೆದಿರುತ್ತೀರಿ ಅಲ್ವಾ? ಇದೇ ಸಿಪ್ಪೆಯನ್ನು ಬಳಸಿ ನಾವಿಂದು ರಾಯಿತಾ (Watermelon Rind Raita) ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ಮುಂದಿನಬಾರಿ ನೀವು ಕಲ್ಲಂಗಡಿ ಹಣ್ಣು ಸವಿದಾಗ ಅದರ ಸಿಪ್ಪೆಯಿಂದ ಮರೆಯದೇ ಈ ರೆಸಿಪಿ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಕಲ್ಲಂಗಡಿ ಹಣ್ಣಿನ ಸಿಪ್ಪೆ – 1 ಕಪ್
    ಮೊಸರು – 2 ಕಪ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    ಕೊತ್ತಂಬರಿ ಪುಡಿ – ಕಾಲು ಟೀಸ್ಪೂನ್
    ಅರಿಶಿನ – ಚಿಟಿಕೆ
    ಉಪ್ಪು – ರುಚಿಗೆ ತಕ್ಕಷ್ಟು
    ಒಗ್ಗರಣೆಗೆ:
    ಎಣ್ಣೆ – 2 ಟೀಸ್ಪೂನ್
    ಸಾಸಿವೆ – ಅರ್ಧ ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ಹಿಂಗ್ – ಚಿಟಿಕೆ
    ಕರಿಬೇವಿನ ಸೊಪ್ಪು – ಕೆಲವು
    ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2 ಇದನ್ನೂ ಓದಿ: ಆಲೂ ಸೇರಿಸಿ ಬೆಂಡೆಕಾಯಿ ಪಲ್ಯ ಮಾಡಿದ್ರೆ ಸಖತ್ ಟೇಸ್ಟ್

    ಮಾಡುವ ವಿಧಾನ:
    * ಮೊದಲಿಗೆ ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ಶುಚಿಗೊಳಿಸಿ, ಅದರ ಹಸಿರು ಭಾಗವನ್ನು ಪೀಲರ್ ಸಹಾಯದಿಂದ ತೆಗೆದು ಕೇವಲ ಬಿಳಿ ಭಾಗವನ್ನು ಮಾತ್ರವೇ ತುರಿದು ಇಟ್ಟುಕೊಳ್ಳಿ.
    * ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಸಾಸಿವೆ, ಜೀರಿಗೆ ಸೇರಿಸಿ ಸಿಡಿಸಿ. ಬಳಿಕ ಕರಿಬೇವಿನ ಸೊಪ್ಪು ಹಾಗೂ ಹಸಿರು ಮೆಣಸಿನಕಾಯಿ ಹಾಕಿ 1 ನಿಮಿಷ ಹುರಿಯಿರಿ.
    * ತುರಿದ ಕಲ್ಲಂಗಡಿ ಸಿಪ್ಪೆ, ಅರಿಶಿನ ಹಾಗೂ ಉಪ್ಪು ಸೇರಿಸಿ 1 ನಿಮಿಷ ಫ್ರೈ ಮಾಡಿ.
    * ಈಗ ಜೀರಿಗೆ ಪುಡಿ, ಕೊತ್ತಂಬರಿ ಪುಡಿ ಸೇರಿಸಿ, ಕಲ್ಲಂಗಡಿ ಸಿಪ್ಪೆ ಮೃದುವಾಗುವವರೆಗೆ 5 ನಿಮಿಷ ಮುಚ್ಚಿ ಬೇಯಿಸಿ.
    * ಈಗ ಉರಿಯನ್ನು ಆಫ್ ಮಾಡಿ, ತಣ್ಣಗಾಗಲು ಬಿಡಿ.
    * ಬಳಿಕ ಮೊಸರು, ಉಪ್ಪು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
    * ಇದೀಗ ಕಲ್ಲಂಗಡಿ ಸಿಪ್ಪೆಯ ರಾಯಿತಾ ತಯಾರಾಗಿದ್ದು, ಅನ್ನ, ಚಪಾತಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಆರೋಗ್ಯಕರ ದೊಡ್ಡಪತ್ರೆ ಸೊಪ್ಪಿನ ರಸಂ ಮಾಡಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿಂದೂಯೇತರನ ಅಂಗಡಿ ಧ್ವಂಸ ಪ್ರಕರಣ- ಶ್ರೀರಾಮಸೇನೆಯ ನಾಲ್ವರ ಬಂಧನ

    ಹಿಂದೂಯೇತರನ ಅಂಗಡಿ ಧ್ವಂಸ ಪ್ರಕರಣ- ಶ್ರೀರಾಮಸೇನೆಯ ನಾಲ್ವರ ಬಂಧನ

    ಧಾರವಾಡ: ಹಿಂದೂತೇರನ ಅಂಗಡಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶ್ರೀರಾಮ ಸೇನೆಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹಿಂದೂಯೇತರ ಅಂಗಡಿಯಲ್ಲಿದ್ದ ಕಲ್ಲಂಗಡಿ, ತೆಂಗಿನಕಾಯಿ ಒಡೆದುಹಾಕಿದ ಶ್ರೀರಾಮಸೇನೆ ಕಾರ್ಯಕರ್ತರು

    ಮೈಲಾರಪ್ಪ ಗುಡ್ಡಪ್ಪನವರ, ಮಹಾಲಿಂಗ ಐಗಳಿ, ಚಿದಾನಂದ ಕಲಾಲ ಹಾಗೂ ಕುಮಾರ ಕಟ್ಟಿಮನಿ ಬಂಧಿತರು. ನಬಿಸಾಬ್ ಮಾಲೀಕತ್ವದ ಕಲ್ಲಂಗಡಿ ಹಣ್ಣಿನಂಗಡಿ ಧ್ವಂಸ ಮಾಡಲಾಗಿತ್ತು. ಗಲಾಟೆ ಸಂಬಂಧ ನಬಿಸಾಬ್ ಅವರು ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ದೂರು ಸ್ವೀಕರಿಸಿರುವ ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.

    ನಡೆದಿದ್ದೇನು.?
    ಧಾರವಾಡ ಹೊರವಲಯದ ನುಗ್ಗಿಕೇರೆ ಆಂಜನೇಯನ ದೇವಸ್ಥಾನಕ್ಕೆ ಶನಿವಾರ ಸಾವಿರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ. ದೇವಸ್ಥಾನದ ಬಳಿ 4 ಹಿಂದೂಯೇತರ ಅಂಗಡಿಗಳಿದ್ದು, ಕಳೆದ 15 ದಿನಗಳ ಹಿಂದೆ ಶ್ರೀರಾಮ ಸೇನೆಯ ಕಾರ್ಯಕರ್ತರು ದೇವಸ್ಥಾನದ ಬಳಿ ಬಂದು ಪ್ರತಿಭಟನೆ ಮಾಡಿದ್ದರು. ಈ ವೇಳೆ ಹಿಂದೂಯೇತರ ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಮನವಿ ಮಾಡಿದ್ದರು. ಶನಿವಾರ ಹಿಂದೂಯೇತರ ಅಂಗಡಿಗಳು ಮುಚ್ಚದೇ ಇದ್ದಿದ್ದರಿಂದ ಶ್ರೀರಾಮ ಸೇನೆ ಕಾರ್ಯಕರ್ತರು ಸ್ಥಳಕ್ಕೆ ಬಂದು ಅಂಗಡಿಗಳಲ್ಲಿದ್ದ ಕಲ್ಲಂಗಡಿ ಹಣ್ಣು ಹಾಗೂ ತೆಂಗಿನಕಾಯಿಗಳನ್ನು ಒಡೆದು ಹಾಕಿದ್ದರು.

  • ಕಲ್ಲಂಗಡಿ ಹಣ್ಣಿನ ಮೇಲೆ ಅರಳಿದ ಪುನೀತ್ ಭಾವಚಿತ್ರ

    ಕಲ್ಲಂಗಡಿ ಹಣ್ಣಿನ ಮೇಲೆ ಅರಳಿದ ಪುನೀತ್ ಭಾವಚಿತ್ರ

    ಶಿವಮೊಗ್ಗ: ಅಭಿಮಾನಿಯೊಬ್ಬರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರವನ್ನು ಕಲ್ಲಂಗಡಿ ಹಣ್ಣಿನ ಮೇಲೆ ವಿನ್ಯಾಸಗೊಳಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ.

    ಇತ್ತೀಚೆಗಷ್ಟೇ ಅಕಾಲಿಕ ನಿಧನ ಹೊಂದಿದ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಜಿಲ್ಲೆಯ ಭದ್ರಾವತಿಯ ಕಲಾವಿದ ಮಹಮದ್ ಫೈಜಾನ್ ಕಲ್ಲಂಗಡಿ ಹಣ್ಣಿನ ಮೇಲೆ ತಮ್ಮ ಕಲಾ ಕೌಶಲ್ಯದ ಮೂಲಕ ಅಪ್ಪು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜ್‍ಕುಮಾರ್ ರಾವ್ – ಫೋಟೋ ವೈರಲ್

    ಪುನೀತ್ ರಾಜ್‍ಕುಮಾರ್ ಅವರ ಸ್ಮರಣಾರ್ಥ ಅವರಿಗೆ ಗೌರವ ಸಲ್ಲಿಸಲು ಕಲ್ಲಂಗಡಿ ಹಣ್ಣಿನಲ್ಲಿ ಆಕರ್ಷಕ ಕಲಾಕೃತಿಯನ್ನು ರಚಿಸಿದ್ದಾರೆ. ಕಲಾವಿದನ ಈ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ. ವಿಶೇಷ ಎಂದರೆ ಈ ಕಲಾಕೃತಿಗೆ ಬಣ್ಣ ಬಣ್ಣದ ವಿದ್ಯುತ್ ದೀಪ ಸಹ ಅಳವಡಿಕೆ ಮಾಡುವ ಮೂಲಕ ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ- ಸಿಎಂ ಘೋಷಣೆ

    ಮಹಮದ್ ಫೈಜಾನ್ ಅವರು ಸ್ಟಿಕ್ಕರ್ ಕಟಿಂಗ್ಸ್, ಬಣ್ಣ ಲೇಪನ ವೃತ್ತಿ ಜೊತೆಗೆ ಕುಂಚ ಕಲಾವಿದರಾಗಿ ಸಹ ಗುರುತಿಸಿಕೊಂಡಿದ್ದು, ತಮ್ಮಲ್ಲಿನ ಕೆತ್ತನೆಯ ಕಲಾ ಕೌಶಲ್ಯದ ಮೂಲಕ ಹಲವಾರು ಕಲಾಕೃತಿಗಳನ್ನು ರಚಿಸಿದ್ದಾರೆ. ಗಣ್ಯರ ಹುಟ್ಟುಹಬ್ಬ ಸೇರಿದಂತೆ ವಿಶೇಷ ದಿನಗಳಂದು ಕಲ್ಲಂಗಡಿ ಹಣ್ಣಿನಲ್ಲಿ ಅವರ ಕಲಾಕೃತಿಗಳನ್ನು ರಚಿಸಿದ್ದಾರೆ.

    ಫೈಜಾನ್ ಅವರು ಕೇವಲ ಕಲ್ಲಂಗಡಿ ಹಣ್ಣು ಮಾತ್ರವಲ್ಲದೇ ಎಲೆಗಳ ಮೇಲೆ ಕಲಾಕೃತಿಗಳನ್ನು ರಚಿಸಿದ್ದಾರೆ. ಗೋಡೆಗಳ ಮೇಲೆ ಆಕರ್ಷಕವಾದ ಕುಂಚ ಕಲೆ, ವರ್ಣ ಚಿತ್ರ ಕಲೆಗಳಲ್ಲಿಯೂ ಸಹ ಪರಿಣಿತರಾಗಿದ್ದಾರೆ.

  • ಕಲ್ಲಂಗಡಿ ಹಣ್ಣಿನ ಪಿಜ್ಜಾ ವೀಡಿಯೋ ವೈರಲ್

    ಕಲ್ಲಂಗಡಿ ಹಣ್ಣಿನ ಪಿಜ್ಜಾ ವೀಡಿಯೋ ವೈರಲ್

    ಕ್ಯಾನ್ಬೆರಾ: ಪಿಜ್ಜಾ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ, ಅದರಲ್ಲಿಯೂ ಈಗ ಹಲವು ವಿಭಿನ್ನ ಟೇಸ್ಟಿ ಪಿಜ್ಜಾಗಳಿದ್ದು, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ  ಇಷ್ಟ ಪಡುತ್ತಾರೆ. ಸದ್ಯ ವ್ಯಕ್ತಿಯೋರ್ವ ಕಲ್ಲಂಗಡಿ ಹಣ್ಣಿನಿಂದ ಪಿಜ್ಜಾ ತಯಾರಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ವೀಡಿಯೋವನ್ನು ಓಲಿ ಪ್ಯಾಟರ್ಸನ್ ಎಂಬವರು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಮೊದಲಿಗೆ ಕಲ್ಲಂಗಡಿ ಹಣ್ಣನ್ನು ಕತ್ತರಿಸುತ್ತಾರೆ. ಬಳಿಕ ಅದನ್ನು ಗ್ರಿಲ್ ಮೇಲೆ ಬೇಯಿಸಿಕೊಳ್ಳುತ್ತಾರೆ. ನಂತರ ಅದನ್ನು ಪಕ್ಕಕ್ಕೆ ತೆಗೆದುಕೊಂಡು ಬಾರ್ಬೆಕ್ಯೂ ಸಾಸ್‍ನನ್ನು ಹಚ್ಚಿ, ಅದರ ಸುತ್ತಾ ಚೀಸ್ ಉದುರಿಸುತ್ತಾರೆ ಮತ್ತು ಪೆಪ್ಪೆರೋನಿ ಹರಡಿ, ಚೀಸ್ ಕರಗುವವರೆಗೂ ಓವೆನ್‍ನಲ್ಲಿಟ್ಟು ಬೇಯಿಸಿದ್ದಾರೆ. ಕೊನೆಗೆ ತಯಾರಾದ ಕಲ್ಲಂಗಡಿ ಪಿಜ್ಜಾವನ್ನು ಹೊರ ತೆಗೆದು ಕಟ್ ಮಾಡಿ ಪಿಜ್ಜಾ ಸವಿದಿದ್ದಾರೆ.ಇದನ್ನೂ ಓದಿ:ಬಾಲಕಿಗೆ ಸೆಕ್ಸ್ ವೀಡಿಯೋ ಕಳಿಸ್ತಿದ್ದ ಆಂಟಿ ವಿರುದ್ಧ FIR

    ಸದ್ಯ ಓಲಿ ಪ್ಯಾಟರ್ಸನ್ ಪಿಜ್ಜಾ ರೆಸಿಪಿ ವೀಡಿಯೋ ನೋಡಿ ಡೊಮಿನೋಸ್ ಆಸ್ಟ್ರೇಲಿಯಾ ಪ್ರೇರಿತಗೊಂಡು ಇದನ್ನು ಟ್ರೈ ಮಾಡಲು ಪ್ರಯತ್ನಿಸಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದನ್ನೂ ಓದಿ:ಇನ್‍ಸ್ಟಾಗ್ರಾಂ ಖಾತೆ ಹ್ಯಾಕ್ – ಅಂತರಾಷ್ಟ್ರೀಯ ಷಡ್ಯಂತ್ರ ಎಂದ ಕಂಗನಾ

     

    View this post on Instagram

     

    A post shared by Oli Paterson (@elburritomonster)

  • ಕಲ್ಲಂಗಡಿ ಕೊಳ್ಳೋರಿಲ್ಲ, ಸೂಕ್ತ ಮಾರುಕಟ್ಟೆ ಕಲ್ಪಿಸಿ- ಸಿಎಂಗೆ ರೈತನ ಮನವಿಯ ವಿಡಿಯೋ ವೈರಲ್

    ಕಲ್ಲಂಗಡಿ ಕೊಳ್ಳೋರಿಲ್ಲ, ಸೂಕ್ತ ಮಾರುಕಟ್ಟೆ ಕಲ್ಪಿಸಿ- ಸಿಎಂಗೆ ರೈತನ ಮನವಿಯ ವಿಡಿಯೋ ವೈರಲ್

    ಚಾಮರಾಜನಗರ: ಕಲ್ಲಂಗಡಿ ಕೊಳ್ಳುವವರಿಲ್ಲದೆ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಹೀಗಾಗಿ ಗಡಿ ಜಿಲ್ಲೆ ಅನ್ನದಾತ ಸೂಕ್ತ ಮಾರುಕಟ್ಟೆ ಕಲ್ಪಿಸುವಂತೆ ಮುಖ್ಯಮಂತ್ರಿ ಬಳಿ ಮನವಿ ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಸಿಎಂ ಯಡಿಯೂರಪ್ಪ ಸರ್ಕಾರದ ನಡೆ ರೈತರ ಕಡೆ ಅಂತಾರೆ. ಆದರೆ ಇಲ್ಲಿಯವರೆಗೆ ಒಬ್ಬ ಅಧಿಕಾರಿಯೂ ಕೂಡ ರೈತರ ಕಷ್ಟ ಆಲಿಸುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಷ್ಟಪಟ್ಟು ಬೆಳೆದ ಕಲ್ಲಂಗಡಿ ಹಣ್ಣನ್ನು ಕೇಳುವವರಿಲ್ಲದೆ. ಮಣ್ಣು ಪಾಲಾಗುತ್ತಿದೆ. ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೆದ್ದನಪಾಳ್ಯ ಗ್ರಾಮದಲ್ಲೇ ಹತ್ತಾರು ಎಕರೆ ಕಲ್ಲಂಗಡಿ ಬೆಳೆಯಲಾಗಿದೆ. ಆದರೆ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಸಿಗುತ್ತಿಲ್ಲ ಎಂದು ದೂರಿದ್ದಾರೆ.a

    ಕೊರೊನಾ ಹಿನ್ನೆಲೆ ಕೈಗೆ ಬಂದ ಕಲ್ಲಂಗಡಿ ಬೆಳೆಯನ್ನು ಯಾರೂ ಕೇಳದಂತಾಗಿದೆ. ತಮಿಳುನಾಡು-ಚಾಮರಾಜನಗರ ಜಿಲ್ಲಾ ಗಡಿಯ ಪೆದ್ದನಪಾಳ್ಯ ಗ್ರಾಮದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಸುಮಾರು 15 ಎಕರೆ ಪ್ರದೇಶದಲ್ಲಿ ಲಕ್ಷಾಂತರ ರೂ.ಖರ್ಚು ಮಾಡಿ ಕಷ್ಟಪಟ್ಟು ಬೆಳೆದಿರುವ ಕಲ್ಲಂಗಡಿ ಹಣ್ಣುಗಳು ಈಗ ನೆಲಕಚ್ಚಿವೆ.

    ಕಟಾವಿಗೆ ಬಂದ ಕಲ್ಲಂಗಡಿ ಬೆಳೆಯನ್ನು ಕೊಂಡುಕೊಳ್ಳಲು ಯಾರು ಬರುತ್ತಿಲ್ಲ. ಮಾರುಕಟ್ಟೆ ವ್ಯವಸ್ಥೆಯೂ ಇಲ್ಲ, ಇದರಿಂದಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದೇವೆ. ಕಳೆದ ಬಾರಿ ಸಹ ಕಲ್ಲಂಗಡಿಯನ್ನು ಮಣ್ಣು ಪಾಲು ಮಾಡಲಾಗಿತ್ತು. ಈ ಬಾರಿ ಇಳುವರಿ ಹೆಚ್ಚು ಬಂದಿದ್ದು, ಹಾಳು ಮಾಡಲು ಮನಸ್ಸಾಗುತ್ತಿಲ್ಲ. ಹೀಗಾಗಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಎಂದು ಮನವಿ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಚರಂಡಿಯಲ್ಲಿ ಕಲ್ಲಂಗಡಿ ಹಣ್ಣು ತೊಳೆದು ಮಾರುತ್ತಿದ್ದ ಇಬ್ಬರ ಬಂಧನ

    ಚರಂಡಿಯಲ್ಲಿ ಕಲ್ಲಂಗಡಿ ಹಣ್ಣು ತೊಳೆದು ಮಾರುತ್ತಿದ್ದ ಇಬ್ಬರ ಬಂಧನ

    ಚಿಕ್ಕೋಡಿ (ಬೆಳಗಾವಿ): ಚರಂಡಿಯಲ್ಲಿ ಕಲ್ಲಂಗಡಿ ಹಣ್ಣುಗಳನ್ನ ತೊಳೆದು ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಬೆಳಗಾವಿ ಜಿಲ್ಲೆ ನಿಪ್ಪಾಣಿಯ ಬಸವೇಶ್ಚರ ಚೌಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ನಿಪ್ಪಾಣಿ ಪಟ್ಟಣದ ಭೋಪಳೆ ಗಲ್ಲಿಯ ಶಾಬಾಜ್ ಮುನ್ನಾ ಸತಾರಿ (20) ಹಾಗೂ ರಿಯಾನ್ ಆಯಾಜ್ ಮಡ್ಡೆ (19) ಬಂಧಿತರು. ಈ ಯುವಕರು ಕಲ್ಲಂಗಡಿ ಹಣ್ಣುಗಳನ್ನ ಚರಂಡಿಯಲ್ಲಿ ತೊಳೆದು ಮಾರಾಟ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ವಿಡಿಯೋವನ್ನು ನೋಡಿದ್ದ ನಿಪ್ಪಾಣಿಯ ಕೆಲವರು ಆರೋಪಿಗಳನ್ನು ಗುರುತಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಆರೋಪಿಗಳು ಈ ಕೃತ್ಯವನ್ನು ಮಾರ್ಚ್ 28ರಂದು ಎಸಗಿದ್ದು, ವಿಡಿಯೋ ವೈರಲ್ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

    ಈ ಸಂಬಂಧ ಬಸವೇಶ್ವರ ಚೌಕ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಗಳನ್ನ ಬಂಧಿಸಿ ಹಿಂಡಲಗಾ ಜೈಲಿಗೆ ಕಳಿಸಿದ್ದಾರೆ.

  • ಕಲ್ಲಂಗಡಿ ಹಣ್ಣು ಸರಬರಾಜು ಮಾಡಲಾಗದೆ ರೈತ ಆತ್ಮಹತ್ಯೆ

    ಕಲ್ಲಂಗಡಿ ಹಣ್ಣು ಸರಬರಾಜು ಮಾಡಲಾಗದೆ ರೈತ ಆತ್ಮಹತ್ಯೆ

    ಕಲಬುರಗಿ: ರಾಜ್ಯದಲ್ಲಿ ಮೊದಲ ಕೊರೊನಾ ಪತ್ತೆಯಾದ ಕಲಬುರಗಿಯಲ್ಲಿ ರೈತರೊಬ್ಬರು ನೇಣಿಗೆ ಶರಣಾಗಿದ್ದಾರೆ.

    ಕೊರೊನಾ ಸೋಂಕು ತಡೆಯಲು ಇಡೀ ಭಾರತವನ್ನೇ ಲಾಕ್ ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡ ಚಿಂಚೋಳಿ ಗ್ರಾಮದ ರೈತ ಕಲ್ಲಂಗಡಿ ಹಣ್ಣು ಸರಬರಾಜು ಮಾಡಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಚಂದ್ರಕಾಂತ ಬಿರಾದಾರ(45) ಸೋಮವಾರ ರಾತ್ರಿ ಜಮೀನಿನಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಚಂದ್ರಕಾಂತ ಅವರು ತಮ್ಮ 3 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣು ಬೆಳೆದಿದ್ದರು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾಗಾಟ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನೊಂದ ರೈತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  • ಮದುವೆ ಕಾರ್ಡ್ ಅಲ್ಲ, ಇದು ಕಲ್ಲಂಗಡಿ ಕಾರ್ಡ್

    ಮದುವೆ ಕಾರ್ಡ್ ಅಲ್ಲ, ಇದು ಕಲ್ಲಂಗಡಿ ಕಾರ್ಡ್

    ಬಳ್ಳಾರಿ: ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಮ್ಮ ಮದುವೆಯ ವೆಡ್ಡಿಂಗ್ ಕಾರ್ಡ್ ನಲ್ಲಿ ತಮ್ಮದೇ ಆದ ವಿಶೇಷ ಕಲ್ಪನೆ ಇರುತ್ತದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ವೆಡ್ಡಿಂಗ್ ಕಾರ್ಡ್ ಮಾಡೋ ಬದಲು ಕಾರ್ಡಿ ಗೊಂದು ಅರ್ಥವಿರಬೇಕೆಂದು ಬಳ್ಳಾರಿಯಲ್ಲಿ ಪ್ರಾಧ್ಯಾಪಕ ತಮ್ಮ ಮದುವೆ ಕಾರ್ಡ್ ನ್ನು ಚಿಕ್ಕದಾಗಿ ಮಾಡಿದ್ದಾರೆ. ಬಳಿಕ ಅದನ್ನು ಕಲ್ಲಂಗಡಿ ಹಣ್ಣಿಗೆ ಅಂಟಿಸಿ ನೀಡುವ ಮೂಲಕ ಬಳ್ಳಾರಿ ಬಿಸಿಲಿಗೆ ಬಳಲಿದ ಜನರನ್ನು ಕೂಲ್ ಕೂಲ್ ಮಾಡಿದ್ದಾರೆ.

    ಖಾಸಗಿ ಕಾಲೇಜಿನ ಪ್ರಾಧ್ಯಾಪಕರಾಗಿರುವ ಸಾಯಿ ಸಂದೀಪ್ ಅವರು ಮದುವೆ ಕಾರ್ಡ್ ಅನ್ನು ಕಲ್ಲಂಗಡಿಯ ಮೇಲೆ ಅಂಟಿಸಿದ್ದಾರೆ. ಇವರ ಮದುವೆ ಮೇ 9ರಂದು ಬಳ್ಳಾರಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

    ನನ್ನ ಮದುವೆ ಕಾರ್ಡ್ ನ್ನು ಡಿಫರೆಂಟಾಗಿ ಮಾಡಬೇಕೆನ್ನುವ ಯೋಚನೆ ಬಂದಾಗ ಈ ಹಣ್ಣಿನ ಐಡಿಯಾ ಬಂತು. ಸಾವಿರಾರು ರೂಪಾಯಿ ಕೊಟ್ಟು ಮದುವೆ ಕಾರ್ಡ್ ಮಾಡಿಸಿದರೂ ಕೊನೆಗೆ ಅದು ಡಸ್ಟ್ ಬಿನ್‍ಗೆ ಸೇರುತ್ತದೆ. ಹೀಗಾಗಿ ನಾನು ನಮ್ಮ ಮದುವೆ ಕಾರ್ಡ್ ನ್ನು ಸಣ್ಣ ಸ್ಟಿಕ್ಕರ್ ಮಾದರಿ ಮಾಡಿಸಿ ಅದನ್ನು ಕಲ್ಲಂಗಡಿ ಹಣ್ಣಿಗೆ ಅಂಟಿಸಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಸ್ಟಿಕ್ಕರ್ ತೆಗೆದು ಕ್ಯಾಲೆಂಡರ್‌ಗೆ ಅಂಟಿಸಿ ಹಣ್ಣು ತಿಂದು ಹೊಟ್ಟೆ ತಂಪು ಮಾಡಿಕೊಂಡು ಮದುವೆ ಬನ್ನಿ ಎನ್ನುವುದು ಸಾಯಿ ಸಂದೀಪ್ ಉದ್ದೇಶವಾಗಿದೆ.

    ಸಾಯಿ ಸಂದೀಪ್ ಮೇ. 9ರಂದು ಬಳ್ಳಾರಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ವಧು ತೇಜಸ್ವಿನಿ ಅವರ ಕೈಹಿಡಿಯಲಿದ್ದಾರೆ. ಈಗಾಗಲೇ 600 ಹಣ್ಣುಗಳನ್ನು ಹಂಚಿದ್ದು, ಇನ್ನೂ 200 ಹಣ್ಣು ಹಂಚೋದು ಬಾಕಿ ಇದೆ. ಕಾರ್ಡ್ ಆದರೆ ಸಲೀಸಾಗಿ ತೆಗೆದುಕೊಂಡು ಹೋಗಬಹುದು ಹಣ್ಣನ್ನು ತೆಗೆದು ಕೊಂಡು ಹೋಗುವುದು ಒಂದಷ್ಟು ತೊಂದರೆಯಾಗುತ್ತದೆ ಎಂದು ಸಾಯಿ ಸಂದೀಪ್ ಮನೆಯವರು ಬೇಡವೆಂದಿದ್ದರು. ಆದರೆ ಸ್ನೇಹಿತರು ಸಪೋರ್ಟ್ ಮಾಡಿದ ಹಿನ್ನೆಲೆಯಲ್ಲಿ ತೊಂದರೆಯಾದರೂ ಸರಿ ಇದರಲ್ಲಿ ತೃಪ್ತಿ ಇದೆ ಎಂದು ಕಾರ್ಡ್ ಗಳನ್ನು ಹಂಚುತ್ತಿದ್ದಾರೆ ಎಂದು ವರನ ಸ್ನೇಹಿತ ಪವನ್ ತಿಳಿಸಿದ್ದಾರೆ.