Tag: ಕಲ್ಲಂಗಡಿ

  • ತೂಕ ಇಳಿಸಲು ತಲೆಕೆಡಿಸಿಕೊಳ್ಳಬೇಡಿ ತಿನ್ನಿ ಕಲ್ಲಂಗಡಿ ಹಣ್ಣು

    ತೂಕ ಇಳಿಸಲು ತಲೆಕೆಡಿಸಿಕೊಳ್ಳಬೇಡಿ ತಿನ್ನಿ ಕಲ್ಲಂಗಡಿ ಹಣ್ಣು

    ಬೇಸಿಗೆಯಲ್ಲಿ (Summer) ಹೇಳಿ ಮಾಡಿಸಿದ ಹಣ್ಣು ಕಲ್ಲಂಗಡಿ (Watermelon). ಬೇಸಿಗೆಯಲ್ಲಿ ಆಗುವ ಆಯಾಸ, ಬಾಯಾರಿಕೆ ಹೋಗಲಾಡಿಸಲು ಇದು ಈ ರಸಭರಿತ ಹಣ್ಣನ್ನು ಹೆಚ್ಚಾಗಿ ಖರೀದಿಸುತ್ತಾರೆ. ಈ ಹಣ್ಣನ್ನು ತಿನ್ನುವುದರಿಂದ ಟೇಸ್ಟ್ ಜೊತೆಗೆ ಅನೇಕ ಪ್ರಯೋಜನಗಳಿವೆ.

    ತೂಕ ಇಳಿಕೆ: ಕಲ್ಲಂಗಡಿ ತಿನ್ನುವುದರಿಂದ ನಿಮ್ಮ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಬೆಳಗ್ಗಿನ ಉಪಹಾರದಲ್ಲಿ ನೀವು ಕಲ್ಲಂಗಡಿಯನ್ನು ತಿನ್ನಬೇಕು. ಇದರಿಂದಾಗಿ ದಿನವಿಡೀ ಫ್ರೆಶ್ ಆಗಿರುತ್ತೀರಿ. ಜೊತೆಗೆ ತೂಕದ ಇಳಿಕೆಯು ಆಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಈ ಹಣ್ಣುಗಳು ನೆಗೆಟಿವ್ ಕ್ಯಾಲೋರಿಯನ್ನು ಸುಡುವಲ್ಲಿ ಸಹಾಯ ಮಾಡುತ್ತದೆ.

    ಜೀರ್ಣಕ್ರಿಯೆಗೆ ಸಹಾಯ: ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೊತೆಗೆ ಇದು ಚರ್ಮದ ಆರೋಗ್ಯ ಹಾಗೂ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಜೊತೆಗೆ ಚಯಾಪಚಯ ಹಾಗೂ ಹಸಿವನ್ನು ಸುಧಾರಿಸುತ್ತದೆ. ಇದನ್ನೂ ಓದಿ: ಪೀರಿಯಡ್ಸ್ ಸಮಯದಲ್ಲಾಗುವ ಹೊಟ್ಟೆನೋವಿಗೆ ಇಲ್ಲಿದೆ ಮನೆ ಮದ್ದು

    ಕಡಿಮೆ ಆಗುತ್ತೆ ಮೂತ್ರಪಿಂಡದ ಅಸ್ವಸ್ಥತೆ: ಪೊಟ್ಯಾಷಿಯಂ ಮತ್ತು ಕ್ಯಾಲ್ಸಿಯಂ ಅಂಶಗಳು ಕಲ್ಲಂಗಡಿಯಲ್ಲಿ ಹೇರಳವಾಗಿ ದೊರೆಯುತ್ತದೆ. ಇದು ನಿಮ್ಮ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ ರಕ್ತದಲ್ಲಿನ ಯೂರಿಕ್ ಆಮ್ಲದ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಮೂತ್ರಪಿಂಡದ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

    ಕಡಿಮೆ ರಕ್ತದೊತ್ತಡ: ಕಲ್ಲಂಗಡಿಯಲ್ಲಿ ಸಿಟ್ರುಲಿನ್ ಎಂಬ ಅಮೈನೋ ಆಮ್ಲವಿದೆ. ಇದನ್ನು ದೇಹದಿಂದ ಅರ್ಜಿನೈನ್ ಆಗಿ ಪರಿವರ್ತಿಸಲಾಗುತ್ತದೆ. ಸಿಟ್ರುಲಿನ್ ಜೊತೆಗೆ ಈ ಅರ್ಜಿನೈನ್ ನೈಟ್ರಿಕ್ ಆಕ್ಸೈಡ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ನೈಟ್ರಿಕ್ ಆಕ್ಸೈಡ್ ರಕ್ತನಾಳಗಳನ್ನು ಹಿಗ್ಗಿಸುತ್ತದೆ ಮತ್ತು ಸಡಿಲಗೊಳಿಸುತ್ತದೆ. ಜೊತೆಗೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

    ನಿಮ್ಮ ತ್ವಚೆಗೆ ಒಳ್ಳೆಯದು: 95 ಪ್ರತಿಶತದಷ್ಟು ಕಲ್ಲಂಗಡಿಯುವ ಕೇವಲ ನೀರಿನ್ನು ಹೊಂದಿರುತ್ತದೆ. ಇದು ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿಮ್ಮ ಚರ್ಮವು ಹೆಚ್ಚು ಕಾಂತಿಯುತವಾಗಿಸುತ್ತದೆ. ಇದನ್ನೂ ಓದಿ: ಮಧುಮೇಹಿಗಳಿಗೆ ಆಹಾರದ ಹೊರತಾಗಿ ಸಕ್ಕರೆ ಮಟ್ಟ ನಿಯಂತ್ರಿಸಲು ಇಲ್ಲಿದೆ ಕೆಲವು ಸಲಹೆ

  • ತಮ್ಮ ಕಲಾ ಕೌಶಲ್ಯದ ಮೂಲಕ ಅಪ್ಪುಗೆ ಗೌರವ ನಮನ ಸಲ್ಲಿಸಿದ ಕಲಾವಿದ

    ತಮ್ಮ ಕಲಾ ಕೌಶಲ್ಯದ ಮೂಲಕ ಅಪ್ಪುಗೆ ಗೌರವ ನಮನ ಸಲ್ಲಿಸಿದ ಕಲಾವಿದ

    ಶಿವಮೊಗ್ಗ: ಇತ್ತೀಚೆಗೆ ಅಕಾಲಿಕ ನಿಧನ ಹೊಂದಿದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಕಲಾವಿದ ಮಹಮದ್ ಫೈಜಾನ್ ಎಂಬವರು ಕಲ್ಲಂಗಡಿ ಹಣ್ಣಿನಲ್ಲಿ ತಮ್ಮ ಕಲಾ ಕೌಶಲ್ಯದ ಮೂಲಕ ಪುನೀತ್ ರಾಜ್‍ಕುಮಾರ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

    ಪುನೀತ್ ರಾಜ್‍ಕುಮಾರ್ ಅವರ ಸ್ಮರಣಾರ್ಥ ಅವರಿಗೆ ಗೌರವ ಸಲ್ಲಿಸಲು ಕಲ್ಲಂಗಡಿ ಹಣ್ಣಿನಲ್ಲಿ ಆಕರ್ಷಕ ಕಲಾಕೃತಿಯನ್ನು ರಚಿಸಿದ್ದಾರೆ. ಕಲಾವಿದನ ಈ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ. ವಿಶೇಷ ಎಂದರೆ ಈ ಕಲಾಕೃತಿಗೆ ಬಣ್ಣ ಬಣ್ಣದ ವಿದ್ಯುತ್ ದೀಪ ಸಹ ಅಳವಡಿಕೆ ಮಾಡುವ ಮೂಲಕ ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಮದ್ಯ ಭಾಗದಲ್ಲಿ ಪುನೀತ್ ಅಭಿಮಾನಿಗಳಿಗೆ ಕಾರ್ಯಕ್ರಮ

    ಮಹಮದ್ ಫೈಜಾನ್ ಅವರು ಸ್ಟಿಕ್ಕರ್ ಕಟಿಂಗ್ಸ್, ಬಣ್ಣ ಲೇಪನ ವೃತ್ತಿ ಜೊತೆಗೆ ಕುಂಚ ಕಲಾವಿದರಾಗಿ ಸಹ ಗುರುತಿಸಿಕೊಂಡಿದ್ದು, ತಮ್ಮಲ್ಲಿನ ಕೆತ್ತನೆಯ ಕಲಾ ಕೌಶಲ್ಯದ ಮೂಲಕ ಹಲವಾರು ಕಲಾಕೃತಿಗಳನ್ನು ರಚಿಸಿದ್ದಾರೆ. ಗಣ್ಯರ ಹುಟ್ಟುಹಬ್ಬ ಸೇರಿದಂತೆ ವಿಶೇಷ ದಿನಗಳಂದು ಕಲ್ಲಂಗಡಿ ಹಣ್ಣಿನಲ್ಲಿ ಅವರ ಕಲಾಕೃತಿಗಳನ್ನು ರಚಿಸಿದ್ದಾರೆ.

    ಫೈಜಾನ್ ಅವರು ಕೇವಲ ಕಲ್ಲಂಗಡಿ ಹಣ್ಣು ಮಾತ್ರವಲ್ಲದೆ ಎಲೆಗಳ ಮೇಲೆ ಕಲಾಕೃತಿಗಳನ್ನು ರಚಿಸಿದ್ದಾರೆ. ಗೋಡೆಗಳ ಮೇಲೆ ಆಕರ್ಷಕವಾದ ಕುಂಚ ಕಲೆ, ವರ್ಣ ಚಿತ್ರ ಕಲೆಗಳಲ್ಲಿಯೂ ಸಹ ಪರಿಣಿತರಾಗಿದ್ದಾರೆ.

  • ಬೆಳೆದ ಬೆಳೆ ಮಾರಲು ರೈತನ ಹೊಸ ಐಡಿಯಾ – ಜಾಲತಾಣ ಬಳಸಿಕೊಂಡು ಕಲ್ಲಂಗಡಿ ಮಾರಾಟ

    ಬೆಳೆದ ಬೆಳೆ ಮಾರಲು ರೈತನ ಹೊಸ ಐಡಿಯಾ – ಜಾಲತಾಣ ಬಳಸಿಕೊಂಡು ಕಲ್ಲಂಗಡಿ ಮಾರಾಟ

    – ಕಲಬುರಗಿಯ ಅನ್ನದಾತ ಎಲ್ಲರಿಗೂ ಮಾದರಿ

    ಕಲಬುರಗಿ: ಲಾಕ್‍ಡೌನ್‍ನಿಂದ ರಾಜ್ಯದಲ್ಲಿ ಲಕ್ಷಾಂತರ ರೈತರು ತಾವು ಬೆಳೆದ ಬೆಳೆಗಳನ್ನ ಮಾರಾಟ ಮಾಡೊಕೆ ಆಗದೇ ತೀವ್ರ ಆರ್ಥಿಕ ಸಂಕಷ್ಟಕ್ಕಿಡಾಗೋ ಅನೇಕ ಉದಾಹರಣೆಗಳನ್ನ ದಿನನಿತ್ಯ ನೋಡ್ತಾನೆ ಇದ್ದೀವಿ. ಆದರೆ ಇಲ್ಲೊಬ್ಬ ಯುವ ರೈತ ಇದಕ್ಕೆ ತದ್ವಿರುದ್ದ. ಅಷ್ಟಕ್ಕೂ ತಮ್ಮ ಜಮೀನಿನಲ್ಲಿ ಬೆಳೆದ ಹಳದಿ ಕಲ್ಲಂಗಡಿ ಬೆಳೆಯನ್ನ ಸಾಮಾಜಿಕ ಜಾಲತಾಣವನ್ನ ಉಪಯೋಗಿಸಿಕೊಂಡು ಮಾರಾಟ ಮಾಡುತ್ತಿದ್ದಾನೆ.

    ಹೌದು. ಮೂಲತಃ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕೊರಳಿ ಗ್ರಾಮದ ಯುವ ರೈತ ಬಸವರಾಜ್, ಕಳೆದ ನಾಲ್ಕೈದು ತಿಂಗಳ ಹಿಂದೆ ತಮ್ಮದೇ ನಾಲ್ಕು ಎಕರೆ ಜಮೀನಿನಲ್ಲಿ ಜರ್ಮನ್ ತಳಿಯ ಹಳದಿ ಕಲ್ಲಂಗಡಿ ಹಣ್ಣನ್ನ ಬೆಳೆದಿದ್ದರು. ನಾಲ್ಕು ಲಕ್ಷ ರೂಪಾಯಿ ಬಂಡವಾಳ ಹಾಕಿ ಕಲ್ಲಂಗಡಿ ಬೆಳೆದ ಮೇಲೆ ಎರಡನೇ ಕೊರೊನಾ ಅಲೇ ಶುರುವಾಗಿ, ಸರ್ಕಾರವು ಲಾಕ್‍ಡೌನ್ ವಿಧಿಸಿತ್ತು. ಇದರಿಂದ ಎಲ್ಲಾ ಹಣ್ಣು, ತರಕಾರಿ ಮಾರುಕಟ್ಟೆಗಳು ಬಂದ್ ಆದ ಕಾರಣ, ಬೆಳೆದ ಲಕ್ಷಾಂತರ ರೂಪಾಯಿ ಮೌಲ್ಯದ ಕಲ್ಲಂಗಡಿ ಹಣ್ಣನ್ನ ಹೇಗಪ್ಪ ಮಾರಾಟ ಮಾಡೊದು ಅಂತಾ ತಲೆ ಮೇಲೆ ಕೈಇಟ್ಟುಕೊಂಡು ಕುಳಿತಿದ್ದರು. ಆಗ ಯುವ ರೈತನ ತಲೆಯಲ್ಲಿ ಹೊಳೆದಿದ್ದು ಸಾಮಾಜಿಕ ಜಾಲತಾಣ. ಇದನ್ನೂ ಓದಿ: ತಂಪಾದ ಕಲ್ಲಂಗಡಿ ಜ್ಯೂಸ್

    ಹಳದಿ ಕಲ್ಲಂಗಡಿ ಹಣ್ಣು ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್ ಅಂತಹ ಮಹಾನಗರಗಳನ್ನ ಬಿಟ್ಟರೇ, ಹಳದಿ ಕಲ್ಲಂಗಡಿ ಹಣ್ಣು ಸಿಗೋದು ಕಲಬುರಗಿ ಜಿಲ್ಲೆಯಲ್ಲೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ವಾಟ್ಸಪ್ ಗ್ರೂಪ್ ಸೇರಿದಂತೆ ಹಿಗೇ ಪ್ರತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಳದಿ ಕಲ್ಲಂಗಡಿ ಹಣ್ಣಿನ ಬಗ್ಗೆ ಭರ್ಜರಿ ಪ್ರಚಾರ ಮಾಡಿದ್ರು. ಅದರಂತೆ ನಿನ್ನೆಯಿಂದ ಎರಡು ಟಂಟಂ ವಾಹನಗಳಲ್ಲಿ ತಂದು ಕಲಬುರಗಿ ನಗರದ ವಿವಿಧೆಡೆ ಒಂದು ಹಳದಿ ಕಲ್ಲಂಗಡಿಗೆ ಐವತ್ತು ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ಹಳದಿ ಬಣ್ಣದ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಯುವಕ

    ಅಂದಹಾಗೇ ಕಲಬುರಗಿ ಜಿಲ್ಲೆಯಲ್ಲಿ ನೂರಾರು ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣನ್ನ ಬೆಳೆದಿದ್ದಾರೆ. ಲಾಕ್‍ಡೌನ್ ನಿಂದಾಗಿ ಕಲ್ಲಂಗಡಿ ಹಣ್ಣು ಮಾರಾಟವಾಗದ ಹಿನ್ನೆಲೆಯಲ್ಲಿ, ಬೇಸತ್ತು ಟ್ರ್ಯಾಕ್ಟರ್‍ನಿಂದ ಕಲ್ಲಂಗಡಿ ಬೆಳೆ ನಾಶ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಮಗೆ ಪರಿಹಾರ ಬೇಕೆಂದು ಪ್ರತಿಭಟನೆ ಮಾಡುತ್ತಿರುವ ವಿಚಾರ ಸಾಮಾನ್ಯವಾಗಿದೆ. ಆದರೆ ಈ ಯುವ ಮಾದರಿ ರೈತ ಬಸವರಾಜ್ ಮಾತ್ರ, ಸಾಮಾಜಿಕ ಜಾಲತಾಣದಲ್ಲಿ ತಾನು ಬೆಳೆದ ಹಳದಿ ಕಲ್ಲಂಗಡಿ ಬಗ್ಗೆ ಪ್ರಚಾರ ಮಾಡಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಈ ಹಳದಿ ಕಲ್ಲಂಗಡಿ ಕಣ್ಣಿನ ದೃಷ್ಟಿಯನ್ನ ಹೆಚ್ಚಿಸುವುದು, ಹೃದಯ ಸಂಬಂಧಿ ಕಾಯಿಲೆಗಳನ್ನ ದೂರ ಮಾಡುವುದು, ಜೀರ್ಣಕ್ರಿಯೆ ವೃದ್ದಿಸುವುದು, ಕ್ಯಾನ್ಸರ್ ತಡೆಗಟ್ಟುವುದು, ಚರ್ಮ ಸೌಂದರ್ಯ ಹೆಚ್ಚಿಸುವುದು ಸೇರಿದಂತೆ ಆರೋಗ್ಯಕ್ಕೆ ಸಹಕಾರಿಯಾದ ಅಂಶಗಳನ್ನ ಹಳದಿ ಕಲ್ಲಂಗಡಿ ಹಣ್ಣು ಒಳಗೊಂಡಿದೆ. ಇನ್ನೂ ರೈತರು ತಾವು ಬೆಳೆದ ಕಲ್ಲಂಗಡಿ ಸೇರಿದಂತೆ ಇತರೇ ಹಣ್ಣುಗಳನ್ನ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಗಮನ ಸೆಳೆದು ಮಾರಾಟ ಮಾಡಬೇಕು ಎಂದು ಬಸವರಾಜ್‍ನ ಸ್ನೇಹಿತರು ಹೇಳುತ್ತಾರೆ.

    ಲಾಕ್‍ಡೌನ್ ಸಂದರ್ಭದಲ್ಲಿ ತಾನು ಹಾಕಿದ ಬಂಡವಾಳಕ್ಕೆ ಹಣ ಬರದಿದ್ದರು ಸಹ, ಬಂಡವಾಳ ಹಣ ಮಾತ್ರ ಈ ರೈತ ಪಡೆಯುತ್ತಿರುವುದು ಎಲ್ಲರ ಹುಬ್ಬೆರುವಂತೆ ಮಾಡಿದೆ. ಒಟ್ಟಾರೆಯಾಗಿ ಲಾಕ್‍ಡೌನ್ ಸಂದರ್ಭದಲ್ಲಿ ಸಹ ಕಲ್ಲಂಗಡಿ ಹಣ್ಣು ಮಾರಾಟ ಮಾಡಿ ಲಕ್ಷ ಲಕ್ಷ ರೂಪಾಯಿ ಲಾಭ ಪಡೆಯುತ್ತಿರುವ ರೈತ ಬಸವರಾಜ್ ಕಾರ್ಯಕ್ಕೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ಹಳದಿ ಕಲ್ಲಂಗಡಿ ಫುಲ್ ಫೇಮಸ್- ಯಲ್ಲೋ ವಾಟರ್‌ಮೆಲನ್‌ಗೆ ಭರ್ಜರಿ ಡಿಮ್ಯಾಂಡ್

  • ಮೂರು ಎಕರೆ ಕಲ್ಲಂಗಡಿ ಬೆಳೆಯನ್ನು ನಾಶಗೊಳಿಸಿದ ರೈತ

    ಮೂರು ಎಕರೆ ಕಲ್ಲಂಗಡಿ ಬೆಳೆಯನ್ನು ನಾಶಗೊಳಿಸಿದ ರೈತ

    ಕಲಬುರಗಿ: ಲಾಕ್‍ಡೌನ್‍ನಿಂದ ಕಲ್ಲಂಗಡಿ ಹಣ್ಣು ಮಾರಾಟವಾಗದ ಹಿನ್ನಲೆ, ಟ್ರ್ಯಾಕ್ಟರ್ ಹೊಡೆದು ತಾನೇ ಬೆಳೆದ ಕಲ್ಲಂಗಡಿ ಹಣ್ಣನ್ನು ರೈತ ಹಾಳು ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ದುಗನೂರು ಗ್ರಾಮದಲ್ಲಿ ನಡೆದಿದೆ.

    ರಾಮಲಿಂಗಯ್ಯ ಕಲಾಲ್ ಎಂಬ ರೈತ ಮೂರು ಎಕರೆಯಲ್ಲಿ ಎರಡು ಲಕ್ಷ ಹಣ ಖರ್ಚು ಮಾಡಿ ಕಲ್ಲಂಗಡಿ ಬೆಳೆದಿದ್ದರು. ಆದರೆ ಲಾಕ್‍ಡೌನ್‍ನಿಂದ ಹಣ್ಣು ಮಾರಾಟವಾಗದೇ ಹೊಲದಲ್ಲಿಯೇ ಹಾಳಾಗಿ ಹೋಗಿದೆ. ಹೀಗಾಗಿ ಕಲ್ಲಂಗಡಿ ಕಿತ್ತು ಬೇರೆ ಬೆಳೆಯಲು ರಾಮಲಿಂಗಯ್ಯ ಮುಂದಾಗಿದ್ದಾರೆ. ಇದನ್ನು ಓದಿ:ಕಠಿಣ ಲಾಕ್‍ಡೌನ್ ಮಧ್ಯೆ ಹೊರ ರಾಜ್ಯಗಳಿಂದ ಕಳ್ಳ ದಾರಿಗಳ ಮೂಲಕ ಎಂಟ್ರಿ- ಕೊರೊನಾ ಹೊತ್ತು ತರುವ ಆತಂಕ

    ಕಳೆದ ವರ್ಷ ಸಹ ಜಮೀನಿನಲ್ಲಿ ಕಲ್ಲಂಗಡಿ ಬೆಳೆದು ಕೈ ಸುಟ್ಟುಕೊಂಡಿದ್ದರು. ಈ ಬಾರಿ ಸಹ ಕೊರೊನಾ ಲಾಕ್ ಡೌನ್ ಹಿನ್ನಲೆ ಅದೇ ಪರಿಸ್ಥಿತಿ ಬಂದಿದೆ. ಮಾರುಕಟ್ಟೆಗೆ ಹಣ್ಣು ತೆಗೆದುಕೊಂಡು ಹೋಗಬೇಕು ಅಂದರೂ, ಗೂಡ್ಸ್ ವಾಹನದವರು ಯಾರು ಮುಂದೆ ಬರುತ್ತಿಲ್ಲ. ನಾವಾದರೂ ಹೋಗಿ ಮಾರಾಟ ಮಾಡಬೇಕು ಅಂದರೂ ಖರೀದಿ ಮಾಡುವವರಿಲ್ಲ. ಹೀಗಾಗಿ ಕಲ್ಲಂಗಡಿ ಹಣ್ಣು ಬೆಳೆದು ಕೈ ಸುಟ್ಟಾಗಿದೆ. ಹೀಗಾಗಿ ಸರ್ಕಾರ ಕಲ್ಲಂಗಡಿ ಬೆಳೆಗಾರರಿಗೆ ಹೆಚ್ಚಿನ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.

  • ಲಾಕ್‍ಡೌನ್ ಸಂಕಷ್ಟ- ನೂರಾರು ಟನ್ ಕಲ್ಲಂಗಡಿ ಬೆಳೆ ನಾಶಮಾಡಿದ ರೈತರು

    ಲಾಕ್‍ಡೌನ್ ಸಂಕಷ್ಟ- ನೂರಾರು ಟನ್ ಕಲ್ಲಂಗಡಿ ಬೆಳೆ ನಾಶಮಾಡಿದ ರೈತರು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಕಲ್ಲಂಗಡಿ ಬೆಳೆದ ರೈತರಿಗ ಲಾಕ್‍ಡೌನ್ ಹಾಗೂ ಹವಾಮಾನ ವೈಪರಿತ್ಯದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಹಣ್ಣುಗಳನ್ನು ಕೊಳ್ಳುವವರಿಲ್ಲದ್ದಕ್ಕೆ ಬೆಳೆಯನ್ನು ನಾಶ ಮಾಡುತ್ತಿದ್ದಾರೆ.

    ಹವಾಮಾನ ವೈಪರಿತ್ಯದಿಂದ ಈಗಾಗಲೇ ಬೆಳೆ ನಾಶವಾಗಿದ್ದು, ಉಳಿದ ಬೆಳೆಯನ್ನಾದರೂ ಮಾರುಕಟ್ಟೆಗೆ ಕೊಂಡೊಯ್ಯಬೇಕು ಎಂದರೆ ಲಾಕ್‍ಡೌನ್ ಅಡ್ಡಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಕಾರವಾರ, ಅಂಕೋಲ, ಕುಮಟಾ, ಹೊನ್ನಾವರ ಪ್ರದೇಶಗಳಲ್ಲಿ 200 ಹೆಕ್ಟೇರ್ ನಲ್ಲಿ ಬೆಳೆದ ಕಲ್ಲಂಗಡಿಯನ್ನು ಲಾಕ್‍ಡೌನ್ ನಿಂದಾಗಿ ಮಾರುಕಟ್ಟೆಗೆ ಕೊಂಡೊಯ್ಯಲಾಗದೆ ರೈತರು ಹೊಲದಲ್ಲೇ ನಾಶ ಮಾಡುತ್ತಿದ್ದಾರೆ. ಹೊಲದಲ್ಲಿ ಬೆಳೆದ ಕಲ್ಲಂಗಡಿಯೇ ಗೋವುಗಳಿಗೆ ಆಹಾರವಾಗಿದೆ. ಇದನ್ನೂ ಓದಿ: ಪ್ರತಿ ಗ್ರಾಮ ಪಂಚಾಯ್ತಿಗೆ 50 ಸಾವಿರ ಅನುದಾನ: ಬಿಎಸ್‍ವೈ

    ಕರಾವಳಿ ಭಾಗದಲ್ಲಿ ಫೆಬ್ರವರಿಯಿಂದ ಜೂನ್ ಮೊದಲ ವಾರದ ವರೆಗೆ ಕಲ್ಲಂಗಡಿ ಹಣ್ಣು ಬೆಳೆಯಲಾಗುತ್ತದೆ. ನೆರೆಯ ಗೋವಾ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹಣ್ಣುಗಳನ್ನು ಸರಬರಾಜು ಮಾಡಲಾಗುತ್ತದೆ. ಆದರೆ ಇದೀಗ ಲಾಕ್‍ಡೌನ್ ಹಾಗೂ ಕೊರೊನಾದಿಂದಾಗಿ ಕಲ್ಲಂಗಡಿ ಹಣ್ಣಿನ ಬೇಡಿಕೆ ಸಂಪೂರ್ಣ ಇಳಿಕೆಯಾಗಿದೆ.

    ಕಲ್ಲಂಗಡಿ ಹಣ್ಣು ತಿಂದರೆ ಚಳಿ, ಜ್ವರ ಬರುತ್ತದೆ ಎಂಬ ಭಯ ಬಹುತೇಕ ಜನರಲ್ಲಿ ಕಾಡುತ್ತಿದೆ, ಹೀಗಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಗ್ರಾಹರನ್ನು ಇಲ್ಲವಾಗಿಸಿದೆ. ಇನ್ನು ಲಾಕ್‍ಡೌನ್ ಆದ್ದರಿಂದ ದೊಡ್ಡ ಬೇಡಿಕೆಯೂ ಕುಸಿದಿದ್ದು, ವರ್ತಕರು ರೈತರಿಂದ ಖರೀದಿ ನಿಲ್ಲಿಸಿದ್ದಾರೆ. ಇದರಿಂದಾಗಿ ಪ್ರತಿ ಕೆ.ಜಿ.ಗೆ 10 ರಿಂದ 12 ರೂ. ಇದ್ದ ಕಲ್ಲಂಗಡಿ ಇದೀಗ ಕೆ.ಜಿ ಗೆ 2 ರೂ. ಸಹ ಕೇಳುವವರಿಲ್ಲದಂತಾಗಿದೆ.

    ಕರಾವಳಿ ಭಾಗದಲ್ಲಿ ಹವಾಮಾನ ವೈಪರಿತ್ಯದಿಂದ ಚನ್ನಾಗಿ ಬೆಳೆದ ಕಲ್ಲಂಗಡಿ ಕೊಳೆಯಲು ಪ್ರಾರಂಭಿಸಿದೆ. ಲಕ್ಷಾಂತರ ರೂ. ಸಾಲ ಮಾಡಿ ಬೆಳೆದ ಬೆಳೆಯನ್ನು ಕೇಳುವವರಿಲ್ಲದಂತಾಗಿದೆ. ಜೊತೆಗೆ ಕಳೆದ ವರ್ಷ ಆದ ನಷ್ಟಕ್ಕೆ ಪರಿಹಾರ ಸಹ ಇದುವರೆಗೆ ಬಿಡುಗಡೆಯಾಗಿಲ್ಲ. ಹೀಗಾಗಿ ಮತ್ತಷ್ಟು ಸಂಕಷ್ಟದಲ್ಲಿ ರೈತ ದಿನ ದೂಡುವಂತಾಗಿದೆ.

    ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂ. ಪರಿಹಾರ ಘೋಷಣೆ ಮಾಡಿದೆ. ಅಲ್ಪ ಹಾನಿಗೆ 2 ಸಾವಿರ ನಿಗದಿ ಮಾಡಿದೆ. ಆದರೆ ಕಳೆದ ಬಾರಿಯ ನಷ್ಟದ ಹಣ ಇನ್ನೂ ಖಾತೆಗೆ ಸೇರಿಲ್ಲ. ಹೀಗಾಗಿ ಈ ಬಾರಿ ಘೋಷಣೆ ಮಾಡಿರುವ ಹಣ ಸಿಗುವ ಭರವಸೆಯನ್ನು ರೈತ ಕಳೆದುಕೊಂಡಿದ್ದಾನೆ. ಜಿಲ್ಲೆಯಲ್ಲಿ 60 ಹೆಕ್ಟೇರ್ ಪ್ರದೇಶದ ಕಲ್ಲಂಗಡಿ ನಷ್ಟ ವಾಗಿದೆ. ಅಂದಾಜು ಒಂದು ಕೋಟಿ ರೂ.ನಷ್ಟು ಮೌಲ್ಯದ ಹಣ್ಣು ನಷ್ಟವಾಗಿದೆ. ಇದೀಗ ಫಸಲು ಉತ್ತಮವಾಗಿದ್ದರೂ ಕೊಳ್ಳುಕೊಳ್ಳುವವರಿಲ್ಲದೇ ಬೆಳೆ ಮಣ್ಣುಪಾಲಾಗಿದ್ದು, ರೈತ ಭರವಸೆಯನ್ನು ಕಳೆದುಕೊಂಡು ಮತ್ತಷ್ಟು ಸಂಕಷ್ಟಕ್ಕೊಳಗಾಗಿದ್ದಾನೆ.

  • ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ ಕಲ್ಲಂಗಡಿ ಬೆಳೆಗಾರ- ರೈತನ ಬೆನ್ನಿಗೆ ನಿಂತ ಉಪೇಂದ್ರ

    ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ ಕಲ್ಲಂಗಡಿ ಬೆಳೆಗಾರ- ರೈತನ ಬೆನ್ನಿಗೆ ನಿಂತ ಉಪೇಂದ್ರ

    ಬೀದರ್: ಕೊರೊನಾ ಮಹಾಮಾರಿ ಅದೆಷ್ಟೋ ರೈತರ ಬದುಕನ್ನೇ ಕಿತ್ತುಕೊಂಡಿದೆ. ಸಾಲ ಮಾಡಿ ಬೆಳೆದ ಬೆಳೆಗೆ ಪ್ರತಿಫಲ ಸಿಗದೆ ಹಲವು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೇ ರೀತಿ ರೈತರೊಬ್ಬರು ಕಲ್ಲಂಗಡಿ ಮಾರಾಟ ಮಾಡಲಾಗದೆ ಕಂಗಾಲಾಗಿದ್ದಾರೆ. ಇವರ ನೆರವಿಗೆ ಇದೀಗ ನಟ ಉಪೇಂದ್ರ ಧಾವಿಸಿದ್ದಾರೆ.

    ಜಿಲ್ಲೆಯ ಔರಾದ್ ತಾಲೂಕಿನ ತೇಗಂಪೂರ ಗ್ರಾಮದ ರೈತ ಶಿವು ಮೊಕ್ತೆದಾರ್ ಗೆ ನಟ ಉಪೇಂದ್ರ ಆರ್ಥಿಕ ವೆಚ್ಚದ ಭರವಸೆ ನೀಡಿದ್ದಾರೆ. ಒಟ್ಟು 2 ಎಕರೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಕಲ್ಲಂಗಡಿ ಮಾರಾಟ ಮಾಡಲಾಗಿದೆ ರೈತ ಕಂಗಾಲಾಗಿದ್ದರು. ರೈತನ ಆರ್ಥಿಕ ಸಂಕಷ್ಟದ ಬಗ್ಗೆ ಮಾಹಿತಿ ಪಡೆದ ನಟ ಉಪೇಂದ್ರ, ಆಪ್ತ ಸ್ನೇಹಿತ ರಾಜಾರಾಮ ಮೂಲಕ ಮಾತನಾಡಿಸಿ ಆರ್ಥಿಕ ಭರವಸೆ ನೀಡಿದ್ದಾರೆ. ನೀವು ಹೆದರಬೇಡಿ ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಕಲ್ಲಂಗಡಿ ಹಣ್ಣು ಖರೀದಿ ಮಾಡಿ ನಿರ್ಗತಿಕರಿಗೆ, ಬಡವರಿಗೆ ಉಚಿತವಾಗಿ ಹಂಚಿಕೆ ಮಾಡುತ್ತೇವೆ ಎಂದು ಉಪೇಂದ್ರ ನೊಂದ ರೈತನ ಬೆನ್ನಿಗೆ ನಿಂತಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ನಾನು ಬೆಳೆದ ಕಲ್ಲಂಗಡಿ ಮಾರಾಟ ಮಾಡಲಾಗದೆ ಕಂಗಾಲಾಗಿದ್ದೆ. ಈ ಸಮಯದಲ್ಲಿ ನಟ ಉಪೇಂದ್ರ ನನ್ನ ಖರ್ಚು ವೆಚ್ಚಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ನೊಂದ ರೈತ ಶಿವು ಮೊಕ್ತೆದಾರ್ ಉಪೇಂದ್ರ ಮತ್ತು ಅವರ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

  • ನಾಮಪತ್ರ ಸಲ್ಲಿಸಲು ಕಲ್ಲಂಗಡಿ ಹಣ್ಣನ್ನು ಹೊತ್ತುಕೊಂಡು ಬಂದ ವ್ಯಕ್ತಿ

    ನಾಮಪತ್ರ ಸಲ್ಲಿಸಲು ಕಲ್ಲಂಗಡಿ ಹಣ್ಣನ್ನು ಹೊತ್ತುಕೊಂಡು ಬಂದ ವ್ಯಕ್ತಿ

    ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಒಂದು ದಿನವಷ್ಟೇ ಬಾಕಿ ಇದೆ. ಈ ನಡುವೆ ಪಕ್ಷೇತರ ಅಭ್ಯರ್ಥಿಯೋರ್ವ ಕಲ್ಲಂಗಡಿ ಹಣ್ಣನ್ನು ಹೊತ್ತುಕೊಂಡು ನಾಮಪತ್ರ ಸಲ್ಲಿಸಲು ಬಂದಿದ್ದಾನೆ. ಕ್ಷೇತ್ರದ ಸಾರ್ವಜನಿಕರನ್ನು ತನ್ನತ್ತ ಸೆಳೆಯುವ ಉದ್ದೇಶದಿಂದ ಈ ವ್ಯಕ್ತಿ ಕಲ್ಲಂಗಡಿ ಹಣ್ಣನ್ನು ಹೊತ್ತೊಕೊಂಡು ಬಂದಿರುವುದಾಗಿ ತಿಳಿಸಿದ್ದಾನೆ.

    ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಆತ, ತಾನು ನಾಮಪತ್ರ ಸಲ್ಲಿಸಲು ಕಲ್ಲಂಗಡಿ ಹಣ್ಣಿನೊಂದಿಗೆ ಬಂದಿದ್ದೇನೆ. ಇದು ನನ್ನ ಪಕ್ಷದ ಚುನಾವಣಾ ಚಿಹ್ನೆಯಾಗಿದೆ. ಈ ಒಂದೇ ಚಿಹ್ನೆಯನ್ನು ಬಳಸಿಕೊಂಡು ನಾನು ನಾಲ್ಕನೇಯ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಪಕ್ಷಗಳು ಬದಲಾವಣೆ ಮಾಡುವಂತೆ ಭರವಸೆ ನೀಡುತ್ತದೆ. ಸಿನಿಮಾ ನಟರು ಮತ್ತು ರಾಜಕಾರಣಿಗಳಲ್ಲಿ ಯಾವುದೇ ಬದಲಾವಣೆ ನೋಡಲು ಆಗುವುದಿಲ್ಲ. ನಮ್ಮಂತ ಜನರಿಗೆ ಅವಕಾಶ ನೀಡಬೇಕು ಎಂದು ಹೇಳಿದರು.

    ಚುನಾವಣೆ ಪ್ರಕಾರ ನಡೆಸಲು ನನ್ನ ಬಳಿ ಹಣವಿಲ್ಲ. ಮೊದಲನೇ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನನಗೆ 100 ಮತ ಬಂದಿತ್ತು. 2ನೇ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ 400 ಮತ ಗಳಿಸಿದ್ದೆ. ಆದರೆ ಈ ಬಾರಿ ಸುಮಾರು 10 ಸಾವಿರ ಮತ ಪಡೆಯುತ್ತೇನೆ ಎಂಬ ನಿರೀಕ್ಷೆ ಹೊಂದಿದ್ದೇನೆ. ಅಲ್ಲದೆ ಜನರು ಬೆಂಬಲಿಸಿದರೆ ನಾನು ಗೆದ್ದರು, ಗೆಲ್ಲುತ್ತೇನೆ ಎಂದು ನುಡಿದರು.

    ತಮಿಳುನಾಡು ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಾರ್ಚ್ 19ರ ಮಧ್ಯಾಹ್ನ 3 ಗಂಟೆಯವರೆಗೂ ಅವಕಾಶವಿದೆ. ಏಪ್ರಿಲ್ 6 ರಂದು ತಮಿಳನಾಡು ಚುನಾವಣೆ ನಡೆಯಲಿದ್ದು, ಮೇ 2 ರಂದು ಮತ ಏಣಿಕೆ ನಡೆಯಲಿದೆ.

  • ಕಲಬುರಗಿಯಲ್ಲಿ ಹಳದಿ ಕಲ್ಲಂಗಡಿ ಫುಲ್ ಫೇಮಸ್- ಯಲ್ಲೋ ವಾಟರ್‌ಮೆಲನ್‌ಗೆ ಭರ್ಜರಿ ಡಿಮ್ಯಾಂಡ್

    ಕಲಬುರಗಿಯಲ್ಲಿ ಹಳದಿ ಕಲ್ಲಂಗಡಿ ಫುಲ್ ಫೇಮಸ್- ಯಲ್ಲೋ ವಾಟರ್‌ಮೆಲನ್‌ಗೆ ಭರ್ಜರಿ ಡಿಮ್ಯಾಂಡ್

    ಕಲಬುರಗಿ: ಬೇಸಿಗೆ ಕಾಲ ಬಂದ್ರೆ ಸಾಕು ನಾವು ನೀವೆಲ್ಲ ಕೆಂಪ್ಪು ಬಣ್ಣದ ಕಲ್ಲಂಗಡಿಯ ಮೊರೆ ಹೋಗುತ್ತೇವೆ. ಆದರೆ ಕಲಬುರಗಿಯ ಓರ್ವ ಯುವಕ ವಿದೇಶಿ ತಳಿಯ ಹಳದಿ ಕಲ್ಲಂಗಡಿ ಬೆಳೆದು ಸೈ ಎನ್ನಿಸಿಕೊಂಡಿದ್ದಾನೆ.

    ಹೌದು. ಬೇಸಿಗೆ ಕಾವು ಹೆಚ್ಚಾಗ್ತಿದೆ. ಬೆಳಗ್ಗಿನಿಂದಲೇ ಸೂರ್ಯ ಶಿಕಾರಿ ಶುರುವಾಗುತ್ತೆ. ಬೇಸಿಗೆಯಲ್ಲಿ ದಾಹ ನೀಗಿಸೋದ್ರಲ್ಲಿ ಕಲ್ಲಂಗಡಿ ಹಣ್ಣಿಗೆ ಮೊದಲ ಸ್ಥಾನ. ಕಲ್ಲಂಗಡಿ ಅಂದ್ರೆ ಹಸಿರು- ಕೆಂಪು ಇರತ್ತೆ. ಆದರೆ ಹಳದಿ ಬಣ್ಣದ ಕಲ್ಲಂಗಡಿ ಅಂದ್ರೆ ನಂಬಲೇಬೇಕು. ಕಲಬುರಗಿಯ ಯುವಕ ಬೆಳೆದಿರೋ ಹಳದಿ ಬಣ್ಣದ ಕಲ್ಲಂಗಡಿ ಹಣ್ಣು ಫುಲ್ ಫೇಮಸ್ ಆಗಿದೆ.

    ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದ ನಿವಾಸಿ ಬಸವರಾಜ್ ಪಾಟೀಲ್ ಬಿ.ಕಾಂ ಪದವೀಧರ. ಆದರೂ ಕೃಷಿಯಲ್ಲಿ ಹೆಚ್ಚು ಉತ್ಸಾಹ ಇರೋದ್ರಿಂದ 2 ಎಕರೆ ಪ್ರದೇಶದಲ್ಲಿ ಮಲೇಷಿಯಾದಲ್ಲಿ ಬೆಳೆಯುವ ಹಳದಿ ಕಲ್ಲಂಗಡಿ ತಳಿಯ ಹಣ್ಣನ್ನು ಬೆಳೆದಿದ್ದಾರೆ. ಇದಕ್ಕೀಗ ಮಾರ್ಕೆಟ್‍ನಲ್ಲಿ ಈ ಹಣ್ಣಿಗೆ ಫುಲ್ ಡಿಮ್ಯಾಂಡ್ ಬಂದಿದೆ.

    ಹಳದಿ ಕಲ್ಲಂಗಡಿ ಹಣ್ಣು ತುಂಬಾ ರುಚಿಕರವಾಗಿದೆ. ಹೆಚ್ಚು ಇಳುವರಿ ಸಹ ಬರುತ್ತದೆ. ಕೆಂಪು ಕಲ್ಲಂಗಡಿ ಹೋಲ್‍ಸೆಲ್ ಪ್ರತಿ ಕೆ.ಜಿಗೆ 6 ರಿಂದ 8 ರೂಪಾಯಿವರೆಗೆ ಮಾರಾಟವಾದ್ರೆ, ಮಲೇಷಿಯಾ ತಳಿಯ ಈ ಹಳದಿ ಕಲ್ಲಂಗಡಿ ಕೆಜಿಗೇ 15 ರೂಪಾಯಿಗೆ ಮಾರಾಟವಾಗುತ್ತಿದೆ.

    ಸದ್ಯ ಕಲಬುರಗಿಯ ಈ ವಾಟರ್‍ಮೆಲನ್ ಹೈದಾರಾಬಾದ್, ಮುಂಬೈಯ ಮಾಲ್‍ಗಳಿಗೆ ಮಾರಾಟವಾಗುತ್ತಿದೆ. ಕೃಷಿಯಲ್ಲಿಯೇ ಮನಸ್ಸು ಮಾಡಿದ್ರೆ ಲಕ್ಷಾಂತರ ರೂಪಾಯಿ ಹೇಗೆ ಸಂಪಾದಿಸಬಹುದು ಎಂಬುದನ್ನ ಬಸವರಾಜ್ ತೋರಿಸಿಕೊಟ್ಟಿದ್ದಾರೆ.

  • ಕಲಬುರಗಿಯಲ್ಲಿ ಹಳದಿ ಬಣ್ಣದ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಯುವಕ

    ಕಲಬುರಗಿಯಲ್ಲಿ ಹಳದಿ ಬಣ್ಣದ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಯುವಕ

    ಕಲಬುರಗಿ: ಬೇಸಿಗೆ ಕಾಲದಲ್ಲಿ ಹೆಚ್ಚು ಬೇಡಿಕೆ ಇರುವ ಹಣ್ಣು ಕಲ್ಲಂಗಡಿ. ಸಾಧಾರಣ ಕೆಂಪು ಬಣ್ಣದ ಕಲ್ಲಂಗಡಿಯಯನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಕಲಬುರಗಿಯ ಯುವಕನೋರ್ವ ಮಲೇಷಿಯಾ ದೇಶದ ಹಳದಿ ತಳಿಯ ಕಲ್ಲಂಗಡಿ ಬೆಳೆದು ಸೈ ಎನಿಸಿಕೊಂಡಿದ್ದಾನೆ.

    ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದ ಬಸವರಾಜ್ ಪಾಟೀಲ್ ಬಿ.ಕಾಂ ಪದವಿಧರನಾಗಿದ್ದರು. ಕೃಷಿಯಲ್ಲಿ ಏನಾದರು ಹೊಸತನವನ್ನು ಕಂಡು ಹಿಡಿದು ಸಾಧನೆ ಮಾಡಬೇಕು ಎಂಬ ಹಂಬಲದಿಂದ ಕೃಷಿಯತ್ತ ಮುಖ ಮಾಡಿದ್ದರು. ಬೇಸಿಗೆ ಕಾಲ ಸಮೀಪಿಸುತ್ತಿರುವ ಹಿನ್ನೆಲೆ ಅತೀ ಹೆಚ್ಚು ಮಾರಾಟವಾಗುವ ಕಲ್ಲಂಗಡಿ ಹಣ್ಣಿನಲ್ಲಿ ಹೊಸ ತಳಿಯ ಹಣ್ಣನ್ನು ಬೆಳೆಯಬೇಕು ಎಂದು ನಿರ್ಧರಿಸಿದ್ದರು. ಅದರಂತೆ ತನ್ನ ಸ್ನೇಹಿತರ ಜೊತೆ ಚರ್ಚಿಸಿ 2 ಎಕರೆ ಪ್ರದೇಶದಲ್ಲಿ ಮಲೇಷಿಯಾದಲ್ಲಿ ಬೆಳೆಯುವ ಹಳದಿ ಕಲ್ಲಂಗಡಿ ತಳಿಯ ಹಣ್ಣನ್ನು ಬೆಳೆದಿದ್ದಾರೆ. ಇದೀಗ ಈ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದ್ದು, ಮಾರುಕಟ್ಟೆಯಲ್ಲಿ ಹಳದಿ ಬಣ್ಣದ ಕಲ್ಲಂಗಡಿಗೆ ಫುಲ್ ಡಿಮ್ಯಾಂಡ್ ಬಂದಿದೆ.

    ಹಳದಿ ಬಣ್ಣದ ಕಲ್ಲಂಗಡಿ ಕೆಂಪು ಕಲ್ಲಂಗಡಿಗಿಂತ ಅತ್ಯಂತ ರುಚಿಕರವಾಗಿದೆ ಹಾಗೂ ಹೆಚ್ಚು ಇಳುವರಿ ಸಹ ಬರುತ್ತದೆ. ಕೆಂಪು ಕಲ್ಲಂಗಡಿ ಹೊಲ್‍ಸೇಲ್ ದರದಲ್ಲಿ ಪ್ರತಿ ಕೆಜಿಗೆ 6 ರಿಂದ 8 ರೂಪಾಯಿವರೆಗೆ ಮಾರಾಟವಾದರೆ, ಮಲೇಷಿಯಾ ತಳಿಯ ಈ ಹಳದಿ ಕಲ್ಲಂಗಡಿ ಪ್ರತಿ ಕೆಜಿಗೆ 15 ರೂಪಾಯಿ ಮಾರಾಟವಾಗುತ್ತಿದೆ. ಕಲಬುರಗಿಯ ಈ ಯುವಕ ಹಳದಿ ಕಲ್ಲಂಗಡಿ ಬೆಳೆದು ಯಶಸ್ಸು ಕಂಡಿದ್ದಾರೆ.

    ಸದ್ಯ ಕಲಬುರಗಿಯ ಈ ವಾಟರ್ ಮೆಲನ್ ಹೈದರಾಬಾದ್ ಹಾಗೂ ಮುಂಬೈ ನಗರಗಳಲ್ಲಿ ಮಾರಾಟವಾಗುತ್ತಿದೆ. ಇಂದಿನ ದಿನಗಳಲ್ಲಿ ಕೃಷಿ ಬಿಟ್ಟು ಉದ್ಯೋಗಕ್ಕಾಗಿ ಪಟ್ಟಣ ಸೇರಿ ಕೈ ಸುಟ್ಟುಕೊಳ್ಳುತ್ತಿರುವ ಯುವಕರಿಗೆ ಕಲಬುರಗಿಯ ಬಸವರಾಜ್ ಮಾದರಿಯಾಗಿದ್ದು, ಕೃಷಿಯಲ್ಲಿಯೇ ಮನಸ್ಸು ಮಾಡಿದ್ರೆ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

  • 30 ಟನ್ ಕಲ್ಲಂಗಡಿ, ಪೇರಳೆ ಖರೀದಿಸಿ ಜನರಿಗೆ ಉಚಿತವಾಗಿ ಹಂಚಿದ ಸತೀಶ್ ಜಾರಕಿಹೊಳಿ

    30 ಟನ್ ಕಲ್ಲಂಗಡಿ, ಪೇರಳೆ ಖರೀದಿಸಿ ಜನರಿಗೆ ಉಚಿತವಾಗಿ ಹಂಚಿದ ಸತೀಶ್ ಜಾರಕಿಹೊಳಿ

    ಚಿಕ್ಕೋಡಿ(ಬೆಳಗಾವಿ): ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರಿಂದ ಸರ್ಕಾರ ಹೇರಲಾದ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳೆ ಬೆಳೆದ ರೈತರ ಮಾರಲಾಗದೆ ಸಂಕಷ್ಟಕೀಡಾಗಿದ್ದು, ಇದೀಗ ರೈತರ ಬೆನ್ನಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಬೆಳಗಾವಿ ಜಿಲ್ಲೆಯ ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ನಿಂತಿದ್ದಾರೆ.

    ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ಖರೀದಿಸಿ ಸಾರ್ವಜನಿಕರಿಗೆ ಹಂಚಿದ್ದಾರೆ. ಯಮನಕಮರಡಿ ಕ್ಷೇತ್ರದ ಹೆಬ್ಬಾಳ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ರೈತ ಹಣುಮಂತ ಎಂಬವರು ಸುಮಾರು ಮೂರು ಎಕರೆ ಪ್ರದೇಶದಲ್ಲಿ ಬೆಳೆದ 30 ಟನ್ ಕಲ್ಲಂಗಡಿ ಹಾಗೂ ಪೇರಳೆ ಹಣ್ಣು ಖರೀದಿಸಿದ್ದಾರೆ.

    ಹೀಗೆ ಖರೀದಿಸಿದ ಹಣ್ಣುಗಳನ್ನು ಕೊರೊನಾ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ಯಮಕನಮರಡಿ ಹಾಗೂ ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಹಂಚಲಾಗುವುದು. ಲಾಕ್ ಡೌನ್ ನಿಂದ ರೈತರು ಬೆಳೆದ ಫಸಲು ಮಾರಾಟ ಮಾಡಲಾಗದೆ ನಾಶಪಡಿಸುತ್ತಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಣ್ಣು, ತರಕಾರಿ ಖರೀದಿಸಿ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಪ್ರತಿಯೊಬ್ಬ ಜನಪ್ರತಿನಿಧಿಗಳು ಇದೇ ರೀತಿ ಮಾಡುವ ಮೂಲಕ ರೈತರ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಅವರು ಕರೆ ನೀಡಿದ್ದಾರೆ.

    ಮೇ 3ರ ಬಳಿಕ ಲಾಕ್ ಡೌನ್ ಅನ್ನು ಹಂತ ಹಂತವಾಗಿ ತೆರವುಗೊಳಿಸಬೇಕು. ಸಂಪೂರ್ಣ ಬಂದ್ ಮಾಡಲಾಗದು, ಕಾರ್ಖಾನೆ, ಕೃಷಿ ಚಟುವಟಿಕೆಗಳು ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದರು.

    ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಪರೇಶಗೌಡ, ಹೆಬ್ಬಾಳ ಜಿಪಂ ಸದಸ್ಯ ಮಹಾಂತೇಶ ಮಗದುಮ, ಕಿರಣ ರಜಪೂತ, ಸುಧೀರ್ ಗಿರಿಗೌಡ, ಅಪ್ಪಾಗೌಡ ಪಾಟೀಲ್, ರಾಜು ಅವಟೆ ಸೇರಿದಂತೆ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.