Tag: ಕಲ್ಯಾಣ್ ಸಿಂಗ್

  • ಆರು ಜಿಲ್ಲೆಗಳ ರಸ್ತೆಗೆ ದಿವಂಗತ ಕಲ್ಯಾಣ್ ಸಿಂಗ್ ಹೆಸರು

    ಆರು ಜಿಲ್ಲೆಗಳ ರಸ್ತೆಗೆ ದಿವಂಗತ ಕಲ್ಯಾಣ್ ಸಿಂಗ್ ಹೆಸರು

    ಲಕ್ನೋ: ಮಾಜಿ ಮುಖ್ಯಮಂತ್ರಿ, ದಿವಂಗತ ಕಲ್ಯಾಣ್ ಸಿಂಗ್ ಹೆಸರನ್ನು ಉತ್ತರ ಪ್ರದೇಶದ ಆರು ಜಿಲ್ಲೆಗಳ ರಸ್ತೆಗೆ ಇಡಲಾಗುತ್ತಿದೆ.

    ಲಕ್ನೋ ಮತ್ತು ಅಯೋಧ್ಯೆ ಸೇರಿದಂತೆ ಆರು ಜಿಲ್ಲೆಗಳಲ್ಲಿ ತಲಾ ಒಂದು ರಸ್ತೆಗೆ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಹೆಸರನ್ನು ಇಡಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಸೋಮವಾರ ಘೋಷಿಸಿದೆ.

    ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಇದಕ್ಕಾಗಿ ಪ್ರಸ್ತಾವನೆಯನ್ನು ಸಿದ್ಧಪಡಿಸಲಿದ್ದು, ಅಯೋಧ್ಯೆ, ಲಕ್ನೋ, ಅಲಿಗಡ, ಇಟಾಹ್, ಬುಲಂದ್ ಶಹರ್ ಮತ್ತು ಪ್ರಯಾಗರಾಜ್ ನಲ್ಲಿ ತಲಾ ಒಂದು ಪಿಡಬ್ಲ್ಯೂಡಿ ಮುಖ್ಯ ರಸ್ತೆಗೆ ಕಲ್ಯಾಣ್ ಸಿಂಗ್ ಹೆಸರಿಡಲಾಗುವುದು ಎಂದು ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಹೇಳಿದರು. ಪಿಡಬ್ಲ್ಯುಡಿ ಅಧಿಕಾರಿಗಳು ಶೀಘ್ರದಲ್ಲೇ ಈ ಕುರಿತು ಪ್ರಸ್ತಾವನೆ ಕಳುಹಿಸುತ್ತಾರೆ ಎಂದು ಅವರು ಹೇಳಿದರು. ಇದನ್ನೂ ಓದಿ:  ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಇನ್ನಿಲ್ಲ

    ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿಂಗ್ ಶನಿವಾರ ರಾತ್ರಿ ಇಲ್ಲಿನ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಿಧನರಾದರು. ಆರು ಜಿಲ್ಲೆಗಳಲ್ಲಿ ಒಂದೊಂದು ರಸ್ತೆಗೆ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಹೆಸರನ್ನು ಇಡಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ.

  • ರಾಷ್ಟ್ರಧ್ವಜದ ಮೇಲೆ ಬಿಜೆಪಿ ಬಾವುಟ – ಕಾಂಗ್ರೆಸ್, ಟಿಎಂಸಿ ಪ್ರಶ್ನೆ

    ರಾಷ್ಟ್ರಧ್ವಜದ ಮೇಲೆ ಬಿಜೆಪಿ ಬಾವುಟ – ಕಾಂಗ್ರೆಸ್, ಟಿಎಂಸಿ ಪ್ರಶ್ನೆ

    – ಕಲ್ಯಾಣ್ ಸಿಂಗ್ ಪಾರ್ಥಿವ ಶರೀರದ ಮೇಲೆ ಹಾಕಲಾಗಿದ್ದ ಧ್ವಜ

    ಲಕ್ನೋ: ರಾಷ್ಟ್ರಧ್ವಜದ ಮೇಲೆ ಬಿಜೆಪಿ ಬಾವುಟ ಹಾಕಿರೋದನ್ನು ಕಾಂಗ್ರೆಸ್ ಮತ್ತು ಟಿಎಂಸಿ ಖಂಡಿಸಿದ್ದು, ಕಮಲ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಲ್ಯಾಣ್ ಸಿಂಗ್ ಶನಿವಾರ ರಾತ್ರಿ ನಿಧನರಾಗಿದ್ದರು. ಭಾನುವಾರ ಲಕ್ನೋ ನಗರದ ಕಲ್ಯಾಣ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಇರಿಸಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಅವರ ಪಾರ್ಥಿವ ಶರೀರದ ಮೇಲೆ ಗೌರವ ಪೂರ್ವಕಗಾಗಿ ರಾಷ್ಟ್ರಧ್ವಜ ಹಾಕಲಾಗಿತ್ತು. ಇದರ ಮೇಲೆಯೇ ಬಿಜೆಪಿ ಧ್ವಜ ಹಾಕಿರೋದು ವಿವಾದಕಕ್ಕೆ ಕಾರಣವಾಗಿದೆ. ರಾಷ್ಟ್ರಧ್ವಜಕ್ಕೆ ಬಿಜೆಪಿ ಅವಮಾನಿಸಿದೆ. ಮಾತೃಭೂಮಿಗೆ ಗೌರವ ತೋರುವ ಹೊಸ ಆಯಾಮ ಎಂದು ಟಿಎಂಸಿ ಖಾರವಾಗಿ ಟೀಕಿಸಿದೆ.

    ನಕಲಿ ದೇಶಭಕ್ತಿ ಅನಾವರಣ ಎಂದ ಕಾಂಗ್ರೆಸ್: ಬಿಜೆಪಿಗರು ಯಾವ ಪರಿಸ್ಥಿತಿಯಲ್ಲೂ ಪಕ್ಷದ ಹಾಗೂ ಮೋದಿಯ ‘ಬ್ರಾಂಡಿಂಗ್’ ಮಾಡುವ ಅವಕಾಶ ಬಿಡರು, ಶವವಾದರೂ ಸರಿಯೇ! ಕಲ್ಯಾಣ್ ಸಿಂಗ್‍ರ ಮೃತದೇಹಕ್ಕೆ ಹೊದಿಸಿದ್ದ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಧ್ವಜ ಹಾಕುವ ಮೂಲಕ ರಾಷ್ಟ್ರಧ್ವಜದ ಮೇಲಿರುವ ತಮ್ಮ ಸುಪ್ತದ್ವೇಷ ಹೊರಹಾಕಿ ಜೆ.ಪಿ.ನಡ್ಡಾ ಅವಮಾನಿಸಿದ್ದಾರೆ. ಬಿಜೆಪಿಯ ನಕಲಿ ದೇಶಭಕ್ತಿ ಅನಾವರಣಗೊಂಡಿದೆ ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ. ಇದನ್ನೂ ಓದಿ: ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!

    ಭಾರತದ ತ್ರಿವರ್ಣ ಧ್ವಜದ ಮೇಲೆ ರಾಜಕೀಯ ಪಕ್ಷವೊಂದರ ಬಾವುಟ ಇರಿಸೋದು ಸರಿಯೇ? ಈ ಫೋಟೋ ನೋಡಿದ ಮೇಲೆ ಯಾವುದೋ ಒಂದು ಪಕ್ಷದ ಧ್ವಜ ರಾಷ್ಟ್ರ ಧ್ವಜಕ್ಕಿಂತ ದೊಡ್ಡದು ಆಯ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ ಎಂದು ಯುಥ್ ಕಾಂಗ್ರೆಸ್ ಅಧಕ್ಷ ಬಿ.ವಿ.ಶ್ರೀನಿವಾಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕೋವಿಡ್ ಕಾಲಘಟ್ಟದಲ್ಲಿ ಹೊಸ ಮನ್ವಂತರ – ಇಂದಿನಿಂದ ರಾಜ್ಯದಲ್ಲಿ ಶಾಲೆ-ಕಾಲೇಜು ಓಪನ್

  • ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಇನ್ನಿಲ್ಲ

    ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಇನ್ನಿಲ್ಲ

    ನವದೆಹಲಿ: ಬಿಜೆಪಿ ನಾಯಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್(89) ನಿಧನರಾಗಿದ್ದಾರೆ.

    ಅನಾರೋಗ್ಯದಿಂದ ಬಳಲುತ್ತಿದ್ದ ಅವರು ರಾಜೀವ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

    ಇದ್ದಕ್ಕಿದ್ದಂತೆ ದೇಹ ಊದಿಕೊಂಡು, ಪ್ರಜ್ಞಾ ಹೀನರಾಗಿದ್ದ ಹಿನ್ನೆಲೆಯಲ್ಲಿ ಜುಲೈ 4ರಂದು ಕಲ್ಯಾಣ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲಕ್ನೋದ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಲ್ಯಾಣ್ ಸಿಂಗ್ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎಂದು ವೈದ್ಯರು ತಿಳಿಸಿದ್ದರು. ಹೀಗಾಗಿ ಅವರಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

    ಬಾಬ್ರಿ ಮಸೀದಿ ಧ್ವಂಸ ಸಂದರ್ಭದಲ್ಲಿ ಸಿಎಂ ಆಗಿದ್ರು. ಇನ್ನು ಕಲ್ಯಾಣ್ ಸಿಂಗ್ ನಿಧನಕ್ಕೆ ಪ್ರಧಾನಿ ಮೋದಿ, ಯುಪಿ ಸಿಎಂ ಆದಿತ್ಯ ನಾಥ್, ಮಾಜಿ ಸಿಎಂ ಬಿಎಸ್‍ವೈ, ಸಿಎಂ ಬೊಮ್ಮಾಯಿ ಸೇರಿದಂತೆ ಗಣ್ಯಾತಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರ 3 ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ. ಸೋಮವಾರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.

  • ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಆಸ್ಪತ್ರೆಗೆ ದಾಖಲು

    ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಆಸ್ಪತ್ರೆಗೆ ದಾಖಲು

    ಲಕ್ನೋ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್‍ರವರು ಲಖನೌನ ಸಂಜಯ್ ಗಾಂಧಿ ವೈದ್ಯಕೀಯ ಹಾಗೂ ವಿಜ್ಞಾನ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಆಸ್ಪತ್ರೆಗೆ ದಾಖಲಾಗುವ ವೇಳೆ ಅವರ ರಕ್ತದ ಒತ್ತಡ ಹಾಗೂ ಹಾರ್ಟ್ ಬಿಟ್ ನಾರ್ಮಲ್ ಆಗಿದ್ದರೂ ಪ್ರಜ್ಞೆ ತಪ್ಪಿದ್ದಾರೆ. ಹೀಗಾಗಿ ಅವರು ಈ ಹಿಂದೆ ಹೊಂದಿದ್ದ ಕಾಯಿಲೆಗಳನ್ನು ಗಮನದಲಿಟ್ಟುಕೊಂಡು ಸಿಸಿಎಂನ ಐಸಿಯುವಿಗೆ ದಾಖಲಿಸಲಾಗಿದೆ.

    ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿರುವ ಕಲ್ಯಾಣ್ ಸಿಂಗ್‍ರವರಿಗೆ ಚಿಕಿತ್ಸೆ ನೀಡಲು ನೆಫ್ರಾಲಜಿ, ಕಾರ್ಡಿಯಾಲಜಿ, ಎಂಡೋಕ್ರೈನಾಲಜಿ ಮತ್ತು ನ್ಯೂರೋ-ಓಟಾಲಜಿ ವಿಭಾಗಗಳಿಂದ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಕಳೆದ ಎರಡು ವಾರಗಳಿಂದ ಕಲ್ಯಾಣ್ ಸಿಂಗ್‍ರವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.

    ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್‍ರವರು ಆಸ್ಪತ್ರೆಗೆ ಭೇಟಿ ನೀಡಿ ಕಲ್ಯಾಣ್ ಸಿಂಗ್‍ರವರ ಯೋಗಕ್ಷೇಮ ವಿಚಾರಿಸಿದ್ದಾರೆ. ಇದನ್ನೂ ಓದಿ:ಈ ದ್ವೇಷ ಹಿಂದುತ್ವದ ಕೊಡುಗೆ: ಭಾಗವತ್ ಹೇಳಿಕೆಗೆ ಓವೈಸಿ ಕಿಡಿ

  • ನಾವೆಲ್ಲಾ ಬಿಜೆಪಿ ಕಾರ್ಯಕರ್ತರು, ಮೋದಿ ಪಿಎಂ ಆಗಬೇಕು: ರಾಜ್ಯಪಾಲ ಕಲ್ಯಾಣ್ ಸಿಂಗ್

    ನಾವೆಲ್ಲಾ ಬಿಜೆಪಿ ಕಾರ್ಯಕರ್ತರು, ಮೋದಿ ಪಿಎಂ ಆಗಬೇಕು: ರಾಜ್ಯಪಾಲ ಕಲ್ಯಾಣ್ ಸಿಂಗ್

    ನವದೆಹಲಿ: ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್ ಸಿಂಗ್ ಕರೆ ನೀಡಿ ಚರ್ಚೆಗೆ ಗ್ರಾಸವಾಗಿದ್ದಾರೆ.

    ನಾವೆಲ್ಲಾ ಬಿಜೆಪಿ ಪಕ್ಷದ ಕಾರ್ಯಕರ್ತರಾಗಿದ್ದು, ಬಿಜೆಪಿ ಗೆಲುವು ಪಡೆಯುವುದನ್ನು ನೋಡಲು ಉತ್ಸುಕರಾಗಿದ್ದೇವೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಆಗಬೇಕು. ಇದು ದೇಶದ ಅಭಿವೃದ್ಧಿಗೆ ಬಹುಮುಖ್ಯ ಎಂದು ಕಲ್ಯಾಣ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

    ಸಾಂವಿಧಾನತ್ಮಾಕ ಹುದ್ದೆಯಲ್ಲಿರುವ ರಾಜ್ಯಪಾಲರು, ಪಕ್ಷಾತೀತವಾಗಿ ಇರುವ ಮೂಲಕ ಆ ಸ್ಥಾನಕ್ಕೆ ಗೌರವ ನೀಡಬೇಕು. ಆದರೆ ಗವರ್ನರ್ ಆಗಿದ್ದುಕೊಂಡು ಕಲ್ಯಾಣ್ ಸಿಂಗ್ ಈ ರೀತಿ ಹೇಳಿಕೆ ನೀಡಿದ್ದು ಎಷ್ಟು ಸರಿ ಎಂದು ಜನ ಈಗ ಪ್ರಶ್ನೆ ಮಾಡುತ್ತಿದ್ದಾರೆ.

    ಅಂದಹಾಗೇ ಕಲ್ಯಾಣ್ ಸಿಂಗ್ ಉತ್ತರ ಪ್ರದೇಶದ ಸಿಎಂ ಆಗಿ 1991 ರಿಂದ 1992 ಸೇವೆ ಸಲ್ಲಿಸಿದ್ದರು. ಅಲ್ಲದೇ 2009ರ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆ ಆಗಿದ್ದರು. ಅಲ್ಲದೇ 2014 ಚುನಾವಣೆಯಲ್ಲಿ ಬಿಜೆಪಿ ಗೆಲುವು ಪಡೆದ ಹಿನ್ನೆಲೆಯಲ್ಲಿ ಕಲ್ಯಾಣ್ ಸಿಂಗ್‍ರನ್ನು ರಾಜಸ್ಥಾನದ ರಾಜ್ಯಪಾಲರಾಗಿ ನೇಮಕ ಮಾಡಲಾಗಿತ್ತು.