Tag: ಕಲ್ಯಾಣ್‌ ರಾಮ್‌

  • ಜ್ಯೂ.ಎನ್‌ಟಿಆರ್ ಸಹೋದರ ಕಲ್ಯಾಣ್ ರಾಮ್ ಸಿನಿಮಾದ ಸೆಟ್‌ನಲ್ಲಿ ಅಗ್ನಿ ಅವಘಡ

    ಜ್ಯೂ.ಎನ್‌ಟಿಆರ್ ಸಹೋದರ ಕಲ್ಯಾಣ್ ರಾಮ್ ಸಿನಿಮಾದ ಸೆಟ್‌ನಲ್ಲಿ ಅಗ್ನಿ ಅವಘಡ

    ಜ್ಯೂ.ಎನ್‌ಟಿಆರ್ (Jr.Ntr) ಸಹೋದರ ಕಲ್ಯಾಣ್ ರಾಮ್ (Actor Kalyan Ram) ನಟಿಸುತ್ತಿದ್ದ ಸಿನಿಮಾದ ಶೂಟಿಂಗ್ ಸೆಟ್‌ಗೆ ಬೆಂಕಿ ತಗುಲಿದ್ದು, ಸುಮಾರು 4 ಕೋಟಿ ರೂ. ನಷ್ಟವಾಗಿದೆ. ಆದರೆ ಅಗ್ನಿ ಅವಘಡದಲ್ಲಿ ಯಾರಿಗೂ ಯಾವುದೇ ಗಾಯ ಮತ್ತು ಜೀವಹಾನಿ ಸಂಭವಿಸಿಲ್ಲ ಎಂದು ಸಿನಿಮಾ ತಂಡ ಸ್ಟಷ್ಟನೆ ನೀಡಿದೆ. ಇದನ್ನೂ ಓದಿ:ಕನ್ನಡ ಕಿರುತೆರೆಯಲ್ಲಿ ಹೊಸ ರಿಯಾಲಿಟಿ ಶೋ

    ಕಲ್ಯಾಣ್ ರಾಮ್ ಅವರು ಕ್ರೈಂ ಥ್ರಿಲ್ಲರ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಕಲ್ಯಾಣ್ ರಾಮ್ ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಳ್ತಿದ್ದಾರೆ. ಈ ಸಿನಿಮಾದ ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣಕ್ಕಾಗಿ ಬೃಹತ್ ಸೆಟ್ ಹಾಕಲಾಗಿತ್ತು. ಇದಕ್ಕಾಗಿ ಹೈದರಾಬಾದ್ ಹೊರವಲಯದಲ್ಲಿ ಬೇರೆ ಬೇರೆ ಸೆಟ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ಸೆಟ್ ನಿರ್ಮಾಣಕ್ಕೆ ಸುಮಾರು 4 ಕೋಟಿ ರೂ. ಖರ್ಚು ಮಾಡಲಾಗಿತ್ತು. ಈಗ ಸೆಟ್ ಬೆಂಕಿಗೆ ಆಹುತಿಯಾಗಿರುವುದರಿಂದ 4 ಕೋಟಿ ರೂ. ನಷ್ಟವಾಗಿದೆ. ಬೆಂಕಿ ಬಿದ್ದಾಗ ಶೂಟಿಂಗ್‌ ನಡೆಯುತ್ತಿರಲಿಲ್ಲವಾದರಿಂದ ಯಾವುದೇ ಹಾನಿಯಾಗಿಲ್ಲ. ಇದನ್ನೂ ಓದಿ:ವಿಜಯ್ ಹುಟ್ಟುಹಬ್ಬಕ್ಕೆ ವಿಶ್ ಮಾಡದ ರಶ್ಮಿಕಾ- ಕಾರಣ ಕೇಳಿದ ಫ್ಯಾನ್ಸ್

    ಈ ಚಿತ್ರದಲ್ಲಿ ಹಿರಿಯ ನಟಿ, ರಾಜಕಾರಣಿ ವಿಜಯಶಾಂತಿ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಲ್ಯಾಣ್ ರಾಮ್‌ಗೆ ನಾಯಕಿಯಾಗಿ ಸಾಯಿ ಮಂಜ್ರೇಕರ್ (Sai Manjrekar) ನಟಿಸಿದ್ದಾರೆ. ಈ ಚಿತ್ರಕ್ಕೆ ಪ್ರದೀಪ್ ಚಿಲಕೂರಿ ನಿರ್ದೇಶನ ಮಾಡುತ್ತಿದ್ದಾರೆ.

  • ನಿರ್ದೇಶಕನ ಹೆಸರನ್ನೇ ಕಿತ್ತಾಕಿದ ನಿರ್ಮಾಪಕ: ‘ಡೆವಿಲ್’ ವಿವಾದ

    ನಿರ್ದೇಶಕನ ಹೆಸರನ್ನೇ ಕಿತ್ತಾಕಿದ ನಿರ್ಮಾಪಕ: ‘ಡೆವಿಲ್’ ವಿವಾದ

    ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ಅವರ ಸಹೋದರ ಕಲ್ಯಾಣ್ ರಾಮ್ (Kalyan Ram) ನಟನೆಯ ‘ಡೆವಿಲ್’ (Devil) ಸಿನಿಮಾ ವಿವಾದಕ್ಕೆ ಕಾರಣವಾಗಿದೆ. ಈ ಸಿನಿಮಾದ ನಿರ್ದೇಶಕನ ಹೆಸರನ್ನೇ ಸಿನಿಮಾದಿಂದ ಕಿತ್ತುಹಾಕಿ, ಆ ಜಾಗದಲ್ಲಿ ನಿರ್ಮಾಪಕರು ತಮ್ಮ ಹೆಸರನ್ನು ಹಾಕಿಕೊಂಡಿದ್ದಾರೆ. ಈ ಅನ್ಯಾಯದ ಕುರಿತಂತೆ ನಿರ್ದೇಶಕ ನವೀನ್ ಮೆದರಮ್  (Naveen Medaram)ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    2021ರಲ್ಲಿ ಡೆವಿಲ್ ಸಿನಿಮಾ ಸೆಟ್ಟೇರಿತ್ತು. ಎರಡು ವರ್ಷಗಳ ನಂತರ ಸಿನಿಮಾ ಸಿದ್ಧವಾಗಿದೆ. ಸ್ವಾತಂತ್ರ್ಯ ಪೂರ್ವದ ಕಥೆಯನ್ನು ಹೊಂದಿರುವ ಈ ಸಿನಿಮಾವನ್ನು ಅಭಿಷೇಕ್ ನಮಾ  (Abhishek Nama) ಎನ್ನುವವರು ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕರ ಮತ್ತು ನಿರ್ದೇಶಕ ವೈಮನಸ್ಸಿನ ಕಾರಣದಿಂದಾಗಿ ನಿರ್ದೇಶಕರ ಹೆಸರನ್ನೇ ನಿರ್ಮಾಪಕರು ಕಿತ್ತುಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

    ನಿರ್ದೇಶಕರು ಸತತ ಮೂರು ವರ್ಷಗಳ ಕಾಲ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರಂತೆ. 105 ದಿನಗಳ ಕಾಲ ಚಿತ್ರೀಕರಣವನ್ನೂ ಮಾಡಿದ್ದಾರೆ. ಪ್ಯಾಚ್ ವರ್ಕ್ ನಲ್ಲಿ ಮಾತ್ರ ಅವರು ಇರಲಿಲ್ಲವಂತೆ. ಹಾಗಾಗಿ ಇಂಥದ್ದೊಂದು ಸಮಸ್ಯೆ ತಲೆದೂರಿದೆ ಎನ್ನುವುದು ನಿರ್ದೇಶಕರ ಆರೋಪ. ಇದು ನನ್ನ ಮಗುವಾಗಿದ್ದರಿಂದ ಯಾವುದೇ ಕಾರಣಕ್ಕೂ ಅನ್ಯಾಯ ಆಗೋದಕ್ಕೆ ಬಿಡುವುದಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ನಿರ್ದೇಶಕರು. ಈ ವಿವಾದ ನಡುವೆಯೂ ಡೆವಿಲ್ ಎಂದು ಬಿಡುಗಡೆ ಆಗಿದೆ.

  • ಡೆವಿಲ್‌ ಕಥೆ ಹೇಳಲು ಸಜ್ಜಾದ ತೆಲುಗಿನ ನಟ ಕಲ್ಯಾಣ್‌ ರಾಮ್‌

    ಡೆವಿಲ್‌ ಕಥೆ ಹೇಳಲು ಸಜ್ಜಾದ ತೆಲುಗಿನ ನಟ ಕಲ್ಯಾಣ್‌ ರಾಮ್‌

    ಟಾಲಿವುಡ್‌ನ (Tollywood) ಖಡಕ್ ಹೀರೋ ಕಲ್ಯಾಣ್ ರಾಮ್ ಅವರು ‘ಡೆವಿಲ್” (Devil Film)ಆಗಿ ಬರುತ್ತಿದ್ದಾರೆ. ಸಿನಿಮಾದ ಸಣ್ಣ ಗ್ಲಿಂಪ್ಸ್ ರಿಲೀಸ್ ಮಾಡಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡುತ್ತಿದೆ. ಸದಾ ಹೊಸಬಗೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಕಲ್ಯಾಣ್ ರಾಮ್ (Kalyan Ram) ಈ ಬಾರಿಯೂ ವಿಶಿಷ್ಟ ಕಥೆಯೊಂದಿಗೆ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದ್ದಾರೆ.

    ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ‘ಡೆವಿಲ್’ ಗ್ಲಿಂಪ್ಸ್ ಭಾರೀ ಸದ್ದು ಮಾಡುತ್ತಿದೆ. 1 ನಿಮಿಷ 2 ಸೆಕೆಂಡ್ ಇರುವ ಝಲಕ್‌ನಲ್ಲಿ ಡೆವಿಲ್ ಸ್ವಾತಂತ್ರ‍್ಯ ಪೂರ್ವದ ಬ್ರಿಟಿಷ್ ಏಜೆಂಟ್ ಕಥೆ ಅನ್ನೋ ಗೊತ್ತಾಗುತ್ತಿದೆ. ಗೂಢಚಾರಿ ಹೇಗೆ ಇರಬೇಕು ಅನ್ನೋದನ್ನು ವಿವರಿಸುತ್ತಾ ಎಂಟ್ರಿ ಕೊಡುವ ಕಲ್ಯಾಣ್ ರಾಮ್ ಲುಕ್ ಗೆಟಪ್ ಗಮನ ಸೆಳೆಯುತ್ತದೆ. ಕ್ಯಾಮೆರಾ ವರ್ಕ್ ಹಾಗೂ ಹಿನ್ನೆಲೆ ಸಂಗೀತ ಅದ್ಭುತವಾಗಿ ಮೂಡಿಬಂದಿದೆ. ಕಲ್ಯಾಣ್ ರಾಮ್ ಗೆ ಜೋಡಿಯಾಗಿ ಸಂಯುಕ್ತ ಮೆನನ್ ನಟಿಸಿದ್ದಾರೆ. ಇದನ್ನೂ ಓದಿ:Salaar Teaser ಔಟ್: ಅದ್ದೂರಿ ಮೇಕಿಂಗ್, ಬ್ರಿಲಿಯಂಟ್ ಕಾಂಬಿನೇಷನ್

    ಡೆವಿಲ್ ಸಿನಿಮಾವನ್ನು ದೇವಾಂಶ್ ನಾಮಾ ಪ್ರೆಸೆಂಟ್ ಮಾಡುತ್ತಿದ್ದು, ಅಭಿಷೇಕ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಭಿಷೇಕ್ ನಾಮಾ ನಿರ್ಮಿಸುತ್ತಿದ್ದಾರೆ. ನವೀನ್ ಮೇಡಾರಂ ನಿರ್ದೇಶನದ ಡೆವಿಲ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶ್ರೀಕಾಂತ್ ವಿಸ್ಸಾ ಒದಗಿಸಿದ್ದಾರೆ. ಹರ್ಷವರ್ಧನ್ ರಾಮೇಶ್ವರ್ ಚಿತ್ರಕ್ಕೆ ಸಂಗೀತ, ಸೌಂದರರಾಜನ್ ಛಾಯಾಗ್ರಹಣ ಮಾಡಲಿದ್ದಾರೆ. ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ‘ಡೆವಿಲ್’ ಸಿನಿಮಾ ಮೂಡಿಬರಲಿದೆ.

    ಈ ವರ್ಷ ‘ಅಮಿಗೋಸ್’ ಚಿತ್ರದ ಮೂಲಕ ಕಲ್ಯಾಣ್ ರಾಮ್ ಗಮನ ಸೆಳೆದಿದ್ದರು. ಪ್ರೇಕ್ಷಕರಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಿನಿಮಾದಲ್ಲಿ ಕನ್ನಡದ ನಟಿ ಆಶಿಕಾ ರಂಗನಾಥ್ ಜೋಡಿಯಾಗಿದ್ದರು. ಈಗ ಡೆವಿಲ್ ಕಥೆ ಹೇಳಲು ಜ್ಯೂ.ಎನ್‌ಟಿಆರ್ ಸಹೋದರ ಸಜ್ಜಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಶಿಕಾ ರಂಗನಾಥ್‌ಗೆ ಮನಸಾರೆ ಹಾರೈಸಿದ ಜ್ಯೂ.ಎನ್‌ಟಿಆರ್‌

    ಆಶಿಕಾ ರಂಗನಾಥ್‌ಗೆ ಮನಸಾರೆ ಹಾರೈಸಿದ ಜ್ಯೂ.ಎನ್‌ಟಿಆರ್‌

    ಸ್ಯಾಂಡಲ್‌ವುಡ್ (Sandalwood) ಸುಂದರಿ ಆಶಿಕಾ ರಂಗನಾಥ್ (Ashika Ranganath) ಇದೀಗ ಟಾಲಿವುಡ್‌ನತ್ತ (Tollywood) ಮುಖ ಮಾಡಿದ್ದಾರೆ. ನಂದಮೂರಿ ಕಲ್ಯಾಣ್ ರಾಮ್‌ಗೆ (Kalyan Ram) ನಾಯಕಿಯಾಗಿ ಆಶಿಕಾ ಎಂಟ್ರಿ ಕೊಡ್ತಿದ್ದಾರೆ. ಚುಟು ಚುಟು ಬೆಡಗಿಗೆ ಜ್ಯೂ.ಎನ್‌ಟಿಆರ್ ವಿಶೇಷವಾಗಿ ಸ್ವಾಗತಿಸಿದ್ದಾರೆ. ಇದನ್ನೂ ಓದಿ: `ಅವತಾರ್ ಲುಕ್‌ನಲ್ಲಿ ಮಿಂಚಿದ ನಿವೇದಿತಾ ಗೌಡ


    ರ‍್ಯಾಂಬೋ 2, ಮದಗಜ, ಅವತಾರ ಪುರುಷ, ಹೀಗೆ ಸಾಕಷ್ಟು ಸಿನಿಮಾಗಳ ಮೂಲಕ ಕಮಾಲ್ ಮಾಡಿದ ನಟಿ ಆಶಿಕಾ ರಂಗನಾಥ್ ಈಗ ತೆಲುಗು ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಕಲ್ಯಾಣ್ ರಾಮ್ ನಟನೆಯ `ಅಮಿಗೋಸ್’ ಚಿತ್ರದ ಮೂಲಕ ನಟಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕನ್ನಡದ ಹುಡುಗಿ ಆಶಿಕಾ, ತೆಲುಗಿನ ಮೊದಲ ಸಿನಿಮಾಗೆ ಜ್ಯೂ.ಎನ್‌ಟಿಆರ್ (Jr.Ntr) ವಿಶೇಷವಾಗಿ ಹಾರೈಸಿದ್ದಾರೆ.

    `ಅಮಿಗೋಸ್’ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ನಟ ತಾರಕ್ ಎಂಟ್ರಿ ಕೊಟ್ಟಿದ್ದರು. ಸಹೋದರ ಕಲ್ಯಾಣ್ ರಾಮ್ ಮತ್ತು ಚಿತ್ರತಂಡಕ್ಕೆ ಸಿನಿಮಾ ಗೆಲುವಿಗೆ ವಿಶ್ ಮಾಡಿದ್ದರು. ಈ ವೇಳೆ ಆಶಿಕಾಗೆ, ನಿಮಗೆ ತೆಲಗು ಚಿತ್ರರಂಗಕ್ಕೆ ಸ್ವಾಗತ, ನಾನು ನಂಬುತ್ತೇನೆ ಈ ಸಿನಿಮಾ ನಿಮಗೆ ಕರೆಕ್ಟ್ ಆಗಿರುವ ಲಾಂಚ್ ಸಿನಿಮಾ ಎಂದು. ನಾನು ಹಾರೈಸುತ್ತೇನೆ ನೀವು ತೆಲುಗು ಸಿನಿಮಾಗಳಲ್ಲಿ ಸಾಕಷ್ಟು ಪಾತ್ರಗಳನ್ನ ಮಾಡಬೇಕೆಂದು. ಕ್ಷಮಿಸಿ, ಇಂಡಿಯನ್ ಫಿಲ್ಮ್ಂ ಇಂಡಸ್ಟ್ರಿಯಲ್ಲಿ ಎಂದು ಜ್ಯೂ.ಎನ್‌ಟಿಆರ್ ಮನಸಾರೆ ಹಾರೈಸಿದ್ದಾರೆ. ಈ ಮೂಲಕ ಕನ್ನಡದ ನಟಿ ಸೌತ್ ಸಿನಿಮಾಗಳಲ್ಲಿ ಬೆಳಗಲಿ ಎಂದು ಹಾರೈಸಿದ್ದಾರೆ.

    ಇನ್ನೂ ನಟಿ ಆಶಿಕಾ ರಂಗನಾಥ್ ಕೈಯಲ್ಲಿ ತೆಲುಗಿನ `ಅಮಿಗೋಸ್’ ಸೇರಿದಂತೆ ಕನ್ನಡದ ಸಾಕಷ್ಟು ಚಿತ್ರಗಳಿವೆ. ನಟಿಯ ಮೊದಲ ತೆಲುಗು ಸಿನಿಮಾ ಅಮಿಗೋಸ್‌ ಇದೇ ಫೆ.10ಕ್ಕೆ ತೆರೆಗೆ ಬರಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತೆಲುಗಿನ ನಟ ಕಲ್ಯಾಣ್ ರಾಮ್ ಜೊತೆ ಆಶಿಕಾ ರಂಗನಾಥ್ ರೊಮ್ಯಾನ್ಸ್

    ತೆಲುಗಿನ ನಟ ಕಲ್ಯಾಣ್ ರಾಮ್ ಜೊತೆ ಆಶಿಕಾ ರಂಗನಾಥ್ ರೊಮ್ಯಾನ್ಸ್

    ಸ್ಯಾಂಡಲ್‌ವುಡ್‌ನಲ್ಲಿ (Sandalwood) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿ ಆಶಿಕಾ ರಂಗನಾಥ್ (Ashika Ranganath) ಇದೀಗ ಸೌತ್ ಸಿನಿಮಾರಂಗದತ್ತ ಮುಖ ಮಾಡಿದ್ದಾರೆ. ತಮಿಳಿನ ಸಿನಿಮಾ ಅನೌನ್ಸ್ ಆಗಿರುವ ಬೆನ್ನಲ್ಲೇ ಟಾಲಿವುಡ್‌ನತ್ತ ಆಶಿಕಾ ರಂಗನಾಥ್ ಮುಖ ಮಾಡಿದ್ದಾರೆ.

     

    View this post on Instagram

     

    A post shared by Ashika Ranganath (@ashika_rangnath)

    ಕನ್ನಡದ ಪಟಾಕಿ ಪೋರಿ ಆಶಿಕಾ ಸ್ಯಾಂಡಲ್‌ವುಡ್ ನಟಿಯಾಗಿ ಸೈ ಎನಿಸಿಕೊಂಡಿದ್ದಾರೆ. ಇದೀಗ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ನಟಿ ಆಶಿಕಾಬ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇತ್ತೀಚೆಗಷ್ಟೇ ತಮಿಳಿನ ನಟ ಸಿದ್ಧಾರ್ಥ್(Siddarth) ಜೊತೆ ಹೊಸ ಚಿತ್ರ ಅನೌನ್ಸ್ ಮಾಡಿದ್ದರು. ಇದೀಗ ತೆಲುಗಿನ ನಟ ಕಲ್ಯಾಣ್ ರಾಮ್ (Kalyan Ram) ಜೊತೆ ಡ್ಯುಯೇಟ್ ಹಾಡಲು ನಟಿ ಸಜ್ಜಾಗಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ನನ್ನ ಕ್ರಶ್ ಎಂದ ಟಾಲಿವುಡ್ ಸ್ಟಾರ್ ಬಾಲಯ್ಯ

     

    View this post on Instagram

     

    A post shared by Ashika Ranganath (@ashika_rangnath)

    ತಮಿಳು ಸಿನಿಮಾ ಆಯ್ತು ಇದೀಗ ತೆಲುಗಿನತ್ತ ಆಶಿಕಾ ರಂಗನಾಥ್ ಮುಖ ಮಾಡಿದ್ದಾರೆ. ಟಾಲಿವುಡ್(Tollywood) ನಟ ಕಲ್ಯಾಣ್ ರಾಮ್‌ಗೆ ನಾಯಕಿಯಾಗಿ ಆಶಿಕಾ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ಸೌತ್ ಸಿನಿಮಾಗಳಲ್ಲಿ ಮಿಂಚಲು ರ‍್ಯಾಂಬೋ ಬೆಡಗಿ ಆಶಿಕಾ ರೆಡಿಯಾಗಿದ್ದಾರೆ.

    ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಮನೋಜ್ಞ ನಟನೆಯ ಮೂಲಕ ಮನೆಮಾತಾದ ನಟಿ ಸೌತ್ ಸಿನಿ ಅಂಗಳದಲ್ಲೂ ಸದ್ದು ಮಾಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]