Tag: ಕಲ್ಯಾಣ್ ಬ್ಯಾನರ್ಜಿ

  • ಮಮತಾ ಬ್ಯಾನರ್ಜಿಯ ಟಿಎಂಸಿಯಲ್ಲಿ ನಾಯಕರ ತಿಕ್ಕಾಟ – ಟಿಎಂಸಿ ವಾಟ್ಸಪ್ ಚಾಟ್ ಬಹಿರಂಗಪಡಿಸಿದ ಬಿಜೆಪಿಯ ಅಮಿತ್ ಮಾಳವೀಯ

    ಮಮತಾ ಬ್ಯಾನರ್ಜಿಯ ಟಿಎಂಸಿಯಲ್ಲಿ ನಾಯಕರ ತಿಕ್ಕಾಟ – ಟಿಎಂಸಿ ವಾಟ್ಸಪ್ ಚಾಟ್ ಬಹಿರಂಗಪಡಿಸಿದ ಬಿಜೆಪಿಯ ಅಮಿತ್ ಮಾಳವೀಯ

    ಕೋಲ್ಕತ್ತಾ: ಸಿಎಂ ಮಮತಾ ಬ್ಯಾನರ್ಜಿಯ (Mamata Banergee) ಟಿಎಂಸಿಯಲ್ಲಿ ನಾಯಕರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ನಾಯಕರ ಮಾತಿನ ಚಕಮಕಿಯ ವಾಟ್ಸಪ್‌ ಚಾಟ್‌ನ್ನು ಬಿಜೆಪಿಯ ಅಮಿತ್‌ ಮಾಳವೀಯ ಬಹಿರಂಗಪಡಿಸಿದ್ದಾರೆ.

    ಟಿಎಂಸಿ ಸಂಸದರಾದ ಕಲ್ಯಾಣ್ ಬ್ಯಾನರ್ಜಿ, ಕೀರ್ತಿ ಆಜಾದ್ ನಡುವಿನ ಮೆಸೇಜ್ ವೈರಲ್ ಆಗಿದೆ. ಮಹುವಾ ಮೊಯಿತ್ರಾ ಉಲ್ಲೇಖಿಸಿ ಕಲ್ಯಾಣ್‌ ಬ್ಯಾನರ್ಜಿ ಮೆಸೇಜ್ ಮಾಡಿದ್ದಾರೆ. ಇಬ್ಬರು ನಾಯಕರ ಕದನದಲ್ಲಿ ಮಮತಾ ಬ್ಯಾನರ್ಜಿ ಮಧ್ಯಪ್ರವೇಶ ಮಾಡಿದ್ದಾರೆ. ಮಾಧ್ಯಮಗಳಿಗೆ ಸಂದರ್ಶನ ನೀಡದಂತೆ ಸೂಚನೆ ನೀಡಿದ್ದಾರೆ. ಆದರೆ, ಟಿಎಂಸಿ ನಾಯಕರ ನಡುವಿನ ತಿಕ್ಕಾಟವನ್ನು ಹಿರಿಯ ಸಂಸದ ಸೌಗತಾ ರಾಯ್ ಖಚಿತಪಡಿಸಿದ್ದಾರೆ.

    ನಾನು ಕಳೆದ 40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಈ ಮಹಿಳಾ ಸಂಸದೆ ಚುನಾವಣಾ ಆಯೋಗದ ಕಚೇರಿಯ ಹೊರಗೆ ಭದ್ರತಾ ಸಿಬ್ಬಂದಿಯನ್ನು ಸಂಪರ್ಕಿಸಿ ನನ್ನನ್ನು ಬಂಧಿಸುವಂತೆ ಕೇಳುತ್ತಿದ್ದರು. ನನ್ನನ್ನು ಜೈಲಿಗೆ ಕಳುಹಿಸಲು ಅವರು ಯಾರು? ಅವರು ನನ್ನ ಮೇಲೆ ನಿಂದನೆ ಮಾಡಿದ್ದಾರೆ. ಸಂಸತ್ತಿನಲ್ಲಿ ಹೋರಾಡುವುದು ನಾನೇ. ನಾನು ನಿರ್ದಿಷ್ಟ ಕೈಗಾರಿಕಾ ಸಂಸ್ಥೆಯ ಬಗ್ಗೆ ಮಾತ್ರ ಗೀಳು ಹೊಂದಿರುವ ವ್ಯಕ್ತಿಯಲ್ಲ ಎಂದು ಕಲ್ಯಾಣ್‌ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.

    ಮಹಿಳಾ ಸಂಸದೆ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾರೆ ಎಂದ ಮಾತ್ರಕ್ಕೆ ಅವರು ಯಾರನ್ನಾದರೂ ಅವಮಾನಿಸಬಹುದು ಎಂದರ್ಥವಲ್ಲ ಎಂದು ಬ್ಯಾನರ್ಜಿ ಅಸಮಾಧಾನ ಹೊರಹಾಕಿದ್ದಾರೆ.

  • ವಕ್ಫ್‌ ಮಸೂದೆ ಸಭೆಯಲ್ಲಿ ಹೈಡ್ರಾಮಾ – ಟಿಎಂಸಿ ಸಂಸದ ಅಮಾನತು

    ವಕ್ಫ್‌ ಮಸೂದೆ ಸಭೆಯಲ್ಲಿ ಹೈಡ್ರಾಮಾ – ಟಿಎಂಸಿ ಸಂಸದ ಅಮಾನತು

    – ಸಭೆಯಲ್ಲಿ ಅನುಚಿತ ವರ್ತನೆ, ಗಾಜಿನ ಬಾಟೆಲ್‌ ಒಡೆದು ಎಸೆದ ಆರೋಪ

    ಕೋಲ್ಕತ್ತಾ: ವಕ್ಫ್‌ ಬೋರ್ಡ್‌ ಬಿಲ್‌ಗೆ ತಿದ್ದುಪಡಿ ತರುವ ಕುರಿತು ಚರ್ಚಿಸಲು ಸೇರಿದ್ದ ಜಂಟಿ ಸಂಸದೀಯ ಸಮಿತಿಯ ಸಭೆಯಲ್ಲಿ ಭಾರಿ ಹೈಡ್ರಾಮಾ ನಡೆಯಿತು.

    ವಕ್ಫ್‌ ಬಿಲ್‌ ಜಂಟಿ ಸಂಸದೀಯ ಸಮಿತಿ ಮುಖ್ಯಸ್ಥ ಜಗದಾಂಬಿಕಾ ಪಾಲ್‌ ವಿರುದ್ಧ ಅನುಚಿತ ವರ್ತನೆ, ಅಸಾಂವಿಧಾನಿಕ ಪದ ಬಳಕೆ ಹಾಗೂ ಗಾಜಿನ ಬಾಟೆಲ್‌ ಒಡೆದು ಪಾಲ್‌ ಮೇಲೆ ಎಸೆದ ಆರೋಪದಲ್ಲಿ ಟಿಎಂಸಿ ಸಂಸದ ಕಲ್ಯಾಣ್‌ ಬ್ಯಾನರ್ಜಿ ಅವರನ್ನು ಅಮಾನತು ಮಾಡಲಾಗಿದೆ.

    ಬ್ಯಾನರ್ಜಿ ಅವರನ್ನು 1 ದಿನ ಹಾಗೂ 2 ಸಭೆಗಳಿಂದ ಅಮಾನತು ಮಾಡಲಾಗಿದೆ. ಗಾಜಿನ ಬಾಟಲ್ ಒಡೆದು ಜಗದಂಬಿಕಾ ಪಾಲ್ ಮೇಲೆ ಎಸೆದ ಆರೋಪ ಕೇಳಿಬಂದಿದೆ. ಗಾಜಿನ ಬಾಟಲ್ ಒಡೆದಾಗ ಕಲ್ಯಾಣ್ ಬ್ಯಾನರ್ಜಿ ಕೈಗೆ ಗಾಯವಾಗಿದೆ.

    ಬಿಜೆಪಿ ಲೋಕಸಭೆಯ ಸಂಸದ ನಿಶಿಕಾಂತ್ ದುಬೆ ಅವರು ಒಂಬತ್ತು ಸದಸ್ಯರ ಬೆಂಬಲದೊಂದಿಗೆ ನಿರ್ಣಯವನ್ನು ಮಂಡಿಸಿದ ನಂತರ ಅವರನ್ನು ಅಮಾನತುಗೊಳಿಸಲಾಯಿತು. ಆದರೆ ಎಂಟು ಮಂದಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು. ಜೆಪಿಸಿ ಅಧ್ಯಕ್ಷೆ ಮತ್ತು ಬಿಜೆಪಿ ಲೋಕಸಭಾ ಸಂಸದ ಜಗದಾಂಬಿಕಾ ಪಾಲ್ ಅವರು ಬ್ಯಾನರ್ಜಿ ಅವರನ್ನು ಅಮಾನತುಗೊಳಿಸುವ ಆದೇಶ ಹೊರಡಿಸಿದ್ದಾರೆ.

  • ಮಿಮಿಕ್ರಿ ಮಾಡೋದು ಕಲೆ ಆಗಿದ್ದು, ಬೇಕಿದ್ರೆ ಸಾವಿರ ಬಾರಿ ಮಾಡ್ತೀನಿ: ಟಿಎಂಸಿ ಸಂಸದ

    ಮಿಮಿಕ್ರಿ ಮಾಡೋದು ಕಲೆ ಆಗಿದ್ದು, ಬೇಕಿದ್ರೆ ಸಾವಿರ ಬಾರಿ ಮಾಡ್ತೀನಿ: ಟಿಎಂಸಿ ಸಂಸದ

    ನವದೆಹಲಿ: ಮಿಮಿಕ್ರಿ ಮಾಡುವುದು ಒಂದು ಕಲೆಯಾಗಿದ್ದು, ಬೇಕಿದ್ರೆ ನಾನು ಸಾವಿರ ಬಾರಿ ಅದನ್ನು ಮಾಡುತ್ತೇನೆ. ಹೀಗೆ ಮಾಡಲು ನನಗೆ ಹಕ್ಕಿದೆ ಎಂದು ಟಿಎಂಸಿ ಸಂಸದ ಕಲ್ಯಾಣ್‌ ಬ್ಯಾನರ್ಜಿ (Kalyan Banerjee) ಮತ್ತೆ ಉದ್ಧಟತನ ಮೆರೆದಿದ್ದಾರೆ. ‌

    ಪಶ್ಚಿಮ ಬಂಗಾಳದ (West Bengal) ಶ್ರೀರಾಮ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ , ಕ್ಷುಲ್ಲಕ ವಿಚಾರದಲ್ಲಿ ಅಸಮಾಧಾನಗೊಂಡಿದ್ದಕ್ಕಾಗಿ ಧನ್ಕರ್ ಅವರನ್ನು ಟೀಕಿಸಿದರು. ನಾನು ಮಿಮಿಕ್ರಿ ಮಾಡುತ್ತಲೇ ಇರುತ್ತೇನೆ. ಅದೊಂದು ಕಲೆ. ಬೇಕಾದರೆ ಸಾವಿರ ಬಾರಿ ಮಾಡುತ್ತೇನೆ. ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನನಗೆ ಎಲ್ಲಾ ಹಕ್ಕುಗಳಿವೆ. ನೀವು ನನ್ನನ್ನು ಜೈಲಿಗೆ ಹಾಕಬಹುದು. ಆದರೆ ನಾನು ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

    ಬ್ಯಾನರ್ಜಿಯವರ ಮಿಮಿಕ್ರಿಯಿಂದ ರೈತ ಸಮುದಾಯಕ್ಕೆ ಅವಮಾನವಾಗಿದೆ ಎಂಬ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ (Jagadeep Dhankar) ಹೇಳಿಕೆಯನ್ನು ಉಲ್ಲೇಖಿಸಿದ ಟಿಎಂಸಿ ಸಂಸದರು, ಧನ್ಕರ್‌ ಅವರು‌ ಜೋಧ್‌ಪುರದಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಮತ್ತು ದೆಹಲಿಯಲ್ಲಿ ಐಷಾರಾಮಿ ಫ್ಲ್ಯಾಟ್ ಹೊಂದಿದ್ದಾರೆ. ಅಲ್ಲದೇ ಅವರು ಲಕ್ಷ ರೂಪಾಯಿ ಮೌಲ್ಯದ ಸೂಟ್ ಧರಿಸುತ್ತಾರೆ ಎಂದು ಆರೋಪಿಸಿದರು. ಇದನ್ನೂ ಓದಿ: 20 ವರ್ಷದಿಂದ ನಾನೂ ಅವಮಾನಗಳನ್ನು ಎದುರಿಸಿದ್ದೇನೆ: ಧನ್ಕರ್‌ಗೆ ಕರೆ ಮಾಡಿ ಕಹಿ ಅನುಭವ ಹಂಚಿಕೊಂಡ ಮೋದಿ

    ಇದೇ ವೇಳೆ ಸಂಸತ್ತಿನಲ್ಲಿ ನಡೆದ ಭದ್ರತಾ ಲೋಪದ (Security breach in Lok Sabha) ಕುರಿತು ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನೂ ಟೀಕಿಸಿದರು. ಬಿಜೆಪಿ ಸಂಸದರೊಬ್ಬರು ಇಬ್ಬರು ಒಳನುಗ್ಗುವವರಿಗೆ ಸಂದರ್ಶಕರ ಪಾಸ್‌ಗಳನ್ನು ನೀಡಿದ್ದರು. ಬಳಿಕ ಅವರನ್ನು ಉಳಿಸುವ ಸಲುವಾಗಿ 146 ಮಂದಿ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದು ಬ್ಯಾನರ್ಜಿ ಟಾಂಗ್‌ ನೀಡಿದರು.

    ಮಿಮಿಕ್ರಿ ಮಾಡಿರುವ ಪ್ರಕರಣ ಸಂಬಂಧ ಜಕಲ್ಯಾಣ್‌ ಬ್ಯಾನರ್ಜಿ ವಿರುದ್ಧ ನವದೆಹಲಿಯ ಪೊಲೀಸ್‌ ಠಾಣೆಯೊಂದರಲ್ಲಿ ದೂರು ದಾಖಲಾಗಿದೆ. ದಕ್ಷಿಣ ದೆಹಲಿಯ ಪೊಲೀಸ್ ಉಪ ಕಮಿಷನರ್ ಪ್ರಕಾರ, ನಗರದ ಡಿಫೆನ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಅಭಿಷೇಕ್ ಗೌತಮ್ ಎಂಬ ವಕೀಲರು ಬ್ಯಾನರ್ಜಿ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ: 20 ವರ್ಷದಿಂದ ನಾನೂ ಅವಮಾನಗಳನ್ನು ಎದುರಿಸಿದ್ದೇನೆ: ಧನ್ಕರ್‌ಗೆ ಕರೆ ಮಾಡಿ ಕಹಿ ಅನುಭವ ಹಂಚಿಕೊಂಡ ಮೋದಿ

  • 20 ವರ್ಷದಿಂದ ನಾನೂ ಅವಮಾನಗಳನ್ನು ಎದುರಿಸಿದ್ದೇನೆ: ಧನ್ಕರ್‌ಗೆ ಕರೆ ಮಾಡಿ ಕಹಿ ಅನುಭವ ಹಂಚಿಕೊಂಡ ಮೋದಿ

    20 ವರ್ಷದಿಂದ ನಾನೂ ಅವಮಾನಗಳನ್ನು ಎದುರಿಸಿದ್ದೇನೆ: ಧನ್ಕರ್‌ಗೆ ಕರೆ ಮಾಡಿ ಕಹಿ ಅನುಭವ ಹಂಚಿಕೊಂಡ ಮೋದಿ

    ನವದೆಹಲಿ: ತೃಣಮೂಲ ಸಂಸದರೊಬ್ಬರು ಸಂಸತ್ತಿನ (Parliment) ಆವರಣದಲ್ಲಿ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ (Jagdeep Dhankhar) ಅವರನ್ನು ಅವಮಾನ ಮಾಡಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ತಮಗೆ ಕರೆ ಮಾಡಿ ಬೇಸರ ವ್ಯಕ್ತಪಡಿಸಿದ್ದಾಗಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ (Jagdeep Dhankhar) ಬುಧವಾರ ತಿಳಿಸಿದ್ದಾರೆ.

    ಈ ವಿಚಾರವನ್ನು ಧನ್ಕರ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ದೂರವಾಣಿ ಕರೆ ಮಾಡಿದ್ದರು. ನಿನ್ನೆ ಸಂಸತ್ತಿನ ಸಂಕೀರ್ಣದಲ್ಲಿ ಕೆಲವು ಸಂಸದರು ಹೀನಾಯವಾಗಿ ನಡೆದುಕೊಡ ವಿಚಾರಕ್ಕೆ ಬೇಸರ ವ್ಯಕ್ತಪಡಿಸಿದರು ಮತ್ತು ತಮ್ಮ ಜೀವನದಲ್ಲೂ ಆದ ಕಹಿ ಅನುಭವಗಳನ್ನು ಹಂಚಿಕೊಂಡರು ಎಂದು ಧನ್ಕರ್ ತಿಳಿಸಿದ್ದಾರೆ.

    ತಾನೂ ಕೂಡಾ ಕಳೆದ 20 ವರ್ಷಗಳಿಂದ ಇಂತಹ ಅವಮಾನಗಳನ್ನು ಎದುರಿಸುತ್ತಿದ್ದೇನೆ. ಆದರೆ ಭಾರತದ ಉಪರಾಷ್ಟ್ರಪತಿಯಂತಹ ಸಾಂವಿಧಾನಿಕ ಕಚೇರಿಗೆ ಅದರಲ್ಲೂ ಸಂಸತ್ತಿನ ಆವರಣದಲ್ಲಿ ಅವಮಾನ ಮಾಡಿರುವುದು ದುರದೃಷ್ಟಕರ ಎಂದು ಮೋದಿ ಹೇಳಿರುವುದಾಗಿ ಧನ್ಕರ್ ಬರೆದಿದ್ದಾರೆ.

    ನನ್ನನ್ನು ಕರ್ತವ್ಯ ಪಾಲನೆ ಮತ್ತು ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿಯುವ ನನ್ನ ಬದ್ಧತೆಯನ್ನು ಈ ರೀತಿಯ ವರ್ತನೆಗಳಿಂದ ತಡೆಯಲಾಗುವುದಿಲ್ಲ. ನಾನು ನನ್ನ ಹೃದಯಾಳದಿಂದ ಆ ಮೌಲ್ಯಗಳಿಗೆ ಬದ್ಧನಾಗಿದ್ದೇನೆ. ಯಾವುದೇ ಅವಮಾನಗಳಿಂದ ನನ್ನ ಹಾದಿ ಬದಲಾಗುವುದಿಲ್ಲ ಎಂದು ತಾವು ಮೋದಿಗೆ ತಿಳಿಸಿದ್ದಾಗಿ ಹೇಳಿದ್ದಾರೆ. ಇದನ್ನೂ ಓದಿ: ಅಮಾನತಾದ ಸಂಸದರು ಸಂಸತ್ತಿನ ಮೊಗಸಾಲೆ, ಗ್ಯಾಲರಿಗೆ ಬರುವಂತಿಲ್ಲ: ಸುತ್ತೋಲೆ

    ಘಟನೆಯೇನು?
    ಸಂಸತ್ ಇತಿಹಾಸದಲ್ಲೇ ಗರಿಷ್ಠಮಟ್ಟದಲ್ಲಿ ಅಮಾನತು ಆಗಿರೋ ಸಂಸದರು ಪ್ರತಿಭಟನೆ ವೇಳೆ ಅಣಕು ಸಂಸತ್ ನಿರ್ವಹಿಸಿದರು. ಈ ಸಂದರ್ಭದಲ್ಲಿ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ (Kalyan Banerjee) ಉಪರಾಷ್ಟ್ರಪತಿಯೂ ಆಗಿರೋ ರಾಜ್ಯಸಭೆ ಚೇರ್ಮನ್ ಜಗದೀಪ್  ಧನ್ಕರ್‌ರನ್ನು ಅನುಕರಿಸಿ ಮಿಮಿಕ್ರಿ ಮಾಡಿದ್ದಾರೆ.

    ನನ್ನ ಬೆನ್ನು ಮೂಳೆ ನೆಟ್ಟಗಿದೆ, ನಾನು ಸಾಕಷ್ಟು ಉದ್ದ ಇದ್ದೇನೆ ಎನ್ನುತ್ತಾ ಕಲ್ಯಾಣ್ ಬ್ಯಾನರ್ಜಿ, ಧನಕರ್ ದೈಹಿಕ ಸಂರಚನೆ ಬಗ್ಗೆ ಗೇಲಿ ಮಾಡಿದ್ದಾರೆ. ವಿಪರ್ಯಾಸ ಎಂದರೆ ಇದನ್ನು ನೋಡಿ ನಗುತ್ತಾ ರಾಹುಲ್ ಗಾಂಧಿ (Rahul Gandhi) ತಮ್ಮ ಮೊಬೈಲ್‌ನಲ್ಲಿ ವೀಡಿಯೋ ಶೂಟ್ ಮಾಡಿದ್ದಾರೆ. ರಾಹುಲ್ ಮಾತ್ರ ಅಲ್ಲದೆ ಅಲ್ಲಿ ನೆರೆದಿದ್ದವರೆಲ್ಲಾ ಗೊಳ್ಳೆಂದು ನಕ್ಕಿದ್ದಾರೆ. ರಾಹುಲ್ ಸೇರಿ ವಿಪಕ್ಷಗಳ ಈ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಖುದ್ದು ಧನ್ಕರ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಉಪರಾಷ್ಟ್ರಪತಿಗೆ ಅವಮಾನಿಸಿದ್ದನ್ನು ನೋಡಿ ದಿಗ್ಭ್ರಮೆಗೊಂಡಿದ್ದೇನೆ: ಮುರ್ಮು ಬೇಸರ