Tag: ಕಲ್ಯಾಣೋತ್ಸವ

  • ಕೋಲಿನಿಂದ ಹೊಡೆದಾಡೋ ಜಾತ್ರೆ- ಮೂವರ ಸ್ಥಿತಿ ಗಂಭೀರ, ನೂರಕ್ಕೂ ಹೆಚ್ಚು ಮಂದಿಗೆ ಗಾಯ

    ಕೋಲಿನಿಂದ ಹೊಡೆದಾಡೋ ಜಾತ್ರೆ- ಮೂವರ ಸ್ಥಿತಿ ಗಂಭೀರ, ನೂರಕ್ಕೂ ಹೆಚ್ಚು ಮಂದಿಗೆ ಗಾಯ

    ಅಮರಾವತಿ: ಆಂಧ್ರದ ಕರ್ನೂಲು ಜಿಲ್ಲೆಯ ಹೊಳಗುಂದ ಮಂಡಲದ ದೇವರಗುಡ್ಡ ಎಂಬಲ್ಲಿ ಮತ್ತೊಮ್ಮೆ ರಕ್ತ ಸುರಿದಿದೆ. ಕೋಲುಗಳನ್ನು ಹಿಡಿದು ಬಡಿದಾಡಿಕೊಳ್ಳುವ (Stick Fight) ಸಂಪ್ರದಾಯದಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.

    ಆಂಧ್ರಪ್ರದೇಶದ (Andhrapradesh) ಗಡಿ ಭಾಗದಲ್ಲಿ ದೇವರ ಗುಡ್ಡದಲ್ಲಿ ವಿಜಯದಶಮಿಯ ರಾತ್ರಿ ವಿಶಿಷ್ಠ ಆಚರಣೆಯೊಂದು ನಡೆಯುತ್ತದೆ. ನೆರಣಕಿ ಗ್ರಾಮಕ್ಕೆ ಸೇರಿದ ಮೀಸಲು ಅರಣ್ಯಪ್ರದೇಶದ ಗುಡ್ಡದ ಮೇಲಿರೋ ಮಾಳ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಜಯದಶಮಿ ದಿನರಾತ್ರಿ ಇಲ್ಲಿನ ಮಾಳಮ್ಮ ಮತ್ತು ಮಲ್ಲೇಶ್ವರ ಸ್ವಾಮಿಗೆ ಕಲ್ಯಾಣೋತ್ಸವ ನಡೆಯುತ್ತದೆ. ಮಲ್ಲೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ನೆರಣಕಿ ಗ್ರಾಮದ ಭಕ್ತರು ಬೆಟ್ಟಕ್ಕೆ ಬರುತ್ತಾರೆ.

    ಬರುವಾಗ ಮತ್ತು ಹೋಗುವಾಗ ಈ ಉತ್ಸವ ಮೂರ್ತಿಗಳನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗಬೇಕೆಂದು ಸುತ್ತಮುತ್ತಲಿನ ಗ್ರಾಮಸ್ಥರು ಪ್ರಯತ್ನಿಸುತ್ತಾರೆ. ಈ ವೇಳೆ ಪರಸ್ಪರ ಬಡಿಗೆ ಹಿಡಿದು ಕೊಂಡು ಹೊಡೆದಾಡಿಕೊಳ್ಳುತ್ತಾರೆ. ಇದನ್ನು ನೋಡಲು ಮತ್ತು ಅದರಲ್ಲಿ ಪಾಲ್ಗೊಳ್ಳಲು ಈ ಬೆಟ್ಟ ಪ್ರದೇಶದಕ್ಕೆ ಸಾವಿರಾರು ಜನ ಬಂದು ಸೇರುತ್ತಾರೆ. ಮಧ್ಯರಾತ್ರಿ 1 ರಿಂದ 3 ಗಂಟೆವರೆಗೆ ಈ ಕಾಳಗ ನಡೆಯುತ್ತದೆ. ಇದನ್ನೂ ಓದಿ: ಭಾರತ ಅಭಿವೃದ್ಧಿಯಾದರೆ ಕೆಲವರ ಆಟ ನಡೆಯಲ್ಲ: ಮೋಹನ್ ಭಾಗವತ್

    ಈ ಕಾಳಗಕ್ಕೆ ನಿಷೇಧವಿದ್ರೂ ಪೊಲೀಸರ ಎದುರಿಗೇ ಈ ಕಾಳಗ ನಡೆದು ಪರಸ್ಪರ ಬಡಿದಾಡಿಕೊಳ್ಳುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಯಲು ಉದ್ಭವ ವಿನಾಯಕನಿಗೆ ಕಲ್ಯಾಣೋತ್ಸವ – ಸಿದ್ಧಿಬುದ್ದಿ ಜೊತೆ ಗಣೇಶನಿಗೆ ಕಲ್ಯಾಣ

    ಬಯಲು ಉದ್ಭವ ವಿನಾಯಕನಿಗೆ ಕಲ್ಯಾಣೋತ್ಸವ – ಸಿದ್ಧಿಬುದ್ದಿ ಜೊತೆ ಗಣೇಶನಿಗೆ ಕಲ್ಯಾಣ

    ಬೆಂಗಳೂರು: ನೆಲಮಂಗಲ ಪಟ್ಟಣ ಹೊನ್ನಗಂಗಯ್ಯನಪಾಳ್ಯದಲ್ಲಿರುವ ಪುರಾತನ ಬಯಲು ಉದ್ಭವ ಗಣಪತಿ ದೇವಾಲಯಲ್ಲಿ ಗಣೇಶನ ಮದುವೆ ನಡೆಯಿತು.

    ನೂರಾರು ವರ್ಷದ ಇತಿಹಾಸವಿರುವ ಈ ಬಯಲು ಗಣೇಶನ ದೇವಾಲಯಲ್ಲಿ ಸನಾತನ ಕಾಲದಿಂದಲು ಈ ಕಲ್ಯಾಣೋತ್ಸವ ನಡೆಯಿತು. ದೇವತಾ ಕನ್ಯೆಯರಾದ ಸಿದ್ಧಿಬುದ್ದಿ ಜೊತೆ ವಿಜೃಂಭಣೆಯಿಂದ ವಿವಾಹಮಹೋತ್ಸವ ನಡೆಯುತ್ತಿದೆ.

    ಸಾವಿರಾರು ಜನಭಕ್ತಾಧಿಗಳು ಸರತಿಸಾಲಿನಲ್ಲಿ ನಿಂತು ಸಿದ್ಧಿಬುದ್ದಿ ವಿನಾಯಕನ ಕಲ್ಯಾಣೋತ್ಸವವನ್ನು ನೋಡಿ ಕಣ್ತುಂಬಿಕೊಂಡರು. ಈ ಉದ್ಭವ ಶ್ರೀವಿನಾಯಕನ ಮೂರ್ತಿಗೆ ವಿಶೇಷ ಹೂಗಳಿಂದ ಅಲಂಕಾರ ಮಾಡಲಾಗಿದ್ದು, ವಿಶಿಷ್ಟ ಪೂಜೆ ಹೋಮ-ಹವನಾದಿಗಳು ಜರುಗಿದವು.

    ಸುಮಾರು 451 ವರ್ಷಗಳ ಹಳೆಯದಾದ ಮುದ್ಗಲ ಪುರಾಣದ ಪ್ರಕಾರ 16 ವಿಗ್ರಹಗಳಲ್ಲಿ ಈ ಶಕ್ತಿಗಣಪತಿ ಒಂದಾಗಿದ್ದು, ತನ್ನ ತೊಡೆಯ ಪಕ್ಕದಲ್ಲಿ ಶಕ್ತಿಯನ್ನು ಕೂರಿಸಿಕೊಂಡಿರುವ ದೇವರು ಶ್ರೀ ವಿನಾಯಕ ಸ್ವಾಮಿ. ಪುರಾಣದ ಪ್ರಕಾರ ವಿನಾಯಕನಿಗೆ ಸಿದ್ಧಿಬುದ್ದಿ ಎಂಬ ಇಬ್ಬರು ಹೆಂಡತಿಯರಿದ್ದರು. ಹಿಂದೂ ಪರಂಪರೆಯ ಪುರಾಣದ ಹಿನ್ನೆಲೆಯ ಪ್ರಕಾರ, ಇಂದು ಸಿದ್ಧಿಬುದ್ದಿ ವಿನಾಯಕನ ಕಲ್ಯಾಣೋತ್ಸವ ಉತ್ಸವ ಅದ್ಧೂರಿಯಾಗಿ ಜರುಗಿತು. ವಿಶಿಷ್ಟ ಪ್ರಕಾರದ ಈ ಆಚರಣೆಯನ್ನು ನೋಡಲು ಸಾವಿರಾರು ಭಕ್ತರು ನೆರೆದಿದ್ದರು. ಇಂದು ವಿನಾಯಕನ ರಥೋತ್ಸವ ಜರುಗಲಿದೆ.

  • ಸಿಂಹಾಚಲಂನಿಂದ ಬಂದಿದ್ದ ವರಹಲಕ್ಷ್ಮಿನರಸಿಂಹಸ್ವಾಮಿಯ ಅದ್ಧೂರಿ ಕಲ್ಯಾಣೋತ್ಸವ

    ಸಿಂಹಾಚಲಂನಿಂದ ಬಂದಿದ್ದ ವರಹಲಕ್ಷ್ಮಿನರಸಿಂಹಸ್ವಾಮಿಯ ಅದ್ಧೂರಿ ಕಲ್ಯಾಣೋತ್ಸವ

    ಕೋಲಾರ: ಸಿಂಹಾಚಲಂನಿಂದ ಬಂದಿದ್ದ ವರಹಲಕ್ಷ್ಮಿನರಸಿಂಹಸ್ವಾಮಿ ಕಲ್ಯಾಣೋತ್ಸವ ಕೋಲಾರದ ಶ್ರೀನಿವಾಸಪುರದಲ್ಲಿ ಅದ್ಧೂರಿಯಾಗಿ ನಡೆಯಿತು.

    ಶ್ರೀನಿವಾಸಪುರದ ಜನ್ಮ ಭೂಮಿ ವೇದಿಕೆ ವತಿಯಿಂದ ಆಯೋಜನೆ ಮಾಡಲಾಗಿದ್ದ ಕಲ್ಯಾಣೊತ್ಸವವನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ಮೂಲೆ-ಮೂಲೆಗಳಿಂದ ಸಾವಿರಾರು ಸಂಖ್ಯೆಯ ಭಕ್ತರ ದಂಡು ಆಗಮಿಸಿತ್ತು.

    ಕಲ್ಯಾಣೋತ್ಸವ ಕೊನೆಯ ದಿನದ ಕಾರ್ಯಕ್ರಮ ಅಂಗವಾಗಿ ಸಿಂಹಾಚಲಂ ವರಹಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವವನ್ನು ಅತ್ಯಂತ ವೈಭವೋಪೇತವಾಗಿ ನೆರವೇರಿಸಲಾಯಿತು. ತೆಲಂಗಾಣ ರಾಜ್ಯದ ವಿಶಾಖಪಟ್ಟಣಂ ಜಿಲ್ಲೆಯ ವೈಷ್ಣವ ಪುಣ್ಯ ಕ್ಷೇತ್ರ ಸಿಂಹಾಚಲ ಬೆಟ್ಟದ ಮೇಲಿರುವ ಶ್ರೀವರಹಲಕ್ಷ್ಮೀನರಸಿಂಹಸ್ವಾಮಿ ದೇವಾಲಯವು ಅತಿ ವಿಶೇಷವಾದದ್ದು, ಅಲ್ಲಿಂದಲೇ ಆಗಮಿಸಿದ ಆಗಮಿಕರು ವೇದ-ಮಂತ್ರ ಘೋಷಗಳೊಂದಿಗೆ ಮಂಗಳ ವಾದ್ಯಗಳ ಜೊತೆಗೆ ವರಹ ಲಕ್ಷ್ಮೀನರಸಿಂಹ ಸ್ವಾಮಿಗೆ ನೂತನ ಯಜ್ನೋಪವಿತ ಧಾರಣೆ ಮಾಡಿದರು.

    ಗೋತ್ರ ಪ್ರವರಗಳ ಮುಖೇನ ಮಂತ್ರ ಘೋಷಗಳ ನಡುವೆ ಸ್ವಾಮಿಗೆ ನೂತನ ವಸ್ತ್ರಾಭರಣಗಳನ್ನು ಹಾಕಿ ಆಲಂಕಾರ ಮಾಡಲಾಯಿತು. ನಂತರ ಕನ್ಯಾದಾನ, ಮಾಂಗಲ್ಯ ಧಾರಣೆ, ಮಹೂರ್ತಗಳನ್ನ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಕೋಲಾರದಲ್ಲಿ ಉತ್ತಮವಾದ ಮಳೆ- ಬೆಳೆ ಆಗಿಲ್ಲ. ಬರಗಾಲದ ಛಾಯೆ ಆವರಿಸಿದ್ದು, ಕೆರೆಗಳು ತುಂಬಿ ಹರಿಯಲಿ ಎಂದು ಧಾರ್ಮಿಕ ಕಾರ್ಯಕ್ರಮ ನೆರವೇರಿಸೋದರ ಮೂಲಕ ಎಲ್ಲರಿಗೂ ಒಳಿತಾಗಲಿ ಎಂದು ಬೇಡಿಕೊಳ್ಳಲಾಯಿತು.

    ಒಟ್ಟಿನಲ್ಲಿ ಕೋಲಾರ ಜಿಲ್ಲೆಯ ಮಾವಿನ ಮಡಿಲು ಶ್ರೀನಿವಾಸಪುರ ಇಂದು ನರಸಿಂಹಸ್ವಾಮಿಯ ಭಕ್ತಿಯಲ್ಲಿ ಮಿಂದೆದ್ದಿತ್ತು. ಉತ್ತಮ ಮಳೆ ಬೆಳೆಯಾಗಲೀ ಜನರು ಸಮೃದ್ಧಿಯಾಗಿರಲೆಂದು ಬಂದಿದ್ದ ಜನರು ಪ್ರಾರ್ಥಿಸಿದರು. ಈ ಮೂಲಕ ಜನರು ಭಕ್ತಿಯಲ್ಲಿ ಮಿಂದೆದ್ದು ದೇವರ ಕೃಪೆಗೆ ಪಾತ್ರರಾದರು.