Tag: ಕಲ್ಯಾಣಿ ಪ್ರಿಯಾದರ್ಶನ್‌

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಹೃದಯಂ’ ಚಿತ್ರದ ನಟಿ ಕಲ್ಯಾಣಿ ಸಹೋದರ ಸಿದ್ಧಾರ್ಥ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಹೃದಯಂ’ ಚಿತ್ರದ ನಟಿ ಕಲ್ಯಾಣಿ ಸಹೋದರ ಸಿದ್ಧಾರ್ಥ್

    ಟಿ ಕಲ್ಯಾಣಿ ಪ್ರಿಯದರ್ಶನ್ (Actress Kalyani Priyadarshan) ಅವರ ಮನೆಯಲ್ಲಿ ಗಟ್ಟಿಮೇಳ ಸೌಂಡ್ ಜೋರಾಗಿದೆ. ನಟಿ ಕಲ್ಯಾಣಿ ಸಹೋದರ ಸಿದ್ಧಾರ್ಥ್ ಮದುವೆ ಸಂಭ್ರಮ ಕಳೆಗಟ್ಟಿದೆ. ಮರ್ಲಿನ್ ಜೊತೆ ಕಲ್ಯಾಣಿ ಸಹೋದರ ಸಿದ್ಧಾರ್ಥ್ (Siddarth) ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ.

    ಸಾಕಷ್ಟು ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಪ್ರಿಯಾದರ್ಶನ್ (Director Priyadarshan) ಅವರ ಪುತ್ರ (Son) ಮತ್ತು ನಟಿ ಕಲ್ಯಾಣಿ ಅವರ ಸಹೋದರ (Brother) ಸಿದ್ಧಾರ್ಥ್ ಪ್ರಿಯಾದರ್ಶನ್ ಬಹುಕಾಲದ ಮರ್ಲಿನ್ (Merlin) ಜೊತೆ ಫೆ.3ರಂದು ಮದುವೆಯಾಗಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ಚೆನ್ನೈನಲ್ಲಿ ಹಸೆಮಣೆ ಏರಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವಧು ಮೆರ್ಲಿನ್ ಅಮೆರಿಕಾದ ಪ್ರಜೆಯಾಗಿದ್ದು, ವಿಶುಯಲ್ ಎಫೆಕ್ಟ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಈ ನವಜೋಡಿಗೆ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನ `ಸಿಟಾಡೆಲ್’ ಸೀರಿಸ್ ಒಪ್ಪಿಕೊಂಡಿದ್ಯಾಕೆ? ಕಾರಣ ಬಿಚ್ಚಿಟ್ಟ ಸಮಂತಾ

    ಮಾಲಿವುಡ್‌ ನಟಿ ಕಲ್ಯಾಣಿ ಪ್ರಿಯಾದರ್ಶನ್‌ ಕಳೆದ ವರ್ಷ `ಹೃದಯಂ’ ಸಿನಿಮಾ ಮೂಲಕ ಸೆನ್ಸೇಷನ್‌ ಕ್ರಿಯೆಟ್‌ ಮಾಡಿದ್ದರು. ಈಗ ಹಲವು ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೊಡ್ಮನೆ ಯುವ ರಾಜಕುಮಾರನಿಗೆ ಕಲ್ಯಾಣಿ ನಾಯಕಿ

    ದೊಡ್ಮನೆ ಯುವ ರಾಜಕುಮಾರನಿಗೆ ಕಲ್ಯಾಣಿ ನಾಯಕಿ

    ದೊಡ್ಮನೆಯ ಕುಡಿ ಯುವ ರಾಜಕುಮಾರ (Yuva Rajkumar) ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಡಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಇದರ ನಡುವೆ ಯುವನ ಹೊಸ ಸಿನಿಮಾ ಬಗ್ಗೆ ನಾನಾ ವಿಚಾರಗಳು ಸದ್ದು ಮಾಡ್ತಿದೆ. ಯುವಗೆ ಜೋಡಿಯಾಗಲು ನಟಿ ಕಲ್ಯಾಣಿ ಪ್ರಿಯದರ್ಶನ್ (Kalyani Priyadarshan)ಎಂಟ್ರಿ ಕೊಡ್ತಿದ್ದಾರೆ.

    ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣದ ಹೊಸ ಸಿನಿಮಾದಲ್ಲಿ‌  ಯುವರಾಜ್‌ಕುಮಾರ್ ನಟಿಸಲು ರೆಡಿಯಾಗಿದ್ದಾರೆ. ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಯುವ ಕಾಲಿಡುತ್ತಿದ್ದಾರೆ. ಯುವನ ಡೆಬ್ಯೂ ಸಿನಿಮಾ ಬಗ್ಗೆ ಸಾಕಷ್ಟು ಕ್ಯೂರಿಯಸ್ ಆಗಿರುವ ಅಭಿಮಾನಿಗಳಿಗೆ ಮತ್ತೊಂದು ನ್ಯೂಸ್ ಸಿಕ್ಕಿದೆ. ದೊಡ್ಮನೆ ಯುವನಿಗೆ ಸೌತ್ ನಟಿ ಜೋಡಿಯಾಗುತ್ತಿದ್ದಾರೆ. ಇದನ್ನೂ ಓದಿ: ಯಾಕೆ ವಿಜಯ್ ಮರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ: ತಮನ್ನಾಗೆ ನೆಟ್ಟಿಗರಿಂದ ಕ್ಲಾಸ್

    ತೆಲುಗು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ಕಲ್ಯಾಣಿ, ಈಗ ಸ್ಯಾಂಡಲ್‌ವುಡ್‌ಗೆ (Sandalwood) ಯುವನ ಹೊಸ ಚಿತ್ರದ ಮೂಲಕ ಪಾದಾರ್ಪಣೆ ಮಾಡ್ತಿದ್ದಾರೆ. ಹೀಗೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ಇನ್ನೂ ಯುವರಾಜಕುಮಾರ್‌ಗೆ ಸಂತೋಷ್ ಆನಂದ್‌ರಾಮ್ (Santhosh Anandram) ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇದೇ ಏಪ್ರಿಲ್‌ನಿಂದ ಶೂಟಿಂಗ್ ಶುರುವಾಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k