Tag: ಕಲ್ಕಿ 2898 ಎಡಿ

  • ಮತ್ತೆ ಪ್ರಭಾಸ್‌ಗೆ ಜೊತೆಯಾದ ಬಾಲಿವುಡ್ ಬ್ಯೂಟಿ ದಿಶಾ ಪಟಾನಿ

    ಮತ್ತೆ ಪ್ರಭಾಸ್‌ಗೆ ಜೊತೆಯಾದ ಬಾಲಿವುಡ್ ಬ್ಯೂಟಿ ದಿಶಾ ಪಟಾನಿ

    ‘ಕಲ್ಕಿ 2898 ಎಡಿ’ ಸಿನಿಮಾದ ಸಕ್ಸಸ್ ಬಳಿಕ ಪ್ರಭಾಸ್ (Prabhas) ಬಳಿ ಕೈತುಂಬಾ ಸಿನಿಮಾಗಳಿವೆ. ಸದ್ಯ ಹನು ರಾಘವಪುಡಿ ನಿರ್ದೇಶನದ ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಈ ಚಿತ್ರತಂಡಕ್ಕೆ ದಿಶಾ ಪಟಾನಿ (Disha Patani) ಸೇರಿಕೊಂಡಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಮಾಜಿ ಪತ್ನಿಯರೊಡನೆ ಈದ್ ಹಬ್ಬ ಆಚರಿಸಿದ ಆಮೀರ್ ಖಾನ್

    ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾದಲ್ಲಿ ದಿಶಾ ಪಟಾನಿಗೂ ಒಂದೊಳ್ಳೆಯ ಪಾತ್ರದ ಸಿಕ್ಕಿದೆಯಂತೆ. ಪ್ರಭಾಸ್ ಜೊತೆ ಪ್ರಮುಖದಲ್ಲಿ ದಿಶಾ ಕೂಡ ನಟಿಸಲಿದ್ದಾರೆ ಎನ್ನಲಾದ ಸುದ್ದಿ ಇದೀಗ ಹರಿದಾಡುತ್ತಿದೆ. ಈ ಬಗ್ಗೆ ಚಿತ್ರತಂಡವೇ ಸ್ಪಷ್ಟನೆ ನೀಡಬೇಕಿದೆ. ಇದನ್ನೂ ಓದಿ: ಟಾಲಿವುಡ್ ನೆಪೋಟಿಸಂ ಬಗ್ಗೆ ಮಾತನಾಡಿದ ‘ಲಕ್ಕಿ ಭಾಸ್ಕರ್‌’ ನಿರ್ಮಾಪಕ ನಾಗ ವಂಶಿ

    ಈ ಹಿಂದೆ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರಭಾಸ್ ಜೊತೆ ದಿಶಾ ಪಟಾನಿ ನಟಿಸಿದ್ದರು. ಇದೀಗ ಮತ್ತೆ ನಟನ ಜೊತೆ ದಿಶಾ ನಟಿಸಲಿದ್ದಾರೆ ಎಂಬ ಸುದ್ದಿ ವೈರಲ್ ಆಗ್ತಿದೆ.

    ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ ಈ ವರ್ಷದ ಅಂತ್ಯದಲ್ಲಿ ಶುರುವಾಗಲಿದೆ ಎಂದು ಡೈರೆಕ್ಟರ್ ನಾಗ ಅಶ್ವೀನ್ ಕಡೆಯಿಂದ ಅಧಿಕೃತ ಮಾಹಿತಿ ಸಿಕ್ಕಿದೆ. ಡಿಸೆಂಬರ್‌ನಲ್ಲಿ ಪ್ರಭಾಸ್‌ ಈ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.

  • ‘ಕಲ್ಕಿ 2898 ಎಡಿ’ ಸೀಕ್ವೆಲ್‌ನಲ್ಲಿ ನಟಿಸ್ತಾರಾ ನಾನಿ?- ಸ್ಪಷ್ಟನೆ ನೀಡಿದ ನಟ

    ‘ಕಲ್ಕಿ 2898 ಎಡಿ’ ಸೀಕ್ವೆಲ್‌ನಲ್ಲಿ ನಟಿಸ್ತಾರಾ ನಾನಿ?- ಸ್ಪಷ್ಟನೆ ನೀಡಿದ ನಟ

    ತೆಲುಗು ನಟ ನಾನಿ (Actor Nani) ಸದ್ಯ ‘ಸೂರ್ಯನ ಸಾಟರ್ಡೆ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಕಲ್ಕಿ ಸೀಕ್ವೆಲ್‌ನಲ್ಲಿ ನಾನಿ ನಟಿಸುತ್ತಾರೆ ಎಂದು ಹಬ್ಬಿದ ಸುದ್ದಿಗೆ ನಾನಿ ಕ್ಲ್ಯಾರಿಟಿ ನೀಡಿದ್ದಾರೆ. ‘ಕಲ್ಕಿ 2’ನಲ್ಲಿ ನಾನು ನಟಿಸುತ್ತಿಲ್ಲ ಎಂದು ನಾನಿ ಮಾತನಾಡಿದ್ದಾರೆ.

    ಸಂದರ್ಶನವೊಂದರಲ್ಲಿ ನಾನಿ ಮಾತನಾಡಿ, ನಾನು ‘ಕಲ್ಕಿ 2’ ಸಿನಿಮಾದಲ್ಲಿ ನಟಿಸುತ್ತಿಲ್ಲ. ಚಿತ್ರತಂಡ ನನಗೆ ಅಪ್ರೋಚ್ ಕೂಡ ಮಾಡಿಲ್ಲ. ಇದೆಲ್ಲಾ ಸುಳ್ಳು ಸುದ್ದಿ. ಇದೆಲ್ಲಾ ಹೇಗೆ ವೈರಲ್ ಆಯ್ತು ಎಂಬುದು ನನಗೆ ತಿಳಿಯುತ್ತಿಲ್ಲ. ನಿಜಕ್ಕೂ ಈ ಸುದ್ದಿ ಕೇಳಿ ನಾನು ಶಾಕ್‌ ಆದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:‘ಭೀಮ’ ಸಕ್ಸಸ್ ಬೆನ್ನಲ್ಲೇ ಹೊಸ ಸಿನಿಮಾ ಘೋಷಿಸಿದ ದುನಿಯಾ ವಿಜಯ್

    ಅಂದಹಾಗೆ, ಪ್ರಭಾಸ್, ದೀಪಿಕಾ ಪಡುಕೋಣೆ (Deepika Padukone) ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಯಶಸ್ಸು ಕಂಡಿದೆ. ‘ಕಲ್ಕಿ 2’ ಬರೋದಾಗಿ ಚಿತ್ರತಂಡ ಸುಳಿವು ನೀಡಿದೆ. ಕೆಲದಿನಗಳಿಂದ ‘ಕಲ್ಕಿ 2’ನಲ್ಲಿ ನಾನಿ ಕ್ಯಾಮಿಯೋ ರೋಲ್ ಮಾಡುತ್ತಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

    ಇನ್ನೂ ಆ.29ಕ್ಕೆ ಸೂರ್ಯನ ಸಾಟರ್ಡೆ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ನಾನಿಗೆ ಹೀರೋಯಿನ್ ಆಗಿ ಕನ್ನಡತಿ ಪ್ರಿಯಾಂಕಾ ಮೋಹನ್ (Priyanka Mohan) ನಟಿಸಿದ್ದಾರೆ.

  • 1 ಸೆಕೆಂಡ್ ರೀಲ್ಸ್‌ ಮಾಡಿದ ದೀಪಿಕಾ ಪಡುಕೋಣೆ ಫುಲ್‌ ಟ್ರೆಂಡಿಂಗ್

    1 ಸೆಕೆಂಡ್ ರೀಲ್ಸ್‌ ಮಾಡಿದ ದೀಪಿಕಾ ಪಡುಕೋಣೆ ಫುಲ್‌ ಟ್ರೆಂಡಿಂಗ್

    ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣ್‌ವೀರ್ ಸಿಂಗ್ (Ranveer Singh) ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಕಣ್ಣು ಹೊಡೆಯುತ್ತಾ ನಟಿ ರೀಲ್ಸ್ ಮಾಡಿರುವ ವಿಡಿಯೋವನ್ನು ಅಭಿಮಾನಿಗಳ ಗಮನ ಸೆಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ.

    ಒಂದು ಸೆಕೆಂಡಿನ ರೀಲ್ಸ್ ವಿಡಿಯೋವನ್ನು ನಟಿ ಶೇರ್ ಮಾಡಿದ್ದಾರೆ. ದೀಪಿಕಾರ ಕಣ್ಣೋಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಕಾರ್ಯಕ್ರಮಕ್ಕೆ ರೆಡಿಯಾಗುತ್ತಿರುವ ವೇಳೆ, ಈ ವಿಡಿಯೋವನ್ನು ಮಾಡಲಾಗಿದೆ. ವಿಡಿಯೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಭರ್ಜರಿ ವಿವ್ಸ್ ಪಡೆದುಕೊಂಡಿದೆ. ಇದನ್ನೂ ಓದಿ:ಇನ್ಸ್ಟಾಗ್ರಾಂನಲ್ಲಿ ನರೇಂದ್ರ ಮೋದಿಯನ್ನು ಹಿಂದಿಕ್ಕಿದ ಶ್ರದ್ಧಾ ಕಪೂರ್


    ಅಂದಹಾಗೆ, ದೀಪಿಕಾ ಪಡುಕೋಣೆ ದಂಪತಿ ಚೊಚ್ಚಲ ಮಗುವನ್ನು ಸೆಪ್ಟೆಂಬರ್‌ನಲ್ಲಿ ಬರಮಾಡಿಕೊಳ್ಳಲಿದ್ದಾರೆ. ಮಗುವಿನ ಆಗಮನಕ್ಕಾಗಿ ನಟಿಯ ಪರಿವಾರ ಎದುರು ನೋಡುತ್ತಿದೆ.

    ಇನ್ನೂ ‘ಕಲ್ಕಿ 2898 ಎಡಿ’ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಪ್ರಭಾಸ್ ಜೊತೆ ನಟಿಸಿದ್ದ ದೀಪಿಕಾ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಮುಂಬರುವ ‘ಸಿಂಗಂ ಅಗೇನ್’ ಸಿನಿಮಾದಲ್ಲಿ ಲೇಡಿ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದಾರೆ.

  • ತೆಲುಗಿನಲ್ಲಿ ಬಿಗ್ ಚಾನ್ಸ್- ಪ್ರಭಾಸ್‌ಗೆ ಮೃಣಾಲ್ ಠಾಕೂರ್ ಜೋಡಿ

    ತೆಲುಗಿನಲ್ಲಿ ಬಿಗ್ ಚಾನ್ಸ್- ಪ್ರಭಾಸ್‌ಗೆ ಮೃಣಾಲ್ ಠಾಕೂರ್ ಜೋಡಿ

    ಸೀತಾರಾಮಂ, ಹಾಯ್ ನಾನ್ನಾ ಸಿನಿಮಾಗಳ ಮೂಲಕ ಸಕ್ಸಸ್ ಕಂಡ ಮೃಣಾಲ್ ಠಾಕೂರ್ (Mrunal Thakur) ಇದೀಗ ತೆಲುಗಿನಲ್ಲಿ ಗೋಲ್ಡನ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಡಾರ್ಲಿಂಗ್ ಪ್ರಭಾಸ್ (Prabhas) ಜೊತೆ ರೊಮ್ಯಾನ್ಸ್ ಮಾಡೋಕೆ ನಟಿ ರೆಡಿಯಾಗಿದ್ದಾರೆ.

    ತೆಲುಗು ಮತ್ತು ಬಾಲಿವುಡ್‌ನಲ್ಲಿ ಗುರುತಿಸಿಕೊಳ್ತಿರುವ ಮೃಣಾಲ್‌ಗೆ ಪ್ರಭಾಸ್ ಚಿತ್ರತಂಡ ಮಣೆ ಹಾಕಿದೆ. ಸುಂದರ ಪ್ರೇಮಕಥೆಯಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ಮೃಣಾಲ್ ಕಾಣಿಸಿಕೊಳ್ತಿದ್ದಾರೆ. ವಿಶೇಷ ಅಂದ್ರೆ, ‘ಸೀತಾರಾಮಂ’ ನಿರ್ದೇಶಕ ಈ ಚಿತ್ರಕ್ಕೂ ಡೈರೆಕ್ಷನ್‌ ಮಾಡುತ್ತಿದ್ದಾರೆ. ಹನು ರಾಘವಪುಡಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇದನ್ನೂ ಓದಿ:ನಾನು ಸುದೀಪ್ ಅವರ ದೊಡ್ಡ ಅಭಿಮಾನಿ: ‘ಮ್ಯಾಕ್ಸ್’ ನಟಿ ಸಂಯುಕ್ತಾ ಹೊರನಾಡ್

    ಪ್ರಭಾಸ್ ಮತ್ತು ಮೃಣಾಲ್ ಕಾಂಬಿನೇಷನ್‌ ಚಿತ್ರ ಇದೇ ಸೆಪ್ಟೆಂಬರ್‌ನಿಂದ ಶುರುವಾಗಲಿದೆ. ಈ ಸಿನಿಮಾ‌ ತಂಡದಿಂದ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

    ಇನ್ನೂ ಕಲ್ಕಿ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ಅತಿಥಿ ಪಾತ್ರ ಮಾಡಿದ್ದರು. ಅವರ ನಟನೆಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹಾಗಾಗಿ ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ.

  • ‘ಕಲ್ಕಿ’ಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ- ಅಮಿತಾಭ್, ಪ್ರಭಾಸ್‌ಗೆ ಲೀಗಲ್ ನೋಟಿಸ್

    ‘ಕಲ್ಕಿ’ಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ- ಅಮಿತಾಭ್, ಪ್ರಭಾಸ್‌ಗೆ ಲೀಗಲ್ ನೋಟಿಸ್

    ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಸಕ್ಸಸ್ ಕಂಡಿದೆ. ಈ ಬೆನ್ನಲ್ಲೇ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ. ಈ ಚಿತ್ರದಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಚಿತ್ರದ ನಿರ್ಮಾಪಕರಿಗೆ, ನಟರಾದ ಅಮಿತಾಭ್ (Amitabh Bachchan), ಪ್ರಭಾಸ್‌ಗೆ (Prabhas) ಕಲ್ಕಿಧಾಮ ಪೀಠಾಧೀಶ್ವರ ಆಚಾರ್ಯ ಪ್ರಮೋದ್ ಕೃಷ್ಣಂ ಲೀಗಲ್ ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ:ದರ್ಶನ್ ನೋಡಲು ದಿನಕರ್ ತೂಗುದೀಪ್ ಜೊತೆ ಜೈಲಿಗೆ ಬಂದ ವಿಜಯಲಕ್ಷ್ಮಿ

    ನಿಮ್ಮ ಚಲನಚಿತ್ರವು ಭಗವಾನ್ ಕಲ್ಕಿಯ ಪರಿಕಲ್ಪನೆಯನ್ನು ಬದಲಾಯಿಸಿರುವಂತೆ ಇದೆ. ಹಿಂದೂ ಪುರಾಣ ಗ್ರಂಥಗಳಲ್ಲಿ ಬರೆದ ಮತ್ತು ವಿವರಿಸಿದ ಕಾರಣಗಳಿಗಾಗಿ, ಭಗವಾನ್ ಕಲ್ಕಿಯ ಕಥೆಯ ಚಿತ್ರಣ ಮತ್ತು ಚಿತ್ರಣವು ಸಂಪೂರ್ಣವಾಗಿ ತಪ್ಪಾಗಿದೆ. ಹಾಗಾಗಿ ಈ ಪವಿತ್ರ ಗ್ರಂಥಗಳಿಗೆ ಅಗೌರವವಾಗಿದೆ. ಕಲ್ಕಿಯ ಕಥೆಯನ್ನು ಸಂಪೂರ್ಣವಾಗಿ ತಪ್ಪಾಗಿ ನಿರೂಪಿಸಲಾಗಿದೆ. ಇದು ಪವಿತ್ರ ಗ್ರಂಥಗಳಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಆರೋಪಿಸಿ ಚಿತ್ರತಂಡಕ್ಕೆ ಆಚಾರ್ಯ ಪ್ರಮೋದ್ ಕೃಷ್ಣಂ ಪರವಾಗಿ ಸುಪ್ರೀಂ ಕೋರ್ಟ್ ವಕೀಲ ಉಜ್ಜವಲ್ ಆನಂದ್ ಶರ್ಮಾ ಅವರು ನೋಟಿಸ್ ನೀಡಿದ್ದಾರೆ.

    ಕಲ್ಕಿ ಅವತಾರವು ವಿಷ್ಣುವಿನ ಕೊನೆಯ ಅವತಾರವಾಗಿದೆ. ಪ್ರಧಾನಿ ಮೋದಿ ಅವರು ಫೆಬ್ರವರಿ 19ರಂದು ಯುಪಿಯ ಸಂಭಾಲ್‌ನಲ್ಲಿ ಶ್ರೀ ಕಲ್ಕಿ ಧಾಮ್ ದೇವಾಲಯದ ಉದ್ಘಾಟನೆ ಮಾಡಿದರು. ಅಲ್ಲಿ ಭಗವಾನ್ ಕಲ್ಕಿ ಜನಿಸಲಿದ್ದಾರೆ. ಇಡೀ ಜಗತ್ತು ಅವನಿಗಾಗಿ ಕಾಯುತ್ತಿದೆ. ಆದರೆ ಈ ಚಿತ್ರವು ಜನರಿಗೆ ತಪ್ಪು ಸಂದೇಶವನ್ನು ನೀಡುತ್ತಿದೆ ಎಂದು ಎಂದು ಮಾಜಿ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿಕೆ ನೀಡಿದ್ದಾರೆ.

    ಅಂದಹಾಗೆ, ‘ಕಲ್ಕಿ 2898 ಎಡಿ’ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಅಮಿತಾಬ್, ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಸೇರಿದಂತೆ ಅನೇಕರು ನಟಿಸಿದ್ದಾರೆ. 2ಡಿ ಜೊತೆಗೆ 3ಡಿಯಲ್ಲೂ ಸಿನಿಮಾ ವೀಕ್ಷಿಸಲು ಲಭ್ಯವಿದೆ.

  • ಪ್ರಭಾಸ್ ಹೊಸ ಚಿತ್ರಕ್ಕೆ ನಾಯಕಿಯಾದ ಪಾಕಿಸ್ತಾನಿ ನಟಿ

    ಪ್ರಭಾಸ್ ಹೊಸ ಚಿತ್ರಕ್ಕೆ ನಾಯಕಿಯಾದ ಪಾಕಿಸ್ತಾನಿ ನಟಿ

    ಟಾಲಿವುಡ್ ನಟ ಪ್ರಭಾಸ್‌ಗೆ (Prabhas) ಈಗ ‘ಕಲ್ಕಿ’ ಸಿನಿಮಾ ಯಶಸ್ಸಿನಿಂದ ಬೇಡಿಕೆ ಹೆಚ್ಚಾಗಿದೆ. ಕೆರಿಯರ್‌ನಲ್ಲಿ ಹೊಸ ತಿರುವು ಸಿಕ್ಕಿದೆ. ಹೀಗಿರುವಾಗ ಡಾರ್ಲಿಂಗ್ ಪ್ರಭಾಸ್ ನಟನೆಯ ಹೊಸ ಸಿನಿಮಾಗೆ ಪಾಕಿಸ್ತಾನಿ ನಟಿಗೆ ಅವಕಾಶ ಕೊಡಲಾಗಿದೆ. ಪ್ರಭಾಸ್‌ ಜೊತೆ ಪಾಕಿಸ್ತಾನಿ ನಟಿ ಡ್ಯುಯೇಟ್‌ ಹಾಡಲಿದ್ದಾರೆ. ಇದನ್ನೂ ಓದಿ:‘ರಾಜಾ ರಾಣಿ’ ಶೋಗೆ ಬಂದ್ಮೇಲೆ ನನ್ನ ಅಸ್ತಿತ್ವ ಕಾಣಿಸುತ್ತಿದೆ: ಅದಿತಿ ಪ್ರಭುದೇವ

    ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಸಕ್ಸಸ್‌ನಿಂದ ಹಳೆಯ ಸಿನಿಮಾಗಳ ಸೋಲಿನ ಕಹಿ ಮರೆಸಿದೆ. ಈ ಸಿನಿಮಾ ಬಳಿಕ ‘ದಿ ರಾಜಾ ಸಾಬ್’ ಚಿತ್ರದ ಶೂಟಿಂಗ್‌ನಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಹನು ರಾಘವಪುಡಿ ನಿರ್ದೇಶನ ಮಾಡುತ್ತಿದ್ದಾರೆ.

    ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಪಾಕಿಸ್ತಾನಿ ನಟಿ ಸಜಲ್ ಅಲಿಗೆ ಚಾನ್ಸ್ ಸಿಕ್ಕಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಚಿತ್ರತಂಡಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಭಾರತದಲ್ಲಿ ನಾಯಕಿಯರಿಗೆ ಕೊರತೆ ಏನಿದೆ. ಪಾಕಿಸ್ತಾನಿ ನಟಿಗೆ ಅವಕಾಶ ಕೊಡುವ ಅಗತ್ಯ ಏನಿದೆ ಎಂದೆಲ್ಲಾ ಚಿತ್ರತಂಡಕ್ಕೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಆದರೆ ಸಜಲ್ ಅಲಿನೇ ಈ ಚಿತ್ರದ ನಾಯಕಿ ಎಂದು ಅಧಿಕೃತ ಘೋಷಣೆ ಮಾಡಿಲ್ಲ ಚಿತ್ರತಂಡ. ಕೇವಲ ಹರಿದಾಡುತ್ತಿರುವ ಸುದ್ದಿಗೆ ನೆಟ್ಟಿಗರು ರಾಂಗ್ ಆಗಿದ್ದಾರೆ. ಈ ಕುರಿತು ಚಿತ್ರತಂಡ ರಿಯಾಕ್ಟ್‌ ಮಾಡುತ್ತಾರಾ ಎಂದು ಕಾಯಬೇಕಿದೆ.

    ಅಂದಹಾಗೆ, ಸಜಲ್ ಅಲಿಗೆ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಬಾಲಿವುಡ್‌ನಲ್ಲಿ ಈ ಹಿಂದೆ ‘ಮಾಮ್’ ಎಂಬ ಸಿನಿಮಾದಲ್ಲಿ ಅವರು ನಟಿಸಿದ್ದರು.

  • ಪ್ರಭಾಸ್ ಮದುವೆ ಬಗ್ಗೆ ಸೂಚನೆ ಕೊಟ್ಟ ದೊಡ್ಡಮ್ಮ

    ಪ್ರಭಾಸ್ ಮದುವೆ ಬಗ್ಗೆ ಸೂಚನೆ ಕೊಟ್ಟ ದೊಡ್ಡಮ್ಮ

    ತೆಲುಗಿನ ಸ್ಟಾರ್ ನಟ ಪ್ರಭಾಸ್ (Prabhas) ಸದ್ಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಇದರ ಮಧ್ಯೆ ಮತ್ತೆ ಪ್ರಭಾಸ್ ಮದುವೆ ಮ್ಯಾಟರ್ ಚರ್ಚೆಗೆ ಗ್ರಾಸವಾಗಿದೆ. ಈಗ ಸಂದರ್ಶನವೊಂದರಲ್ಲಿ ದೊಡ್ಡಮ್ಮ ಶ್ಯಾಮಲಾ ದೇವಿ ಪ್ರಭಾಸ್ ಮದುವೆ ಸೂಚನೆ ಕೊಟ್ಟಿದ್ದಾರೆ. ಇದನ್ನೂ ಓದಿ:‘ಫೈರ್ ಫ್ಲೈ’ ತಂಡದಿಂದ ಹೊಸ ಸುದ್ದಿ- ಶಿವಣ್ಣನ ಪುತ್ರಿ ಜೊತೆ ಕೈಜೋಡಿಸಿದ ಅಚ್ಯುತ್ ಕುಮಾರ್

    ಕಲ್ಕಿ ಯಶಸ್ಸಿನ ಕುರಿತು ಮಾತನಾಡಿರುವ ಅವರು, ಒಳ್ಳೆಯತನ ಮನುಷ್ಯನನ್ನು ಎಲ್ಲಿಯವರೆಗೆ ಕರೆದುಕೊಂಡು ಹೋಗಲಿದೆ ಎಂಬುದು ಸಾಬೀತಾಗಿದೆ. ಬಾಹುಬಲಿ ಬಳಿಕ ಪ್ರಭಾಸ್ ದೊಡ್ಡ ಯಶಸ್ಸು ಕಾಣುವುದಿಲ್ಲ ಎಂದು ಅನೇಕರು ಹೇಳಿದ್ದರು. ಆದರೆ ಈಗ ಏನಾಯ್ತು ಎಂದು ಪ್ರಶ್ನಿಸಿದ್ದಾರೆ. ಅದೇ ರೀತಿ ಪ್ರಭಾಸ್ ಮದುವೆ ವಿಚಾರದಲ್ಲೂ ಹೀಗೆಯೇ ಆಗುತ್ತದೆ ಎಂದಿದ್ದಾರೆ ಶ್ಯಾಮಲಾ ದೇವಿ. ಈ ಮೂಲಕ ಪ್ರಭಾಸ್ ಮದುವೆ ಆಗಲ್ಲ ಎನ್ನುವವರ ಬಾಯಿ ಮುಚ್ಚಿಸಿದ್ದಾರೆ. ಈಗ ಪ್ರಭಾಸ್ ಮದುವೆ ಕುರಿತು ದೊಡ್ಡಮ್ಮ ಸೂಚನೆ ಕೊಟ್ಟಿದ್ದಾರೆ.

    ಅಂದಹಾಗೆ, ಚಿತ್ರರಂಗದಲ್ಲಿ ಗಾಸಿಪ್ ಕಾಮನ್. ಅನುಷ್ಕಾ ಶೆಟ್ಟಿ, ಕೃತಿ ಸನೋನ್ ಇನ್ನೂ ಅನೇಕರ ಜೊತೆ ಪ್ರಭಾಸ್ ಹೆಸರು ಸದ್ದು ಮಾಡಿತ್ತು. ಈ ನಟಿಯರಲ್ಲಿ ಯಾರನ್ನಾದರೂ ಪ್ರಭಾಸ್ ಮದುವೆ ಆಗುತ್ತಾರೆ ಎಂದೇ ಭಾವಿಸಿದ್ದರು. ಆದರೆ ಆಗಿದ್ದೇ ಬೇರೆ. ಸಿಂಗಲ್ ಆಗಿರುವ 44 ವರ್ಷದ ಪ್ರಭಾಸ್ ಬೇಗ ಮದುವೆ ಆಗಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ.

  • ‘ಕಲ್ಕಿ 2898 ಎಡಿ’ ಚಿತ್ರ ನೋಡಲು ಜಪಾನ್‌ನಿಂದ ಹೈದರಾಬಾದ್‌ಗೆ ಬಂದ ಪ್ರಭಾಸ್ ಫ್ಯಾನ್ಸ್

    ‘ಕಲ್ಕಿ 2898 ಎಡಿ’ ಚಿತ್ರ ನೋಡಲು ಜಪಾನ್‌ನಿಂದ ಹೈದರಾಬಾದ್‌ಗೆ ಬಂದ ಪ್ರಭಾಸ್ ಫ್ಯಾನ್ಸ್

    ವೈಜಯಂತಿ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಬಹುಕೋಟಿ ವೆಚ್ಚದ ‘ಕಲ್ಕಿ 2898 ಎಡಿ’ (Kali 2898 AD) ಸಿನಿಮಾ ಬಾಕ್ಸ್ಆಫೀಸ್‌ನಲ್ಲಿ ಗಳಿಕೆಯ ನಾಗಾಲೋಟ ಮುಂದುವರಿಸಿದೆ. ಸಾಹಸ ದೃಶ್ಯಗಳಿಗೆ ಪ್ರೇಕ್ಷಕ ವರ್ಗ ಮೂಕವಿಸ್ಮಿತನಾಗಿದ್ದ. ನಿರ್ದೇಶಕ ನಾಗ್ ಅಶ್ವಿನ್ ಅವರ ಕೈ ಚಳಕಕ್ಕೂ ಬಹುಪರಾಕ್ ಸಿಕ್ಕಿತ್ತು. ಅಭಿಮಾನಿಗಳಿಂದಲೂ ಪ್ರಭಾಸ್ ಹೊಸ ಅವತಾರಕ್ಕೆ ಮೆಚ್ಚುಗೆಯ ಮಹಾಪೂರವೇ ಸಿಕ್ಕಿತ್ತು. ಸಲಾರ್‌ಗೂ ಮುನ್ನ ಸರಣಿ ಸೋಲು ಅನುಭವಿಸಿದ್ದ ಪ್ರಭಾಸ್‌ಗೀಗ ‘ಕಲ್ಕಿ’ ಸಿನಿಮಾ ಮೂಲಕ ಮತ್ತೆ ಮರು ಜೀವ ಸಿಕ್ಕಿದೆ.

    ಪ್ಯಾನ್ ಇಂಡಿಯಾ ಸ್ಟಾರ್ ಎಂಬ ಹಣೆಪಟ್ಟಿಯನ್ನು ಮತ್ತಷ್ಟು ಗಟ್ಟಿಯಾಗಿಯೇ ಅಚ್ಚೊತ್ತಿಕೊಂಡಿದ್ದಾರೆ ಪ್ರಭಾಸ್. ಕಲ್ಕಿ ಸಿನಿಮಾ ಅಂಥದ್ದೊಂದು ದೊಡ್ಡ ಗೆಲುವನ್ನು ಪ್ರಭಾಸ್ (Prabhas) ಅವರಿಗೆ ನೀಡಿದೆ. ಫ್ಯಾಂಟಸಿ ಸಿನಿಮಾ ಮೂಲಕ, ಕಣ್ಣಿಗೆ ಅಚ್ಚರಿ ಎನಿಸುವ ದೃಶ್ಯಾವಳಿಗಳನ್ನೇ ನೋಡುಗರಿಗೆ ನೀಡಿ, ಮಾಸ್ ಆ್ಯಕ್ಷನ್ ಸೀನ್‌ಗಳಿಂದ ಸಮೃದ್ಧವಾದ ಚಿತ್ರವನ್ನೇ ಪ್ರೇಕ್ಷಕನ ತಟ್ಟೆಗೆ ಬಡಿಸಿದ್ದಾರೆ ಪ್ರಭಾಸ್. ತಮ್ಮ ಗಮನಾರ್ಹವಾದ ಪಾತ್ರದಿಂದಲೇ ಗಮನ ಸೆಳೆದ ಪ್ರಭಾಸ್, ಜಾಗತಿಕ ಅಭಿಮಾನಿಗಳಿಗೂ ಹಬ್ಬದೂಟ ಹಾಕಿಸಿದ್ದಾರೆ.

    ಪ್ರಭಾಸ್ ಅವರ ಕಟ್ಟಾ ಅಭಿಮಾನಿಗಳ ತಂಡವೊಂದು ಇತ್ತೀಚೆಗೆ ಅವರ ‘ಕಲ್ಕಿ 2898 ಎಡಿ’ ಸಿನಿಮಾ ವೀಕ್ಷಿಸಲು ಜಪಾನ್‌ನಿಂದ (Japan) ಹೈದರಾಬಾದ್‌ಗೆ ಆಗಮಿಸಿತ್ತು. ಈ ಅದ್ಭುತ ಗೆಸ್ಚರ್ ಸೂಪರ್‌ಸ್ಟಾರ್‌ನ ಜಾಗತಿಕ ಸ್ಟಾರ್‌ಡಮ್‌ಗೆ ಹಿಡಿದ ಸಾಕ್ಷಿ.‌ ಇದನ್ನೂ ಓದಿ:ದರ್ಶನ್ ಘಟನೆ ಕೇಳಿದ್ಮೇಲೆ ಶಾಕ್ ಆಯ್ತು: ‘ತಾರಕ್‌’ ನಟಿ ಶಾನ್ವಿ ಶ್ರೀವಾತ್ಸವ್

    ಚಿತ್ರದ ಅಧಿಕೃತ ಇನ್ಸ್ಟಾಗ್ರಾಂ ಹ್ಯಾಂಡಲ್, ಹೈದರಾಬಾದ್‌ನ ಪ್ರಸಾದ್ಸ್ ಮಲ್ಟಿಪ್ಲೆಕ್ಸ್‌ನಲ್ಲಿ ಐಕಾನಿಕ್ ರೆಬೆಲ್ ಟ್ರಕ್ ಪಕ್ಕದಲ್ಲಿ ನಿಂತಿರುವ ಮೂವರು ಜಪಾನಿ ಅಭಿಮಾನಿಗಳ ಫೋಟೋಗಳನ್ನು ಹಂಚಿಕೊಂಡಿದೆ. ಪ್ರಭಾಸ್ ಪಾತ್ರದ ಭೈರವ ಮತ್ತು ಬುಜ್ಜಿ ವಾಹನದ ಫೋಟೋ ಇರುವ ವಿಶೇಷ ಬಾವುಟ ಹಿಡಿದು ‘ಕಲ್ಕಿ 2898 ಎಡಿ’ ಚಿತ್ರ ಬಿಡುಗಡೆಗೆ ಅಭಿನಂದನೆಗಳು ಎಂದು ಜಪಾನಿನ ಫ್ಯಾನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಶಿವರಾಜ್‌ಕುಮಾರ್, ಹೇಮಂತ್ ರಾವ್ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್

    ‘ಸಲಾರ್’ ನಂತರ ಬಿಡುಗಡೆಯಾದ ಕಲ್ಕಿ ಸಿನಿಮಾ ಮೂಲಕ ಪ್ರಭಾಸ್ ಚಿತ್ರೋದ್ಯಮದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ತಲುಪಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಓಪನಿಂಗ್ ಪ್ರಭಾಸ್ ಸಿನಿಮಾಗಳಿಗೆ ಸಿಗುತ್ತಿವೆ. ಇದೀಗ ‘ಕಲ್ಕಿ 2898 ಎಡಿ’ ಸಿನಿಮಾ ಸಹ ಇದಕ್ಕೆ ಹೊರತಾಗಿಲ್ಲ, ಇದು ಭಾರತೀಯ ಚಿತ್ರರಂಗದಲ್ಲಿ ಅವರ ಮೂರನೇ ಅತಿದೊಡ್ಡ ಕಲೆಕ್ಷನ್ ಮಾಡಿದ ಸಿನಿಮಾವಾಗಿದೆ.

    ‘ಬಾಹುಬಲಿ’ಯಿಂದ ‘ಸಲಾರ್’, ‘ಕಲ್ಕಿ 2898 ಎಡಿ’ ವರೆಗೆ ಪ್ರಭಾಸ್ ತಮ್ಮ ಸ್ಟಾರ್ ಪವರ್‌ಗೆ ಸಾಟಿಯಿಲ್ಲ ಎಂಬುದನ್ನು ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಸಮಕಾಲೀನ ಸಿನಿಮಾರಂಗದಲ್ಲಿ ಅತ್ಯಂತ ಅಪ್ರತಿಮ ಮತ್ತು ಪ್ರಭಾವಶಾಲಿ ನಟರಲ್ಲಿ ಒಬ್ಬರಾಗಿ ಹೊರಹೊಮ್ಮುತ್ತಿದ್ದಾರೆ ಪ್ರಭಾಸ್. ನಾಗ್ ಅಶ್ವಿನ್ ನಿರ್ದೇಶಿಸಿದ ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರಂತಹ ಲೆಜಂಡರಿ ಕಲಾವಿದರಿದ್ದಾರೆ. ದೀಪಿಕಾ ಪಡುಕೋಣೆ (Deepika Padukone) ಮತ್ತು ದಿಶಾ ಪಟಾನಿ ಸೇರಿ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ.

  • Kalki 2898 AD: ರಿಲೀಸ್ ಆದ 4 ದಿನದಲ್ಲಿ 500 ಕೋಟಿ ಕಲೆಕ್ಷನ್ ಮಾಡಿದ ಪ್ರಭಾಸ್ ಸಿನಿಮಾ

    Kalki 2898 AD: ರಿಲೀಸ್ ಆದ 4 ದಿನದಲ್ಲಿ 500 ಕೋಟಿ ಕಲೆಕ್ಷನ್ ಮಾಡಿದ ಪ್ರಭಾಸ್ ಸಿನಿಮಾ

    ಡಾರ್ಲಿಂಗ್ ಪ್ರಭಾಸ್ (Prabhas), ದೀಪಿಕಾ ಪಡುಕೋಣೆ ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಜೂನ್ 27ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಿತ್ತು. ಬಿಡುಗಡೆಯಾದ 4 ದಿನಕ್ಕೆ 500 ಕೋಟಿ ರೂ. ಕಲೆಕ್ಷನ್ ಮಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಇದನ್ನೂ ಓದಿ:ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ: ಗಣೇಶ್

    ಈ ಸಿನಿಮಾದ ಕತೆ ನಡೆಯುವುದು ಕಲಿಯುಗದ ಅಂತ್ಯದಲ್ಲಿ ಎಂದು ನಿರ್ದೇಶಕ ತೋರಿಸಿ ಕೊಟ್ಟಿದ್ದಾರೆ. 6000 ಸಾವಿರ ವರ್ಷಗಳ ನಡುವೆ ನಡೆವ ಕತೆಯಿದು. 3 ಗಂಟೆಯಲ್ಲಿ ಹೇಳಲು ಸಾಧ್ಯವಿಲ್ಲ. ಎರಡನೇ ಭಾಗದಲ್ಲಿ ಕಲ್ಕಿ ಚಿತ್ರ ಹಲವು ಟ್ವಿಸ್ಟ್‌ಗಳೊಂದಿಗೆ ಬರಲಿದೆ. ಮೊದಲ ಭಾಗದಲ್ಲೇ ಸಾಕಷ್ಟು ಕೌತುಕ ಮೂಡಿಸಿದ ಕಾರಣ ಚಿತ್ರ ಈಗ ಗೆದ್ದು ಬೀಗಿದೆ. 500 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

    ಅಂದಹಾಗೆ, ಸಿನಿಮಾ ರಿಲೀಸ್‌ಗೂ ಮುನ್ನ 2 ಭಾಗಗಳಲ್ಲಿ ಬರಲಿದೆ ಎಂದು ಚಿತ್ರತಂಡ ಘೋಷಿಸಿರಲಿಲ್ಲ. ಈಗ ಸಿನಿಮಾ ನೋಡಿದವರಿಗೆ ಇದು ಖಾತ್ರಿಯಾಗಿದೆ. ಚಿತ್ರದ ಬಗ್ಗೆ ಇನ್ನೂ ಕಥೆ ಹೊರಬರೋದು ಬಾಕಿಯಿದೆ. ಇದು ಆರಂಭವಷ್ಟೇ, ಕಲ್ಕಿ ಭಾಗ 2ರಲ್ಲಿ ಮತ್ತಷ್ಟು ಮಾಹಿತಿ ಸಿಗಲಿದೆ.

    ವೈಜಯಂತಿ ಮೂವೀಸ್ ನಿರ್ಮಾಣದ ಈ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ (Deepika Padukone) ಜೊತೆ ಬಿಗ್ ಬಿ, ಕಮಲ್ ಹಾಸನ್, ದಿಶಾ ಪಟಾನಿ ಸೇರಿದಂತೆ ಹಲವರು ನಟಿಸಿದ್ದಾರೆ. ಮೃಣಾಲ್ ಠಾಕೂರ್, ವಿಜಯ್ ದೇವರಕೊಂಡ, ರಾಜಮೌಳಿ, ರಾಮ್ ಗೋಪಾಲ್ ವರ್ಮಾ,ದುಲ್ಕರ್ ಸಲ್ಮಾನ್ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದಾರೆ.

  • Kalki 2898 AD: 7 ನಿಮಿಷ ನಟಿಸಿದಕ್ಕೆ 20 ಕೋಟಿ ಸಂಭಾವನೆ ಪಡೆದ ಕಮಲ್ ಹಾಸನ್

    Kalki 2898 AD: 7 ನಿಮಿಷ ನಟಿಸಿದಕ್ಕೆ 20 ಕೋಟಿ ಸಂಭಾವನೆ ಪಡೆದ ಕಮಲ್ ಹಾಸನ್

    ಪ್ಯಾನ್ ಇಂಡಿಯಾ ಸಿನಿಮಾ ‘ಕಲ್ಕಿ 2898 ಎಡಿ’ (Kalki 2898 AD)  ಜೂನ್ 27ರಂದು ಬಿಡುಗಡೆಯಾಗಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ಬಗ್ಗೆ ಪ್ರೇಕ್ಷಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಇದೀಗ ಕಲ್ಕಿ ಚಿತ್ರದಲ್ಲಿ ವಿಲನ್ ಆಗಿ ನಟಿಸಿರುವ ಕಮಲ್ ಹಾಸನ್ (Kamal Haasan) 7 ನಿಮಿಷ ನಟಿಸಿದಕ್ಕೆ 20 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ.

    ಪ್ರಭಾಸ್, ದೀಪಿಕಾ ಪಡುಕೋಣೆ (Deepika Padukone), ಬಿಗ್ ಬಿ ನಟನೆಯ ಕಲ್ಕಿ ಚಿತ್ರ ಸಕ್ಸಸ್‌ಫುಲ್ ಪ್ರದರ್ಶನ ಕಾಣ್ತಿದೆ. ರಿಲೀಸ್ ಬಳಿಕ ಕಮಲ್ ಹಾಸನ್ (Kamal Haasan) ನಟಿಸಿದ ಯಾಸ್ಕಿನ್ ಪಾತ್ರದ ಬಗ್ಗೆ ಟಾಕ್ ಆಗುತ್ತಿದೆ. ಈ ಪಾತ್ರಕ್ಕೆ ಅವರು ಸೆಲೆಕ್ಟ್ ಆಗಿದ್ದು ಹೇಗೆ? ಸಂಭಾವನೆ ವಿಚಾರದ ಬಗ್ಗೆ ಫ್ಯಾನ್ಸ್‌ಗೆ ಈಗ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ:ದರ್ಶನ್‌ ಪ್ರಕರಣ: ಹಣೆಬರಹದಲ್ಲಿ ಏನಿದೆಯೋ ಅದೇ ಆಗುತ್ತೆ- ಶಿವಣ್ಣ ಫಸ್ಟ್‌ ರಿಯಾಕ್ಷನ್

    ಸಿನಿಮಾ ಆರಂಭದಲ್ಲಿ ಹಣ್ಣು ಹಣ್ಣು ಮುದುಕನ ಪಾತ್ರದಲ್ಲಿ ಕಮಲ್ ಎಂಟ್ರಿ ಕೊಡ್ತಾರೆ. ಆದರೆ ಚಿತ್ರದ ಅಂತ್ಯದಲ್ಲಿ ಅವರ ನಿಜವಾದ ಲುಕ್ ರಿವೀಲ್ ಆಗುತ್ತದೆ. ಅದನ್ನು ನೋಡಿಯೇ ಫ್ಯಾನ್ಸ್ ದಂಗಾಗಿದ್ದಾರೆ. ಡೈರೆಕ್ಟರ್ ನಾಗ್ ಅಶ್ವಿನ್ ಕತೆ ಮಾಡಿದಾಗಲೇ ಯಾಸ್ಕಿನ್ ಪಾತ್ರವಿತ್ತಂತೆ ಆದರೆ ಯಾರು ಈ ಪಾತ್ರ ಸೂಕ್ತ ಎಂದು ಫೈನಲ್ ಆಗಿರಲಿಲ್ಲವಂತೆ.

    ಬಳಿಕ ಚಿತ್ರೀಕರಣ ಪ್ರಾರಂಭಿಸಿದ ವೇಳೆ, ಕೊಂಚ ಅಳುಕಿನಿಂದಲೇ ಕಮಲ್ ಹಾಸನ್‌ರನ್ನು ಯಾಸ್ಕಿನ್ ಪಾತ್ರಕ್ಕೆ ಕೇಳಿದ್ರಂತೆ ನಾಗ್ ಅಶ್ವಿನ್. ಆದರೆ ಕಮಲ್ ಖುಷಿಯಿಂದಲೇ ಈ ಪಾತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರು. ಆದರೆ ಮೂರೇ ದೃಶ್ಯ, 7 ನಿಮಿಷ 4 ಸೆಕೆಂಡ್ ನಟಿಸಿದ ಕಮಲ್‌ ಹಾಸನ್‌ಗೆ ನಿರ್ಮಾಪಕ ಅಶ್ವಿನ್ ದತ್ 20 ಕೋಟಿ ರೂ. ಸಂಭಾವನೆ ನೀಡಿರೋದು ಈಗ ಹಾಟ್ ಟಾಪಿಕ್ ಆಗಿದೆ.

    ಅಂದಹಾಗೆ, ‘ಕಲ್ಕಿ 2898 ಎಡಿ’ ಪಾರ್ಟ್ 2ನಲ್ಲಿ ಕಮಲ್ ಹಾಸನ್ ಪಾತ್ರವೇ ಹೈಲೆಟ್. ವಿಲನ್ ಆಗಿರುವ ಕಮಲ್ ಪಾತ್ರದ ಮೇಲೆ ಕಥೆ ಸುತ್ತಲಿದೆಯಂತೆ. ಭಾಗ 2ರಲ್ಲಿ ಯಾರು ಊಹಿಸಿರದ ಸಾಕಷ್ಟು ಟ್ವಿಸ್ಟ್‌ಗಳು ಎದುರಾಗಲಿದೆ. ಕಲ್ಕಿ ಸಿನಿಮಾದ ಸಕ್ಸಸ್‌ ನಂತರ ಪಾರ್ಟ್‌ 2 ಬರಲಿದೆ ಎಂದು ಕೇಳಿ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.