Tag: ಕಲುಬುರಗಿ

  • PSI ನೇಮಕಾತಿ ಅಕ್ರಮ – ಕಲಬುರಗಿಯ ಫಿಂಗರ್ ಪ್ರಿಂಟ್ಸ್ DYSP ಆರ್.ಆರ್.ಹೊಸಮನಿ ಸಸ್ಪೆಂಡ್

    PSI ನೇಮಕಾತಿ ಅಕ್ರಮ – ಕಲಬುರಗಿಯ ಫಿಂಗರ್ ಪ್ರಿಂಟ್ಸ್ DYSP ಆರ್.ಆರ್.ಹೊಸಮನಿ ಸಸ್ಪೆಂಡ್

    ಕಲಬುರಗಿ: ಇತ್ತೀಚೆಗೆ PSI ನೇಮಕಾತಿ ಅಕ್ರಮ ಸುದ್ದಿ ಎಲ್ಲಾ ಕಡೆ ಭಾರೀ ಸದ್ದು ಮಾಡುತ್ತಿದೆ. ನೇಮಕಾತಿಯಲ್ಲಿ ಅಕ್ರಮ ಮಾಡಿದವರನ್ನು ಬಿಡಬಾರದು ಎಂದು ಪ್ರತಿಪಕ್ಷಗಳು ಆಗ್ರಹ ಮಾಡುತ್ತಿವೆ. ಈಗ ಡಿವೈಎಸ್‍ಪಿ ಆರ್.ಆರ್.ಹೊಸಮನಿ ಅಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ಅವರನ್ನು ಅಮಾನತು ಮಾಡಲಾಗಿದೆ.

    ಕಲಬುರಗಿಯ ಫಿಂಗರ್ ಪ್ರಿಂಟ್ಸ್ ಡಿವೈಎಸ್‍ಪಿ ಆರ್.ಆರ್.ಹೊಸಮನಿ ಹಾಗೂ ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದಿಲೀಪ್ ಸಾಗರ್ ಅವರು ಕರ್ತವ್ಯದಲ್ಲಿ ಲೋಪವೆಸಗಿದ ಹಿನ್ನೆಲೆ ಸಸ್ಪೆಂಡ್ ಮಾಡಬೇಕು ಎಂದು ಡಿಜಿ ಆದೇಶ ಹೊರಡಿಸಿದೆ. ಇದನ್ನೂ ಓದಿ:  ಬೆಂಜ್ ಕಾರಲ್ಲಿ ಬಂದು ಲಕ್ಷ, ಲಕ್ಷ ರೂ. ಮರಳು ಹಫ್ತಾ ವಸೂಲಿ – ಹೈಟೆಕ್ ದರೋಡೆಕೋರ ಅರೆಸ್ಟ್

    ಡಿಜಿ ಆದೇಶದ ನಂತರ ಕಲಬುರಗಿ ಜ್ಞಾನಜ್ಯೋತಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಹೊಸಮನಿ ಹಾಗೂ ದಿಲೀಪ್ ಸಾಗರ್ ಅವರನ್ನು 2 ಗಂಟೆಗಳ ಕಾಲ ವಿಚಾರಣೆ ಮಾಡಲಾಗಿದೆ. ಸಿಐಡಿ ಎಸ್.ಪಿ.ರಾಘವೇಂದ್ರ ಅವರ ನೇತೃತ್ವದಲ್ಲಿ ವಿಚಾರಣೆ ನಡೆದಿದ್ದು, ಅವರನ್ನು ಅಮಾನತು ಮಾಡಲಾಗಿದೆ.

    ಪಿಎಸ್‍ಐ ನೇಮಕಾತಿ ಹಿನ್ನೆಲೆ ಅಕ್ರಮ ಪ್ರಕರಣ ಕುರಿತು ವಿಚಾರಣೆ ನಡೆಯುತ್ತಿದ್ದು, ಏಳು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಬೆಂಗಳೂರಿನ ಇಬ್ಬರು ಪೇದೆಗಳನ್ನು ಸಹ ಅಮಾನತು ಮಾಡಿ ಆದೇಶ ಮಾಡಲಾಗಿದೆ.

    ಅಮಾನತು ಆದ 6 ಕಾನ್ಸ್ ಸ್ಟೇಬಲ್, 1 ಸಬ್ ಇನ್ಸ್‌ಪೆಕ್ಟರ್ ಬಂಧನ
    ಯಶವಂತಗೌಡ – ಇನ್ಸ್‌ಪೆಕ್ಟರ್ (ಬೆಂಗಳೂರು)
    ಮಮ್ತೇಶ್ – ಕಾನ್ಸ್ ಸ್ಟೇಬಲ್ (ಬೆಂಗಳೂರು)
    ಯಶ್ವಂತ್ ದೀಪು – ಕಾನ್ಸ್ ಸ್ಟೇಬಲ್ (ಬೆಂಗಳೂರು)
    ಗಜೇಂದ್ರ – ಕಾನ್ಸ್ ಸ್ಟೇಬಲ್ (ಬೆಂಗಳೂರು )
    ರುದ್ರೇಗೌಡ – ಸಿಎಆರ್ ಪೊಲೀಸ್ (ಕಲುಬುರಗಿ)
    ಐಯಾಳಿ ದೇಸಾಯಿ – ಗನ್ ಮ್ಯಾನ್ (ಕಲುಬುರಗಿ)
    ಚೇತನ್ – ಜೈಲರ್ (ಕಲುಬುರಗಿ)

    ದೋಷಾರೋಪ ಪಟ್ಟಿಯ ಬಳಿಕ ಆರೋಪ ಸಾಬೀತಾದ್ರೆ ಕೆಲಸದಿಂದ ವಜಾ ಮಾಡಿ ಆದೇಶ ಹೊರಡಿಸಲಿದ್ದಾರೆ. ಇದನ್ನೂ ಓದಿ:  ಪ್ರಶ್ನೆಪತ್ರಿಕೆ ಲೀಕ್ ಪ್ರಕರಣ- ಪ್ರೊ. ನಾಗರಾಜು ಸಸ್ಪೆಂಡ್ ಮಾಡಿ ಮೈಸೂರು ವಿವಿ ಆದೇಶ

  • ಕಾಂಗ್ರೆಸ್ ಜೆಡಿಎಸ್‍ಗೆ, ಜೆಡಿಎಸ್ ಕಾಂಗ್ರೆಸ್‍ಗೆ ಸರೆಂಡರ್: ಹೆಚ್‍ಡಿಡಿಗೆ ಈಶ್ವರಪ್ಪ ಟಾಂಗ್

    ಕಾಂಗ್ರೆಸ್ ಜೆಡಿಎಸ್‍ಗೆ, ಜೆಡಿಎಸ್ ಕಾಂಗ್ರೆಸ್‍ಗೆ ಸರೆಂಡರ್: ಹೆಚ್‍ಡಿಡಿಗೆ ಈಶ್ವರಪ್ಪ ಟಾಂಗ್

    ಕಲುಬುರಗಿ: ಕಾಂಗ್ರೆಸ್ ಜೆಡಿಎಸ್‍ಗೆ ಸರೆಂಡರ್ ಆಗಿದೆ, ಹಾಗೇ ಜೆಡಿಎಸ್ ಕಾಂಗ್ರೆಸ್‍ಗೆ ಸರೆಂಡರ್ ಆಗಿದೆ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ, ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಹುಲ್ ಗಾಂಧಿ ನಾಯಕತ್ವಕ್ಕೆ ಅಭ್ಯಂತರವಿಲ್ಲ ಎಂದು ಹೇಳಿಕೆ ನೀಡಿದ್ದ ದೇವೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು. ದೇವೇಗೌಡರ ಹೇಳಿಕೆಯಲ್ಲಿ ಏನೂ ಹೊಸತಿಲ್ಲ. ಕಾಂಗ್ರೆಸ್-ಜೆಡಿಎಸ್ ಒಂದಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎದುರು ಸ್ಪರ್ಧಿಸಲಿವೆ. ಇದಕ್ಕೆ ನಾವು ಸಿದ್ಧವಾಗಿದ್ದೇವೆ. ರಾಜ್ಯದಲ್ಲಿ 25 ಮತಕ್ಷೇತ್ರದಿಂದ ಬಿಜೆಪಿ ಗೆಲುವು ಸಾಧಿಸುತ್ತದೆ ವಿಶ್ವಾಸ ವ್ಯಕ್ತಪಡಿಸಿದರು.

    ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಹುಲ್ ಗಾಂಧಿ ಅವರಿಗೆ ಪುಣ್ಯಾತ್ಮ ಎಂದಿದ್ದರು. ಈಗ ಪುಣ್ಯಾತ್ಮನ ಋಣ ತಿರಿಸಲು ಮುಂದಾಗಿದ್ದಾರೆ. ರಾಹುಲ್ ಗಾಂಧಿ ಪುಣ್ಯಾತ್ಮ ಹೌದೋ, ಪಾಪಾತ್ಮ ಹೌದೋ ಎನ್ನುವುದನ್ನು ರಾಜ್ಯದ ಜನ ತೀರ್ಮಾನ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

  • ಒಪ್ಪಿಗೆ ಇಲ್ದೇ ಮದ್ವೆ- ಸುಪ್ರೀಂ ಮೆಟ್ಟಿಲೇರಿದ ರಾಜ್ಯದ ಪ್ರಭಾವಿ ರಾಜಕಾರಣಿಯ ಮಗಳು

    ಒಪ್ಪಿಗೆ ಇಲ್ದೇ ಮದ್ವೆ- ಸುಪ್ರೀಂ ಮೆಟ್ಟಿಲೇರಿದ ರಾಜ್ಯದ ಪ್ರಭಾವಿ ರಾಜಕಾರಣಿಯ ಮಗಳು

    ನವದೆಹಲಿ: ಇವತ್ತು ಸುಪ್ರಿಂ ಕೋರ್ಟ್ ನಲ್ಲಿ ವಿಶೇಷವಾದ ಅರ್ಜಿ ಸಲ್ಲಿಕೆಯಾಗಿದೆ. ಒಪ್ಪಿಗೆ ಇಲ್ಲದೇ ಒತ್ತಾಯ ಪೂರ್ವಕವಾಗಿ ಮದುವೆ ಮಾಡಿಸಿದ್ದನ್ನು ಪ್ರಶ್ನಿಸಿ ರಾಜ್ಯದ ರಾಜಕಾರಣಿಯೊಬ್ಬರ ಮಗಳು ಸುಪ್ರಿಂ ಮೆಟ್ಟಿಲೇರಿದ್ದಾರೆ.

    ರಾಜಕಾರಣಿಯ ಹೆಸರು ಮತ್ತು ಮಗಳ ಹೆಸರನ್ನು ಅರ್ಜಿದಾರರು ಗೌಪ್ಯವಾಗಿಟ್ಟಿದ್ದಾರೆ. ಆದರೆ ಈ ಅರ್ಜಿ ಸಲ್ಲಿಕೆಯಾಗಿರುವುದು ಕಲಬುರಗಿಯಿಂದ ಎಂಬುದು ತಿಳಿದು ಬಂದಿದೆ. ಒತ್ತಾಯ ಪೂರ್ವಕ ಮದುವೆಗಳಿಗೆ ಕಾನೂತ್ಮಕ ರಕ್ಷಣೆ ಬೇಕು ಅಂತಾ ರಾಜಕಾರಣಿ ಮಗಳು ಸುಪ್ರಿಂಕೋರ್ಟ್ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆಗೆ ಪುರಸ್ಕೃತವಾಗಿದೆ.

    ಇಂದು ವಿಚಾರಣೆ ನಡೆಸಿದ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ಮೇ ಐದಕ್ಕೆ ವಿಚಾರಣೆ ನಿಗದಿಪಡಿಸಿದೆ. ಸಂತ್ರಸ್ಥ ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ವಾದ ಆಲಿಸಿದ ಪೀಠ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯುವತಿಗೆ ರಕ್ಷಣೆ ನೀಡುವಂತೆ ಸೂಚಿಸಿದೆ. ಅಷ್ಟೇ ಅಲ್ಲದೇ ಈಗ ನಡೆದಿರುವ ಮದುವೆ ರದ್ದಾಗಬೇಕು ಎಂದರೆ ಕಲುಬುರಗಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಬಹುದು ಎಂದು ಸಲಹೆ ನೀಡಿದೆ.