Tag: ಕಲಾ ನಿರ್ದೇಶಕ

  • ಕಲಾ ನಿರ್ದೇಶಕ ದೇಸಾಯಿ ಆತ್ಮಹತ್ಯೆ: ಸಾಯುವ ಮುನ್ನ ಆಡಿಯೋ?

    ಕಲಾ ನಿರ್ದೇಶಕ ದೇಸಾಯಿ ಆತ್ಮಹತ್ಯೆ: ಸಾಯುವ ಮುನ್ನ ಆಡಿಯೋ?

    ಬಾಲಿವುಡ್ (Bollywood) ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ (Nitin Desai) ಆತ್ಮಹತ್ಯೆಗೂ (Suicide) ಮುನ್ನ ಹಲವರಿಗೆ ಆಡಿಯೋ ವಾಯ್ಸ್ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಆಡಿಯೋವನ್ನು ತಮಗೆ ಕಿರುಕುಳ ಕೊಟ್ಟವರಿಗೆ ಕಳುಹಿಸಿದ್ದಾರೆ ಎಂದು ಸುದ್ದಿಯಾಗಿದೆ. ಒಟ್ಟು ಹನ್ನೊಂದು ಆಡಿಯೋ ತುಣುಕುಗಳು ಇವೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಪೊಲೀಸರು ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲವೆಂದು ಮಾಧ್ಯಮಗಳು ವರದಿ ಮಾಡಿವೆ.

    ನಿತಿನ್ ದೇಸಾಯಿ ಮೊನ್ನೆಯಷ್ಟೇ ನೇಣಿಗೆ ಶರಣಾಗಿದ್ದರು. ಕಲಾನಿರ್ದೇಶನಕ್ಕಾಗಿ (Art Director) ಬರೋಬ್ಬರಿ ನಾಲ್ಕು ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದ ಹಾಗೂ ಸೂಪರ್ ಹಿಟ್ ಸಿನಿಮಾಗಳಿಗೆ ಕೆಲಸ ಮಾಡಿದ್ದ ಮತ್ತೂ ಸ್ವಂತ ಸ್ಟುಡಿಯೋ ಹೊಂದಿದ್ದ ದೇಸಾಯಿ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜಕ್ಕೂ ಆತಂಕಕ್ಕೆ ದೂಡಿತ್ತು. ಇದೀಗ ಅದರ ಹಿಂದಿನ ಕಾರಣವೂ ಬಹಿರಂಗವಾಗಿದೆ. ಇದನ್ನೂ ಓದಿ:‘ರಾ’ ಏಜೆಂಟ್ ಆಗಿ ಬಾಲಿವುಡ್ ಪ್ರವೇಶ ಮಾಡಲಿದ್ದಾರೆ ‘ಪಾಕ್ ಪ್ರೇಮಿ’ ಸೀಮಾ

    ನಿತಿನ್ ದೇಸಾಯಿ ತಮ್ಮದೇ ಆದ ‘ಎನ್.ಡಿ ಸ್ಟುಡಿಯೋ’ ಹೊಂದಿದ್ದರು. ಈ ಸ್ಟುಡಿಯೋಗಾಗಿ ಅವರು ಸಾಲವನ್ನು ಪಡೆದಿದ್ದರು. ಕಾಲಮಿತಿಯೊಳಗೆ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸ್ಟುಡಿಯೋಗಾಗಿ ಇವರು 252 ಕೋಟಿ ರೂಪಾಯಿ ಸಾಲ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಸಾಲ ತೀರಿಸಲು ಆಗದ್ದಕ್ಕೆ ನ್ಯಾಯಾಲಯ ಕಳೆದ ವಾರವಷ್ಟೇ ಅವರಿಗೆ ನೋಟಿಸ್ ನೀಡಿತ್ತು.  ಇದರಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ

     

    ಬಾಲಿವುಡ್ (Bollywood)ನಲ್ಲಿ ಕಲಾ ನಿರ್ದೇಶಕರಾಗಿ, ನಿರ್ದೇಶಕರಾಗಿ, ಪ್ರೊಡಕ್ಷನ್ ಡಿಸೈನರ್ ಆಗಿ ಹೀಗೆ ವಿವಿಧ ವಿಭಾಗಗಳಲ್ಲಿ ದೇಸಾಯಿ ಕೆಲಸ ಮಾಡಿದ್ದರು. ಅಲ್ಲದೇ, ಹಿಂದಿ ಮತ್ತು ಮರಾಠಿ ಕಿರುತೆರೆಯಲ್ಲೂ ಸಾಕಷ್ಟು ಕೆಲಸ ಮಾಡಿದ್ದರು. ಸಂಜಯ್ ಲೀಲಾ ಬನ್ಸಾಲಿ ಸೇರಿದಂತೆ ಖ್ಯಾತ ನಿರ್ದೇಶಕರ ಸಿನಿಮಾಗಳಿಗೆ ಸೆಟ್ ಹಾಕಿದ್ದ ಹೆಗ್ಗಳಿಕೆ ಇವರದ್ದು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಯಾಂಡಲ್‍ವುಡ್ ಕಲಾ ನಿರ್ದೇಶಕ ಲೋಕೇಶ್ ಆತ್ಮಹತ್ಯೆಗೆ ಶರಣು

    ಸ್ಯಾಂಡಲ್‍ವುಡ್ ಕಲಾ ನಿರ್ದೇಶಕ ಲೋಕೇಶ್ ಆತ್ಮಹತ್ಯೆಗೆ ಶರಣು

    ಬೆಂಗಳೂರು: ಕೊರೊನಾದಿಂದಾಗಿ ಎಲ್ಲ ವಲಯಗಳಿಗೂ ಎಫೆಕ್ಟ್ ಆಗಿದ್ದು, ಸಿನಿಮಾ ರಂಗ ಸ್ಥಗಿತಗೊಂಡು ನೂರಾರು ಕಲಾವಿದರು ಸಂಕಷ್ಟ ಎದುರಿಸುತ್ತಿದ್ದಾರೆ. ಇದೀಗ ಬೆಲ್ ಬಾಟಮ್, ಅವನೇ ಶ್ರೀಮನ್ನಾರಾಯಣ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಲಾ ನಿರ್ದೇಶಕನಾಗಿ ಕೆಲಸ ಮಾಡಿರುವ ಲೋಕೇಶ್ ಆರ್ಥಿಕ ಸಂಕಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕೊರೊನಾ ಲಾಕ್‍ಡೌನ್ ಆದಾಗಿನಿಂದ ಕೆಲಸವಿಲ್ಲದೆ ಲೋಕೇಶ್ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರು ಎಂದು ತಿಳಿದು ಬಂದಿದೆ. ಮೂಲತಃ ನಾಗಮಂಗಲದವರಾಗಿದ್ದ ಲೋಕೇಶ್ ಕೆಲಸದ ನಿಮಿತ್ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದರು. ಕೆಲ ವರ್ಷಗಳ ಹಿಂದೆ ಪೋಷಕರನ್ನು ಕಳೆದುಕೊಂಡಿದ್ದ ಲೋಕೇಶ್ ಸೋದರನ ಜೊತೆಯಲ್ಲಿ ವಾಸವಾಗಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಬೆಲ್ ಬಾಟಮ್ ಟು ಹಾಗೂ ಬನಾರಸ್ ಸಿನಿಮಾಗೆ ಕೆಲಸ ಮಾಡಬೇಕಿತ್ತು. ಆದ್ರೆ ಲಾಕ್‍ಡೌನ್ ಆಗಿದ್ದರಿಂದ ಸಿನಿಮಾದ ಕೆಲಸ ಸಹ ಸ್ಥಗಿತಗೊಂಡಿತ್ತು. ಲಾಕ್‍ಡೌನ್ ವೇಳೆ ಒಂಟಿಯಾಗಿದ್ದ ಲೋಕೇಶ್ ಖಿನ್ನತೆಗೆ ಒಳಗಾಗಿದ್ದರು. ಕಷ್ಟ ಅಂತ ಕೇಳಿದ್ದರೆ ಸಹಾಯ ಮಾಡ್ತಿದ್ದ, ಸ್ವಾಭಿಮಾನಿ ಲೋಕೇಶ್ ಯಾರ ಬಳಿ ಕೈಚಾಚುವವರಲ್ಲ. ಕೊರೊನಾ ಕಾಟ, ಒಂಟಿತನ, ಆರ್ಥಿಕ ಸಂಕಷ್ಟ, ಇದೆಲ್ಲವೂ ಸೇರಿ ಲೋಕೇಶ್ ಅವರನ್ನ ಬಲಿ ಪಡೆದಿವೆ ಎಂದು ನಿರ್ಮಾಪಕ ಸಂತೋಷ್ ಸಂತಾಪ ಸೂಚಿಸಿದ್ದಾರೆ.

    ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಶವ ಪರೀಕ್ಷೆ ಬಳಿಕ ಲೋಕೇಶ್ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ನಿರ್ದೇಶಕ ಜಯತೀರ್ಥ ಸೇರಿದಂತೆ ಹಲವು ಆಪ್ತರು ರಾಮಯ್ಯ ಆಸ್ಪತ್ರೆಗೆ ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ನಾಳೆ ನಾಗಮಂಗಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

  • ಕೆಜಿಎಫ್ ‘ನರಾಚಿ’ ಸೆಟ್ ನಿರ್ಮಾಣ ಕಥೆ ಬಿಚ್ಚಿಟ್ಟ ಕಲಾ ನಿರ್ದೇಶಕ

    ಕೆಜಿಎಫ್ ‘ನರಾಚಿ’ ಸೆಟ್ ನಿರ್ಮಾಣ ಕಥೆ ಬಿಚ್ಚಿಟ್ಟ ಕಲಾ ನಿರ್ದೇಶಕ

    – ನಿರ್ಮಾಣಕ್ಕಾಗಿ ಮೂರು ತಿಂಗಳ ಕಾಲ 350 ಮಂದಿ ಕೆಲಸ
    – ಸೆಟ್ ನಿರ್ಮಾಣದ ವೇಳೆ ಮಳೆ ಬಂದಿತ್ತು
    – ಎದುರಾದ ಕಷ್ಟವನ್ನು ನೆನಪಿಸಿಕೊಂಡ ಶಿವಕುಮಾರ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬಹುನಿರೀಕ್ಷತ ‘ಕೆಜಿಎಫ್-2’ ಚಿತ್ರ ಅಕ್ಟೋಬರ್ 23ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಈ ಚಿತ್ರದ ಸೆಟ್ ನಿರ್ಮಾಣಕ್ಕೆ ಎಷ್ಟು ಸಂಕಷ್ಟ ಎದುರಾಯಿತು ಎಂಬುದನ್ನು ಕಲಾ ನಿರ್ದೇಶಕ ಶಿವಕುಮಾರ್ ವಿವರಿಸಿದ್ದಾರೆ.

    ಪ್ರತಿಕೆಯೊಂದಕ್ಕೆ ಸಂದರ್ಶನ ನೀಡಿದ ಶಿವಕುಮಾರ್, ಕೆಜಿಎಫ್ ಚಾಪ್ಟರ್-1 ಚಿತ್ರಕ್ಕೆ ಸೆಟ್ ನಿರ್ಮಿಸುವುದು ದೊಡ್ಡ ಸವಾಲಾಗಿತ್ತು. ಏಕೆಂದರೆ ನಾವು ನಿರ್ಮಿಸಿದ ಸೆಟ್ ನಮ್ಮ ಕಣ್ಣ ಮುಂದೆಯೇ ಮಳೆಯಿಂದ ಸಂಪೂರ್ಣವಾಗಿ ಕೊಚ್ಚಿ ಹೋಗಿತ್ತು. ಬಳಿಕ ಕೆಜಿಎಫ್-2ಗೆ ಸೆಟ್ ನಿರ್ಮಿಸುತ್ತಿದ್ದೇವು. ಈ ವೇಳೆಯೂ ಮಳೆ ಬರುತ್ತಿತ್ತು. ಕೆಜಿಎಫ್ ಚಾಪ್ಟರ್-1 ಚಿತ್ರದ ಸೆಟ್ ನಿರ್ಮಾಣದ ವೇಳೆ ಮಳೆ ಬಂದಿದ್ದರಿಂದ ಚಾಪ್ಟರ್-2ಗೂ ಬರಬಹುದು ಎಂದು ನಾವು ನಿರೀಕ್ಷೆ ಮಾಡಿದ್ದೆವು. ಹಾಗಾಗಿ ಮೊದಲೇ ಎಲ್ಲ ತಯಾರಿ ಮಾಡಿಕೊಂಡಿದ್ದೆವು. ಇದರಿಂದ ನಮಗೆ ಹೆಚ್ಚು ತೊಂದರೆ ಆಗಲಿಲ್ಲ ಎಂದರು.

    ಸೆಟ್ ನಿರ್ಮಾಣಕ್ಕಾಗಿ ಬಾಲಿವುಡ್ ಹಾಗೂ ಹಾಲಿವುಡ್‍ನಲ್ಲಿ ಹೇಗೆ ಕೋಟ್ಯಂತರ ರೂ. ಖರ್ಚು ಮಾಡುತ್ತಾರೋ, ಹಾಗೆಯೇ ಕೆಜಿಎಫ್ ಚಿತ್ರಕ್ಕೂ ಖರ್ಚು ಮಾಡಿ ಸೆಟ್ ಹಾಕಲಾಗಿದೆ. ತಂತ್ರಜ್ಞರು ನಮ್ಮ ಕನ್ನಡ ಚಿತ್ರರಂಗವನ್ನು ಬೇರೆ ಲೆವೆಲ್‍ಗೆ ತೆಗೆದುಕೊಂಡು ಹೋಗಲು ಕಷ್ಟಪಟ್ಟು ದುಡಿದಿದ್ದಾರೆ. ಚಿತ್ರ ನೋಡಿದಾಗ ಸೆಟ್‍ನ ಖರ್ಚಿನ ಬಗ್ಗೆ ಎಲ್ಲರಿಗೂ ಅರಿವಾಗುತ್ತದೆ ಎಂದು ಶಿವಕುಮಾರ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

    ಕೆಜಿಎಫ್ ಚಿತ್ರದಲ್ಲಿ `ನರಾಚಿ ಸಾಮ್ರಾಜ್ಯ’ವನ್ನು ನಿರ್ಮಿಸಿದ್ದೆವು. ಈಗ ಕೆಜಿಎಫ್-2ನಲ್ಲೂ ನರಾಚಿಯ ಸೆಟ್ ನಿರ್ಮಿಸಿದ್ದೇವೆ. ಆದರೆ ಈ ಸೆಟ್ ನೆಕ್ಸ್ಟ್ ಲೆವೆಲ್‍ನಲ್ಲಿದೆ. ಮೂರು ತಿಂಗಳ ಕಾಲ 350 ಮಂದಿ ನಿರಂತರ ಕೆಲಸ ಮಾಡಿ ಕೆಜಿಎಫ್-2 ಸೆಟ್ ನಿರ್ಮಿಸಿದ್ದಾರೆ. ಕೆಜಿಎಫ್ ಚಾಪ್ಟರ್-1 ಸೆಟ್ ನಿರ್ಮಿಸಲು 250 ಜನ ಕೆಲಸ ಮಾಡಿದ್ದರು. ಆಗ ಹೆಚ್ಚು ಮಳೆ ಬಂದ ಕಾರಣ ಹೆಚ್ಚಿನ ಸಮಯ ಹಿಡಿದಿತ್ತು ಎಂದು ಶಿವಕುಮಾರ್ ಕೆಜಿಎಫ್-1 ಸೆಟ್ ನಿರ್ಮಾಣದ ವೇಳೆ ಎದುರಾದ ಕಷ್ಟಗಳ ಬಗ್ಗೆ ತಿಳಿಸಿದ್ದಾರೆ.

    ಬೆಂಗಳೂರಿನ ಮಿನರ್ವ ಮಿಲ್, ಕೋಲಾರದ ಕೆಜಿಎಫ್, ಹೈದರಾಬಾದ್‍ನ ರಾಮೋಜಿ ಫಿಲ್ಮ್ ಸಿಟಿ, ಮೈಸೂರಿನಲ್ಲಿ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದೆ. ಅಂತಹ ಸೆಟ್‍ನಲ್ಲಿ ಸಣ್ಣ ಕುರ್ಚಿ ತಂದರೂ ಅದು ನೆನಪಿನಲ್ಲಿರುತ್ತೆ. ಸದ್ಯ ಕೆಜಿಎಫ್-2 ಚಿತ್ರದ ಇಡೀ ಚಿತ್ರೀಕರಣ ಸೆಟ್‍ನಲ್ಲಿಯೇ ನಡೆದಿದೆ ಎಂದು ಶಿವಕುಮಾರ್ ಹೇಳಿದ್ದಾರೆ.