ಬೆಂಗಳೂರು: ಕೊಡಗಿನ ನೊಂದ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಸಹಾಯಾರ್ಥ `ಪೀಪಲ್ ಫಾರ್ ಪೀಪಲ್’ ತಂಡ ಕನ್ನಡದ `ಸಾವಿತ್ರಿಬಾಯಿ ಫುಲೆ’ ಚಿತ್ರದ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮವು ಇಂದು ಸಂಜೆ 6 ಘಂಟೆಗೆ, ನಗರದ ಕರ್ನಾಟಕ ಚಲನಚಿತ್ರ ಕಲಾವಿದರ ಒಕ್ಕೂಟದ ಅಡಿಟೋರಿಯಂ, ಚಾಮರಾಜಪೇಟೆಯಲ್ಲಿ ನಡೆಯಲಿದೆ.
ಈಗಾಗಲೇ `ಪೀಪಲ್ ಫಾರ್ ಪೀಪಲ್’ ತಂಡದವರು ಮಲ್ಲತ್ ಹಳ್ಳಿಯ ಕಲಾಗ್ರಾಮದಲ್ಲಿ ಕೊಡಗಿನ ಸಂತ್ರಸ್ತರ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ `ಕೊಡಗಿಗಾಗಿ ರಂಗಸಪ್ತಾಹ’ ಹಾಗೂ `ಕೊಡಗಿಗಾಗಿ ರಂಗೋತ್ಸವ’ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.

ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಈ ಪ್ರದರ್ಶನಕ್ಕೆ ಕೊಡಗಿನ ನೊಂದ ಹೆಣ್ಣುಮಕ್ಕಳು, ರಾಜಕೀಯ ನಾಯಕರು ನಾಡಿನ ವಿಚಾರವಾದಿಗಳು, ಪ್ರಗತಿಪರ ಹೋರಾಟಗಾರರು, ದಲಿತಪರ ಚಿಂತಕರು ಸೇರಿದಂತೆ ಎಲ್ಲಾ ಬಗೆಯ ನಾಯಕರು ಆಗಮಿಸಲಿದ್ದಾರೆ.
ಬ್ರಿಟಿಷರಿಂದ “ಭಾರತದ ಮೊದಲ ಮಹಿಳಾ ಶಿಕ್ಷಕಿ” ಎಂಬ ಬಿರುದನ್ನು ಪಡೆದಿರುವ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜೀವನಾಧಾರಿತ ಚಿತ್ರವಾಗಿದೆ. ಈ `ಸಾವಿತ್ರಿಬಾಯಿ ಫುಲೆ-ಪ್ರೈಡ್ ಆಫ್ ನೇಶನ್’. ಈ ಚಿತ್ರದಲ್ಲಿ ತಾರಾ `ಸಾವಿತ್ರಿಬಾಯಿ’ ಪಾತ್ರದಲ್ಲಿ ಮತ್ತು ಮಹಾತ್ಮ ಜ್ಯೋತಿಬಾ ಫುಲೆ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಅಭಿನಯಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv




