Tag: ಕಲಾ

  • ದ್ವಿತೀಯ ಪಿಯು ಫಲಿತಾಂಶ ಪ್ರಕಟ – ಟಾಪರ್ಸ್ ಯಾರ‍್ಯಾರು ಗೊತ್ತಾ?

    ದ್ವಿತೀಯ ಪಿಯು ಫಲಿತಾಂಶ ಪ್ರಕಟ – ಟಾಪರ್ಸ್ ಯಾರ‍್ಯಾರು ಗೊತ್ತಾ?

    ಬೆಂಗಳೂರು: 2021-22ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಿಮ್ರಾನ್ ಶೇಷರಾವ್ 600 ಅಂಕಗಳಿಗೆ 598 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ಸಿಮ್ರಾನ್ ಶೇಷರಾವ್ ಬೆಂಗಳೂರಿನ ಎನ್‍ಎಂಕೆಆರ್‌ವಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಇವರು ವಿಜ್ಞಾನ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕರೆ ಮಾಡಿ ಶುಭ ಕೋರಿದ್ದಾರೆ. ಈ ವೇಳೆ ಎಂಜಿನಿಯರಿಂಗ್ ಓದುವ ಆಸೆ ಇದೆ ಎಂದು ತನ್ನ ಕನಸನ್ನು ವಿದ್ಯಾರ್ಥಿನಿ ಸಚಿವರಿಗೆ ತಿಳಿಸಿದರು.

    ಇನ್ನುಳಿದಂತೆ ವಾಣಿಜ್ಯ ವಿಭಾಗದಲ್ಲಿ 4 ವಿದ್ಯಾರ್ಥಿಗಳು 600 ಅಂಕಗಳಿಗೆ 596 ಅಂಕ ಗಳಿಸಿ ಟಾಪರ್ಸ್ ಆಗಿದ್ದು, ಬೆಂಗಳೂರಿನ ಜೈನ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮಾನವ ವಿನಯ್ ಕೇಜ್ರಿವಾಲ್, ಬೆಂಗಳೂರಿನ ಬಿಜಿಎಸ್ ಕಾಲೇಜಿನ ನೀಲು ಸಿಂಗ್, ಬೆಂಗಳೂರಿನ ಸೆಂಟ್ ಕ್ಲಾರಟ್ ಪಿಯು ಕಾಲೇಜಿನ ಆಕಾಶ್ ದಾಸ್ ಹಾಗೂ ಚಿಕ್ಕಬಳ್ಳಾಪುರ ಕಾಲೇಜಿನ ನೇಹಾ ಈ ಸಾಧನೆಯನ್ನು ಮಾಡಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಪಠ್ಯಪುಸ್ತಕ ಪರಿಷ್ಕರಣೆ ವಾಪಸ್ ಪಡೆಯಲ್ಲ: ಬಿಸಿ ನಾಗೇಶ್

    ಕಲಾ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಟಾಪರ್ಸ್ ಆಗಿದ್ದಾರೆ. ಬಳ್ಳಾರಿ ಕಾಲೇಜಿನ ಶ್ವೇತಾ ಭೀಮಾ ಶಂಕರ್ ಭೈರಗೊಂಡ ಹಾಗೂ ಮಡಿವಾಳರಾ ಸಹನಾ 600 ಅಂಕಗಳಿಗೆ 594 ಅಂಕಗಳನ್ನು ಪಡೆದು ಕಲಾ ವಿಭಾಗದಲ್ಲೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: 2nd PUC ಫಲಿತಾಂಶ ‌ಪ್ರಕಟ- 61.88% ಮಕ್ಕಳು ಪಾಸ್‌, ವಿದ್ಯಾರ್ಥಿನಿಯರೇ ಮೇಲುಗೈ

    Live Tv

  • ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

    ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

    ಸಿದ್ದಗಂಗಾ ಶ್ರೀಗಳ 99ನೇ ಜನ್ಮದಿನೋತ್ಸವಕ್ಕೆ ಗುರುವಂದನಾ ಕಾರ್ಯಕ್ರಮ ನಡೆದಿತ್ತು. ಮಾನವ ಮಾನವ ಸಂಬಂಧಗಳೇ ನುಚ್ಚು ನೂರಾಗುತ್ತಿರುವ ನಿರಾಸೆಯ ಸನ್ನಿವೇಶದಲ್ಲಿ ಮಾನವ ಸೇವೆಯೇ ಮಹಾದೇವನ ಸೇವೆ ಎಂದು ಭಾವಿಸಿ ನೂರು ದಾಟಿರುವ ವಯಸಿನಲ್ಲಿಯೂ ಆಯಾಸ ಎನ್ನದೇ ದುಡಿಯುತ್ತಿರುವ ಇಂತಹ ಲೋಕ ಜಂಗಮನಿಗಿಲ್ಲದೇ ಮತ್ಯಾರಿಗೆ ಗುರುವಂದನೆ ಸಲ್ಲಬೇಕು ಅಂತಾ ಹೇಳಿಕೊಂಡು ಈ ಕಾರ್ಯಕ್ರಮಕ್ಕೆ ಪ್ರೀತಿಯಿಂದ ಅಂದಿನ ರಾಷ್ಟ್ರಪತಿ ಆಗಿದ್ದ ಎಪಿಜೆ ಅಬ್ದುಲ್ ಕಲಾಂ ಆಗಮಿಸಿದ್ದರು.

    ವಿಮಾನದಲ್ಲಿ ಪ್ರಯಾಣಿಸುವಾಗಲೇ ಕಲಾಂ ಶ್ರೀಗಳಿಗೆ ಕವನವೊಂದನ್ನು ಬರೆದರು. ಡಾ ಎಪಿಜೆ ಅಬ್ದುಲ್ ಕಲಾಂ ಅವರ ಕಾರ್ಯದರ್ಶಿ ಸುತ್ತೂರು ಶ್ರೀಗಳಿಗೆ ಫೋನ್ ಮಾಡಿ, ಸಾಹೇಬ್ರು ಸಿದ್ದಗಂಗಾ ಶ್ರೀಗಳ ಬಗ್ಗೆ ಕವಿತೆ ಬರೆಯುತ್ತಾರೆ. ಅದನ್ನು ಫ್ಯಾಕ್ಸ್ ಮಾಡಲಾಗುವುದು. ತಕ್ಷಣಕ್ಕೆ ಅದನ್ನ ಕನ್ನಡಕ್ಕೆ ತರ್ಜುಮೆ ಮಾಡಿಸಿ ಗುರುವಂದನೆ ಕಾರ್ಯಕ್ರಮದಲ್ಲಿ ಹಾಡಿಸಲು ಸಾಧ್ಯವೇ ಎಂದು ಕೇಳಿದರು.

    ಕಲಾಂ ಬರೆದ ಕವಿತೆಯನ್ನು ಗೊ.ರು ಚನ್ನಬಸಪ್ಪ ಅವರು ಕನ್ನಡಕ್ಕೆ ತರ್ಜುಮೆ ಮಾಡುತ್ತಾರೆ. ಅಂದು ಗುರುವಂದನಾ ಕಾರ್ಯಕ್ರಮದಲ್ಲಿ ಸುಶ್ರಾವ್ಯವಾಗಿ ಇದನ್ನು ಹಾಡಲಾಗುತ್ತದೆ. ಕಲಾಂ ತನ್ನ ಸ್ಫೂರ್ತಿಯ ಸೆಲೆಯನ್ನು ಕಣ್ತುಂಬಿಸಿಕೊಂಡು ಕವನವನ್ನು ಅರ್ಪಿಸಿ ಖುಷಿಪಟ್ರಂತೆ.

    ಕಲಾಂ ಬರೆದ ಕವಿತೆ:
    ನೀವು ನಿಮ್ಮೆದುರಿಗೆ ನೋಡಿ ಒಬ್ಬ ರಸಋಷಿ
    ಸುಂದರ ಅನುಭಾವದ ಹಾರೈಕೆ ಹೊತ್ತ ಯೋಗಋಷಿ
    ಅನುದಿನವೂ ಭಗವಂತ ನಿಮಗೆ ಕರುಣಿಸಿದ ಈ ಯೋಗಿ
    ಬೆಲೆಯುಳ್ಳ ಜೀವನದ ವೈಢೂರ್ಯವಾಗಿ

    ತಪದ ಬದುಕಿನ ಅಮೂಲ್ಯ ಹಾರವಾಗಿ
    ಮೂವತ್ತಾರು ಸಾವಿರ ವಜ್ರಗಳ ಸಂಯೋಗಿ
    ಮಾನವೀಯತೆಯೇ ಈ ಋಷಿಯ ಸಂದೇಶ
    ಓ ನನ್ನ ನಾಗರೀಕ ಬಂಧುಗಳೇ
    ಕೊಡುವಲ್ಲಿ ಪಡೆಯಿರಿ ನೆಮ್ಮದಿಯ ದೇಹಾತ್ಮಗಳಲ್ಲಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಿಯು ಫಲಿತಾಂಶ: ಮೂರು ವಿಭಾಗದ ಟಾಪ್ 10 ಟಾಪರ್ ಲಿಸ್ಟ್ ಇಲ್ಲಿದೆ

    ಪಿಯು ಫಲಿತಾಂಶ: ಮೂರು ವಿಭಾಗದ ಟಾಪ್ 10 ಟಾಪರ್ ಲಿಸ್ಟ್ ಇಲ್ಲಿದೆ

    ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ಬಾಲಕೀಯರೇ ಮೇಲುಗೈ ಸಾಧಿಸಿದ್ದಾರೆ ಕಳೆದ ವರ್ಷಕ್ಕಿಂತ ಈ ಬಾರಿ ಶೇ.4.82 ಫಲಿತಾಂಶ ಇಳಿಕೆಯಾಗಿದ್ದು, ಈ ವರ್ಷ 52.38 ಫಲಿತಾಂಶ ದಾಖಲಾಗಿದೆ. 6,84,490 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 3,55,697 ಮಂದಿ ಉತ್ತೀರ್ಣರಾಗಿದ್ದಾರೆ.

    ಕಲಾ ವಿಭಾಗದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಬಳ್ಳಾರಿಯ ಕೊಟ್ಟೂರು ಹಿಂದೂ ಕಾಲೇಜು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಚೈತ್ರಾ ಬಿ. 589 ಅಂಕಗಳಿಸಿ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

    ಕಾಮರ್ಸ್ ವಿಭಾಗದಲ್ಲಿ ಇಬ್ಬರು ಟಾಪರ್ ಆಗಿದ್ದು, ಬೆಂಗಳೂರಿನ ವಿಜಯನಗರದ ಆರ್‍ಎನ್‍ಎಸ್ ಕಾಲೇಜಿನ ಶ್ರೀನಿಧಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆಯ ಸತ್ಯಸಾಯಿ ಕಾಲೇಜಿನ ಸಾಯಿ ಸಮರ್ಥ್ 595 ಅಂಕಗಳಿಸಿದ್ದಾರೆ.

    ವಿಜ್ಞಾನ ವಿಭಾಗದಲ್ಲಿ  ಇಬ್ಬರು ಟಾಪರ್ ಆಗಿದ್ದು, ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ಸೃಜನಾ ಎನ್ ಮತ್ತು ಕುಂದಾಪುರದ ಎಸ್‍ವಿ ಕಾಲೇಜಿನ ರಾಧಿಕಾ ಪೈ 596 ಅಂಕಗಳಿಸಿದ್ದಾರೆ.

    ಹೀಗಾಗಿ ಇಲ್ಲಿ ಮೂರು ವಿಭಾಗದಲ್ಲಿನ ಟಾಪ್ 10 ಟಾಪರ್‍  ಪಟ್ಟಿಯನ್ನು ನೀಡಲಾಗಿದೆ.

    ಕಲಾ ವಿಭಾಗ

    ವಾಣಿಜ್ಯ ವಿಭಾಗ

    ವಿಜ್ಞಾನ ವಿಭಾಗ

    ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?