Tag: ಕಲಬುರ್ಗಿ

  • ಮನೆಯಲ್ಲೇ ಹತ್ಯೆ ಆಗಿರೋದು ರಾಜ್ಯದ ಕಾನೂನು ಸುವ್ಯವಸ್ಥೆ ಹೇಗಿದೆ ಅನ್ನೋದನ್ನ ತೋರಿಸ್ತಿದೆ: ಕರಂದ್ಲಾಜೆ

    ಮನೆಯಲ್ಲೇ ಹತ್ಯೆ ಆಗಿರೋದು ರಾಜ್ಯದ ಕಾನೂನು ಸುವ್ಯವಸ್ಥೆ ಹೇಗಿದೆ ಅನ್ನೋದನ್ನ ತೋರಿಸ್ತಿದೆ: ಕರಂದ್ಲಾಜೆ

    ಮಂಗಳೂರು: ಮನೆಯಲ್ಲೇ ಗೌರಿ ಲಂಕೇಶ್ ಹತ್ಯೆ ಆಗಿರುವುದು ರಾಜ್ಯದ ಕಾನೂನು ಸುವ್ಯವಸ್ಥೆ ಹೇಗಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಹೇಳುವ ಮೂಲಕ ಮಾಜಿ ಸಚಿವೆ, ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕಲಬುರ್ಗಿ ಹಂತಕರನ್ನು ಇನ್ನೂ ಬಂಧಿಸಿಲ್ಲ. ಕೆಂಪಯ್ಯ ಮೂಲಕ ಸಿದ್ದರಾಮಯ್ಯ ಪೊಲೀಸರನ್ನು ಕಂಟ್ರೋಲ್ ಮಾಡುತ್ತಿದ್ದಾರೆ. ಡಿವೈಎಸ್‍ಪಿ ಗಣಪತಿ ಹತ್ಯೆ ವಿಚಾರದಲ್ಲಿ ಎಸಿಬಿ, ಸಿಐಡಿಯನ್ನು ದುರ್ಬಳಕೆ ಮಾಡಿಕೊಂಡಿದ್ದು, ಸಿಬಿಐ ತನಿಖೆಯಿಂದ ರಾಜ್ಯ ಸರಕಾರದ ಕೈವಾಡ ಹೊರಬರಲಿದೆ ಎಂದು ತಿಳಿಸಿದರು.

    ಬಿಜೆಪಿ ಮಂಗಳೂರು ಚಲೋ ರ‍್ಯಾಲಿ ಬಗ್ಗೆ ಮಾತನಾಡಿದ ಅವರು, ರ‍್ಯಾಲಿಯನ್ನು ಹತ್ತಿಕ್ಕುವ ಯತ್ನವನ್ನು ಸರ್ಕಾರ ಮಾಡುತ್ತಿದೆ ಸಿದ್ದರಾಮಯ್ಯ ಸರ್ಕಾರಕ್ಕೆ ಇದು ಎಚ್ಚರಿಕೆ ಗಂಟೆಯಾಗಲಿದೆ. ರಮಾನಾಥ ರೈಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಹಾಗೂ ಗುರುವಾರದ ಕಾರ್ಯಕ್ರಮವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಪಿಎಫ್‍ಐ, ಎಸ್‍ಡಿಪಿಐ ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದರು.

    ಗಣಪತಿ ಪ್ರಕರಣದಲ್ಲಿ ಸಚಿವ ಜಾರ್ಜ್ ಈಗಲೇ ರಾಜಿನಾಮೆ ನೀಡಬೇಕು. ರಮಾನಾಥ ರೈ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಟೀಕಿಸಿದರು.

     

     

  • ಪತ್ನಿಯ ಪ್ರಿಯಕರನಿಗೆ ಅವಾಜ್ ಹಾಕಿದ ಪತಿ-ಮುಂದೇನಾಯ್ತು, ಈ ಸ್ಟೋರಿ ಓದಿ

    ಪತ್ನಿಯ ಪ್ರಿಯಕರನಿಗೆ ಅವಾಜ್ ಹಾಕಿದ ಪತಿ-ಮುಂದೇನಾಯ್ತು, ಈ ಸ್ಟೋರಿ ಓದಿ

    ಕಲಬುರ್ಗಿ: ಪತ್ನಿಯ ಪ್ರಿಯಕರನಿಗೆ ಅವಾಜ್ ಹಾಕಿದ್ದ ಪತಿಯೋರ್ವನಿಗೆ ಮಾರಣಾಂತಿಕ ಹಲ್ಲೆ ನಡೆಸಿ, ಬೆತ್ತಲೆಗೊಳಿಸಿ ರಸ್ತೆ ಮಧ್ಯೆ ಎಸೆದಿರುವ ಅಮಾನವೀಯ ಘಟನೆ ನಗರದ ಗಾಜಿಪುರ ಬಡಾವಣೆಯಲ್ಲಿ ನಡೆದಿದೆ.

    ಮಹೇಶ್ ಹಲ್ಲೆಗೊಳಗಾದ ಪತಿರಾಯ. ಮಹೇಶ್ ಕಳೆದ ಆರು ವರ್ಷಗಳ ಹಿಂದೆ ಶಶಿಕಲಾ ಎಂಬವನರನ್ನು ಮದುವೆಯಾಗಿದ್ದರು. ಆದರೆ ಪತ್ನಿ ಶಶಿಕಲಾ ಮಾತ್ರ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಪತ್ನಿಯ ಅಕ್ರಮ ಸಂಬಂಧ ತಿಳಿದ ಮಹೇಶ್ ಮಂಗಳವಾರ ಶಶಿಕಲಾ ಪ್ರಿಯಕರನಿಗೆನ ಅವಾಚ್ಯ ಶಬ್ಧಗಳನ್ನು ಬಳಸಿ ಬೈದು ಅವಾಜ್ ಹಾಕಿದ್ದಾನೆ.

    ಮಹೇಶ್ ಅವಾಜ್ ಹಾಕಿದ್ದರಿಂದ ಕೋಪಗೊಂಡ ಪ್ರಿಯಕರ ತನ್ನ ಸ್ನೇಹಿತರೊಂದಿಗೆ ಬಂದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ಬಳಿಕ ಮಹೇಶನನ್ನು ಪೂರ್ಣ ಬೆತ್ತಲೆಗೊಳಿಸಿ ನಗರದ ಲಾರಿ ತಂಗುದಾಣದಲ್ಲಿ ಬೀಸಾಡಿ ಹೋಗಿದ್ದಾರೆ.

    ಮಹೇಶನನ್ನು ಸ್ಥಳೀಯರು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಶಶಿಕಲಾ, ನನ್ನ ಮೇಲಿನ ಆರೋಪಗಳೆಲ್ಲಾ ಸುಳ್ಳು ಎಂದು ಹೇಳಿದ್ದಾರೆ. ಈ ಕುರಿತು ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ದಿಗಂಬರ ಸ್ವಾಮೀಜಿಯ ದರ್ಶನ ಪಡೆದ ವಿಜಿ ದಂಪತಿ

    ದಿಗಂಬರ ಸ್ವಾಮೀಜಿಯ ದರ್ಶನ ಪಡೆದ ವಿಜಿ ದಂಪತಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದುನಿಯಾ ವಿಜಯ್ ಸ್ವಾಮೀಜಿಗಳ ಆಶಿರ್ವಾದ ಪಡೆಯೋದು, ಹೋಮ ಮಾಡಿಸೋದು, ಇಂತಹ ಹಲವು ಕೆಲಸಗಳನ್ನು ಆಗಾಗ ಮಾಡ್ತಾನೇ ಇರ್ತಾರೆ.

    ಆದ್ರೆ ಇದೀಗ ದುನಿಯಾ ವಿಜಿ ದಂಪತಿ ದಿಗಂಬರ ಸ್ವಾಮೀಜಿಯ ಆಶೀರ್ವಾದ ಪಡೆದಿರೋದು ಕುತೂಹಲಕ್ಕೆ ಕಾರಣವಾಗಿದೆ. ದುನಿಯಾ ವಿಜಿ ಹಾಗೂ ಅವರ ಪತ್ನಿ ಕೀರ್ತಿ ಕಲಬುರ್ಗಿ ಜಿಲ್ಲೆಯ ಶ್ರೀ ಶ್ರೀ ಶ್ರೀ ದತ್ತ ದಿಗಂಬರ ಅಭಿನವ ಬಾಲಯೋಗಿ ಶಂಕರಲಿಂಗ ಮಹಾರಾಜ ಸ್ವಾಮಿಗಳ ದರ್ಶನ ಪಡೆದಿದ್ದಾರೆ. ದುನಿಯಾ ವಿಜಿ ಅವರ ಪತ್ನಿ ಕೀರ್ತಿ ಕೂಡ ಫೋಟೋದಲ್ಲಿದ್ದಾರೆ.

    ಈ ಸ್ವಾಮೀಜಿಯನ್ನ ದುನಿಯಾ ವಿಜಿ ನಂಬೋಕೆ ಏನು ಕಾರಣ ಅನ್ನೋದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

  • ಕುಟುಂಬಕ್ಕೆ ಆಶ್ರಯವಾಗಲಿ ಅಂತಾ ಕರೆಸಿದ್ರೆ ಮಗಳನ್ನೇ ರೇಪ್, ಕೊಲೆ ಮಾಡಿ ಆತ್ಮಹತ್ಯೆ ಮಾಡ್ಕೊಂಡ!

    ಕುಟುಂಬಕ್ಕೆ ಆಶ್ರಯವಾಗಲಿ ಅಂತಾ ಕರೆಸಿದ್ರೆ ಮಗಳನ್ನೇ ರೇಪ್, ಕೊಲೆ ಮಾಡಿ ಆತ್ಮಹತ್ಯೆ ಮಾಡ್ಕೊಂಡ!

    ಕಲಬುರ್ಗಿ: ಕುಟುಂಬಕ್ಕೆ ಆಶ್ರಯವಾಗಲಿ ಅಂತಾ ಕರೆ ತಂದರೆ ಮಗಳ ಪಾಲಿಗೆ ಸೋದರ ಮಾವನೇ ವಿಲನ್ ಆದ ಹೀನಾಯ ಘಟನೆ ಕಲಬುರ್ಗಿ ಜಿಲ್ಲೆಯ ಕೋಟನೂರ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

    ಇದೀಗ ಕಲಬುರ್ಗಿ ನಗರದ ಹೊರವಲಯದ ಕೋಟನೂರ(ಡಿ) ಗ್ರಾಮದ ನಿವಾಸಿಯಾಗಿರುವ ತಾಯಿ ಶಾಂತಾಬಾಯಿ ತನ್ನ ಮಗಳನ್ನು ಕಳೆದುಕೊಂಡು ದುಃಖದಲ್ಲಿ ಮುಳುಗಿದ್ದಾರೆ. 15 ವರ್ಷಗಳ ಹಿಂದೆ ಗಂಡ ತೀರಿಕೊಂಡ ಬಳಿಕ ಮನೆಯ ಜವಾಬ್ದಾರಿಗಾಗಿ ಸಹೋದರ ವಿಜಯಕುಮಾರ್‍ಗೆ ಶಾಂತಾಬಾಯಿ ಮನೆಯಲ್ಲಿ ಆಶ್ರಯ ನೀಡಿದ್ದರು.

    ಆದರೆ ಕಾಮುಕ ವಿಜಯಕುಮಾರ್ ತನ್ನ ಮಗಳಿಗೆ ಸಮನಾದ 17 ವರ್ಷದ ಯುವತಿಯ ಮೇಲೆ ಶನಿವಾರ ರಾತ್ರಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾನೆ. ಮಾತ್ರವಲ್ಲದೇ ಬಳಿಕ ಈ ವಿಷಯ ಜನರಿಗೆ ತಿಳಿದ್ರೆ ತೊಂದರೆ ಅಂತಾ ಪಕ್ಕದ ಕೋಣೆಗೆ ಹೋಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಆರೋಪಿ ವಿಜಯಕುಮಾರ್ ಜೇಬಿನಲ್ಲಿ ಡೆತ್ ನೋಟ್ ಸಹ ಪೊಲೀಸರಿಗೆ ಪತ್ತೆಯಾಗಿದೆ. ಅದರಲ್ಲಿ ನಮ್ಮ ಸಾವಿಗೆ ಕಾರಣ ಮನೆಯ ಮಾಲೀಕ ಹಾಗು ಸೋದರನಾದ ಜಯರಾಜ್ ರಾಠೋಡ್ ಅಂತಾ ಬರೆಯಲಾಗಿದ್ದು, ಈ ಮೂಲಕ ಪ್ರಕರಣ ತಿರುವು ಪಡೆಯಲಿ ಅಂತಾ ಕಾಮುಕ ವಿಜಯಕುಮಾರ್ ಸಾಯುವ ಮುನ್ನ ಪ್ಲ್ಯಾನ್ ಮಾಡಿ ನೇಣಿಗೆ ಶರಣಾಗಿದ್ದಾನೆ.

    ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಉಂಡ ಮನೆಗೇ ಕನ್ನ ಬಗೆದ್ರು ಅಂತಾ ಹೇಳೋ ಮಾತು ಇಂತಹವರನ್ನೇ ನೋಡಿ ಹೇಳಿರಬೇಕು.