Tag: ಕಲಬುರಗಿ ಪೊಲೀಸ್

  • ಕಾರು-ಬಸ್ ನಡ್ವೆ ಭೀಕರ ಅಪಘಾತ; ತಂದೆ-ಮಗ ಸ್ಥಳದಲ್ಲೇ ಸಾವು

    ಕಾರು-ಬಸ್ ನಡ್ವೆ ಭೀಕರ ಅಪಘಾತ; ತಂದೆ-ಮಗ ಸ್ಥಳದಲ್ಲೇ ಸಾವು

    ಕಲಬುರಗಿ: ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ (Road Accident) ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬುರ ಕೆ ಗ್ರಾಮದ ಬಳಿ ಇಂದು ಸಂಜೆ ನಡೆದಿದೆ.

    ಸೋಮಶೇಖರ್ (55), ಪ್ರಕಾಶ್ (28) ಮೃತ ದುರ್ದೈವಿಗಳಾಗಿದ್ದು, ಮೃತರು ಬಾಗಲಕೋಟೆ (Bagalakote) ಜಿಲ್ಲೆಯವರಾಗಿದ್ದು, ಕಾರಿನಲ್ಲಿದ್ದ ತಂದೆ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿದಾರೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್‌ ಜಾಮ್‌ – ಆಸ್ಪತ್ರೆಗೆ ಸಾಗಿಸಲಾಗದೇ ಅಂಬುಲೆನ್ಸ್‌ನಲ್ಲೇ ಮಹಿಳೆ ಸಾವು

    ಕಲಬುರಗಿ (Kalaburagi) ಕಡೆಯಿಂದ ಬಾಗಲಕೋಟೆಯ ಬಿಳಗಿ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಎದುರಿಗೆ ಬಂದ ಎನ್‌ಇಕೆಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅವಘಡ ಸಂಭವಿಸಿದೆ. ಇದನ್ನೂ ಓದಿ: ಮತಗಳ್ಳತನ ಆರೋಪ: ದಾಖಲೆ ಕೊಡುವಂತೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್

    ಇನ್ನೂ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಕುಳಿತಿದ್ದ ತಂದೆ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಸೋಮಶೇಖರ್ ಪತ್ನಿ ಗಾಯಗೊಂಡಿದ್ದು, ಕಲಬುರಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಗಾಣಗಾಪುರ ಠಾಣೆಯ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ʻಎಲ್ಲರ ಬಾಸ್‌ ನಾವೇʼ ಅನ್ನೋರು ಭಾರತದ ಬೆಳವಣಿಗೆ ಸಹಿಸುತ್ತಿಲ್ಲ – ಟ್ರಂಪ್‌ಗೆ ರಾಜನಾಥ್‌ ಸಿಂಗ್‌ ಗುದ್ದು

  • ಕಲಬುರಗಿ ಚಿನ್ನದಂಗಡಿ ದರೋಡೆ ಕೇಸ್; ಮೂವರು ಅಂತರರಾಜ್ಯ ದರೋಡೆಕೋರರ ಬಂಧನ

    ಕಲಬುರಗಿ ಚಿನ್ನದಂಗಡಿ ದರೋಡೆ ಕೇಸ್; ಮೂವರು ಅಂತರರಾಜ್ಯ ದರೋಡೆಕೋರರ ಬಂಧನ

    – 2.86 ಕೆಜಿ ಚಿನ್ನ, 4.80 ಲಕ್ಷ ರೂ. ನಗದು ವಶಕ್ಕೆ

    ಕಲಬುರಗಿ: ನಗರದ ಸರಾಫ್ ಬಝಾರ್‌ನಲ್ಲಿ ಜ್ಯುವೆಲರಿ ಶಾಪ್ (Jewellery Shop) ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಅಂತರರಾಜ್ಯ ದರೋಡೆಕೋರರನ್ನ ಪೊಲೀಸರು ಬಂಧಿಸಿದ್ದು, 2.865 ಕೆಜಿ ಚಿನ್ನ ಹಾಗೂ 4.80 ಲಕ್ಷ ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ.

    ನಗರದ ಪೊಲೀಸ್ ಆಯುಕ್ತಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ, ಮಾತನಾಡಿದ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು, ಪಶ್ಚಿಮ ಬಂಗಾಳದ ಗೋಪಾಲ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ನಿವಾಸಿ ಅಯೋಧ್ಯಾ ಪ್ರಸಾದ್ ಚೌಹಾಣ್(48), ದಡಪೂರ ಪೊಲೀಸ್ ಠಾಣೆಯ ವ್ಯಾಪ್ತಿಯ ಬಂಗಾರ ವ್ಯಾಪಾರಿಯಾಗಿದ್ದ ಫಾರುಕ್ ಅಹಮದ್ ಮಲ್ಲಿಕ್(40) ಹಾಗೂ ಮುಂಬೈನಲ್ಲಿ ಟೇಲರ್ ಆಗಿ ಕೆಲಸ ಮಾಡುತ್ತಿದ್ದ ಸೊಹೆಲ್ ಶೇಖ್ ಅಲಿಯಾಸ್ ಬಾದಶಾ(30) ಬಂಧಿತ ಆರೋಪಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ; ಎಸ್‌ಐಟಿ ತನಿಖೆ ಕಾಲಮಿತಿಯಲ್ಲಿ ಕಾನೂನು ಬದ್ಧವಾಗಿ ನಡೆಯಲಿ: ಬೊಮ್ಮಾಯಿ

    ಜುಲೈ 11ರಂದು ನಗರದಲ್ಲಿ ಮಲ್ಲಿಕ್ ಜ್ಯುವೆಲರಿ ಶಾಪ್‌ನಿಂದ ಅಂದಾಜು 3 ಕೋಟಿ ಮೌಲ್ಯದ ಬಂಗಾರದ ಆಭರಣಗಳನ್ನು ದರೋಡೆ ಮಾಡಿರುವ ಪ್ರಕರಣ ರಾಜ್ಯದೆಲ್ಲೆಡೆ ಭಾರೀ ಸಂಚಲನ ಮೂಡಿಸಿತ್ತು. ಈ ಪ್ರಕರಣವನ್ನು ಬೇಧಿಸಲು ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ಒಳಗೊಂಡ 5 ತನಿಖಾ ತಂಡಗಳನ್ನು ರಚಿಸಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ್ದೆವು. ಇದಕ್ಕೂ ಮುನ್ನ ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ದರೋಡೆಕೋರರನ್ನು ಬಂಧಿಸಿ, ಅವರ ಬಳಿಯಿದ್ದ ಚಿನ್ನ ಮತ್ತು ನಗದನ್ನು ವಶಕ್ಕೆ ಪಡೆಯುವಲ್ಲಿ ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶದ ವಾಯುಪಡೆಯ ತರಬೇತಿ ವಿಮಾನ ಪತನ – ಓರ್ವ ಸಾವು, ನಾಲ್ವರು ಗಂಭೀರ

    ಬ್ರಹ್ಮಪುರ ಪಿಐ ಸೋಮಲಿಂಗ, ಚೌಕ್ ಪೊಲೀಸ್ ಠಾಣೆಯ ಪಿಐ ರಾಘವೇಂದ್ರ, ಅಶೋಕ್‌ನಗರ ಸಿಪಿಐ ಅರುಣ್ ಕುಮಾರ್, ವಿವಿ ಸಿಪಿಐ ಸುಶೀಲ್, ಶಿವಾನಂದ ವಾಲೀಕಾರ, ಬಂದೇ ನವಾಜ್ ಮತ್ತಿತರರನ್ನು ಒಳಗೊಂಡ ತನಿಖಾ ತಂಡ ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶಕ್ಕೆ ತೆರಳಿತ್ತು. ಈ ತಂಡ ಸೇರಿ ಇನ್ನುಳಿದ 4 ತಂಡಗಳ ಶ್ರಮದಿಂದ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ ಎಂದು ವಿವರಿಸಿದ್ದಾರೆ.

  • ಕಲಬುರಗಿ ಜ್ಯುವೆಲರಿ ಶಾಪ್ ದರೋಡೆ ಕೇಸ್ – 30 ರೂ. ಫೋನ್ ಪೇ ಮಾಡಿ ಸಿಕ್ಕಿಬಿದ್ದ ಖದೀಮರು

    ಕಲಬುರಗಿ ಜ್ಯುವೆಲರಿ ಶಾಪ್ ದರೋಡೆ ಕೇಸ್ – 30 ರೂ. ಫೋನ್ ಪೇ ಮಾಡಿ ಸಿಕ್ಕಿಬಿದ್ದ ಖದೀಮರು

    ಕಲಬುರಗಿ: ಚಿನ್ನದ ಅಂಗಡಿಯಲ್ಲಿ (Jewellery Shop) ದರೋಡೆ ಪ್ರಕರಣದ ಖದೀಮರು ಹೋಟೆಲ್‌ನಲ್ಲಿ 30 ರೂ. ಫೋನ್ ಪೇ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.

    ಈ ಪ್ರಕರಣ ಸಂಬಂಧ ಕಲಬುರಗಿ ಪೊಲೀಸರು (Kalaburagi Police) ಪಶ್ಚಿಮ ಬಂಗಾಳದಲ್ಲಿ ಇಬ್ಬರು ದರೋಡೆಕೋರರನ್ನು ಬಂಧಿಸಿದ್ದಾರೆ. ಹೌದು, ಖದೀಮರು ದರೋಡೆಗೂ ಮುನ್ನ ಶಾಪ್‌ನ ಪಕ್ಕದಲ್ಲಿದ್ದ ಹೋಟೆಲ್‌ನಲ್ಲಿ 30 ರೂ. ಫೋನ್ ಪೇ ಮಾಡಿದ್ದರು. ಇದನ್ನೂ ಓದಿ: ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ನುಗ್ಗಿ ದರೋಡೆ – ಗನ್ ತೋರಿಸಿ 3 ಕೆಜಿ ಚಿನ್ನಾಭರಣ ದೋಚಿದ ಗ್ಯಾಂಗ್

    ಬಳಿಕ ಜ್ಯುವೆಲರಿ ಶಾಪ್‌ಗೆ ಹೋಗಿ 820 ಗ್ರಾಂ ಚಿನ್ನ ದರೋಡೆ ಮಾಡಿ ಎಸ್ಕೇಪ್ ಆಗಿದ್ದರು. ಫೋನ್ ಪೇ (Phone Pay) ಜಾಡು ಹಿಡಿದ ಕಲಬುರಗಿ ಪೊಲೀಸರು ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನ ಬಂಧಿಸಿದ್ದಾರೆ. ಇದೀಗ ಪ್ರಕರಣದ ಇತರೆ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಇದನ್ನೂ ಓದಿ: ಪಾಟ್ನಾ ಆಸ್ಪತ್ರೆಯಲ್ಲಿ ಐಸಿಯುಗೆ ನುಗ್ಗಿ ಗ್ಯಾಂಗ್‌ಸ್ಟರ್‌ ಹತ್ಯೆ – ಐವರು ಆರೋಪಿಗಳು ಕೋಲ್ಕತ್ತಾದಲ್ಲಿ ಅರೆಸ್ಟ್‌

    ಏನಿದು ಪ್ರಕರಣ?
    ಜು. 11ರಂದು ಮಧ್ಯಾಹ್ನದ ಹೊತ್ತಿಗೆ ನಗರ ಸರಾಫ್ ಬಜಾರ್‌ನಲ್ಲಿರುವ ಜ್ಯುವೆಲರಿ ಶಾಪ್‌ಗೆ ಗ್ರಾಹಕರ ಸೋಗಿನಲ್ಲಿ ಖದೀಮರಿಬ್ಬರು ಬಂದಿದ್ದರು. ಶಾಪ್ ನುಗ್ಗಿ ಮಾಲೀಕನ ಕೈ, ಕಾಲುಗಳನ್ನು ಕಟ್ಟಿ, ಬಾಯಿಗೆ ಟೇಪ್ ಹಾಕಿ 820 ಗ್ರಾಂ ಚಿನ್ನ ಕದ್ದು ಎಸ್ಕೇಪ್ ಆಗಿದ್ದರು.

  • ಕಲಬುರಗಿ ಚಿನ್ನದಂಗಡಿ ದರೋಡೆ ಕೇಸ್; ಖದೀಮರ ಸುಳಿವು ಪತ್ತೆ – ಇಬ್ಬರು ಅಂದರ್

    ಕಲಬುರಗಿ ಚಿನ್ನದಂಗಡಿ ದರೋಡೆ ಕೇಸ್; ಖದೀಮರ ಸುಳಿವು ಪತ್ತೆ – ಇಬ್ಬರು ಅಂದರ್

    ಕಲಬುರಗಿ: ಇಂಥದ್ದೇ ಚಿನ್ನದಂಗಡಿಯಲ್ಲಿ ದರೋಡೆ ನಡೆಸುವಂತೆ ಸುಪಾರಿ ನೀಡಿದ್ದ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯ ಬೆನ್ನು ಬಿದ್ದಿರುವ ಪೊಲೀಸರು, ಇದೀಗ ಮುಂಬೈ (Mumbai) ನಗರದಲ್ಲಿ ಅವಿತು ಕುಳಿತಿರುವ ದರೋಡೆಕೋರರ ಸುಳಿವು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

    ಚಿನ್ನಾಭರಣ ಅಂಗಡಿ ಮಾಲೀಕನ ಹಣೆಗೆ ಗನ್ ಹಿಡಿದು ಬೆದರಿಕೆ ಹಾಕಿ, ಆತನ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿದ್ದ ದರೋಡೆಕೋರರ ಬೆನ್ನು ಹತ್ತಿರುವ ಕಲಬುರಗಿ ಪೊಲೀಸರು (Kalaburagi Police) ಈಗಾಗಲೇ ಮುಂಬೈ ತಲುಪಿದ್ದು, ಕಳ್ಳರು ಎಲ್ಲಿ ಅವಿತು ಕುಳಿತಿದ್ದಾರೆ ಎಂಬ ಸುಳಿವು ಸಹ ಪೊಲೀಸರಿಗೆ ಲಭಿಸಿದೆ. ಇದನ್ನೂ ಓದಿ: ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ನುಗ್ಗಿ ದರೋಡೆ – ಗನ್ ತೋರಿಸಿ 3 ಕೆಜಿ ಚಿನ್ನಾಭರಣ ದೋಚಿದ ಗ್ಯಾಂಗ್

    ದರೋಡೆಕೋರರ ಬಳಿ ಗನ್ ಇರುವ ಕಾರಣಕ್ಕಾಗಿ ಪಕ್ಕಾ ಯೋಜನೆ ರೂಪಿಸಿಯೇ ದರೋಡೆಕೋರರನ್ನು ಹೆಡೆಮುರಿ ಕಟ್ಟಿ ಕಲಬುರಗಿಗೆ ತರಲು ಪೊಲೀಸರು ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ್ರಿಯಾಂಕ್‌ ಖರ್ಗೆ ಆಪ್ತನ ಮೇಲೆ ಮಾದಕದ್ರವ್ಯ ಮಾರಾಟ ಆರೋಪ – ಬಂಧನದ ಬೆನ್ನಲ್ಲೇ ಪಕ್ಷದಿಂದ ಉಚ್ಛಾಟನೆ

    ಕಲಬುರಗಿಯ ಸರಾಫ್ ಬಜಾರ್ (Saraf Bazar) ಪ್ರದೇಶದಲ್ಲಿರುವ ಇಂಥದ್ದೇ ಚಿನ್ನಾಭರಣದ ಅಂಗಡಿಗೆ (Gold Shop) ನುಗ್ಗಿ, ದರೋಡೆ ಮಾಡುವಂತೆ ಸುಪಾರಿ ನೀಡಿರುವ ಕುತೂಹಲಕಾರಿ ಅಂಶ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಹೀಗೆ ಸುಪಾರಿ ನೀಡಿರುವ ವ್ಯಕ್ತಿಯ ಬೆನ್ನು ಬಿದ್ದಿರುವ ಪೊಲೀಸರು ಆತನ ಬಂಧನಕ್ಕೆ ಯೋಜನೆ ರೂಪಿಸುವಷ್ಟರಲ್ಲಿ ಆತ ತೆಲಂಗಾಣದ ಮೂಲಕ ಪಶ್ಚಿಮ ಬಂಗಾಳಕ್ಕೆ ಕಾಲ್ಕಿತ್ತಿದ್ದಾನೆ ಎಂಬ ಅಂಶ ಸದ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಡಿವೋರ್ಸ್‌ ಕೇಸ್‌| ಸಂಗಾತಿ ರೆಕಾರ್ಡ್ ಮಾಡಿದ ಕರೆಯನ್ನು ಸಾಕ್ಷಿಯಾಗಿ ಪರಿಗಣಿಸಬಹುದು – ಸುಪ್ರೀಂ

    ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ವರು ದರೋಡೆಕೋರರ ಜೊತೆ ಸಂಪರ್ಕದಲ್ಲಿದ್ದ ಹೈದರಾಬಾದ್ ಮೂಲದ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಈ ಇಬ್ಬರೂ ದರೋಡೆಕೋರರು ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡುವ ಹೊಣೆಗಾರಿಕೆ ಹೊತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  • ಕಲಬುರಗಿ| ಎಸ್‌ಬಿಐ ಎಟಿಎಂ ದರೋಡೆಕೋರರ ಕಾಲಿಗೆ ಪೊಲೀಸರ ಗುಂಡೇಟು

    ಕಲಬುರಗಿ| ಎಸ್‌ಬಿಐ ಎಟಿಎಂ ದರೋಡೆಕೋರರ ಕಾಲಿಗೆ ಪೊಲೀಸರ ಗುಂಡೇಟು

    – ಗ್ಯಾಸ್ ಕಟರ್ ಬಳಸಿ ಎಟಿಎಂನಿಂದ 18 ಲಕ್ಷ ರೂ. ದರೋಡೆ

    ಕಲಬುರಗಿ: ದರೋಡೆಕೋರರ ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಆರೋಪಿಗಳ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ.

    ಆರೋಪಿಗಳು ಕಲಬುರಗಿ ಜಿಲ್ಲೆಯ ರಾಮನಗರ (Ramanagara) ಬಡಾವಣೆಯ ಎಸ್‌ಬಿಐ ಎಟಿಎಂನಿಂದ (SBI ATM) 18 ಲಕ್ಷ ರೂ. ಹಣವನ್ನು ದೋಚಿದ್ದರು. ದರೋಡೆಕೋರರನ್ನು ಪೊಲೀಸರು ಬಂಧಿಸಲು ಹೋದಾಗ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಹರಿಯಾಣ ಮೂಲದ ಆರೋಪಿಗಳಾದ ತಸ್ಲಿಂ ಹಾಗೂ ಶರೀಫ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ಸಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ್ದ ಮೇಜಿಂದ ಪಾಕ್ ಧ್ವಜ ತೆಗೆದು ಹಾಕಿದ ಭಾರತ

    ಘಟನೆಯಲ್ಲಿ ಪಿಎಸ್‌ಐ ಬಸವರಾಜ್ ಹಾಗೂ ಇಬ್ಬರು ಪೊಲೀಸರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್‌ ಟಿವಿಯ ‘ವಿದ್ಯಾಪೀಠ’ ಶೈಕ್ಷಣಿಕ ಮೇಳಕ್ಕೆ ಅದ್ದೂರಿ ಚಾಲನೆ

    ಎಟಿಎಂ ದರೋಡೆಕೋರರ ಮೇಲೆ ಪೊಲೀಸರ ಫೈಯರಿಂಗ್ ಪ್ರಕರಣದ ಬಗ್ಗೆ ಕಲಬುರಗಿಯಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಮಾಧ್ಯದವರೊಂದಿಗೆ ಮಾತನಾಡಿದರು. ತಸ್ಲಿಂ ಹಾಗೂ ಶರೀಫ್ ಏ. 9 ರಂದು ಎಸ್‌ಬಿಐ ಎಟಿಎಂ ದರೋಡೆ ಪ್ರಕರಣದ ಆರೋಪಿಗಳು. ಬೇಲೂರು ಕ್ರಾಸ್ ಬಳಿ ಆರೋಪಿಗಳನ್ನು ಬಂಧಿಸಲು ತೆರಳಿದ್ದ ವೇಳೆ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಸಬ್ ಅರ್ಬನ್ ಠಾಣೆ ಸಿಪಿಐ ಸಂತೋಷ್ ತಟ್ಟೆಪಲ್ಲಿ ಹಾಗೂ ಪಿಎಸ್‌ಐ ಬಸವರಾಜ್ ಅವರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದರು. ಇದನ್ನೂ ಓದಿ: ಪಹಲ್ಗಾಮ್ ದಾಳಿಕೋರನ ಮನೆ ಧ್ವಂಸ – 24 ಗಂಟೆಗಳಲ್ಲಿ 3ನೇ ಮನೆ ಉಡೀಸ್

    ದರೋಡೆ ವೇಳೆ ಎಟಿಎಂ ಮುಂಭಾಗದಿಂದ ಈ ಬಿಳಿಬಣ್ಣದ ಐ20 ಕಾರು ಹಾದು ಹೋಗಿತ್ತು. ಇದರ ಆಧಾರದ ಮೇಲೆ ಪೊಲೀಸರು ತನಿಖೆಗಿಳಿದಿದ್ದರು. ದರೋಡೆಕೋರರ ಮೇಲೆ ಫೈಯರಿಂಗ್ ಮಾಡಿದ್ದ ಸಂದರ್ಭ ಐ20 ಕಾರಿನಲ್ಲಿ ನಾಲ್ವರು ಇದ್ದರು. ಪೊಲೀಸರು ಇಬ್ಬರನ್ನ ವಶಕ್ಕೆ ಪಡೆದು ಗಾಯಾಳು ತಸ್ಲಿಂ ಮತ್ತು ಶರೀಫ್‌ನನ್ನ ಜಿಮ್ಸ್ ಟ್ರಾಮಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಪಿಎಸ್‌ಐ ಬಸವರಾಜ್ ಮತ್ತು ಮೂವರು ಕಾನ್ಸ್ಟೇಬಲ್‌ಗಳಿಗೆ ಗಾಯಗಳಾಗಿವೆ ಎಂದು ಹೇಳಿದರು.

    ಬಂಧಿತ ಆರೋಪಿಗಳಾದ ತಸ್ಲಿಂ ವಿರುದ್ಧ 8 ಪ್ರಕರಣಗಳು ಹಾಗೂ ಶರೀಫ್ ವಿರುದ್ಧ 3 ಪ್ರಕರಣ ದಾಖಲಾಗಿವೆ. ಈ ಗ್ಯಾಂಗ್ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಎಟಿಎಂಗಳನ್ನೇ ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದರು.

  • 28 ವಿವಿಗಳ ನಕಲಿ ಅಂಕಪಟ್ಟಿ ತಯಾರಿಕಾ ಜಾಲ ಪತ್ತೆ – ದೆಹಲಿ ಮೂಲದ ಪ್ರಮುಖ ಆರೋಪಿ ಅರೆಸ್ಟ್‌

    28 ವಿವಿಗಳ ನಕಲಿ ಅಂಕಪಟ್ಟಿ ತಯಾರಿಕಾ ಜಾಲ ಪತ್ತೆ – ದೆಹಲಿ ಮೂಲದ ಪ್ರಮುಖ ಆರೋಪಿ ಅರೆಸ್ಟ್‌

    – ಮದ್ವೆಯಲ್ಲಿ ಮರ್ಯಾದೆ ಕಾಪಾಡಿಕೊಳ್ಳಲು ನಕಲಿ ಅಂಕಪಟ್ಟಿ
    – ವಾಟ್ಸಪ್‌ನಲ್ಲೇ ಡೀಲ್‌ ಕುದುರಿಸುತ್ತಿದ್ದ ಗ್ಯಾಂಗ್‌
    – 422 ನಕಲಿ ಅಂಕಪಟ್ಟಿ ವಶಕ್ಕೆ

    ಕಲಬುರಗಿ: ಇಲ್ಲಿನ ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆಯಿಂದ ದೇಶದ ವಿವಿಧ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಕಲಬುರಗಿ ನಗರ ಪೊಲೀಸರು (Kalaburagi City Police) ಯಶಸ್ವಿಯಾಗಿದ್ದಾರೆ.

    ದೇಶದ ವಿವಿಧ 28 ವಿಶ್ವವಿದ್ಯಾಲಯಗಳ (Universities) ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದ ದೆಹಲಿ ಮೂಲದ ರಾಜೀವ್ ಸಿಂಗ್ ಅರೋರಾ ಎಂಬ ಅಂತರರಾಜ್ಯ ಆರೋಪಿಯನ್ನು ಬಂಧಿಸಿದ್ದು, ದೆಹಲಿಯಿಂದ ರಾಜ್ಯಕ್ಕೆ ಸರಬರಾಜು ಆಗುತ್ತಿದ್ದ ನಕಲಿ ಅಂಕಪಟ್ಟಿಗಳನ್ನು ವಶಕ್ಕೆ ಪಡೆಯಲಾಗಿದೆ.  ಇದನ್ನೂ ಓದಿ: ರಸ್ತೆ ದಾಟುವಾಗ ಬಿಎಂಟಿಸಿ ಬಸ್ ಡಿಕ್ಕಿ – ಮಹಿಳೆ ಸಾವು

    28 ವಿಶ್ವವಿದ್ಯಾಲಯಗಳ 522 ನಕಲಿ ಮಾರ್ಕ್ಸ್ ಕಾರ್ಡ್ (Fake Marks Card), 1,626 ಖಾಲಿ ಮಾರ್ಕ್ಸ್ ಕಾರ್ಡ್, 403 ಹೋಲೊಗ್ರಾಮ್, 122 ಸೀಲ್, 80 ಬ್ಯಾಂಕ್ ಪಾಸ್‌ಬುಕ್‌, 123 ನಕಲಿ ಐಡಿ ಕಾರ್ಡ್, 32 ಮೊಬೈಲ್ ಫೋನ್, ಲ್ಯಾಪ್‌ಟಾಪ್, ಪೇಮೆಂಟ್‌ಗಾಗಿ ಬಳಸುತ್ತಿದ್ದ ಸ್ವೈಪಿಂಗ್ ಮಷೀನ್‌ ಸೇರಿ 1,20,000 ರೂ.ಗಳ ನಗದು ಹಣ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಮಾಹಿತಿ ನೀಡಿದರು. ಇದನ್ನೂ ಓದಿ: ʻಕೈʼಮುಖಂಡನ ಹತ್ಯೆ ಕೇಸ್‌ – ಶಿವಮೊಗ್ಗದಿಂದ ಗಡಿಪಾರಾಗಿದ್ದ ಆರೋಪಿಗಳಿಗೆ ಸುಪಾರಿ ಕೊಟ್ಟು ಕೊಲೆ

    ಈ ಕುರಿತು ಗುರುವಾರ ನಗರದ ಪೊಲೀಸ್ ಆಯುಕ್ತಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆನ್‌ ಪೊಲೀಸ್ ಠಾಣೆಯಲ್ಲಿ ನಕಲಿ ಅಂಕಪಟ್ಟಿ ಮಾರಾಟದ ಬಗ್ಗೆ ದೂರು ದಾಖಲಾಗಿತ್ತು. ನಗರದ ಏಷ್ಯನ್‌ ಮಾಲ್‌ನಲ್ಲಿ ʻಐ ಫಾರ್ ಯು ಗ್ಲ್ಯಾಮ್​​​ ಚಾಯಿಸ್ʼ ಹೆಸರಿನ ಬಟ್ಟೆ ಅಂಗಡಿಯಲ್ಲಿ ಎಲೆಜೆನ್ಸ್​​​​​​​​​​​ ಟೆಕ್ನಾಲಜಿ ಮತ್ತು ಪ್ಲೇಸ್​​​​​ಮೆಂಟ್​​ ​ಬ್ಯೂರೋ ಎಂಬ ಹೆಸರಲ್ಲಿ ನಕಲಿ ಅಂಕಪಟ್ಟಿ ತಯಾರು ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ತಾರ್​​​ಫೈಲ್​ ನಿವಾಸಿ ಮೊಹ್ಮದ್​​​ ಖಾನ್​​​​​ ನನ್ನು ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಎಂಬ ಆರೋಪದಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದ ಜಾಡು ಬೆನ್ನುಹತ್ತಿದ ಪೊಲೀಸರು ಇದೀಗ ಇಡಿ ಜಾಲವನ್ನೇ ಪತ್ತೆ ಮಾಡಿ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ನಕಲಿ ಅಂಕಪಟ್ಟಿ ತಯಾರಿಕೆ ಪ್ರಕರಣದಲ್ಲಿ ದಾವಣಗೆರೆಯ ಹರಿಪ್ರಸಾದ್ ಹಾಗೂ ಬೆಂಗಳೂರಿನ ಜಗದೀಶ್ ಮಧ್ಯವರ್ಥಿಗಳಾಗಿ ಕೆಲಸ ಮಾಡುತ್ತಿದ್ದರು. ಇವರ ಮೂಲಕ ಪ್ರಕರಣದ ಪ್ರಮುಖ ಆರೋಪಿ ದೆಹಲಿಯ ರಾಜೀವ್​​​ ಸಿಂಗ್​ ಅರೋರಾ ನನ್ನು ಪತ್ತೆ ಹಚ್ಚಿ, ಈತನನ್ನು ದೆಹಲಿಯಲ್ಲಿ ಬಂಧಿಸಿ ಕಲಬುರಗಿಗೆ ಕರೆತರಲಾಗಿದೆ. ಕೇವಲ 15-20 ಸಾವಿರ ರೂ.ಗಳಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿಇ, ಬಿ.ಟೆಕ್​ ಇನ್ನಿತರೆ ಪದವಿಯ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಇನ್ನೂ ಯಾರ‍್ಯಾರು ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತ ಡಾ. ಶರಣಪ್ಪ ತಿಳಿಸಿದರು.

    ಇನ್ನೂ, ಅಂತರ ರಾಜ್ಯ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು ಪ್ರಶಂಸನಾ ಪತ್ರ ನೀಡಿ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ನಾಯ್ಕ್, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು. ಇದನ್ನೂ ಓದಿ: ನೇಪಾಳದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪನ – ಭಾರತ, ಚೀನಾ ಗಡಿಯಲ್ಲೂ ಕಂಪಿಸಿದ ಭೂಮಿ

    ವಾಟ್ಸಪ್‌ನಲ್ಲಿ ಆರ್ಡರ್‌ ಆರ್ಡರ್:
    ಕಲಬುರಗಿಯ ಅಭ್ಯರ್ಥಿಗಳಿಗೆ ನಕಲಿ ಅಂಕಪಟ್ಟಿ ಬೇಕಾದರೆ, ಅವರು ರಾಜೀವ್ ಸಿಂಗ್ ಅರೋರಾನನ್ನು ಸಂಪರ್ಕಿಸಲು ಸಾಧ್ಯವಾಗುತ್ತಿರಲಿಲ್ಲ. ನೇರವಾಗಿ ವಾಸ್ಟಪ್‌ ಮೂಲಕವೇ ನಕಲಿ ಅಂಕಪಟ್ಟಿಗಾಗಿ ಆರ್ಡರ್ ನೀಡಬೇಕಾಗಿತ್ತು. ತಯಾರಾದ ಬಳಿಕ ವಾಟ್ಸಪ್‌ ಚಾಟ್ ಎಲ್ಲವೂ ಡಿಲೀಟ್ ಮಾಡುತ್ತಿದ್ದ, ಯಾವುದೇ ದಾಖಲೆಗಳನ್ನು ಉಳಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ, ಯಾರ‍್ಯಾರು ಅಂಕಪಟ್ಟಿ ಮಾಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ತನಿಖೆ ಮೂಲಕ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

    ಮದುವೆ, ಖಾಸಗಿ ಕೆಲಸಕ್ಕೆ ಅಂಕಪಟ್ಟಿ ಬಳಕೆ:
    ರಾಜೀವ್ ಸಿಂಗ್ ಅರೋರಾ ಬಳಿ ಯಾರೆಲ್ಲ ನಕಲಿ ಅಂಕಪಟ್ಟಿ ಪಡೆದು ಕೊಂಡಿದ್ದಾರೋ ಅದರಲ್ಲಿ ಬಹುತೇಕರು ಮದುವೆಯಲ್ಲಿ ಮರ್ಯಾದೆ ಕಾಪಾಡಿಕೊಳ್ಳಲು ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಪಡೆದುಕೊಳ್ಳಲು ಅಂಕಪಟ್ಟಿ ಬಳಸಿಕೊಂಡಿದ್ದಾರೆ ಎನ್ನುವ ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ. ಅಂಕಪಟ್ಟಿ ಬಳಸಿ ಸರಕಾರಿ ನೌಕರಿ ಪಡೆದಿರುವ ಬಗ್ಗೆ ಮಾಹಿತಿ ತಿಳಿದಿಲ್ಲ. ತನಿಖೆ ನಡೆಯುತ್ತಿದ್ದು, ಶೀಘ್ರವೇ ಎಲ್ಲವೂ ಬಹಿರಂಗಗೊಳ್ಳಲಿದೆ. ಸದ್ಯ ಆರ್ಡರ್ ಕೊಟ್ಟವರು ಹಾಗೂ ಆರ್ಡರ್ ಕೊಟ್ಟು ಅಂಕಪಟ್ಟಿ ತೆಗೆದುಕೊಂಡು ಹೋಗದವರ ನಕಲಿ ಅಂಕಪಟ್ಟಿ ಮಾತ್ರ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ತಿಳಿಸಿದರು.

    ಅಸ್ತಿತ್ವದಲ್ಲಿ ಇರದ ವಿವಿಯ ಹೆಸರಲ್ಲಿ ಅಂಕಪಟ್ಟಿ:
    ನಕಲಿ ಅಂಕಪಟ್ಟಿ ತಯಾರಿಕ ಜಾಲವು ದೇಶದ ಸುಮಾರು 28 ವಿಶ್ವವಿದ್ಯಾಲಯಗಳ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡಿದ್ದು ಬೆಳಕಿಗೆ ಬಂದಿದೆ. ಇನ್ನು ಕೆಲವು ವಿಶ್ವವಿದ್ಯಾಲಯಗಳು ಅಸ್ತಿತ್ವದಲ್ಲೇ ಇಲ್ಲದಿದ್ದರೂ ಅಂತಹ ವಿವಿಗಳ ಹೆಸರಲ್ಲೂ ಸಹ ರಾಜೀವ್ ಸಿಂಗ್ ಅಂಕಪಟ್ಟಿ ನೀಡಿದ್ದಾನೆ. ಮಹಾರಾಷ್ಟ್ರದ ಸೌತ್ ವೆಸ್ಟ್ ಯೂನಿವರ್ಸಿಟಿ ಅಸ್ತಿತ್ವದಲ್ಲೇ ಇಲ್ಲ. ಆದರೂ ಇದರ ಹೆಸರಲ್ಲಿ ಅನೇಕರಿಗೆ ನಕಲಿ ಅಂಕಪಟ್ಟಿ ನೀಡಲಾಗಿದೆ.

    ಕಳೆದ 7-8 ವರ್ಷಗಳಿಂದ ದೇಶದ 28ಕ್ಕೂ ಹೆಚ್ಚು ವಿವಿಗಳ ಹೆಸರಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ ಹಚ್ಚಿದ್ದು, ಬೇರೆ ಬೇರೆ ವಿಶ್ವವಿದ್ಯಾಲಯಗಳ ಹೆಲೋಗ್ರಾಮ್ ಗಳನ್ನು ಆನ್ಲೈನ್ ಮೂಲಕವೇ ಪಡೆದು ಅಂಕಪಟ್ಟಿ ತಯಾರಿಸುತ್ತಿದ್ದರು. ಇಲ್ಲಿವರೆಗೂ ಕೋಟಿಗೊ ಅಧಿಕ ವಹಿವಾಟು ಪ್ರಮುಖ ಆರೋಪಿ ರಾಜೀವ್ ಸಿಂಗ್ ಅರೋರಾ ನಡೆಸಿದ್ದಾನೆ. ತನಿಖೆ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ.

  • ಲಾರಿ-ಟ್ಯಾಂಕರ್ ನಡುವೆ ಭೀಕರ ಅಪಘಾತ – ಸ್ಥಳದಲ್ಲೇ ಓರ್ವ ಸಾವು

    ಲಾರಿ-ಟ್ಯಾಂಕರ್ ನಡುವೆ ಭೀಕರ ಅಪಘಾತ – ಸ್ಥಳದಲ್ಲೇ ಓರ್ವ ಸಾವು

    ಕಲಬುರಗಿ: ಲಾರಿ ಹಾಗೂ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಟ್ಯಾಂಕರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ನಸುಕಿನ ಜಾವ ನಡೆದಿದೆ.

    ಕಲಬುರಗಿ ತಾಲೂಕಿನ ಗೊಬ್ಬೂರ ಕ್ರಾಸ್ ಬಳಿ ಘಟನೆ ನಡೆದಿದೆ. ಚಾಲಕ ಅನಿಲ್ (22) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಕೊಡಗು | ಗ್ಯಾಸ್ ಬಂಕ್‍ನಲ್ಲಿ ಅನಿಲ ಸೋರಿಕೆ – 10 ಕಿ.ಮೀ ದೂರದ ನಿವಾಸಿಗಳಿಗೂ ಕಾಡಿದ ಆತಂಕ

    ಅಫಜಲಪುರದಿಂದ ಕಲಬುರಗಿ ಕಡೆ ಬರುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಅಪಘಾತ ನಡೆದಿದೆ. ಇದನ್ನೂ ಓದಿ: ಪ್ಲೀಸ್ ಪತ್ತೆಮಾಡಿ – ಶಾಲೆಗೆ ಹೋಗುವುದಾಗಿ ಹೇಳಿ ತೆರಳಿದ್ದ ಮೂವರು ಮಕ್ಕಳು ನಾಪತ್ತೆ

    ಲಾರಿ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ದೇವಲಗಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರೈತರಿಗೆ ಇಂಧನ ಇಲಾಖೆಯಿಂದ ಸಿಹಿ ಸುದ್ದಿ – 2.5 ಲಕ್ಷ ಅಕ್ರಮ ಪಂಪ್ ಸೆಟ್‌ಗಳು ಸಕ್ರಮ

  • ಪ್ರೀತಿಸುವಂತೆ ಯುವಕನಿಂದ ಕಿರುಕುಳ – ಅಪ್ರಾಪ್ತೆ ಆತ್ಮಹತ್ಯೆ, ಆರೋಪಿ ಬಂಧನ

    ಪ್ರೀತಿಸುವಂತೆ ಯುವಕನಿಂದ ಕಿರುಕುಳ – ಅಪ್ರಾಪ್ತೆ ಆತ್ಮಹತ್ಯೆ, ಆರೋಪಿ ಬಂಧನ

    ಕಲಬುರಗಿ: ಮುಸ್ಲಿಂ ಯುವಕನ (Muslim Youth) ಕಿರುಕುಳ ತಾಳಲಾರದೇ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಜೇವರ್ಗಿ ತಾಲೂಕಿನಲ್ಲಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 14 ವರ್ಷದ ಬಾಲಕಿಗೆ ಕಳೆದ ಹಲವು ದಿನಗಳಿಂದ ಆಟೋ ಚಾಲಕ ಮೆಹಬೂಬ್ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ, ಆತನ ಕಿರುಕುಳ ತಾಳಲಾರದೇ ನೇಣುಬಿಗಿದುಕೊಂಡು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನೂ ಬಾಲಕಿ ಸಾವಿಗೆ ನ್ಯಾಯ ಸಿಗಬೇಕು ಎಂದು ಘಟನೆಯನ್ನು ಖಂಡಿಸಿ ಜೇವರ್ಗಿ ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದಿಂದ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಗಿದ್ದು, ಆರೋಪಿಯನ್ನು ಬಂಧಿಸುವಂತೆ ಪ್ರತಿಭಟನಾಕಾರರು ಆಗ್ರಹ ಮಾಡಿದ್ದು, ಈ ಕುರಿತು ಜೇವರ್ಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಆರೋಪಿ ಮೆಹಬೂಬ್ ಬಂಧನ:
    ಹಲವು ದಿನಗಳಿಂದ ಪ್ರೀತಿ ಮಾಡುವಂತೆ ಯುವತಿಗೆ ಕಿರುಕುಳ ನೀಡಿದ ಆರೋಪಿ ಮೆಹಬೂಬ್, ನನ್ನು ಪೋಲಿಸರು ಇದೀಗ ಬಂಧಿಸಿದ್ದಾರೆ. ಯುವಕನ ಕಿರುಕುಳದ ಕಾರಣಕ್ಕೆ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ.

  • ವೈಯಕ್ತಿಕ ದ್ವೇಷದ ಶಂಕೆ – ರೌಡಿಶೀಟರ್‌ ಬರ್ಬರ ಹತ್ಯೆ

    ವೈಯಕ್ತಿಕ ದ್ವೇಷದ ಶಂಕೆ – ರೌಡಿಶೀಟರ್‌ ಬರ್ಬರ ಹತ್ಯೆ

    ಕಲಬುರಗಿ:‌ ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ (Kalaburagi) ನಗರದ ಹೊರವಲಯದ ಮಾಲಗತ್ತಿ ಕ್ರಾಸ್ ಬಳಿ ನಡೆದಿದೆ.

    ಖಲೀಲ್ ಅಹಮದ್ (38) ಹತ್ಯೆಗೀಡಾದ ರೌಡಿಶೀಟರ್. ವೈಕ್ತಿಯ ದ್ವೇಷದ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೋಸ್ಟ್ ವಾಂಟೆಡ್ ಆಗಿದ್ದ ಖಲೀಲ್‌, ಹಲವು ವರ್ಷಗಳಿಂದ ಪೊಲೀಸರಿಗೆ ಬೇಕಾಗಿದ್ದ ಎನ್ನಲಾಗಿದೆ. ಇದನ್ನೂ ಓದಿ: ಹೂದೋಟಕ್ಕೆ ದೃಷ್ಟಿ ಆಗದಂತೆ ನಟಿ ಶ್ರೀಲೀಲಾ ಫೋಟೋ ಹಾಕಿದ ರೈತ!

    ಇನ್ನೂ ಖಲೀಲ್‌ ಸ್ನೇಹಿತ ಅಲಿಲ್ ಪಟೇಲ್ ಮೇಲೂ ಹಲ್ಲೆ ನಡೆದಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬದುಕಿನ ಯಾತ್ರೆ ಮುಗಿಸಿದ ಎಸ್‌.ಎಂ ಕೃಷ್ಣ ಪಂಚಭೂತಗಳಲ್ಲಿ ಲೀನ

  • ಅತ್ಯಾಚಾರ ಖಂಡಿಸಿ ಪ್ರತಿಭಟನೆ – ಕಿಡಿಗೇಡಿಗಳಿಂದ ಕಲ್ಲು ತೂರಾಟ!

    ಅತ್ಯಾಚಾರ ಖಂಡಿಸಿ ಪ್ರತಿಭಟನೆ – ಕಿಡಿಗೇಡಿಗಳಿಂದ ಕಲ್ಲು ತೂರಾಟ!

    ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ, ಬಂಜಾರಾ ಸಮುದಾಯ ಹಾಗೂ ಸಕಲ ಹಿಂದೂ ಸಮಾಜದ ವತಿಯಿಂದ ಕರೆ ನೀಡಲಾದ ಪ್ರತಿಭಟನೆಯಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ (Stone Pelting) ನಡೆಸಿದ್ದಾರೆ.

    ನಗರದ ಬಂಜಾರಾ ಸಮುದಾಯದ ಭವನದಿಂದ ಪಾದಯಾತ್ರೆ ಮೂಲಕ ಡಿಸಿ ಕಚೇರಿವರೆಗೆ ಆಗಮಿಸಿದ ಪ್ರತಿಭಟನಾಕಾರರು, ವೇಳೆಯಲ್ಲಿ ಇಬ್ಬರು ಕಿಡಿಗೇಡಿಗಳು ಡಿಸಿ ಕಚೇರಿ ಮುಂಭಾಗದಲ್ಲಿದ್ದ ಅಂಗಡಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಕಿಡಿಗೇಡಿಗಳ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ʻಒಂದು ರಾಷ್ಟ್ರ ಒಂದು ಚುನಾವಣೆʼ ಸನ್ನಿಹಿತನಾ? – ಈ ಅಧಿವೇಶನದಲ್ಲೇ ಮಸೂದೆ ಮಂಡನೆಗೆ ಪ್ಲಾನ್!

    ಇನ್ನೂ ಪ್ರತಿಭಟನೆ ವೇಳೆ ಅಲ್ಲೆ ಡಿಸಿ ಕಚೇರಿಯ ಪಕ್ಕದಲ್ಲಿದ, ಪ್ರತಿಭಟನೆಯಲ್ಲಿ ಭಾಗಿಯಾಗಲು ಬಂದಿದ್ದ ಅವರದ್ದೆ ಕಾರಿನ ಮೇಲೆ ಕೂಡ ಕಲ್ಲು ತೂರಾಟ ಮಾಡಲಾಗಿದ್ದು, ಕಾರಿನ ಗಾಜು ಕೂಡ ಪುಡಿಪುಡಿಯಾಗಿದೆ.

    ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ ವಿಷಯ ಆಂದೋಲಾ ಶ್ರೀಗಳಿಗೆ ತಿಳಿದಾಗ, ನಾವೇ ನಮ್ಮ ಹೋರಾಟಗಾರರ ಮೇಲೆ ಕಲ್ಲು ತೂರಾಟ ಮಾಡಿದ್ದು ಎಷ್ಟು ಸರಿ ಎಂಬುದು ನೀವು ಅರ್ಥ ಮಾಡಿಕೊಂಡು ಮುಂದೆ ನಡೆಯರಿ ಎಂದು ತಿಳಿ ಹೇಳಿದರು. ಇದನ್ನೂ ಓದಿ: New Delhi | ಬಡ ವ್ಯಾಪಾರಿಗಳ ತಳ್ಳುಗಾಡಿಗಳ ಮೇಲೆ ಕೇಸರಿ ಧ್ವಜ ನೆಟ್ಟ ಬಿಜೆಪಿ ಕೌನ್ಸಿಲರ್!