Tag: ಕರ್ಫ್ಯೂ

  • ಅನಗತ್ಯ ಓಡಾಟ – ಆಟೋ, ಬೈಕ್ ಸೇರಿ 20 ಕ್ಕೂ ಹೆಚ್ಚು ವಾಹನ ಪೊಲೀಸ್ ವಶಕ್ಕೆ

    ಅನಗತ್ಯ ಓಡಾಟ – ಆಟೋ, ಬೈಕ್ ಸೇರಿ 20 ಕ್ಕೂ ಹೆಚ್ಚು ವಾಹನ ಪೊಲೀಸ್ ವಶಕ್ಕೆ

    ಕೋಲಾರ: ಮಹಾಮಾರಿ ಕೊರೊನಾ 2ನೇ ಅಲೆ ತಡೆಗಟ್ಟುವ ಹಿನ್ನೆಲೆ ರಾಜ್ಯ ಸರ್ಕಾರ ಹೊರಡಿಸಿರುವ ಜನತಾ ಕರ್ಫ್ಯೂಗೆ ಕೋಲಾರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಧ್ಯೆ 10 ಗಂಟೆ ಬಳಿಕ ಅನಗತ್ಯವಾಗಿ ಸಂಚಾರ ಮಾಡುತ್ತಿದ್ದ ಆಟೋ ಮತ್ತು ಬೈಕ್‍ಗಳನ್ನು ವಶಕ್ಕೆ ಪಡೆಯುವ ಮೂಲಕ ಸವಾರರಿಗೆ ಪೊಲೀಸರು ಚುರುಕು ಮುಟ್ಟಿಸಿದ್ದಾರೆ.

    11 ಗಂಟೆಯಾದರೂ ಕೂಡ ರಸ್ತೆಯಲ್ಲಿ ಬೇಕಾ ಬಿಟ್ಟಿ ಓಡಾಟ ಮಾಡಿದ 20 ಕ್ಕೂ ಹೆಚ್ಚು ಬೈಕ್, ಆಟೋ ಮತ್ತು ಕಾರುಗಳನ್ನು ವಶಕ್ಕೆ ಪಡೆದಿರುವ ಕೋಲಾರ ನಗರದ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ಪ್ರತಿ ವಾಹನವನ್ನು ತಪಾಸಣೆ ಮಾಡಿ ಕಳುಹಿಸುತ್ತಿದ್ದ ಪೊಲೀಸರು ಅನಗತ್ಯವಾಗಿ ಓಡಾಟ ಮಾಡುವ ವಾಹನ ಸವಾರರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

    ಇದು ಮಾತ್ರವಲ್ಲದೆ ಕೋಲಾರ ಪೊಲೀಸರಿಂದ ಕಟ್ಟು ನಿಟ್ಟಿನ ಜನತಾ ಕರ್ಫ್ಯೂ ಜಾರಿ ಮಾಡಲಾಗುತ್ತಿದ್ದು, ಈ ಮಧ್ಯೆ ಕೋಲಾರದ ಕೆಜಿಎಫ್‍ನಲ್ಲಿ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ ಕೆಜಿಎಫ್ ಪೊಲೀಸರು, ಅನಗತ್ಯವಾಗಿ ಸಂಚಾರ ಮಾಡುತ್ತಿದ್ದ 10 ಕ್ಕೂ ಹೆಚ್ಚು ಆಟೋಗಳನ್ನು ವಶಕ್ಕೆ ಪಡೆದಿದ್ದಾರೆ. 11 ಗಂಟೆಯಾದ್ರು ಓಡಾಟ, ಪ್ರಯಾಣಿಕರನ್ನು ಕರೆ ತರುತ್ತಿದ್ದ ಆಟೋಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ದಂಡ ಕಟ್ಟಿ ತೆರಳುವಂತೆ ಅಟೋ ಚಾಲಕರಿಗೆ ಸೂಚಿಸಿದ್ದಾರೆ.

  • ಕೊರೊನಾ ನಿಯಮ ಪಾಲಿಸುವಂತೆ ಕೈಮುಗಿದು ಕೇಳಿದ ಪೌರ ಕಾರ್ಮಿಕರು

    ಕೊರೊನಾ ನಿಯಮ ಪಾಲಿಸುವಂತೆ ಕೈಮುಗಿದು ಕೇಳಿದ ಪೌರ ಕಾರ್ಮಿಕರು

    ಚಿಕ್ಕಮಗಳೂರು: ಕೃಷಿ ಮಾರುಕಟ್ಟೆಯಲ್ಲಿ ಇದ್ದ ಜನರನ್ನ ಕಂಡು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಜನರಲ್ಲಿ ಸಾಮಾಜಿಕ ಅಂತರ ಕಾಪಾಡಿ ಮುಖಕ್ಕೆ ಮಾಸ್ಕ್ ಧರಿಸುವಂತೆ ಕೈಮುಗಿದು ಪ್ರಾರ್ಥನೆ ಮಾಡಿದ್ದಾರೆ.

    ಜನತಾ  ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ ಬೆಳಗ್ಗೆ 10ರ ನಂತರ ಯಾವುದೇ ವಸ್ತುಗಳು ಸಿಗುವುದಿಲ್ಲ ಎಂದು ತರೀಕೆರೆ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳ್ಳಂಬೆಳಗ್ಗೆಯೇ ನೂರಾರು ಜನ ವ್ಯಾಪಾರ-ವಹಿವಾಟಿನಲ್ಲಿ ತೊಡಗಿದ್ದರು. ಅಲ್ಲಿದ್ದವರಲ್ಲಿ ಬಹುತೇಕರು ಮುಖಕ್ಕೆ ಮಾಸ್ಕ್ ಹಾಕಿರಲಿಲ್ಲ. ಸಾಮಾಜಿಕ ಅಂತರದ ನಿಯಮವನ್ನೂ ಸಂಪೂರ್ಣವಾಗಿ ಗಾಳಿಗೆ ತೂರಿದ್ದರು.

    ಪಟ್ಟಣ ಪಂಚಾಯಿತಿಯ 20ಕ್ಕೂ ಹೆಚ್ಚು ನೌಕರರು ಮೈಮುಗಿದು ಸಾಲಾಗಿ ಇಡೀ ಎ.ಪಿ.ಎಂ.ಸಿ ಮಾರ್ಕೇಟ್‍ನಲ್ಲಿ ಒಂದು ಸುತ್ತು ಹಾಕಿ ಪ್ರಾರ್ಥಿಸಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರ ಸೋಂಕಿತರ ಸಂಖ್ಯೆಯನ್ನ ಕಡಿಮೆ ಮಾಡಲೆಂದು ಲಾಕ್‍ಡೌನ್ ಮೊರೆ ಹೋಗಿದೆ. ನೀವು ಮತ್ತೆ ಬೇಜಾವಾಬ್ದಾರಿತನ ತೋರಿದರೆ ಈ ಲಾಕ್‍ಡೌನ್ ಮತ್ತಷ್ಟು ದಿನ ವಿಸ್ತರಣೆಯಾಗಬಹುದು ಎಂದರು.

    ಈಗಲಾದರೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಸೋಂಕಿತರ ಸಂಖ್ಯೆ ಹೀಗೆ ಮುಂದುವರೆದರೆ ಮುಂದಿನ ಸರ್ಕಾರ ಯಾವ ರೀತಿ ಕ್ರಮಕೈಗೊಳ್ಳುತ್ತೋ ಗೊತ್ತಿಲ್ಲ. ಹಾಗಾಗಿ, ವರ್ತಕರು-ಗ್ರಾಹಕರು ಸರ್ಕಾರದ ಮನವಿಗೆ ಸ್ಪಂದಿಸಿ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಎಂದು ಕೈಮುಗಿದು ಮನವಿ ಮಾಡಿದ್ದಾರೆ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹಾಂತೇಶ್ ಕೂಡ ಜೀಪಿನಲ್ಲಿ ಅನೌನ್ಸ್ ಮಾಡುತ್ತಾ ರೈತರು, ವ್ಯಾಪಾರಿಗಳು, ವರ್ತಕರಲ್ಲಿ ಕೈಮುಗಿದು ಮಾಸ್ಕ್ ಧರಿಸಿ ಅಂತರ ಕಾಪಾಡುವಂತೆ ಹೇಳಿದ್ದಾರೆ. ಮಾಸ್ಕ್ ಇಲ್ಲದೆ ಎಪಿಎಂಸಿಯಲ್ಲಿ ಬೇಕಾಬಿಟ್ಟಿ ಓಡಾಡಿದ ಜನಸಾಮಾನ್ಯರಿಗೆ ಫೈನ್ ಹಾಕುವ ಮೂಲಕ ಕ್ಲಾಸ್ ತೆಗೆದುಕೊಂಡಿದ್ದಾರೆ.

  • ಕೋವಿಡ್‍ನಿಂದ ಮೃತಪಟ್ಟವರ ಸ್ವಂತ ಜಮೀನಿನಲ್ಲಿ ಅಂತ್ಯ ಸಂಸ್ಕಾರಕ್ಕೆ ಅನುಮತಿ – ಅಶೋಕ್

    ಕೋವಿಡ್‍ನಿಂದ ಮೃತಪಟ್ಟವರ ಸ್ವಂತ ಜಮೀನಿನಲ್ಲಿ ಅಂತ್ಯ ಸಂಸ್ಕಾರಕ್ಕೆ ಅನುಮತಿ – ಅಶೋಕ್

    – ಬೆಂಗಳೂರಿನ ತಾವರಕೆರೆಯಲ್ಲಿ ಕಟ್ಟಿಗೆಯಲ್ಲಿ ಸುಡಬಹುದು
    – ಸಿದ್ದರಾಮಯ್ಯ, ಕುಮಾರಸ್ವಾಮಿ ಸಲಹೆಯನ್ನು ಪಾಲಿಸುತ್ತೇವೆ

    ಬೆಂಗಳೂರು: ಕೋವಿಡ್‍ನಿಂದ ಮೃತಪಟ್ಟವರಿಗೆ ಅವರ ಸ್ವಂತ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡಲು ಅವಕಾಶ ನೀಡಿದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೋವಿಡ್‍ನಿಂದ ಮೃತಪಟ್ಟವರಿಗೆ ಅವರ ಸ್ವಂತ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡಲು ಅವಕಾಶ ನೀಡಿದ್ದೇವೆ. ಆದರೆ ಸಂಬಂಧಪಟ್ಟವರಿಂದ ಅನುಮತಿ ಪಡೆದು ಕೋವಿಡ್ ನಿಯಮ ಪಾಲನೆ ಮಾಡಬೇಕು ಎಂದು ಹೇಳಿದರು.

     

    ನಾಳೆಯಿಂದ ಪ್ರತೀ 3 ಗಂಟೆಗೆ 50 ಶವ ಸಂಸ್ಕಾರಕ್ಕೆ ಅವಕಾಶ ನೀಡಲಾಗುತ್ತಿದೆ. ನೀರಿನ ಸಂಪರ್ಕ ಕೂಡ ಲಭ್ಯವಾಗಿದೆ. ಅಂಬುಲೆನ್ಸ್‍ಗಳು ರಸ್ತೆಯಲ್ಲಿ ಸಾಲು-ಸಾಲಾಗಿ ನಿಲ್ಲಬಾರದು. ಹೀಗಾಗಿ ಶವ ಸಂಸ್ಕಾರಕ್ಕೆ ಬರುವ ಜನರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ್ದೇವೆ. ಬಂದ ತಕ್ಷಣ ಯಾವುದೇ ವಿಳಂಬವಿಲ್ಲದೆ ಶವ ಸಂಸ್ಕಾರಕ್ಕೆ ಅವಕಾಶ ಮಾಡಿ ಕೊಡಲಾಗುವುದು. ಇದಕ್ಕಾಗಿ ಎರಡು ಕೆಎಸ್‍ಆರ್‍ಪಿ ತುಕಡಿ ಕೂಡ ನಿಯೋಜನೆ ಮಾಡಿದ್ದೇವೆ. ಈ ವಿಚಾರದಲ್ಲಿ ಬೆಂಗಳೂರಿನ ಮೇಲಿರುವ ಒತ್ತಡ ನೂರಕ್ಕೆ ನೂರು ಕಡಿಮೆಯಾಗಿದೆ. ಯಾವುದೇ ಶವ ಸಂಸ್ಕಾರಕ್ಕೂ ಇನ್ನು ಮುಂದೆ ಕ್ಯೂ ಇರುವುದಿಲ್ಲ ಎಂದರು.

    ಹಳ್ಳಿಗಳಲ್ಲೂ ಶವ ಸಂಸ್ಕಾರ ಮಾಡಬಹುದು. ಆದರೆ ಪಿಡಿಇಗಳಿಂದ ಅನುಮತಿ ಪಡೆಯಬೇಕು. ಸೋಂಕಿನಿಂದ ಮೃತರಾದವರನ್ನು ದಫನ್ ಮಾಡಬಹುದು. ತಾವರೆಕೆರೆಯಲ್ಲಿ ಇಂತಹ ಶವ ಸಂಸ್ಕಾರಕ್ಕೆ ಅವಕಾಶ ನೀಡಲಾಗಿದೆ. ಕಟ್ಟಿಗೆಯಲ್ಲಿ 50 ಶವ ಸುಡಲು ಅವಕಾಶವಿದೆ. ಇದಕ್ಕಾಗಿ ಈಗಾಗಲೇ 30 ಲೋಡ್ ಕಟ್ಟಿಗೆ ತರಿಸಲಾಗಿದೆ. ಇನ್ನೂ 30 ಲೋಡ್ ಕಟ್ಟಿಗೆ ಬರಲಿದೆ. ನೀರಿಗಾಗಿ ಬೋರ್‍ವೆಲ್ ಹಾಕಲಾಗಿದೆ. ಆಂಬ್ಯುಲೆನ್ಸ್ ನಿಲ್ಲಿಸಲು ಟೆಂಟ್ ಹಾಕಿದ್ದೇವೆ. ಬಂದ ಜನರು ಕುಳಿತುಕೊಳ್ಳಲು ಚೇರ್ ವ್ಯವಸ್ಥೆ ಮಾಡಲಾಗಿದೆ. ಏಕ ಕಾಲದಲ್ಲಿ 25 ಶವಗಳನ್ನು ಸುಡಬಹುದು. ಬೂದಿ, ಇನ್ನಿತರ ವೇಸ್ಟೇಜ್ ಸಂಗ್ರಹಕ್ಕೆ ಹಳ್ಳವನ್ನು ತೋಡಲಾಗಿದೆ ಎಂದು ವಿವರಿಸಿದರು.

    ನಾಳೆಯಿಂದ ಶವ ಸುಡಲು ಯಾವುದೇ ಸಮಸ್ಯೆಯಾಗಲ್ಲ. ಇನ್ನೊಂದು ಕಡೆ 50 ಎಕರೆ ಭೂಮಿ ಗುರುತಿಸಿದ್ದೇವೆ. ಅಲ್ಲಿ ಸೋಮವಾರದಿಂದ ಶವ ಸುಡಲು ವ್ಯವಸ್ಥೆಯಾಗಲಿದೆ. ಬೇರೆ ಜಿಲ್ಲೆಗಳಲ್ಲೂ ಶವ ಸಂಸ್ಕಾರಕ್ಕೆ ಸೂಚಿಸಿದ್ದೇವೆ. ಗೋಮಾಳ ಭೂಮಿಯಲ್ಲೂ ಶವ ಸಂಸ್ಕಾರಕ್ಕೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಈಗಾಗಲೇ ಡಿಸಿಗಳಿಗೆ ಸೂಚಿಸಿದ್ದೇವೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಯಾವ ಸಲಹೆ ಕೊಡುತ್ತಾರೆ ಆ ಸಲಹೆಗಳನ್ನು ನಾವು ಕಾರ್ಯರೂಪಕ್ಕೆ ತರುತ್ತೇವೆ ಎಂದಿದ್ದಾರೆ.

    ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇಬ್ಬರ ಹೇಳಿಕೆಯನ್ನೂ ಗಮನಿಸಿದ್ದೇನೆ. ಇಬ್ಬರ ಟೀಕೆಗಳನ್ನೂ ಸಲಹೆ ಎಂದು ಸ್ವೀಕರಿಸಿ ಕೆಲಸ ಮಾಡುತ್ತೇವೆ. ಜೆಡಿಎಸ್, ಕಾಂಗ್ರೆಸ್‍ನಲ್ಲಿ ಭಿನ್ನಾಭಿಪ್ರಾಯ ಇದೆ. ಕಾಂಗ್ರೆಸ್ ಅಧ್ಯಕ್ಷರು ಮೊದಲು ಸತ್ತವರಿಗೆ ಸರಿಯಾಗಿ ಸಂಸ್ಕಾರ ಮಾಡಿ ಎಂದಿದ್ದಾರೆ. ಆದರೆ ಜೆಡಿಎಸ್‍ನವರು ಮೊದಲು ಬದುಕಿರುವವರಿಗೆ ವ್ಯವಸ್ಥೆ ಮಾಡಿ ಎಂದಿದ್ದಾರೆ. ಎರಡನ್ನೂ ಕೂಡ ನಾವು ಪಾಲನೆ ಮಾಡುತ್ತಿದ್ದೇವೆ ಎಂದರು.

     

    ವಾರಾಂತ್ಯದ ಕರ್ಫ್ಯೂ ಜಾರಿ ವಿಚಾರವಾಗಿ ಮಾತನಾಡಿದ ಅವರು, ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ವೇಳೆ ಯಾರೆಲ್ಲಾ ಓಡಾಡಬಹುದು ಎಂಬ ಬಗ್ಗೆ ಕಂದಾಯ ಇಲಾಖೆಯಿಂದ ಆದೇಶ ಹೊರಡಿಸಿದ್ದೇವೆ. ತುರ್ತು ಸೇವೆ ಒದಗಿಸುವವರು, ತುರ್ತು ಸೇವೆ ಒದಗಿಸುವ ಕಂಪನಿಗಳು, ಟೆಲಿಕಾಂ, ಇಂಟರ್ ನೆಟ್  ಸರ್ವೀಸ್‍ನವರು, ರೋಗಿಗಳು ಹಾಗೂ ಅವರ ಸಹಾಯಕರು, ವ್ಯಾಕ್ಸಿನ್ ಪಡೆಯುವ ನಾಗರಿಕರು, ಆಸ್ಪತ್ರೆಗೆ ತೆರಳುವವರಿಗೆ ಅವಕಾಶವಿದೆ. ಕಂಪನಿಗಳಿಗೆ ತೆರಳುವವರು ಐಡಿ ಕಾರ್ಡ್ ತೋರಿಸುವುದು ಕಡ್ಡಾಯ. ದಿನಸಿ, ಹಣ್ಣು, ತರಕಾರಿ, ಮಾಂಸದ ಅಂಗಡಿ ಬೆಳಿಗ್ಗೆ 6ರಿಂದ 10ರವರೆಗೆ ತೆರೆದಿರಬಹುದು. ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಕೇವಲ ಪಾರ್ಸಲ್ ನೀಡಲು ಅವಕಾಶವಿದೆ. ಸಾರ್ವಜನಿಕರು ಟ್ಯಾಕ್ಸಿ, ಆಟೋ ಬಳಸಬಹುದು. ಬೇರೆ ಜಿಲ್ಲೆ ಹಾಗೂ ರಾಜ್ಯಕ್ಕೆ ತೆರಳಲು ಅವಕಾಶವಿದೆ. ಆದರೆ ಟಿಕೇಟ್ ತೋರಿಸುವುದು ಕಡ್ಡಾಯ ಎಂದು ತಿಳಿಸಿದರು.

  • ಸಾರ್ವಜನಿಕರೇ ಸ್ವಯಂ ಜನತಾ ಕರ್ಫ್ಯೂ ವಿಧಿಸಿಕೊಳ್ಳಿ: ಸುಧಾಕರ್

    ಸಾರ್ವಜನಿಕರೇ ಸ್ವಯಂ ಜನತಾ ಕರ್ಫ್ಯೂ ವಿಧಿಸಿಕೊಳ್ಳಿ: ಸುಧಾಕರ್

    – ಲಾಕ್‍ಡೌನ್ ಮಾಡಿದ್ರೆ ಜನಜೀವನ ಅಸ್ತವ್ಯಸ್ತ

    ಚಿಕ್ಕಬಳ್ಳಾಪುರ: ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ವೇಗವಾಗಿ ಹರಡುತ್ತಿದೆ. ಎರಡನೇ ಅಲೆ ನಮ್ಮ ನಿರೀಕ್ಷೆಯನ್ನು ಮೀರಿ ಪರಿಸ್ಥಿತಿ ಭೀಕರವಾಗಿಸುತ್ತಿದೆ. ಹೀಗಾಗಿ ಸಾರ್ವಜನಿಕರೇ ಸ್ವತಃ ಜನತಾ ಕರ್ಫ್ಯೂ ವಿಧಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

    ನಗರದಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಪರ್ಯಾಯ ಅಲ್ಲ, ಇದರಿಂದ ಜನಜೀವನ ಅಸ್ತವ್ಯಸ್ಯವಾಗುತ್ತೆ. ಜೀವನೋಪಾಯಕ್ಕೆ ಕಷ್ಟ ಆಗುತ್ತೆ. ಇದೆಲ್ಲವನ್ನೂ ಅರ್ಥ ಮಾಡಿಕೊಂಡು ಜನರೇ ಜನತಾ ಕರ್ಫ್ಯೂ ವಿಧಿಸಿಕೊಳ್ಳಬೇಕು ಎಂದರು.

    ಅನಗತ್ಯವಾಗಿ ಗುಂಪುಗೂಡಬೇಡಿ, ವಿವಾಹ, ಸಮಾರಂಭಗಳನ್ನು ಸರಳವಾಗಿ ಮಾಡಿ. ಬಹಳ ದೊಡ್ಡ ಸಂಖ್ಯೆಯಲ್ಲಿ ಸಮಾರಂಭ ಮಾಡಬಾರದು. ಈ ಬಗ್ಗೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಧಾರ್ಮಿಕ, ರಾಜಕೀಯ, ವಿವಾಹ ಹಾಗೂ ಇತರೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರದಂತೆ ಕಡಿವಾಣ ಹಾಕಬೇಕು. ಇಲ್ಲವಾದರೆ ಆಯಾ ಜಿಲ್ಲಾಡಳಿತಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

  • ನೈಟ್ ಕರ್ಫ್ಯೂ ಮೇಲ್ನೋಟಕ್ಕೆ, ನಾವು ನಿರ್ಬಂಧಿಸಿರುವುದು ನೈಟ್ ಲೈಫ್: ಅರವಿಂದ ಲಿಂಬಾವಳಿ

    ನೈಟ್ ಕರ್ಫ್ಯೂ ಮೇಲ್ನೋಟಕ್ಕೆ, ನಾವು ನಿರ್ಬಂಧಿಸಿರುವುದು ನೈಟ್ ಲೈಫ್: ಅರವಿಂದ ಲಿಂಬಾವಳಿ

    ಚಾಮರಾಜನಗರ: ನೈಟ್ ಕರ್ಫ್ಯೂ ಜಾರಿಗೆ ತಂದಿರುವುದು ಮೇಲ್ನೋಟಕ್ಕೆ ಆದರೆ ನಾವೂ ನೈಟ್‍ಲೈಫ್‍ನ್ನು ನಿರ್ಬಂಧ ಮಾಡಿದ್ದೇವೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

    ರಾಜ್ಯದಲ್ಲಿ ನೈಟ್ ಕರ್ಫ್ಯೂ ಕುರಿತು ಚಾಮರಾಜನಗರದಲ್ಲಿ ಮಾತನಾಡಿದ ಅರವಿಂದ ಲಿಂಬಾವಳಿ ಅವರು, ನೈಟ್ ಕರ್ಫ್ಯೂ ಕುರಿತು ವಿರೋಧ ಪಕ್ಷದವರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಜನರ ರಕ್ಷಣೆ ಮಾಡುವ ಹೊಣೆ ಸರ್ಕಾರದ್ದಾಗಿದೆ. ವಿರೋಧ ಪಕ್ಷದವರಿಗೆ ಸಹಕಾರ ಕೊಡುವಂತೆ ನಾವು ಮನವಿ ಮಾಡುತ್ತೇವೆ. ಮಹಾರಾಷ್ಟ್ರದಲ್ಲಿ ಕೊರೊನಾ ಸ್ಫೋಟ ಹೇಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಅಲ್ಲಿ ಕೂಡ ಸರ್ಕಾರ ಹಾಗೂ ವಿರೋಧ ಪಕ್ಷ ಇದೆ. ಅವರು ಯಾವ ರೀತಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ ನೋಡಿ ಎಂದರು.

    ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳುವ ಕ್ರಮಕ್ಕೆ ಬೆಂಬಲ ಸೂಚಿಸಿ. ನೈಟ್ ಕರ್ಫ್ಯೂ ಅನ್ನೋದು ನಿಮಗೆ ಮೇಲ್ನೋಟಕ್ಕೆ ಕಂಡು ಬರುತ್ತದೆ. ಅದರೆ ನೈಟ್‍ಲೈಫ್‍ನ್ನು ನಿರ್ಬಂಧಿಸಿದ್ದೇವೆ. ನೇರವಾಗಿ ಹೇಳುವುದಾದರೆ. ಕ್ಲಬ್, ಬಾರ್, ರೆಸ್ಟೋರೆಂಟ್‍ಗಳು ರಾತ್ರಿ ಒಂದು ಗಂಟೆಯ ವರೆಗೆ ಓಪನ್ ಇರುತ್ತದೆ. ಇಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ನೈಟ್ ಕರ್ಫ್ಯೂ ಜಾರಿಗೆ ತರಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಬರದಿದ್ದರೆ ರಾಜ್ಯದಲ್ಲಿ ಮತ್ತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

  • ಗಲಭೆ ಪ್ರದೇಶದಲ್ಲಿ ಇನ್ನೆರಡು ದಿನ ಕರ್ಫ್ಯೂ – ರಸ್ತೆಗಿಳಿದವರಿಗೆ ಪೊಲೀಸರು ಕ್ಲಾಸ್

    ಗಲಭೆ ಪ್ರದೇಶದಲ್ಲಿ ಇನ್ನೆರಡು ದಿನ ಕರ್ಫ್ಯೂ – ರಸ್ತೆಗಿಳಿದವರಿಗೆ ಪೊಲೀಸರು ಕ್ಲಾಸ್

    ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆ ನಡೆದ ಪ್ರದೇಶದಲ್ಲಿ ಇನ್ನೂ ಎರಡು ದಿನ ನಿಷೇಧಾಜ್ಞೆಯನ್ನು ಮುಂದುವರಿಕೆ ಮಾಡಲಾಗಿದೆ.

    ಡಿಜೆ ಹಳ್ಳಿ, ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿಷೇಧಾಜ್ಞೆ ಮುಂದುವರಿಕೆ ಮಾಡಲಾಗಿದೆ. ಆಗಸ್ಟ್ 18ರ ಬೆಳಗ್ಗೆ 6 ಗಂಟೆಯವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಕಾವಲ್ ಭೈರಸಂದ್ರದಲ್ಲಿ ಕರ್ಫ್ಯೂ ಮತ್ತೆ ಜಾರಿಯಾದ ಹಿನ್ನೆಲೆಯಲ್ಲಿ ಪೊಲೀಸರು ಅಂಗಡಿಯನ್ನು ಮುಚ್ಚಿಸುತ್ತಿದ್ದಾರೆ. ಅಲ್ಲದೇ ಅನಗತ್ಯವಾಗಿ ಓಡಾಡುವವರಿಗೆ ಲಾಠಿ ಏಟು ಕೊಟ್ಟು ಮನೆಗೆ ಕಳುಹಿಸುತ್ತಿದ್ದಾರೆ.

    ಡಿಸಿಪಿ ಶರಣಪ್ಪ ಅವರು ನಿಷೇಧಾಜ್ಞೆ ಜಾರಿಯಾದ ಏರಿಯಾಗಳಲ್ಲಿ ರೌಂಡ್ಸ್ ಹಾಕುತ್ತಿದ್ದು, ಗುಂಪು ಸೇರಿರುವವರನ್ನ ಮನೆಗೆ ಕಳುಹಿಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಡಿಸಿಪಿ ಶರಣಪ್ಪ ಅವರು, ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ 52 ಪ್ರಕರಣ ದಾಖಲು ಮಾಡಲಾಗಿದೆ. ಸಿಸಿಟಿವಿ, ಮೊಬೈಲ್ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಇದುವರೆಗೂ ಸುಮಾರು 264 ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು, ಆರೋಪಿಗಳನ್ನು ವಿಚಾರಣೆ ಮಾಡಲಾಗುತ್ತಿದೆ. ಇನ್ನೂ ಆರೋಪಿಗಳ ಸಂಖ್ಯೆ ಹೆಚ್ಚಾಗಬಹುದು ಎಂದು ತಿಳಿಸಿದರು.

    ಘಟನೆ ನಡೆದ ಸ್ಥಳದಲ್ಲಿ ಇನ್ನೂ ಎರಡು ದಿನಗಳ ಕಾಲ ಕರ್ಫ್ಯೂ ಮುಂದುವರಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಸಾಕ್ಷಿ ಸಂಗ್ರಹಣೆ ನಡೆಸಲಾಗುತ್ತಿದೆ. ಆರೋಪಿ ನವೀನ್ ಮೊಬೈಲ್ ಪತ್ತೆ ವಿಚಾರಕ್ಕೆ ಸಂಬಂಧಿಸದಂತೆ ಫೋರೆನ್ಸಿಕ್ಸ್ ಕೆಲಸ ನಡೆಯುತ್ತಿದೆ. ಇನ್ನೂ ಆಸ್ತಿ ನಷ್ಟದ ಬಗ್ಗೆ ಎಕ್ಸ್ ಪರ್ಟ್ ತಂಡ ಜೊತೆ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಮಾಹಿತಿ ನೀಡಿದರು.

    ಕೆಜಿ ಹಳ್ಳಿಯಲ್ಲಿ ಕರ್ಫ್ಯೂ ಇದ್ದರೂ ಅನಗತ್ಯವಾಗಿ ಜನರು ರಸ್ತೆಗೆ ಬರುತ್ತಿದ್ದಾರೆ. ಹೀಗಾಗಿ ರಸ್ತೆಗೆ ಬಂದು ಅನಗತ್ಯವಾಗಿ ಅಡ್ಡಾಡುತ್ತಿದ್ದ ಮಹಿಳೆಯರಿಗೆ ಲಾಠಿ ಏಟು ಕೊಟ್ಟು ಮಹಿಳಾ ಪೊಲೀಸರು ಮನೆಗೆ ಕಳುಹಿಸುತ್ತಿದ್ದಾರೆ. ಅಲ್ಲದೇ ಮಹಿಳಾ ಪೊಲೀಸರು ಪ್ರತಿಯೊಂದು ವಾಹನಗಳನ್ನ ತಡೆದು ವಿಚಾರಿಸುತ್ತಿದ್ದಾರೆ. ಕೆಜಿ ಹಳ್ಳಿಯ ಟ್ಯಾನರಿ ರಸ್ತೆಯಲ್ಲಿ ನಾಲ್ಕು ಮಹಿಳಾ ಪೊಲೀಸರು ಸಖತ್ ಸೆಕ್ಯೂರಿಟಿ ಕೊಡುತ್ತಿದ್ದಾರೆ.

  • ಅನ್‌ಲಾಕ್‌ ಮಾರ್ಗಸೂಚಿ ಪ್ರಕಟ – ರಾತ್ರಿ 9 ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ

    ಅನ್‌ಲಾಕ್‌ ಮಾರ್ಗಸೂಚಿ ಪ್ರಕಟ – ರಾತ್ರಿ 9 ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ

    ಬೆಂಗಳೂರು: ರಾಜ್ಯಾದ್ಯಂತ  ಲಾಕ್‌ಡೌನ್‌ ತೆರವಾಗುವುದರ ಜೊತೆಗೆ ರಾತ್ರಿಯ ಕರ್ಪ್ಯೂ ಅವಧಿಯನ್ನು ಸರ್ಕಾರ ಇಳಿಕೆ ಮಾಡಿದೆ.

    ಮಂಗಳವಾರ ರಾತ್ರಿ ಹೊಸ ಮಾರ್ಗಸೂಚಿಯನ್ನು ಸರ್ಕಾರ ಪ್ರಕಟಿಸಿದ್ದು, ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವೆರೆಗೆ ನೈಟ್‌ ಕರ್ಫ್ಯೂ ಇರಲಿದೆ. ಈ ಮೊದಲು ರಾತ್ರಿ 8 ಗಂಟೆಯಿಂದ ನೈಟ್‌ ಕರ್ಫ್ಯೂ ಆರಂಭವಾಗುತ್ತಿತ್ತು.

    ಅನ್‌ಲಾಕ್ 2 ರ ಮಾರ್ಗಸೂಚಿಗಳ ಪೈಕಿ ಕೆಲ ಅಂಶಗಳನ್ನು ಬದಲಾವಣೆಗೊಳಿಸಿ ಸರ್ಕಾರ ಈಗ ಜಾರಿ ಮಾಡಲು ಮುಂದಾಗುತ್ತಿದೆ.

    ಮಾರ್ಗಸೂಚಿಯಲ್ಲಿ ಏನಿದೆ?
    – ಮೊದಲು ಇದ್ದಂತೆ ಭಾನುವಾರದ ಕರ್ಫ್ಯೂ ಮುಂದುವರಿಯಲಿದೆ.
    – ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳು ಬೆಳಗ್ಗೆ 5 ರಿಂದ ರಾತ್ರಿ 9 ರವರೆಗೆ ತೆರೆಯಬಹುದು.
    – ಜನಸಂದಣಿಯನ್ನು ತಡೆಗಟ್ಟಲು ಬೆಂಗಳೂರು ಸೇರಿ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿರುವ ‌ತರಕಾರಿ ಮಾರುಕಟ್ಟೆಗಳು ಸ್ಥಳಾಂತರ ಮಾಡಬೇಕು.
    – ಎಪಿಎಂಸಿಗಳಿಗೆ ಅಥವಾ ವಿಶಾಲ ಜಾಗಗಳಿಗೆ ತರಕಾರಿ ಮಾರುಕಟ್ಟೆಗಳು ಶಿಫ್ಟ್‌ ಆಗಲಿದೆ.

    – ಪಾರ್ಕ್ ಗಳಲ್ಲಿ ವಾಕ್ ಮಾಡಬಹುದು ಆದರೆ ಕಲ್ಲಿನ ಬೆಂಚ್‌ಗಳ ಮೇಲೆ ಕುಳಿತುಕೊಳ್ಳುವಂತಿಲ್ಲ.
    – ಉದ್ಯಾನನವಗಳಲ್ಲಿ ಜಿಮ್ ಸಲಕರಣೆಗಳನ್ನು ಬಳಸಿ ವ್ಯಾಯಾಮಕ್ಕೆ ನಿಷೇಧ ಹೇರಲಾಗಿದೆ.
    – ಕಂಟೈನ್ಮೆಂಟ್ ವಲಯಗಳಲ್ಲಿ ಎಲ್ಲ ಚಟುವಟಿಕೆಗಳಿಗೂ ನಿರ್ಬಂಧ ಮುಂದುವರಿಕೆ.
    – ಜುಲೈ 31ರವರೆಗೆ ಈ ಮಾರ್ಗಸೂಚಿಗಳು ಅನ್ವಯವಾಗಲಿದೆ.

     

  • 33 ಗಂಟೆ ಕರ್ನಾಟಕ ಸ್ತಬ್ಧ- ಇಂದು ರಾತ್ರಿಯಿಂದಲೇ ರಾಜ್ಯ ಲಾಕ್

    33 ಗಂಟೆ ಕರ್ನಾಟಕ ಸ್ತಬ್ಧ- ಇಂದು ರಾತ್ರಿಯಿಂದಲೇ ರಾಜ್ಯ ಲಾಕ್

    ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ರಣಕೇಕೆ ಹಾಕುತ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಕರ್ನಾಟಕದಲ್ಲಿ ಸೆಕೆಂಡ್ ಸಂಡೇ ಲಾಕ್‍ಡೌನ್ ಇಂದು ರಾತ್ರಿಯಿಂದಲೇ ಜಾರಿಯಾಗಲಿದೆ.

    ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿಯಾಗಲಿದೆ. ತುರ್ತು, ಅಗತ್ಯ ಸೇವೆ ಹೊರತುಪಡಿಸಿ ಉಳಿದವೆಲ್ಲಾ ಕಂಪ್ಲೀಟ್ ಬಂದ್ ಆಗಲಿದೆ. ಕೊರೊನಾ ತಡೆಗೆ ಈಗಾಗಲೇ ಹಲವೆಡೆ ಸೆಲ್ಫ್ ಲಾಕ್‍ಡೌನ್ ಮಾಡಲಾಗಿದೆ.

    ರಾಜ್ಯದಲ್ಲಿ ಶುಕ್ರವಾರ 2,313 ಮಂದಿಗೆ ಕೋವಿಡ್-19 ಸೋಂಕು ತಗಲುವ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 33,418ಕ್ಕೆ ಏರಿಕೆಯಾಗಿದೆ. ಈ ಪೈಕಿ 13,836 ಮಂದಿ ಬಿಡುಗಡೆಯಾಗಿದ್ದು, 19,035 ಸಕ್ರಿಯ ಪ್ರಕರಣಗಳಿವೆ. ಒಟ್ಟು 1,003 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

    ಸೆಕೆಂಡ್ ಸಂಡೇ ಲಾಕ್
    * ಸರ್ಕಾರಿ ಕಚೇರಿಗಳು ಸಂಪೂರ್ಣ ಬಂದ್
    * ವಿಧಾನಸೌಧ, ವಿಕಾಸ ಸೌಧ ಬಹುತೇಕ ಬಂದ್
    * ಎಂ.ಎಸ್ ಬಿಲ್ಡಿಂಗ್, ಕೆಜಿ ರಸ್ತೆಯ ಲೋಕಪಯೋಗಿ ಇಲಾಖೆ ಬಂದ್
    * ಸರ್ಕಾರಿ ಕಚೇರಿ ಸಿಬ್ಬಂದಿಗೆ ರಜೆ
    * ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‍ಗಳು ಬಹುತೇಕ ಖಾಲಿ
    * ಸೀಲ್‍ಡೌನ್ ಎಫೆಕ್ಟ್ ನಿಂದಾಗಿ ಎಸ್‍.ಪಿ ರೋಡ್ ಬಂದ್
    * ಎಸ್.ಪಿ ರೋಡ್, ಬಿವಿಕೆ ಅಯ್ಯಂಗಾರ್ ರೋಡ್, ಚಿಕ್ಕಪೇಟೆ ಬಂದ್
    * ಧರ್ಮರಾಯಸ್ವಾಮಿ ದೇವಸ್ಥಾನ ರೋಡ್, ಕೆ.ಆರ್.ಮಾರುಕಟ್ಟೆ ಸಂಪೂರ್ಣ ಬಂದ್

    ನಾಳೆ ಏನಿರುತ್ತೆ?
    * ಮಾಂಸದ ಅಂಗಡಿಗಳು ಓಪನ್
    * ಹಣ್ಣು, ತರಕಾರಿ, ದಿನಸಿ ಪದಾರ್ಥ ಖರೀದಿಗೆ ಅವಕಾಶ
    * ಆಸ್ಪತ್ರೆ, ಮೆಡಿಕಲ್ ಸ್ಟೋರ್ಸ್ ಓಪನ್
    * ಡಾಕ್ಟರ್ಸ್, ನರ್ಸ್, ಅಂಬುಲೆನ್ಸ್ ಓಡಾಟಕ್ಕಿಲ್ಲ ನಿರ್ಬಂಧ
    * ಅನಾರೋಗ್ಯ ಸಮಸ್ಯೆವುಳ್ಳರಿಗೆ ಆಸ್ಪತ್ರೆಗೆ ಹೋಗಲು ಅವಕಾಶ
    * ಗರ್ಭಿಣಿಯರ ತಪಾಸಣೆಗೆ ಸಮಸ್ಯೆ ಇಲ್ಲ
    * ತುರ್ತು ಚಿಕಿತ್ಸೆ, ರೋಗಿಗಳಿಗೆ ಆಸ್ಪತ್ರೆ ಹೋಗಲು ಅವಕಾಶ
    * ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶ
    * ಹೋಟೆಲ್‍ಗಳಲ್ಲಿ ಪಾರ್ಸಲ್ ಮಾತ್ರ

    ನಾಳೆ ಏನಿರಲ್ಲ?
    * ಎಲ್ಲಾ ಪಾರ್ಕ್ ಗಳು ಬಂದ್
    * ರಸ್ತೆಗಿಳಿಯಲ್ಲ ಆಟೋ, ಕ್ಯಾಬ್, ಬೈಕ್
    * ಬಾರ್, ಸೆಲೂನ್, ಬ್ಯೂಟಿ ಪಾರ್ಲರ್, ಪಾರ್ಕ್ ಕ್ಲೋಸ್
    * ಮದ್ಯದಂಗಡಿ ಸಂಪೂರ್ಣ ಬಂದ್
    * ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಓಡಲ್ಲ (ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗೆಯವರೆಗೂ ಇರುವುದಿಲ್ಲ)
    * ಗಾರ್ಮೆಂಟ್ಸ್, ಫ್ಯಾಕ್ಟರಿ, ಕಾರ್ಖಾನೆಗಳು, ಕಂಪನಿಗಳು ಸ್ತಬ್ಧ
    * ಬೆಂಗಳೂರಿನಲ್ಲಿ ಎಲ್ಲಾ ಫ್ಲೈಓವರ್‌ಗಳು ಇಂದು ಸಂಜೆಯಿಂದ ಕ್ಲೋಸ್

  • ಇಂದು ರಾತ್ರಿಯಿಂದಲೇ ಕರ್ನಾಟಕ ಸ್ತಬ್ಧ- ಏನಿರುತ್ತೆ?, ಏನಿರಲ್ಲ?

    ಇಂದು ರಾತ್ರಿಯಿಂದಲೇ ಕರ್ನಾಟಕ ಸ್ತಬ್ಧ- ಏನಿರುತ್ತೆ?, ಏನಿರಲ್ಲ?

    – ಸೋಮವಾರ ಮುಂಜಾನೆ 5 ಗಂಟೆವರೆಗೂ ಕರ್ಫ್ಯೂ ಜಾರಿ

    ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಸ್ಫೋಟವಾಗುತ್ತಲೇ ಇದೆ. ಇತ್ತ ಕೊರೊನಾ ಹರಡದಂತೆ ತಡೆಯಲು ಇವತ್ತು ರಾತ್ರಿಯಿಂದಲೇ ಕರ್ನಾಟಕ ಸ್ತಬ್ಧವಾಗಲಿದೆ.

    ಕೊರೊನಾ ನಿಯಂತ್ರಣಕ್ಕಾಗಿ ಇಂದು ರಾತ್ರಿ 8 ಗಂಟೆಯಿಂದ ಸಂಡೇ ಕರ್ಫ್ಯೂ ಜಾರಿಯಾಗಲಿದೆ. ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆಯವರೆಗೂ ಕರ್ಫ್ಯೂ ಜಾರಿಯಾಗಲಿದೆ. ತುರ್ತು, ಅಗತ್ಯ ಸೇವೆ ಹೊರತುಪಡಿಸಿ ಉಳಿದವೆಲ್ಲಾ ಕಂಪ್ಲೀಟ್ ಬಂದ್ ಆಗಲಿದೆ. ಇಂದು ರಾತ್ರಿ 8ರ ನಂತರ ಬೇಕಾಬಿಟ್ಟಿಯಾಗಿ ಓಡಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ.

    ನಾಳೆ ಏನಿರುತ್ತೆ?
    * ಮಾಂಸದ ಅಂಗಡಿಗಳು ಓಪನ್
    * ಹಣ್ಣು, ತರಕಾರಿ, ದಿನಸಿ ಪದಾರ್ಥ ಖರೀದಿಗೆ ಅವಕಾಶ
    * ಆಸ್ಪತ್ರೆ, ಮೆಡಿಕಲ್ ಸ್ಟೋರ್ಸ್, ಮಾಧ್ಯಮಗಳಿಗೆ ಅವಕಾಶ
    * ಎಂದಿನಂತೆ ಡಾಕ್ಟರ್ಸ್, ನರ್ಸ್ ಗಳಿಗೆ ಆಂಬುಲೆನ್ಸ್, ಓಡಾಟ
    * ಅನಾರೋಗ್ಯ ಸಮಸ್ಯೆವುಳ್ಳರಿಗೆ ಆಸ್ಪತ್ರೆಗೆ ಹೋಗಲು ಅವಕಾಶ
    * ಗರ್ಭಿಣಿ ಸ್ತ್ರೀಯರಿಗೆ ತಪಾಸಣೆಗೆ ಸಮಸ್ಯೆ ಇಲ್ಲ
    * ತುರ್ತು ಚಿಕಿತ್ಸೆ, ರೋಗಿಗಳಿಗೆ ಆಸ್ಪತ್ರೆ ಹೋಗಲು ಅವಕಾಶ

    ನಾಳೆ ಏನಿರಲ್ಲ?
    * ರಸ್ತೆಗಿಳಿಯಲ್ಲ ಆಟೋ, ಕ್ಯಾಬ್, ಬೈಕ್
    * ಬಾರ್, ಸೆಲೂನ್, ಬ್ಯೂಟಿ ಪಾರ್ಲರ್, ಪಾರ್ಕ್ ಕ್ಲೋಸ್
    * ಗಾರ್ಮೆಂಟ್ಸ್, ಫ್ಯಾಕ್ಟರಿ, ಕಾರ್ಖಾನೆಗಳು, ಕಂಪನಿಗಳು ಸ್ತಬ್ಧ
    * ಎಲ್ಲಾ ಪಾರ್ಕ್ ಗಳು ಬಂದ್
    * ಮದ್ಯದಂಗಡಿ ಸಂಪೂರ್ಣ ಬಂದ್
    * ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಓಡಲ್ಲ (ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗೆಯವರೆಗೂ ಇರುವುದಿಲ್ಲ)
    * ಹೋಟೆಲ್‍ಗಳು ಪಾರ್ಸಲ್ ಮಾತ್ರ
    * ಬೆಂಗಳೂರಿನಲ್ಲಿ ಎಲ್ಲಾ ಫ್ಲೈಓವರ್‌ಗಳು ಇಂದು ಸಂಜೆಯಿಂದ ಕ್ಲೋಸ್

  • ಮನೆ ಖಾಲಿ ಮಾಡ್ಕೊಂಡು ಬೆಂಗ್ಳೂರು ಬಿಟ್ಟು ಊರಿನತ್ತ ಪ್ರಯಾಣ- ಟ್ರಾಫಿಕ್ ಜಾಮ್

    ಮನೆ ಖಾಲಿ ಮಾಡ್ಕೊಂಡು ಬೆಂಗ್ಳೂರು ಬಿಟ್ಟು ಊರಿನತ್ತ ಪ್ರಯಾಣ- ಟ್ರಾಫಿಕ್ ಜಾಮ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮಹಾಸ್ಫೋಟವಾಗುತ್ತಿದ್ದಂತೆ ಭಯಭೀತರಾದ ಜನರು ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಮಾಡುತ್ತಿದ್ದಾರೆ.

    ಬೆಂಗಳೂರಿನಿಂದ ಜನರು ತಮ್ಮ ಊರಿಗೆ ಹೊರಟಿರುವ ಹಿನ್ನೆಲೆಯಲ್ಲಿ ನವಯುಗ ಟೋಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ. ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನವಯುಗ ಟೋಲ್‍ನಲ್ಲಿ ಸಾಲಾಗಿ ವಾಹನಗಳು ನಿಂತಿವೆ. ಈ ಮೂಲಕ ಶನಿವಾರ ಬೆಂಗಳೂರು ನಗರದಲ್ಲಿ ಕೊರೊನಾ ಮಹಾ ಸ್ಫೋಟಕ್ಕೆ ಜನರು ಹೆದರಿಕೊಂಡಿದ್ದಾರೆ ಎನ್ನಲಾಗಿದೆ.

    ಇನ್ನೂ ಕೆಲವರು ಬೆಂಗಳೂರಿಗಿಂತ ತಮ್ಮ ಊರುಗಳೇ ಸುರಕ್ಷಿತ ಎಂದು ಮನೆ ಖಾಲಿ ಮಾಡಿಕೊಂಡು ಲಗೇಜ್ ಸಮೇತ ಬೆಂಗಳೂರು ಬಿಟ್ಟು ಹೊರಟ್ಟಿದ್ದಾರೆ. ಮಕ್ಕಳಿಗೆ ಶಾಲೆ ಇಲ್ಲ, ನಮಗೂ ಮಾಡಲು ಕೆಲಸವಿಲ್ಲ. ಇದರಿಂದ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಮ್ಮ ಊರಿಗೆ ಹೋಗುತ್ತಿದ್ದೇವೆ ಎಂದು ಜನರು ಹೇಳುತ್ತಿದ್ದಾರೆ.

    ಬೆಂಗಳೂರಿನಲ್ಲಿ ಶನಿವಾರ ಬರೋಬ್ಬರಿ 596 ಮಂದಿಗೆ ಕೊರೊನಾ ದೃಢವಾಗಿದೆ. ಹೀಗಾಗಿ ಕೊರೊನಾ ತಡೆಗಾಗಿ ಸರ್ಕಾರ ಪ್ರತಿ ಭಾನುವಾರ ಲಾಕ್‍ಡೌನ್ ಮಾಡಲು ನಿರ್ಧರಿಸಿದೆ. ಹಾಗೆಯೇ ನೈಟ್ ಕರ್ಫ್ಯೂ ಅವಧಿಯನ್ನು ವಿಸ್ತರಣೆ ಮಾಡಲಾಗುತ್ತಿದೆ. ರಾತ್ರಿ 8 ಗಂಟೆಯಿಂದಲೇ ಕರ್ಫ್ಯೂ ಜಾರಿಯಾಗಲಿದ್ದು, ಅನಾವಶ್ಯಕವಾಗಿ ಹೊರ ಬರೋರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.

    ಸೋಮವಾರದಿಂದ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ರಾತ್ರಿ 8 ರಿಂದ ಬೆಳಗ್ಗೆ 5 ಗಂಟೆಯವರೆಗೆ ಬಂದ್ ಆಗಲಿದೆ. ಶನಿವಾರ ಒಂದೇ ದಿನ ಕೊರೊನಾ ಮಹಾಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಮತ್ತೆ ಜಾರಿಯಾಗಿದೆ. ಇವತ್ತು ಒಂದೇ ದಿನ ಮಾತ್ರ ರಾತ್ರಿ 9 ಗಂಟೆ ತನಕ ವ್ಯವಹಾರ ನಡೆಸಬಹುದಾಗಿದ್ದು, ನಾಳೆಯಿಂದ ರಾತ್ರಿ 8 ಗಂಟೆಯಿಂದ 5 ರ ತನಕ ಕರ್ಫ್ಯೂ ಇರಲಿದೆ.