Tag: ಕರ್ಫ್ಯೂ

  • ನಿಯಂತ್ರಣಕ್ಕೆ ಬಾರದ ಹಿಂಸಾಚಾರ – ಮಣಿಪುರದ ಮೂರು ಜಿಲ್ಲೆಗಳಲ್ಲಿ ಕರ್ಫ್ಯೂ

    ನಿಯಂತ್ರಣಕ್ಕೆ ಬಾರದ ಹಿಂಸಾಚಾರ – ಮಣಿಪುರದ ಮೂರು ಜಿಲ್ಲೆಗಳಲ್ಲಿ ಕರ್ಫ್ಯೂ

    ಇಂಫಾಲ್: ಮಣಿಪುರದಲ್ಲಿ (Manipur) ಕೋಮು ಘರ್ಷಣೆ ಮತ್ತೆ ಉಲ್ಬಣಗೊಂಡಿದೆ. ರಾಜ್ಯದಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ಕಾರಣ ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ತೌಬಲ್ ಜಿಲ್ಲೆಗಳಲ್ಲಿ ಕರ್ಫ್ಯೂ (Prohibitory Orders) ಹೇರಲಾಗಿದೆ.

    ಹಿಂದಿನ ಆದೇಶದಲ್ಲಿ, ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮದ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಆಯಾ ಜಿಲ್ಲೆಗಳಲ್ಲಿ ಮಂಗಳವಾರ ಬೆಳಿಗ್ಗೆ 5 ರಿಂದ 10 ರವರೆಗೆ ಕರ್ಫ್ಯೂ ಸಡಿಲಿಸುವುದಾಗಿ ಘೋಷಿಸಿದ್ದರು. ಆದಾಗ್ಯೂ ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಸಡಿಲಿಕೆ ಆದೇಶವನ್ನು ರದ್ದುಗೊಳಿಸಲಾಗಿದೆ ಮತ್ತು ಎರಡೂ ಜಿಲ್ಲೆಗಳಲ್ಲಿ ಕರ್ಫ್ಯೂ ಮರು ಹೇರಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸೆಪ್ಟೆಂಬರ್ 6 ರಂದು ರಾಜ್ಯದ ಬಿಷ್ಣುಪುರ್ ಜಿಲ್ಲೆಯ ಮೊಯಿರಾಂಗ್‌ನಲ್ಲಿ ಆರ್‌ಪಿಜಿ ದಾಳಿ ನಡೆದಿದ್ದು, ಮಣಿಪುರದ ಮೊದಲ ಮುಖ್ಯಮಂತ್ರಿ ಮೈರೆಂಬಮ್ ಕೊಯಿರೆಂಗ್ ಸಿಂಗ್ ಅವರ ನಿವಾಸದಲ್ಲಿ ಪೂಜೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು.

    ಸೆಪ್ಟೆಂಬರ್ 7 ರಂದು ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಕುಕಿ ಹೋರಾಟಗಾರರು ನಡೆಸಿದ ದೀರ್ಘ ಶ್ರೇಣಿಯ ರಾಕೆಟ್‌ ದಾಳಿಗೆ ಐವರು ಹತ್ಯೆಯಾಗಿದ್ದರು.ಈ ಘಟನೆಯ ನಂತರ ರಾಜ್ಯಾದ್ಯಂತ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಈ ಬಂಡಾಯ ಹೋರಾಟಗಾರರು ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯ ಮನೆಗೆ ನುಗ್ಗಿ ನಿದ್ದೆಯಲ್ಲೇ ಗುಂಡಿಟ್ಟು ಕೊಂದ ಬಳಿಕ ಪರಿಸ್ಥಿತಿ ಹದಗೆಟ್ಟಿತ್ತು. ಇದನ್ನೂ ಓದಿ: ಸ್ಫೋಟಕ್ಕೆ ಉಗ್ರರ ಸಂಚು – ಮಲ್ಲೇಶ್ವರ ಬಿಜೆಪಿ ಕಚೇರಿಗೆ ಪೊಲೀಸ್‌ ಭದ್ರತೆ ಹೆಚ್ಚಳ

    ಗಸ್ತು ತಿರುಗಲು ಮತ್ತು ವೈಮಾನಿಕ ಸಮೀಕ್ಷೆ ನಡೆಸಲು ಮಿಲಿಟರಿ ಹೆಲಿಕಾಪ್ಟರ್ ಅನ್ನು ನಿಯೋಜಿಸಲಾಗಿದ್ದು, ಕೂಂಬಿಂಗ್ ಕಾರ್ಯಾಚರಣೆಯೂ ನಡೆಯುತ್ತಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಗುಪ್ತಚರ ವಿಭಾಗದ ಪೊಲೀಸ್ ಮಹಾನಿರೀಕ್ಷಕ ಕೆ ಕಬೀಬ್ ಹೇಳಿದ್ದಾರೆ.

    ಕಳೆದ ವರ್ಷ ಮೇ ತಿಂಗಳಿನಿಂದ ಇಂಫಾಲ್ ಕಣಿವೆ ಮೂಲದ ಮೈಟೈಸ್ ಮತ್ತು ಪಕ್ಕದ ಬೆಟ್ಟಗಳ ಮೂಲದ ಕುಕಿ-ಜೋ ಗುಂಪುಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.

     

  • ಮಣಿಪುರದಲ್ಲಿ ಹೊಸವರ್ಷದ ಮೊದಲ ದಿನವೇ ಹಿಂಸಾಚಾರ – ಗುಂಡಿನ ದಾಳಿಗೆ ನಾಲ್ವರು ಬಲಿ

    ಮಣಿಪುರದಲ್ಲಿ ಹೊಸವರ್ಷದ ಮೊದಲ ದಿನವೇ ಹಿಂಸಾಚಾರ – ಗುಂಡಿನ ದಾಳಿಗೆ ನಾಲ್ವರು ಬಲಿ

    – ದಾಳಿಯಲ್ಲಿ ಹಲವರಿಗೆ ಗಾಯ, ಮರ‍್ನಾಲ್ಕು ಜಿಲ್ಲೆಗಳಲ್ಲಿ ಕರ್ಫ್ಯೂ

    ಇಂಫಾಲ: ಮಣಿಪುರದಲ್ಲಿ 2024ರ ನೂತನ ವರ್ಷದ ಮೊದಲ ದಿನವೇ ಮತ್ತೆ ಹಿಂಸಾಚಾರ (Manipur Violence) ಭುಗಿಲೆದ್ದಿದೆ. ಘಟನೆಯಲ್ಲಿ ಗುಂಡು ಹಾರಿಸಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಹಿಂಸಾಚಾರದಿಂದಾಗಿ ಕಣಿವೆ ಜಿಲ್ಲೆಗಳಲ್ಲಿ ಮತ್ತೆ ಕರ್ಫ್ಯೂ (Curfew) ಹೇರಿರುವುದಾಗಿ ಮೂಲಗಳು ತಿಳಿಸಿವೆ.

    ಹಿಂಸಾಚಾರದ ವೇಳೆ ಅಪರಿಚಿತರ ಗುಂಪೊಂದು ಸುಲಿಗೆಗಾಗಿ ಆಟೊಮೆಟಿಕ್ ವೆಪನ್ಸ್‌ಗಳೊಂದಿಗೆ (ಸ್ವಯಂಚಾಲಿತ ಶಸ್ತ್ರಾಸ್ತ್ರ) (Automatic Weapons) ದಾಳಿ ಮಾಡಿತು ಎಂದು ತೌಬಲ್ ಜಿಲ್ಲೆಯ ಸ್ಥಳೀಯರು ಹೇಳಿದ್ದಾರೆ. ಈ ಹಿಂಸಾಚಾರವನ್ನು ಸಿಎಂ ಎನ್.ಬಿರೇನ್ ಸಿಂಗ್ ಅವರು ಖಂಡಿಸಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣ – ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ

    ಅಮಾಯಕ ಜನರ ಹತ್ಯೆಯಿಂದ ಅಪಾರ ದುಃಖವಾಗಿದೆ. ನಾವು ಆರೋಪಿಗಳನ್ನು ಹಿಡಿಯಲು ವಿಶೇಷ ಪೊಲೀಸ್ ಪಡೆಗಳನ್ನ ಸಜ್ಜುಗೊಳಿಸಿದ್ದೇವೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಸಾರ್ವಜನಿಕರು ಸಹ ಸಹಕಾರ ನೀಡಬೇಕೆಂದು ನಾನು ಕೈಮುಗಿದು ಬೇಡಿಕೊಳ್ಳುತ್ತೇನೆ. ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಲು ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತದೆ ಎಂದು ಭರವಸೆ ನೀಡಿದ್ದಾರೆ.

    ಅಲ್ಲದೇ 2024ರ ಹೊಸ ವರ್ಷದ ಮೊದಲ ದಿನವೇ ನಡೆದಿರುವ ಹಿಂಸಾಚಾರವನ್ನು ಗಂಭೀರವಾಗಿ ಸರ್ಕಾರ ಪರಿಗಣಿಸಿದೆ. ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಆಡಳಿತ ಪಕ್ಷದ ಎಲ್ಲಾ ಸಚಿವರು ಹಾಗೂ ಶಾಸಕರ ತುರ್ತು ಸಭೆ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭಾರತದ ವಿರುದ್ಧ ಯುದ್ಧ ರೂಪಿಸಲು 2 ರಾಷ್ಟ್ರಗಳ ಭಯೋತ್ಪಾದಕರೊಂದಿಗೆ ಸಂಚು; ಮಣಿಪುರದಲ್ಲಿ ಶಂಕಿತ ಅರೆಸ್ಟ್

    ಕೆಲ ಜಲ್ಲೆಗಳಲ್ಲಿ ಕರ್ಫ್ಯೂ: ಹೊಸ ಹಿಂಸಾಚಾರದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮಣಿಪುರದ ಕಣಿವೆ ಪ್ರದೇಶಗಳಾದ ತೌಬಲ್, ಇಂಫಾಲ ಪೂರ್ವ ಮತ್ತು ಇಂಫಾಲ ಪಶ್ಚಿಮ, ಕಕ್ಚಿಂಗ್ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    2023ರ ವರ್ಷದಲ್ಲಿ ಮೇ 3ರಂದು ದೊಡ್ಡ ಪ್ರಮಾಣದಲ್ಲಿ ಜನಾಂಗೀಯ ಸಂಘರ್ಷ ಏರ್ಪಟ್ಟಿತ್ತು. ಈ ಘಟನೆ ಬಳಿಕ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ಮತ್ತಷ್ಟು ಕಾವು ಪಡೆದುಕೊಂಡಿತ್ತು. ಈ ಸಂಘರ್ಷದ ಪರಿಣಾಮ 180ಕ್ಕೂ ಹೆಚ್ಚು ಸಾವುಗಳು ಸಂಭವಿಸಿದವು. ಸುಮಾರು 60,000 ಜನ ನಿರಾಶ್ರಿತರಾದರು. ಇಷ್ಟಾದರೂ ಮಣಿಪುರದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ವರ್ಷಾರಂಭದ ಮೊದಲ ದಿನವೇ ನಾಲ್ವರು ಗುಂಡಿನ ದಾಳಿಗೆ ಬಲಿಯಾಗಿರುವುದು ಸ್ಥಳೀಯಲ್ಲಿ ಆತಂಕ ಹೆಚ್ಚಿಸಿದೆ.

  • ಮುಂಬೈನಲ್ಲಿ ಹೈ ಅಲರ್ಟ್ – ಜನವರಿ 2ರವರೆಗೂ ಕರ್ಫ್ಯೂ ಜಾರಿ

    ಮುಂಬೈನಲ್ಲಿ ಹೈ ಅಲರ್ಟ್ – ಜನವರಿ 2ರವರೆಗೂ ಕರ್ಫ್ಯೂ ಜಾರಿ

    ಮುಂಬೈ: ಕ್ರಿಸ್ಮಸ್ (Christmas) ಮತ್ತು ಹೊಸ ವರ್ಷಚಾರಣೆಗೆ (New Year) ಇನ್ನು ಕೆಲವು ವಾರಗಳು ಬಾಕಿ ಇರುವಾಗಲೇ ಮುಂಬೈನಲ್ಲಿ (Mumbai) ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಭಯೋತ್ಪಾದಕ ಚಟುವಟಿಕೆಗಳ (Terrorism) ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ಜನವರಿ 2ರ ವರೆಗೂ ಕರ್ಫ್ಯೂ (Curfew) ವಿಧಿಸಿದ್ದು, 5 ಕ್ಕಿಂತ ಹೆಚ್ಚು ಮಂದಿ ಒಟ್ಟಾಗಿ ಓಡಾಡುವಂತಿಲ್ಲ ಎಂದು ಆದೇಶಿಸಿದೆ.

    ಮುಂಬೈ ಪೊಲೀಸ್ ಕೇಂದ್ರ ಕಚೇರಿಯಿಂದ ಈ ಆದೇಶ ಪ್ರಕಟಗೊಂಡಿದ್ದು, ಜನವರಿ 2ರ ವರೆಗೂ ಶಸ್ತ್ರಾಸ್ತ್ರಗಳು, ಬಂದೂಕುಗಳು, ಕತ್ತಿಗಳು ಮತ್ತು ಇತರ ಆಯುಧಗಳೊಂದಿಗೆ ಸಂಚಾರದ ಮೇಲೂ ನಿಷೇಧವನ್ನು ವಿಧಿಸಲಾಗಿದೆ.

    ಅಧಿಕೃತ ಸೂಚನೆಯ ಪ್ರಕಾರ, ಮದುವೆ ಸಮಾರಂಭಗಳು, ಅಂತ್ಯಕ್ರಿಯೆ ಸಭೆಗಳು, ಸ್ಮಶಾನಗಳಿಗೆ ಹೋಗುವ ದಾರಿಯಲ್ಲಿ ಧ್ವನಿವರ್ಧಕಗಳು, ವಾದ್ಯಗಳು, ಬ್ಯಾಂಡ್‌ಗಳನ್ನು ನುಡಿಸುವಂತಿಲ್ಲ, ಪಟಾಕಿ ಹೊಡೆಯುವಂತಿಲ್ಲ. ಕ್ಲಬ್‌ಗಳು, ಸಹಕಾರ ಸಂಘಗಳು ಮತ್ತು ಇತರ ಸಂಘಗಳ ಮೆರವಣಿಗೆಗಳ ಮೇಲೆ ನಿಷೇಧವನ್ನು ವಿಧಿಸಲಾಗಿದೆ. ಇದನ್ನೂ ಓದಿ: ಶ್ರದ್ಧಾ ಬಿಟ್ಟು ಹೋಗುವ ಆತಂಕದಲ್ಲಿ ಹತ್ಯೆ ಮಾಡಿದೆ – ಮಂಪರು ಪರೀಕ್ಷೆಯಲ್ಲಿ ಅಫ್ತಾಬ್ ಮತ್ತೊಮ್ಮೆ ತಪ್ಪೊಪ್ಪಿಗೆ

    ಸಾರ್ವಜನಿಕ ಚಲನಚಿತ್ರ ಪ್ರದರ್ಶನ ಸ್ಥಳಗಳು ಅಥವಾ ಸುತ್ತಮುತ್ತಲಿನ ಯಾವುದೇ ಸ್ಥಳಗಳಲ್ಲಿ, ನಾಟಕಗಳು ಅಥವಾ ಕಾರ್ಯಕ್ರಮಗಳನ್ನು ವೀಕ್ಷಿಸುವ ಉದ್ದೇಶಕ್ಕಾಗಿ ಸಭೆ ನಡೆಸುವುದು ನಿಷೇಧಿಸಲಾಗಿದೆ. ಸರ್ಕಾರಿ ಕಚೇರಿಗಳ ಸುತ್ತಲೂ ಸರ್ಕಾರಿ ಅಥವಾ ಅರೆ ಸರ್ಕಾರಿ ಕಾರ್ಯಗಳನ್ನು ನಿರ್ವಹಿಸುವ ಸಲುವಾಗಿ ಅನಗತ್ಯ ಜನ ಸೇರುವಂತಿಲ್ಲ. ಶಾಲಾ ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳು, ಕಾರ್ಖಾನೆಗಳಲ್ಲೂ ಸಾಮಾನ್ಯ ವ್ಯವಹಾರಗಳ ಸಭೆಗಳನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: “ಬ್ರಾಹ್ಮಣ ಭಾರತ್ ಛೋಡೋ” – ಜೆಎನ್‍ಯು ಕ್ಯಾಂಪಸ್ ಗೋಡೆಗಳ ಮೇಲೆ ವಿವಾದಾತ್ಮಕ ಬರಹ

    Live Tv
    [brid partner=56869869 player=32851 video=960834 autoplay=true]

  • ಮಡಿಕೇರಿಗೆ ನಾವೇನು ಕುಸ್ತಿ ಮಾಡೋಕೆ ಹೋಗ್ತಿದ್ವಾ: ಡಿಕೆಶಿ ಪ್ರಶ್ನೆ

    ಮಡಿಕೇರಿಗೆ ನಾವೇನು ಕುಸ್ತಿ ಮಾಡೋಕೆ ಹೋಗ್ತಿದ್ವಾ: ಡಿಕೆಶಿ ಪ್ರಶ್ನೆ

    ಬೆಂಗಳೂರು: ಬಿಜೆಪಿ ಸರ್ಕಾರ ನಮ್ಮನ್ನು ಕಾಮಾಲೆ ಕಣ್ಣಿನಿಂದ ನೋಡ್ತಿದೆ. ನಮ್ಮ ಹೋರಾಟ ಅಂದ್ರೆ ಯಾವಾಗಲೂ 144 ಸೆಕ್ಷನ್ ಹಾಕ್ತಾರೆ. ನಾವೇನು ಮಡಿಕೇರಿಗೆ ಕುಸ್ತಿ ಮಾಡೋಕೆ ಹೋಗ್ತಿದ್ದೀವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

    ಕೊಡಗು ಜಿಲ್ಲೆಯಲ್ಲಿ ಆಗಸ್ಟ್ 27ರ ವರೆಗೆ ಸೆಕ್ಷನ್ 144 ಜಾರಿಗೊಳಿಸಿರುವ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಭಯದಿಂದಲೇ ನಡೆಯುತ್ತಿದೆ. ನಮ್ಮ ಹೋರಾಟ ಅಂದ್ರೆ ಅಲ್ಲಿ 144 ಸೆಕ್ಷನ್ ಇರುತ್ತೆ. ನಾವೇನು ಅಲ್ಲಿ ಕುಸ್ತಿ ಮಾಡೋಕೆ ಹೋಗ್ತಿದ್ದೀವಾ? ರಾಜ್ಯದಲ್ಲಿ ಲಾ ಅಂಡ್ ಆರ್ಡರ್ ಪ್ರಶ್ನೆ ಅಂತಾರೆ. ಮೊದಲಾಗಿ `ಲಾ’ನೇ ಇಲ್ಲ ಇನ್ನೂ ಆರ್ಡರ್ ಎಲ್ಲಿ ಬಂತು ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಮೊಟ್ಟೆ ಬೇಕಿದ್ರೆ ಇನ್ನೂ ನಾಲ್ಕು ಹೊಡೀರಿ: ಡಿ.ಕೆ.ಶಿವಕುಮಾರ್

    ಹೋರಾಟ ಜೈಲು, ಕೇಸು ಇದಕ್ಕೆಲ್ಲಾ ನಾವು ಹೆದರಲ್ಲ. ಮಡಿಕೇರಿಗೆ 5 ಕಡೆಯಿಂದ ಪ್ರವೇಶ ಮಾಡಬಹುದು. ಎಲ್ಲಾ ಮಾರ್ಗವನ್ನು ಪೊಲೀಸರು ಸೀಲ್ ಮಾಡ್ತಿದಾರಂತೆ ಯಾರೂ ಹೋಗದಂತೆ ತಡಿತಾರಂತೆ. ನಿನ್ನೆ ಸಂಜೆಯಿಂದಲೇ ನಾನು ಎಲ್ಲಿಗೆ ಹೋಗುತ್ತೇನೆ? ಯಾರೊಂದಿಗೆ ಮಾತನಾಡುತ್ತೇನೆ? ಯಾರಿಗೆ ಫೋನ್ ಮಾಡುತ್ತೇನೆ? ಎಲ್ಲಾ ಗಮನಿಸುತ್ತಿದ್ದಾರೆ. ಸಿದ್ದರಾಮಯ್ಯ ಏನು ಮಾಡ್ತಿದಾರೆ ಅನ್ನೋದನ್ನೂ ಗಮನಿಸುತ್ತಿದ್ದಾರೆ. ಮಡಿಕೇರಿಗೆ ಹೋಗಲು ಮುಂದಾದವರನ್ನು ಫಾಲೋ ಮಾಡ್ತಿದ್ದಾರಂತೆ ನಾವು ಇದಕ್ಕೆಲ್ಲಾ ಹೆದರೋದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮಸೇತು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸದೇ ಹೋದ್ರೆ 2024ರಲ್ಲಿ ಮೋದಿಗೆ ಸೋಲು: ಸುಬ್ರಮಣಿಯನ್ ಸ್ವಾಮಿ

    ನಾನು ನಮ್ಮ ಶಾಸಕಾಂಗ ಪಕ್ಷದ ನಾಯಕರ ಜೊತೆ ಮಾತಡುತ್ತೇನೆ. ನಾವು ಹೋರಾಟ ಮಾಡೋವಾಗೆಲ್ಲಾ ಸೆಕ್ಷನ್ 144 ಜಾರಿಗೊಳಿಸೋದು, ನಮ್ಮ ಮೇಲೆ ಕೇಸು ಹಾಕೋದು ಸರ್ಕಾರಕ್ಕೆ ಒಂದು ಚಾಳಿ ಆಗಿದೆ. ಶಾಸಕಾಂಗ ಪಕ್ಷದ ನಾಯಕರೊಡನೆ ಮಾತನಾಡಿ ನಮ್ಮ ನಿರ್ಧಾರವನ್ನ ಟ್ವೀಟ್ ಮಾಡುತ್ತೇನೆ. ಆದರೆ ಹೋರಾಟದ ಬಗ್ಗೆ ನಾನೊಬ್ಬನೇ ತೀರ್ಮಾನ ತೆಗೆದುಕೊಳ್ಳೋದಿಲ್ಲ. ಸಾಮೂಹಿಕವಾಗಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

    Live Tv

    [brid partner=56869869 player=32851 video=960834 autoplay=true]

  • ಹಿಂಸಾಚಾರ ಸ್ಥಳಕ್ಕೆ ಭೇಟಿ ನೀಡಲು ಮುಂದಾದ ಬಿಜೆಪಿ ಮುಖಂಡನ ಬಂಧನ, ಬಿಡುಗಡೆ

    ಹಿಂಸಾಚಾರ ಸ್ಥಳಕ್ಕೆ ಭೇಟಿ ನೀಡಲು ಮುಂದಾದ ಬಿಜೆಪಿ ಮುಖಂಡನ ಬಂಧನ, ಬಿಡುಗಡೆ

    ಕೋಲ್ಕತ್ತಾ: ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಪಶ್ಚಿಮ ಬಂಗಾಳದಲ್ಲಿ ಹಿಂಸಾತ್ಮಕ ಪ್ರತಿಭಟನೆ ಮುಂದುವರಿದಿದೆ.

    ಇದೇ ವೇಳೆ ಗಲಭೆ ಪೀಡಿತ ಪ್ರದೇಶವಾದ ಹೌರಾ ಜಿಲ್ಲೆಗೆ ಭೇಟಿ ನೀಡಲು ಯತ್ನಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್‌ನನ್ನು ಪೊಲೀಸರು ಬಂಧಿಸಿ, ಸುಮಾರು ನಾಲ್ಕು ಗಂಟೆಗಳ ಬಳಿಕ ಬಿಡುಗಡೆಗೊಳಿಸಿದ್ದಾರೆ. ಹೌರಾ ಜಿಲ್ಲೆಯಲ್ಲಿ ಹಿಂಸಾತ್ಮಕ ಪತ್ರಿಭಟನೆ ನಡೆಯುತ್ತಿದ್ದರಿಂದ ಮಜುಂದಾರ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ: ಪ್ರವಾದಿ ವಿರುದ್ಧ ಅವಹೇಳನ – ಮುಸ್ಲಿಂ ಸಂಘಟನೆಗಳ ಪ್ರತಿಭಟನೆಗೆ ವಿಹೆಚ್‌ಪಿ ತೀವ್ರ ಖಂಡನೆ

    ಬಿಡುಗಡೆಯಾದ ಬಳಿಕ ಮಜುಂದಾರ್ ಇತರ ಬಿಜೆಪಿ ನಾಯಕರೊಂದಿಗೆ ಸೇರಿ ರಾಜ್ಯಪಾಲ ಜಗದೀಪ್ ಧನಕರ್ ಅವರನ್ನು ಭೇಟಿಯಾಗಿದ್ದಾರೆ. ಹೌರಾ ಮತ್ತು ಮುರ್ಷಿದಾಬಾದ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಬಗ್ಗೆ ರಾಜ್ಯಪಾಲರಿಗೆ ಜ್ಞಾಪನಾ ಪತ್ರ ಸಲ್ಲಿಸಿ ಬಂಗಾಳ ರಾಜ್ಯದಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸುವಂತೆ ಕೋರಿದ್ದಾರೆ.

    ಜೆ.ಪಿ.ನಡ್ಡಾ ಖಂಡನೆ: ಮಜುಂದಾರ್ ಬಂಧನವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಖಂಡಿಸಿದ್ದಾರೆ. ಬಂಗಾಳ ಸರ್ಕಾರವು ಅಪರಾಧಿಗಳ ಉತ್ಸಾಹವನ್ನು ಹೆಚ್ಚಿಸುತ್ತಿದೆ. ಸಮಾಜ ವಿರೋಧಿಗಳಿಗೆ ಆಶ್ರಯ ನೀಡುತ್ತಿದೆ. ಮತ್ತೊಂದೆಡೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಜನರ ಹಕ್ಕುಗಳ ವಿರುದ್ಧ ಹೋರಾಡುವವರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪದವೀಧರ ಮಹಿಳೆಯನ್ನು ಕೆಲಸಕ್ಕೆ ಹೋಗುವಂತೆ ಒತ್ತಾಯಿಸುವಂತಿಲ್ಲ – ಹೈಕೋರ್ಟ್ 

    ಹೌರಾ ಜಿಲ್ಲೆಯ ಪಾಂಚ್ಲಾದಲ್ಲಿ ಹಿಂಸಾಚಾರ ನಡೆದಿರುವ ಕುರಿತು ವರದಿಗಳಾಗಿವೆ. ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದು, ಕಲ್ಲು ಹಾಗೂ ಇಟ್ಟಿಗೆಗಳನ್ನು ಎಸೆದಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಪಂಚ್ಲಾ ಮಾರುಕಟ್ಟೆಯ ಸಮೀಪದ ಕೆಲ ಅಂಗಡಿ ಹಾಗೂ ಮನೆಗಳನ್ನು ದರೋಡೆ ಮಾಡಲಾಗಿದೆ. ಅಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

    ನಿನ್ನೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 70ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಹೌರಾ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೆಲ ರಾಜಕೀಯ ಪಕ್ಷಗಳು ಗಲಭೆಗಳನ್ನು ಪ್ರಚೋದಿಸಲು ಯತ್ನಿಸುತ್ತಿವೆ. ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.

  • ಜಾಗರಣೆ, ಡಿಜೆ ಸದ್ದು ಮಾಡುವಂತಿಲ್ಲ- ರಂಜಾನ್ ಆಚರಣೆಗೆ ಹಲವು ನಿರ್ಬಂಧ

    ಜಾಗರಣೆ, ಡಿಜೆ ಸದ್ದು ಮಾಡುವಂತಿಲ್ಲ- ರಂಜಾನ್ ಆಚರಣೆಗೆ ಹಲವು ನಿರ್ಬಂಧ

    ಲಕ್ನೋ: ಮುಸ್ಲಿಮರ ಪವಿತ್ರ ರಂಜಾನ್ `ಈದ್ ಉಲ್ ಫ್ರಿತ್’ ಅನ್ನು ಶಾಂತಿಯುತವಾಗಿ ಆಚರಿಸಲು ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ.

    ಇತ್ತೀಚೆಗೆ ಹನುಮ ಜಯಂತಿ ಉತ್ಸವದ ಸಂದರ್ಭದಲ್ಲಿ ವರದಿಯಾದ ಯಾವುದೇ ಹಿಂಸಾಚಾರ ಅಥವಾ ಉದ್ವಿಗ್ನ ಘಟನೆಗಳು ಮತ್ತೆ ಮರುಕಳಿಸದಂತೆ ಆಯಾ ರಾಜ್ಯ ಸರ್ಕಾರಗಳು ಮನವಿ ಮಾಡಿವೆ. ಇದಕ್ಕಾಗಿ ಶಾಂತಿಯುತವಾಗಿ ರಂಜಾನ್ ಆಚರಣೆ ಮಾಡಲು ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ; ಮುಂದಲೆ ಹಿಡಿದು ಎಳೆದಾಡಿದ ವಿದ್ಯಾರ್ಥಿನಿಯರು

    RAMDHAN

    ಖಾರ್ಗೋನ್‌ನಲ್ಲಿ ಕರ್ಫ್ಯೂ: ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ಈದ್-ಉಲ್-ಫ್ರಿತ್ ಮತ್ತು ಅಕ್ಷಯ ತೃತೀಯ ಆಚರಣೆ ಸಂದರ್ಭದಲ್ಲಿ 24 ಗಂಟೆಗಳ ಕರ್ಫ್ಯೂ ವಿಧಿಸಲಾಗಿದೆ. ಕಳೆದ ಏಪ್ರಿಲ್ 10 ರಂದು ರಾಮನವಮಿ ಮೆರವಣಿಗೆಯಲ್ಲಿ ಇದೇ ಪ್ರದೇಶದಲ್ಲಿ ಹಿಂಸಾಚಾರ ವರದಿಯಾಗಿತ್ತು. ಹಾಗಾಗಿ ಖಾರ್ಗೋವ್‌ನಲ್ಲಿ ಮುಂಬರುವ ರಂಜಾನ್, ಅಕ್ಷಯ ತೃತೀಯ ಹಬ್ಬಗಳನ್ನು ಮನೆಗಳಲ್ಲೇ ಆಚರಿಸುವಂತೆ ಮೇ 2, 3ರಂದು ಕರ್ಫ್ಯೂ ವಿಧಿಸಲಾಗಿದೆ. ಇದಕ್ಕಾಗಿ ಇಂದು ಬೆಳಗ್ಗೆ 8 ರಿಂದ ಸಂಜೆ 5ರ ವರೆಗೆ ಕರ್ಫ್ಯೂ ಸಡಿಲಿಸಿ ಅಗತ್ಯ ವಸ್ತುಗಳ ಖರೀದಿಗೆ ಆದ್ಯತೆ ನೀಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸುಮರ್ ಸಿಂಗ್ ಮುಜಲ್ದಾ ಆದೇಶಿಸಿದ್ದಾರೆ. ಇದನ್ನೂ ಓದಿ: ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಬಿಜೆಪಿ ವಿಶ್ವ ದಾಖಲೆ ಮಾಡುತ್ತಿದೆ: ಕೇಜ್ರಿವಾಲ್‌ ಟೀಕೆ

    RAMDHAN (2)

    ಜಾಗರಣೆ ಮಾಡುವಂತಿಲ್ಲ: ಉತ್ತರ ಪ್ರದೇಶದಲ್ಲಿ ಅನುಮತಿ ಪಡೆಯದ 46 ಸಾವಿರ ಧ್ವನಿವರ್ಧಕಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಉಳಿದ 59 ಸಾವಿರ ಧ್ವನಿ ವರ್ಧಕಗಳು ಶಬ್ಧ ಮಿತಿಯ ಅನುಮತಿ ಪಡೆದು ಆಜಾನ್‌ಗೆ ಬಳಕೆ ಮಾಡಲಾಗುತ್ತಿದೆ. ಆದರೆ ಉತ್ತರ ಪ್ರದೇಶದ ಮೀರತ್‌ನಲ್ಲಿ ಮಾತ್ರ ಈದ್ ಉಲ್ ಫ್ರಿತ್ ವೇಳೆ ಜಾಗರಣೆ ನಡೆಸದಂತೆ ಎಚ್ಚರಿಕೆ ನೀಡಿದೆ. ಕೆಲವು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಜಾಗರಣೆ ಆಚರಿಸುವುದನ್ನು ನಿಷೇಧಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ದೇಶದಲ್ಲಿ ಅಗತ್ಯವಿಲ್ಲ: ಓವೈಸಿ

    RAMDHAN (1)

    ಮಹಾರಾಷ್ಟ್ರದಲ್ಲಿನ 5 ಮಸೀದಿಗಳಿಗೂ ಡಿಜೆ ಸಾಂಗ್‌ಗಳು ಸದ್ದು ಮಾಡದಂತೆ ಸರ್ಕಾರ ಸೂಚನೆ ನೀಡಿದೆ. ಕೆಲ ಹಿರಿಯ ಮುಸ್ಲಿಂ ಮುಖಂಡರು ಡಿಜೆ ಹಾಕಲು ನಿರ್ಧರಿಸಿದ್ದ ಕಾರಣದಿಂದಾಗಿ ಈ ಆದೇಶ ಹೊರಡಿಸಿದ್ದು, ಡಿಜೆಗೆ ವಿನಿಯೋಗಿಸುವ ಹಣವನ್ನು ಬಡವರಿಗೆ, ಅವಶ್ಯಕತೆ ಉಳ್ಳವರಿಗೆ ನೀಡುವಂತೆ ಸರ್ಕಾರ ಸಲಹೆ ನೀಡಿದೆ. ಹಾಗೆಯೇ ಜಮ್ಮು ಮತ್ತು ಕಾಶ್ಮೀರದ ಜಾಮಿಯಾ ಮಸೀದಿಯಲ್ಲಿ ಬೆಳಿಗ್ಗೆ 7 ಗಂಟೆಗೆಲ್ಲಾ ಈದ್ ನಮಾಜ್ ಮುಕ್ತಾಯಗೊಳಿಸುವಂತೆ ಸೂಚನೆ ನೀಡಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

  • ರಾಮನವಮಿ ರ‍್ಯಾಲಿ ವೇಳೆ ಕೋಮುಸಂಘರ್ಷ: 4 ರಾಜ್ಯಗಳಲ್ಲಿ ನಡೆದಿದ್ದೇನು?

    ರಾಮನವಮಿ ರ‍್ಯಾಲಿ ವೇಳೆ ಕೋಮುಸಂಘರ್ಷ: 4 ರಾಜ್ಯಗಳಲ್ಲಿ ನಡೆದಿದ್ದೇನು?

    ನವದೆಹಲಿ: ರಾಮನವಮಿ ಆಚರಣೆಯ ವೇಳೆ ಭಾನುವಾರ ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ನಡೆಯುತ್ತಿದ್ದ ಮೆರವಣಿಗೆಯು ಹಿಂಸಾಚಾರಕ್ಕೆ ತಿರುಗಿದ್ದು, ಕೋಮು ಸಂಘರ್ಷ ಏರ್ಪಟ್ಟಿದೆ. ಇದೇ ವೇಳೆ 10 ಮಂದಿ ಗಾಯಗೊಂಡಿದ್ದು, ಓರ್ವ ಮೃತಪಟ್ಟಿದ್ದಾನೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

    ಮಧ್ಯಪ್ರದೇಶದ ಖರ್ಗಾನ್‌ನ ಕೆಲವು ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ರಾಮ ನವಮಿ ಮೆರವಣಿಗೆ ಸಂದರ್ಭದಲ್ಲಿ ಹಿಂಸಾಚಾರ ಮತ್ತು ಗಲಭೆ ನಡೆದಿದೆ. ಅನೇಕ ಕಡೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಸಂಘರ್ಷ ಭುಗಿಲೇಳುವುದನ್ನು ತಡೆಯಲು ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಕಲಬುರಗಿ ವಿವಿ ಆವರಣದಲ್ಲಿ ರಾಮನವಮಿ ಆಚರಿಸ್ತಿದ್ದ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಹಲ್ಲೆ

    FIRE

    ಧ್ವನಿವರ್ಧಕ ವಿಚಾರಕ್ಕೆ ಗಲಾಟೆ: ಧ್ವನಿವರ್ಧಕಗಳಿಂದ ಸಂಗೀತ ಪ್ರಸಾರ ಮಾಡುತ್ತಿದ್ದ ವಿಚಾರವಾಗಿ ನಡೆದ ಜಗಳದ ಬಳಿಕ ತಲಬ್ ಚೌಕ್‌ನಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಘರ್ಷಣೆ ಶುರುವಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯುಗಳನ್ನು ಸಿಡಿಸಬೇಕಾಯಿತು ಎಂದು ಹೆಚ್ಚುವರಿ ಕಲೆಕ್ಟರ್ ಎಸ್.ಎಸ್.ಮುಜಾಲ್ದೆ ತಿಳಿಸಿದ್ದಾರೆ. ಇದನ್ನೂ ಓದಿ: ಮುಸ್ಕಾನ್‍ರನ್ನು ತನಿಖೆ ನಡೆಸುವಂತೆ ಸಿಎಂಗೆ ಅನಂತ್‍ಕುಮಾರ್ ಹೆಗ್ಡೆ ಪತ್ರ

    ದೇವಸ್ಥಾನ ಧ್ವಂಸ, ಮನೆಗಳಿಗೆ ಬೆಂಕಿ: ಘಟನೆ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದು, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ, ಎಸ್‌ಪಿ ಸಿದ್ಧಾರ್ಥ್ ಚೌಧರಿ ಸೇರಿದಂತೆ ಅನೇಕ ಪೊಲೀಸರು ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಒಂದು ದೇವಸ್ಥಾನ ಧ್ವಂಸಗೊಳಿಸಿ, 4 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ದೃಶ್ಯಗಳು ವೀಡಿಯೋಗಳಲ್ಲಿ ಸೆರೆಯಾಗಿವೆ.

    crime

    ಗುಜರಾತ್‌ನಲ್ಲಿ ಕಲ್ಲುತೂರಾಟ: ಗುಜರಾತ್‌ನ ಆನಂದ್ ಜಿಲ್ಲೆಯ ಕಂಭಾಟ್ ಮತ್ತು ಸಬರ್ಕಾಂತಾ ಜಿಲ್ಲೆಯ ಹಿಮ್ಮತ್ ನಗರದಲ್ಲಿ ಸಂಘರ್ಷದ ವೇಳೆ ಕಲ್ಲು ತೂರಾಟ ಹಾಗೂ ಬೆಂಕಿ ಹಚ್ಚಿರುವ ಘಟನೆಗಳು ನಡೆದಿವೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಶೆಲ್ ಪ್ರಯೋಗ ಮಾಡಿದ್ದಾರೆ.

    ಗುಂಪು ಘರ್ಷಣೆ: ರಾಮನವಮಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಜಾಗದಲ್ಲಿ ಸುಮಾರು 65 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ ಎಂದು ಕಂಭಾಟ್ ಪೊಲೀಸ್ ವರಿಷ್ಠಾಧಿಕಾರಿ ಅಜೀತ್ ರಜ್ಯಾನ್ ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಮಗಳಿಗೆ ಬಂದ ಹಣವನ್ನು ಜನ ಸೇವೆಗೆ ಕೊಡ್ತೀನಿ: ಮುಸ್ಕಾನ್‌ ತಂದೆ

    ಹಿಮ್ಮತ್ ನಗರದಲ್ಲಿ ಗುಂಪೊಂದು ಕೆಲವು ವಾಹನಗಳು ಮತ್ತು ಅಂಗಡಿಗಳಿಗೆ ಹಾನಿ ಮಾಡಿದೆ. ರಾಮನವಮಿ ಆಚರಣೆ ವೇಳೆ ಕೆಲವರಿಗೆ ಕಲ್ಲೇಟು ಬಿದ್ದಿದೆ ಎಂದು ಸಬರ್ಕಾಂತಾ ಪೊಲೀಸ್ ಮುಖ್ಯಸ್ಥ ವಿಶಾಲ್ ವಾಘೇಲಾ ಹೇಳಿದ್ದಾರೆ.

    RAMANAVAMI
    ಸಾಂದರ್ಭಿಕ ಚಿತ್ರ

    ಪೊಲೀಸರ ಮೇಲೆ ದಾಳಿ ಆರೋಪ: ಪಶ್ಚಿಮ ಬಂಗಾಳದ ಹೌರಾದಲ್ಲಿ ಶಿಬ್‌ಪುರ್ ಪ್ರದೇಶದಲ್ಲಿ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಘರ್ಷಣೆಗಳು ವರದಿಯಾಗಿದ್ದು, ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ರಾಮನವಮಿ ಮೆರವಣಿಗೆ ಮೇಲೆ ಪೊಲೀಸರೇ ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಮೆರವಣಿಗೆಯಲ್ಲಿ ತೆರಳುತ್ತಿದ್ದ ಜನರ ಮೇಲೆ ಪೊಲೀಸ್ ಸಿಬ್ಬಂದಿ ಮನಬಂದಂತೆ ಪ್ರಹಾರ ನಡೆಸಿದ್ದಾರೆ ಎಂದು ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ಐಫೋನ್, ಸ್ಮಾರ್ಟ್‍ವಾಚ್ ಗಿಫ್ಟ್ ಕೊಟ್ಟ ಕಾಂಗ್ರೆಸ್ ಶಾಸಕ

    RAMANAVAMI

    ಹೌರಾದ ನಿವಾಸಿಗಳು ಸಾಮಾಜಿಕ ಮಾಧ್ಯಮದಲ್ಲಿ ಏನನ್ನಾದರೂ ಬಿತ್ತರಿಸುವಾಗ ಸಂಯಮ ಕಾಪಾಡಿಕೊಳ್ಳಿ ಹಾಗೂ ಯಾವುದೇ ನಕಲಿ ಸುದ್ದಿಗಳನ್ನು ಹರಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಜಾರ್ಖಂಡ್‌ನ ಲೊಹರ್ದಗಾದಲ್ಲಿ ಕೂಡ ರಾಮನವಮಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಹಾಗೂ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಶಾಂತಿ ಕಾಪಾಡಲು ಬೃಹತ್ ಸಂಖ್ಯೆಯಲ್ಲಿ ಪೊಲೀಸರನ್ನು ಜಮಾವಣೆ ಮಾಡಲಾಗಿದೆ.

  • ನಿಷೇಧಾಜ್ಞೆ ಜಾರಿ, ಸಾಮಾಜಿಕ ಜಾಲತಾಣಗಳ ಮೇಲೂ ನಿರ್ಬಂಧ- ಶ್ರೀಲಂಕಾದಲ್ಲಿ ಪರಿಸ್ಥಿತಿ ಹೇಗಿದೆ?

    ನಿಷೇಧಾಜ್ಞೆ ಜಾರಿ, ಸಾಮಾಜಿಕ ಜಾಲತಾಣಗಳ ಮೇಲೂ ನಿರ್ಬಂಧ- ಶ್ರೀಲಂಕಾದಲ್ಲಿ ಪರಿಸ್ಥಿತಿ ಹೇಗಿದೆ?

    ನವದೆಹಲಿ: ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ನಿರುದ್ಯೋಗ, ಅಗತ್ಯ ವಸ್ತುಗಳ ಕೊರತೆ, ಅಗತ್ಯ ಆಮದಿಗೆ ವಿದೇಶಿ ಕರೆನ್ಸಿ ಕೊರತೆ ಸೇರಿದಂತೆ ಮೊದಲಾದ ಕಾರಣಗಳಿಂದ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಪರಿಸ್ಥಿತಿ ದಿನೇ ದಿನೇ ಉದ್ವಿಗ್ನಗೊಳ್ಳುತ್ತಿದೆ. ಎಲ್ಲೆಡೆ ಜನರು ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಶನಿವಾರ ಸಂಜೆ 6 ರಿಂದ ಸೋಮವಾರ ಬೆಳಗ್ಗೆ 6ರ ವರೆಗೆ ಕರ್ಫ್ಯೂ ವಿಧಿಸಲಾಗಿದೆ.

    ಸಾಮಾಜಿಕ ಜಾಲತಾಣಗಳ ಮೇಲೂ ನಿಷೇಧ ಹೇರಲಾಗಿದೆ. ಪ್ರತಿಭಟನೆಗಳನ್ನು ತಡೆಗಟ್ಟಲು ಮಿಲಿಟರಿ ಮಾದರಿಯ ಕಠಿಣ ಕ್ರಮಗಳನ್ನು ವಿಧಿಸಿ ಕರ್ಫ್ಯೂ ಜಾರಿಗೊಳಿಸಲಾಗಿರುವುದರಿಂದ, ಅಗತ್ಯ ವಸ್ತುಗಳ ಸೇವೆಗೆ ಮಾತ್ರ ಹೊರಗೆ ಬರಬೇಕಿದೆ. ಶಂಕಿತರನ್ನು ವಿಚಾರಣೆಯಿಲ್ಲದೇ ಬಂಧಿಸುವಂತೆ ಸರ್ಕಾರ ಆದೇಶ ನೀಡಿದೆ. 

    curfew

    ಜಾಲತಾಣಗಳ ಮೇಲೆ ನಿರ್ಬಂಧ
    ಶ್ರೀಲಂಕಾ ಸರ್ಕಾರವು ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಯೂಟ್ಯೂಬ್ ಸೇರಿದಂತೆ ಎಲ್ಲ ಸಾಮಾಜಿಕ ಮಾಧ್ಯಮ ಸೈಟ್‌ಗಳ ಮೇಲೆ ನಿರ್ಬಂಧ ಹೇರಿದೆ. ಈ ಮೂಲಕ ತಪ್ಪು ಮಾಹಿತಿಯ ಹರಿದಾಡುವಿಕೆ ಹಾಗೂ ದೇಶದಲ್ಲಿ ಪ್ರತಿಭಟನೆಗಳನ್ನು ಸಂಘಟಿಸಲು ಜನರನ್ನು ಸಜ್ಜುಗೊಳಿಸುವುದನ್ನು ತಡೆಯುತ್ತಿದೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನಿಂದ ರೊಚ್ಚಿಗೆದ್ದ ಶ್ರೀಲಂಕಾ ಜನತೆ- ಪ್ರತಿಭಟನೆಗೆ ಪ್ರಮುಖ ಕಾರಣಗಳೇನು?

    ಸಾರಿಗೆ ದುರ್ಬಲ
    ಡೀಸೆಲ್ ಕೊರತೆಯಿಂದ ಸಾರ್ವಜನಿಕ ಸಾರಿಗೆ ಹಾಗೂ ಖಾಸಗಿ ವಾಹನಗಳಿಗೆ ಇಂಧನ ಲಭ್ಯವಿಲ್ಲದಂತಾಗಿದೆ. ಇದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ದುರ್ಬಲಗೊಳಿಸಿದಂತಾಗಿದೆ.

    ಭಾರತದಿಂದ ತುರ್ತು ಸಹಾಯ
    ಕೊಲಂಬೊ, ಹೊಸದಿಲ್ಲಿಯಿಂದ ಕ್ರೆಡಿಟ್ ಲೈನ್ ಅನ್ನು ಪಡೆದುಕೊಂಡ ನಂತರ ಭಾರತೀಯ ಟ್ರೇಡರ್ಸ್ಗಳು ಶ್ರೀಲಂಕಾಕ್ಕೆ 40 ಸಾವಿರ ಟನ್ ಅಕ್ಕಿಯನ್ನು ತ್ವರಿತವಾಗಿ ನೀಡಲು ಮುಂದಾಗಿದ್ದಾರೆ. ಇಂಧನ ಕೊರತೆ ನೀಗಿಸಲು 40 ಸಾವಿರ ಮೆಟ್ರಿಕ್ ಟನ್ ಡಿಸೇಲ್ ಅನ್ನು ಶನಿವಾರವೇ ಪೂರೈಕೆ ಮಾಡಿದೆ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆ ಮುಂದೆಯೇ ಹಿಂಸಾತ್ಮಕ ಪ್ರತಿಭಟನೆ – ವಾಹನಗಳು ಸುಟ್ಟು ಭಸ್ಮ

    sri lanka diesel

    ಸರ್ವಪಕ್ಷ ರಚನೆಗೆ ಕರೆ
    ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಶುಕ್ರವಾರ ತುರ್ತು ಪರಿಸ್ಥಿತಿ ಘೋಷಿಸಿ, ಭದ್ರತಾ ಪಡೆಗಳಿಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ. ಈ ನಡುವೆ ದೇಶದ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಫ್ರೀಡಂ ಪಾರ್ಟಿಯು, ಬಿಕ್ಕಟ್ಟನ್ನು ನಿವಾರಿಸಲು ಸರ್ವಪಕ್ಷ ಸರ್ಕಾರ ರಚಿಸುವಂತೆ ಕರೆ ನೀಡಿದ್ದಾರೆ.

    ಮಿಲಿಟರಿ ಕಾನೂನು
    ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ತನ್ನ ಉಚ್ಚಾಟನೆಗೆ ಕರೆ ನೀಡುವ ಪ್ರದರ್ಶನಗಳು ಕಂಡುಬಂದರೆ ಶಂಕಿತರನ್ನು ದೀರ್ಘಾವಧಿಯ ವರೆಗೆ ಬಂಧಿಸಲು ಅನುಮತಿ ನೀಡಲಾಗಿದೆ. ಶಂಕಿತರನ್ನು ಬಂಧಿಸಲು ಮಿಲಿಟರಿ ಮಾದರಿಯ ಕಠಿಣ ಕಾನೂನುಗಳನ್ನು ವಿಧಿಸಿದ್ದಾರೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು ಪ್ರತಿಭಟನೆ ನಡುವೆ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

    ಮುಖ್ಯರಸ್ತೆಯಲ್ಲಿ ಸಂಚಾರ ಸ್ಥಗಿತ
    ಇಲ್ಲಿನ ದಕ್ಷಿಣ ಭಾಗದ ಗಾಲ್ಲೆ, ಮಾತಾರಾ ಮತ್ತು ಮೊರಟುವಾ ಪಟ್ಟಣಗಳಲ್ಲೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಜೊತೆಗೆ ಮಧ್ಯಪ್ರದೇಶದಲ್ಲೂ ಇದೇ ರೀತಿಯ ಘಟನೆಗಳು ವರದಿಯಾಗಿವೆ. ಆದ್ದರಿಂದ ಮುಖ್ಯರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಿದ್ದಾರೆ.

     

  • ಕೀವ್‍ನಲ್ಲಿ ಕರ್ಫ್ಯೂ ಜಾರಿ – ಖೇರ್ಸಾನ್ ಪ್ರಾಂತ್ಯವನ್ನು ನಿಯಂತ್ರಣಕ್ಕೆ ಪಡೆದ ರಷ್ಯಾ

    ಕೀವ್‍ನಲ್ಲಿ ಕರ್ಫ್ಯೂ ಜಾರಿ – ಖೇರ್ಸಾನ್ ಪ್ರಾಂತ್ಯವನ್ನು ನಿಯಂತ್ರಣಕ್ಕೆ ಪಡೆದ ರಷ್ಯಾ

    ಕೀವ್: ಉಕ್ರೇನ್ ವಿರುದ್ಧ ಸತತ 20ನೇ ದಿನವೂ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ರಷ್ಯಾ ದಾಳಿಯಿಂದ ತತ್ತರಿಸಿರುವ ಕೀವ್‍ನಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಇಡೀ ಖೇರ್ಸಾನ್ ಪ್ರಾಂತ್ಯವನ್ನು ರಷ್ಯಾ ಪಡೆಗಳು ನಿಯಂತ್ರಣಕ್ಕೆ ತೆಗೆದುಕೊಂಡಿವೆ.

    ಕೀವ್ ನಗರದ ಜನವಸತಿ ಪ್ರದೇಶಗಳ ಮೇಲೆ ಬಾಂಬ್ ದಾಳಿ ಮುಂದುವರಿಸಿದೆ. ಕೀವ್ ಮೆಟ್ರೋ ಸ್ಟೇಷನ್ ಮೇಲೆಯೂ ದಾಳಿ ನಡೆಸಿದೆ. ಅಲ್ಲದೇ, ಉಕ್ರೇನ್‍ಗೆ ಶಸ್ತ್ರಾಸ್ತ್ರ ಪೂರೈಕೆ ಕಟ್ ಮಾಡುವ ಕಸರತ್ತನ್ನು ರಷ್ಯಾ ಆರಂಭಿಸಿದ್ದು, ಇದರ ಭಾಗವಾಗಿ ಡಿನಿಪ್ರೋ ಏರ್‌ಪೋರ್ಟ್‌ನ ರನ್‍ವೇಯನ್ನು ಹಾಳುಗೆಡವಿದೆ. ಕಳೆದ 24 ಗಂಟೆಯಲ್ಲಿ ಉಕ್ರೇನ್ ಸೇನೆ 13 ಡ್ರೋನ್, 16 ಸೈನಿಕ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಇದನ್ನೂ ಓದಿ: ಯುದ್ಧ ನಿಲ್ಲಿಸುವಂತೆ ಲೈವ್ ವೇಳೆ ಸೆಟ್‍ಗೆ ಓಡಿ ಬಂದ ಮಹಿಳೆ- ಉಕ್ರೇನ್ ಅಧ್ಯಕ್ಷ ಧನ್ಯವಾದ

    ಉಕ್ರೇನ್ ಸೇನೆ ಕೂಡ ಪ್ರತಿ ದಾಳಿ ಸಂಘಟಿಸಿದ್ದು, ರಷ್ಯಾದ ನಾಲ್ಕು ಹೆಲಿಕಾಪ್ಟರ್ ಪತನ ಗೊಳಿಸಿದೆ. ರಷ್ಯಾದ ವಿರುದ್ಧ ನಾವು ಎಲ್ಲಾ ಕಡೆ ಮೇಲುಗೈ ಸಾಧಿಸ್ತಿದ್ದೇವೆ. ಸ್ವಾತಂತ್ರ್ಯ ಬೇಕು ಎಂದರೇ, ಒಂದಿಷ್ಟನ್ನು ಕಳೆದುಕೊಳ್ಳಲೇಬೇಕು. ಅದಕ್ಕಾಗಿಯೇ ನಮ್ಮ ಹೋರಾಟ ಎಂದು ಉಕ್ರೇನ್ ಹೋರಾಟವನ್ನು ಬಲ ಪಡಿಸಿಕೊಂಡಿದೆ. ಇದನ್ನೂ ಓದಿ: ರಷ್ಯಾಗೆ ಸಹಾಯ ಮಾಡದಂತೆ ಚೀನಾಗೆ ಅಮೆರಿಕ ವಾರ್ನಿಂಗ್

    ಉಕ್ರೇನ್‍ಗೆ ನೈತಿಕ ಬೆಂಬಲ ನೀಡುವ ಸಲುವಾಗಿ ಪೋಲೆಂಡ್, ಝೇಕ್ ರಿಪಬ್ಲಿಕ್, ಸ್ಲೋವೇನಿಯಾ ಪ್ರಧಾನಿಗಳು ಶೀಘ್ರವೇ ಉಕ್ರೇನ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಮಧ್ಯೆ, ಅಮೆರಿಕಾದ ವ್ಯೋಮಗಾಮಿ ಈ ಮಾಸಾಂತ್ಯದಲ್ಲಿ ಅಂತಾರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದಿಂದ ರಷ್ಯಾದ ಸೂಯೆಜ್ ನೌಕೆಯಲ್ಲಿ ಭೂಮಿಗೆ ವಾಪಸ್ ಆಗಬೇಕಿದೆ. ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ, ಅವರನ್ನು ಕರೆದುಕೊಂಡು ಬರುತ್ತೋ ಇಲ್ಲವೋ ಎಂಬ ಆತಂಕ ಆವರಿಸಿತ್ತು. ಆದರೆ ಹಾಗೇನು ಮಾಡಲ್ಲ. ಅವರನ್ನು ಅಲ್ಲಿಯೇ ಬಿಟ್ಟು ಬರಲ್ಲ. ನಾವು ಸುರಕ್ಷಿತವಾಗಿ ಭೂಮಿಗೆ ಕರೆದುಕೊಂಡು ಬರುತ್ತೇವೆ ಎಂದು ರೋಸ್ ಕಾಸ್ಮೋಸ್ ಸ್ಪಷ್ಟಪಡಿಸಿದೆ. ಉಕ್ರೇನ್‍ನಲ್ಲಿ ಖಾಸಗಿ ಮಾಧ್ಯಮವೊಂದರ ವರದಿಗಾರ ಬಾಂಬ್ ಬ್ಲಾಸ್ಟ್‌ಗೆ ಬಲಿಯಾಗಿದ್ದಾರೆ. ಈ ಮೂಲಕ ಯುದ್ಧದಲ್ಲಿ ಇಬ್ಬರೂ ಪತ್ರಕರ್ತರು ಸಾವನ್ನಪ್ಪಿದ್ದಾರೆ. ಉಕ್ರೇನ್‍ನಿಂದ  ಜನ ಮಹಾ ವಲಸೆ ಹೋಗುತ್ತಿದ್ದಾರೆ.

  • ನಾಳೆಯಿಂದ ಥಿಯೇಟರ್‌ ಹೌಸ್‌ ಫುಲ್‌- ಸರ್ಕಾರದಿಂದ ಅನುಮತಿ

    ನಾಳೆಯಿಂದ ಥಿಯೇಟರ್‌ ಹೌಸ್‌ ಫುಲ್‌- ಸರ್ಕಾರದಿಂದ ಅನುಮತಿ

    ಬೆಂಗಳೂರು: ಕೊರೊನಾ, ಒಮಿಕ್ರಾನ್ ಸೋಂಕು ಹಿನ್ನೆಲೆಯಲ್ಲಿ ಸಿನಿಮಾ ಥಿಯೇಟರ್ ಮೇಲೆ ಹೇರಲಾಗಿದ್ದ ನಿಯಮವನ್ನು ಸಡಿಲ ಗೊಳಿಸಿದ್ದು,  ನಾಳೆಯಿಂದ  ಥಿಯೇಟರ್‌ ಹೌಸ್ ಫುಲ್‌ಗೆ ಸರ್ಕಾರ
    ಅನುಮತಿ ನೀಡಿದೆ.

    ಸಿಎಂ ನೇತೃತ್ವದಲ್ಲಿ ಕೋವಿಡ್ ಸಂಬಂಧಿತ ಸಭೆ ನಡೆಸಿದ್ದಾರೆ. ಚಲನಚಿತ್ರ ಮಂದಿರದೊಳಗೆ ಹೋಗುವವರು ಕಡ್ಡಾಯ ಮಾಸ್ಕ್ ಧರಿಸಬೇಕು, ಎರಡು ಡೋಸ್ ಲಸಿಕೆ ಕಡ್ಡಾಯವಾಗಿರುತ್ತದೆ. ತಿಂಡಿ ಪದಾರ್ಥಗಳನ್ನ ಥಿಯೇಟರ್ ಒಳಗೆ ತೆಗೆದುಕೊಂಡು ಹೋಗಲು ನಿಷೇಧ ಹೇರಲಾಗಿದೆ. ವಿರಾಮದ ಸಂದರ್ಭದಲ್ಲಿ ಹೊರಗೆ ಬಂದು ತಿನ್ನಬಹುದು. ಕಟ್ಟುನಿಟ್ಟಿನ ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಓವೈಸಿಗೆ ಝಡ್ ಮಾದರಿಯ ಭದ್ರತೆ ನೀಡಿದ ಕೇಂದ್ರ ಸರ್ಕಾರ

    ಆರೋಗ್ಯ ಸಚಿವ ಕೆ. ಸುಧಾಕರ್ ಮಾಧ್ಯಮದವರೊಂದಿಗೆ ಮಾತನಾಡಿ, ಡಿಸೆಂಬರ್ ಕೊನೆ ವಾರದಲ್ಲಿ ಓಮೈಕ್ರಾನ್ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಕೆಲ ಕ್ರಮ ತೆಗೆದುಕೊಂಡಿದ್ದೇವೆ. ನೈಟ್ ಕರ್ಫ್ಯೂ, ವೀಕೆಂಡ್ ಸೇರಿದಂತೆ ಹಲವು ನಿಯಮಗಳನ್ನು ಹಿಂದೆ ತೆಗೆದುಕೊಂಡಿದ್ದೇವು. ಇವತ್ತು ಆಸ್ಪತ್ರೆ ದಾಖಲಾತಿ 5%ನಿಂದ 2%ಗೆ ಇಳಿದಿದೆ. ನಾಳೆಯಿಂದ ಚಲನ ಚಿತ್ರಮಂದಿರಗಳಿಗೆ ರಿಲ್ಯಾಕ್ಸ್ 100% ವಿನಾಯ್ತಿ ಥಿಯೇಟರ್‍ಗಳಿಗಿದ್ದು, 50% ನಿಯಮ ಸಡಿಲಿಕೆ, ಜಿಮ್, ಈಜುಕೊಳ, ಯೋಗ ಕೇಂದ್ರಗಳಿಗೂ 100% ಭರ್ತೀಗೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.